ಧಾರವಾಡ:- ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ “ಭಾರತೀಯ ಪ್ರಜೆಗಳಾದ ನಾವು…” ಎಂದೇ ಆರಂಭವಾಗುತ್ತದೆ. ದೇಶದ ಪ್ರಜೆಗಳಾದ ನಮ್ಮ ಜೀವನ ವಿಧಾನ ಯಾವುದು, ಒಪ್ಪಿಕೊಂಡು ನಡೆಯಬೇಕಾದ ಮೌಲ್ಯಗಳು ಯಾವುವು? ಎಂಬುದನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಸ್ವಾತಂತ್ರ್ಯಾ ಬಂದ ನಂತರ, ಎಲ್ಲ ಭಾರತೀಯರೂ ಒಪ್ಪಿ ನಡೆಯಬೇಕಾದ ಪವಿತ್ರ ಗ್ರಂಥವಾಗಿರುವ ಸಂವಿಧಾನವು ಬಾಬಾಸಾಹೇಬ್ ಅಂಬೇಡ್ಕರ್‌ರವರಿಂದ ರಚಿತವಾಗಿದೆ ಎನ್ನುವ ಕಾರಣಕ್ಕಾಗಿಯೇ ಅದನ್ನು ವಿರೋಧಿಸುವ, ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಲು ಮೂಲಭೂತವಾದಿ ಸಂಘ ಪರಿವಾರದಂತಹ ಸಂಘಟನೆಗಳು ಪ್ರಯತ್ನಿಸುತ್ತಾ ಬರುತ್ತಿವೆ. ಕೋಮುವಾದಿಗಳು ‘ನಾವು ಈಗಿರುವ ಸಂವಿಧಾನವನ್ನು ಬದಲು ಮಾಡುತ್ತೇವೆ’ ಎಂದು ನೇರವಾಗಿಯೇ ಹೇಳುವ ಮಟ್ಟಕ್ಕೆ ಇಳಿದ್ದಿದ್ದಾರೆ. ಬಾಬಾಸಾಹೇಬರ ಹೋರಾಟ ಮತ್ತು ಚಿಂತನೆಯಿಂದ ಎಚ್ಚೆತ್ತುಕೊಳ್ಳುತ್ತಿರುವ ದಲಿತ ಸಮುದಾಯದ ನಡುವೆ ಸಂವಿಧಾನವನ್ನು ಬದಲಾಯಿಸುವುದು ಕಷ್ಟ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಕೋಮುವಾದಿಗಳು, ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಮೂಲಕ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಹೊಸ ಆರ್ಥಿಕ ನೀತಿಗಳಿಂದ ಬಂಡವಾಳಶಾಹಿಗಳು ಮೇಲುಗೈ ಸಾಧಿಸುತ್ತಿವೆ. ಹೀಗಾಗಿ ಮೀಸಲಾತಿಯಂತಹ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಿಗೆ ದಕ್ಕೆ ಉಂಟಾಗಿದೆ. ಹೀಗೆ…
Author: AIN Author
ಬೆಂಗಳೂರು:- ಬಸನಗೌಡ ಪಾಟೀಲ್ ಯತ್ನಾಳ್ ಸಚಿವರಾಗಿದ್ದು ಯಡಿಯೂರಪ್ಪ ಕೃಪಾಕಟಾಕ್ಷದಿಂದ ಎಂಬುದನ್ನು ಮರೆಯಬಾರದು ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಸಕ ಬಸನಗೌಡ ಪಾಟೀಲ್ ಅವರು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದು ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ. ಅವರಿಗೆ ಟಿಕೆಟ್ ಸಿಕ್ಕಿದ್ದು ಮರಳಿ ಪಕ್ಷಕ್ಕೆ ಬಂದಿದ್ದ ಯಡಿಯೂರಪ್ಪ ಅವರಿಂದ ಎನ್ನುವುದನ್ನು ಮರೆಯಬಾರದು. ಯತ್ನಾಳ್ ವರ್ತನೆ ಇದೇ ರೀತಿ ಮುಂದುವರೆದರೆ ನಮಗೂ ಮಾತನಾಡಲು ಬರುತ್ತದೆ. ದೆಹಲಿಗೆ ತೆರಳಲೂ ಬರುತ್ತದೆ ಎಂದು ಯಡಿಯೂರಪ್ಪ ಆಪ್ತ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಗೌರವ ಇದೆ. ಅವರು ಹಿರಿಯರು. ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದೆ ಎಂದು ಪದೇ ಪದೇ ಹೇಳುತ್ತಾರೆ. ಯಡಿಯೂರಪ್ಪ ಕೃಪಾಕಟಾಕ್ಷದಿಂದ ಅವರು ಸಚಿವರಾಗಿದ್ದರು. ಪಕ್ಷದಿಂದ ಉಚ್ಚಾಟನೆಯಾಗಿದ್ದಾಗ ಅವರ ಮರುಸೇರ್ಪಡೆಗೆ ಎಲ್ಲರೂ ವಿರೋಧ ಮಾಡಿದರೂ ಅವರ ಹಿರಿತನಕ್ಕೆ ಬೆಲೆ ಕೊಟ್ಟು ಯಡಿಯೂರಪ್ಪ ಯಾರ ಮಾತೂ ಕೇಳದೆ ಮರಳಿ ಕರೆತರುವ ದೃಢ ನಿರ್ಧಾರ ಮಾಡಿದ್ದರು. ಆದರೂ ಯಡಿಯೂರಪ್ಪ ವಿರುದ್ಧ ಅವರು ಯಾಕೆ ಈ…
ಕೂದಲಿ ಅಂದಕ್ಕೆ ಬಳಸುವ ಶಾಂಪೂ ಸೇರಿದಂತೆ ಹೇರ್‌ಕೇರ್ ಉತ್ಪನ್ನಗಳು ನಿಮ್ಮ ಆರೋಗ್ಯವನ್ನೇ ಕೆಡಿಸಬಹುದು. ಶಾಂಪೂಗಳ ಬಳಕೆ ಮಾರಣಾಂತಿಕ ಕಾಯಿಲೆಗೆ ದಾರಿ ಮಾಡಿಕೊಡಬಹುದು. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿ ಒಂದಾದ ಕಾಸ್ಮೆಟಿಕ್ ಉದ್ಯಮವು ಪ್ರತಿ ವರ್ಷ 6%ರಷ್ಟು ಹೆಚ್ಚಾಗುತ್ತಿರುತ್ತದೆ. ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದಿನಕ್ಕೊಂದು ಬ್ರಾಂಡ್‌ಗಳು ಮಾರುಕಟ್ಟೆಗೆ ಬರುತ್ತದೆ. ಹೇರ್ ಕೇರ್ ವಸ್ತುಗಳ ತಯಾರಿಕಾ ಉದ್ಯಮವು ಕೂಡ ಹೀಗೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಬಳಕೆದಾರರ ಸಂಖ್ಯೆಯೂ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ ಇತ್ತೀಚಿಗೆ ವಿಜ್ಞಾನಿಗಳ ಅಧ್ಯಯನವೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಶ್ಯಾಂಪೂಗಳು ಹಾಗೂ ಹೇರ್‌ಕೇರ್ ಉತ್ಪನ್ನಗಳು ಕೂದಲನ್ನು ಸ್ವಚ್ಛಗೊಳಿಸುವ ಜೊತೆಗೆ ಅದರಲ್ಲಿನ ಬೃಹತ್ ಪ್ರಮಾಣದ ರಾಸಾಯನಿಕವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಎನ್ವಿರಾನ್ಮೆಂಟಲ್ ಸೈನ್ಸ್ & ಟೆಕ್ನಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿನ ರಾಸಾಯನಿಕಗಳು ನಮ್ಮ ಕೂದಲಲ್ಲಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅತ್ಯಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ. ಇದನ್ನು…
