ಬೆಳಗಾವಿ:- ಕಳೆದ 45 ದಿನಗಳಲ್ಲಿ 5729 ಮನೆಗಳಿಗೆ ಭೇಟಿ ನೀಡಿ, ವಿದೇಶಿಗರು ವಾಸಿಸುವ 28 ಹಾಟ್ ಸ್ಪಾಟ್ ಗುರುತಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು. ವಿಧಾನ ಪರಿಷತ್ ನಲ್ಲಿ ಉತ್ತರಿಸಿದ ಸಚಿವರು, ಬಾಂಗ್ಲಾ ವಲಸಿಗರ ಪತ್ತೆಗೆ ನಮ್ಮ ಗುಪ್ತ ದಳ ಜಾಗೃತಗೊಳಿಸಲಾಗಿದೆ, ಹೊಸದಾಗಿ ಕಂಡು ಬರುವ ಬೇರೆ ಭಾಷಿಕರನ್ನು ಗುರುತಿಸಿ, ಅವರ ಪಾಸ್ ಪೋರ್ಟ್ ಪರಿಶೀಲಿಸಿ ಪತ್ತೆ ಹಚ್ಚಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೆ ಅಕ್ರಮ ಬಾಂಗ್ಲಾ ಮತ್ತು ವಿದೇಶಿಯರ ವಿರುದ್ಧ ಒಟ್ಟು 764 ಪ್ರಕರಣ ದಾಖಲಾಗಿದ್ದು, ಈ ಪೈಕಿ ಬಾಂಗ್ಲಾ ವಲಸಿಗರ ವಿರುದ್ಧ 53 ಪ್ರಕರಣಗಳ ಹಾಗೂ ವಿದೇಶಿಗರ ವಿರುದ್ಧ 711 ಪ್ರಕರಣ ದಾಖಲು ಮಾಡಲಾಗಿದೆ. ಒಟ್ಟು 135 ಜನ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು. ಅಕ್ರಮ ವಲಸಿಗರಿಗೆ ನಕಲಿ ಆಧಾರ್ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳನ್ನು ಸೃಷ್ಟಿಸಿ ಕೊಡುತ್ತಿರುವ ಏಜೆಂಟ್‌ಗಳನ್ನು ಪತ್ತೆ ಮಾಡಿದ್ದು ಈ ಸಂಬಂಧ 4 ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ವಾಸಿಸುತ್ತಿರುವ 14…
Author: AIN Author
ಬೆಳಗಾವಿ:- ರಾಜ್ಯದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದ 2017-18 ಬಜೆಟ್‌ಗೆ ಹೋಲಿಸಿದರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಹಾಗೂ ಜಿಎಸ್‌ಟಿ ಪರಿಹಾರ ಈಗ 40 ಸಾವಿರ ಕೋಟಿ ರು. ಕಡಿಮೆಯಾಗಿದ್ದು, ಇದರಿಂದ ರಾಜ್ಯದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗಿದೆ ಎಂದರು. ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2017-18ರಲ್ಲಿ ರಾಜ್ಯದ ಬಜೆಟ್ ಗಾತ್ರ 1.86 ಲಕ್ಷ ಕೋಟಿ ಇದ್ದ ವೇಳೆ ರಾಜ್ಯಕ್ಕೆ ಕೇಂದ್ರದಿಂದ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಯಡಿ ಒಟ್ಟು 43,369 ಕೋಟಿ ರು. (ಶೇ. 23) ಬಂದಿತ್ತು. ಆದರೆ ಈಗ ರಾಜ್ಯದ ಬಜೆಟ್ ಗಾತ್ರ 3.27 ಲಕ್ಷ ಕೋಟಿ ಇದ್ದರೂ ಕೇಂದ್ರದಿಂದ ಬರುವ ಮೊತ್ತ ಶೇ.17.5 ಕ್ಕೆ ಇಳಿದಿದೆ. ಶೇ.23ರಂತೆ ಲೆಕ್ಕ ಹಾಕಿದರೆ 76 ಸಾವಿರ ಕೋಟಿ ಬರುವ ಬದಲು 56 ಸಾವಿರ ಕೋಟಿ ಬರುತ್ತಿದೆ, ಅದೇ ರೀತಿ…
ಬಾಗಲಕೋಟೆ :-ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಕುಂಬಾರ ಗಲ್ಲಿಯಲ್ಲಿ (23) ವರ್ಷದ ಯುವಕ ನೇಣಿಗೆ ಶರಣಾದ ಘಟನೆ ನಡೆದಿದೆ. ನೇಣಿಗೆ ಶರಣಾದ (೨೩) ವರ್ಷದ ಯುವಕ ಅಜೀತ ಪಾಟೀಲ ಮೃತಪಟ್ಟ ದುರ್ದೈವಿ. ಉಚಿತ ಅನ್ನಭಾಗ್ಯ ಯೋಜನೆಯಲ್ಲಿ ಬರುವ ಹಣವನ್ನು ತಾನೇ ತೆಗೆದುಕೊಂಡು ಕುಡಿದು ಕೊಪ್ಪಳಿಸುತ್ತಿದ್ದನು. ಮನೆಯಲ್ಲಿ ತಾಯಿ ಮತ್ತು ಮಗ ಇಬ್ಬರು ವಾಸವಾಗಿರುತ್ತಿದ್ದರು. ಪ್ರತಿ ತಿಂಗಳು ಬರುವ ಉಚಿತ ಅನ್ನಭಾಗ್ಯ ಯೋಜನೆ ಹಣವನ್ನು ತಾಯಿಗೆ ಕೊಡದೆ ತಾನೇ ಬ್ಯಾಂಕಿಗೆ ಹೋಗಿ ತೆಗೆದುಕೊಂಡು ಬಂದ್ ಹಣವನ್ನು ಕುಡಿದು ಮೋಜು ಮಸ್ತಿಯಲ್ಲಿ ತೊಡಗಿದ್ದನು. ಜೀವನದಲ್ಲಿ ಜೀವಿಸಿಗೊಂಡು ನೇಣಿಗೆ ಶರಣಾಗಿದ್ದಾನೆ. ಮಗ ಸತ್ತ ಕರುಣೆಯಲ್ಲಿ ತಾಯಿ ಒಬ್ಬಂಟಿಯಾಗಿದ್ದಾಳೆ ಈ ಪ್ರಕರಣದ ಕುರಿತು ತೇರದಾಳ ಪೊಲೀಸ್ ಠಾಣೆ, ಪೊಲೀಸ್ರು ತನಿಖೆ ನಡೆಸುತ್ತಿದ್ದಾರೆ. ಪ್ರಕಾಶ ಕುಂಬಾರ ಬಾಗಲಕೋಟೆ
ಬೆಂಗಳೂರು: ಈಗಾಗಲೇ ಬೆಲೆ ಏರಿಕೆ ಬಿಸಿಯಿಂದ ಜನ ಬೆಂದು ಹೋಗಿದ್ದಾರೆ. ಇದ್ರ ನಡುವೆ ನಡುವೆ ರಾಜ್ಯದ ಜನತೆಗೆ ಮತ್ತೊಂದು ದರ ಏರಿಕೆಯ ಬಿಸಿ ಕಾದಿದೆ. ಹೌದು ಮತ್ತೆ ಹಾಲಿನ ದರ ಪರಿಷ್ಕರಣೆ ಮಾಡಲು ಕೆಎಂಎಫ್ ಮುಂದಾಗಿದೆ. ಈ ಕುರಿತು ಜನವರಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು KMF ರೆಡಿಯಾಗಿದೆ.ಹಾಗಾದ್ರೆ ಯಾವೆಲ್ಲಾ ಹಾಲು ಎಷ್ಟೆಷ್ಟು ಆಗುತ್ತೆ ಅನ್ನೋ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ರಾಜ್ಯದ ಜನರಿಗೆ ಒಂದಲ್ಲ ಒಂದು ಬೆಲೆ ಏರಿಕೆ ಬಿಸಿ ಬೀಳ್ತಾನೆ ಇದೆ. ಈಗಾಗಲೇ ಹಲವು ಬೆಲೆ ಏರಿಕೆಯಿಂದ ತತ್ತರಿಸಿರೋ ಜನತೆಗೆ ಶೀಘ್ರದಲ್ಲೇ ನಂದಿನಿ ಹಾಲಿನ ದರವೂ ಹೆಚ್ಚದ ಮುನ್ಸೂಚನೆ ಸಿಕ್ಕಿದೆ. ಆರ್ಥಿಕ ನಿರ್ವಹಣೆ ನಷ್ಟದ ಹಿನ್ನಲೆ ನಂದಿನಿ ಹಾಲು ಪರಿಷ್ಕರಣೆಗೆ ಅನುಮತಿ ನೀಡುವಂತೆ ಸರ್ಕಾರದ ಕದ ತಟ್ಟಲು ಕೆಎಂಎಫ್ ನಿರ್ಧಾರ ಮಾಡಿದೆ. ಹೌದು.. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೆ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು. ಇದೀಗ ಹಾಲಿನ ದರ ಮತ್ತೆ ಹೆಚ್ಚಳ ಮಾಡಲು ಕೆಎಂಎಫ್ ಸಿದ್ದತೆ ನಡೆಸಿಕೊಳ್ಳುತ್ತಿದೆ. ಈಗಾಗಲೇ ಕೆಎಂಎಫ್…
ಧಾರವಾಡ:- ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ “ಭಾರತೀಯ ಪ್ರಜೆಗಳಾದ ನಾವು…” ಎಂದೇ ಆರಂಭವಾಗುತ್ತದೆ. ದೇಶದ ಪ್ರಜೆಗಳಾದ ನಮ್ಮ ಜೀವನ ವಿಧಾನ ಯಾವುದು, ಒಪ್ಪಿಕೊಂಡು ನಡೆಯಬೇಕಾದ ಮೌಲ್ಯಗಳು ಯಾವುವು? ಎಂಬುದನ್ನು ನಮ್ಮ ಸಂವಿಧಾನ ಒಳಗೊಂಡಿದೆ. ಸ್ವಾತಂತ್ರ್ಯಾ ಬಂದ ನಂತರ, ಎಲ್ಲ ಭಾರತೀಯರೂ ಒಪ್ಪಿ ನಡೆಯಬೇಕಾದ ಪವಿತ್ರ ಗ್ರಂಥವಾಗಿರುವ ಸಂವಿಧಾನವು ಬಾಬಾಸಾಹೇಬ್ ಅಂಬೇಡ್ಕರ್‌ರವರಿಂದ ರಚಿತವಾಗಿದೆ ಎನ್ನುವ ಕಾರಣಕ್ಕಾಗಿಯೇ ಅದನ್ನು ವಿರೋಧಿಸುವ, ಸಂವಿಧಾನದ ಮೂಲ ಆಶಯಗಳನ್ನೇ ಬುಡಮೇಲು ಮಾಡಲು ಮೂಲಭೂತವಾದಿ ಸಂಘ ಪರಿವಾರದಂತಹ ಸಂಘಟನೆಗಳು ಪ್ರಯತ್ನಿಸುತ್ತಾ ಬರುತ್ತಿವೆ. ಕೋಮುವಾದಿಗಳು ‘ನಾವು ಈಗಿರುವ ಸಂವಿಧಾನವನ್ನು ಬದಲು ಮಾಡುತ್ತೇವೆ’ ಎಂದು ನೇರವಾಗಿಯೇ ಹೇಳುವ ಮಟ್ಟಕ್ಕೆ ಇಳಿದ್ದಿದ್ದಾರೆ. ಬಾಬಾಸಾಹೇಬರ ಹೋರಾಟ ಮತ್ತು ಚಿಂತನೆಯಿಂದ ಎಚ್ಚೆತ್ತುಕೊಳ್ಳುತ್ತಿರುವ ದಲಿತ ಸಮುದಾಯದ ನಡುವೆ ಸಂವಿಧಾನವನ್ನು ಬದಲಾಯಿಸುವುದು ಕಷ್ಟ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ಕೋಮುವಾದಿಗಳು, ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಮೂಲಕ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಹೊಸ ಆರ್ಥಿಕ ನೀತಿಗಳಿಂದ ಬಂಡವಾಳಶಾಹಿಗಳು ಮೇಲುಗೈ ಸಾಧಿಸುತ್ತಿವೆ. ಹೀಗಾಗಿ ಮೀಸಲಾತಿಯಂತಹ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳಿಗೆ ದಕ್ಕೆ ಉಂಟಾಗಿದೆ. ಹೀಗೆ…
ಬೆಂಗಳೂರು:- ಬಸನಗೌಡ ಪಾಟೀಲ್ ಯತ್ನಾಳ್ ಸಚಿವರಾಗಿದ್ದು ಯಡಿಯೂರಪ್ಪ ಕೃಪಾಕಟಾಕ್ಷದಿಂದ ಎಂಬುದನ್ನು ಮರೆಯಬಾರದು ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಸಕ ಬಸನಗೌಡ ಪಾಟೀಲ್ ಅವರು ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದು ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ. ಅವರಿಗೆ ಟಿಕೆಟ್ ಸಿಕ್ಕಿದ್ದು ಮರಳಿ ಪಕ್ಷಕ್ಕೆ ಬಂದಿದ್ದ ಯಡಿಯೂರಪ್ಪ ಅವರಿಂದ ಎನ್ನುವುದನ್ನು ಮರೆಯಬಾರದು. ಯತ್ನಾಳ್ ವರ್ತನೆ ಇದೇ ರೀತಿ ಮುಂದುವರೆದರೆ ನಮಗೂ ಮಾತನಾಡಲು ಬರುತ್ತದೆ. ದೆಹಲಿಗೆ ತೆರಳಲೂ ಬರುತ್ತದೆ ಎಂದು ಯಡಿಯೂರಪ್ಪ ಆಪ್ತ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಎಚ್ಚರಿಕೆ ನೀಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಗೌರವ ಇದೆ. ಅವರು ಹಿರಿಯರು. ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದೆ ಎಂದು ಪದೇ ಪದೇ ಹೇಳುತ್ತಾರೆ. ಯಡಿಯೂರಪ್ಪ ಕೃಪಾಕಟಾಕ್ಷದಿಂದ ಅವರು ಸಚಿವರಾಗಿದ್ದರು. ಪಕ್ಷದಿಂದ ಉಚ್ಚಾಟನೆಯಾಗಿದ್ದಾಗ ಅವರ ಮರುಸೇರ್ಪಡೆಗೆ ಎಲ್ಲರೂ ವಿರೋಧ ಮಾಡಿದರೂ ಅವರ ಹಿರಿತನಕ್ಕೆ ಬೆಲೆ ಕೊಟ್ಟು ಯಡಿಯೂರಪ್ಪ ಯಾರ ಮಾತೂ ಕೇಳದೆ ಮರಳಿ ಕರೆತರುವ ದೃಢ ನಿರ್ಧಾರ ಮಾಡಿದ್ದರು. ಆದರೂ ಯಡಿಯೂರಪ್ಪ ವಿರುದ್ಧ ಅವರು ಯಾಕೆ ಈ…
ಕೂದಲಿ ಅಂದಕ್ಕೆ ಬಳಸುವ ಶಾಂಪೂ ಸೇರಿದಂತೆ ಹೇರ್‌ಕೇರ್ ಉತ್ಪನ್ನಗಳು ನಿಮ್ಮ ಆರೋಗ್ಯವನ್ನೇ ಕೆಡಿಸಬಹುದು. ಶಾಂಪೂಗಳ ಬಳಕೆ ಮಾರಣಾಂತಿಕ ಕಾಯಿಲೆಗೆ ದಾರಿ ಮಾಡಿಕೊಡಬಹುದು. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿ ಒಂದಾದ ಕಾಸ್ಮೆಟಿಕ್ ಉದ್ಯಮವು ಪ್ರತಿ ವರ್ಷ 6%ರಷ್ಟು ಹೆಚ್ಚಾಗುತ್ತಿರುತ್ತದೆ. ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದಿನಕ್ಕೊಂದು ಬ್ರಾಂಡ್‌ಗಳು ಮಾರುಕಟ್ಟೆಗೆ ಬರುತ್ತದೆ. ಹೇರ್ ಕೇರ್ ವಸ್ತುಗಳ ತಯಾರಿಕಾ ಉದ್ಯಮವು ಕೂಡ ಹೀಗೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಬಳಕೆದಾರರ ಸಂಖ್ಯೆಯೂ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ ಇತ್ತೀಚಿಗೆ ವಿಜ್ಞಾನಿಗಳ ಅಧ್ಯಯನವೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಶ್ಯಾಂಪೂಗಳು ಹಾಗೂ ಹೇರ್‌ಕೇರ್ ಉತ್ಪನ್ನಗಳು ಕೂದಲನ್ನು ಸ್ವಚ್ಛಗೊಳಿಸುವ ಜೊತೆಗೆ ಅದರಲ್ಲಿನ ಬೃಹತ್ ಪ್ರಮಾಣದ ರಾಸಾಯನಿಕವು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಎನ್ವಿರಾನ್ಮೆಂಟಲ್ ಸೈನ್ಸ್ & ಟೆಕ್ನಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿನ ರಾಸಾಯನಿಕಗಳು ನಮ್ಮ ಕೂದಲಲ್ಲಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅತ್ಯಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ. ಇದನ್ನು…
ನಟಿ ಲೀಲಾವತಿ ಅವರು 70ರ ದಶಕದಲ್ಲಿ ಮಿಂಚಿದ ಖ್ಯಾತ ನಟಿಯರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ಹಿರಿಯ ನಟಿ ಲೀಲಾವತಿ ಅವರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದಾರೆ. ಲೀಲಾವತಿ ಅವರು ಕನ್ನಡ ಅಷ್ಟೇ ಅಲ್ಲದೆ ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿಯೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲೀಲಾವತಿ ಅವರು ಸಿನಿಮಾಗಳ ಜತೆಗೆ ವೈಯಕ್ತಿಕ ವಿಚಾರವಾಗಿಯು ಸುದ್ದಿಯಾಗುತ್ತಿದ್ದರು. ಈ ಕುರಿತಾಗಿ ಅವರ ಪುತ್ರ ವಿನೋದ್ ರಾಜ್ ಕುಮಾರ್ ಅವರು ಮಾತನಾಡಿದ್ದಾರೆ. ಶಿವಣ್ಣ ಅವರು ಯಾವ ರೀತಿ ಸ್ಪಂದನೆ ಮಾಡಿದ್ರು.. ಅದನ್ನು ನೋಡಿ ಬಾಯಿ ಮುಚ್ಚಿಕೊಂಡು ಇರಬೇಕು. ಇದು ಮರ್ಯಾದಸ್ಥರ ಲಕ್ಷಣವಾಗಿದೆ. ಈ ವಿಚಾರವನ್ನು ತಿಳಿಯುವುದರಿಂದ ಏನಾದ್ರು ಜಿಎಸ್‌ಟಿ ಕಡಿಮೆ ಆಗುತ್ತಾ? ಪೆಟ್ರೋಲ್ ಬೆಲೆ ಕಡಿಮೆ ಆಗುತ್ತಾ? ಯಾವ ಸಮಸ್ಯೆ ಪರಿಹಾರವಾಗುತ್ತದೆ? ಈ ವಿಚಾರ ತಿಳಿಯುವುದರಿಂದ. ಈ ಪ್ರಶ್ನೆ ಮಾಡುವವರು ಅವರ ಮನೆಯನ್ನು ಅವರು ನೋಡಿಕೊಳ್ಳಲಿ.. ಈ ವಿಚಾರ ಯಾಕೆ? ಎಂದು ಪ್ರಶ್ನೆ ಮಾಡುತ್ತಾ ತಂದೆ ಯಾರು…
ದಿನಕ್ಕೆ 4 ಗಂಟೆಗಿಂತ ಹೆಚ್ಚು ಸ್ಮಾರ್ಟ್ಫೋನ್ ಬಳಕೆಯಿಂದ ಆರೋಗ್ಯ ಸಮಸ್ಯೆ ಕಾಡಲಿದೆ. ಯುನಜನತೆ ದಿನದಲ್ಲಿ ನಾಲ್ಕು ಗಂಟೆಗಳ ಕಾಲ ಸ್ಮಾರ್ಟ್ಫೋನ್ ಬಳಕೆ ಮಾಡುವುದರಿಂದ ಅವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಅಪಾಯ ಹೆಚ್ಚಬಹುದು ಎಂದು ಅಧ್ಯಯನ ಎಚ್ಚರಿಸಿದೆ. ಈ ಹಿಂದಿನ ಸಂಶೋಧನೆಯಲ್ಲಿ ಸ್ಮಾರ್ಟ್ಫೋನ್ ಬಳಕೆಯ ಪ್ರಮಾಣ ಹದಿಹರೆಯದವರಲ್ಲಿ ಹೆಚ್ಚು ಎಂದು ತೋರಿಸಿದೆ. ಈ ಬಳಕೆ ಹೆಚ್ಚಿದಂತೆ ಅವರ ಆರೋಗ್ಯದ ಮೇಲೆ ಬೀರುವ ಅಡ್ಡಪರಿಣಾಮದ ಅಪಾಯವೂ ಜಾಸ್ತಿ. ಮಾನೋವೈಜ್ಞಾನಿಕ, ನಿದ್ರೆ, ಕಣ್ಣಿನ ಸಮಸ್ಯೆಗೂ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಹದಿಹರೆಯದವರ ಸ್ಮಾರ್ಟ್ಫೋನ್ ಬಳಕೆ ಹಾಗು ಆರೋಗ್ಯದ ನಡುವಿನ ಸಂಬಂಧ ಕುರಿತು ಆಳವಾಗಿ ಅರ್ಥೈಸಿಕೊಳ್ಳಲು ಕೊರಿಯಾದ ಹಂಯಂಗ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ಭಾಗಿಯಾದ 50 ಸಾವಿರ ಜನರ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. ದತ್ತಾಂಶದಲ್ಲಿ ಭಾಗಿದಾರರು ದಿನದಲ್ಲಿ ಎಷ್ಟು ಗಂಟೆಗಳ ಕಾಲ ಗರಿಷ್ಟ ಬಳಕೆ ಮಾಡುತ್ತಾರೆ. ಇದರಿಂದ ಅವರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಗಮನಿಸಲಾಗಿದೆ. ಸಾಂಖ್ಯಿಂಕ ವಿಶ್ಲೇಷಣೆಯಲ್ಲಿ ಭಾಗಿದಾರರ ವಯಸ್ಸು, ಲಿಂಗ…
ಆಹಾರತಜ್ಞರ ಪ್ರಕಾರ ದಿನದ ಮೊದಲ ಆಹಾರವಾಗಿ ಸೇವಿಸಲು ಲಿಂಬೆ ಬೆರೆಸಿದ ನೀರು ಅಥವಾ ಸೇಬಿನ ಶಿರ್ಕಾ ಬೆರೆಸಿದ ನೀರು ಅಥವಾ ಎಳನೀರು ಕುಡಿಯುವುದು ಅತ್ಯುತ್ತಮ ಆಯ್ಕೆಗಳಾಗಿವೆ. ನಂತರ ಸೇವಿಸುವ ಆಹಾರಗಳಿಗೆ ನೀವು ಹಾಲನ್ನು ಬೆರೆಸಿ ಸೇವಿಸಬಹುದು. ಏಕೆಂದರೆ ಲಿಂಬೆನೀರು ಅಥವಾ ಎಳನೀರು ದೇಹದ ಕಲ್ಮಶಗಳನ್ನು ನಿವಾರಿಸಲು ಮತ್ತು ದೇಹಕ್ಕೆ ಅಗತ್ಯವಿರುವ ನೀರಿನ ಅಂಶವನ್ನು ನೀಡಲು ಸಮರ್ಥವಾಗಿವೆ. ಹಾಲು ಈ ಕಾರ್ಯಗಳನ್ನು ನಿರ್ವಹಿಸಲಾರದು. ತಜ್ಞರು ಸಲಹೆ ನೀಡುವ ಪ್ರಕಾರ ದಿನದ ಮೊದಲ ಆಹಾರವಾಗಿ ದೇಹವನ್ನು ಕಲ್ಮಶರಹಿತವಾಗಿಸಲು ಸಹಕರಿಸುವ ದ್ರವಾಹಾರವನ್ನು ಸೇವಿಸಬೇಕು ಹಾಗೂ ಈ ಕಾರ್ಯವನ್ನು ನಿರ್ವಹಿಸಲು ಸುಮಾರು ಮುಕ್ಕಾಲು ಘಂಟೆಯಾದರೂ ಹಾಗೇ ಬಿಡಬೇಕು. ಲಿಂಬೆನೀರಿನ ಬದಲಿಗೆ ಮಜ್ಜಿಗೆ ಅಥವಾ ಛಾಂಛ್ ಸುಲಭ ದ್ರವಾಹಾರಗಳಾಗಿವೆ. ಇವುಗಳನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗಗಳಿಗೆ ಸುಲಭವಾಗುತ್ತದೆ. ಖಾಲಿಹೊಟ್ಟೆಯಲ್ಲಿ ಹಾಲು ಪ್ರಥಮ ಆಹಾರವಾಗಿ ಸೇವಿಸುವುದು ಯಾರಿಗೂ ತರವಲ್ಲ. ಇದು ನಿಮ್ಮ ದೇಹ ಪ್ರಕೃತಿಯನ್ನು ಅವಲಂಬಿಸಿರುತ್ತದೆ. ಒಂದು ವೇಳೆ ನೀವು ವಾತ ಪ್ರಕೃತಿಯ ವ್ಯಕ್ತಿಯಾಗಿದ್ದರೆ (ವಾಯು) ಅಥವಾ ಕಫ ಪ್ರಕೃತಿಯವರಾಗಿದ್ದರೆ (ನೀರು) ಎಂದಿಗೂ…