ಲೂಸ್ ಮಾದ ಯೋಗಿ (Loose Mada Yogi) ಅಭಿನಯದ 50ನೇ ಚಿತ್ರ ‘ರೋಜಿ’ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಲಿಯೋ ಖ್ಯಾತಿಯ ಸ್ಯಾಂಡಿ ಮಾಸ್ಟರ್ ಸಹ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ನಟ ಶ್ರೀನಗರ ಕಿಟ್ಟಿ ರೋಜಿ (Roji) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಶ್ರೀನಗರ ಕಿಟ್ಟಿ (Srinagar Kitty) ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆ ಚಿತ್ರತಂಡ ಬಿಡುಗಡೆ ಮಾಡಿದೆ. ಶಾಂತಿನಗರದ ಮೈದಾನದಲ್ಲಿ ಶ್ರೀನಗರ ಕಿಟ್ಟಿ ಅವರ ಮೂವತ್ತು ಅಡಿ ಪೋಸ್ಟರ್ ಬಿಡುಗಡೆ ಮಾಡಿ, ಕಿಟ್ಟಿ ಅವರನ್ನು ಚಿತ್ರಕ್ಕೆ ವಿಶೇಷವಾಗಿ ಬರಮಾಡಿಕೊಳ್ಳಲಾಯಿತು. ಪೋಸ್ಟರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು. ಈ ಪಾತ್ರದ ಕುರಿತು ನಿರ್ದೇಶಕ ಶೂನ್ಯ ಅವರು ಹೇಳಿದಾಗ ಚೆನ್ನಾಗಿದೆ ಅನಿಸಿತು. ಈಗ ಪೋಸ್ಟರ್ ನೋಡಿ ಇನ್ನು ಹೆಚ್ಚು ಖುಷಿಯಾಗಿದೆ. “ಕ್ರಿಸ್ಟೋಫರ್” ನನ್ನ ಪಾತ್ರದ ಹೆಸರು ಎಂದರು ಶ್ರೀನಗರ ಕಿಟ್ಟಿ. ನಮ್ಮ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ನಟಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದು ಆರಂಭಿಸಿದ ನಟ ಯೋಗಿ, ನಾವಿಬ್ಬರು “ಹುಡುಗರು” ಚಿತ್ರದ…
Author: AIN Author
ನವದೆಹಲಿ:- ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ ಬೇಗ ಪರಿಹಾರ ಬಿಡುಗಡೆ ಮಾಡಬೇಕೆಂದು ಸಿಎಂ ಸಿದ್ದರಾಮಯ್ಯಗೆ ತೇಜಸ್ವಿ ಸೂರ್ಯ ಆಗ್ರಹ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಹುತಾತ್ಮ ಯೋಧ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಈ ಬಗ್ಗೆ ವಿಚಾರಿಸಲು 2 ದಿನದ ಹಿಂದೆ ನಾನು ಪ್ರಾಂಜಲ್ ತಂದೆಗೆ ಫೋನ್ ಮಾಡಿದ್ದೆ. ಸರ್ಕಾರದ ವತಿಯಿಂದ ಯಾರಾದರೂ ಫೋನ್ ಮಾಡಿ ಮಾತನಾಡಿದರೇ ಎಂದು ಕೇಳಿದೆ. ಅವರ ತಂದೆ ‘ಇವತ್ತಿನವರೆಗೂ ಸಹ ನನಗೆ ಯಾವುದೇ ಫೋನ್ ಬಂದಿಲ್ಲ’ ಅಂತ ಹೇಳಿದರು ಎಂದರು. ಪ್ರಾಂಜಲ್ ಕುಟುಂಬಕ್ಕೆ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಸೂರ್ಯ ಹೇಳಿದರು. ಯಾರು ಪ್ರಾಂಜಲ್ ಅಂದ್ರೆ, ನಾವೆಲ್ಲಿ ಪರಿಹಾರ ಕೊಡ್ತೀವಿ ಅಂತ ಹೇಳಿದ್ವಿ’ ಎಂದು ಸಿಎಂ ಬೇಜವಾಬ್ದಾರಿಯುತವಾಗಿ ಮಾತನಾಡಿದ್ದಾರೆ. ಓರ್ವ ಯೋಧನ ಬಗ್ಗೆ ಹೀಗೆ ಮುಖ್ಯಮಂತ್ರಿಗಳು ಮಾತನಾಡಿದ್ದು ನೋಡಿ ಬಹಳ ಬೇಸರವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು. ಮಾಧ್ಯಮದವರ ಮುಂದೆಯೇ ಪ್ರಾಂಜಲ್…
ರಶ್ಮಿಕಾ ಮಂದಣ್ಣ (Rashmika Mandanna) ಆಕಾಶದಲ್ಲಿ ತೇಲಾಡುತ್ತಿದ್ದಾರೆ. ‘ಅನಿಮಲ್’ (Animal) ಸಿನಿಮಾ ಮೊದಲ ದಿನ ನೂರಾ ಹದಿನಾರು ಕೋಟಿ ಗಳಿಸಿದೆ. ಸಾನ್ವಿ ಸಂತಸಕ್ಕೆ ಕಾರಣ ಅದಲ್ಲ. ಈ ಚಿತ್ರದಲ್ಲಿ ಗೀತಾಂಜಲಿಯಾಗಿ ಜನರ ಮನಸನ್ನು ರಶ್ಮಿಕಾ ಕದ್ದ ರೀತಿ ಇದೆಯಲ್ಲ. ಅದೇ ಶ್ರೀವಲ್ಲಿ ಬಾಲಿವುಡ್ ಬದುಕಿಗೆ ಹೊಸ ಅಡಿಗಲ್ಲು ಹಾಕಿದೆ. ರಶ್ಮಿಕಾ ಹವಾ ಜೋರಾಗಿದೆ. ರಶ್ಮಿಕಾ ಬಾಲಿವುಡ್ಗೆ ಕಾಲಿಟ್ಟು ಹಲವು ವರ್ಷ ಕಳೆದಿದೆ. ‘ಮಿಷನ್ ಮಜ್ನೂ’ ಹಾಗೂ ‘ಗುಡ್ಬೈ’ ಸಿನಿಮಾ ಬಂದಿತ್ತು. ಅಷ್ಟೇ ಬೇಗ ಸಿನಿಮಾ ಮಕಾಡೆ ಮಲಗಿತ್ತು. ರಶ್ಮಿಕಾ ಸುದ್ದಿಯಾದರು. ಆದರೆ ಸದ್ದು ಮಾಡಲಿಲ್ಲ. ಕಾರಣ ಅದರಲ್ಲಿ ಇದ್ದದ್ದೇ ಅಷ್ಟು ಅವಕಾಶ. ಅಷ್ಟೇ ಪಾತ್ರ. ಇನ್ನೇನು ಮಾಡೋಕಾಗುತ್ತೆ? ಸಾನ್ವಿ ಸೈಲೆಂಟ್ ಸುನಾಮಿಯಂತಿದ್ದರು. ಆದರೆ ‘ಅನಿಮಲ್’ ಸಿನಿಮಾ ನೋಡಿದವರು ಮಾತ್ರ, ದಿಸ್ ಈಸ್ ಕ್ರಶ್ಮಿಕಾ ಪಕ್ಕಾ ರಶ್ಮಿಕಾ. ರಿಯಲ್ ಟ್ಯಾಲೆಂಟೆಡ್ ಗರ್ಲ್ ಹೀಗೆ ಶಹಬ್ಬಾಶ್ಗಿರಿ ಕೊಡುತ್ತಿದ್ದಾರೆ. ರಣ್ಬೀರ್ ಪತ್ನಿ ಆಲಿಯಾ ಭಟ್ (Aliaa Bhatt) ಕೂಡ ಶ್ರೀವಲ್ಲಿ ನಟನೆ ನೋಡಿ ಬೆರಗಾಗಿದ್ದಾರೆ. ರಶ್ಮಿಕಾ…
ಬೆಂಗಳೂರು:- ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗುವವರೆಗೆ ವಿಪಕ್ಷ ನಾಯಕನಿಗೆ ಶುಭ ಕೋರುವುದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಉತ್ತರ ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಅಲ್ಲಿಯತನಕ ನಾನು ಶುಭ ಕೋರುವುದಿಲ್ಲ ಎಂದು ಯತ್ನಾಳ್ ಹೇಳಿದರು. ನಿಮ್ಮ ಕೋಪ ಯಾರ ವಿರುದ್ಧವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಯತ್ನಾಳ್, ನನ್ನ ಹೋರಾಟ ಉತ್ತರ ಕರ್ನಾಟಕದ ಪರವಾಗಿ ಎಂದರು. ಪಿಸಿಐ ಪರೀಕ್ಷೆ ಮುಂದೂಡಿಕೆ ಮತ್ತು ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಮಾತನಾಡಲು ಅಧ್ಯಕ್ಷರು ಅವಕಾಶ ಮಾಡಿಕೊಟ್ಟರು. ನನ್ನ ಹೋರಾಟಕ್ಕೆ ಎಲ್ಲರು ಮಣಿಯುತ್ತಾರೆ. ನಾನು ಎರಡು ಹೋರಾಟವನ್ನ ಗೆದ್ದಿದೇನೆ ಎಂದು ಯತ್ನಾಳ್ ಹೇಳಿದರು. ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೂ ಶಾಸಕಾಂಗ ಪಕ್ಷದ ಸಭೆಗೆ ಹೋಗುವುದಿಲ್ಲ ಎಂದಿದ್ದರು. ರಾಜ್ಯದ ಜನರ ದೃಷ್ಟಿಯಲ್ಲಿ ನಾನು ಎಲ್ಲಾ ರೀತಿಯ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಆಗಲು ಸಮರ್ಥನಾಗಿದ್ದೇನೆ. ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲೇಬೇಕು. ಅದಕ್ಕೆ ನಾನು ಯಾರ ಮುಲಾಜಿಗೂ ಹೆದರುವುದಿಲ್ಲ…
ಟೀಮ್ ಇಂಡಿಯಾ ಪರ ಟಿ-20 ಐ ಸ್ವರೂಪದಲ್ಲಿ ಫಿನಿಷರ್ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿರುವ ರಿಂಕು ಸಿಂಗ್ ಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಚೊಚ್ಚಲ ಕರೆ ನೀಡಲಾಗಿದೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಗುಜರಾತ್ ಟೈಟನ್ಸ್ ನ ಹೆಡ್ ಕೋಚ್ ಆಶಿಶ್ ನೆಹ್ರಾ, ಬಿಸಿಸಿಐ ಸೆಲೆಕ್ಟರ್ಸ್ ಗಳು ರಿಂಕು ಸಿಂಗ್ ಮೇಲೆ ಭರವಸೆ ಇಟ್ಟು ಸ್ಥಾನ ಕಲ್ಪಿಸಿದ್ದು ಆತ ಈ ಸ್ವರೂಪದ ಕ್ರಿಕೆಟ್ ನಲ್ಲೂ ತಂಡಕ್ಕೆ ಉತ್ತಮ ಕಾಣಿಕೆ ನೀಡುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟಿ20-ಐ ಸ್ವರೂಪದಲ್ಲಿ ಟೀಮ್ ಇಂಡಿಯಾ ಪರ ಫಿನಿಷರ್ ಪಾತ್ರ ವಹಿಸಿರುವ ರಿಂಕು ಸಿಂಗ್, ರಾಯ್ಪುರದಲ್ಲಿ ನಡೆದ 4ನೇ ಟಿ20-ಐ ಪಂದ್ಯದಲ್ಲಿ ತಮ್ಮ ಕೌಶಲ್ಯ ಹಾಗೂ ಆಕ್ರಮಣಕಾರಿ ಆಟದೊಂದಿಗೆ 29 ಎಸೆತಗಳಲ್ಲೇ 46 ರನ್ ಗಳಿಸಿದ್ದಲ್ಲದೆ 5ನೇ ವಿಕೆಟ್ ಗೆ ಜಿತೇಶ್ ಶರ್ಮಾ (35 ರನ್) ರೊಂದಿಗೆ 56 ರನ್ ಗಳ ಜೊತೆಯಾಟ ನೀಡಿ ತಂಡ 174 ರನ್ ಗಳಿಸಲು…
