ನಿಂಬೆಹಣ್ಣುಗಳು ಸಿಟ್ರಸ್ ಅಂಶವನ್ನು ಹೊಂದಿರುವ ಹಣ್ಣಾಗಿದ್ದು, ಅವುಗಳ ಪೌಷ್ಟಿಕಾಂಶದ ಅಂಶದಿಂದಾಗಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ನಿಂಬೆಹಣ್ಣಿನ ಸೇವನೆಯ ಕೆಲವು ಆರೋಗ್ಯ ಪ್ರಯೋಜನಗಳು ಇಲ್ಲಿವೆ: ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ನಿಂಬೆ ರಸ, ವಿಶೇಷವಾಗಿ ಬೆಚ್ಚಗಿನ ನೀರಿನಲ್ಲಿ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕ್ಷಾರೀಯ ಗುಣಗಳು: ಪ್ರಕೃತಿಯಲ್ಲಿ ಆಮ್ಲೀಯವಾಗಿದ್ದರೂ, ನಿಂಬೆಹಣ್ಣುಗಳು ಒಮ್ಮೆ ಚಯಾಪಚಯಗೊಂಡ ನಂತರ ದೇಹದ ಮೇಲೆ ಕ್ಷಾರೀಯ ಪರಿಣಾಮವನ್ನು ಬೀರುತ್ತದೆ. ದೇಹದ pH ಮಟ್ಟವನ್ನು ಸಮತೋಲನಗೊಳಿಸುವುದು ಆರೋಗ್ಯ ಪ್ರಯೋಜನಗಳನ್ನು ಹೊಂದಿರಬಹುದು. ಚರ್ಮದ ಆರೋಗ್ಯ: ಇದರ ಸೇವನೆ ಆರೋಗ್ಯಕರ ಚರ್ಮವನ್ನು ಉತ್ತೇಜಿಸುತ್ತದೆ. ಮುಖಕ್ಕೆ ನಿಂಬೆ ರಸವನ್ನು ಹಚ್ಚುವದರಿಂದ ಮೊಡವೆ ಮತ್ತು ಕಪ್ಪು ಕಲೆಗಳಂತಹ ಸಮಸ್ಯೆಗಳಿಗೆ ಸಹಾಯ ಮಾಡಬಹುದು. ಹೃದಯದ ಆರೋಗ್ಯ: ನಿಂಬೆಹಣ್ಣಿನಲ್ಲಿರುವ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ತಡೆಗಟ್ಟುವಿಕೆ: ಕೆಲವು ಅಧ್ಯಯನಗಳು ನಿಂಬೆಹಣ್ಣಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿರಬಹುದು ಎಂದು ಸೂಚಿಸಿವೆ. ಕಿಡ್ನಿ ಸ್ಟೋನ್ ತಡೆಗಟ್ಟುವಿಕೆ: ನಿಂಬೆಯಲ್ಲಿರುವ ಸಿಟ್ರಿಕ್ ಆಮ್ಲವು ಮೂತ್ರದ ಪ್ರಮಾಣ…
Author: AIN Author
ದುಬೈ: ಐಪಿಎಲ್-2024 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಪೀಸ್ ಪೀಸ್ ಮಾಡಿದ್ದಾರೆ. 2 ಕೋಟಿ ಮೂಲ ಬೆಲೆಯೊಂದಿಗೆ ಮಿಚೆಲ್ ಸ್ಟಾರ್ಕ್ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಈ ಮಾರಕ ವೇಗಿ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್, ಕೆಕೆಆರ್ ಹಾಗೂ ಗುಜರಾತ್ ನಡುವೆ ಭರ್ಜರಿ ಫೈಟ್ ನಡೆಯಿತು. ಇವರು ಅಂತಿಮವಾಗಿ ಬರೋಬ್ಬರಿ 24.75 ಕೋಟಿಗೆ ಕೋಲ್ಕತ್ತಾ ನೈಟ್‌ರೈಡರ್ಸ್ (KKR) ಪಾಲಾಗಿದ್ದಾರೆ. ಈ ಮೂಲಕ ಸ್ಟಾರ್ಕ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಸದ್ಯ ಐಪಿಎಲ್ ಹರಾಜಿನಲ್ಲಿ ಬಿಕರಿಯಾದ ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ನಂತರದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ 20.50 ಕೋಟಿ, ಸ್ಯಾಮ್ ಕರ್ರನ್ 18.50 ಕೋಟಿ, ಕ್ಯಾಮರೂನ್ ಗ್ರೀನ್ 17.50 ಕೋಟಿಗೆ ಬಿಕರಿಯಾಗಿದ್ದರು. ಆಸಿಸ್ ಆಟಗಾರರ ಮೇಲೆ 50 ಕೋಟಿ ವಿಶ್ವ ಚಾಂಪಿಯನ್ ಆಸಿಸ್ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳು ಸಾಕಷ್ಟು ಹಣದ ಮಳೆ ಸುರಿಸಿದೆ. ಕೇವಲ ಮೂವರು ಆಟಗಾರರಿಗೆ 50 ಕೋಟಿ…
Instagram ಬಳಕೆದಾರರಿಗೆ ವೀಡಿಯೊ ಟಿಪ್ಪಣಿಗಳನ್ನು ಹಂಚಿಕೊಳ್ಳಲು ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ವಾಟ್ಸಾಪ್‌ನಲ್ಲಿ ಸ್ಟೇಟಸ್‌ಗಳನ್ನು ಹೋಲುವ ವೈಶಿಷ್ಟ್ಯವಾಗಿ ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಮ್‌ನಿಂದ ಟಿಪ್ಪಣಿಗಳನ್ನು ಅನಾವರಣಗೊಳಿಸಲಾಯಿತು. ಈ ಹಿಂದೆ, ಬಳಕೆದಾರರು ತಮ್ಮ ಸ್ಟೇಟಸ್ ಅಪ್‌ಡೇಟ್‌ಗೆ ಪಠ್ಯ ಅಥವಾ ಎಮೋಜಿಗಳನ್ನು ಮಾತ್ರ ಅಪ್‌ಲೋಡ್ ಮಾಡಬಹುದಾಗಿತ್ತು. ಈಗ ಅವರು ಎರಡು-ಸೆಕೆಂಡ್ ಲೂಪಿಂಗ್ ವೀಡಿಯೊ ಟಿಪ್ಪಣಿಯನ್ನು ಹಂಚಿಕೊಳ್ಳಬಹುದು, ಇದನ್ನು ಬಳಕೆದಾರರು ಪರಸ್ಪರ ಅನುಯಾಯಿಗಳೊಂದಿಗೆ ಅಥವಾ ಅವರ ನಿಕಟ ಸ್ನೇಹಿತರ ಪಟ್ಟಿಯೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತೊಂದು ಸೋರಿಕೆಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಹೊಸ ಗೌಪ್ಯತೆ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಎಂದು ಸೂಚಿಸುತ್ತದೆ ಅದು ಬಳಕೆದಾರರು ಪೋಸ್ಟ್‌ಗಳು ಮತ್ತು ರೀಲ್‌ಗಳಲ್ಲಿ ತಮ್ಮ ಇಷ್ಟಗಳನ್ನು ಯಾರು ವೀಕ್ಷಿಸಬಹುದು ಎಂಬುದನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ. Instagram ಬೆಂಬಲ ಪುಟದಲ್ಲಿ, ಬಳಕೆದಾರರು ಈಗ ಸಣ್ಣ, ಲೂಪಿಂಗ್ ವೀಡಿಯೊ ಟಿಪ್ಪಣಿಗಳನ್ನು ಹಂಚಿಕೊಳ್ಳಬಹುದು ಎಂದು ಪ್ಲಾಟ್‌ಫಾರ್ಮ್ ಗಮನಿಸಿದೆ. ಇದನ್ನು ಮೊದಲು ಟೆಕ್ಕ್ರಂಚ್ ಗುರುತಿಸಿದೆ. ವೈಶಿಷ್ಟ್ಯವು ಪ್ರಸ್ತುತ ಮುಂಭಾಗದ ಕ್ಯಾಮೆರಾದಿಂದ ಸೆರೆಹಿಡಿಯಲಾದ ವೀಡಿಯೊವನ್ನು ಬೆಂಬಲಿಸುತ್ತದೆ. Instagram ಸ್ಟೋರಿಗಳಿಗಿಂತ ಭಿನ್ನವಾಗಿದ್ದರೂ, ಸ್ಟೋರಿಗಳಂತೆಯೇ ವೀಡಿಯೊ…
ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್, ಪ್ರತಿ ಬಾರಿಯೂ ಜೈಲಿನಿಂದ ಜಾಕ್ವೆಲಿನ್ ಗೆ ಪ್ರೇಮ ಪತ್ರ ಕಳುಹಿಸುತ್ತಿದ್ದರು. ಇದೇ ಮೊದಲ ಬಾರಿಗೆ ಬೆದರಿಕೆಯ ಪತ್ರ ಬರೆದಿದ್ದಾರೆ. ನನ್ನ ವಿರುದ್ಧ ಕ್ರಮಕ್ಕೆ ಮುಂದಾದರೆ, ನಿನ್ನ ಬಣ್ಣ ಬಯಲು ಮಾಡುವುದಾಗಿ ತಿಳಿಸಿದ್ದಾರೆ. ತಾವು ಕೊಟ್ಟಿರುವ ಗಿಫ್ಟ್ ಅನ್ನು ಸಾಕ್ಷಿ ಸಮೇತ ತಿಳಿಸುವುದಾಗಿ ಹೇಳಿದ್ಧಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಸುಕೇಶ್ ಇಷ್ಟೊಂದು ಗರಂ ಆಗೋಕೆ ಕಾರಣ, ಜಾಕ್ವೆಲಿನ್ ಕಾನೂನು ಕ್ರಮಕ್ಕೆ ಮುಂದಾಗಿರೋದು. ಮೊನ್ನೆಯಷ್ಟೇ ಬಹುಕೋಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಕೋರ್ಟ್ ಮೆಟ್ಟಿಲು ಏರಿದ್ದರು. ಸುಕೇಶ್ ಚಂದ್ರಶೇಖರ್ (Sukesh Chandrasekhar) ಮಾಡಿದ್ದಾರೆ ಎನ್ನಲಾದ ಬಹುಕೋಟಿ ವಂಚನೆ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಇದೀಗ ಸುಕೇಶ್ ವಿರುದ್ಧ ಮತ್ತೆ ಜಾಕ್ವೆಲಿನ್ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ. ಜಾಕ್ವೆಲಿನ್ ಗೆ ಸಂಬಂಧಿಸಿದಂತೆ ಸುಕೇಶ್ ತಿಂಗಳಿಗೊಂದಾದರೂ ಮಾಧ್ಯಮ ಹೇಳಿಕೆಯನ್ನು ನೀಡುತ್ತಿದ್ದಾನೆ. ಇನ್ನೂ ಜಾಕ್ವೆಲಿನ್…
ಡಿಸೆಂಬರ್ 26 ರಿಂದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ಮೊದಲನೇ ಟೆಸ್ಟ್ ಪಂದ್ಯ ನಡೆಯಲಿದೆ. ಡಿಸೆಂಬರ್ 19 ರಂದೇ ಕೊಹ್ಲಿ ತಂಡವನ್ನು ತೊರೆದಿದ್ದರು. ಡಿ. 22 ರಂದು ಭಾರತ ತಂಡವನ್ನು ಕೊಹ್ಲಿ ಕೂಡಿಕೊಳ್ಳಲಿದ್ದಾರೆಂದು ಕ್ರಿಕ್‌ಬಝ್ ವರದಿ ಮಾಡಿದೆ. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಗವಾಗಿ ಭಾರತ ತಂಡಕ್ಕೆ ಈ ಎರಡು ಪಂದ್ಯಗಳ ಟೆಸ್ಟ್ ಸರಣಿ ಅತ್ಯಂತ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಮೊದಲನೇ ಟೆಸ್ಟ್‌ಗೂ ಮುನ್ನ ದಕ್ಷಿಣ ಆಫ್ರಿಕಾಕ್ಕೆ ತೆರಳಿ ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆಂಬ ಬಗ್ಗೆ ವಿಶ್ವಾಸವಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಋತುರಾಜ್ ಗಾಯಕ್ವಾಡ್ ಅವರು ಫೀಲ್ಡಿಂಗ್ ವೇಗಿ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಾರ್ಲ್‌ನಲ್ಲಿ ಗುರುವಾರ ನಡೆದಿದ್ದ ಮೂರನೇ ಹಾಗೂ ಸರಣಿಯ ಕೊನೆಯ ಪಂದ್ಯಕ್ಕೆ ಗಾಯಕ್ವಾಡ್ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ರಜತ್ ಪಾಟಿದಾರ್ ಅವರು ಅಂತಾರಾಷ್ಟ್ರೀಯ…
