ರಾಯಬಾಗ :-ತಾಲೂಕೀನ ಅಳಗವಾಡಿ ಗ್ರಾಮದ ಹೊರವಲಯದ ಕೆನಾಲ ಕಾಲೂವೆಗೆ ಬಿದ್ದು ಬೈಕ್ ಸವಾರ ಸ್ಥಳದಲ್ಲಿ ಸಾವು ಅವನ ಜೋತೆಗೆ ಇದ್ದವರು ಸುಮಾರ ೫ ರಿಂದ ೬ ಅಡಿ ಆಳದ ಕಾಲೂವೆಗೆ ಇಳಿದು ಬಿದ್ದಿದ ಬೈಕ್ನ್ನು ಎತ್ತಿಕೊಂಡು ಯಾರ ಕಣ್ಣಿಗೆ ಕಾಣದಂತೆ ಪರಾರಿಯಾಗಿದ್ದಾರೆ.
ಮೃತ ಬೈಕ್ ಸವಾರ ಅಜೀತ ಮಾಂಗ (೨೩) ಉಗಾರ ಗ್ರಾಮದ ಯುವಕ ಚಿಕ್ಕನಿಂದಲು ಅಳಗವಾಡಿ ಗ್ರಾಮದ ತನ್ನ ಸೊದರ ಮಾವನ ಮನೆಯಲ್ಲೆ ಕೂಲಿ ಕೆಲಸ ಮಾಡಿಕೊಂಡು ಇದ್ದ,
ಬುಧವಾರ ರಾಯಬಾಗ ಶಾಸಕ ಡಿ.ಎಂ ಐಹೋಳೆ ಇವರ ಸಹೋದರನ ತೋಟದಲ್ಲಿ ಶ್ರೀ ಯಲ್ಲಮ್ಮಾದೇವಿ ಜಾತ್ರೆ ನಿಮಿತ್ಯ ಉತ್ತರ ಕರ್ನಾಟಕ ಜಾನಪದ ಕಲಾವಿದ ಪರಶು ಕೋಲ್ಲುರ ಇವರು ರಸಮಂಜರಿ ಕಾರ್ಯಕ್ರಮ ನೋಡಿಕೊಂಡು ಬರುವಾಗ ಈ ಅವಗಡ ಸಂಭವಿಸಿದೆ,
ಈ ಘಟನೆ ಹಾರೂಗೇರಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ
ಹಾರೂಗೇರಿ ಪೋಲಿಸ್ ಠಾಣೆಯ ಸಿ.ಪಿ.ಆಯ್ ರವಿಚಂದ್ರ ಡಿಬಿ ಬೆಳಗ್ಗೆ ಸ್ಥಳಕ್ಕೆ ಬಂದು ಸ್ಥಳ ಪರಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು. ಬೈಕ್ನೊಂದಿಗೆ ಪಾರಿಯಾದವರಿಗೆ ಪೊಲಿಸರು ಬಲೆ ಬಿಸಿದ್ದಾರೆ.