ಹುಬ್ಬಳ್ಳಿ:ಅದೊಂದು ವಿಚಿತ್ರ, ವಿಲಕ್ಷಣ ಪ್ರೇಮ ಕಥೆ. ಆ ಪ್ರೇಮಕಥೆಯಲ್ಲಿದ್ದವರು ವಿವಾಹಿತರು. ಅವನು ಎರಡು ಮಕ್ಕಳ ತಂದೆ. ಅವಳು ಕೂಡಾ ವಿವಾಹಿತೆ. ಆದ್ರೆ ಆತ ತನ್ನ ಹೆಂಡತಿ ಸಹೋದರಿ ಜೊತೆ ಪ್ರೇಮಪಾಶದಲ್ಲಿ ಸಿಲುಕ್ಕಿದ್ದ. ಅವಳು ಗಂಡನ ಬಿಟ್ಟು ಮಾವನ ಜೊತೆ ಸಂಭಂದ ಬೆಳಸಿದ್ಲು ಕದ್ದುಮುಚ್ಚಿ ಇದ್ದ ಮಾವ-ನಾದಿನಿ ಸಂಭಂದದ ಗುಟ್ಟು ರಟ್ಟಾಗಿತ್ತು. ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು ಆ ಜೋಡಿ. ಆದ್ರೆ ಇದೀಗ ಆ ಜೋಡಿ ನೇಣಿಗೆ ಕೊರಳಡ್ಡಿದೆ. ಅವರದ್ದು ಬೆಂಗಳೂರು. ಆದ್ರೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ (Hubballi). ಆತ್ಮಹತ್ಯೆಗೂ ಮುನ್ನ ಆ ಜೋಡಿ ಸೆಲ್ಪಿ ವಿಡಿಯೋ ಮಾಡಿಕೊಂಡಿದೆ. ಅದೂ ಅವರಿಗೆ ಸಹಾಯ ಮಾಡಿದ ಆಟೋ ಡ್ರೈವರ್ ಮನೆಯಲ್ಲಿ. ಏನಿದು ಮಾವ-ನಾದಿನಿ ಸೆಲ್ಫಿ ಸುಸೈಡ್ (suicide) ಕಥೆ ಅಂತೀರಾ ಈ ಸ್ಟೋರಿ ನೋಡಿ…
ಒಂದು ಕಡೆ ಮನೆಯಲ್ಲಿ ವೇಲ್ ಬಿಗಿದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಜೋಡಿ…ಮತ್ತೊಂದು ಕಡೆ ಪಕ್ಕದಲ್ಲಿ ಬೀಯರ್ ಬಾಟಲಿ.. ಎಸ್ ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಚೋಟಾ ಮುಂಬೈ ಹುಬ್ಬಳ್ಳಿ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದೆ. ಎಸ್ ನಿನ್ನೆ ಭಾನುವಾರ ಸಂಜೆ ಹುಬ್ಬಳ್ಳಿಯ ಮೊರಾರ್ಜಿ ನಗರದಲ್ಲಿ ವಿವಾಹಿತರಿಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಲ್ಲಿ ಆತ್ಮಹತ್ಯೆಗೆ ಶರಣಾದವರ ಹೆಸರು 36 ವರ್ಷದ ಲೋಕೇಶ್ ಮತ್ತು 26 ವರ್ಷದ ಶಾಂತಾ. ಮೂಲತಃ ಇವರಿಬ್ಬರೂ ಬೆಂಗಳೂರು ನಿವಾಸಿಗಳು. ಭಾನುವಾರ ಸಂಜೆ ಹುಬ್ಬಳ್ಳಿಗೆ ಬಂದ ಇವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ರ. ಮೊದ ಮೊದಲು ಪ್ರೇಮಿಗಳಿಬ್ಬರ ಆತ್ಮಹತ್ಯೆ ಎಂದು ಸುದ್ದಿಯಾಗಿತ್ತು. ಆದ್ರೆ ಅಸಲಿಗೆ ಲೋಕೇಶ್ ಹಾಗೂ ಶಾಂತಾ ಸಂಬಂಧದಲ್ಲಿ ಮಾವ-ನಾದಿನಿ.
ಎಸ್ ಲೋಕೇಶ್ ಗೆ ಪಾರ್ವತಿ ಎಂಬುವರ ಜೊತೆ ಮದುವೆಯಾಗಿತ್ತು.ಮದುವೆಯಾಗಿ ಎರಡು ಮಕ್ಕಳಿವೆ. ತನ್ನ ಹೆಂಡತಿಯ ಸಹೋದರಿ ಶಾಂತಾ ಜೊತೆ ಲೋಕೇಶ್ ಅಕ್ರಮ ಸಂಬಂಂಧ ಹೊಂದಿದ್ದ. ಕದ್ದು ಮುಚ್ಚಿ ಹೆಂಡತಿಯ ಸಹೋದರಿ ಅರ್ಥಾತ್ ನಾದಿನಿ ಶಾಂತಾ ಜೊತೆ ತಿರುಗಾಡ್ತಿದ್ದ. ಕಳೆದ ಗುರುವಾರ ಪಾರ್ವತಿಗೆ ಈ ಜೋಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿತ್ತು. ಇದರಿಂದ ಹೆಂಡತಿ ಪಾರ್ವತಿಗೆ ಪಿತ್ತ ನೆತ್ತಿಗೇರಿತ್ತು. ತನ್ನ ತಂಗಿಯ ಜೊತೆ ಗಂಡನನ್ನ ಕಂಡ ಪಾರ್ವತಿ ಕುಸಿದು ಹೋಗಿದ್ಲು. ಯಾವಾಗ ಹೆಂಡತಿ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಲೋಕೇಶ್ ಹಾಗೂ ಶಾಂತಾ ತಗಲಾಕೊಂಡ್ರೋ ಅವರ ಮಾನ ಮಾರ್ಯದೆ ಹೋಗಿತ್ತು.
ಇದಾದ ಬಳಿಕ ನಾವಿನ್ನು ಇರಬಾರದು ಎಂದು ಅಂದುಕೊಂಡ ಮಾವ-ನಾದಿನಿ ಸಾಯಬೇಕು ಅಂತಾ ಡಿಸೈಡ್ ಮಾಡ್ತಾರೆ. ಆದರೆ ಅವರು ಸಾಯೋಕೆ ಆಯ್ಕೆ ಮಾಡಿಕೊಂಡಿದ್ದು ಹುಬ್ಬಳ್ಳಿಯನ್ನ. ಹುಬ್ಬಳ್ಳಿಯ ಲಾಡ್ಜ್ ಒಂದರಲ್ಲಿ ಅವರು ಆತ್ಮಹತ್ಯೆ ಮಾಡಿಕೊಳ್ಳೋಕೆ ಪ್ಲ್ಯಾನ್ ಮಾಡಿದ್ರು. ಹುಬ್ಬಳ್ಳಿಗೆ ಬಂದಿಳಿದು ಆಟೋ ಒಂದನ್ನ ಕೇಳ್ತಾರೆ. ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ನಲ್ಲಿ ಆಟೋ ಹತ್ತಿದ ಜೋಡಿಗೆ ಆಟೋ ಡ್ರೈವರ್ ಪರಿಚಯ ಆಗತ್ತೆ
ಅಸಲಿಗೆ ಆಟೋ ಡ್ರೈವರ್ ಹಾಗೂ ಆ ಜೋಡಿಯ ಸಮುದಾಯ ಒಂದೇ ಆಗಿರೋ ಕಾರಣಕ್ಕೆ ಆಟೋ ಚಾಲಕ ನಮ್ಮ ಮನೆಯಲ್ಲಿ ಫ್ರೆಷ್ ಆಗಿ ಎಂದು ಹೇಳ್ತಾನೆ. ಅವರನ್ನ ಬಿಟ್ಟು ಆಟೋ ಚಾಲಕ ಹೊರ ಹೋದಾಗ ಅವರಿಬ್ಬರೂ ಅದೇ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮನ್ನು ನಂಬಿ ಆಟೋ ಚಾಲಕ ಮನೆ ಕೊಟ್ಟಿರೋದಕ್ಕೆ ಆತ್ಮಹತ್ಯೆಗೂ ಮುನ್ನ ಆಟೋ ಚಾಲಕ ಮಾರುತಿ ಅವರಲ್ಲಿ ಲೋಕೇಶ್-ಶಾಂತಾ ಕ್ಷಮೆಯನ್ನು ಕೇಳಿದ್ದಾರೆ. ಇದಲ್ಲದೆ ಲೋಕೇಶ್ ತನ್ನ ಹೆಂಡತಿಗೆ ಕೊನೆಯ msg ಕೂಡಾ ಮಾಡಿದ್ದಾನೆ.
ಇದೊಂದು ವಿಲಕ್ಷಣ ಕಥೆ ಎಂದು ಯಾಕೆ ಹೇಳಿದ್ವಿ ಅಂದರೆ ಮೊರಾರ್ಜಿ ನಗರದಲ್ಲಿ ಮನೆಯೊಂದರಲ್ಲಿ ನಿರ್ಜೀವವಾಗಿ ನೇತಾಡುತ್ತಿದ್ದ ಆ ಇಬ್ಬರೂ ವಿವಾಹಿತರಾಗಿದ್ದರು. ನೇಣಿಗೆ ಕೊರಳೊಡ್ಡಿದ್ದ ಶಾಂತಾಗೆ ಈಗಾಗಲೇ ರಮೇಶ್ ಎಂಬುವರ ಜೊತೆ ಮದುವೆಯಾಗಿತ್ತು. ಈ ಹಿಂದೆ ಶಾಂತಾ ಇನ್ನೂ ಇಬ್ಬರ ಜೊತೆ ಮದುವೆಯಾಗಿದ್ದಳು. ಆದರೆ ಆ ಮದುವೆಗಳನ್ನು ಕಡಿದುಕೊಂಡಿದ್ದಳು.
ರಮೇಶ್ ಜೊತೆ ಶಾಂತಾದು ಮೂರನೇ ಮದುವೆ ಎನ್ನಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಇದೇ ಶಾಂತಾ ಮತ್ತೊಬ್ಬರ ಜೊತೆ ಅಫೇರ್ ಇರೋದು ಗಂಡ ರಮೇಶ್ನಿಗೆ ಗೊತ್ತಾಗಿತ್ತು. ಇದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅದು ಹೇಗೋ ಪೊಲೀಸರು ಸರಿ ಮಾಡಿದ್ದರು. ಅದಾದ ಬಳಿಕವೂ ಶಾಂತಾ ತನ್ನ ಚಟ ಬಿಟ್ಟಿರಲಿಲ್ಲ. ಅಕ್ಕನ ಗಂಡನ ಜೊತೆಯೇ ಸಂಬಂಧ ಕುದುರಿಸಿಕೊಂಡಿದ್ದಳು. ಆದ್ರೆ ಅದು ಯಾರಿಗೂ ಗೊತ್ತಾಗಲ್ಲ ಅಂದುಕೊಂಡ ಶಾಂತಾ, ಅಕ್ಕನ ಗಂಡನ ಜೊತೆ ಸಂಬಂಧ ಬೆಳೇಸ್ತಾಳೆ.
ಮೊದ ಮೊದಲು ಇದು ಯಾರಿಗೂ ಗೊತ್ತಾಗಿರಲ್ಲ. ಆದ್ರೆ ಲೋಕೇಶ್ ನ ಹೆಂಡತಿಗೆ ಇವರಿಬ್ಬರ ಮೇಲೆಯೂ ಅನುಮಾನ ಇರುತ್ತದೆ. ಅದು ಕಳೆದ ಗುರುವಾರ ಕನ್ಫರ್ಮ್ ಆಗುತ್ತೆ. ಕಾಮದಾಟದಲ್ಲಿ ತೊಡಗಿದ್ದಾಗಲೇ ಲೊಕೇಶ್ ಮತ್ತು ಶಾಂತಾ ಜೋಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳ್ತಾರೆ. ಇದಾದ ಬಳಿಕ ಅವರಿಬ್ಬರೂ ಬೆಂಗಳೂರಿನಿಂದ ಬಂದು ಹುಬ್ಬಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಬೀಯರ್ ಸೇವನೆ ಮಾಡಿದ್ದಾರೆ. ಮೃತ ದೇಹದ ಪಕ್ಕ ಬೀಯರ್ ಬಾಟಲ್ ಗಳಿವೆ. ಪೊಲೀಸರು ಆಟೋ ಚಾಲಕ ಮಾರುತಿಯನ್ಮ ವಿಚಾರಣೆ ಮಾಡುತ್ತಿದ್ದಾರೆ. ನಿನ್ನೆ ಸಂಜೆ ಮಾವ ನಾದಿನಿ ಆತ್ಮಹತ್ಯೆ ಸುದ್ದಿ ತಿಳಿಯುತ್ತಲೇ ಇಂದು ಲೋಕೇಶ್ ಹೆಂಡತಿ ಪಾರ್ವತಿ ಮತ್ತು ಶಾಂತಾ ಗಂಡ ರಮೇಶ್ ಹುಬ್ಬಳ್ಳಿಗೆ ಬಂದಿದ್ದರು.
ಅವರನ್ನು ಹಳೇ ಹುಬ್ಬಳ್ಳಿ ಪೊಲೀಸರು ವಿಚಾರಣೆ ಮಾಡಿದರು. ಇತ್ತ ಆಟೋ ಡ್ರೈವರ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಆಟೋ ಚಾಲಕನ ಜೀವನ ಕೂಡಾ ಬೀದಿಗೆ ಬಿದ್ದಂತಾಗಿದೆ. ಆತನ ಮನೆಯ ಮಾಲೀಕ ಮೊದಲು ಮನೆ ಖಾಲಿ ಮಾಡಿ ಎನ್ನುತ್ತಿದ್ದಾರಂತೆ. ಮಾನವೀಯತೆ ತೋರಿಸಿದ್ದೇ ತಪ್ಪಾಯ್ತಾ? ಎಂದು ಆಟೋ ಚಾಲಕನ ಪತ್ನಿ ಕಣ್ಣೀರು ಹಾಕುತ್ತಿದ್ದಾರೆ.
ಒಟ್ಟಾರೆ ಅನೈತಿಕ ಸಂಬಂಧಕ್ಕೆ ಎರಡು ಜೀವಗಳು ಬಲಿಯಾಗಿವೆ. ಇನ್ನೊಂದು ಕಡೆ ಗಂಡನ ಕಳೆದುಕೊಂಡ ಹೆಂಡತಿ, ಹೆಂಡತಿಯ ಕಳೆದುಕೊಂಡ ಗಂಡ ದಿಕ್ಕು ತೋಚದಂತಹ ಸ್ಥಿತಿಯಲ್ಲಿದ್ದಾರೆ. ಪಾಪ ಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಂಡಿರೋದಂತೂ ಸೆಲ್ಫಿ ವಿಡಿಯೋ ಮೂಲಕ ಬಯಲಾಗಿದೆ.