ಹನುಮಾನ ಜಯಂತಿ ಸೂರ್ಯೋದಯ: 06.38 AM, ಸೂರ್ಯಾಸ್ತ : 06.00 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ದ್ವಾದಶಿ 06:24 AM ತನಕ ನಂತರ ತ್ರಯೋದಶಿ ನಕ್ಷತ್ರ: ಇವತ್ತು ಕೃತ್ತಿಕ 09:19 PM ತನಕ ನಂತರ ರೋಹಿಣಿ ಯೋಗ: ಇವತ್ತು ಸಿದ್ದಿ 07:18 AM ತನಕ ನಂತರ ಸಾಧ್ಯ ಕರಣ: ಇವತ್ತು ಬಾಲವ 06:24 AM ತನಕ ನಂತರ ಕೌಲವ 06:07 PM ತನಕ ನಂತರ ತೈತಲೆ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ:03:00 ನಿಂದ 04:30 ವರೆಗೂ ಅಮೃತಕಾಲ: 06.55 PM to 08.31 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:53 ನಿಂದ ಮ.12:37 ವರೆಗೂ ಮೇಷ ರಾಶಿ ಅಡುಗೆ ಗುತ್ತಿಗೆದಾರರಿಗೆ ಧನಲಾಭ, ಕುರಿ ಕೋಳಿ ಸಾಕಾಣಿಕೆ ಉದ್ಯಮದವರಿಗೆ ಆರ್ಥಿಕ ಚೇತರಿಕೆ,ಗಂಡು ಸಂತಾನ ಜನನ…
ಬಾಗಲಕೋಟೆ:- ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ಶ್ರಮಿಸಲಾಗುವುದು ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮೂರ್ನಾಲ್ಕು ಜನರಲ್ಲಿ ಸ್ವಲ್ಪ ಅಸಮಾಧಾನ ಇರುವುದು ನಿಜ. ಆದರೆ, ಅವರು ಪಕ್ಷ ವಿರೋಧಿ ಹೇಳಿಕೆ ನೀಡಿಲ್ಲ ಎಂದರು. ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ, ಮಾಜಿ ಸಚಿವ ವಿ.ಸೋಮಣ್ಣ, ಶಾಸಕ ಅರವಿಂದ ಬೆಲ್ಲದ ಅವರ ಅಸಮಾಧಾನ ವಿಚಾರಕ್ಕೆ ಈ ರೀತಿ ಪ್ರತಿಕ್ರಿಯಿಸಿದರು ಅವರೆಲ್ಲ ಬಹಿರಂಗವಾಗಿಯೇ ಹೇಳಿದ್ದಾರೆ. ನಾನು ಕೂಡ ಅದರಲ್ಲಿ ಮುಚ್ಚು ಮರೆಯಿಲ್ಲದೆ ಹೇಳುವೆ. ಹೌದು, ನಿನ್ನೆ ತನಕ ಬಿಜೆಪಿಯಲ್ಲಿನ ಕೆಲವರಲ್ಲಿ ಅಸಮಾಧಾನ ಇತ್ತು. ನಿನ್ನೆ ರಾಷ್ಟ್ರೀಯ ನಾಯಕರ ಭೇಟಿ ಬಳಿಕ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವೆ ಎಂದು ವಿಜಯೇಂದ್ರ ಹೇಳಿದ್ದಾರೆ. ಪಕ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಯಾರಿಗೂ ಗೊಂದಲವಿಲ್ಲ. ನಮ್ಮಲ್ಲಿ ಮೂರ್ನಾಲ್ಕು ಜನಕ್ಕೆ ಅಸಮಾಧಾನ ಇತ್ತು, ಈಗ ಅದನ್ನ ಸರಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು…
ಬಿಗ್ಬಾಸ್ ಮನೆಯ ಒಳಗೆ ಮೊಬೈಲ್ ಬಳಸುತ್ತಾರೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ಕಾರಣವೂ ಇದೆ. ಮನೆಯ ಪ್ಲಗ್ ಒಂದರಲ್ಲಿ ಮೊಬೈಲ್ ಚಾರ್ಜರ್ ಅಳವಡಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಂಗೀತಾ ಶೃಂಗೇರಿ ಮರೆಯಾಗಿದ್ದರಿಂದ ಚಾರ್ಜರ್ ಮಾತ್ರ ಗೋಚರವಾಗಿ ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಟ ಕಿಚ್ಚ ಸುದೀಪ್ ಕೆಸಿಸಿಯಲ್ಲಿ ಬಿಜಿಯಾಗಿರುವುದರಿಂದ ಇಂದಿನ ವಾರದ ಪಂಚಾಯಿತಿಗಾಗಿ ನಟಿ ಶ್ರುತಿ ದೊಡ್ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮನೆಯಿಂದ ಹೊರಗಡೆ ನಡೆಯುತ್ತಿರುವ ಚರ್ಚೆಯನ್ನು ಬಿಗ್ಬಾಸ್ ಸ್ಪರ್ಧಿಗಳ ಗಮನಕ್ಕೆ ತಂದರು. ಮನೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದೀರಿ ಎಂದು ಹೊರಗಡೆ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಈ ಒಂದು ಫೋಟೋ ಎಂದು ಹೇಳುವ ಮೂಲಕ ವೈರಲ್ ಫೋಟೋವನ್ನು ಬಿಗ್ಬಾಸ್ ಮನೆಯ ಟಿವಿ ಪರದೆಯ ಮೇಲೆ ಪ್ರದರ್ಶಿಸಲಾಯಿತು. ಇದಾದ ಬಳಿಕ ಬಿಗ್ಬಾಸ್ ಮಂದಿ ವೈರಲ್ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದರು. ಮೊದಲಿಗೆ ವಿನಯ್ ಗೌಡ ಮಾತನಾಡಿ ಮೊಬೈಲ್ ಚಾರ್ಜರ್ ಅಲ್ಲ…
ಬೆಳಗಾವಿ:- ಹಿಜಾಬ್ ಕೇಸ್ ವಾಪಸ್ ಪಡೆಯಲು ಸಿದ್ದರಾಮಯ್ಯ ಯಾರು? ಎಂದು ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಹಿಜಾಬ್ ಪ್ರಕರಣ ವಿವಾದ ತಣ್ಣಗಾಗಿತ್ತು. ಮತ್ತೆ ವಿವಾದದ ಕಿಡಿಯನ್ನು ಸಿಎಂ ಸಿದ್ದರಾಮಯ್ಯ ಹಚ್ಚಿದ್ದಾರೆ. ವಾಪಸ್ ಪಡೆಯಲು ಸಿದ್ದರಾಮಯ್ಯ ಯಾರು? ಎಂದು ಪ್ರಶ್ನಿಸಿದರು. ಹೈಕೋರ್ಟ್ ಆದೇಶ ವಾಪಸ್ ಪಡೆಯಲು ಆಗಲ್ಲ. ರಾಜ್ಯದಲ್ಲಿ ಗಲಭೆ ಮಾಡಲು ಹಿಜಾಬ್‌ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಿಜಾಬ್ ಕಿಡಿ ಹೊತ್ತಿಸಿದ್ದು ಸರಿ ಅಲ್ಲ. ಸಿಎಂ ಸಿದ್ದರಾಮಯ್ಯ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದರು.
ಬೆಂಗಳೂರು:- ಜಾಸ್ತಿ ಕುಡಿಯಲ್ಲ ಎಂದಿದ್ದಕ್ಕೆ ಗೆಳೆಯನ ಕೊಲೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಜಿತೇಂದ್ರ ಕೊಲೆಯಾದ ವ್ಯಕ್ತಿ. ಜಿತೇಂದ್ರ ತನ್ನ ಗೆಳೆಯರೊಟ್ಟಿಗೆ ರಾತ್ರಿ ಪಾರ್ಟಿಗೆ ಹೋಗಿದ್ದ. ಆರೋಪಿಗಳು ಜಿತೇಂದ್ರನಿಗೆ ಎಣ್ಣೆ ಕುಡಿಯಲು ಒತ್ತಾಯಿಸಿದ್ದರು. ಅವರ ಒತ್ತಾಯಕ್ಕೆ ಮಣಿದು ಜಿತೇಂದ್ರ ಮದ್ಯವನ್ನು ಸೇವನೆ ಮಾಡಿದ್ದ. ಆದರೆ ಗೆಳೆಯರು ಜೀತೆಂದ್ರನಿಗೆ ಪದೇಪದೆ ಕುಡಿಯಲು ಒತ್ತಾಯ ಮಾಡುತ್ತಿದ್ದರು. ಇದರಿಂದಾಗಿ ಜಾಸ್ತಿ ಕುಡಿಯಲ್ಲ ಎಂದು ಅಲ್ಲಿಂದ ಜಿತೇಂದ್ರ ಎದ್ದು ಹೋಗಿದ್ದ. ಅದಾದ ಬಳಿಕ ಅಲ್ಲೆ ಪಕ್ಕದಲ್ಲಿದ್ದ ಖಾಲಿ ನಿವೇಶನಲ್ಲಿ ಅಡಗಿ ಕುಳಿತಿದ್ದ. ಈ ವಿಷಯ ತಿಳಿದು ಆರೋಪಿಗಳು ಅಲ್ಲಿಗೂ ಬಂದು, ಪಾರ್ಟಿಗೆ ಬಾ ಎಂದು ಮತ್ತೆ ಪೀಡಿಸುತ್ತಿದ್ದರು. ಜಿತೇಂದ್ರ ಬಾರದೇ ಇದ್ದಾಗ, ಕುತ್ತಿಗೆಗೆ ಸ್ಕಾರ್ಫ್ ಹಾಕಿ ಎಳೆದು ತರಲು ಹೋಗಿದ್ದಾನೆ. ಆದರೆ ಸ್ಕಾರ್ಫ್ ಜಿತೇಂದ್ರನ ಕುತ್ತಿಗೆಯನ್ನು ಬಿಗಿದಿತ್ತು, ಹೀಗಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಬಳಿಕ ಗಾಬರಿಯಲ್ಲಿ ಅಲ್ಲೆ ಇದ್ದ ಪೊದೆಯಲ್ಲಿ ಗೆಳೆಯನ ಮೃತದೇಹ ಬಿಸಾಡಿ ಪರಾರಿಯಾಗಿದ್ದಾರೆ.