ಬಾಲಿವುಡ್ ಬ್ಯೂಟಿ ತೃಪ್ತಿ ದಿಮ್ರಿ (Triptii Dimri) ಅವರು ಸದ್ಯ ಪಡ್ಡೆಹುಡುಗರ ಎದೆ ಬಡಿತ ಹೆಚ್ಚಿಸಿದ್ದಾರೆ. ನಯಾ ಫೋಟೋಶೂಟ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ‘ಅನಿಮಲ್’ (Animal) ಬ್ಯೂಟಿಯ ಹೊಸ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇಂಟರ್‌ನೆಟ್ ಸೆನ್ಸೇಷನ್ ಕ್ವೀನ್ ತೃಪ್ತಿ ಅವರು ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತೃಪ್ತಿ ಬ್ಯೂಟಿಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಸಖತ್ ಹಾಟ್ ಆಗಿದ್ದೀರಾ ಎಂದೆಲ್ಲಾ ನಟಿಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ ‘ಅನಿಮಲ್’ ಚಿತ್ರದಲ್ಲಿ ಸೆಕೆಂಡ್ ಹೀರೋಯಿನ್ ಅದ್ಯಾವಾಗ ದರ್ಶನ ಕೊಟ್ಟ ದಿನದಿಂದ ತೃಪ್ತಿ ದಿಮ್ರಿ ಲಕ್ ಬದಲಾಯ್ತು. ರಶ್ಮಿಕಾ (Rashmika Mandanna) ನ್ಯಾಷನಲ್ ಕ್ರಶ್ ಅಲ್ಲ, ನೀವು ನಿಜವಾದ ನ್ಯಾಷನಲ್ ಕ್ರಶ್ ಎಂದು ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ರಣ್‌ಬೀರ್ (Ranbir Kapoor) ಜೊತೆ ಅರೆ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ತೃಪ್ತಿಗೆ ಇದೀಗ ಬಾಲಿವುಡ್‌ನಲ್ಲಿ ಬೇಡಿಕೆ ಜಾಸ್ತಿ ಆಗಿದೆ. ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಗೆ ಅವಕಾಶಗಳು ಒಲಿದು ಬರುತ್ತಿವೆ.
Author: AIN Author
ಹುಬ್ಬಳ್ಳಿ: ‘ವೀರಶೈವ ಲಿಂಗಾಯತ ಸಮಾಜ ಸಂಘಟಿತವಾಗಬೇಕಿದೆ. ಮುಖಂಡರು ವೈಯಕ್ತಿಕ ಹಿತಾಸಕ್ತಿ ಮರೆತು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ’ ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ನಗರದ ಮೂರುಸಾವಿರ ಮಠದ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಘಟಕದಿಂದ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ದಾವಣಗೆರೆಯಲ್ಲಿ ನಡೆಯಲಿರುವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಅಧಿವೇಶನದ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ‘ಸಂಘಟನೆ, ಒಗ್ಗಟ್ಟು, ಐಕ್ಯತೆ ಇದ್ದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ದಾವಣಗೆರೆಯಲ್ಲಿ ನಡೆಯಲಿರುವ ಮಹಾಸಭೆಯಲ್ಲಿ ಸಮಾಜದ ಎಲ್ಲರೂ ಭಾಗವಹಿಸುವ ಮೂಲಕ ಲಿಂಗಾಯತ ಸಮಾಜ ಸಂಘಟಿತವಾಗಿದೆ ಎಂಬುದನ್ನು ಇಡೀ ದೇಶಕ್ಕೆ ತೋರಿಸಬೇಕು. ಸಮಾಜದ ಏಳಿಗೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸೇವೆ ಶ್ಲಾಘನೀಯ’ ಎಂದರು. ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, ರಾಜ್ಯದಲ್ಲಿ 60 ಲಕ್ಷಕ್ಕೂ ಅಧಿಕ ಲಿಂಗಾಯತ ಸಮಾಜದ ಜನರಿದ್ದಾರೆ. ಆದರೆ, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಮೀಸಲಾತಿಗಾಗಿ…
ತಮಿಳುನಾಡು:- ನಿರಂತರ ಮಳೆಗೆ ತಮಿಳುನಾಡು ಅಕ್ಷರಸಹ ತತ್ತರಿಸಿ ಹೋಗಿದ್ದು, ಅಲ್ಲಿನ ಮುಖ್ಯಮಂತ್ರಿ MK ಸ್ಟಾಲಿನ್ ಅವರು, ಕೇಂದ್ರಕ್ಕೆ 12,000 ಕೋಟಿ ರೂ. ನೆರವು ಕೋರಿದ್ದಾರೆ. ಈ ಸಂಬಂಧ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರಾಜ್ಯದ ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ತಕ್ಷಣದ ಪರಿಹಾರಕ್ಕಾಗಿ 7,300 ಕೋಟಿ ಮತ್ತು ಶಾಶ್ವತ ಪರಿಹಾರ ಎಂದು 12,000 ಕೋಟಿ ರೂ. ಹಣ ಕೇಳಿದ್ದೇನೆ. ಈಗಾಗಲೇ ಪ್ರವಾಹದಿಂದ ತೊಂದರೆ ಅನುಭವಿಸಿದ ಸಂತ್ರಸ್ತರಿಗೆ 6000 ರೂಪಾಯಿ ಪರಿಹಾರ ಘೋಷಿಸಿದ್ದೇವೆ. ಅದನ್ನು ವಿತರಿಸಲಾಗುತ್ತಿದೆ. ನಾವು ಪ್ರಧಾನಿ ಅವರಿಂದ ಪರಿಹಾರ ನಿಧಿಯನ್ನು ಪಡೆದಾಗ ಮಾತ್ರ ಪರಿಹಾರ ಕಾರ್ಯವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಸಾಧ್ಯ’ ಎಂದು ಸ್ಟಾಲಿನ್ ಹೇಳಿದರು. ಪ್ರಧಾನಿಯನ್ನು ಭೇಟಿಯಾಗುವ ಮುನ್ನ ಮಾತನಾಡಿದ ಸಿಎಂ, ‘ತಕ್ಷಣದ ಪರಿಹಾರವಾಗಿ, ನಾನು ರಾಷ್ಟ್ರೀಯ ವಿಪತ್ತು ನಿಧಿಯಿಂದ ಹಣವನ್ನು ಕೇಳುತ್ತೇನೆ. ತಮಿಳುನಾಡು ನಿರಂತರವಾಗಿ ಎರಡು ವಿಪತ್ತುಗಳನ್ನು ಎದುರಿಸುತ್ತಿದ್ದು, ಶೀಘ್ರವೇ ಹಣ ಬಿಡುಗಡೆ ಮಾಡುವಂತೆ ನಾನು ಪ್ರಧಾನಿಯವರನ್ನು ಒತ್ತಾಯಿಸುತ್ತೇನೆ’ ಎಂದು ಹೇಳಿದ್ದರು.
ಚನ್ನೈ: ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಎಂಎಸ್ ಧೋನಿ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಅವರಿಗೆ ಮದ್ರಾಸ್ ಹೈಕೋರ್ಟ್ 15 ದಿನಗಳ ಜೈಲು ಶಿಕ್ಷೆ ವಿಧಿಸಿದೆ. 2013ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ. ಅವರು ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಪ್ರಕರಣದ ತನಿಖೆ ನಡೆಸಿದ್ದ ಐಪಿಎಸ್ ಅಧಿಕಾರಿ ಸಂಪತ್ ಕುಮಾರ್ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. ಈ ಆರೋಪದ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, 2014 ರಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಎಂಎಸ್ ಧೋನಿ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಸ್ಯಾಂಡಲ್‌ವುಡ್ (Sandalwood) ಸಲಗ ದುನಿಯಾ ವಿಜಯ್ (Duniya Vijay) ಅವರು ‘ಭೀಮ’ನಾಗಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಇದರ ನಡುವೆ ಅಭಿಮಾನಿಗಳಿಗೆ ವಿಜಯ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ದುನಿಯಾ ವಿಜಯ್ ಮತ್ತು ಮಗಳು ಮೋನಿಕಾ(Monica Vijay) ನಟಿಸುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಇತ್ತೀಚೆಗೆ ದೊಡ್ಡ ಮಗಳು ಮೋನಿಕಾ ಸಿನಿಮಾರಂಗಕ್ಕೆ ಬರೋದಾಗಿ ದುನಿಯಾ ವಿಜಯ್ ಅನೌನ್ಸ್ ಮಾಡಿದ್ದರು. ಅದರಂತೆ ಇದೀಗ ಮೋನಿಕಾ ವಿಜಯ್ ಚೊಚ್ಚಲ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ದರ್ಶನ್ ನಟನೆಯ ‘ಕಾಟೇರ’ (Katera) ಚಿತ್ರದ ರೈಟರ್ ಜಡೇಶ್ ಕುಮಾರ್ (Jadesh Kumar) ಅವರ ನಿರ್ದೇಶನದಲ್ಲಿ ದುನಿಯಾ ವಿಜಯ್-ಮೋನಿಕಾ ಜೊತೆಯಾಗಿ ನಟಿಸುತ್ತಿದ್ದಾರೆ. ಸಂಬಂಧಗಳ ಕುರಿತು ಬಾಂಧವ್ಯ ಸಾರುವ ಸಿನಿಮಾದಲ್ಲಿ ದುನಿಯಾ ವಿಜಯ್- ಮಗಳು ಮೋನಿಕಾ ಒಟ್ಟಾಗಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಇಬ್ಬರ ಪಾತ್ರ ಕೂಡ ಡಿಫರೆಂಟ್ ಆಗಿದೆ. ತೆರೆಯ ಮೇಲೂ ಕೂಡ ತಂದೆ-ಮಗಳಾಗಿಯೇ ನಟಿಸುತ್ತಿದ್ದಾರಾ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಇಬ್ಬರ ಕಾಂಬಿನೇಷನ್ ತೆರೆಯ ಮೇಲೆ ಹೇಗೆ ವರ್ಕ್ ಆಗಲಿದೆ…
ದಾವಣಗೆರೆ ಜಿಲ್ಲೆಯ ಜೀವನಾಡಿ ಭದ್ರಾ ಡ್ಯಾಂನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 31 ಅಡಿ ನೀರು ಕಡಿಮೆಯಿದ್ದು, ಬೇಸಿಗೆ ಹೊತ್ತಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದ್ದು ಕಾಣುವಂತಾಗಿದೆ. ಇನ್ನು ಉಳಿವ ಒಂದಷ್ಟು ನೀರು ತೀವ್ರ ಬೇಸಿಗೆ ದಿನಗಳಲ್ಲಿ ತೋಟಗಾರಿಕೆ ಬೆಳೆಗಳ ಕಾಪಾಡಿಕೊಳ್ಳಲು ಹರಿಸಬಹುದಾಗಿದ್ದು, ಅಚ್ಚುಕಟ್ಟಿನ ಬೇಸಿಗೆ ಭತ್ತದ ಬೆಳೆಗೆ ಈ ಬಾರಿ ಡ್ಯಾಂನಲ್ಲಿ ನೀರಿಲ್ಲ. ಬೇಸಿಗೆ ಭತ್ತದ ಹಂಗಾಮಿನಲ್ಲಿ ಭತ್ತ ಬೆಳೆಯಲು 27 ರಿಂದ 28 ಟಿಎಂಸಿ ನೀರು ಬೇಕಾಗುತ್ತದೆ. ಕುಡಿಯುವ ನೀರಿಗೆ ಮೀಸಲಿಟ್ಟ ನೀರು ಸೇರಿಸಿದರೂ ಅಷ್ಟು ಪ್ರಮಾಣದ ನೀರು ಡ್ಯಾಂನಲ್ಲಿಲ್ಲ. ಹಾಗಾಗಿ ಈಗಿರುವ ನೀರನ್ನು ಬೇಸಿಗೆಯಲ್ಲಿ ಕುಡಿವ ನೀರಿಗೆ ಕಾಪಿಡುವುದು ಸೂಕ್ತ ಬೇಸಿಗೆಯಲ್ಲಿ ತೋಟಗಾರಿಕಾ ಬೆಳೆಗಳ ಉಳಿಸಿಕೊಳ್ಳಲು ನೀರು ಬಿಡಲು ನೀರಾವರಿ ಸಲಹಾ ಸಮಿತಿ ನಿರ್ಧರಿಸಿದರೆ, ಆ ನೀರನ್ನು ಜನವರಿ ತಿಂಗಳ ಕೊನೇ ವಾರ ಇಲ್ಲವೇ ಫೆಬ್ರವರಿ ತಿಂಗಳಲ್ಲಿ ಹರಿಸಬೇಕು, ತಿಂಗಳಲ್ಲಿ ಕನಿಷ್ಟ 10 ರಿಂದ 15 ದಿನ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕನ್ನಡ ಚಿತ್ರರಂಗದ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿನುಗಿದ ವರ್ಷ 2023. ಹಲವು ಹೊಸ, ಗುಣಮಟ್ಟದ, ಕಂಟೆಂಟ್ ಆಧರಿತ ಸಿನಿಮಾಗಳು ಕನ್ನಡ ಚಿತ್ರರಂಗದಿಂದ ಬಂದಿದ್ದು ಮಾತ್ರವಲ್ಲ ನೂರಾರು ಕೋಟಿ ಗಳಿಕೆಯನ್ನೂ ಮಾಡಿವೆ. 2023 ವರ್ಷವನ್ನು ಕನ್ನಡ ಚಿತ್ರರಂಗ ಬೆಂಚ್ ಮಾರ್ಕ್ ಮಾದರಿಯಲ್ಲಿ ನೆನಪಿಟ್ಟುಕೊಳ್ಳಲಿದೆ. ಆದರೆ ಈ ವರ್ಷ ಎಲ್ಲವೂ ಸಿಹಿಯೇ ಆಗಿರಲಿಲ್ಲ. ಹಲವು ಖ್ಯಾತ ಕಲಾವಿದರು ನಮ್ಮನ್ನಗಲಿ ಹೋಗಿದ್ದಾರೆ. 2023ರಲ್ಲಿ ಅಗಲಿದ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು ಯಾರು? ಕಾರಣ ಏನು? ಮುಂತಾದ ಮಾಹಿತಿ ಇಲ್ಲಿದೆ. ಸ್ಪಂದನಾ ವಿಜಯ್ ಅವರಿಗೆ ಹೃದಯಾಘಾತ ಬ್ಯಾಂಕಾಕ್ ಪ್ರವಾಸದಲ್ಲಿದ್ದಾಗ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಅವರಿಗೆ ಹೃದಯಘಾತವಾಗಿತ್ತು. ಇವರು ನಿಧನರಾಗಿ 6 ತಿಂಗಳು ಕಳೆದಿವೆ. 74ನೇ ವಯಸ್ಸಿಗೆ ನಟ ಲಕ್ಷ್ಮಣ್ ನಿಧನ ಕನ್ನಡದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ನಟ ಲಕ್ಷ್ಮಣ್ ಅವರು 74ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ರಾಜ್‌ಕುಮಾರ್, ಶಂಕರ್ ನಾಗ್, ಅಂಬರೀಶ್ ಅವರ ಸಿನಿಮಾದಲ್ಲಿ ನಟಿಸಿದ್ದರು. ಕಿಡ್ನಿ ವೈಫಲ್ಯದಿಂದ ನಿರ್ಮಾಪಕ ಕೆ…
ಬೆಂಗಳೂರು :- ರಾಜ್ಯಕ್ಕೆ ಮತ್ತೆ ಕೊರೊನಾ ಆತಂಕ ಎದುರಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಪರೀಕ್ಷೆಗೆ ಒಳಪಡಿಸಲಾದ 722 ಮಾದರಿಯಲ್ಲಿ 44 ಮಂದಿಯಲ್ಲಿ ಸೋಂಕು ಧೃಢವಾಗಿದೆ ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 79ಕ್ಕೆ ಏರಿಕೆಯಾಗಿದೆ. ಅವರಲ್ಲಿ 62 ಸೋಂಕಿತರು ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 17 ಮಂದಿಯಲ್ಲಿ 6 ಮಂದಿ ಐಸಿಯು ಹಾಗೂ 11ಮಂದಿ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದ ತೀವ್ರತೆ ಕಡಿಮೆಯಿದ್ದರೂ, ಸೋಂಕು ಹರಡುವ ಪ್ರಮಾಣ ಒಮಿಕ್ರಾನ್‌ಗಿಂತ ಅಧಿಕವಾಗಿರಲಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಟ್ಟದಲ್ಲಿ ಕೊರೊನಾ ಉಪತಳಿ ಜೆಎನ್-1 ವೈರಸ್‌ನ ಹರಡುವಿಕೆ ನವೆಂಬರ್‌ನಲ್ಲಿ ಶೇ. 10ರಷ್ಟು ಇತ್ತು. ಡಿಸೆಂಬರ್ ಎರಡನೇ ವಾರದ ವೇಳೆ ಶೇ. 30 ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರದಲ್ಲಿ ಸೋಂಕಿನ ತೀವ್ರತೆ ಹಾಗೂ ಹರಡುವಿಕೆ ವೇಗವನ್ನು ಅಂದಾಜು ಮಾಡಬಹುದಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಂದಾಜಿಸಿದೆ. ಕೇರಳದಲ್ಲಿ ಕೊರೊನಾ ಉಪತಳಿ ಜೆಎನ್-1ಗೆ ನಾಲ್ವರು ಸಾವಿಗೀಡಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ…
ದೆಹಲಿ: ಭಾರತದಲ್ಲಿ ಚಾಲಕ ರಹಿತ ಕಾರುಗಳಿಗೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಐಐಎಂ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್) ನಾಗ್ಪುರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮವೊಂದರ ಜತೆ ಮಾತನಾಡಿದ ಅವರು, “ಭಾರತದಲ್ಲಿ ಯಾವುದೇ ಕಾರಣಕ್ಕೂ ಚಾಲಕ ರಹಿತ ಕಾರುಗಳ ಪ್ರವೇಶಕ್ಕೆ ನಮ್ಮ ಸರಕಾರ ಅನುಮತಿ ನೀಡುವುದಿಲ್ಲ. ಈ ಬಗ್ಗೆ ಹಿಂದೆಯೂ ನಾನು ಅಮೆರಿಕದಲ್ಲಿಯೇ ಹೇಳಿದ್ದೇನೆ. ಏಕೆಂದರೆ ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಡ್ರೈವರ್‌ಗಳಾಗಿ ಕೆಲಸ ಮಾಡುತ್ತಾರೆ. ಡ್ರೈವರ್‌ಲೆಸ್ ಕಾರ್‌ಗಳು ಅವರ ಉದ್ಯೋಗವನ್ನು ಕಸಿದುಕೊಳ್ಳುತ್ತವೆ. ಮತ್ತು ಅದು ಮತ್ತೊಂದು ಸಮಸ್ಯೆ ಸೃಷ್ಟಿ ಮಾಡಲಿದೆ. ಡ್ರೈವರ್ ರಹಿತ ವಾಹನಗಳು ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳಿಗೆ ಮಾತ್ರ ಸೂಕ್ತವಾಗಿವೆ,” ಎಂದು ತಿಳಿಸಿದ್ದಾರೆ. ಸಚಿವ ನಿತಿನ್ ಗಡ್ಕರಿ ಅವರು ಜುಲೈ 2017 ಮತ್ತು ಡಿಸೆಂಬರ್ 2019ರಲ್ಲಿಯೂ ದೇಶದಲ್ಲಿ ಚಾಲಕ ರಹಿತ ಕಾರುಗಳನ್ನು ಹೊಂದುವ ಕಲ್ಪನೆಗೆ ಎರಡು ಬಾರಿ ಸಾರ್ವಜನಿಕವಾಗಿ ವಿರೋಧವನ್ನು ವ್ಯಕ್ತಪಡಿಸಿದ್ದರು.
ಬಾಕ್ಸ್ ಆಫೀಸ್ ಸುಲ್ತಾನ್ ನಟ ದರ್ಶನ್ ತೂಗುದೀಪ ಅವರು ‘ಕಾಟೇರ’ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ರೈತರ ದಿನದ ಅಂಗವಾಗಿ ಇದೇ ಡಿಸೆಂಬರ್ 23ರಂದು ಸಕ್ಕರೆ ನಾಡು ಮಂಡ್ಯದಲ್ಲಿ ‘ಕಾಟೇರ’ ಚಿತ್ರದ ಪ್ರೀ ರಿಲೀಸ್ ಇವೆಂಟ್ ನಡೆಯಲಿದೆ ಎಂದು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. https://twitter.com/i/status/1737022495612703082 ರೈತರ ದಿನದಂದು ನಮ್ಮ ಕಾಟೇರ ಚಿತ್ರದ ಪ್ರೀ ರಿಲೀಸ್ ಇವೆಂಟ್ ಮಂಡ್ಯದಲ್ಲಿ ನಡೆಯಲಿದೆ. ಈ ವಿಶೇಷ ದಿನದಂದೇ ‘ಕಾಟೇರ’ ಚಿತ್ರದ ರೈತರ ಹಾಡನ್ನು ಬಿಡುಗಡೆಗೊಳಿಸಲಿದ್ದೇವೆ. ಮಂಡ್ಯದ ಬಾಯ್ಸ್ ಕಾಲೇಜ್ ಗ್ರೌಂಡ್ನಲ್ಲಿ ಸಂಜೆ 5 ಗಂಟೆಗೆ ಸಮಾರಂಭ ಶುರುವಾಗಲಿದೆ. ಎಲ್ಲಾ ಪ್ರೀತಿಯ ಸೆಲೆಬ್ರಿಟಿಗಳಿಗೆ ನಲ್ಮೆಯ ಸ್ವಾಗತ ಎಂದು ಪ್ರೀತಿಯಿಂದ ಆಹ್ವಾನ ನೀಡಿದ್ದಾರೆ. ‘ಕಾಟೇರ’ ಚಿತ್ರ ಈಗಾಗಲೇ ಎರಡು ಹಾಡು ಹಾಗೂ ಟ್ರೈಲರ್ ಮೂಲಕ ಸದ್ದು ಮಾಡುತ್ತಿದೆ. ನಟ ದರ್ಶನ್ಗೆ ಜೊತೆಯಾಗಿ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅಭಿನಯಿಸಿದ್ದಾರೆ. ರಾಕ್ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚೌಕ,…