Author: AIN Author

ನವದೆಹಲಿ :- ಲೋಕಸಭೆಯ ಭದ್ರತಾ ವೈಫಲ್ಯಕ್ಕೆ ವಿಪಕ್ಷದ ಬೆಂಬಲವಿದೆ ಎಂದು PM ನರೇಂದ್ರ ಮೋದಿ ಹೇಳಿದ್ದಾರೆ. ಭದ್ರತಾ ವೈಫಲ್ಯ ಘಟನೆಗೆ ರಾಜಕೀಯ ಬಣ್ಣ ನೀಡುವ ಮೂಲಕ ಈಚಿನ ವಿಧಾನಸಭೆ ಚುನಾವಣಾ ಸೋಲಿನ ಹತಾಶೆಯನ್ನು ವಿಪಕ್ಷಗಳು ಹೊರಹಾಕುತ್ತಿವೆ. ವಿರೋಧ ಪಕ್ಷಗಳ ಗುರಿಯು ನಮ್ಮ ಸರ್ಕಾರವನ್ನು ಕೆಳಗಿಳಿಸುವುದಾಗಿದೆ. ಆದರೆ ನಮ್ಮ ಸರ್ಕಾರದ ಗುರಿಯು ದೇಶಕ್ಕೆ ಉಜ್ವಲ ಭವಿಷ್ಯ ಖಾತ್ರಿಪಡಿಸುವುದಾಗಿದೆ’ ಎಂದು ಹೇಳಿದರು. ‘ಸಂಸತ್ತಿನ ಭದ್ರತಾ ವೈಫಲ್ಯವನ್ನು ಸಮರ್ಥಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಇದು ಭದ್ರತಾ ವೈಫಲ್ಯದಷ್ಟೇ ಗಂಭೀರ ಸಮಸ್ಯೆ’ ಎಂದು ಮೋದಿ ಹೇಳಿರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದರು. ನಿರುದ್ಯೋಗ, ಬೆಲೆ ಏರಿಕೆಯು ಸಂಸತ್ತಿನ ಭದ್ರತಾ ವೈಫಲ್ಯಕ್ಕೆ ಕಾರಣ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಈಚೆಗೆ ಆರೋಪಿಸಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಮೋದಿ ಅವರು ಹೀಗೆ ಹೇಳಿದ್ದಾರೆ. ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇರಿಸಿರುವ ಎಲ್ಲರೂ ಭದ್ರತಾ ವೈಫಲ್ಯ ಕೃತ್ಯವನ್ನು ಖಂಡಿಸಬೇಕು ಎಂದಿದ್ದಾರೆ.

Read More

ಹುಬ್ಬಳ್ಳಿ: ರಾಯಾಪುರದ ಶ್ರೀ ಕೃಷ್ಣ ಬಲರಾಮ ಮಂದಿರದಲ್ಲಿ ಡಿ. 23ರಂದುವೈಕುಂಠ ಏಕಾದಶಿ ನಿಮಿತ್ತ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಇಸ್ಕಾನ್ ಅಧ್ಯಕ್ಷ ರಾಜೀವ ಲೋಚನದಾಸ ತಿಳಿಸಿದರು. ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ದೇವಸ್ಥಾನದ ಪ್ರವೇಶ ಸ್ಥಳದಲ್ಲಿ 15 ಅಡಿ ಎತ್ತರ ಹಾಗೂ 11 ಅಡಿ ಅಗಲದ ಸ್ವರ್ಣ ವರ್ಣದ ಭವ್ಯವಾದ ವೈಕುಂಠ ದ್ವಾರವನ್ನು ಸ್ಥಾಪಿಸಲಾಗುವುದು. ವೈಕುಂಠ ದ್ವಾರದ ಪೂಜೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ದೇವಾಸ್ಥಾನವನ್ನು ವೈಕುಂಠಕ್ಕೆ ಹೋಲಿಕೆಯಾಗುವಂತೆ ಬಣ್ಣ ಬಣ್ಣದ ಸುಗಂಧಿತ ಪುಷ್ಪಗಳಿಂದ ಸಿಂಗರಿಸಲಾಗುವುದು. ವೈಕುಂಠ ದ್ವಾರವು ರಾತ್ರಿ 9 ಗಂಟೆಯವರೆಗೆ ತೆರೆದಿರಲಿದೆ ಎಂದು ವಿವರಿಸಿದರು. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಲಕ್ಷಾರ್ಚನೆ ಸೇವೆಯಲ್ಲಿ ಭಾಗವಹಿಸಬಹುದಾಗಿದೆ. ಇದಕ್ಕಾಗಿ ಶ್ರೀನಿವಾಸ ಗೋವಿಂದನ ಪ್ರತಿಮೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಲಕ್ಷಾರ್ಚನೆಯು ಬೆಳಗ್ಗೆ 10ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ಸಂಜೆ 5 ಗಂಟೆಗೆ ವೆಂಕಟೇಶ್ವ ಹೋಮ ನೆರವೇರಿಸಲಾಗುವುದು. ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ನೃತ್ಯ, ನಾಟಕ, ಸಂಗೀತ, ಇನ್ನಿತರ…

