ಚಳಿಗಾಲದಲ್ಲಿ ಸಾಮಾನ್ಯ ಸಮಸ್ಯೆ ಎಂದರೆ ಕೆಮ್ಮು. ಕೆಮ್ಮು ಒಮ್ಮೆ ಪ್ರಾರಂಭವಾದರೆ ನಿಮ್ಮ ದೈನಂದಿನ ಚಟುವಟಿಕೆಗಳ ಜೊತೆಗೆ ನಿದ್ದೆಗೂ ಅಡ್ಡಿಯುಂಟು ಮಾಡುತ್ತದೆ. ಇದರಿಂದಾಗಿ ಆಯಂಟಿಬಯೋಟಿಕ್‌ಗಳನ್ನು ಅವಲಂಬಿಸುವ ಬದಲು ಈ ಸಿಂಪಲ್ ಮನೆಮದ್ದುಗಳನ್ನು ಟ್ರೈ ಮಾಡಿ. ಕೆಮ್ಮು ಮತ್ತು ನೋಯುತ್ತಿರುವ ಗಂಟಲಿಗೆ ಜೇನುತುಪ್ಪವು ಉತ್ತಮ ಮನೆಮದ್ದು. ಚಳಿಗಾಲದಲ್ಲಿ ದೇಹವನ್ನು ಆರೋಗ್ಯವಾಗಿಡಲು ಜೇನುತುಪ್ಪವನ್ನು ವರ್ಷಗಳಿಂದ ಬಳಸಲಾಗುತ್ತಿದೆ. ಆದ್ದರಿಂದ ನೀವೂ ಕೂಡ ಒಣ ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಜೇನುತುಪ್ಪದೊಂದಿಗೆ ತುಳಸಿ ಎಲೆಯನ್ನು ಸೇವಿಸಿ. ಇದರಿಂದ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ ಮತ್ತು ದೇಹವೂ ಆರೋಗ್ಯವಾಗಿರುತ್ತದೆ. ಇದಲ್ಲದೇ ಜೇನುತುಪ್ಪದೊಂದಿಗೆ ಈರುಳ್ಳಿ ರಸವನ್ನು ಬೆರೆಸಿ ಸೇವಿಸುವುದು ಉತ್ತಮ. ಈರುಳ್ಳಿಯಲ್ಲಿ ಕ್ವೆರ್ಸೆಟಿನ್ ಸಮೃದ್ಧವಾಗಿದ್ದು, ಇದರೊಂದಿಗೆ ಜೇನುತುಪ್ಪವನ್ನು ಬೆರೆಸಿದಾಗ ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಒಂದು ಜಾರ್ನಲ್ಲಿ ಜೇನುತುಪ್ಪವನ್ನು ಹಾಕಿ. ಈಗ ಅದಕ್ಕೆ 2 ಚಮಚ ಈರುಳ್ಳಿಯ ರಸ ಸೇರಿಸಿ. ಚೆನ್ನಾಗಿ ಅಲ್ಲಾಡಿಸಿ ಮತ್ತು 5-6 ಗಂಟೆಗಳ ಕಾಲ ಮುಚ್ಚಿಡಿ ಅಥವಾ ರಾತ್ರಿಯಿಡೀ ಹೀಗೆ ಇಡಬಹುದು. ಈಗ ಈ ಮಿಶ್ರಣವನ್ನು ದಿನಕ್ಕೆ 2 ಚಮಚ…
Author: AIN Author
ಮಧುಮೇಹಿಗಳಿಗಾಗಿಯೇ ಹೊಸ ತಳಿ ಅಕ್ಕಿ ಬಂದಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರಯೋಗ ಮಾಡಲಾಗಿದೆ. ಇದರ ಕಂಪ್ಲೀಟ್ ಡೀಟೈಲ್ಸ್ ತಿಳಿಯಲು ಸುದ್ದಿ ಮಿಸ್ ಮಾಡ್ದೆ ಓದಿ. ಬಿಳಿ ಅಕ್ಕಿ ಅನ್ನ ಕಂಡರೆ ಭಯಬೀಳುವ ಮಧುಮೇಹಿಗಳಿಗಾಗಿ ಸಕ್ಕರೆ ಅಂಶ ಕಡಿಮೆ ಇರುವ ಭತ್ತವನ್ನು ಈಗ ರಾಜ್ಯದ ರೈತರು ಬೆಳೆಯಲು ಆರಂಭಿಸಿದ್ದಾರೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ‘ಆರ್‌ಎನ್‌ಆರ್–15048’ ಎಂಬ ಭತ್ತದ ತಳಿಯನ್ನು ಪರಿಚಯಿಸಲಾಗಿದೆ. ಸೋನಾ ಮಸೂರಿ ಸೇರಿದಂತೆ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಈ ಅಕ್ಕಿ ಕಡಿಮೆ ‘ಗ್ಲೈಸಿಮಿಕ್ ಇಂಡೆಕ್ಸ್’ (ಜಿ.ಐ–ಕಾರ್ಬೋಹೈಡ್ರೇಟ್ ಹೊಂದಿರುವ ಆಹಾರಗಳಿಗೆ ರೇಟಿಂಗ್) ಹೊಂದಿದೆ. ಇತರ ತಳಿಯ ಅಕ್ಕಿ ಸಾಮಾನ್ಯವಾಗಿ ಶೇ 56.5ರಷ್ಟು ಜಿ.ಐ ಹೊಂದಿದ್ದರೆ, ಈ ತಳಿಯ ಅಕ್ಕಿ ಶೇ 51.5ರಷ್ಟು ಹೊಂದಿದೆ. ರಾಗಿ ಹಾಗೂ ಸಿರಿ ಧಾನ್ಯಗಳ ರೀತಿಯಲ್ಲಿಯೇ ಆರ್‌ಎನ್‌ಆರ್–15048 ಭತ್ತದ ತಳಿಯ ಅಕ್ಕಿಯು ನಿಧಾನವಾಗಿ ದೇಹಕ್ಕೆ ಸಕ್ಕರೆ ಅಂಶ ಬಿಡುಗಡೆ ಮಾಡುವ ವಿಶೇಷ ಗುಣ ಹೊಂದಿದೆ. ಆರ್‌ಎನ್‌ಆರ್ ತಳಿಯ ಭತ್ತದಿಂದ ತಯಾರಿಸಿದ ಅಕ್ಕಿಯು ಸೋನಾ ಮಸೂರಿಯಂತೆ ಗಾತ್ರದಲ್ಲಿ…
ರಾಯಬಾಗ :-ತಾಲೂಕೀನ ಅಳಗವಾಡಿ ಗ್ರಾಮದ ಹೊರವಲಯದ ಕೆನಾಲ ಕಾಲೂವೆಗೆ ಬಿದ್ದು ಬೈಕ್ ಸವಾರ ಸ್ಥಳದಲ್ಲಿ ಸಾವು ಅವನ ಜೋತೆಗೆ ಇದ್ದವರು ಸುಮಾರ ೫ ರಿಂದ ೬ ಅಡಿ ಆಳದ ಕಾಲೂವೆಗೆ ಇಳಿದು ಬಿದ್ದಿದ ಬೈಕ್‌ನ್ನು ಎತ್ತಿಕೊಂಡು ಯಾರ ಕಣ್ಣಿಗೆ ಕಾಣದಂತೆ ಪರಾರಿಯಾಗಿದ್ದಾರೆ. ಮೃತ ಬೈಕ್ ಸವಾರ ಅಜೀತ ಮಾಂಗ (೨೩) ಉಗಾರ ಗ್ರಾಮದ ಯುವಕ ಚಿಕ್ಕನಿಂದಲು ಅಳಗವಾಡಿ ಗ್ರಾಮದ ತನ್ನ ಸೊದರ ಮಾವನ ಮನೆಯಲ್ಲೆ ಕೂಲಿ ಕೆಲಸ ಮಾಡಿಕೊಂಡು ಇದ್ದ, ಬುಧವಾರ ರಾಯಬಾಗ ಶಾಸಕ ಡಿ.ಎಂ ಐಹೋಳೆ ಇವರ ಸಹೋದರನ ತೋಟದಲ್ಲಿ ಶ್ರೀ ಯಲ್ಲಮ್ಮಾದೇವಿ ಜಾತ್ರೆ ನಿಮಿತ್ಯ ಉತ್ತರ ಕರ್ನಾಟಕ ಜಾನಪದ ಕಲಾವಿದ ಪರಶು ಕೋಲ್ಲುರ ಇವರು ರಸಮಂಜರಿ ಕಾರ್ಯಕ್ರಮ ನೋಡಿಕೊಂಡು ಬರುವಾಗ ಈ ಅವಗಡ ಸಂಭವಿಸಿದೆ, ಈ ಘಟನೆ ಹಾರೂಗೇರಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಹಾರೂಗೇರಿ ಪೋಲಿಸ್ ಠಾಣೆಯ ಸಿ.ಪಿ.ಆಯ್ ರವಿಚಂದ್ರ ಡಿಬಿ ಬೆಳಗ್ಗೆ ಸ್ಥಳಕ್ಕೆ ಬಂದು ಸ್ಥಳ ಪರಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು. ಬೈಕ್‌ನೊಂದಿಗೆ ಪಾರಿಯಾದವರಿಗೆ ಪೊಲಿಸರು…
ನವದೆಹಲಿ:- ಸಂಸದರ ಮನವಿ ಮೇರೆಗೆ ಅಮಾನತು ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡುವಂತೆ ಕೆಲ ಸಂಸದರು ಅವರಾಗಿಯೇ ಮನವಿ ಮಾಡಿದ್ದರು’ ಎಂದರು. ಅಷ್ಟೊಂದು ಸಂಸದರನ್ನು ಅಮಾನತುಗೊಳಿಸುವ ಉದ್ದೇಶ ಸರ್ಕಾರಕ್ಕೆ ಇರಲಿಲ್ಲ. ಆದರೆ ಅಶಿಸ್ತಿಗಾಗಿ ಕೆಲವು ಸಂಸದರನ್ನು ಅಮಾನತು ಮಾಡಿದಾಗ, ಆ ಪಕ್ಷಗಳ ಇತರ ಸದಸ್ಯರು ತಮ್ಮನ್ನೂ ಅಮಾನತು ಮಾಡುವಂತೆ ಮನವಿ ಮಾಡಿಕೊಂಡರು. ಕಾಂಗ್ರೆಸ್ ಪಕ್ಷ ಯಾವ ಮಟ್ಟಕ್ಕೂ ಇಳಿಯಲು ಸಿದ್ಧ’ ಎಂದು ಕಿಡಿಕಾರಿದರು. ‘ಭಿತ್ತಿಪತ್ರಗಳನ್ನು ತಂದು ಅಶಿಸ್ತು ತೋರುವವರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ ನೀಡಲಾಗಿತ್ತು. ಆದರೂ ಅಶಿಸ್ತು ತೋರಿದರು. ಅಮಾನತು ಆಗಬೇಕೆಂಬುದೇ ಅವರ ಉದ್ದೇಶವಾಗಿತ್ತು’ ಎಂದರು. ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯ 100 ಮತ್ತು ರಾಜ್ಯಸಭೆಯ 46 ಸಂಸದರು ಸೇರಿ ಒಟ್ಟು 146 ಮಂದಿಯನ್ನು ಅಮಾನತು ಮಾಡಲಾಗಿದೆ ಎಂದರು.
ಬೆಂಗಳೂರು:- ಆರು ಬಾರಿ ಜೈಲಿಗೆ ಹೋಗಿ ಬಂದ್ರೂ ಬುದ್ದಿ ಕಲಿಯದ ಪಿಂಪ್ ನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವೇಶ್ಯವಾಟಿಕೆ ಜಾಲ ಮುಂದುವರೆಸಿದ್ದ ಮಂಜುನಾಥ್ ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಆರೋಪಿಯು, ಹುಳಿಮಾವು, ಮಡಿವಾಳ, ಪುಟ್ಟೇನಹಳ್ಳಿ, ಮೈಕೊ ಲೇಔಟ್, ಸುದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ. ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಹೊರರಾಜ್ಯದ ಯುವತಿಯರು ಇವನು ಟಾರ್ಗೆಟ್ ಮಾಡುತ್ತಿದ್ದ. ಯುವತಿಯರನ್ನ ಕೆಲಸದ ಆಮಿಷವೊಡ್ಡಿ ಮಾನವ ಕಳ್ಳಸಾಗಾಣಿಕೆ ಮಾಡಿ ದಂಧೆಗೆ ನೂಕುತ್ತಿದ್ದ. ಯುವತಿಯರನ್ನ ಲಾಡ್ಜ್, ಬಾಡಿಗೆ ಮನೆಗಳಲ್ಲಿ ಇರಿಸಿಕೊಂಡು ದಂಧೆ ಮಾಡುತ್ತಿದ್ದ. ಆರೋಪಿ ವಿರುದ್ಧ ಈ ಮುನ್ನ ವಿವಿಧ ಠಾಣೆಗಳಲ್ಲಿ 7 ಪ್ರಕರಣ ದಾಖಲಾಗಿತ್ತು. ಜಾಮೀನು ಪಡೆದು ಮತ್ತೆ ವೇಶಾವ್ಯಾಟಿಕೆ ಜಾಲದಲ್ಲಿ ಆರೋಪಿ ತೊಡಗಿಸಿಕೊಂಡಿದ್ದ. ಈ ಹಿನ್ನೆಲೆ ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹುಬ್ಬಳ್ಳಿ :- ಡಿ. 23, 24 ರಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನ ನಡೆಯಲಿದೆ. ಇದೇ ಡಿಸೆಂಬರ್ 23 ಮತ್ತು 24 ರಂದು ದಾವಣಗೆರೆಯಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ 24ನೇ ರಾಷ್ಟ್ರೀಯ ಮಹಾ ಅಧಿವೇಶನಕ್ಕೆ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ ಮಹಾ ಅಧಿವೇಶನದ ಯಶಸ್ವಿಗೆ ತಮ್ಮ ಉಪಸ್ಥಿತಿ ಬಹಳ ಮಹತ್ವವಾದುದು. ಎರಡು ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ಸಮ್ಮೇಳನದಲ್ಲಿ ಸಮಾಜದ ಸಮಸ್ಯೆಗಳ ಬೆಳಕ ಚೆಲ್ಲುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಹಕ್ಕುತ್ತಾಯ ಹಾಗೂ ಹಲವಾರು ನಿರ್ಣಯಗಳನ್ನು ಕೈಗೊಳ್ಳುತ್ತಿದ್ದು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಘಟಕದ ಪೋಷಕರು ಸಮಾಜದ ಮುಖಂಡರಾದ ಸದಾನಂದ ವಿ ಡಂಗನವರ ವಿನಂತಿ ಮಾಡಿಕೊಂಡಿದ್ದಾರೆ.
ಸಕ್ಕರೆ ಇರುವ ಆಹಾರವೆಂದರೆ ಎಲ್ಲರಿಗೂ ಇಷ್ಟವೇ. ಆದರೆ, ಇದರಿಂದ ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ. ನಮ್ಮ ಆಹಾರಪದ್ಧತಿಯಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಸಕ್ಕರೆ ಇರುವ ಆಹಾರವೆಂದರೆ ಎಲ್ಲರಿಗೂ ಇಷ್ಟವೇ. ಆದರೆ, ಇದರಿಂದ ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ. ತೂಕ ನಿಯಂತ್ರಣ: ಸಕ್ಕರೆಯ ಬಳಕೆಯನ್ನು ಕಡಿಮೆ ಮಾಡುವ ಅತ್ಯಂತ ತಕ್ಷಣದ ಮತ್ತು ಗಮನಾರ್ಹವಾದ ಪ್ರಯೋಜನವೆಂದರೆ ಪರಿಣಾಮಕಾರಿ ತೂಕ ನಿರ್ವಹಣೆ. ಹೆಚ್ಚಿನ ಸಕ್ಕರೆ ಸೇವನೆಯು ಸ್ಥೂಲಕಾಯತೆಯ ಹೆಚ್ಚಿನ ಅಪಾಯಕ್ಕೆ ಕಾರಣವಾಗಬಹುದು. ಸಕ್ಕರೆಯ ಆಹಾರಗಳು ಮತ್ತು ಪಾನೀಯಗಳಲ್ಲಿ ಸಾಮಾನ್ಯವಾಗಿ ಕ್ಯಾಲೋರಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಸಕ್ಕರೆ ಸೇವನೆಯನ್ನು ನಿಯಂತ್ರಿಸುವ ಮೂಲಕ ಜನರು ತಮ್ಮ ಕ್ಯಾಲೋರಿ ಸೇವನೆಯನ್ನು ಉತ್ತಮವಾಗಿ ನಿಯಂತ್ರಿಸಬಹುದು. ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ: ಅತಿಯಾದ ಸಕ್ಕರೆ ಸೇವನೆಯು ಟೈಪ್ 2 ಮಧುಮೇಹದ ಬೆಳವಣಿಗೆಗೆ ನಿಕಟ…
ಹುಬ್ಬಳ್ಳಿ;ಹಳೇ ಹುಬ್ಬಳ್ಳಿಯ ಅಕ್ಕಿಪೇಟಯಲ್ಲಿ ಆಯೋಜಿಸಿದ ಮೋದಿ ಸರ್ಕಾರ ಗ್ಯಾರಂಟಿ ವಿಕಸಿತ ಭಾರತ ಯಾತ್ರೆಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ರವರು ಗಿಡಕ್ಕೆ ನೀರು ಉಣಿಸುವ ಮೂಲಕ ಕೇಂದ್ರ ಸರ್ಕಾರದ ಯೋಜನೆಯನ್ನು ವಿಡಿಯೋ ಮಾಹಿತಿ ನೀಡುವ ವಾಹನಕ್ಕೆ ಚಾಲನೆ ನೀಡಿದರು. ಹಮ್ಮಿಕೊಂಡಿದ್ದ ಕೇಂದ್ರ ಸರಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರಾ ಚಾಲನೆ ನೀಡಿದ ನಂತರ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಜನರ ಆರ್ಥಿಕ ಸ್ಥಿತಿ ಸುಧಾರಿಸುವ ಸದುದ್ದೇಶ ಹಾಗೂ 2047 ರ ಹೊತ್ತಿಗೆ ಭಾರತ ಆರ್ಥಿಕವಾಗಿ ಸದೃಢವಾಗಬೇಕೆಂಬ ಸಂಕಲ್ಪದೊಂದಿಗೆ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಬೃಹತ್ ಅಭಿಯಾನವನ್ನು ಆರಂಭಿಸಿದ್ದಾರೆ. ಕೇಂದ್ರದ ಸರ್ಕಾರದ ಮುದ್ರಾಯೋಜನೆ, ಜನಧನ್ ಯೋಜನೆ, ಪಿ.ಎಂ ವಿಶ್ವಕರ್ಮ ಯೋಜನೆ, ಉಜ್ವಲ ಯೋಜನೆ, ಕೃಷಿ ಸನ್ಮಾನ್ ಯೋಜನೆ, ಅನ್ನ ಭಾಗ್ಯ ಯೋಜನೆ, ಸೇರಿದಂತೆ ವಿವಿಧ ಯೋಜನೆಗಳ ಮಾಹಿತಿ ಎಲ್‌ಇಡಿ ಪರದೆಯ ವಾಹನಗಳ ಮೂಲಕ ಗ್ರಾಮ ಪಂಚಾಯತ ಹಾಗೂ…
ದೇವನಹಳ್ಳಿ:- ದೆಹಲಿಯಿಂದ ಕೆಂಪೇಗೌಡ ವಿಮಾನನಿಲ್ದಾಣಕ್ಕೆ ಇಂದು ಸಂಜೆ 5.30 ರ ವಿಸ್ತಾರ ವಿಮಾನದಲ್ಲಿ ಸಂಸದ ಪ್ರತಾಪ್ ಸಿಂಹ ಆಗಮಿಸಿದರು. ಈ ವೇಳೆ ಮಾಧ್ಯಮಗಳು ಪ್ರಶ್ನೆ ಕೇಳಲು ಮುಂದಾದಾಗ, ಲೋಕಸಭೆ ಘಟನೆಯ ಬಗ್ಗೆ ಮಾತನಾಡಲು ನಿರಾಕರಣೆ ಮಾಡಿದ್ದಾರೆ. ನಾನು ಮಾತನಾಡಲ್ಲ ಬಿಡ್ರಪ್ಪ ಎಂದು ಪ್ರತಿಕ್ರಿಯೆ ನೀಡದೇ ಪ್ರತಾಪ್ ಸಿಂಹ ಹೊರಟಿದ್ದಾರೆ.
ಬೆಂಗಳೂರು:- ರಾಜಗೋಪಾಲ ನಗರ ಪೊಲೀಸರಿಂದ ಕುಖ್ಯಾತ ರಾಬರಿ ಗ್ಯಾಂಗ್ ಅನ್ನು ಅರೆಸ್ಟ್ ಮಾಡಲಾಗಿದೆ. ಅಭಿಷೇಕ್ @ ಅಭಿ, ಸುಧಾ, ಲಕ್ಷ್ಮಮ್ಮ, ಕಾವೇರಿ, ಬಂಧಿತರು. ಬಂಧಿತರ ಪೈಕಿ ಅಭಿ ಬೇರೊಂದು ಗ್ಯಾಂಗ್ ಜೊತೆ ಮನೆ ಕಳ್ಳತನ ಮಾಡುತ್ತಿದ್ದ. ಕಳ್ಳತನದ ಬಳಿಕ ಬಂಧಿತರಾದ ಸುಧಾ, ಲಕ್ಷ್ಮಮ್ಮ, ಕಾವೇರಿಗೆ ತಂದು ಕೊಡುತ್ತಿದ್ದ. ಬಳಿಕ ಅಡವಿಡೋ, ಮಾರಾಟ ಮಾಡುತ್ತಿದ್ದ ಸುಧಾ, ಲಕ್ಷ್ಮಮ್ಮ, ಕಾವೇರಿ, ಇದೀಗ ಪೊಲೀಸರಿಂದ 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ.