ಬಿಗ್ಬಾಸ್ ಮನೆಯ ಒಳಗೆ ಮೊಬೈಲ್ ಬಳಸುತ್ತಾರೆ ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ಕಾರಣವೂ ಇದೆ. ಮನೆಯ ಪ್ಲಗ್ ಒಂದರಲ್ಲಿ ಮೊಬೈಲ್ ಚಾರ್ಜರ್ ಅಳವಡಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಸಂಗೀತಾ ಶೃಂಗೇರಿ ಮರೆಯಾಗಿದ್ದರಿಂದ ಚಾರ್ಜರ್ ಮಾತ್ರ ಗೋಚರವಾಗಿ ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕಿತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ನಟ ಕಿಚ್ಚ ಸುದೀಪ್ ಕೆಸಿಸಿಯಲ್ಲಿ ಬಿಜಿಯಾಗಿರುವುದರಿಂದ ಇಂದಿನ ವಾರದ ಪಂಚಾಯಿತಿಗಾಗಿ ನಟಿ ಶ್ರುತಿ ದೊಡ್ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಮನೆಯಿಂದ ಹೊರಗಡೆ ನಡೆಯುತ್ತಿರುವ ಚರ್ಚೆಯನ್ನು ಬಿಗ್ಬಾಸ್ ಸ್ಪರ್ಧಿಗಳ ಗಮನಕ್ಕೆ ತಂದರು. ಮನೆಯಲ್ಲಿ ಮೊಬೈಲ್ ಬಳಕೆ ಮಾಡುತ್ತಿದ್ದೀರಿ ಎಂದು ಹೊರಗಡೆ ಮಾತನಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಈ ಒಂದು ಫೋಟೋ ಎಂದು ಹೇಳುವ ಮೂಲಕ ವೈರಲ್ ಫೋಟೋವನ್ನು ಬಿಗ್ಬಾಸ್ ಮನೆಯ ಟಿವಿ ಪರದೆಯ ಮೇಲೆ ಪ್ರದರ್ಶಿಸಲಾಯಿತು.
ಇದಾದ ಬಳಿಕ ಬಿಗ್ಬಾಸ್ ಮಂದಿ ವೈರಲ್ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದರು. ಮೊದಲಿಗೆ ವಿನಯ್ ಗೌಡ ಮಾತನಾಡಿ ಮೊಬೈಲ್ ಚಾರ್ಜರ್ ಅಲ್ಲ ಟ್ರಿಮ್ಮರ್ ಚಾರ್ಜರ್, ನಾನು ಗಡ್ಡ ಶೇವ್ ಮಾಡಲು ಬಳಸುತ್ತೇನೆ. ಯಾರು ಭಗವಂತ ಈ ರೀತಿ ಮಾಡಿದ್ದು ಎನ್ನುತ್ತಾರೆ. ಬಳಿಕ ಮೈಕಲ್ ಮಾತನಾಡಿ, ಇದು ನನ್ನ ಮೊಬೈಲ್ ಚಾರ್ಜರ್ ಹೌದು. ಆದರೆ, ಬ್ರಿಕ್ ಮಾತ್ರ ಮೊಬೈಲ್ನದ್ದೂ ಯುಎಸ್ಬಿ ಮಾತ್ರ ಟ್ರಿಮ್ಮರ್ನದ್ದು. ನಾವಿಲ್ಲಿ ಮೊಬೈಲ್ ಬಳಕೆ ಮಾಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.