Read More

ಬೆಂಗಳೂರು:- ಪ್ರತಾಪ್ ಸಿಂಹರನ್ನು ಅಮಾನತು ಮಾಡಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ. ಪ್ರತಿಪಕ್ಷಗಳ 141 ಸಂಸದರನ್ನು ಅಮಾನತು ಮಾಡಿರುವುದು ನಿಜಕ್ಕೂ ಖಂಡನೀಯ. ಭಾರತೀಯ ಸಂಸತ್ ವ್ಯವಸ್ಥೆಯ ಇತಿಹಾಸದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಂಸದರನ್ನು ಅಮಾನತು ಮಾಡಿರುವುದು ಇದೇ ಮೊದಲು ಎಂದಿದ್ದಾರೆ. ಸಂಸತ್ ಭವನದ ರಕ್ಷಣಾ ವೈಫಲ್ಯದ ಬಗ್ಗೆ ಉತ್ತರ ಕೊಡುವಂತೆ ಆಗ್ರಹಿಸಿ ವಿರೋಧ ಪಕ್ಷಗಳು ನ್ಯಾಯಯುತವಾಗಿ ಸಂಸತ್ ಕಲಾಪದಲ್ಲಿ ಆಗ್ರಹಿಸಿವೆ. ಆದರೆ, ಪ್ರತಿಪಕ್ಷಗಳ ಮಾತಿಗೆ ಕೇಂದ್ರ ಸರ್ಕಾರವು ಮನ್ನಣೆ ನೀಡದೆ ಹಿಟ್ಲರ್ ಧೋರಣೆ ತಾಳಿದೆ ಎಂದು ಟೀಕಿಸಿದ್ದಾರೆ. ಪ್ರಜಾಪ್ರಭುತ್ವದ ಪರಮೋಚ್ಛ ವೇದಿಕೆಯಾಗಿರುವ ಸಂಸತ್ತಿನ ಮೇಲಿನ ದಾಳಿಯ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಅವರು ಆಗ್ರಹಿಸಿರುವ ಅವರು ಸಂಸತ್ ಮೇಲಿನ ದಾಳಿಯ ಭದ್ರತಾ ವೈಫಲ್ಯಕ್ಕೆ ಉತ್ತರ ಕೊಡಬೇಕಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ್ ಶಾ ಅವರ ಕರ್ತವ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Read More

ರಾಯಚೂರು:- MP ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಸಚಿವ ಭೋಸರಾಜು ಹೇಳಿದ್ದಾರೆ. ಈ ಬಾರಿ ದೇಶದಲ್ಲಿ ಹಿಂದೆ ಜನಪರ ಆಡಳಿತ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಒಲವನ್ನು ತೋರುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವೆಲ್ಲರೂ ರಾಯಚೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲುವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Read More

ರೋಹಿತ್ ಶರ್ಮಾರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕಿತ್ತು ಹಾಕಿದ ಹಿನ್ನೆಲೆ, ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಾರ್ ಶುರು ಮಾಡಿಕೊಂಡಿದ್ದಾರೆ. ರೋಹಿತ್ ಕ್ಯಾಪ್ಟನ್ ಆಗಿದ್ದಾಗ 13.5 ಮಿಲಿಯನ್ ಎಕ್ಸ್ ಫಾಲೋವರ್ ಗಳನ್ನು ಹೊಂದಿದ್ದ ಮುಂಬೈ ಫಾಲೋವರ್ ಸಂಖ್ಯೆ ಇದೀಗ ಏಕಾಏಕಿ 12.3 ಮಿಲಿಯನ್ ಗೆ ಇಳಿಕೆಯಾಗಿದೆ. ರೋಹಿತ್ ರನ್ನು ನಾಯಕತ್ವದಿಂದ ಕಿತ್ತು ಹಾಕಿದ ಬೆನ್ನಲ್ಲೇ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಜೆರ್ಸಿ, ಬಾವುಟ ಸುಟ್ಟು ಹಾಕಿ ಆಕ್ರೋಶ ಹೊರಹಾಕಿದ್ದರು. ಇದೀಗ ನಮಗೆ ಮುಂಬೈ ಇಂಡಿಯನ್ಸ್ ಗಿಂತಲೂ ರೋಹಿತ್ ಶರ್ಮಾ ದೊಡ್ಡವರು ಎಂದು ಎಕ್ಸ್ ನಲ್ಲಿ ಅಭಿಯಾನವನ್ನೇ ಶುರು ಮಾಡಿದ್ದಾರೆ.

Read More

ಬೆಂಗಳೂರು:- ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರಿಗೆ ಕ್ರಿಸ್ ಮಸ್ ಗಿಫ್ಟ್ ಕೊಟ್ಟಿದೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ 1000 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಡಿ. 22 ರಿಂದ 24 ರವರೆಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಕ್ಕೆ ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ ನಡೆದಿದೆ. 25 ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಗಳ ಕಾರ್ಯಾಚರಣೆ ಮಾಡಲಾಗಿದೆ. ರಾಜ್ಯದ ಧರ್ಮಸ್ಥಳ, ಕುಕ್ಕೆ, ಶಿವಮೊಗ್ಗ, ಹಾಸನ, ಗೋಕರ್ಣ, ಶಿರ್ಶಿ ಸೇರಿದಂತೆ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಬಸ್ ಗಳು ಹೊರಡಲಿವೆ. ತಮಿಳುನಾಡು, ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ. ಪ್ರಯಾಣಿಕರು ಮೊದಲೇ ಸೀಟ್ ರಿಸರ್ವ್ ಮಾಡಬಹುದು. ಇ ಟಿಕೆಟ್ ಸಹ ವೆಬ್ ಸೈಟ್ ಮೂಲಕ ಪಡೆಯಬಹುದು. ನಾಲ್ಕು ಹಾಗೂ ನಾಲ್ಕಕ್ಕಿಂತ ಹೆಚ್ಚಿನ ಟಿಕೆಟ್ ಕಾಯ್ದಿರಿಸಿದ್ರೇ 5 % ರಿಯಾಯಿತಿ ನೀಡಲಾಗಿದೆ. ಹೋಗುವ ಹಾಗೂ ಬರುವ ಟಿಕೆಟ್ ಕಾಯ್ದಿರಿಸಿದ್ರೇ 10% ರಿಯಾಯಿತಿ ನೀಡಲಾಗಿದೆ.

Read More

ಹುಬ್ಬಳ್ಳಿ:- ಸಿದ್ದರಾಮಯ್ಯ 6 ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿರುವುದರಿಂದ ಅಧಿಕಾರಿಗಳು ಯೋಜನೆಯಲ್ಲಿ ಕಮಿಷನ್ ಟಾರ್ಗೆಟ್ ಫಿಕ್ಸ್ ಮಾಡುತ್ತಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ ಎಂದು ಅನಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ 6 ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ರಾಜ್ಯದಲ್ಲಿ ಸರ್ಕಾರ ಬಂದು 6 ತಿಂಗಳು ಆದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೇವಲ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತಿದ್ದಾರೆ. ಇವರು ಅಧಿಕಾರಕ್ಕೆ ಬರುವ ಮುನ್ನ ನೀಡಿರುವ ಭರವಸೆ ಈಡೇರಿಸಿಲ್ಲ. ಅವರೇ ಮಧ್ಯಂತರ ಆರ್ಥಿಕ ಸ್ಥಿತಿಗತಿ ಕುರಿತು ವರದಿ ಮಂಡನೆ ಮಾಡಿದರು. ಆದರೆ, ಅದರಿಂದ ಏನು ಸುಧಾರಣೆ ಆಗಿಲ್ಲ ಎಂದು ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ. ಪ್ರತಿ ವರ್ಷ ಬಂಡವಾಳ ವೆಚ್ಚ ಹೆಚ್ಚಾಗುತ್ತಾ ಹೋಗಬೇಕು. ಆದರೆ, ಈ ವರ್ಷ ಕಡಿಮೆಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತೆಗೆದುಕೊಂಡು ಹೋಗಿದ್ದಾರೆ.…

Read More

ಬೆಂಗಳೂರು:- 14 ವರ್ಷದ ಬಾಲಕಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಅಸಜವಾಗಿ ಬೆಳೆದಿದ್ದ ಬೆನ್ನುಮೂಳೆಯನ್ನು ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಡಾ.ರಾಜಕುಮಾರ್ ದೇಶಪಾಂಡೆ ನೇತೃತ್ವದ ತಂಡವು ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಡಾ.ರಾಜಕುಮಾರ್‌, ನೈಜಿರಿಯಾ ಮೂಲದ 14ರ ಸಾರಾ (ಹೆಸರು ಬದಲಿಸಲಾಗಿದೆ) ಎಂಬ ಬಾಲಕಿಗೆ 6 ತಿಂಗಳ ಹಿಂದೆ ಬೆನ್ನಿನ ನೋವು ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲದೆ, ಬೆನ್ನಿನ ಬಲಭಾಗದಲ್ಲಿ ಗಡ್ಡೆ ಬೆಳೆದು ಇದರಿಂದ ಬಲಭಾಗದ ಭುಜ ಎತ್ತರಕ್ಕೆ ಹೋಗಿತ್ತು. ಜತೆಗೆ ಬೆನ್ನಿನ ಮೂಳೆಯು ಡೊಂಕಾಗಿರುವುದು ಕಂಡು ಬಂದಿತ್ತು. ಸಂಪೂರ್ಣ ಎಂಆರ್‌ಐ (MRI) ಸ್ಕ್ಯಾನ್ ಮಾಡಿಸಿದ ಬಳಿಕ ಬಾಲಕಿಯ ಬೆನ್ನುಮೂಳೆಯ ವಕ್ರತೆಯು D4 (ಥೊರಾಸಿಕ್ ಬೆನ್ನುಮೂಳೆ) ಯಿಂದ L1 (ಸೊಂಟದ ಬೆನ್ನುಮೂಳೆ) ವರೆಗೆ ಮಧ್ಯಮ ಸ್ಕೋಲಿಯೋಸಿಸ್ ಅನ್ನು ಅಂದರೆ, ಬೆನ್ನಿನ ಮೂಳೆಯು ಸುಮಾರು 60 ಡಿಗ್ರಿಗೆ ಸರಿದಿತ್ತು ಎಂದು ವಿವರಿಸಿದರು. ಈ ರೀತಿಯ ಪ್ರಕರಣಗಳು ಅತಿ ಅಪರೂಪವಾಗಿರುತ್ತದೆ. ಯಾವುದೇ ಕುಟುಂಬದ ಇತಿಹಾಸವಿಲ್ಲದೆಯೂ, ಹುಟ್ಟಿನಿಂದಲೂ ಯಾವುದೇ ಸಮಸ್ಯೆ ಇರಲಿಲ್ಲ. ನಂತರದಲ್ಲಿ ಆಕೆಯ…

Read More

ಬೆಂಗಳೂರು:- ಪಾನ್ ಬ್ರೋಕರ್ ಮೇಲೆ ಹಲ್ಲೆ ನಡೆಸಿ 60 ಲಕ್ಷ ದರೋಡೆ ಮಾಡಿದ್ದ 5 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಮೊಹಮ್ಮದ್ ರಿಜ್ವಾನ್(24), ಆಶ್ರಫ್(20), ಸತೀಶ್(19), ದಿವಾಕರ್(19) ಮತ್ತು ಮೊಹಮ್ಮದ್ ಇರ್ಪಾನ್(20) ಬಂಧಿತರು. ಪಾನ್‍ಬ್ರೋಕರ್ ಕೆಲಸ ಮಾಡುವ ಕೆಜಿಎಫ್ ಮೂಲದ ಸಂಕೇತ್ ಎಂಬುವರಿಗೆ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಆದರ್ಶ್ ಲೇಔಟ್ ಹಳೆಯ ರಿಜಿಸ್ಟರ್ ಕಚೇರಿ ರಸ್ತೆಯಲ್ಲಿರುವ ಸಿದ್ದಪ್ಪಾಜಿ ಉದ್ಯಾನವನ ಬಳಿ ಇರುವ ಗ್ರಂಥಾಲಯದ ಹತ್ತಿರ ಐದು ಮಂದಿ ದರೋಡೆಕೋರರು ಕರೆಸಿಕೊಂಡಿದ್ದಾರೆ. ಸಂಕೇತ್ ಅವರು ಸ್ಥಳಕ್ಕೆ ಬರುತ್ತಿದ್ದಂತೆ ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಿ ಅವರ ಬಳಿ ಇದ್ದ 60 ಲಕ್ಷ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಪ್ರಮುಖ ಆರೋಪಿ, ಕುರುಬರಹಳ್ಳಿಯ ಜೆಸಿ ನಗರ ನಿವಾಸಿ ಮೊಹಮ್ಮದ್ ರಿಜ್ವಾನ್(ಎಂಬಾತನನ್ನು ಬಂಧಿಸಿದ್ದಾರೆ.

Read More

ಹುಬ್ಬಳ್ಳಿ:ಅದೊಂದು ವಿಚಿತ್ರ, ವಿಲಕ್ಷಣ ಪ್ರೇಮ ಕಥೆ. ಆ ಪ್ರೇಮಕಥೆಯಲ್ಲಿದ್ದವರು ವಿವಾಹಿತರು. ಅವನು ಎರಡು ಮಕ್ಕಳ ತಂದೆ. ಅವಳು ಕೂಡಾ ವಿವಾಹಿತೆ. ಆದ್ರೆ ಆತ ತನ್ನ ಹೆಂಡತಿ ಸಹೋದರಿ ಜೊತೆ‌‌ ಪ್ರೇಮಪಾಶದಲ್ಲಿ ಸಿಲುಕ್ಕಿದ್ದ. ಅವಳು ಗಂಡನ ಬಿಟ್ಟು ಮಾವನ ಜೊತೆ ಸಂಭಂದ ಬೆಳಸಿದ್ಲು ಕದ್ದುಮುಚ್ಚಿ ಇದ್ದ ಮಾವ-ನಾದಿನಿ ಸಂಭಂದದ ಗುಟ್ಟು ರಟ್ಟಾಗಿತ್ತು. ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು ಆ ಜೋಡಿ. ಆದ್ರೆ ಇದೀಗ ಆ ಜೋಡಿ ನೇಣಿಗೆ ಕೊರಳಡ್ಡಿದೆ. ಅವರದ್ದು ಬೆಂಗಳೂರು. ಆದ್ರೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ (Hubballi). ಆತ್ಮಹತ್ಯೆಗೂ ಮುನ್ನ ಆ ಜೋಡಿ ಸೆಲ್ಪಿ ವಿಡಿಯೋ ಮಾಡಿಕೊಂಡಿದೆ. ಅದೂ ಅವರಿಗೆ ಸಹಾಯ ಮಾಡಿದ ಆಟೋ ಡ್ರೈವರ್ ಮನೆಯಲ್ಲಿ. ಏನಿದು ಮಾವ-ನಾದಿನಿ ಸೆಲ್ಫಿ ಸುಸೈಡ್ (suicide) ಕಥೆ ಅಂತೀರಾ ಈ ಸ್ಟೋರಿ ನೋಡಿ… ಒಂದು ಕಡೆ ಮನೆಯಲ್ಲಿ ವೇಲ್ ಬಿಗಿದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಜೋಡಿ…ಮತ್ತೊಂದು ಕಡೆ ಪಕ್ಕದಲ್ಲಿ ಬೀಯರ್ ಬಾಟಲಿ.. ಎಸ್ ಇವೆಲ್ಲ ದೃಶ್ಯಗಳು…

Read More