ಶಿವಮೊಗ್ಗ: ಸೈಬರ್ ಖದೀಮ ಹಾವಳಿ ರಾಜ್ಯದಲ್ಲಿ ಹೆಚ್ಚಾಗಲು ಶುರುವಾಗಿದೆ. ಹೌದು ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿರುವ ಬಗ್ಗೆ ವರದಿಯಾಗಿದೆ. ಬುಧವಾರ ರಾತ್ರಿ ವೇಳೆಗೆ ವಿವಿ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಫೆಲಸ್ತೀನ್ ಪರ ಗುಂಪು ಈ ಕೃತ್ಯ ಮೆರೆದಿದೆ ಎನ್ನಲಾಗುತ್ತಿದೆ. ಕಲೀಮಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ವೆಬ್ ಸೈಟ್ ಹ್ಯಾಕ್ ಮಾಡಿದ್ದು, https://ainlivenews.com/sore-throat-cough-problem-in-winter-make-these-things-and-drink-tea/ ಸೇವ್ ಫೆಲಸ್ತೀನ್- ಇಸ್ರೇಲ್ ಡಾಗ್ ಎಂದು ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಹ್ಯಾಕ್ ವಿಚಾರ ತಿಳಿದ ಬಳಿಕ ಕುವೆಂಪು ವಿಶ್ವ ವಿದ್ಯಾಲಯದ ತಾಂತ್ರಿಕ ತಂಡ ವೆಬ್ ಸೈಟ್ ಸ್ಥಗಿತಗೊಳಿಸಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲು ವಿವಿ ಮುಂದಾಗಿದೆ.
Author: AIN Author
ಕನ್ನಡದ ಖ್ಯಾತ ಗೀತರಚನೆಕಾರ ವಿಜಯನಾರಸಿಂಹ (Vijayanarasimha) ಅವರ ಪುತ್ರಿ ಸವಿತಾ ಪ್ರಸಾದ್ (Savita Prasad) (72) ಅಲ್ಪ ಕಾಲೀನ ಅನಾರೋಗ್ಯದ ನಂತರ ನಿನ್ನೆ ಬೆಳ್ಳಿಗ್ಗೆ ನಿಧನರಾಗಿದ್ದಾರೆ (passed away). ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ತಂದೆಯ ಕೃತಿಗಳನ್ನು ಸಂರಕ್ಷಿಸುವಲ್ಲಿ ಕಾಳಜಿ ವಹಿಸುತ್ತಿದ್ದ ಸವಿತಾ ತೀರಾ ಇತ್ತೀಚೆಗೆ ತಂದೆಯವರ ಕಥೆಗಳ ಸಂಕಲನವನ್ನು ತರಲು ಕನ್ನಡ ಸಾಹಿತ್ಯ ಪರಿಷತ್ತಿಗೆ ಅನುಮತಿ ನೀಡಿದ್ದರು ಎಂದು ಹಿರಿಯ ಪತ್ರಕರ್ತ ಎನ್.ಎಸ್. ಶ್ರೀಧರ್ ಮೂರ್ತಿ ತಿಳಿಸಿದ್ದಾರೆ. 1951ರ ಜನವರಿ 4ರಂದು ಜನಿಸಿದ್ದ ಸವಿತಾ ಮದ್ರಾಸಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನ ನಡೆಸಿದ್ದರು. ಕನ್ನಡ ಪ್ರೀತಿಯನ್ನು ಸದಾ ಜಾಗೃತವಾಗಿಟ್ಟು ಕೊಂಡಿದ್ದರು. ತಮ್ಮ ಮಕ್ಕಳಲ್ಲಿ ಕೂಡ ಕನ್ನಡ ಪ್ರೇಮವನ್ನು ಬೆಳೆಸಿದ್ದರು. ತಂದೆಯವರ ಕುರಿತು ನಿರಂತರವಾಗಿ ಕಾರ್ಯಕ್ರಮಗಳು ನಡೆಯಲು ಕೂಡ ಅವರು ಕಾರಣಕರ್ತರಾಗಿದ್ದರು. ಅವರ ಪತಿ ಮತ್ತು ಪ್ರಾದ್ಯಾಪಕ, ಅನುವಾದಕ ಶಾರದಾ ಪ್ರಸಾದ್ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದು ಅವರ ಒಬ್ಬ ಮಗ ಸಂದೀಪ್ ಕೂಡ ನಿಧನರಾಗಿದ್ದರು. ಈಗ…
ಬೆಂಗಳೂರು: ವೈಕುಂಠ ಏಕಾದಶಿ ಹಿನ್ನಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶರವಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ 1 ಲಕ್ಷ ಲಡ್ಡು ವಿತರಣೆ ಮಾಡಲಾಗುತ್ತದೆ. ಲಾಡುಗಳಿಗೆ ಪೂಜೆ ಸಲ್ಲಿಸಿ ವಿತರಣೆಗೆ ಸಿದ್ಧಗೊಳಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಶರವಣ ಚಾರಿಟಬಲ್ ಟ್ರಸ್ಟ್ ವತಿಯಿಂದ ವೈಕುಂಠ ಏಕಾದಶಿ ಪ್ರಯುಕ್ತ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿ 1 ಲಕ್ಷ ಲಡ್ಡು ಪ್ರಸಾದವನ್ನು ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮೇಲೆ ಇರುವಂತಹ ಶ್ರೀ ಸಾಯಿ ಪಾರ್ಟಿ ಹಾಲ್ ನಲ್ಲಿ ಭಕ್ತಾದಿಗಳಿಗೆ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಟಿ.ಎ.ಶರವಣ ರವರು ಮಾತನಾಡಿ ವೈಕುಂಠ ಏಕಾದಶಿ ದಿನದಂದು ಮಹಾವಿಷ್ಣುವಿನ ವೈಕುಂಠ ಮಹಾದ್ವಾರ ತೆಗೆಯಲಾಗುತ್ತದೆ ಎಂದು ನಂಬಿಕೆ ಹಿಂದೂ ಧರ್ಮದಲ್ಲಿ ಇದೆ. ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಎಂಬ ಬಿರುದಾಂಕಿತ ವೈಕುಂಠ ಏಕಾದಶಿಯಂದು ಶ್ರೀ ವೆಂಕಟೇಶ್ವರ ದರ್ಶನ ಪಡೆಯಬೇಕು, ತಿರುಮಲ ತಿರುಪತಿಗೆ ಹೋಗಬೇಕು , ಲಡ್ಡು ಪ್ರಸಾದ ಸ್ವೀಕರಿಸಬೇಕು ಎಂಬ ಬಯಕೆ ಭಕ್ತಿ, ಎಲ್ಲರಿಗೂ ಇರುತ್ತದೆ.ಎಲ್ಲರೂ ತಿರುಪತಿಗೆ ಹೋಗಲು ಸಾಧ್ಯವಿಲ್ಲ, ಮತ್ತು ತಿರುಪತಿ…
ಕನ್ನಡದ ಹೆಸರಾಂತ ನಟ ದುನಿಯಾ ವಿಜಯ್ ಅರೆಸ್ಟ್ (Arrest) ಆಗಿದ್ದಾರೆ. ಬೆಂಗಳೂರಿನ ವಿನೋವಾ ನಗರದಲ್ಲಿ ನಡುರಸ್ತೆಯಲ್ಲೇ ಪೊಲೀಸರು ದುನಿಯಾ ವಿಜಯ್ ಕೈಗೆ ಬೇಡಿ ತೋಡಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. ಬೆಂಗಳೂರಿನ ವಿನೋವಾ ರಸ್ತೆಯಲ್ಲಿ ವಿಜಯ್ ಕಂಡು ಬಹುತೇಕರು ಗಾಬರಿಗೊಂಡಿದ್ದರು. ವಿಜಯ್ ಮೈ ತುಂಬಾ ರಕ್ತ ಬೇರೆ ಹರಿದಿದ್ದರಿಂದ ಏನಾಯಿತು ಎಂದೆಲ್ಲ ವಿಚಾರಿಸಿದ್ದರು. ಆಮೇಲೆ ಅದು ಶೂಟಿಂಗ್ ಸನ್ನಿವೇಶ ಎಂದು ಗೊತ್ತಾಗಿ ನಿಟ್ಟುಸಿರಿಟ್ಟರು. ಹೌದು, ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡುತ್ತಿರುವ ಭೀಮ (Bhima) ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯವನ್ನು ವಿಜಯ್ ಶೂಟ್ ಮಾಡುತ್ತಿದ್ದಾರೆ. ನಡು ರಸ್ತೆಯಲ್ಲಿ ವಿಜಯ್ ಅವರನ್ನು ಅರೆಸ್ಟ್ ಮಾಡಿಕೊಂಡು ಹೋಗುವ ದೃಶ್ಯ ಅದಾಗಿದೆ. ಈ ಮೂಲಕ ಭೀಮ ಸಿನಿಮಾದ ಕ್ಲೈಮ್ಯಾಕ್ಸ್ ಏನಾಗಿರಲಿದೆ ಎನ್ನುವ ಸಣ್ಣದೊಂದು ಸುಳಿವೂ ಸಿಕ್ಕಿದೆ. ದುನಿಯಾ ವಿಜಯ್ (Duniya Vijay) ಈಗಾಗಲೇ ನಟ, ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಭೀಮನಾಗಿ ಅಬ್ಬರಿಸಲು ಸಜ್ಜಾಗಿರುವ ಬೆನ್ನಲ್ಲೇ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಸಿನಿ ದುನಿಯಾಗೆ ಇಬ್ಬರು…
ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ (Corona Virus) ಆತಂಕ ಹೆಚ್ಚಾಗಿದೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದ ನಾಲ್ವರಿಗೆ ಕೊರೊನಾ ಪಾಸಿಟಿವ್ ಬಂದಿರೋದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಕೊರೊನಾ ರೂಪಾಂತರ ತಳಿ JN.1 ಪತ್ತೆಯಾಗಿರುವ ಹಿನ್ನೆಲೆ ಸರ್ಕಾರ ರಾಜ್ಯದಲ್ಲಿ ಹದ್ದಿನ ಕಣ್ಣಿಟ್ಟಿದೆ. https://ainlivenews.com/sore-throat-cough-problem-in-winter-make-these-things-and-drink-tea/ ಸರ್ಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ಜಿಲ್ಲಾದ್ಯಂತ ಜೆಎನ್.1 ಎದುರಿಸಲು ಸನ್ನದ್ಧವಾಗಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ (Government And Private Hospitals) ಮಾಹಿತಿ ಪಡೆಯಲಾಗಿದೆ. ಜೊತೆಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲ್ಯಾಂಟ್, ವೆಂಟಿಲೇಟರ್‌ಗಳು ಹಾಗೂ ಹಾಸಿಗಳ ವ್ಯವಸ್ತೆ ನೋಡಿಕೊಳ್ಳುವಂತೆ ಸೂಚನೆ ನೀಡಿದೆ.
ಬಿಗ್ ಬಾಸ್ (Bigg Boss Kannada) ಮನೆಯ ಬಣ್ಣದ ಟಾಸ್ಕ್ ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ವಿನಯ್ ಮತ್ತು ಅವಿನಾಶ್ ಶೆಟ್ಟಿ (Avinash Shetty) ಜಗಳ ತಾರಕಕ್ಕೇರಿದ್ದು, ಇದರ ಮುಂದುವರಿಕೆಯಾಗಿ ವಿನಯ್ (Vinay) ಬೆರಳು ಮುರಿದುಕೊಂಡಿದ್ದಾರೆ. ಕಾರ್ತಿಕ್ ಮತ್ತು ಅವಿನಾಶ್ ನಡುವೆ ನಡೆದ ಕಾಳಗದಲ್ಲಿ ಕಾರ್ತಿಕ್ (Karthik) ಏಟು ಮಾಡಿಕೊಂಡು ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ ಎನ್ನಲಾಗುತ್ತಿದೆ. ಬಣ್ಣದ ಟಾಸ್ಕ್‌ನಲ್ಲಿ ಎರಡೂ ತಂಡಗಳ ನಡುವೆ ಮಾರಾಮಾರಿಯೇ ನಡೆದಿದೆ ಎನ್ನುವುದು ಹರಿದಾಡುತ್ತಿರುವ ಸುದ್ದಿ. ತನಿಷಾ ಮತ್ತು ಸಂಗೀತಾ ಇಬ್ಬರ ತಂಡಗಳ ಸದಸ್ಯರನ್ನು ನೋಡಿದಾಗ ಗ್ಯಾರಂಟಿ ಜಗಳ ಆಗುತ್ತದೆ ಎಂದು ಅಂದಾಜಿಸಲಾಗಿತ್ತು. ತನಿಷಾ ಕಡೆ ಸ್ಟ್ರಾಂಗ್ ಕಂಟೆಸ್ಟೆಂಟ್ ಇದ್ದಾರೆ. ಸಂಗೀತಾ ಅವರ ಟೀಮ್‌ನಲ್ಲಿ ಇರೋದು ಅಷ್ಟೇನೂ ಬಲಿಷ್ಠರಲ್ಲದ ಪಡೆ. ಹೀಗಾಗಿ ಕಾರ್ತಿಕ್ ಮತ್ತು ವಿನಯ್ ಗೆಲ್ಲುವುದಕ್ಕಾಗಿ ಏನು ಬೇಕಾದರೋ ಮಾಡೋಕೆ ರೆಡಿ ಎನ್ನೋದು ಗೊತ್ತಿರೋ ವಿಚಾರ. ಇವತ್ತು ಟಾಸ್ಕ್‌ನಲ್ಲಿ ಅದೇ ಆಗಿದೆ. ಹಾಗಾಗಿ ವಿನಯ್ ಮತ್ತು ಕಾರ್ತಿಕ್ ಇಬ್ಬರೂ ಏಟು ಮಾಡಿಕೊಂಡಿದ್ದಾರೆ…
ಬೆಂಗಳೂರು: ಒಮಿಕ್ರಾನ್ ಉಪತಳಿ JN.1 ತಳಿಯಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಇರಬೇಕು, ಕ್ರಮ ಅನುಸರಿಸಬೇಕು. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯಕೀಯ, ಹೋಂ, ಡಿಸಿಎಂ, ಸಿಎಸ್, ಹಣಕಾಸು, ತಜ್ಞರ ಸಮಿತಿ ಜೊತೆಗಿನ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಮೂವರು ಕೊರೊನಾದಿಂದ (Corona Virus) ಮೃತರಾಗಿದ್ದಾರೆ. ಆದರೆ ಅವರು ಕೋವಿಡ್ ನಿಂದಲೇ ಸತ್ತಿದ್ದಾರೆ ಅನ್ನೋಕೆ ಆಗಲ್ಲ. ಅವರಿಗೆ ಬೇರೆ ಬೇರೆ ಸಮಸ್ಯೆ ಇತ್ತು. ಅವರಿಗೆ ಕೋವಿಡ್ ಪಾಸಿಟಿವ್ ಇತ್ತು. ಆರೋಗ್ಯ ಸಚಿವರು ಈಗಾಗಲೇ ಸಭೆ ಮಾಡಿದ್ದಾರೆ ಎಂದರು. ಇಂದು ತಜ್ಞರ ಸಲಹೆಗಳನ್ನು ಪಡೆದಿದ್ದೇವೆ. ಈ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು ಎಂದು ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದೇನೆ. ಆಕ್ಸಿಜನ್, ಬೆಡ್, ಔಷಧಿ ಯಾವುದೂ ಕೊರತೆ ಆಗಬಾರದು. ಬೇರೆ ಕಾಯಿಲೆ ಇರೋರಿಗೂ ಚಿಕಿತ್ಸೆ ಕೊಡಲು ಸೂಚನೆ ನೀಡಲಾಗಿದೆ. …
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ವೈರಸ್ (Corona Virus) ಅಬ್ಬರ ಶುರುವಾಗಿದ್ದು, ಇಂದು 22 ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಓರ್ವ ವೃದ್ಧ ಕೋವಿಡ್ ಸೋಂಕಿನಿಂದ ಸಾವಿಗೀಡಾಗಿದ್ದು, ಈ ಮೂಲಕ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ 808 ಮಂದಿಗೆ ಕೋವಿಡ್ ಟೆಸ್ಟ್ (Covid Test) ನಡೆಸಲಾಗಿದೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿದೆ. 20 ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಈ ಪೈಕಿ 7 ಮಂದಿ ಐಸಿಯುನಲ್ಲಿದ್ದಾರೆ. 72 ಮಂದಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಐವರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪಾಸಿಟಿವಿಟಿ ರೇಟ್ 2.47% ರಷ್ಟಿದೆ. ಕೋವಿಡ್ ಉಪತಳಿ ಜೆಎನ್.1 ವೈರಸ್ ಬಗ್ಗೆ ಅಲರ್ಟ್ ಆಗಿರುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳನ್ನು ಅಲರ್ಟ್ ಮಾಡಿದೆ. ಆದರೆ ಇದರ ಬಗ್ಗೆ ಆತಂಕಪಡಬೇಕಿಲ್ಲ ಎಂಬ ಮಾತನ್ನು ಕೂಡ ಸೇರಿಸಿದೆ. ಕೋವಿಡ್ ಹೆಚ್ಚಾಗ್ತಿರೋ ಹಿನ್ನೆಲೆಯಲ್ಲಿ ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಖ್ ಮಾಂಡವೀಯ…
ಬೆಂಗಳೂರು: ಸಿನಿಮಾ ಮಾದರಿಯಲ್ಲಿ 20 ಕೋಟಿ ರೂ. ಮೌಲ್ಯದ 2 ಕೆಜಿ ಕೊಕೇನ್ ಕ್ಯಾಪ್ಸೂಲ್‍ಗಳನ್ನು ನುಂಗಿಕೊಂಡು ಸಾಗಿಸುತ್ತಿದ್ದ ವ್ಯಕ್ತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿ ಅಡಿಸ್ ಅಬಾಬಾದಿಂದ ಇಥಿಯೋಪಿಯಾ ಏರ್ಲೈನ್ಸ್‌ನಲ್ಲಿ ಬಂದಿದ್ದ. ಆತನ ಹೊಟ್ಟೆಯಲ್ಲಿ ಸುಮಾರು 50ಕ್ಕೂ ಹೆಚ್ಚಿನ ಕೊಕೇನ್ ಕ್ಯಾಪ್ಸೂಲ್ಸ್ ಪತ್ತೆಯಾಗಿವೆ. ಕ್ಯಾಪ್ಸೂಲ್‍ಗಳಲ್ಲಿ ಕೊಕೇನ್ ತುಂಬಿ ಅದನ್ನು ಆರೋಪಿ ನುಂಗಿಕೊಂಡು ಸಾಗಿಸುತ್ತಿದ್ದ. ಬಳಿಕ ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿ, ಹೊಟ್ಟೆಯಲ್ಲಿದ್ದ ಕ್ಯಾಪ್ಸೂಲ್‍ಗಳನ್ನು ವೈದ್ಯರು ಹೊರಗೆ ತೆಗೆದಿದ್ದಾರೆ. ಆರೋಪಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಆತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ
ಬೆಂಗಳೂರು: 24 ಲಕ್ಷ ರೂ. ಮೌಲ್ಯದ ಬೈಕ್ ಕಾರಿಗೆ ಡಿಕ್ಕಿ ಹೊಡೆದ (Bike Accident) ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಜಯನಗರದ ಅಶೋಕ ಪಿಲ್ಲರ್ ಬಳಿ ತಡರಾತ್ರಿ ನಡೆದಿದೆ. ಜಯನಗರದ (Jayanagara) ಅಶೋಕ ಪಿಲ್ಲರ್ ಬಳಿ ಘಟನೆ ನಡೆದಿದ್ದು, ಬೈಕ್ ಸವಾರ ಶೇಕ್ ನಾಸಿರ್ (32) ಸಾವನ್ನಪ್ಪಿದ್ದಾರೆ. ಹಿಂಬದಿ ಬೈಕ್ ಸವಾರ ಸೈಯದ್ ಮುದಾಸಿರ್ ಗಾಯಗೊಂಡಿದ್ದಾರೆ. ಬೈಕ್ ಸವಾರರು ದುಬಾರಿ ಬೆಲೆಯ ಬಿಎಂಡಬ್ಲ್ಯೂ ಆರ್‌ಆರ್ 1000 ಸಿಸಿ (BMW RR 1000CC Bike) ಚಲಾಯಿಸುತ್ತಿದ್ದರು. ವ್ಹೀಲಿಂಗ್ ಮಾಡುತ್ತಾ ಅತಿ ವೇಗವಾಗಿ ಬಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಶೇಕ್ ನಾಸಿರ್ ಎಂಬ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಬೈಕ್ ಸವಾರರು ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಕುತ್ತಿಗೆಗೆ ತೀವ್ರ ಏಟು ಬಿದ್ದ ಕಾರಣ ಸ್ಥಳದಲ್ಲೇ ನಾಸಿರ್ ಸಾವಿಗೀಡಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸವಾರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ…