ದಾವಣಗೆರೆ: ವೀರಶೈವ ಲಿಂಗಾಯತ ಸಮಾಜ ಸಂಘಟನೆಯ ಆಶಯ ಹೊತ್ತು ಡಿಸೆಂಬರ್ 23 ಮತ್ತು 24ರಂದು ಎರಡು ದಿನಗಳ ಕಾಲ ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನ ನಡೆಯಲಿದೆ ಅಂತ ಕಲಬುರಗಿ ಘಟಕದ ಶರಣು ಮೋದಿ ತಿಳಿಸಿದ್ದಾರೆ..ಮಾಧ್ಯಮ ಪ್ರಕಟಣೆ ಮೂಲಕ ಈ ಮಾಹಿತಿ ತಿಳಿಸಿದ ಶರಣು ಮೋದಿ ಈ ಅಧಿವೇಶನವನ್ನು ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಆಯೋಜಿಸಲಾಗಿದೆ ಅಂತ ಹೇಳಿದ್ದಾರೆ..
ಕರ್ನಾಟಕ ಕೇರಳ ಮಹಾರಾಷ್ಟ್ರ ತಮಿಳುನಾಡು ಆಂಧ್ರಪ್ರದೇಶ ದೆಹಲಿ ತೆಲಂಗಾಣ ಉತ್ತರಪ್ರದೇಶ, ಹರ್ಯಾಣ, ಪಂಜಾಬ್ ಸೇರಿ ದೇಶದ ವಿವಿಧ ಭಾಗಗಳಿಂದ ಮೂರು ಲಕ್ಷಕ್ಕೂ ಅಧಿಕ ಜನ ಆಗಮಿಸಲಿದ್ದು ಅದರಲ್ಲಿ ಕಲಬುರಗಿ ಜಿಲ್ಲೆಯಿಂದ ಸುಮಾರು ಇಪ್ಪತ್ತು ಸಾವಿರ ಜನರು ಪಾಲ್ಗೊಳ್ಳುವರು ಅಂತ ಹೇಳಿದ್ರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಲ್ಲಿ ಪೂರ್ವಭಾವಿ ಸಭೆ ಮಾಡಿ ಸಮಾಜದ ಅನುಕೂಲಕ್ಕಾಗಿ ಈ ಮಹಾ ಅಧಿವೇಶನ ನಡೆಯಲಿದೆ ಎಲ್ರೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಅಂತ ವಿನಂತಿಸಿದ್ರು..