Author: AIN Author

ಹುಬ್ಬಳ್ಳಿ : ಗ್ರಾಮೀಣ ಭಾಗದಲ್ಲಿ ಜನರು ಸರ್ಕಾರದ ಬಗ್ಗೆ ಹೆಚ್ಚು ಆಶಾ ಭಾವನೆಯನ್ನು ಹೊಂದಿದ್ದಾರೆ. ಅಧಿಕಾರಿಗಳು ಕ್ರೀಯಾಶೀಲ, ಆಸಕ್ತಿಯಿಂದ ಜನರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು. ಇಂದು ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 3 ಲಕ್ಷ ಹೆಕ್ಟೇರ್ ವಿವಿಧ ಬೆಳೆ ಬಿತ್ತನೆಯಾಗಿದ್ದು, 2 ಲಕ್ಷ 11 ಸಾವಿರ ಹೆಕ್ಟೇರ್ ಸೋಯಾಬಿನ್, ಈರುಳ್ಳಿ, ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಈ ಕುರಿತು ಸರ್ಕಾರಕ್ಕೆ ವರದಿ ತಯಾರಿಸಿ ಸಲ್ಲಿಸಲಾಗುತ್ತಿದೆ. ಅಲ್ಲದೇ ಸರ್ಕಾರಕ್ಕೆ ರೂ. 212 ಕೋಟಿ ಬೆಳೆ ಪರಿಹಾರ ಬೇಕು ಎಂದು ಮನವಿ ಸಲ್ಲಿಸಲಾಗಿದೆ. ಜಿಲ್ಲೆಗೆ ರೂ.12 ಕೋಟಿ ಬೆಳೆ ಪರಿಹಾರ ಘೋಷಣೆಯಾಗಿದೆ. ಮುಂದಿನ ಜೂನ್ ತಿಂಗಳವರೆಗೆ ಸುಮಾರು 3 ರಿಂದ 4 ಲಕ್ಷ ಟನ್ ಮೇವಿನ ಬೇಡಿಕೆಯಿದೆ. ಇಂದು‌ ಬರ ಪರಿಸ್ಥಿತಿ ಪರಿಶೀಲನೆ ಸಂದರ್ಭದಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಸಹ ಮಳೆಯಾಗಬೇಕಿದೆ.…

Read More

ಬಳ್ಳಾರಿ;-ಕಾಂಗ್ರೆಸ್‌ನ ನಾನೇ ಸಿಎಂ ವಿವಾದದ ಬಗ್ಗೆ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಪ್ರತಿಕ್ರಯಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್‌ನಲ್ಲಿ ಎಲ್ಲರೂ ಮುಖ್ಯಮಂತ್ರಿಯಾಗುವವರೇ..?. ನಾನು ಮುಖ್ಯಮಂತ್ರಿ ನಾನು ಮುಖ್ಯಮಂತ್ರಿ ಎಂದು 224 ಜನರು ಹೇಳುತ್ತಿದ್ದಾರೆ. ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಟ್ಟಿಲ್ಲ, ಪ್ರಿಯಾಂಕ್ ಖರ್ಗೆ ನಾನು ಸಿಎಂ ಎನ್ನುತ್ತಾರೆ. ಅವರಪ್ಪನ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಆದರೆ ನಾನೇ ಸಿಎಂ ಅಂತಾನೆ ಮಗ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಲೇವಡಿ ಮಾಡಿದ್ದಾರೆ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಆಗಲು ಬಿಟ್ಟಿಲ್ಲ. ಇನ್ನು ಇವರನ್ನು ಬಿಡುತ್ತಾರಾ. ಸತೀಶ್ ಜಾರಕಿಹೊಳಿ ಅವರು ಕೂಡ ಸಿಎಂ ರೇಸ್‌ನಲ್ಲಿದ್ದಾರೆ ಎನ್ನುತ್ತಾರೆ. ಇನ್ನೂ ಜಿ. ಪರಮೇಶ್ವರ ಅವರು ಮುಖ್ಯಮಂತ್ರಿಯಾಗಲಿ ಎಂದು ಸಚಿವ ಕೆ.ಎನ್‌ ರಾಜಣ್ಣ ಹೇಳುತ್ತಿದ್ದಾರೆ. ಪರಮೇಶ್ವರ ದೇವರು ಅನುಗ್ರಹ ಇದ್ದರೆ ಸಿಎಂ ಆಗುತ್ತೇನೆ ಎನ್ನುತ್ತಾರೆ. ದೇವರನ್ನು ಬೈಯುವ ಕಾಂಗ್ರೆಸ್‌ನವರು ಇದೀಗ ದೇವರು ಎನ್ನುತ್ತಾರೆ ಎಂದರು. ಸಂವಿಧಾನ ತಿದ್ದುಪಡಿ ಮಾಡಿ ಜಾತಿಗೊಂದು ಮುಖ್ಯಮಂತ್ರಿ ಮಾಡಲಿ. ಪರಮೇಶ್ವರ ಮತ್ತು ಖರ್ಗೆಗಾಗಿ ಅದೊಂದು ಜಾತಿಗೆ ಎರಡು…

Read More

ಹಾನಗಲ್;- ತಾರಕೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಅಡ್ಡಿಪಡಿಸಿದ್ದ ಮುಸ್ಲಿಂ ಮೂಲಭೂತವಾದಿಗಳ ಕೃತ್ಯ ಖಂಡಿಸಿ ಇಂದು ಹಾನಗಲ್ ನಗರದಲ್ಲಿ ಪಾದಯಾತ್ರೆ ನಡೆಸಲಾಯಿತು. “ಹಾನಗಲ್ ಚಲೋ” ತಾರಕೇಶ್ವರ ಪಲ್ಲಕ್ಕಿ ಶೋಭಾ ಯಾತ್ರೆಯಲ್ಲಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೇಂದ್ರ,ಕೂಡಲದ ಗುರು ಮಹೇಶ್ವರ ಶಿವಾಚಾರ್ಯ ಶ್ರೀಗಳು, ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಶ್ರೀಗಳು,ಬಿಜೆಪಿ ಜಿಲ್ಲಾಧ್ಯಕ್ಷರಾದ ಸಿದ್ದರಾಜ ಕಲಕೋಟಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಈಳಗೇರ, ಶಶಿಧರ ಹೊಸಳ್ಳಿ, ರುದ್ರೇಶ್ ಚಿನ್ನಣ್ಣನವರ, ಪ್ರಮುಖರಾದ ಕಲ್ಯಾಣ ಕುಮಾರ ಶೆಟ್ಟರ, ಕೆ ಶಿವಲಿಂಗಪ್ಪ, ದೀಪಕ್ ಹರಪನಹಳ್ಳಿ, ಬಸವರಾಜ ಕೇಲಗಾರ, ಶಿವಾನಂದ ಮ್ಯಾಗೇರಿ, ಗಂಗಾಧರ ಬಾಣದ, ನಿಂಗಪ್ಪ ಗೊಬ್ಬೇರ, ಮಾಲತೇಶ್ ಸೊಪ್ಪಿನ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ರಮೇಶ್ ಪಾಲನಕರ ಹಾಗೂ ಸಾವಿರಾರು ಹಿಂದೂ ಸಮಾಜ ಬಾಂಧವರು, ಹಿಂದೂ ಸಂಘಟನೆಗಳ ಪ್ರಮುಖರು, ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Read More

ಚಾಮರಾಜನಗರ;- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಗದೀಶ್ ಶೆಟ್ಟರ್‌ ಅವರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಲೂ ಯೋಗ್ಯತೆಯಿಲ್ಲ. ಇಂತಹವರನ್ನು ಬಿಜೆಪಿ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಹುದ್ದೆ, ವಿರೋಧ ಪಕ್ಷದ ನಾಯಕ, ಸ್ಪೀಕರ್, ಮಂತ್ರಿ ಸೇರಿದಂತೆ ಎಲ್ಲಾ ಹುದ್ದೆ ಕೊಟ್ಟಿದೆ. ಹೀಗಾಗಿ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಶೆಟ್ಟರ್‌ಗೆ ಇಲ್ಲ. ಶೆಟ್ಟರ್‌ರವರೇ ದಯವಿಟ್ಟು ಕಿರಾಣಿ ಅಂಗಡಿ ತೆಗೆದುಕೊಂಡು ಕುಳಿತುಕೊಳ್ಳಿ ಎಂದರು. ಬಿಜೆಪಿಯಲ್ಲಿ ವಿ.ಸೋಮಣ್ಣ ಅವರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಯತ್ನಾಳ್, ಪಕ್ಷದಲ್ಲಿ ಸೋಮಣ್ಣಗೆ ದೊಡ್ಡ ಭವಿಷ್ಯವಿದೆ, ಅವರ ಕೊಡುಗೆ ದೊಡ್ಡದಿದೆ. ಹೀಗಾಗಿ ಹೈಕಮಾಂಡ್ ಬರ ಅಧ್ಯಯನ ತಂಡದಲ್ಲಿ ಅವರಿಗೆ ಸ್ಥಾನ ಕೊಟ್ಟಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿದರೆ ರಾಜ್ಯಾಧ್ಯಕ್ಷ ಆಗಬಹುದು ಎಂದರು. ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್​ ಪಕ್ಷಕ್ಕೆ ಹೋಗುತ್ತಾರೆ ಅಂತಾರೆ. ಕಾಂಗ್ರೆಸ್​ ತಮ್ಮಲ್ಲಿರುವ 136 ಶಾಸಕರನ್ನು ಸಮಾಧಾನಪಡಿಸಬೇಕಿದೆ. BJP ಬಿಟ್ಟು ಯಾರಾದರೂ ಕಾಂಗ್ರೆಸ್​ಗೆ ಹೋದರೆ ಮಣ್ಣು ತಿನ್ನಬೇಕಾಗುತ್ತದೆ ಎಂದರು.…

Read More

ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ರಕ್ಷಕ್ ಬುಲೆಟ್ ಬಿಗ್’​ ಮನೆಯೊಳಗಿನ ಅನುಭವ, ಸ್ಪರ್ಧಿಗಳ ಕುರಿತಾದ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದು, ಮುಂದಿನ ವಾರ ತಮ್ಮ ಜಾಗದಲ್ಲಿ ಯಾವ ಸ್ಪರ್ಧಿ ಇರಬಹುದು ಎಂಬುದನ್ನು ಇದೀಗ ಬಹಿರಂಗವಾಗಿ ತಿಳಿಸಿದ್ದಾರೆ. ಮೊದಲು ಟಾಸ್ಕ್​ ಬಗ್ಗೆ ಮಾತನಾಡಿದ ರಕ್ಷಕ್, ‘ಫನ್‌ ಫ್ರೈಡೆಯಲ್ಲಿನ ಮ್ಯೂಸಿಕಲ್ ಪಾಟ್‌ ಟಾಸ್ಕ್‌ ಸಖತ್ ಮಜಾ ಕೊಟ್ಟಿತ್ತು. ಫನ್‌ ಫ್ರೈಡೆ ಅಂದ್ರೇ ಮಜವಾಗಿರೋ ಚುಟುವಟಿಕೆ. ಅದನ್ನೂ ಕೆಲವರು ಸಿಕ್ಕಾಪಟ್ಟೆ ಗಂಭೀರವಾಗೇ ಆಡುತ್ತಾರೆ. ಫನ್ ಅನ್ನೋ ಶಬ್ದಕ್ಕೆ ಹಾಳುಮಾಡಬಾರದು. ಬೇರೆ ಟ್ರಿಗರ್ ಆಗುವ ಟಾಸ್ಕ್ ಇರುತ್ತದೆ. ಅದಕ್ಕೆ ಕುಪಿತವಾಗಲಿ. ಆದ್ರೆ ಮಜವಾಗಿ ಆಡುವ ಆಟವನ್ನು ಮಜವಾಗಿಯೇ ಆಡಿ. ಎಂಜಾಯ್ ಮಾಡಿಕೊಂಡು ಆಡಬೇಕು’ ಎಂದು ಹೇಳಿದರು. ಮನೆಯೊಳಗಿನ ಸ್ಪರ್ಧಿಗಳಲ್ಲಿ ಜೆನ್ಯೂನ್ ಅಂದ್ರೆ ನಮ್ರತಾ. ಸ್ಟ್ರಾಟಜಿ ಅಂತ ಬಂದ್ರೆ ವಿನಯ್. ಫೇಕ್‌ ಅಂತ ಹೇಳಕ್ಕಾಗಲ್ಲ. ಆದರೆ ಬೇಡದಿರೋ ವಿಷಯಕ್ಕೆ ನಾಟಕ ಮಾಡಿದ್ದಾರೆ ಭಾಗ್ಯಶ್ರೀ. ಅಳೋದು ಒಂದೇ ಅಲ್ಲ ಲೈಫ್‌ನಲ್ಲಿ. ಅದನ್ನು ಗಟ್ಟಿಯಾಗಿ ಎದುರಿಸಬೇಕು. ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ…

Read More

ಬೆಂಗಳೂರು;- ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ ಆಗಲಿದ್ದು, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರದಲ್ಲಿ ಜೋರು ಮಳೆಯಾಗಲಿದೆ. ಹೀಗಾಗಿ, ಈ ಜಿಲ್ಲೆಗಳಿಗೆ ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ಹಾವೇರಿ ಹಾಗೂ ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಎರಡೂ ದಿನ ಮೋಡ ಕವಿದ ವಾತಾವರಣ, ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read More

ಒಂದೂ ಬೌಲ್ ಆಡದೇ ಏಂಜೆಲೊ ಮ್ಯಾಥ್ಯೂಸ್ ಔಟ್ ಆಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿಯಾಗಿರುವುದು ಇದೇ ಮೊದಲು. ಅವರು ಒಂದೂ ಎಸೆತ ಎದುರಿಸದೇ ಔಟ್ ಆದ ಬ್ಯಾಟರ್ ಕೂಡ ಅವರಾದರು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 36 ವರ್ಷದ ಮ್ಯಾಥ್ಯೂಸ್ ಅವರು ಸದೀರ ಸಮರವಿಕ್ರಮ ಅವರು ಔಟಾದ ನಂತರ ಬ್ಯಾಟಿಂಗ್ ಮಾಡಬೇಕಿತ್ತು. ಆರನೇ ಕ್ರಮಾಂಕದ ಬ್ಯಾಟರ್‌ ಮ್ಯಾಥ್ಯೂಸ್ ಪಿಚ್‌ನತ್ತ ಬಂದರು. ಆದರೆ ಇದೇ ಸಂದರ್ಭದಲ್ಲಿ ತಮ್ಮ ಹೆಲ್ಮೆಟ್‌ನ ಪಟ್ಟಿ ಹರಿದಿದ್ದನ್ನು ಗಮನಿಸಿದರು. ಇನ್ನೊಂದು ಹೆಲ್ಮೆಟ್ ತರುವಂತೆ ಡಗ್‌ಔಟ್‌ನತ್ತ ಸಹ ಆಟಗಾರನಿಗೆ ಸನ್ನೆ ಮಾಡಿದರು. ಆದರೆ ಈ ಸಂದರ್ಭದಲ್ಲಿ ವೇಳೆ ಮೀರಿದ್ದನ್ನು ಗಮನಿಸಿದ ಬಾಂಗ್ಲಾ ಆಟಗಾರರು ಟೈಮ್‌ ಔಟ್‌ಗಾಗಿ ಮನವಿ ಸಲ್ಲಿಸಿದರು. ಒಬ್ಬ ಬ್ಯಾಟರ್ ಔಟ್ ಅಥವಾ ಗಾಯಗೊಂಡು ನಿವೃತ್ತಿಯಾಗಿ ನಿರ್ಗಮಿಸಿದ ಎರಡು ನಿಮಿಷಗಳ ಅವಧಿಯಲ್ಲಿ ಮತ್ತೊಬ್ಬ ಬ್ಯಾಟರ್ ಕ್ರೀಸ್‌ಗೆ ಬಂದು ಆಟ ಆರಂಭಿಸಬೇಕು ಎಂಬುದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (40.1.1) ನಿಯಮವಾಗಿದೆ. ಅಲ್ಲದೇ ನಿಯಮ 40.1.2ರ ಪ್ರಕಾರ, ಬ್ಯಾಟರ್‌…

Read More

ಬಿಗ್​ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಶುರುವಾಗಿದೆ. ಮೊದಲು ಕಾರ್ತಿಕ್ ಮತ್ತು ಸಂಗೀತಾ ಲವ್ ಸ್ಟೋರಿ ಈಗಲೂ ಪೀಕ್‌ನಲ್ಲಿಯೇ ಇದೆ. ಇದಾದ ಮೇಲೆ ಮೈಕಲ್ ಮತ್ತು ಇಶಾನಿ ಜೋಡಿ ಓಪನ್ ಆಗಿಯೇ ಹೇಳಿಕೊಂಡಿದೆ. ಅದರ ಮಧ್ಯೆ ಇನ್ನೂ ಒಂದು ಲವ್ಲಿ ಸ್ಟೋರಿ ಈ ವಾರ ರಿವೀಲ್ ಆಗಿದೆ. ಕಿಚ್ಚನ ವಾರದ ಕಥೆಯಲ್ಲಿಯೇ ಇದೆಲ್ಲ ರಿವೀಲ್ ಆಗಿದೆ. ಇದರ ಆ ಲವ್ ಸ್ಟೋರಿಯ ಪ್ರೇಮಿಗಳು ಯಾರು? ಪರಸ್ಪರ ಇವರು ಒಪ್ಪಿಕೊಂಡ್ರೇ? ಇದಕ್ಕೆ ಉತ್ತರ ಸಿಂಪಲ್ ಆಗಿಯೇ ಇದೆ. ಬಿಗ್ ಬಾಸ್ ಮನೆಯೊಳಗೆ ಏನೇನೋ ಆಗುತ್ತದೆ. ಅದರ ಲವ್ ಸ್ಟೋರಿ ಕೂಡ ವಿಶೇಷವಾಗಿಯೇ ಕಾಣಿಸುತ್ತವೆ. ಪ್ರತಿ ಸೀಸನ್‌ನಲ್ಲೂ ಇಂತಹ ಒಂದಷ್ಟು ಲವ್ ಸ್ಟೋರಿ ಇರುತ್ತವೆ. ಎಲ್ಲ ಸಕ್ಸಸ್ ಆಗುತ್ತವೆ ಅಂತ ಹೇಳೋದು ಕಷ್ಟ. ಆ ಲೆಕ್ಕದಲ್ಲಿ ಚೆಂದನ್ ಶೆಟ್ಟಿ-ನಿವೇದಿತಾ ಸ್ಟೋರಿ ಸೂಪರ್ ಹಿಟ್ ಆಗಿದೆ. ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ. ಜೋಡಿ ಇನ್ನೂ ಮೋಡಿ ಮಾಡ್ತಾನೇ ಇದೆ. ಅರ್ಧಂಬರ್ಧ ಪ್ರೇಮಕಥೆ ಅನ್ನುವ ಸಿನಿಮಾ…

Read More

ಇಂದು ಸಿಲಿಕಾನ್ ಸಿಟಿ ಜನರಿಗೆ ಬಿಸಿಲಿನ ಬಿಸಿಯಿಂದ ಕೊಂಚ ರಿಲೀಫ್ ಸಿಕ್ಕಿದೆ. ಇಂದು ಮಧ್ಯಾಹ್ನನದಿಂದ ಬೆಂಗಳೂರಿನ ಬಹುತೇಕ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ತಂಪಾದ ವಾತಾವರಣ ಸೃಷ್ಟಿಯಾಗಿದ್ದು ಸಂಜೆಯಾಗುತ್ತಿದ್ದಂತೆ ಸ್ನ್ಯಾಕ್ಸ್‌ಗೆ ಬೇಡಿಕೆ ಹೆಚ್ಚಾಗಿದೆ. ಮಳೆ ಬರುವಾಗ ಒಂದು ಪ್ಲೇಟ್ ಬಜ್ಜಿ ಅದರೊಂದಿಗೆ ಚಹಾ ಇದ್ದರೆ ಅದರ ಮಜಾನೇ ಬೇರೆ. ಹೀಗಾಗಿ ಬೆಂಗಳೂರು ತಂಪಾಗುತ್ತಿದ್ದಂತೆ ಬಜ್ಜಿ, ಬೊಂಡಾ, ಚಹಾ, ಕಾಫಿ, ಫ್ರೆಂಚ್ ಫ್ರೈಸ್, ಮ್ಯಾಗಿ ಹೀಗೆ ಬಗೆ ಬಗೆಯ ತಿಂಡಿಗಳಿಗೆ ಜನ ಮುಗಿಬಿದ್ದಿದ್ದಾರೆ. ಟೀ ಅಂಗಡಿ, ಬೀದಿ ಬದಿ ಹಾಗೂ ರಸ್ತೆ ಸ್ನ್ಯಾಕ್ಸ್‌ ಅಂಗಡಿಗಳತ್ತ ಜನ ಹೆಜ್ಜೆ ಹಾಕಲು ಶುರು ಮಾಡಿದ್ದಾರೆ. ಅದರಲ್ಲೂ ಮಳೆ ಬಂದಾಗ ಹೆಚ್ಚು ತಿನ್ನಲು ಮನಸ್ಸಾಗೋದು ಕರಿದ ತಿಂಡಿಗಳಲ್ಲಿ ಒಂದಾದ ಬಜ್ಜಿಯನ್ನ. ಹೀಗಾಗಿ ಮಳೆ ಅಥವಾ ತಂಪಾದ ವಾತಾವರಣದಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಬಜ್ಜಿಯಲ್ಲೂ ನಾನಾ ಬಗೆಯ ಬಜ್ಜಿಗಳಿವೆ. ಜನರು ತಮ್ಮ ಇಷ್ಟಕ್ಕನುಗುಣವಾಗಿ ಬಜ್ಜಿಗಳನ್ನು ಖರೀದಿಸಿ ಆನಂದಿಸುತ್ತಾರೆ. ಕೆಲವರು ಮನೆಯಲ್ಲೇ ಮಾಡುವ ಕರಿದ ತಿಂಡಿಗಳನ್ನು ಸೇವಿಸುತ್ತಾರೆ. ಅಂದಹಾಗೆ ಬಜ್ಜಿಯಲ್ಲಿ…

Read More

ಹೂವಿನಹಡಗಲಿ;- ಸರಕಾರ ಮೂರು ಗುಂಪಾಗಿ ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಬರಗಾಲದಿಂದ ಜನತೆ ಸಂಕಷ್ಟದಲ್ಲಿದ್ದು ರಾಜ್ಯ ಸರಕಾರ ಮೂರು ಗುಂಪಾಗಿ ಸಿ.ಎಂ ಕುರ್ಚಿಗಾಗಿ ಕಿತ್ತಾಡುತ್ತಾ ಜನರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದರು. ರಾಜ್ಯದಲ್ಲಿ ಬರ ತೀವ್ರವಾದ ಹಿನ್ನಲೆಯಲ್ಲಿ ರೈತರು ಬೆಳೆದ ಬೆಳೆ ನಷ್ಟವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪ್ರತಿ ಹೋಬಳಿ ಮಟ್ಟದಲ್ಲಿಯು ಮೇವು ಬ್ಯಾಂಕ್ ಹಾಗೂ ಗೋಶಾಲೆ ಪ್ರಾರಂಭ ಮಾಡಬೇಕು. ಇಷ್ಟೆಲ್ಲಾ ಇದ್ದಾಗ್ಯೂ ಸಹ ಸಿದ್ದರಾಮಯ್ಯನವರ ಸರಕಾರ ಜನತೆಯನ್ನು ನಿರ್ಲಕ್ಷಿಸಿದೆ.ಕೇಂದ್ರದ ಬರ ತಂಡ ಅಧ್ಯಯನಕ್ಕೆ ಬಂದಾಗ ನಿಜವಾದ ರಾಜ್ಯದ ಪರಿಸ್ಥಿತಿ ತೋರಲು ಸರ್ಕಾರ ವಿಫಲವಾಗಿದೆ.ವಿನಾಃ ಕಾರಣ ಹಣ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿಯಾಗುತ್ತರೆ ಎಂದಾದಲ್ಲಿ ನಾನು ಶಾಸಕರ ಬೆಂಬಲ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿ ಅವರಿಬ್ಬರ ಸಂಬಂಧ…

Read More