ದೆಹಲಿಯ ಡಾಕ್ಟರ್ ಕರುಣಿಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯಲಿರುವ ಡಿ. 12ರಿಂದ 16ರವರೆಗೆ ನಡೆಯಲಿರುವ ಖೇಲೋ ಇಂಡಿಯಾ ಪ್ರಥಮ ಪ್ಯಾರಾ ಗೇಮ್ಸ್‌ನ ಶೂಟಿಂಗ್ ಸ್ಪರ್ಧೆಗೆ ರಾಜ್ಯದ ಐವರು ಶೂಟರ್ಸ್‌ಗಳು ಆಯ್ಕೆಯಾಗಿದ್ದಾರೆ. ಆ ಪೈಕಿ ನಾಲ್ವರು ಶೂಟರ್‌ಗಳು ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಕ್ರೀಡಾಪಟುಗಳಾಗಿದ್ದಾರೆ. ಜ್ಯೋತಿ ಸಣ್ಣಕ್ಕಿ, ಶಂಕರಲಿಂಗ ತವಳಿ, ರಾಕೇಶ ನಿಡಗುಂದಿ, ಸಚಿನ್ ಸಿದ್ದಣ್ಣವರ, ಶ್ರೀಹರ್ಷ ದೇವರೆಡ್ಡಿ ಇವರೆಲ್ಲರೂ ರೈಫಲ್ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಸಾಮಾನ್ಯ ಕ್ರೀಡಾಪಟು ಮಾತ್ರ ಭಾಗವಹಿಸಲು ಅವಕಾಶವಿತ್ತು. ಆದರೆ, ಇದೇ ಮೊದಲ ಬಾರಿಗೆ ಅಂಗವಿಕಲ ಕ್ರೀಡಾಪಟುಗಳಿಗೂ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಅನ್ನು ಪ್ರಥಮ ಬಾರಿಗೆ ಭಾರತದಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಅತ್ಯುತ್ತಮ ಪ್ರದರ್ಶನ ಮತ್ತು ಪದಕ ಪಡೆದ ಕ್ರೀಡಾಪಟುಗಳಿಗೆ ಮುಂಬರುವ ದಿನಗಳಲ್ಲಿ ಉತ್ತಮ ಅವಕಾಶಗಳು ದೊರೆಯಲಿವೆ ಎಂದು ಹುಬ್ಬಳ್ಳಿ ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿ ತರಬೇತುದಾರ, ಮಾಜಿ ಸೈನಿಕ ರವಿಚಂದ್ರ ಬಾಲೆಹೊಸೂರ ತಿಳಿಸಿದ್ದಾರೆ. ರಾಜ್ಯದಿಂದ ಖೇಲೋ ಇಂಡಿಯಾ ಪ್ರಥಮ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಅಂಗವಿಕಲ ಕ್ರೀಡಾಪಟುಗಳು…
Author: AIN Author
ಬೆಳಗಾವಿ:- ಸರ್ಕಾರಕ್ಕೆ ಗ್ಯಾರಂಟಿ ಜಾರಿಗಿರುವ ಆಸಕ್ತಿ ರೈತರ ಮೇಲಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಸರ್ಕಾರವು ಧಾವಿಸಬೇಕಾದ ಅಗತ್ಯವಿದ್ದು, ಎರಡು ಲಕ್ಷ ರು.ವರೆಗಿನ ಕೃಷಿ ಸಾಲಮನ್ನಾ ಮಾಡುವುದರ ಜತೆಗೆ ತಕ್ಷಣ 10 ಸಾವಿರ ಕೋಟಿ ರು. ಅನುದಾನವನ್ನು ಒದಗಿಸಬೇಕು ಎಂದರು ಸರ್ಕಾರಕ್ಕೆ ಪ್ರಚಾರದ ಮೇಲೆ ಇರುವ ಆಸಕ್ತಿ ರೈತರ ಬಗ್ಗೆ ಇಲ್ಲ. ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಅಸಡ್ಡೆತನ ಆಶ್ಚರ್ಯವನ್ನುಂಟು ಮಾಡಿದೆ. ಕಳೆದ ಆರು ತಿಂಗಳಿನಿಂದ ಕೇವಲ ಗ್ಯಾರಂಟಿಗಳ ಬಗ್ಗೆಯೇ ಕೆಲಸ ಮಾಡುತ್ತಿರುವ ಈ ಸರ್ಕಾರ, ಆರ್ಥಿಕ ಹೊರೆಯನ್ನು ತನ್ನ ಮೇಲೆ ಎಳೆದುಕೊಂಡು ರೈತರಿಗೆ ಪ್ರತಿಯೊಂದಕ್ಕೂ ಬರೆ ಎಳೆಯುತ್ತಿದೆ. ಬೆಳೆ ನಾಶದಿಂದ ಅತೀವ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸರ್ಕಾರ ಸಾಲಮನ್ನಾ ಮೂಲಕ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು. ಗ್ಯಾರಂಟಿಗಳ ಅನುಷ್ಠಾನಗೊಳಿಸುವ ಭರದಲ್ಲಿ ಉಳಿದ ಕಾರ್ಯಗಳ ಕಡೆಗಣನೆ ಮಾಡಲಾಗಿದೆ. ಗ್ಯಾರಂಟಿ ಜಾರಿಗೆ ಹೆಚ್ಚು ಸಮಯ ಕೊಟ್ಟು ಆರ್ಥಿಕ ಹೊರೆ ಅವರೇ ತಂದು…
ಬೆಂಗಳೂರು:- ಹಾಡಹಗಲೇ ಮನೆ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಅರೆಸ್ಟ್ ಮಾಡಲಾಗಿದೆ. ನಾಗರಾಜ್ ಅಲಿಯಾಸ್ ಡೈಮಂಡ್ ನಾಗ ಹಾಗೂ ತ್ರಿವೇಣ ಕುಮಾರ್ ಬಂಧಿತರು. ಆರೋಪಿಗಳಿಂದ ₹24.5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಾಲ್ಕು ಬೈಕ್‌ಗಳು ಸೇರಿದಂತೆ ₹28 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನಗರದ ಹೊರವಲಯ ಜನ ಸಂಚಾರ ವಿರಳ ಇರುವ ವಸತಿ ಪ್ರದೇಶಗಳಲ್ಲಿ ಸಂಚರಿಸಿ ಮನೆಗಳ ಬೀಗ ಮುರಿದು ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಇತ್ತೀಚೆಗೆ ಸಿಂಗಾಪುರದ ವರದರಾಜಸ್ವಾಮಿ ಲೇಔಟ್‌ನಲ್ಲಿ ಜಿ.ಅನೂಷಾ ಅವರ ಮನೆ ಬೀಗ ಮುರಿದು 452 ಗ್ರಾಂ ಚಿನ್ನದ ಒಡವೆ ಹಾಗೂ ₹30 ಸಾವಿರ ನಗದು ದೋಚಿದ್ದರು. ಈ ಬಗ್ಗೆ ತನಿಖೆಗಿಳಿದ ಇನ್‌ಸ್ಪೆಕ್ಟರ್ ಸಿ.ಬಿ.ಶಿವಸ್ವಾಮಿ ನೇತೃತ್ವದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹುಬ್ಬಳ್ಳಿ: ಎಲೆಕ್ಟ್ರಾನಿಕ್ ಸಾಮಗ್ರಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನಂಬಿಸಿದ ವಂಚಕರು, ನಗರದ ವ್ಯಕ್ತಿಯೊಬ್ಬರಿಂದ 3.26 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ರೋಹಿತ್ ಎಂಬಾತ ಮೊಬೈಲ್ ಫೋನ್ ಬೇಕೆಂದು ಸಮಾಜಿಕ ಜಾಲತಾಣದ ಮೂಲಕ ಸಂದೇಶ ಕಳುಹಿಸಿದ್ದ. ಇದಕ್ಕೆ ಆರ್ಡರ್ ಒಕೆ ಆಗಿದೆ ಎಂದು ನಂಬಿಸಿದ ವಂಚಕರು, ಹಂತ ಹಂತವಾಗಿ 3.26 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ:- ಕಳೆದ 45 ದಿನಗಳಲ್ಲಿ 5729 ಮನೆಗಳಿಗೆ ಭೇಟಿ ನೀಡಿ, ವಿದೇಶಿಗರು ವಾಸಿಸುವ 28 ಹಾಟ್ ಸ್ಪಾಟ್ ಗುರುತಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು. ವಿಧಾನ ಪರಿಷತ್ ನಲ್ಲಿ ಉತ್ತರಿಸಿದ ಸಚಿವರು, ಬಾಂಗ್ಲಾ ವಲಸಿಗರ ಪತ್ತೆಗೆ ನಮ್ಮ ಗುಪ್ತ ದಳ ಜಾಗೃತಗೊಳಿಸಲಾಗಿದೆ, ಹೊಸದಾಗಿ ಕಂಡು ಬರುವ ಬೇರೆ ಭಾಷಿಕರನ್ನು ಗುರುತಿಸಿ, ಅವರ ಪಾಸ್ ಪೋರ್ಟ್ ಪರಿಶೀಲಿಸಿ ಪತ್ತೆ ಹಚ್ಚಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ ಅಕ್ರಮ ಬಾಂಗ್ಲಾ ಮತ್ತು ವಿದೇಶಿಯರ ವಿರುದ್ಧ ಒಟ್ಟು 764 ಪ್ರಕರಣ ದಾಖಲಾಗಿದ್ದು, ಈ ಪೈಕಿ ಬಾಂಗ್ಲಾ ವಲಸಿಗರ ವಿರುದ್ಧ 53 ಪ್ರಕರಣಗಳ ಹಾಗೂ ವಿದೇಶಿಗರ ವಿರುದ್ಧ 711 ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟು 135 ಜನ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು. ಅಕ್ರಮ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಿರುವ ಏಜೆಂಟ್‌ಗಳನ್ನು ಪತ್ತೆ ಮಾಡಿದ್ದು ಈ ಸಂಬಂಧ 4 ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ವಾಸಿಸುತ್ತಿರುವ 14…
ಬೆಳಗಾವಿ:- ರಾಜ್ಯದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದ 2017-18 ಬಜೆಟ್‌ಗೆ ಹೋಲಿಸಿದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಹಾಗೂ ಜಿಎಸ್‌ಟಿ ಪರಿಹಾರ ಈಗ 40 ಸಾವಿರ ಕೋಟಿ ರು. ಕಡಿಮೆಯಾಗಿದ್ದು, ಇದರಿಂದ ರಾಜ್ಯದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದರು. ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2017-18ರಲ್ಲಿ ರಾಜ್ಯದ ಬಜೆಟ್ ಗಾತ್ರ 1.86 ಲಕ್ಷ ಕೋಟಿ ಇದ್ದ ವೇಳೆ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಯಡಿ ಒಟ್ಟು 43,369 ಕೋಟಿ ರು. (ಶೇ. 23) ಬಂದಿತ್ತು. ಆದರೆ ಈಗ ರಾಜ್ಯದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ಇದ್ದರೂ ಕೇಂದ್ರದಿಂದ ಬರುವ ಮೊತ್ತ ಶೇ.17.5 ಕ್ಕೆ ಇಳಿದಿದೆ. ಶೇ.23ರಂತೆ ಲೆಕ್ಕ ಹಾಕಿದರೆ 76 ಸಾವಿರ ಕೋಟಿ ಬರುವ ಬದಲು 56 ಸಾವಿರ ಕೋಟಿ ಬರುತ್ತಿದೆ, ಅದೇ ರೀತಿ…
ಬಾಗಲಕೋಟೆ :-ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಕುಂಬಾರ ಗಲ್ಲಿಯಲ್ಲಿ (23) ವರ್ಷದ ಯುವಕ ನೇಣಿಗೆ ಶರಣಾದ ಘಟನೆ ನಡೆದಿದೆ. ನೇಣಿಗೆ ಶರಣಾದ (೨೩) ವರ್ಷದ ಯುವಕ ಅಜೀತ ಪಾಟೀಲ ಮೃತಪಟ್ಟ ದುರ್ದೈವಿ. ಉಚಿತ ಅನ್ನಭಾಗ್ಯ ಯೋಜನೆಯಲ್ಲಿ ಬರುವ ಹಣವನ್ನು ತಾನೇ ತೆಗೆದುಕೊಂಡು ಕುಡಿದು ಕೊಪ್ಪಳಿಸುತ್ತಿದ್ದನು. ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರು ವಾಸವಾಗಿರುತ್ತಿದ್ದರು. ಪ್ರತಿ ತಿಂಗಳು ಬರುವ ಉಚಿತ ಅನ್ನಭಾಗ್ಯ ಯೋಜನೆ ಹಣವನ್ನು ತಾಯಿಗೆ ಕೊಡದೆ ತಾನೇ ಬ್ಯಾಂಕಿಗೆ ಹೋಗಿ ತೆಗೆದುಕೊಂಡು ಬಂದ್ ಹಣವನ್ನು ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದನು. ಜೀವನದಲ್ಲಿ ಜೀವಿಸಿಗೊಂಡು ನೇಣಿಗೆ ಶರಣಾಗಿದ್ದಾನೆ. ಮಗ ಸತ್ತ ಕರುಣೆಯಲ್ಲಿ ತಾಯಿ ಒಬ್ಬಂಟಿಯಾಗಿದ್ದಾಳೆ ಈ ಪ್ರಕರಣದ ಕುರಿತು ತೇರದಾಳ ಪೊಲೀಸ್ ಠಾಣೆ, ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ. ಪ್ರಕಾಶ ಕುಂಬಾರ ಬಾಗಲಕೋಟೆ
ಬೆಂಗಳೂರು: ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ಜನ ಬೆಂದು ಹೋಗಿದ್ದಾರೆ. ಇದ್ರ ನಡುವೆ ನಡುವೆ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು ಮತ್ತೆ ಹಾಲಿನ ದರ ಪರಿಷ್ಕರಣೆ ಮಾಡಲು ಕೆಎಂಎಫ್ ಮುಂದಾಗಿದೆ. ಈ ಕುರಿತು ಜನವರಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು KMF ರೆಡಿಯಾಗಿದೆ.ಹಾಗಾದ್ರೆ ಯಾವೆಲ್ಲಾ ಹಾಲು ಎಷ್ಟೆಷ್ಟು ಆಗುತ್ತೆ ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ರಾಜ್ಯದ ಜನರಿಗೆ ಒಂದಲ್ಲ ಒಂದು ಬೆಲೆ ಏರಿಕೆ ಬಿಸಿ ಬೀಳ್ತಾನೆ ಇದೆ. ಈಗಾಗಲೇ ಹಲವು ಬೆಲೆ ಏರಿಕೆಯಿಂದ ತತ್ತರಿಸಿರೋ ಜನತೆಗೆ ಶೀಘ್ರದಲ್ಲೇ ನಂದಿನಿ ಹಾಲಿನ ದರವೂ ಹೆಚ್ಚದ ಮುನ್ಸೂಚನೆ ಸಿಕ್ಕಿದೆ. ಆರ್ಥಿಕ ನಿರ್ವಹಣೆ ನಷ್ಟದ ಹಿನ್ನಲೆ ನಂದಿನಿ ಹಾಲು ಪರಿಷ್ಕರಣೆಗೆ ಅನುಮತಿ ನೀಡುವಂತೆ ಸರ್ಕಾರದ ಕದ ತಟ್ಟಲು ಕೆಎಂಎಫ್ ನಿರ್ಧಾರ ಮಾಡಿದೆ. ಹೌದು.. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು. ಇದೀಗ ಹಾಲಿನ ದರ ಮತ್ತೆ ಹೆಚ್ಚಳ ಮಾಡಲು ಕೆಎಂಎಫ್ ಸಿದ್ದತೆ ನಡೆಸಿಕೊಳ್ಳುತ್ತಿದೆ. ಈಗಾಗಲೇ ಕೆಎಂಎಫ್…
ಧಾರವಾಡ:- ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ “ಭಾರತೀಯ ಪ್ರಜೆಗಳಾದ ನಾವು…” ಎಂದೇ ಆರಂಭವಾಗುತ್ತದೆ. ದೇಶದ ಪ್ರಜೆಗಳಾದ ನಮ್ಮ ಜೀವನ ವಿಧಾನ ಯಾವುದು, ಒಪ್ಪಿಕೊಂಡು ನಡೆಯಬೇಕಾದ ಮೌಲ್ಯಗಳು ಯಾವುವು? ಎಂಬುದನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಸ್ವಾತಂತ್ರ್ಯಾ ಬಂದ ನಂತರ, ಎಲ್ಲ ಭಾರತೀಯರೂ ಒಪ್ಪಿ ನಡೆಯಬೇಕಾದ ಪವಿತ್ರ ಗ್ರಂಥವಾಗಿರುವ ಸಂವಿಧಾನವು ಬಾಬಾಸಾಹೇಬ್ ಅಂಬೇಡ್ಕರ್‌ರವರಿಂದ ರಚಿತವಾಗಿದೆ ಎನ್ನುವ ಕಾರಣಕ್ಕಾಗಿಯೇ ಅದನ್ನು ವಿರೋಧಿಸುವ, ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಲು ಮೂಲಭೂತವಾದಿ ಸಂಘ ಪರಿವಾರದಂತಹ ಸಂಘಟನೆಗಳು ಪ್ರಯತ್ನಿಸುತ್ತಾ ಬರುತ್ತಿವೆ. ಕೋಮುವಾದಿಗಳು ‘ನಾವು ಈಗಿರುವ ಸಂವಿಧಾನವನ್ನು ಬದಲು ಮಾಡುತ್ತೇವೆ’ ಎಂದು ನೇರವಾಗಿಯೇ ಹೇಳುವ ಮಟ್ಟಕ್ಕೆ ಇಳಿದ್ದಿದ್ದಾರೆ. ಬಾಬಾಸಾಹೇಬರ ಹೋರಾಟ ಮತ್ತು ಚಿಂತನೆಯಿಂದ ಎಚ್ಚೆತ್ತುಕೊಳ್ಳುತ್ತಿರುವ ದಲಿತ ಸಮುದಾಯದ ನಡುವೆ ಸಂವಿಧಾನವನ್ನು ಬದಲಾಯಿಸುವುದು ಕಷ್ಟ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಕೋಮುವಾದಿಗಳು, ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಮೂಲಕ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಹೊಸ ಆರ್ಥಿಕ ನೀತಿಗಳಿಂದ ಬಂಡವಾಳಶಾಹಿಗಳು ಮೇಲುಗೈ ಸಾಧಿಸುತ್ತಿವೆ. ಹೀಗಾಗಿ ಮೀಸಲಾತಿಯಂತಹ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಿಗೆ ದಕ್ಕೆ ಉಂಟಾಗಿದೆ. ಹೀಗೆ…
ಬೆಂಗಳೂರು:- ಬಸನಗೌಡ ಪಾಟೀಲ್ ಯತ್ನಾಳ್ ಸಚಿವರಾಗಿದ್ದು ಯಡಿಯೂರಪ್ಪ ಕೃಪಾಕಟಾಕ್ಷದಿಂದ ಎಂಬುದನ್ನು ಮರೆಯಬಾರದು ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಸಕ ಬಸನಗೌಡ ಪಾಟೀಲ್ ಅವರು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದು ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ. ಅವರಿಗೆ ಟಿಕೆಟ್ ಸಿಕ್ಕಿದ್ದು ಮರಳಿ ಪಕ್ಷಕ್ಕೆ ಬಂದಿದ್ದ ಯಡಿಯೂರಪ್ಪ ಅವರಿಂದ ಎನ್ನುವುದನ್ನು ಮರೆಯಬಾರದು. ಯತ್ನಾಳ್ ವರ್ತನೆ ಇದೇ ರೀತಿ ಮುಂದುವರೆದರೆ ನಮಗೂ ಮಾತನಾಡಲು ಬರುತ್ತದೆ. ದೆಹಲಿಗೆ ತೆರಳಲೂ ಬರುತ್ತದೆ ಎಂದು ಯಡಿಯೂರಪ್ಪ ಆಪ್ತ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಗೌರವ ಇದೆ. ಅವರು ಹಿರಿಯರು. ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದೆ ಎಂದು ಪದೇ ಪದೇ ಹೇಳುತ್ತಾರೆ. ಯಡಿಯೂರಪ್ಪ ಕೃಪಾಕಟಾಕ್ಷದಿಂದ ಅವರು ಸಚಿವರಾಗಿದ್ದರು. ಪಕ್ಷದಿಂದ ಉಚ್ಚಾಟನೆಯಾಗಿದ್ದಾಗ ಅವರ ಮರುಸೇರ್ಪಡೆಗೆ ಎಲ್ಲರೂ ವಿರೋಧ ಮಾಡಿದರೂ ಅವರ ಹಿರಿತನಕ್ಕೆ ಬೆಲೆ ಕೊಟ್ಟು ಯಡಿಯೂರಪ್ಪ ಯಾರ ಮಾತೂ ಕೇಳದೆ ಮರಳಿ ಕರೆತರುವ ದೃಢ ನಿರ್ಧಾರ ಮಾಡಿದ್ದರು. ಆದರೂ ಯಡಿಯೂರಪ್ಪ ವಿರುದ್ಧ ಅವರು ಯಾಕೆ ಈ…