Author: AIN Author

ಹುಬ್ಬಳ್ಳಿ: ವೈಜ್ಞಾನಿಕವಾಗಿ ಮೀಸಲಾತಿ ಸೌಲಭ್ಯ ದೊರೆಯಲು ದೇಶದೆಲ್ಲೆಡೆ ಜಾತಿಗಣತಿ ನಡೆಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿ ಆಧರಿಸಿ ಅವೈಜ್ಞಾನಿಕವಾಗಿ ಸೌಲಭ್ಯ ಕಲ್ಪಿಸಲಾಗಿದೆ. ಸರ್ವರಿಗೂ ಸಕಲ ಸೌಲಭ್ಯ ಸಿಗಲು ಜಾತಿಗಣತಿ ಅವಶ್ಯ. ರಾಜ್ಯದಲ್ಲಿ ನಡೆದ ಜಾತಿಗಣತಿ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವೀಕರಿಸಿ, ಸದನದ ಮುಂದಿಡಬೇಕು ಎಂದು ಒತ್ತಾಯಿಸಿದರು. ಗೂಳಿಹಟ್ಟಿ ಶೇಖರ್ ಅವರನ್ನು ನಾಗಪುರದ ಹೆಗಡೇವಾರ್ ಸ್ಮಾರಕದೊಳಗೆ ಬಿಡದಿರುವ ಘಟನೆ ಜಾತಿ ಕಾರಣಕ್ಕೇ ನಡೆದಿದ್ದರೆ ಖಂಡನೀಯ. ಆರ್ ಎಸ್ಎಸ್ ಇದಕ್ಕೆ ತಲೆಬಾಗಬೇಕು. ಈ ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ಹಲವು ಸಭೆಗಳಿಗೆ ಆಹ್ವಾನವನ್ನೇ ನೀಡುತ್ತಿರಲಿಲ್ಲ. ನಿಖರ ಕಾರಣ ಹೇಳದೆ ದೂರವಿಡಲಾಗುತ್ತಿತ್ತು ಎಂದು ಹೇಳಿದರು. ಪಂಚರಾಜ್ಯಗಳ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಒಗ್ಗಟ್ಟು ಪ್ರದರ್ಶಿಸಬೇಕಿತ್ತು. ಒಗ್ಗಟ್ಟು ಮೂಡದ ಕಾರಣ ಭಾರಿ ಹಿನ್ನಡೆ ಅನುಭವಿಸುವಂತಾಯಿತು. ಲೋಕಸಭೆ ಚುನಾವಣೆಯ ದೃಷ್ಟಿಯಿಂದಾದರೂ ನಾಯಕತ್ವ ಘೋಷಿಸಿ, ಬಿಜೆಪಿ ಎದುರಿಸಬೇಕು ಎಂದು ತಿಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಗಳಡಿ ನಡೆದ…

Read More

ಹೈದರಾಬಾದ್:- ರೇವಂತ್​ ರೆಡ್ಡಿ ಅವರು ತೆಲಂಗಾಣ 2ನೆ ಮುಖ್ಯಮಂತ್ರಿಯಾಗಿ ರೇವಂತ್​ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದರು. ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೊಡಂಗಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ರೇವಂತ್ ರೆಡ್ಡಿ ಅವರಿಗೆ ಮುಖ್ಯಮಂತ್ರಿಯಾಗಿ ಗವರ್ನರ್‌ ತಮಿಳಿಸೈ ಸೌಂದರರಾಜನ್ ಅವರು ಪ್ರಮಾಣವಚನ ಬೋಧಿಸಿದರು. ಇದೆ ವೇಳೆ, ತೆಲಂಗಾಣದ ಉಪ ಮುಖ್ತಮಂತ್ರಿಯಾಗಿ (ಡಿಸಿಎಂ) ಮಲ್ಲು ಭಟ್ಟಿ ವಿಕ್ರಮಾರ್ಕ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾಂಗ್ರೆಸ್‌ನ ಎಲ್ಲಾ ಪ್ರಮುಖ ನಾಯಕರು ಆಗಮಿಸಿದ್ದರಿಂದ ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಬೆಳಗ್ಗೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಕ್ರೀಡಾಂಗಣಕ್ಕೆ ಬರಲಾರಂಭಿಸಿದ್ರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಅತಿಥಿಗಳನ್ನು ರಂಜಿಸಲು 500 ಕಲಾವಿದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂದು ಮಧ್ಯಾಹ್ನ ಒಂದು ಗಂಟೆ ನಾಲ್ಕು ನಿಮಿಷಕ್ಕೆ ರೇವಂತ್ ರೆಡ್ಡಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

Read More

ಬೆಂಗಳೂರು:- ತೆಲಂಗಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿನ್ನೆಲೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಮುಂದೆ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದು, ಎಸ್.ಮನೋಹರ್ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಈ ಸಂದರ್ಭದಲ್ಲಿ ಸಾಕಷ್ಟು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.

Read More

ಬೆಂಗಳೂರು:- ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಬಂಧಿಸಲಾಗಿದೆ. ಬಂಧಿತನಿಂದ ಸುಮಾರು ₹ 5 ಲಕ್ಷ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಆರೋಪಿಯು, ವಡೇರಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ಈತ ವಿದ್ಯಾರ್ಥಿಗಳು ಹಾಗೂ ಸ್ಥಳೀಯರನ್ನು ಗುರಿಯಾಗಿರಿಸಿಕೊಂಡು ಡ್ರಗ್ ಮಾರಾಟ ಮಾಡುತ್ತಿದ್ದ. ಈ ಸಂಬಂಧ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿ ವಿರುದ್ಧ ಎಸ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತನಿಂದ 23 ಗ್ರಾಂ ಕೊಕೇನ್, 238 ಗ್ರಾಂ ಕೊಕೇನ್ ಮಾದರಿಯ ಸಿಂಥೆಟಿಕ್ ಡ್ರಗ್, 57 ಸಾವಿರ ನಗದು,2 ಮೊಬೈಲ್ ಸೀಜ್ ಮಾಡಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳಗಾವಿ:- ಕರ್ನಾಟಕ ವಿಧಾನ ಪರಿಷತ್ ಸದಸ್ಯ ಟಿಎ ಶರವಣ ಅವರು, ಬೆಳಗಾವಿಯ ಸುವರ್ಣ ವಿಧಾನ ಸೌಧದ ಹೊರ ಆವರಣದಲ್ಲಿ ಗಿಡ ನೆಟ್ಟು, ನೀರು ಸಿಂಪಡಿಸಿದರು. ಈ ಮೂಲಕ ಪರಿಸರದ ಮೇಲಿರುವ ತಮ್ಮ ಕಾಳಜಿ ತೋರಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಟಿಎ ಶರವಣ ಅವರು, ಮರಗಳ ಬೇರುಗಳು ನಮ್ಮ ಜೀವನಾಧಾರ. ನೆಟ್ಟ ಪ್ರತಿ ಸಸಿಯು ಶಾಸಕರ ಹೆಸರಿರುವ ಫಲಕವನ್ನು ಹೊಂದಿದೆ, ಹಲವು ವರ್ಷಗಳ ನಂತರ ಬಂದರು ಈ ಸಂದರ್ಭವನ್ನು ಮೆಲಕು ಹಾಕಿಕೊಳ್ಳಬಹುದು. ಪರಿಸರದ ಸಂರಕ್ಷಣೆ ನಮ್ಮೆಲ್ಲರ ಹೊಣೆ,ಈ ರೀತಿಯ ಪರಿಸರ ಕಾಳಜಿಯನ್ನು ನಾನು ಮನಸಾರೆ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರು, ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Read More

ಬೆಳಗಾವಿ:- ಇಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡ ಟಿಎ ಶರವಣ ಅವರು, ಕೆ. ಆರ್.ಮಾರುಕಟ್ಟೆ ಮತ್ತು ಕಲಾಸಿಪಾಳ್ಯದ ಅಸ್ವಚ್ಛತೆ, ರಸ್ತೆ ದುರಸ್ಥಿ ಮತ್ತು ಕಳ್ಳತನ ಹೆಚ್ಚಿತ್ತಿರುವ ವಿಚಾರವಾಗಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದರು. ಒಂದು ನಗರ ಅಭಿವೃದ್ಧಿಯಾಗಿದೆ ಎಂದು ತಿಳಿಯುವುದೇ ಅದರ ಸ್ವಚ್ಛತೆಯ ಆಧಾರದ ಮೇಲೆ ಎಂದು ತಿಳಿಸಿದರು. ಬೆಂಗಳೂರು ಐಟಿ ಹಬ್,ಸಿಲಿಕಾನ್ ಸಿಟಿ ಎಂದೆಲ್ಲ ಪ್ರಸಿದ್ಧವಾಗಿದೆ, ಆದರೆ ಬೆಂಗಳೂರಿನ ಹೃದಯ ಭಾಗವಾದ ಕಲಾಸಿಪಾಳ್ಯ ಮತ್ತು ಕೆ ಆರ್ ಮಾರುಕಟ್ಟೆಯ ಬಸ್ ನಿಲ್ದಾಣ ಕಸದ ಕೊಂಪೆಯಾಗಿದೆ. ಇಂಥ ಜನದಟ್ಟಣೆ ಅಧಿಕವಾಗಿರುವ ಪ್ರದೇಶಗಳಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳದೆ ಇರುವುದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತದೆ. ಬೀದಿಬದಿ ವ್ಯಾಪಾರಸ್ಥರಿಗೆ, ವಾಹನ ಸಂಚಾರಕ್ಕೆ ಇದರಿಂದ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದರು. ಪ್ರತಿದಿನ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದರು ಅದು ಹೆಸರಿಗಷ್ಟೇ ಸೀಮಿತವಾಗಿದೆ, ಆದರೆ ಸ್ವಚ್ಛತೆ ಎಂಬುದು ಮರಿಚಿಕೆ ಇಲ್ಲಿ. ಅಲ್ಲದೆ ಪೊಲೀಸ್ ಠಾಣೆ ಹತ್ತಿರದಲ್ಲೇ ಇದ್ದರೂ ಕೂಡ ಕಳ್ಳತನದ ಸಂಖ್ಯೆ ಹೆಚ್ಚುತ್ತಲೇ ಇದೆ. ಸ್ವಚ್ಛತೆ ಹಾಗೂ ಕಳ್ಳತನ ನಿಯಂತ್ರಣದ ಕುರಿತಂತೆ ಕಠಿಣ…

Read More

ಬೆಂಗಳೂರು:- ಭಾರತದ ಸಂವಿಧಾನ ನಿರ್ಮಾತೃ ಡಾ ಬಾಬಾಸಾಹೆಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ವಿಧಾನ ಸೌಧದ ಬಳಿ ಇರುವ ಅಂಬೇಡ್ಕರ್ ಪುತ್ಥಳಿಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ. ಪರಿಷತ್‌ ಸದಸ್ಯ T.A. ಶರವಣ ಅವರು ಪುಷ್ಪ ನಮನ ಸಲ್ಲಿಸಿ ಗೌರವಿಸಿದರು. ಇದೆ ವೇಳೆ ಜೆಡಿಎಸ್ ಮುಖಂಡರು ಹಾಗೂ ಇತರ ಗಣ್ಯರು ಭಾಗಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರು ಅಂಬೇಡ್ಕರ್ ಕುರಿತಾಗಿ ಅವರ ಸಾಧನೆ ಹಾಗೂ ನಡೆದು ಬಂದ ಹಾದಿ ಬಗ್ಗೆ ಮಾತನಾಡಿದ್ರು. ಇನ್ನೂ ಡಾ. ಬಿ.ಆರ್ ಅಂಬೇಡ್ಕರ್ ಅವರು ನಿಧನ ಹೊಂದಿದ ದಿನವನ್ನು ಪ್ರತಿವರ್ಷ ಮಹಾಪರಿನಿರ್ವಾಣ ದಿವಸವೆಂದು ಆಚರಿಸಲಾಗುತ್ತದೆ. ಭಾರತ ಸಂವಿಧಾನವನ್ನು ರಚಿಸಿದ ಅಂಬೇಡ್ಕರ್ ಅವರು ಒಬ್ಬ ಖ್ಯಾತ ನ್ಯಾಯವಾದಿ, ಆರ್ಥಿಕ ತಜ್ಞ, ರಾಜಕೀಯ ಮತ್ತು ಸಮಾಜ ಸುಧಾರಕರಾಗಿ ಕೂಡ ಗುರುತಿಸಿಕೊಂಡಿದ್ದರು, ದೇಶದಲ್ಲಿ ದಲಿತ ಬೌದ್ಧ ಚಳವಳಿಗಳು, ಮಹಿಳೆಯರು, ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ ಧೀಮಂತ ನಾಯಕ ಎಂದೇ ಹೇಳಲಾಗಿದೆ.

Read More

ಕಲಬುರ್ಗಿ:- ಹಾಡುಹಗಲೇ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆಗೈದ ಘಟನೆ ಕಲಬುರಗಿಯಲ್ಲಿ ನಡೆದಿದೆ. ವಕೀಲ ವೃತ್ತಿ ಮಾಡುತ್ತಿದ್ದ ಈರಣ್ಣ ಗೌಡ ಕೊಲೆಗೀಡಾದ ದುರ್ದೈವಿ. ಸಾಯಿನಗರದ ಮನೆ ಬಳಿ ಘಟನೆ ನಡೆದಿದ್ದು ಆಸ್ತಿ ವಿವಾದಕ್ಕೆ ಕೊಲೆ ಆಗಿರಬಹುದು ಅಂತ ಶಂಕಿಸಲಾಗಿದೆ. ವಿವಿ ಠಾಣೆ ಪೋಲೀಸರು ಪರಿಶೀಲನೆ ನಡೆಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ..

Read More

ಕಲಬುರಗಿ:- ಇಲ್ಲಿನ ಬಿಜೆಪಿ ಮುಖಂಡ ಮಣಿಕಂಠ ರಾಠೋಡನನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಮಾರಣಾಂತಿಕ ಹಲ್ಲೆ ಮಾಡಿ ನನ್ನ ಕೊಲೆಗೆ ಯತ್ನಿಸಿದ್ದಾರೆ ಅಂತ ರಕ್ತಸಿಕ್ತ ಗಾಯ ಸಮೇತ ಮಣಿಕಂಠ ರಾಠೋಡ್ ಶಹಬಾದ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ತನಿಖೆ ನಡೆಸಿದ ಪೋಲೀಸ್ರು ಅಪಘಾತ ಪ್ರಕರಣವನ್ನ ಹಲ್ಲೆ ಅಂತ ಬಿಂಬಿಸಿ ಮಣಿಕಂಠ ದೂರು ನೀಡಿದ್ರು ಅಂತ ನಿನ್ನೆ ಸ್ಪಷ್ಟಪಡಿಸಿದ್ರು. ಆದ್ರೆ ಪೋಲೀಸ್ ತನಿಖೆ ವಿರುದ್ಧ ಇವತ್ತು ಮಣಿಕಂಠ ಸುದ್ದಿ ಗೋಷ್ಠಿ ಕರೆದಿದ್ರು..ಆದ್ರೆ ಸುದ್ದಿಗೋಷ್ಠಿಗೂ ಮುನ್ನವೇ ಚೌಕ್ ಠಾಣೆ ಪೋಲೀಸ್ರು ಮನೆಗೆ ತೆರಳಿ ಮಣಿಕಂಠನನ್ನ ವಶಕ್ಕೆ ಪಡೆದ್ರು..

Read More

ಬೆಂಗಳೂರು:- ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ ಮಗು ಸಾವು ಕೇಸ್ ಗೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ತನಿಖಾ ತಂಡವು ತಾಯಿ ಮತ್ತು 9 ತಿಂಗಳ ಕಂದಮನ ಸಾವಿಗೆ ಬೆಸ್ಕಾಂ ಅಧಿಕಾರಿಗಳೇ ನೇರ ಹೊಣೆ ಎಂದು ಹೇಳಿದೆ. ವಿದ್ಯುತ್ ಪರಿವೀಕ್ಷಣಾಲಯದ ತನಿಖೆಯಲ್ಲಿ ಬೆಚ್ಚಿ ಬೀಳಿಸುವ ಸತ್ಯ ಬಯಲಾಗಿದೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆ ಸೌಂದರ್ಯ ಹಾಗೂ 9 ತಿಂಗಳ ಮಗು ಬಲಿಯಾಗಿದೆ. ನವೆಂಬರ್ 19 ರ ಬೆಳಗ್ಗೆ ಕಾಡುಗೋಡಿ ಬಳಿಯ ಹೋ ಫಾರ್ಂ ಬಳಿ ವಿದ್ಯುತ್ ಅವಘಡ ಸಂಭವಿಸಿತ್ತು. ಪುಟ್ ಪಾತ್ ಮೇಲೆ ತಾಯಿ ಮತ್ತು 9 ತಿಂಗಳ ಮಗು ಧಗಧಗನೇ ಹೊತ್ತಿ ಉರಿದಿತ್ತು. ಬೆಸ್ಕಾಂ ಬೇಜವಾಬ್ದಾರಿ ತನಕ್ಕೆ ಅಮಾಯಕರು ಬಲಿಯಾದ್ರು. ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ರೆ ಎರಡು ಸಾವಾಗುತ್ತಿರಲಿಲ್ಲ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನದಿಂದಲೇ ಈ ಸಾವು ಸಂಭವಿಸಿದೆ. ಈ ಬಗ್ಗೆ ವರದಿ ನೀಡಿದ ವಿದ್ಯುತ್ ಪರಿವೀಕ್ಷಣಾಲಯ, ಬೆಸ್ಕಾಂ ಸ್ವಲ್ಪ ಎಚ್ಚೆತ್ತುಕೊಂಡಿದ್ರೆ ಅಮಾಯಕರ ಸಾವಗುತ್ತಿರಲಿಲ್ಲ ಎಂದು ವಿದ್ಯುತ್ ಪರಿವೀಕ್ಷಣಾಲಯ ವರದಿ ನೀಡಿದೆ. ವಿದ್ಯುತ್ ಪರಿವೀಕ್ಷಣಾಲಯದ ವರದಿಯಲ್ಲಿ…

Read More