ದಿನಕ್ಕೆ 4 ಗಂಟೆಗಿಂತ ಹೆಚ್ಚು ಸ್ಮಾರ್ಟ್ಫೋನ್ ಬಳಕೆಯಿಂದ ಆರೋಗ್ಯ ಸಮಸ್ಯೆ ಕಾಡಲಿದೆ. ಯುನಜನತೆ ದಿನದಲ್ಲಿ ನಾಲ್ಕು ಗಂಟೆಗಳ ಕಾಲ ಸ್ಮಾರ್ಟ್ಫೋನ್ ಬಳಕೆ ಮಾಡುವುದರಿಂದ ಅವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಅಪಾಯ ಹೆಚ್ಚಬಹುದು ಎಂದು ಅಧ್ಯಯನ ಎಚ್ಚರಿಸಿದೆ.
ಈ ಹಿಂದಿನ ಸಂಶೋಧನೆಯಲ್ಲಿ ಸ್ಮಾರ್ಟ್ಫೋನ್ ಬಳಕೆಯ ಪ್ರಮಾಣ ಹದಿಹರೆಯದವರಲ್ಲಿ ಹೆಚ್ಚು ಎಂದು ತೋರಿಸಿದೆ. ಈ ಬಳಕೆ ಹೆಚ್ಚಿದಂತೆ ಅವರ ಆರೋಗ್ಯದ ಮೇಲೆ ಬೀರುವ ಅಡ್ಡಪರಿಣಾಮದ ಅಪಾಯವೂ ಜಾಸ್ತಿ. ಮಾನೋವೈಜ್ಞಾನಿಕ, ನಿದ್ರೆ, ಕಣ್ಣಿನ ಸಮಸ್ಯೆಗೂ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.
ಹದಿಹರೆಯದವರ ಸ್ಮಾರ್ಟ್ಫೋನ್ ಬಳಕೆ ಹಾಗು ಆರೋಗ್ಯದ ನಡುವಿನ ಸಂಬಂಧ ಕುರಿತು ಆಳವಾಗಿ ಅರ್ಥೈಸಿಕೊಳ್ಳಲು ಕೊರಿಯಾದ ಹಂಯಂಗ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ಭಾಗಿಯಾದ 50 ಸಾವಿರ ಜನರ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ.
ದತ್ತಾಂಶದಲ್ಲಿ ಭಾಗಿದಾರರು ದಿನದಲ್ಲಿ ಎಷ್ಟು ಗಂಟೆಗಳ ಕಾಲ ಗರಿಷ್ಟ ಬಳಕೆ ಮಾಡುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಗಮನಿಸಲಾಗಿದೆ. ಸಾಂಖ್ಯಿಂಕ ವಿಶ್ಲೇಷಣೆಯಲ್ಲಿ ಭಾಗಿದಾರರ ವಯಸ್ಸು, ಲಿಂಗ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.
ಹದಿವಯಸ್ಸಿನ ಮಂದಿ ದಿನಕ್ಕೆ ನಾಲ್ಕು ಗಂಟೆಗಿಂತ ಹೆಚ್ಚು ಕಾಲ ಸ್ಮಾರ್ಟ್ಫೋನ್ ಬಳಕೆ ಮಾಡುವುದರಿಂದ ಅವರು ಒತ್ತಡ ಮತ್ತು ಆತ್ಮಹತ್ಯೆ ಚಿಂತನೆ ದರ ಹೆಚ್ಚಿದೆ. ಇನ್ನು ನಾಲ್ಕು ಗಂಟೆಗಳಿಗಿಂತ ಕಡಿಮೆ ಸ್ಮಾರ್ಟ್ ವೀಕ್ಷಣೆ ಮಾಡುವವರಲ್ಲಿ ಈ ಸಮಸ್ಯೆ ಕಂಡುಬಂದಿಲ್ಲ.
ಆದಾಗ್ಯೂ, ಸ್ಮಾರ್ಟ್ ಫೋನ್ ಬಳಕೆ ಮಾಡದಿರುವವರಿಗೆ ಹೋಲಿಕೆ ಮಾಡಿದಾಗ ದಿನದ ಎರಡು ಗಂಟೆಗಳ ಕಾಲ ಸ್ಮಾರ್ಟ್ಫೋನ್ ವೀಕ್ಷಣೆ ಮಾಡುವ ಹದಿಹರೆಯದವರಲ್ಲಿ ಕೂಡ ಸಣ್ಣ ಸಮಸ್ಯೆಗಳು ಕಂಡು ಬಂದಿದೆ ಎಂದು ಅಧ್ಯಯನ ತಿಳಿಸಿದೆ