ಕೋಳಿ ಸಾಕಾಣಿಕೆ ಮಾಡಬೇಕು ಎನ್ನುವ ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಸೂಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಕೆಳಗೆ ತಿಳಿಸಿದಂತೆ ನಿರ್ವಹಣೆಯನ್ನು ಮಾಡಿದರೆ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಶುದ್ಧ ಪಾತ್ರೆಯಲ್ಲಿ ಯಾವಾಗಲೂ ಕೋಳಿಗಳಿಗೆ ಶುದ್ಧ ನೀರನ್ನು ಒದಗಿಸಬೇಕು. ಕೋಳಿ ಆಹಾರವನ್ನು ಒಣಗಿದ ಹಾಗೂ ಸ್ವಚ್ಛ ಸ್ಥಳದಲ್ಲಿ ಇಡಬೇಕು. ಮೇವಿಣಿಕೆಗಳನ್ನು ಮತ್ತು ನೀರುಣಿಕೆಗಳನ್ನು ಪ್ರತಿದಿನ ಶುದ್ಧ ನೀರಿನಿಂದ ತೊಳೆದು ಒಣಗಿಸಿದ ನಂತರ ಆಹಾರವನ್ನು ನೀಡಬೇಕು. ಕೋಳಿ ಮನೆಯನ್ನು ಪ್ರತಿದಿನ ಸ್ವಚ್ಛವಾಗಿ ಇಡಬೇಕು. ನೆಲ ಮತ್ತು ಗೋಡೆಯ ಸುತ್ತಮುತ್ತ ಸುಣ್ಣವನ್ನು ಹಾಕಬೇಕು. ಯಾವ ಕೋಳಿಗಳು ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಅಂತಹ ಕೋಳಿಗಳನ್ನು ಬೇರ್ಪಡಿಸಬೇಕು. ಕೋಳಿಗಳ ಜೊತೆಯಲ್ಲಿ ಬೇರೆ ಪ್ರಾಣಿಗಳನ್ನು ಸಾಕಬಾರದು. ಜಂತುನಾಶಕ ಔಷಧಿಯನ್ನು ಲಸಿಕೆ ಹಾಕುವ 12 ರಿಂದ15 ದಿನಗಳ ಮುಂಚೆ ನೀಡಬೇಕು. ಲಸಿಕೆಯನ್ನು ವೇಳಾ ಪಟ್ಟಿಯಂತೆ ಹಾಕಿಸಬೇಕು. ಕೋಳಿಗಳಲ್ಲಿ ಪ್ರಮುಖವಾಗಿ ಕಂಡು ಬರುವ ರೋಗಗಳು ಮತ್ತು ಅವುಗಳ ನಿರ್ವಹಣೆ ಗಾಯಗಳ ಮೂಲಕ ಹರಡುತ್ತದೆ, ಸೊಳ್ಳೆಗಳು ವಾಹಕಗಳಾಗಿರುತ್ತವೆ. ಚರ್ಮ, ಬಾಯಿ ಮತ್ತು ತಲೆಯ ಮೇಲೆ ಗುಳ್ಳೆಗಳು ಸೋಫ್ರಾಮೈಸಿನ್…
ಬೆಂಗಳೂರು:- ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಇತ್ತೀಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ಕರ್ನಾಟಕ ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿರುವುದು ತಿಳಿದುಬಂದಿದೆ. ಕರ್ನಾಟಕದಲ್ಲಿ 2022ರಲ್ಲಿ ಒಟ್ಟು 1,404 ಕೊಲೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಹೆಚ್ಚಿನವು ವೈಯುಕ್ತಿಕ ದ್ವೇಷ ಅಥವಾ ವೈಷಮ್ಯದ ವಿವಾದಗಳಿಂದಾಗಿ ಸಂಭವಿಸಿವೆ ಎಂದು ಎನ್ಸಿಆರ್ಬಿ ತಿಳಿಸಿದೆ. 2021 ರಲ್ಲಿ ರಾಜ್ಯದಲ್ಲಿ 1,357 ಕೊಲೆ ಪ್ರಕರಣಗಳು ದಾಖಲಾಗಿದ್ದರೆ, ಕಳೆದ ವರ್ಷ 1,404 ಕ್ಕೆ ಏರಿಕೆಯಾಗಿದೆ ಎಂದು ಎನ್ಸಿಆರ್ಬಿ ದತ್ತಾಂಶಗಳಿಂದ ತಿಳಿದುಬಂದಿದೆ. 28 ರಾಜ್ಯಗಳ ಪೈಕಿ, ಉತ್ತರ ಪ್ರದೇಶದಲ್ಲಿ ಗರಿಷ್ಠ 3,491 ಕೊಲೆ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ಬಿಹಾರ, ಮಹಾರಾಷ್ಟ್ರ (2,295) ಹಾಗೂ ಕರ್ನಾಟಕ 8 ನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. ಕರ್ನಾಟಕದಲ್ಲಿ ಕೊಲೆಯ ಪ್ರಮಾಣವು ಪ್ರತಿ ಲಕ್ಷ ಜನಸಂಖ್ಯೆಗೆ 2.1 ರಷ್ಟಿದ್ದರೆ, ಅಂತಹ ಪ್ರಕರಣಗಳಲ್ಲಿ ಚಾರ್ಜ್ ಶೀಟ್ ದಾಖಲಾಗಿದ್ದು 90.2 ರಷ್ಟಿದೆ. ರಾಜ್ಯದಲ್ಲಿ 2022ರಲ್ಲಿ ನಡೆದ ಅತಿ ಹೆಚ್ಚು ಕೊಲೆ ಪ್ರಕರಣಗಳಲ್ಲಿ 706 ಪ್ರಕರಣಗಳಿಗೆ ‘ವ್ಯಾಜ್ಯ’ಗಳು ಕಾರಣವಾಗಿತ್ತು. 353…
ತಿರುವನಂತಪುರಂ: ಆರು ವರ್ಷದ ಬಾಲಕಿಯನ್ನು ಅಪಹರಿಸಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಕೇರಳದ ಉದ್ಯಮಿ, ಆತನ ಪತ್ನಿ ಹಾಗೂ ಮಗಳನ್ನು ಕೇರಳ (Kerala) ಪೊಲೀಸರು (Police) ಬಂಧಿಸಿದ್ದಾರೆ. ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳಾದ ಪದ್ಮಕುಮಾರ್, ಆತನ ಪತ್ನಿ ಅನಿತಾ ಕುಮಾರಿ ಮತ್ತು ಯೂಟ್ಯೂಬರ್ ಆದ ಅನುಪಮಾ ಪದ್ಮನ್ಳನ್ನು ಬಂಧಿಸಲಾಗಿದೆ. ಮಗುವನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಸಂದರ್ಭದಲ್ಲಿ ಆರೋಪಿಗಳಲ್ಲಿ ಒಬ್ಬನ ಧ್ವನಿಯನ್ನು ಗುರುತಿಸಿ ನಾಗರಿಕರು ನೀಡಿದ ಮಾಹಿತಿ ಆರೋಪಿಗಳ ಬಂಧನಕ್ಕೆ ಬಹಳ ಸಹಾಯವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಅಪಹರಣಕ್ಕೊಳಗಾದ ಬಾಲಕಿಯ ಹಾಗೂ ಪದ್ಮಕುಮಾರ್ ಭಾವಚಿತ್ರದ ಸಹಾಯದಿಂದ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಕುಟುಂಬದ ಆರ್ಥಿಕ ಸಮಸ್ಯೆಯೇ ಅಪಹರಣಕ್ಕೆ ಕಾರಣ ಎನ್ನಲಾಗಿದೆ. ಆರೋಪಿಗಳು ಕಳೆದ ಒಂದು ವರ್ಷದಿಂದ ಅಪಹರಣಕ್ಕೆ ಸೂಕ್ತವಾದ ಮಗುವನ್ನು ಹುಡುಕುತ್ತಿದ್ದರು. ಪ್ರಕರಣದ ಹಿಂದೆ ಅನಿತಾ ಕುಮಾರಿಯ ಪಾತ್ರ ಹೆಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು:- ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ ಕುಟುಂಬಕ್ಕೆ 50 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಇಂದು ಅವರ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರಿಸಲಾಗುತ್ತದೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಪ್ರಾಂಜಲ್ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಬಂದಾಗ ಅದಕ್ಕೆ ನಮನ ಸಲ್ಲಿಸಿದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರಿಹಾರ ಧನ ಘೋಷಣೆ ಮಾಡಿದ್ದರು. ಸದ್ಯ ಆದೇಶ ಹೊರಡಿಸಲಾಗಿದ್ದು, ಇಂದು ಪರಿಹಾರದ ಚೆಕ್ ಹಸ್ತಾಂತರಿಸಲಾಗುತ್ತದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜಮ್ಮು- ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದ ವೇಳೆ ಹುತಾತ್ಮರಾದ ನಾಡಿನ ಹೆಮ್ಮೆಯ ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಕುಟುಂಬಕ್ಕೆ ರೂ. 50,00,000 ಪರಿಹಾರಧನವನ್ನು ನಮ್ಮ ಸರ್ಕಾರದಿಂದ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ದೇಶ ರಕ್ಷಣೆಗಾಗಿ ಪ್ರಾಣ ಪಣಕ್ಕಿಟ್ಟು ಶ್ರಮಿಸುವ ಪ್ರತಿಯೊಬ್ಬ ಯೋಧನ ಬಗ್ಗೆ ನಮಗೆ ಅಪಾರ ಗೌರವವಿದೆ. ಹುತಾತ್ಮ ಯೋಧ ಪ್ರಾಂಜಲ್ ಅವರ ತ್ಯಾಗ,…
ವೆಸ್ಟ್ ಇಂಡೀಸ್ ಹಾಗೂ ಅಮೇರಿಕಾದ ಆತಿಥ್ಯದಲ್ಲಿ ಆಯೋಜನೆಗೊಂಡಿರುವ 2024ರ ಟಿ20-ಐ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ಸಂಜಯ್ ಮಂರ್ಜೇಕರ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಈ ಕ್ರಿಕೆಟ್ ದಿಗ್ಗಜರಿಗೆ ಚುಟುಕು ವಿಶ್ವಕಪ್ ಆಡುವ ಅರ್ಹತೆ ಇದೆ ಎಂದು ಬಿಸಿಸಿಐ ಸೆಲೆಕ್ಟರ್ಸ್ ಗೆ ಅನ್ನಿಸಿದರೆ ಆಯ್ಕೆ ಮಾಡಲಿ ಎಂದು ಹೇಳಿದ್ದಾರೆ. ವೈಟ್ ಬಾಲ್ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಅತ್ಯಂತ ಹಿರಿಯ ಆಟಗಾರರಾಗಿದ್ದು, ಕಳೆದ ಹಲವು ವರ್ಷಗಳಿಂದ ಕ್ರಿಕೆಟ್ ಲೋಕದ ಈ ಇಬ್ಬರು ದಿಗ್ಗಜರು ಟೀಮ್ ಇಂಡಿಯಾವನ್ನು ಹಲವು ಐಸಿಸಿ ಟೂರ್ನಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಆದರೆ 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಟ್ರೋಫಿ ಗೆಲ್ಲುವಲ್ಲಿ ಮುಗ್ಗರಿಸಿದ್ದೇವೆ. ಪ್ರಸಕ್ತ ಸಾಕಷ್ಟು ಯಂಗ್ ಪ್ಲೇಯರ್ ಗಳಿಗಿಂತ ತಾನೇ ಉತ್ತಮ ಬ್ಯಾಟರ್ ಎಂಬುದನ್ನು ವಿರಾಟ್ ಕೊಹ್ಲಿ ಸಾಬೀತುಪಡಿಸಿದ್ದಾರೆ. ರೋಹಿತ್ ಶರ್ಮಾ…