ನಟಿ ಲೀಲಾವತಿ ಅವರು 70ರ ದಶಕದಲ್ಲಿ ಮಿಂಚಿದ ಖ್ಯಾತ ನಟಿಯರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ಹಿರಿಯ ನಟಿ ಲೀಲಾವತಿ ಅವರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದಾರೆ. ಲೀಲಾವತಿ ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೀಲಾವತಿ ಅವರು ಸಿನಿಮಾಗಳ ಜತೆಗೆ ವೈಯಕ್ತಿಕ ವಿಚಾರವಾಗಿಯು ಸುದ್ದಿಯಾಗುತ್ತಿದ್ದರು. ಈ ಕುರಿತಾಗಿ ಅವರ ಪುತ್ರ ವಿನೋದ್ ರಾಜ್ ಕುಮಾರ್ ಅವರು ಮಾತನಾಡಿದ್ದಾರೆ. ಶಿವಣ್ಣ ಅವರು ಯಾವ ರೀತಿ ಸ್ಪಂದನೆ ಮಾಡಿದ್ರು.. ಅದನ್ನು ನೋಡಿ ಬಾಯಿ ಮುಚ್ಚಿಕೊಂಡು ಇರಬೇಕು. ಇದು ಮರ್ಯಾದಸ್ಥರ ಲಕ್ಷಣವಾಗಿದೆ. ಈ ವಿಚಾರವನ್ನು ತಿಳಿಯುವುದರಿಂದ ಏನಾದ್ರು ಜಿಎಸ್ಟಿ ಕಡಿಮೆ ಆಗುತ್ತಾ? ಪೆಟ್ರೋಲ್ ಬೆಲೆ ಕಡಿಮೆ ಆಗುತ್ತಾ? ಯಾವ ಸಮಸ್ಯೆ ಪರಿಹಾರವಾಗುತ್ತದೆ? ಈ ವಿಚಾರ ತಿಳಿಯುವುದರಿಂದ. ಈ ಪ್ರಶ್ನೆ ಮಾಡುವವರು ಅವರ ಮನೆಯನ್ನು ಅವರು ನೋಡಿಕೊಳ್ಳಲಿ.. ಈ ವಿಚಾರ ಯಾಕೆ? ಎಂದು ಪ್ರಶ್ನೆ ಮಾಡುತ್ತಾ ತಂದೆ ಯಾರು…
ದಿನಕ್ಕೆ 4 ಗಂಟೆಗಿಂತ ಹೆಚ್ಚು ಸ್ಮಾರ್ಟ್ಫೋನ್ ಬಳಕೆಯಿಂದ ಆರೋಗ್ಯ ಸಮಸ್ಯೆ ಕಾಡಲಿದೆ. ಯುನಜನತೆ ದಿನದಲ್ಲಿ ನಾಲ್ಕು ಗಂಟೆಗಳ ಕಾಲ ಸ್ಮಾರ್ಟ್ಫೋನ್ ಬಳಕೆ ಮಾಡುವುದರಿಂದ ಅವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಅಪಾಯ ಹೆಚ್ಚಬಹುದು ಎಂದು ಅಧ್ಯಯನ ಎಚ್ಚರಿಸಿದೆ. ಈ ಹಿಂದಿನ ಸಂಶೋಧನೆಯಲ್ಲಿ ಸ್ಮಾರ್ಟ್ಫೋನ್ ಬಳಕೆಯ ಪ್ರಮಾಣ ಹದಿಹರೆಯದವರಲ್ಲಿ ಹೆಚ್ಚು ಎಂದು ತೋರಿಸಿದೆ. ಈ ಬಳಕೆ ಹೆಚ್ಚಿದಂತೆ ಅವರ ಆರೋಗ್ಯದ ಮೇಲೆ ಬೀರುವ ಅಡ್ಡಪರಿಣಾಮದ ಅಪಾಯವೂ ಜಾಸ್ತಿ. ಮಾನೋವೈಜ್ಞಾನಿಕ, ನಿದ್ರೆ, ಕಣ್ಣಿನ ಸಮಸ್ಯೆಗೂ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಹದಿಹರೆಯದವರ ಸ್ಮಾರ್ಟ್ಫೋನ್ ಬಳಕೆ ಹಾಗು ಆರೋಗ್ಯದ ನಡುವಿನ ಸಂಬಂಧ ಕುರಿತು ಆಳವಾಗಿ ಅರ್ಥೈಸಿಕೊಳ್ಳಲು ಕೊರಿಯಾದ ಹಂಯಂಗ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ಭಾಗಿಯಾದ 50 ಸಾವಿರ ಜನರ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. ದತ್ತಾಂಶದಲ್ಲಿ ಭಾಗಿದಾರರು ದಿನದಲ್ಲಿ ಎಷ್ಟು ಗಂಟೆಗಳ ಕಾಲ ಗರಿಷ್ಟ ಬಳಕೆ ಮಾಡುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಗಮನಿಸಲಾಗಿದೆ. ಸಾಂಖ್ಯಿಂಕ ವಿಶ್ಲೇಷಣೆಯಲ್ಲಿ ಭಾಗಿದಾರರ ವಯಸ್ಸು, ಲಿಂಗ…
ಆಹಾರತಜ್ಞರ ಪ್ರಕಾರ ದಿನದ ಮೊದಲ ಆಹಾರವಾಗಿ ಸೇವಿಸಲು ಲಿಂಬೆ ಬೆರೆಸಿದ ನೀರು ಅಥವಾ ಸೇಬಿನ ಶಿರ್ಕಾ ಬೆರೆಸಿದ ನೀರು ಅಥವಾ ಎಳನೀರು ಕುಡಿಯುವುದು ಅತ್ಯುತ್ತಮ ಆಯ್ಕೆಗಳಾಗಿವೆ. ನಂತರ ಸೇವಿಸುವ ಆಹಾರಗಳಿಗೆ ನೀವು ಹಾಲನ್ನು ಬೆರೆಸಿ ಸೇವಿಸಬಹುದು. ಏಕೆಂದರೆ ಲಿಂಬೆನೀರು ಅಥವಾ ಎಳನೀರು ದೇಹದ ಕಲ್ಮಶಗಳನ್ನು ನಿವಾರಿಸಲು ಮತ್ತು ದೇಹಕ್ಕೆ ಅಗತ್ಯವಿರುವ ನೀರಿನ ಅಂಶವನ್ನು ನೀಡಲು ಸಮರ್ಥವಾಗಿವೆ. ಹಾಲು ಈ ಕಾರ್ಯಗಳನ್ನು ನಿರ್ವಹಿಸಲಾರದು. ತಜ್ಞರು ಸಲಹೆ ನೀಡುವ ಪ್ರಕಾರ ದಿನದ ಮೊದಲ ಆಹಾರವಾಗಿ ದೇಹವನ್ನು ಕಲ್ಮಶರಹಿತವಾಗಿಸಲು ಸಹಕರಿಸುವ ದ್ರವಾಹಾರವನ್ನು ಸೇವಿಸಬೇಕು ಹಾಗೂ ಈ ಕಾರ್ಯವನ್ನು ನಿರ್ವಹಿಸಲು ಸುಮಾರು ಮುಕ್ಕಾಲು ಘಂಟೆಯಾದರೂ ಹಾಗೇ ಬಿಡಬೇಕು. ಲಿಂಬೆನೀರಿನ ಬದಲಿಗೆ ಮಜ್ಜಿಗೆ ಅಥವಾ ಛಾಂಛ್ ಸುಲಭ ದ್ರವಾಹಾರಗಳಾಗಿವೆ. ಇವುಗಳನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗಗಳಿಗೆ ಸುಲಭವಾಗುತ್ತದೆ. ಖಾಲಿಹೊಟ್ಟೆಯಲ್ಲಿ ಹಾಲು ಪ್ರಥಮ ಆಹಾರವಾಗಿ ಸೇವಿಸುವುದು ಯಾರಿಗೂ ತರವಲ್ಲ. ಇದು ನಿಮ್ಮ ದೇಹ ಪ್ರಕೃತಿಯನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೀವು ವಾತ ಪ್ರಕೃತಿಯ ವ್ಯಕ್ತಿಯಾಗಿದ್ದರೆ (ವಾಯು) ಅಥವಾ ಕಫ ಪ್ರಕೃತಿಯವರಾಗಿದ್ದರೆ (ನೀರು) ಎಂದಿಗೂ…
ಸೂರ್ಯೋದಯ: 06.30 AM, ಸೂರ್ಯಾಸ್ತ : 05.53 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ಋತು, ತಿಥಿ: ಇವತ್ತು ದಶಮಿ 05:06 AM ತನಕ ನಂತರ ಏಕಾದಶಿ ನಕ್ಷತ್ರ: ಇವತ್ತು ಹಸ್ತ 08:54 AM ತನಕ ನಂತರ ಚಿತ್ತ ಯೋಗ: ಇವತ್ತು ಆಯುಷ್ಮಾನ್ 12:01 AM ತನಕ ನಂತರ ಸೌಭಾಗ್ಯ ಕರಣ: ಇವತ್ತು ವಿಷ್ಟಿ 05:06 AM ತನಕ ನಂತರ ಬವ 05:53 PM ತನಕ ನಂತರ ಬಾಲವ ರಾಹು ಕಾಲ:10:30 ನಿಂದ 12:00 ವರೆಗೂ ಯಮಗಂಡ:03:00 ನಿಂದ 4:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: 02.18 AM to 04.03 AM ಅಭಿಜಿತ್ ಮುಹುರ್ತ: ಬೆಳಗ್ಗೆ.11:45 ನಿಂದ ಮ.12:29 ವರೆಗೂ ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1) ತಾತ್ಕಾಲಿಕ ಸಿಬ್ಬಂದಿ ಉದ್ಯೋಗಿಗಳಿಗೆ ಖಾಯಂ ಸೇವೆ ಆಗುವ ಸಮಯ ಬಂದಿದೆ, ವಕೀಲರಿಗೆ ಉನ್ನತ…
ಬೆಳಗಾವಿ: ಯತ್ನಾಳ್ (Basangouda Patil Yatnal) ಒಬ್ಬ ದ್ವೇಷದ ರಾಜಕಾರಣಿ, ಮಹಾನ್ ಸುಳ್ಳುಗಾರ, ಚುನಾವಣೆ ಗೆಲ್ಲಲು ಈ ರೀತಿ ಮಾತಾಡಬಾರದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ. ಬೆಳಗಾವಿಯ (Belagavi) ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಸಿಸ್ ನಂಟಿರುವ ಪೀರಾ ಮೌಲಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂಬ ಬಿಜೆಪಿ ನಾಯಕ ಯತ್ನಾಳ್ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. https://ainlivenews.com/revanth-reddy-sworn-in-as-the-2nd-chief-minister-of-telangana/ ಅವರ ಜೊತೆಗೆ ನನಗೆ ಬಹಳ ವರ್ಷಗಳ ಸಂಬಂಧ ಇದೆ. ಆಗೆಲ್ಲ ಯಾಕೆ ಅವರು ಸುಮ್ಮನಿದ್ದರು? ಪೀರಾ ಮೌಲಿ ಅವರು ಆರೋಪ ಸಾಬೀತು ಮಾಡಿ ಎಂದು ಹೇಳಿದ್ದಾರೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇದೆ ಅದನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ. ಈಗ ಆರೋಪ ಮಾಡುತ್ತಿರುವ ಯತ್ನಾಳ್, ಅವರದ್ದೇ ಸರ್ಕಾರ ಇದ್ದಾಗ ಏನು ಮಾಡ್ತಿದ್ರು? ಅವರು ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ವಿರೋಧ ಪಕ್ಷದ ನಾಯಕನ ಸ್ಥಾನಕ್ಕೂ ಪ್ರಯತ್ನ ಮಾಡಿದ್ದರು. ಎರಡೂ ಸಿಗಲಿಲ್ಲ ಅದಕ್ಕೆ ಈಗ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು:- ಗೋಳಿಹಟ್ಟಿ ಶೇಖರ್ ಅವರ ಆಡಿಯೋ ಬಿಡುಗಡೆ ವಿಚಾರವಾಗಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಅವರು RSS ನಲ್ಲಿ ಅಂತಹ ವ್ಯವಸ್ಥೆ ಇಲ್ಲವೇ ಇಲ್ಲ ಎಂದಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ಈ ರೀತಿ ವ್ಯವಸ್ಥೆ ಇಲ್ಲ. ಸಂಘದಲ್ಲಿ ಈ ರೀತಿ ಎಲ್ಲಿಯೂ ಕೇಳಿಲ್ಲ. ರಾಜಕೀಯ ಕಾರಣಕ್ಕಾಗಿ ಕಳೆದ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಇದ್ದಲಿ ಈ ರೀತಿ ಹೇಳಿದ್ದೀರಾ..? ಬಿಜೆಪಿ ವಿರುದ್ದ ಸುಳ್ಳು ಆಪಾದನೆ ಮಾಡುವುದು ತಪ್ಪು. ಉಂಡ ತಟ್ಟೆಯಲ್ಲಿ ಮಣ್ಣು ಹಾಕುವುದು ಎಷ್ಟರಮಟ್ಟಿಗೆ ಸರಿ..? ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಈ ರೀತಿ ಎಲ್ಲಿಯೂ ಇಲ್ಲ. 10 ತಿಂಗಳ ಬಳಿಕ ಈ ಪ್ರಶ್ನೆ ಬಂದಿದೆ ಗೋಳಿಹಟ್ಟಿ ಶೇಖರ್ ಹೇಳಿಕೆಗೆ ಖಂಡಿಸುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಚಿತ್ರದುರ್ಗ: ಪೋಕ್ಸೋ (POCSO) ಕೇಸಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮುರುಘಾಶ್ರೀ (Muruga Shree) ತಮ್ಮ ಮಠದ (Muth) ಅಧಿಕಾರವನ್ನು ಮರಳಿ ಪಡೆದಿದ್ದಾರೆ. ಪೋಕ್ಸೋ ಕೇಸಲ್ಲಿ 2022, ಸೆಪ್ಟೆಂಬರ್ 1ರಂದು ಮುರುಘಾಶ್ರೀ ಬಂಧನವಾಗಿತ್ತು. ಸತತ 14 ತಿಂಗಳು ಸೆರೆಮನೆ ವಾಸ ಅನುಭವಿಸಿದ್ದರು. ಈ ವೇಳೆ ರಾಜ್ಯ ಸರ್ಕಾರ ಮುರುಘಾಮಠದ ಆಡಳಿತ ನಿರ್ವಹಿಸಲು ನಿವೃತ್ತ ಐಎಎಸ್ ಅಧಿಕಾರಿ ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿತ್ತು. ಈ ನೇಮಕವನ್ನು ಪ್ರಶ್ನಿಸಿ ಮಠದ ಪರ ವಕೀಲರು ಹೈಕೋರ್ಟ್ ಮೊರೆಹೋಗಿದ್ದ ಹಿನ್ನೆಲೆ ಆಡಳಿತಾಧಿಕಾರಿ ನೇಮಕವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಆಗ ಮಠದ ಪೀಠಾಧಿಪತಿಯಾಗಿದ್ದ ಮುರುಘಾಶ್ರೀ ಜೈಲಲ್ಲಿದ್ದ ಕಾರಣ, ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ತಾತ್ಕಾಲಿಕವಾಗಿ ಮಠದ ಆಡಳಿತದ ಅಧಿಕಾರ ನೀಡಿತ್ತು. https://ainlivenews.com/revanth-reddy-sworn-in-as-the-2nd-chief-minister-of-telangana/ ಹೀಗಾಗಿ ಈವರೆಗೆ ಚಿತ್ರದುರ್ಗ (Chitradurga) ಪಿಡಿಜೆ ಅವರು ಮಠದ ಆಡಳಿತಾಧಿಕಾರಿ ಆಗಿದ್ದರು. ಆದರೆ ನವೆಂಬರ್ 16ರಂದು ಮುರುಘಾಶ್ರೀ ಜಾಮೀನಿನ ಮೇಲೆ ಬಿಡುಗಡೆಯಾದ ಬೆನ್ನಲ್ಲೇ ಮಠದ ಅಧಿಕಾರಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ…