ದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ (Dawood Ibrahim) ಆರೋಗ್ಯದ ಬಗ್ಗೆ ಆತನ ಆಪ್ತ ಛೋಟಾ ಶಕೀಲ್ (Chhota Shakeel) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ. ದಾವೂದ್‌ಗೆ ಯಾರೋ ವಿಷ ನೀಡಿದ್ದಾರೆ ಅನ್ನೋದು ಆಧಾರರಹಿತ ವದಂತಿಯಾಗಿದೆ. ದಾವೂದ್ ನೂರಕ್ಕೆ ನೂರಷ್ಟು ಆರೋಗ್ಯವಾಗಿದ್ದಾನೆ. ಕಾಲಕಾಲಕ್ಕೆ ದುರುದ್ದೇಶದಿಂದ ಇಂತಹ ವದಂತಿಗಳನ್ನು ಹರಡಲಾಗುತ್ತಿದೆ. ಇದೀಗ ಐಎಸ್‌ಐನ ಆಸ್ತಿಯಾಗಿರುವ ಪರಾರಿಯಾಗಿರುವ ಭೂಗತ ದೊರೆ, ತಾನು ಇತ್ತೀಚೆಗೆ ಪಾಕಿಸ್ತಾನದಲ್ಲಿ ದಾವೂದ್‌ನನ್ನು ಭೇಟಿಯಾಗಿದ್ದೆ ಮತ್ತು ಅವನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ಛೋಟಾ ಶಕೀಲ್ ಹೇಳಿದ್ದಾನೆ. ದಾವೂದ್‌ಗೆ ಯಾರೋ ವಿಷ ಹಾಕಿದ್ದಾರೆ. ಆತನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ವದಂತಿಗಳು ಭಾರತ ಮತ್ತು ಪಾಕಿಸ್ತಾನದ ಎರಡೂ ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಆತನ ಆಪ್ತ ಛೋಟಾ ಶಕೀಲ್ ಕಡೆಯಿಂದ ಸ್ಫೋಟಕ ಮೆಸೇಜ್ ಬಂದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ದಾವೂದ್ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಪಾಕಿಸ್ತಾನದಲ್ಲಿ (Pakistan) ಗೂಗಲ್ ಮತ್ತು ಟ್ವಿಟ್ಟರ್ ಕೂಡ ಸ್ಥಗಿತಗೊಳಿಸಲಾಗಿತ್ತು.
Author: AIN Author
ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (Bhajan lal Sharma) ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ. ಸಿಎಂ ಅವರು ಜೈಪುರದಿಂದ ಭರತ್ ಪುರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕಾರು ಚರಂಡಿಗೆ ಜಾರಿದ್ದರಿಂದ ಮುಖ್ಯಮಂತ್ರಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆ ಬಳಿಕ ಭಜನ್ ಲಾಲ್ ಶರ್ಮಾ ಅವರನ್ನು ಬೇರೆ ಕಾರಿನಲ್ಲಿ ಕಳುಹಿಸಲಾಗಿದೆ. ಭಜನ್ ಲಾಲ್ ಅವರು ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರು ಭರತ್ ಪುರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಡಿಸೆಂಬರ್ 12 ರಂದು ಬಿಜೆಪಿಯು (BJP) ಭಜನ್ ಲಾಲ್ ಶರ್ಮಾ ಅವರನ್ನು ಸಿಎಂ ಹುದ್ದೆಗೆ ಅಚಚರಿಯ ಆಯ್ಕೆ ಮಾಡಿತ್ತು. ಭರತ್ ಪುರ ಜಿಲ್ಲೆಯ ಶರ್ಮಾ ಅವರು ಜೈಪುರದ ಸಂಗನೇರ್ ಕ್ಷೇತ್ರದಲ್ಲಿ 48,081 ಮತಗಳ ಅಂತರದಿಂದ ಗೆದ್ದಿದ್ದಾರೆ. ಚೊಚ್ಚಲ ಶಾಸಕರಾದ ಭಜನ್ ಲಾಲ್ ಶರ್ಮಾ ಅವರು ಕಳೆದ ಶುಕ್ರವಾರವಷ್ಟೇ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ದೆಹಲಿ: ಲೋಕಸಭೆ ಚುನಾವಣೆ (Loksabha Election) ಸನಿಹವಾಗುತ್ತಿರುವ ಬೆನ್ನಲ್ಲೇ ಎರಡನೇ ಹಂತದ ಭಾರತ್ ಜೋಡೊ ಯಾತ್ರೆ (Bharat Jodo yatre) ಆರಂಭಿಸಲು ಕಾಂಗ್ರೆಸ್ ನಿರ್ಧರಿಸಿದೆ. ಜನವರಿ ಮೊದಲ ವಾರದಿಂದಲೇ ಯಾತ್ರೆ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿವೆ. ಪಂಚರಾಜ್ಯಗಳ ಚುನಾವಣೆ ಅಂತ್ಯವಾಗಿ ಸಂಸತ್ ಕಲಾಪವೂ ಮುಗಿದ ಹಿನ್ನಲೆ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಯಾತ್ರೆಗೆ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡನೇ ಹಂತದ ಭಾರತ್ ಜೋಡೋ ಯಾತ್ರೆ ಹೈಬ್ರಿಡ್ ಮೋಡ್‍ನಲ್ಲಿರಲಿದೆ, ಯಾತ್ರೆಯಲ್ಲಿ ಭಾಗವಹಿಸುವವರು ಕಾಲ್ನಡಿಗೆಯಲ್ಲಿ ಅಥಾವ ಮತ್ತು ವಾಹನ ಬಳಬಹುದಾಗಿದ್ದು ರಾಹುಲ್‍ಗಾಂಧಿ (Rahul Gandhi) ಮಾತ್ರ ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಲಿದ್ದಾರೆ ಎನ್ನಲಾಗಿದೆ. ಈ ಆವೃತ್ತಿಯ ವಿಶೇಷ ಗಮನವು ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದ ಮೇಲೆ ಇರುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಮೊದಲ ಆವೃತ್ತಿಯಂತೆಯೇ ಪ್ರತಿ ದಿನವೂ ಸಾರ್ವಜನಿಕ ಸಭೆಗಳಲ್ಲಿ ರಾಹುಲ್ ಗಾಂಧಿ ಮಾತನಾಡಲಿದ್ದಾರೆ, ಜನರೊಂದಿಗೆ ಬೆರೆಯಲಿದ್ದಾರೆ. ಡಿಸೆಂಬರ್ 21 ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಉದ್ದೇಶಿತ…
ದೆಹಲಿ: ಪಂಚರಾಜ್ಯ ಚುನಾವಣೆ ಫಲಿತಾಂಶದ ಬಳಿಕ ವಿಪಕ್ಷಗಳ ಕೂಟ ಲೋಕಸಭಾ ಚುನಾವಣೆ ದೃಷ್ಟಿಯಿಂದ ತಂತ್ರ ಬದಲಿಸಲು ಮುಂದಾದಂತೆ ಕಾಣ್ತಿದೆ. ಉತ್ತರ ಭಾರತದಲ್ಲಿ ರಾಹುಲ್ ಗಾಂಧಿ ಚಾರ್ಮ್ ವರ್ಕೌಟ್ ಆಗದ ಕಾರಣ ಪ್ರಧಾನಿ ಮೋದಿ (Narendra Modi) ವಿರುದ್ಧ ಐಎನ್‍ಡಿಐಎ (I.N.D.I.A) ಕೂಟ ದಲಿತಾಸ್ತ್ರ ಪ್ರಯೋಗಿಸುವ ಮುನ್ಸೂಚನೆ ನೀಡಿದೆ. ದೆಹಲಿಯಲ್ಲಿ ನಡೆದ ಐಎನ್‍ಡಿಐಎ ಕೂಟದ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ವಿಚಾರ ಚರ್ಚೆಗೆ ಬಂದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamta Banerjee) ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಅಭ್ಯರ್ಥಿಯನ್ನಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಡೋದು ಬೆಟರ್ ಎಂಬ ಪ್ರಸ್ತಾಪವನ್ನು ಇಟ್ಟಿದ್ದಾರೆ. ಇದಕ್ಕೆ ಕೆಲವರು ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಖರ್ಗೆಯವರು ಮಾತ್ರ ಲೋಕಸಭಾ ಚುನಾವಣೆ ಬಳಿಕ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರ ನೋಡೋಣ. ಈಗ ಒಗ್ಗಟ್ಟಿನಿಂದ ಹೋರಾಡೋಣ ಎಂದು ಕರೆ ನೀಡಿದ್ರು ಎನ್ನಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಆಯ್ಕೆಯನ್ನು ಎಲ್ಲರೂ ಒಪ್ಪುತ್ತಾರೆ ಅನ್ನೋ ಬಗ್ಗೆ ಇನ್ನೂ ಸ್ಪಷ್ಟ…
ನವದೆಹಲಿ: ಭಾರೀ, ಟೀಕೆ ಆಕ್ರೋಶದ ಬೆನ್ನಲ್ಲೇ ಇದೀಗ ಬಿಜೆಪಿಯ (BJP) ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ (L.K Advani) ಹಾಗೂ ಮುರಳಿ ಮನೋಹರ್ ಜೋಶಿಯವರಿಗೆ (Murali Manohar Joshi) ರಾಮಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಅಯೋಧ್ಯೆ ರಾಮಮಂದಿರ (Ramamandir Ayodhya) ಚಳವಳಿಗೆ ಉಸಿರು ನೀಡಿದ್ದು, ಚಳವಳಿ ತೀವ್ರಗೊಳ್ಳುವಂತೆ ಮಾಡಿದವರಲ್ಲಿ ಬಿಜೆಪಿಯ ಎಲ್‍ಕೆ ಅಡ್ವಾಣಿ, ಮುರಳಿಮನೋಹರ್ ಜೋಶಿ ಪ್ರಮುಖರು. ಆದರೆ ರಾಮಮಂದಿರ ಟ್ರಸ್ಟ್ ಅವರನ್ನೇ ಕಡೆಗಣಿಸಿತ್ತು. ಅಯೋಧ್ಯೆ ರಾಮಮಂದಿರ (Ramamandir Ayodhya) ಚಳವಳಿಗೆ ಉಸಿರು ನೀಡಿದ್ದು, ಚಳವಳಿ ತೀವ್ರಗೊಳ್ಳುವಂತೆ ಮಾಡಿದವರಲ್ಲಿ ಬಿಜೆಪಿಯ ಎಲ್‍ಕೆ ಅಡ್ವಾಣಿ, ಮುರಳಿಮನೋಹರ್ ಜೋಶಿ ಪ್ರಮುಖರು. ಆದರೆ ರಾಮಮಂದಿರ ಟ್ರಸ್ಟ್ ಅವರನ್ನೇ ಕಡೆಗಣಿಸಿತ್ತು ಆರೋಗ್ಯ ಮತ್ತು ವಯಸ್ಸಿನ ಕಾರಣ ನೀಡಿ ಈ ನಾಯಕರನ್ನೇ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬರಬೇಡಿ ಎಂದು ರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್ ಮನವಿ ಮಾಡಿದ್ದರು. ಇದಕ್ಕೆ ಭಾರೀ ಟೀಕೆ, ಆಕ್ರೋಶಗಳು ವ್ಯಕ್ತವಾಯಿತು. ಈ ಬೆನ್ನಲ್ಲೇ ವಿಹೆಚ್‍ಪಿ ಡ್ಯಾಮೇಜ್ ಕಂಟ್ರೋಲ್‍ಗೆ ಇಳಿದಿದೆ. ಇಂದು ಅಡ್ವಾಣಿ ಮತ್ತು ಜೋಶಿ…
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ (Presidential Elections) ಸ್ಪರ್ಧಿಸಲು ಮುಂದಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಕೊಲೊರಾಡೋ ಕೋರ್ಟ್ (Colorado Court) ಅನರ್ಹಗೊಳಿಸಿದೆ. ಕ್ಯಾಪಿಟಲ್ ಹಿಲ್ (Capitol Hill) ದಂಗೆಯಲ್ಲಿ ಟ್ರಂಪ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ ಆದೇಶ ಪ್ರಕಟಿಸಿದೆ. ಆದೇಶವನ್ನು ಪ್ರಶ್ನಿಸಲು ಜ.4ರವರೆಗೆ ಮೇಲ್ಮನವಿ ಸಲ್ಲಿಸಲು ಟ್ರಂಪ್‌ಗೆ ಅವಕಾಶ ನೀಡಲಾಗಿದೆ. ಅಮೆರಿಕದ ಇತಿಹಾಸದಲ್ಲಿ ಮಾಜಿ ಅಧ್ಯಕ್ಷರೊಬ್ಬರನ್ನು ಚುನಾವಣೆಯಿಂದಲೇ ಅನರ್ಹಗೊಳಿಸಿದ್ದು ಇದೇ ಮೊದಲು. ಈ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್ ವಕ್ತಾರರು, ಇದೊಂದು ಸಂಪೂರ್ಣ ದೋಷಪೂರಿತ ಆದೇಶ. ಈ ತೀರ್ಪನ್ನು ಪ್ರಶ್ನಿಸಿ ಅಮೆರಿಕ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ. ಏನಿದು ಪ್ರಕರಣ? 2021ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಿ ಟ್ರಂಪ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಭಾಷಣದಿಂದ ಪ್ರಭಾವಿತರಾಗಿ 2 ಸಾವಿರಕ್ಕೂ ಹೆಚ್ಚು ಟ್ರಂಪ್ ಬೆಂಬಲಿಗರು ಜನವರಿ 6 ರಂದು ಅಮೆರಿಕದ ಸಂಸತ್ ಕಟ್ಟಡ ಅಥವಾ ಕ್ಯಾಪಿಟಲ್ ಹಿಲ್ ಮೇಲೆ ನುಗ್ಗಿ ದಾಂಧಲೆ…
ಕಲಬುರಗಿ :-ಜಿಲ್ಲೆ ಯಡ್ರಾಮಿ ತಾಲ್ಲೂಕಿನ ವಡಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಶಂಕರಗೌಡ ಮೂಲಿಮನಿ ವೈದ್ಯಕೀಯ ಉನ್ನತ ಶಿಕ್ಷಣಕ್ಕಾಗಿ ತೆರಳು ಹಿನ್ನೆಲೆಯಾಗಿ ವಡಗೇರಾ ಗ್ರಾಮಸ್ಥರ ಅವರಿಗೆ ಬೆಳ್ಳಿಯ ಕಿರೀಟ ಮತ್ತು ಬಂಗಾರ ಉಡುಗೊರೆಯಾಗೆ ನೀಡಿ ನಮ್ಮ ನಿಮ್ಮ ಬಾಂಧವ್ಯ ಸದಾ ಬಂಗಾರವಾಗಿ ಇರಲಿ ಎಂದು ಹರ್ಷಿ ಹಾರೈಸಿ ಅದ್ದೂರಿಯಾಗಿ ಬೀಳ್ಕೊಡುಗೆ ನೀಡಲಾಯಿತು ಈ ಕಾರ್ಯಕ್ರಮ ಕುರಿತು ನಾವು ಮಾತನಾಡಿದ ರಾಜ್ಯ ಭ್ರಷ್ಟಾಚಾರ ನಿರ್ಮೂಲನೆ ವೇದಿಕೆ ರಾಜ್ಯಧಕ್ಷ ಪ್ರಲಾದ ದೇಸಾಯಿ ಕಂಡ ಅದ್ಬುತ ಮತ್ತು ಮೇಧಾವಿ ವ್ಯಕ್ತಿ ಅವರ ವೈದ್ಯ ವೃತ್ತಿಯನ್ನು ಬಹಳ ಪ್ರೀತಿಯಿಂದ ಮತ್ತು ಪ್ರಾಮಾಣಿಕವಾಗಿ ಮಾಡುವಂತ ಸರಳತೆ ಸರದಾರ ಮತ್ತು ನಮ್ಮ ಗ್ರಾಮೀಣ ಭಾಗದ 2 ನೆ ದೇವರು ಎಂದರೆ ತಪ್ಪಾಗಲಾರದು ಅವರು ಕರೋನ ಸಮಯದಲ್ಲಿ ತಮ್ಮ ಸಿಬ್ಬಂದಿಗಳು ಜೊತೆ ಸೇರಿ ಉತ್ತಮ ಸೇವೆ ಮಾಡಿರೋದರಿಂದ ನಮ್ಮ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡಿಯಲ್ಲಿಲ್ಲ ಎಂದು ಹೇಳಿದರು ವೈದ್ಯರನ್ನು ಬೀಳ್ಕೊಡವಾಗ ಕೆಲವು ಸಾರ್ವಜನಿಕರು ಮತ್ತು ಸಿಬ್ಬಂದಿಗಳು ಭಾವುಕರಾಗಿರೋ ಘಟನೆ…
ಹಾವೇರಿ:- ಹೃದಯದ ವೈದ್ಯರು ನನಗೆ ಹೆಚ್ಚಿಗೆ ಮಾತನಾಡಬೇಡ ಎಂದಿದ್ದಾರೆ ಆದರೆ ನೀವೆ ನನ್ನ ಹೃದಯ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾದ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ನಡೆದಿದೆ. ಹೃದಯ ಮತ್ತು ಮಂಡಿಶಸ್ತ್ರಚಿಕಿತ್ಸೆ ನಂತರ ಪ್ರಥಮ ಭಾರೆಗೆ ಅವರು ಸ್ವಕ್ಷೇತ್ರದ ಜನರನ್ನು ಭೇಟಿಯಾಗಿ ಮಾತನಾಡುತ್ತಿದ್ದರು. ಕ್ಷೇತ್ರದ ಜನರ ನಿಮ್ಮನೆಲ್ಲಾ ನೋಡಿದ ಮೇಲೆ ನನಗೆ ಹೃದಯದ ಶಸ್ತ್ರಚಿಕಿತ್ಸೆ ಆಗಿರುವದನ್ನೇ ನಾನು ಮರೆತಿದ್ದೇನೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾದರು. ಇಸಿಜಿ ಇಕೋ ಮಾಡಿದಾಗ ಹೃದಯದಲ್ಲಿ ಯಾವ ಸಮಸ್ಯೆ ತೋರಿಸಲಿಲ್ಲಾ. ಆದರೆ ಅಂಜಿಯೋಗ್ರಾಮ ಮಾಡಿಸಿದಾಗ ಹೃದಯದಲ್ಲಿ ಎರಡು ಸಣ್ಣ ಒಂದು ದೊಡ್ಡದಾದ ಬ್ಲಾಕ್ ಗಳಿವೆ ಎಂದರು. ಸ್ಟಂಟ್ ಅಳವಡಿಸುವ ಬದಲು ಹೃದಯ ಶಸ್ತ್ರಚಿಕಿತ್ಸೆಮಾಡಿದರು. ಈಗ ನಾನು ಮೊದಲಿನಗಿಂತ ಹೆಚ್ಚು ಉತ್ಸಾಹಭರಿತನಾಗಿದ್ದೇನೆ ಎಂದು ಮಾಜಿ ಸಿಎಂ ಬೊಮ್ಮಾಯಿ ತಿಳಿಸಿದರು. ಇದೆಲ್ಲಾ ನಡೆದಿರುವದು ಎಲ್ಲ ಶಿಗ್ಗಾಂವಿಕ್ಷೇತ್ರದ ಜನಸ್ಥೋಮದ ಆಶೀರ್ವಾದ ಪುಣ್ಯಪಲ ದೇವಿಯ ಅನುಗ್ರಹದಿಂದ ನಾನು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದರು.…
ಸುಬ್ರಮಣ್ಯ: ನಾಡಿನ ಬಹುತೇಕ ಇತಿಹಾಸ ಪ್ರಸಿದ್ದಿ ದೇವಾಲಯಗಳಲ್ಲಿ ಒಂದಾದ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಧನಗಳ ಜಾತ್ರೆ ಬಲು ಜೋರು, ನಾಟಿ ತಳಿಯ ಹಸುಗಳು, ಸೀಮೆ ಹಸುಗಳು, ಹೀಗೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದ ಬರುವ ಅನೇಕ ತಳಿಯ ಜಾನುವಾರುಗಳು ಒಮ್ಮೆಲೇ ಒಂದೆಡೆ ಮಾರಾಟಕ್ಕೆ ಮತ್ತು ಕೊಂಡುಕೊಳ್ಳುವುದಕ್ಕೆ ಶ್ರೀ ಕ್ಷೇತ್ರ ಘಾಟಿ ಮೂಲಭೂತ ಸೌಕರ್ಯಗಳೊಂದಿಗೆ ಸಕಲ ಸಿದ್ಧತೆಗಳನ್ನು ಆಡಳಿತ ಮಂಡಳಿ ತಯಾರಿ ನೆಡೆಸುತ್ತಿದೆ
ಗೋಕಾಕ : ತಾಲೂಕಿನ ದುಫಧಾಳ(ಘಟಪ್ರಭಾ) ಕಾಲನಿಯಲ್ಲಿರುವ ಸಹಾಯಕ ಕಾರ್ಯಪಾಲಕ ಅಬಿಯಂತರರ ಕಚೇರಿ, ಘಟಪ್ರಭಾ ಎಡದಂಡೆ ಕಾಲುವೆ, ಉಪ ವಿಭಾಗ 1ರಲ್ಲಿ ಶನಿವಾರದಂದು ಕಚೇರಿಯ ಹಾಜರಾತಿ ಪುಸ್ತಕ ಮತ್ತು ಕಂಪ್ಯೂಟರ್ ಸಿ,ಪಿ,ಓ, ಕಳ್ಳತನ ಆಗಿದ್ದು. ಪ್ರಕರಣವನ್ಮು ತಿರುಚಲು ಸ್ಥಳಿಯ ಅಧಿಕಾರಿಗಳು ಪ್ರಯತ್ನಿಸುತಿದ್ದಾರೆ.ಇಲ್ಲಿನ ಕಚೇರಿಯ ಅಧಿಕಾರಿಯಾದ ಸಹಾಯಕ ಅಬಿಯಂತರ ಮಹಿಮಗೋಳ ಮತ್ತು ಸಿಬ್ಬಂದಿಗಳು ಕಳ್ಳತನವಾದ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಇಲ್ಲಿನ ಹಿರಿಯ ಅಧಿಕಾರಿಗಳು ಮಾತ್ರ ಯಾವುದೆ ಕಳ್ಳತನ ನಡೆದಿಲ್ಲ ಎಂಬ ಉಡಾಪೆ ಉತ್ತರಕ್ಕೆ ಪತ್ರಕರ್ತರು ಹಾಜರಾತಿ ಪುಸ್ತಕ ತೊರಿಸಿರಿ ಎಂದು ಪ್ರಶ್ನಿಸಿದಾಗ ಕಾರ್ಯನಿರ್ವಾಹಕ ಅಬಿಯಂತರ ಎನ್,ಡಿ,ಕೊಲಕಾರ ಇವರು ಪತ್ರಕರ್ತರಿದ್ದರೆ ಎನಾಯಿತು. ಅರ್ಜಿ ಬರೆದು ಕೇಳಿ ಎಂದು ಪತ್ರಕರ್ತರಿಗೆ ಅವಾಜ ಹಾಕಿ ಎನ್ ಮಾಡುತ್ತೀರಿ ಮಾಡಿ,ಮೊದಲು ವಿಡಿಯೋ ಮಾಡೊದು ಬಂದ್ ಮಾಡು. ನಿಮ್ಮ ಜೊತೆ ಮಾತನಾಡಲಿಕ್ಕೆ ನನಗೆ ಆಸಕ್ತಿ ಇಲ್ಲ ಎಂದು ಒರಟಾಗಿ ವರ್ತಿಸಿ ದರ್ಪ ದೊರಿಸಿದ್ದಾನೆ. ಕಳ್ಳತನವಾದ ಬಗ್ಗೆ ಗೊತ್ತಿರುವ ಮ್ಯಾನೆಜರ ಬೆಳಗಲಿ ಇತನನ್ನು ಹೇದರಿಸಿ ಮಾದ್ಯಮದವರಿಗೆ ಎನು ಹೇಳದಂತೆ ಅಧಿಕಾರಿಗಳು ತಮ್ಮ ವಾಹನದಲ್ಲಿ…