ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ಮುಸ್ಲಿಮರ ಮೇಲೆ ಅಷ್ಟೊಂದು ಕಾಳಜಿ, ಪ್ರೀತಿ ಇದ್ದಿದ್ದೇ ಆದರೆ ನೀವು ನಿಮ್ಮ ಆಸ್ತಿಯನ್ನು ಮಾರಿ ಅವರಿಗೆ ಹಣ ಕೊಡಿ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಅಲ್ಪಸಂಖ್ಯಾತರಿಗೆ ಸರ್ಕಾರ 10 ಸಾವಿರ ಕೋಟಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಬಗ್ಗೆ ಬಹಳಷ್ಟು ಗೌರವ ಇದೆ. ಸಿಎಂ ಆದವರು ಎಲ್ಲಾ ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರ ಬಗ್ಗೆ ವಿಶೇಷ ಒಲವು ಹೊಂದಿದ್ದಾರೆ. ನಮಗೆ ಸಂಘರ್ಷದ ಅವಶ್ಯಕತೆ ಇಲ್ಲ. ಆದರೆ ಇಲ್ಲಿ ಸಿದ್ದರಾಮಯ್ಯ ಅವರು ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ ಎಂದು ಕಿಡಿಕಾರಿದ್ರು. ಸಿದ್ದರಾಮಯ್ಯ ಅವರು ನಾನು ಕುಂಕುಮ ಹಚ್ಚಲ್ಲ, ಕೇಸರಿ ಪೇಟಾ ಹಾಕಲ್ಲ ಅಂತ ಹೇಳುತ್ತಾರೆ. https://ainlivenews.com/revanth-reddy-sworn-in-as-the-2nd-chief-minister-of-telangana/ ನಿಮ್ಮ ಹೆಸರಲ್ಲಿ ಸಿದ್ದರಾಮ ಎಂದು ಭಗವಂತನ ಹೆಸರಿಟ್ಟಿದ್ದಾರೆ. ಅಷ್ಟೊಂದು ಕಾಳಜಿ ಪ್ರೀತಿ ಇದ್ರೆ ನಿಮ್ಮ ಮನೆಯಿಂದ ಕೊಡಿ. ನೀವೇನ್ ದೇಶದ ಪ್ರಧಾನ ಮಂತ್ರಿನಾ..?, ಸಿದ್ದರಾಮಯ್ಯ ಇದು ನಿಮ್ಮ ಆಸ್ತಿನಾ..?, ಇಲ್ಲೇನ್ ಪಾಕಿಸ್ತಾನ ಆಡಳಿತ…
Author: AIN Author
ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ಮೌಲ್ವಿಗಳ ಸಮಾವೇಶದಲ್ಲಿ ಮುಸ್ಲಿಮರಿಗೆ (Muslims) 10 ಸಾವಿರ ಕೋಟಿ ರೂ. ಅನುದಾನ ಕೊಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರ ಇಂದು ಪರಿಷತ್‌ನಲ್ಲಿ ಸದ್ದು ಮಾಡಿತು. ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು. ಸಿಎಂ ಸಿದ್ದರಾಮಯ್ಯನವರು ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮಾವೇಶದಲ್ಲಿ ಮಾತನಾಡುತ್ತಾರೆ. ದೇಶದ ಸಂಪತ್ತನ್ನು ನಿಮಗೆ ಹಂಚುತ್ತೇನೆ ಹಾಗೂ 10 ಕೋಟಿ ರೂ. ನಿಮಗೆ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಯಾವುದೇ ಸಮುದಾಯಕ್ಕೆ ಹಣ ಮೀಸಲಿಟ್ಟರೇ ಯಾರದ್ದೇ ವಿರೋಧವಿಲ್ಲ. ಆದರೆ ಸಿಎಂ ಅವರು ಅಲ್ಪ ಸಂಖ್ಯಾತ ಸಮುದಾಯಕ್ಕೆ 10,000 ಕೋಟಿ ರೂ. ನೀಡುತ್ತೇನೆ ಎಂದಿದ್ದಾರೆ ಇದು ಸರಿಯಲ್ಲ ಎಂದರು. https://ainlivenews.com/revanth-reddy-sworn-in-as-the-2nd-chief-minister-of-telangana/ ಸರ್ಕಾರ ಪರಿಶಿಷ್ಠ ಜಾತಿ- ಪಂಗಡಗಳಿಗೆ ಮೀಸಲಿಟ್ಟ 11,500 ಕೋಟಿ ರೂ. ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿ, ಸಮಾಜದ ಕಟ್ಟ ಕಡೆಯ ಬಡ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸರ್ವರನ್ನೊಳಗೊಂಡ ಸಮಾಜ ನಿರ್ಮಾಣ ಮಾಡುವ ಭರವಸೆ…
ಬೆಳಗಾವಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly Election) ಕಾಂಗ್ರೆಸ್ (Congress) ಪಕ್ಷಕ್ಕೆ ಅಭೂತಪೂರ್ವ ಜಯ ಸಿಕ್ಕಾಗ ನಮಗೆ ಗಾಬರಿ ಆಗಿತ್ತು. ಆದರೆ ಕಳೆದ ಇಪ್ಪತ್ತು ದಿನಗಳಲ್ಲಿಯೇ ಬದಲಾವಣೆ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ. ಬೆಳಗಾವಿ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಶಿಕ್ಷಣ ವರ್ಗ ಯಶಸ್ವಿಯಾಗಿ ನಡೆಯುತ್ತಿದೆ. https://ainlivenews.com/revanth-reddy-sworn-in-as-the-2nd-chief-minister-of-telangana/ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ (BJP) ಸರ್ಕಾರ ಜನಪರ ಆಡಳಿತ ನೀಡುತ್ತಿದೆ. ಮತ್ತೊಂದೆಡೆ ನಾವು ನಿರೀಕ್ಷೆ ಮಾಡದ ರೀತಿಯಲ್ಲಿ ಕರ್ನಾಟಕದಲ್ಲಿ ನಮಗೆ ಹಿನ್ನಡೆ ಆಗಿದೆ. ಪಕ್ಷದ ಕಾರ್ಯಕರ್ತರಲ್ಲೂ ನಿರುತ್ಸಾಹ, ಆಕ್ರೋಶ ಇತ್ತು. ಮುಂದಿನ ಲೋಕಸಭಾ ಚುನಾವಣೆ ಯಶಸ್ವಿಯಾಗಿ ನಡೆಸಬೇಕಿದೆ. ಜಿ.ಪಂ, ತಾ.ಪಂ ಚುನಾವಣೆ ಬರುತ್ತದೆ. ಅದನ್ನು ಯಶಸ್ವಿಯಾಗಿ ಮಾಡಬೇಕು ಎಂದರು.
ಪುಷ್ಪ (Pushpa) ಸಿನಿಮಾದಲ್ಲಿ ನಾಯಕ ಪುಷ್ಪರಾಜನ ಸ್ನೇಹಿತನಾಗಿ ನಟಿಸಿದ್ದ ಜಗದೀಶ್ ಪ್ರತಾಪ್ ಭಂಡಾರಿಯನ್ನು (Jagadish) ಪೊಲೀಸರು ಬಂಧಿಸಿದ್ದಾರೆ. ನಟಿಯೊಬ್ಬರ ಆತ್ಮಹತ್ಯೆಯ (Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಅರೆಸ್ಟ್ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿಯನ್ನು ನೀಡಿದ್ದಾರೆ. ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಜಗದೀಶ್, ಅವರೊಂದಿಗೆ ಸಲುಗೆಯಿಂದ ಇದ್ದರಂತೆ. ಇದೇ ಸಲುಗೆಯನ್ನು ಬಳಸಿಕೊಂಡು ಆಕೆಯ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ತನ್ನೊಂದಿಗೆ ಸಹಕರಿಸದೇ ಇದ್ದರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕುವುದಾಗಿ ಬೆದರಿಸಿದ್ದಾರೆ. https://ainlivenews.com/the-most-wanted-terrorist-is-poisoned-in-pakistan-jail/ ಜಗದೀಶ್ ಬೆದರಿಕೆಗೆ ಮನನೊಂದು ನಟಿ (Actress) ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜಗದೀಶ್ ಅವರನ್ನು ಬಂಧಿಸಿರುವ ಪೊಲೀಸರು, ಈ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ. ಜಗದೀಶ್ ಅರೆಸ್ಟ್ ಆಗುವಾಗ ಪುಷ್ಪ 2 ಸಿನಿಮಾದ ಚಿತ್ರೀಕರಣದಲ್ಲಿ ಇದ್ದರು ಎಂದು ತಿಳಿದು ಬಂದಿದೆ.
ದಾವಣಗೆರೆ: ವೀರಶೈವ ಲಿಂಗಾಯತ ಸಮಾಜ ಸಂಘಟನೆಯ ಆಶಯ ಹೊತ್ತು ಡಿಸೆಂಬರ್ 23 ಮತ್ತು 24ರಂದು ಎರಡು ದಿನಗಳ ಕಾಲ ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ನಡೆಯಲಿದೆ ಅಂತ ಕಲಬುರಗಿ ಘಟಕದ ಶರಣು ಮೋದಿ ತಿಳಿಸಿದ್ದಾರೆ..ಮಾಧ್ಯಮ ಪ್ರಕಟಣೆ ಮೂಲಕ ಈ ಮಾಹಿತಿ ತಿಳಿಸಿದ ಶರಣು ಮೋದಿ ಈ ಅಧಿವೇಶನವನ್ನು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಆಯೋಜಿಸಲಾಗಿದೆ ಅಂತ ಹೇಳಿದ್ದಾರೆ.. ಕರ್ನಾಟಕ ಕೇರಳ ಮಹಾರಾಷ್ಟ್ರ ತಮಿಳುನಾಡು ಆಂಧ್ರಪ್ರದೇಶ ದೆಹಲಿ ತೆಲಂಗಾಣ ಉತ್ತರಪ್ರದೇಶ, ಹರ್ಯಾಣ, ಪಂಜಾಬ್ ಸೇರಿ ದೇಶದ ವಿವಿಧ ಭಾಗಗಳಿಂದ ಮೂರು ಲಕ್ಷಕ್ಕೂ ಅಧಿಕ ಜನ ಆಗಮಿಸಲಿದ್ದು ಅದರಲ್ಲಿ ಕಲಬುರಗಿ ಜಿಲ್ಲೆಯಿಂದ ಸುಮಾರು ಇಪ್ಪತ್ತು ಸಾವಿರ ಜನರು ಪಾಲ್ಗೊಳ್ಳುವರು ಅಂತ ಹೇಳಿದ್ರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಲ್ಲಿ ಪೂರ್ವಭಾವಿ ಸಭೆ ಮಾಡಿ ಸಮಾಜದ ಅನುಕೂಲಕ್ಕಾಗಿ ಈ ಮಹಾ ಅಧಿವೇಶನ ನಡೆಯಲಿದೆ ಎಲ್ರೂ ಹೆಚ್ಚಿನ…
ದಾವಣಗೆರೆ: ನಗರಗಳಲ್ಲಿ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದರೆ ಪೊಲೀಸರು ದಂಡ ಹಾಕ್ತಾರೆ, ಅಲ್ಲದೇ, ನಿಯಮ ಪಾಲಿಸುವಂತೆ ಎಚ್ಚರಿಕೆಯನ್ನ ಕೊಡುತ್ತಾರೆ. ಆದರೆ, ದಾವಣಗೆರೆಯ ಸಾಮಾಜಿಕ ಕಾರ್ಯಕರ್ತನೊಬ್ಬ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದರೆ ಚಾಕ್ಲೇಟ್ ಮತ್ತು ವಡಾಗಳನ್ನ ನೀಡುತ್ತಾರೆ. ಹೌದು, ಇದು ಅಚ್ಚರಿಯಾದ್ರು ಕೂಡ ನಿಜ. ದಾವಣಗೆರೆಯ ಸಾಮಾಜಿಕ ಕಾರ್ಯಕರ್ತ ಎಂ ಜಿ ಶ್ರೀಕಾಂತ್ ಎಂಬಾತ ಇಂತಹದ್ದೊಂದು ಕೆಲಸವನ್ನ ದಾವಣಗೆರೆ ನಗರದಲ್ಲಿ ಮಾಡುತ್ತಿದ್ಧಾನೆ. ದಾವಣಗೆರೆಯ ಪಿಬಿ ರಸ್ತೆ, ಎವಿಕೆ ಕಾಲೇಜು, ಬಾಪೂಜಿ ಡೆಂಟಲ್ ಕಾಲೇಜ್ ಸೇರಿದಂತೆ ಜನನಿಬಿಡ ರಸ್ತೆಗಳಲ್ಲಿ ಎಂ ಜಿ ಶ್ರೀಕಾಂತ್ ಸಂಚಾರಿ ನಿಯಮ ಉಲ್ಲಂಘಿಸುವ ಬೈಕ್, ಕಾರ್ ಚಾಲಕರಿಗೆ ವಡಾ ಹಾಗೂ ಚಾಕ್ಲೇಟ್ ಗಳನ್ನ ನೀಡುತ್ತಿದ್ದಾರೆ. ಇದಕ್ಕೊಂದು ಕಾರಣ ಕೂಡ ಇದ್ದು, ಈ ಮೂಲಕ ಶ್ರೀಕಾಂತ್ ಅರಿವನ್ನ ಮೂಡಿಸುತ್ತಿದ್ದಾರೆ. ಈಗ ದಾವಣಗೆರೆಯ ನಗರದಲ್ಲಿಯೂ ಕೂಡ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಎಲ್ಲ ಕಡೆಗಳಲ್ಲಿ ಟ್ರಾಫಿಕ್ ಸಿಗ್ನಲ್ ಗಳನ್ನ ಅಳವಡಿಕೆ ಕೂಡ ಮಾಡಲಾಗಿದೆ. ಟ್ರಾಫಿಕ್ ನಿಯಂತ್ರಿಸುವ ಉದ್ದೇಶದಿಂದ ಮತ್ತು ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕೆಲವು…
ಬೆಂಗಳೂರು: ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಹೊರವಲಯದಲ್ಲಿ ರಸ್ತೆಯಲ್ಲಿ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಕಾರು ಅಪಘಾತಕ್ಕೀಡಾಗಿತ್ತು. ಬೈಕ್ ಸವಾರನೋರ್ವ ಭವಾನಿ ರೇವಣ್ಣ ಕಾರಿಗೆ ಡಿಕ್ಕಿ ಹೊಡೆದಿದ್ದ. ಈ ವೇಳೆ ಕಾರಿನಿಂದ ಇಳಿದ ಭವಾನಿ ರೇವಣ್ಣ ರೌದ್ರರೂಪ ತಾಳಿದ್ರು. ಡಿಕ್ಕಿ ಹೊಡೆದ ಬೈಕ್ ಸವಾರನ ಪರಿಸ್ಥಿತಿ ಹೇಗಿದೆ ಅಂತ ವಿಚಾರಿಸೋ ವ್ಯವಧಾನವೂ ತೋರದೇ ಕಾರಿಗೆ ಏನಾಗಿದೆ ಅನ್ನೋ ವಿಮರ್ಷೆಗೆ ಇಳಿದಿದ್ರು.. ಕೋಟಿ ರೂಪಾಯಿ ಕಾರು ಅಂತ ಬಾಲ ಸುಟ್ಟ ಬೆಕ್ಕಿನಂತ ಕಾರಿನ ಸುತ್ತ ಓಡಾಡುತ್ತಾ ಬೈಕ್ ಸವಾರನಿಗೆ ಹಿಡಿಶಾಪ ಹಾಕಿದ್ರು.ಸಾಯೋಕೆ ನನ್ನ ಕಾರೇ ಬೇಕಿತ್ತಾ.. ಬಸ್ಸಿಗೆ ಗಿಸ್ಸಿಗೆ ಸಿಕ್ಕಾಂಡೊಂಡ್ ಸಾಯಬೇಕಿತ್ತು.. ಒಂದೂವರೆ ಕೋಟಿ ರೂಪಾಯಿ ಗಾಡಿ ಇದು. ಹೀಗೆ ಭವಾನಿ ರೇವಣ್ಣ ಆಡಿದ ಒಂದೊಂದು ಮಾತುಗಳು ಅವರ ಅಸಲಿ ಮುಖವನ್ನ ಕಳಚಿಟ್ಟಂತಿತ್ತು. ಬೈಕ್ ಸವಾರ ರಕ್ತಸ್ರಾವದಿಂದ ಬಳಲ್ತಾ ಇದ್ರೂ ತನ್ನ ಕಾರನ್ನೇ ನೋಡಿ ಮರುಕ ಪಟ್ಟ ಭವಾನಿ ರೇವಣ್ಣ ನಡೆ ಎಂತವರನ್ನೂ ತಲೆತಗ್ಗಿಸುವಂತಿತ್ತು.ದೊಡ್ಡಗೌಡರ ಕುಟುಂಬದ ಹಿರಿಯ ಸೊಸೆಯೊಬ್ರು ನಡುರಸ್ತೆಯಲ್ಲಿ ಹೀಗೆ…
ಬೆಂಗಳೂರು: ದೇಶದಲ್ಲಿ ನಂದಿನಿ ತುಪ್ಪಕ್ಕಿರುವ ಮಾರುಕಟ್ಟೆ ಬೆಲೆಗಿಂತ ಅರ್ಧಕ್ಕರ್ಧ ಬೆಲೆಗೆ ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗೆ ತುಪ್ಪವನ್ನು ಕಳಿಸಲು ಸಾಧ್ಯವಿಲ್ಲ ಎಂದು ಕೆಎಂಎಫ್‌ನಿಂದ ತುಪ್ಪ ಸರಬರಾಜು ಮಾಡಿರಲಿಲ್ಲ. ಆದರೆ, ಕಳೆದ ಎರಡು ಬಾರಿಯಿಂದ ಟಿಟಿಡಿಯ ತುಪ್ಪದ ಟೆಂಡರ್‌ನಲ್ಲಿ ಕೆಎಂಎಫ್ ಭಾಗವಹಿಸಿದರೂ ನಂದಿನಿ ತುಪ್ಪದ ದರ ಹೆಚ್ಚಾಗಿದ್ದು, ಖರೀದಿ ಮಾಡಲು ಸಾಧ್ಯವಿಲ್ಲ ಎಂದು ತಿರುಪತಿ ತಿಮ್ಮಪ್ಪ ದೇವಸ್ಥಾನ ಆಡಳಿತ ಮಂಡಳಿ ತಿರಸ್ಕರಿಸಿದೆ. https://ainlivenews.com/the-most-wanted-terrorist-is-poisoned-in-pakistan-jail/ ಈ ಮೂಲಕ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಿಂದ ನಂದಿನಿ ತುಪ್ಪದ ಘಮ ಕಾಣೆಯಾಗಿದೆ.ಟೆಂಡರ್ ನಲ್ಲಿ ಟಿಟಿಡಿ ಕೇಳ್ತಿರೋ ಕಡಿಮೆ ದರಕ್ಕೆ ತುಪ್ಪ ಸರಬರಾಜು ಮಾಡಲ್ಲ ಎಂದು ಕೆಎಂಎಫ್ ಹೇಳಿತ್ತು. ಆದರೆ, ಈ ಬಾರಿ ಕಳೆದ ಬಾರಿಗಿಂತ ಕಡಿಮೆ ದರಕ್ಕೆ ನಂದಿನಿ ತುಪ್ಪವನ್ನು ಸರಬರಾಜು ಮಾಡುವುದಾಗಿ ಕೆಎಂಎಫ್ ಟಿಟಿಡಿ ಟೆಂಡರ್‌ನಲ್ಲಿ ಭಾಗವಹಿಸಿದ್ದರೂ ಅದಕ್ಕಿಂತ ಕಡಿಮೆ ದರದ ತುಪ್ಪವನ್ನು ಟಿಟಿಡಿ ಖರೀದಿ ಮಾಡಲು ಮುಂದಾಗಿದೆ. ಆದ್ದರಿಂದ ಕೆಎಂಎಫ್‌ಗೆ ಮತ್ತೆ ಹಿನ್ನಡೆ ಉಂಟಾಗಿದೆ.
ರಕ್ಕಸ-ಗಂಧರ್ವರ ನಡುವಿನ ಗುದ್ದಾಟ ತಾರಕಕ್ಕೆ ಏರಿರುವ ಹೊತ್ತಿನಲ್ಲಿಯೇ ನಡುನಡುವೆ ನಗೆಬುಗ್ಗೆಯುಕ್ಕಿಸುವಂಥ ಕಾಮಿಡಿ ಸನ್ನಿವೇಶಗಳಿಗೂ ಬಿಗ್‌ಬಾಸ್ ಸಾಕ್ಷಿಯಾಗುತ್ತಿದೆ. ಇಂಥದ್ದೊಂದು ಕಾಮಿಡಿ ದೃಶ್ಯದ ಝಲಕ್ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಕಾಣಿಸಿಕೊಂಡಿದೆ. “ಆನೆಯನ್ನು ಪಳಗಿಸುವ ಮಾವುತನಾಗುತ್ತೇನೆ’ ಎಂದು ಹೇಳಿಕೊಂಡೇ ಅವಿನಾಶ್ ಶೆಟ್ಟಿ ಮನೆಯೊಳಗೆ ಬಂದಿದ್ದರು. ಮನೆಯೊಳಗೂ ಹಲವು ಸದಸ್ಯರು ಅವರನ್ನು ಮಾವುತ ಎಂದೇ ಕರೆಯುತ್ತಿದ್ದಾರೆ. ಆದರೆ ಈ ಗಂಧರ್ವ-ರಕ್ಕಸರ ಗುದ್ದಾಟದಲ್ಲಿ ಈ ಮಾವುತ ಮೇಕೆಯಾಗಿದ್ದಾನೆ. ತುಕಾಲಿ ಸಂತೋಷ್ ಮತ್ತು ವರ್ತೂರು ಅವರು ‘ನೀನು ಮಾವುತನಾ? ಮೇಕೆಯಾ?’ ಎಂದು ಕೇಳಿದಾಗ ಅವಿನಾಶ್, ‘ನಾನು ಮೇಕೆಯಾಗುವುದಿಲ್ಲ’ ಎಂದು ಗಂಧರ್ವರ ಶೈಲಿಯಲ್ಲಿಯೇ ಉತ್ತರಿಸಿದ್ದಾರೆ ಅವಿನಾಶ್. ಆದರೆ ಅದರ ಮರುಕ್ಷಣವೇ ಅವರು ಮೇಕೆಯ ಗೆಟಪ್‌ನಲ್ಲಿ ಮ್ಯಾ… ಎಂದು ಕೂಗುತ್ತ ಓಡಾಡುವ ದೃಶ್ಯಗಳೂ ಇವೆ. ವರ್ತೂರು ಸಂತೋಷ್, ಅವಿನಾಶ್ ಒಳಗಡೆ ರೋಷದ ಕಿಚ್ಚನ್ನು ಹೊತ್ತಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದಾರೆ. ‘ನೀವು ವೀರನಾಗಬೇಕು’ ಎಂದು ಮೋಟಿವೇಷನಲ್ ಸ್ಪೀಚ್ ಕೂಡ ಕೊಟ್ಟಿದ್ದಾರೆ! ಇದರಿಂದ ಸ್ಫೂರ್ತಿಗೊಂಡ ಅವಿನಾಶ್, ‘ವೀರನಾ… ಧೀರನಾ…’ ಎಂದು ಹೇಳುತ್ತ ಎದ್ದುನಿಂತಿದ್ದಾರೆ.ಎದುರಾಳಿ ತಂಡದ ಸದಸ್ಯನನ್ನು…
ಬೆಂಗಳೂರು: ಆತ ಸ್ನೇಹಿತನ ಜೊತೆ ಎಣ್ಣೆ ಹಾಕಲು ಬಾರ್ಗೆ ಹೋಗಿದ್ದ. ಅದೇ ಬಾರ್ಗೆ ಸ್ನೇಹಿತನಿಗೆ ಹಣ ನೀಡಬೇಕಾದವ್ರು ಸಹ ಬಂದಿದ್ರು. ಈ ವೇಳೆ ಸ್ನೇಹಿತನ ಹಣ ಕೊಡಿಸಲು ಹೋದವನು ಹೆಣವಾಗಿ ಹೋಗಿದ್ದಾನೆ. ಎಣ್ಣೆ ಮತ್ತಲ್ಲಿ ಹಣದ ವಿಚಾರವಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಅಷ್ಟಕ್ಕೂ ಈ ಜಗಳ ನಡೆದಿದ್ದು ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.. ಹೌದು ಸ್ನೇಹಿತನಿಗೆ ಬರಬೇಕಾದ ಹಣವನ್ನು ಕೊಡಿಸಲು ಮಧ್ಯಸ್ಥಿಕೆ ಮಾಡಲು ಹೋದವನು ಕೊಲೆಯಾಗಿ ಹೋಗಿರುವಂತಹ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಸಂದ್ರದಲ್ಲಿ ನಡೆದಿದೆ … ಹೀಗೆ ಫೋಟೋದಲ್ಲಿ ಕಾಣ್ತಿದ್ದಾರಲ್ಲ ಗೋಪಾಲ ಅಂತ ಬಾರ್ ನಲ್ಲಿ ಎಣ್ಣೆ ಹಾಕ್ಕೊಂಡು ಆರಾಮಾಗಿ ಮಾತಾಡ್ತಾ ಗೋಪಾಲ್ ಮತ್ತು ಅತನ ಸ್ನೇಹಿತರು ಕೂತಿದ್ರೂ. ಅಗ್ಲೇ ಗಿರೀಶ್ ಕೂಡ ಆತನ ಸ್ನೇಹಿತನ ಜೊತೆ ಅದೇ ಬಾರ್ ಗೆ ಎಂಟ್ರಿಕೊಟ್ಟಿದ್ದ. ಅಗ ಗೋಪಾಲ್ ಸ್ನೇಹಿತ ಕರೇಗೌಡ ಗಿರೀಶ್ ಅನ್ನ ನೋಡಿ ಎಲೆಕ್ಟ್ರಿಷಿಯನ್ ಕೆಲಸದ 1500 ರೂಪಾಯಿ ಕೊಡುವಂತೆ ಕೇಳಿದ್ದ..ಅಗ ಗಿರೀಶ್ ಕೂಡ…