ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಉದ್ಭವ ಮೂರ್ತಿ ಶ್ರೀ ಮಾರುತೇಶ್ವರನ ಕಾರ್ತಿಕೋತ್ಸವ ಇದೇ ದಿ 28 ರಿಂದ 31, ರವರೆಗೆ ಸತತ 4 ದಿನಗಳ ವರೆಗೆ ಅತೀ ವಿಜೃಂಭಣೆಯಿಂದ ಜರುಗಲಿದೆ.ದಿ 28 ರಂದು ಗುರುವಾರ ರಾತ್ರಿ 8 ಘಂಟೆಗೆ ಯಾದವಾಡ ತಂಡದ ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಜರುಗುತ್ತದೆ. ದಿ 29 ಶುಕ್ರವಾರ ದಿವಸ ರಾತ್ರಿ 10 ಘಂಟೆಗೆ ಗ್ರಾಮದ ಹವ್ಯಾಸಿ ಕಲಾವಿದರಿಂದ ಗಂಡುಗಲಿ ವೀರ ಪರಶುರಾಮ ಎಂಬ ಸುಂದರ ಸಾಮಾಜಿಕ ನಾಟಕ ಜರುಗುವುದು ಮರುದಿವಸ .ದಿ.30 ಶನಿವಾರದಂದು ಮುಂಜಾನೆ ಶ್ರೀ ಮಾರುತೇಶ್ವರನಿಗೆ ವಿಶೇಷ ಪೂಜೆ ಹಾಗೂ ಸಾಯಂಕಾಲ ದೀಪೋತ್ಸವ ಕಾರ್ಯಕ್ರಮ ಜರುಗುವುದು.ಅದೇ ದಿನ ರಾತ್ರಿ 10 ಘಂಟೆಗೆ ಶ್ರೀ ಕೃಷ್ಣ ಪಾರಿಜಾತ ಬಯಲಾಟ ಇರುತ್ತದೆ. ದಿ 31,ರಂದು ಮುಂಜಾನೆ 11 ಘಂಟೆಗೆ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು ನಂತರ ಮದ್ಯಾಹ್ನ ಮದಾಲಸಿ ಕಾರ್ಯಕ್ರಮ ಕರಡಿ ಮಜಲು.ಖನಿ.ಸಂಬಾಳ ಹೀಗೆ ಅನೇಕ…
Author: AIN Author
ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ಪುತ್ರ ಅಹಾನ್ ಶೆಟ್ಟಿ ಇದೀಗ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 11 ವರ್ಷಗಳ ಪ್ರೀತಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಮಾಡೆಲ್ ತಾನಿಯಾ ಶ್ರಾಫ್ (Tania Shroff) ಜೊತೆ ಅಹಾನ್ ಶೆಟ್ಟಿ (Ahan Shetty) ಬ್ರೇಕಪ್ ಮಾಡಿಕೊಂಡಿದ್ದಾರೆ. ಬಾಲ್ಯದ ಸ್ನೇಹಿತರಾಗಿದ್ದ ತಾನಿಯಾ-ಅಹಾನ್ ಶೆಟ್ಟಿ ಜೋಡಿ ಕಳೆದ 11 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಅಹಾನ್ ಕುಟುಂಬದ ಕಾರ್ಯಕ್ರಮಗಳಲ್ಲಿ ತಾನಿಯಾ ಭಾಗಿಯಾಗುತ್ತಿದ್ದರು. ಅಥಿಯಾ-ಕೆ.ಎಲ್ ರಾಹುಲ್ ಮದುವೆಯಲ್ಲೂ ಅಹಾನ್ ಶೆಟ್ಟಿ ಜೊತೆ ತಾನಿಯಾ ಮಿಂಚಿದ್ದರು. ಇಬ್ಬರ ಡೇಟಿಂಗ್ ಬಗ್ಗೆ ಇಡೀ ಬಿಟೌನ್ ಅಂಗಳಕ್ಕೆ ಈ ವಿಚಾರ ತಲುಪಿತ್ತು. ಕಳೆದ ತಿಂಗಳು ನವೆಂಬರ್‌ನಲ್ಲಿ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬ್ರೇಕಪ್ ಬಳಿಕ ತಾನಿಯಾ-ಅಹಾನ್, ತಮ್ಮ ಕೆರಿಯರ್ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಬ್ರೇಕಪ್ ಬಗ್ಗೆ ತಾನಿಯಾ-ಅಹಾನ್ ಜೋಡಿ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಾಗಂತ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಅನ್‌ಫಾಲೋ ಕೂಡ ಮಾಡಿಲ್ಲ. ಬ್ರೇಕಪ್ ಸುದ್ದಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಇಬ್ಬರೂ…
ದಾವಣಗೆರೆ:- ಜಾತಿ ಗಣತಿ ಹೆಸರಿನಲ್ಲಿ ಸಮಾಜ ಒಡೆಯುವ ಹುನ್ನಾರ ನಡೆಯುತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಈ ಸಂಬಂಧ ಮಾತನಾಡಿದ ಅವರು,ಜಾತಿ ಗಣತಿಯು ಪ್ರತಿಯೊಂದು ಸಮುದಾಯಗಳಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕಾರ್ಯಕ್ರಮಗಳನ್ನು ರೂಪಿಸಲು ಅಗತ್ಯವಾಗಿ ಬೇಕು. ಆದರೆ ಈಗ ಆಗುತ್ತಿರುವುದು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ ಗಣತಿಯ ಸದ್ದು ಮಾಡುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ರಾಜಕಾರಣ ಮಾಡಲು ಹಲವಾರು ಮಾರ್ಗಗಳು ಇವೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಜಾತಿ ಗಣತಿ ಹೆಸರಿನಲ್ಲಿ ಸಮಾಜ ಬೇರ್ಪಡಿಸುವ ಹುನ್ನಾರ ನಡೆಯುತ್ತದೆ. ಜಾತಿ ಗಣತಿ ಬಗ್ಗೆ ಸ್ಪಷ್ಟ ನೀತಿ ಇರಬೇಕು. ಈಗ ಕರ್ನಾಟಕದಲ್ಲಿ ಜಾತಿ ಗಣತಿ ನಡೆದಿದೆ, ಅದು ಜಾತಿ ಗಣತಿಯಲ್ಲ. ಯಾವ್ಯಾವ ಸನುದಾಯದಲ್ಲಿ ಶಿಕ್ಷಣ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ವರದಿ ತಯಾರಿ ಮಾಡಲಾಗಿದೆ. ಆದರೆ ಅದನ್ನೇ ಜಾತಿ ಗಣತಿ ಎಂದು ಆದೇಶ ಹೊರಡಿಸಲು ಸರ್ಕಾರ ಮುಂದಾಗಿದೆ. ಜಾತಿ ಗಣತಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ…
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ (Sharukh Khan) ಪುತ್ರಿ ಸುಹಾನಾ ಖಾನ್ (Suhana Khan) ಹೊಸ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಸುಹಾನಾ ಸೌಂದರ್ಯಕ್ಕೆ ಕಿಂಗ್ ಖಾನ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಸುಹಾನಾ ನಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಕೆಂಪು ಬಣ್ಣದ ಗೌನ್‌ನಲ್ಲಿ ಸಖತ್ ಹಾಟ್ ಆಗಿ ನಟಿ ಸುಹಾನಾ ಖಾನ್ ಪೋಸ್ ಕೊಟ್ಟಿದ್ದಾರೆ. ನಟಿಯ ಅಂದವನ್ನ ಪಡ್ಡೆಹುಡುಗರು ಹಾಡಿ ಹೊಗಳುತ್ತಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಗ್ಲ್ಯಾಮರಸ್ ಆಗಿ ನಟಿ ಪೋಸ್ ನೀಡಿದ್ದಾರೆ. ದಿ ಆರ್ಚೀಸ್’ ಎಂಬ ಸಿನಿಮಾದಲ್ಲಿ ಶಾರುಖ್ ಪುತ್ರಿ ಸುಹಾನಾ ನಟಿಸಿದ್ದರು. ಚೊಚ್ಚಲ ಸಿನಿಮಾದಲ್ಲಿ ಸುಹಾನಾ ಪುಟ್ಟ ಪಾತ್ರ ಮಾಡಿದ್ರೂ ಕೂಡ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು ಇದೀಗ ಸುಹಾನಾ ಖಾನ್ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲು ಸಕಲ ತಯಾರಿ ಮಾಡಿಕೊಳ್ತಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದ ಸಿನಿಮಾದಲ್ಲಿ ಸುಹಾನಾ ಲೀಡ್ ಹೀರೋಯಿನ್ ಆಗಿ ಬಣ್ಣ ಹಚ್ಚಲಿದ್ದಾರೆ. ವಿಶೇಷ ಅಂದರೆ ಇದೇ ಸಿನಿಮಾದಲ್ಲಿ ಶಾರುಖ್…
ನವದೆಹಲಿ:- ಡಿಸೆಂಬರ್ 30ಕ್ಕೆ ಅಯೋಧ್ಯೆಯಲ್ಲಿ ಮೋದಿ ರೋಡ್ಶೋ ನಡೆಸಲಿದ್ದಾರೆ ಎಂದು ಅಯೋಧ್ಯೆ ಆಯುಕ್ತ ಗೌರವ್ ದಯಾಳ್ ಹೇಳಿದ್ದಾರೆ. ಅಂದು ಪ್ರಧಾನಿ ಅಯೋಧ್ಯೆ ರೈಲು ನಿಲ್ದಾಣ ಮತ್ತು ‘ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಮುಂದಿನ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವಿಮಾನ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೆ ರೋಡ್ ಶೋ ನಡೆಸಲಿದ್ದಾರೆ. ಅಲ್ಲದೇ ಪ್ರಧಾನಿ ತಮ್ಮ ಭೇಟಿ ವೇಳೆ 3,284.60 ಕೋಟಿ ರೂ.ಗೂ ಅಧಿಕ ಮೊತ್ತದ 29 ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದರು. ಅಯೋಧ್ಯೆಯಲ್ಲಿ ಹೊಸದಾಗಿ ನಿರ್ವಿುಸಲಾದ ದೇವಾಲಯದಲ್ಲಿ ಜ. 22ರಂದು ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ. ಡಿ. 30ರಿಂದ ಜನವರಿ ಕೊನೆಯವರೆಗೆ ನಡೆಯುವ ಕಾರ್ಯಕ್ರಮಗಳ ಸರಣಿಯ ರಾಮೋತ್ಸವಕ್ಕಾಗಿ 100 ಕೋಟಿ ರೂಪಾಯಿಯನ್ನು ಉತ್ತರ ಪ್ರದೇಶ ಸರ್ಕಾರ ತೆಗೆದಿರಿಸಿದೆ. ಇದಕ್ಕೆ ಮುಂಚಿತವಾಗಿ, ನಗರದ ಸೌಂದಯೀಕರಣ, ರಸ್ತೆಗಳ ಅಗಲೀಕರಣ, ಮೂಲಸೌಕರ್ಯಗಳ ನವೀಕರಣ ನಡೆಯುತ್ತಿದೆ. ಸಮಾರಂಭಕ್ಕೆ 3000 ಅತಿ ಗಣ್ಯರು ಸೇರಿದಂತೆ 7000…
ಸುತ್ತ ಬರಡು ಜಮೀನು, ಸುತ್ತ ಹೊಲಗಳು ಅವುಗಳಲ್ಲಿ ದ್ವಿದಳಧಾನ್ಯ ಬೆಳೆಗಳಾದ ಹುರುಳಿ, ತಡಣೆ , ಅವರೆ, ಹೊಲದ ಸುತ್ತ ನಳನಳಿಸುವ ಅರ್ಕಿಲೇಸ ಮರ, ಅದರ ಮಧ್ಯ ತೆಂಗು,ಮಧ್ಯ ತೊಂಡೆ ಕೃಷಿ ಹಾಗೂ ಅಲ್ಲಲ್ಲಿ ಪುಪ್ಟ ಕೃಷಿ ಇದೆಲ್ಲವೂ ಬೆಳೆದಿರುವುದು ಸಾವಯವ ಕೊಟ್ಟಿಗೆ ಗೊಬ್ಬರದಲ್ಲಿ. ಸಾವಯವ ಕೃಷಿಯ ವಿಧಗಳು : ಸಂಯೋಜಿತ ಸಾವಯವ ಕೃಷಿ. ಕೃಷಿಯು ಪರಿಸರ ಅಗತ್ಯತೆಗಳು ಮತ್ತು ಆರ್ಥಿಕ ಬೇಡಿಕೆಗಳನ್ನು ಸಾಧಿಸಲು ಕೀಟ ನಿರ್ವಹಣೆ ಮತ್ತು ಪೋಷಕಾಂಶಗಳ ನಿರ್ವಹಣೆಯ. ಶುದ್ಧ ಸಾವಯವ ಕೃಷಿ : ಎಲ್ಲಾ ಅಸ್ವಾಭಾವಿಕ ರಾಸಾಯನಿಕಗಳನ್ನು ತಪ್ಪಿಸುವುದು. ಈ ಸಾವಯವ ಕೃಷಿಯ ಪ್ರಯೋಜನಗಳು : ಪ್ರಪಂಚದಾದ್ಯಂತ ಸಾವಯವ ಉತ್ಪನ್ನಕ್ಕೆ ಭಾರಿ ಬೇಡಿಕೆ ಇದು ಪರಿಸರಕ್ಕೆ ಹಾನಿ ಮಾಡುವುದಿಲ್ಲ ದುಬಾರಿ ರಸಗೊಬ್ಬರಗಳು, ಕೀಟನಾಶಕಗಳು, ಬೀಜಗಳ ಅಗತ್ಯವಿಲ್ಲ ಹೆಚ್ಚುವರಿ ಖರ್ಚು ಇಲ್ಲ. ಉತ್ತಮ ಲಾಭ ಆರೋಗ್ಯಕರ ಮಣ್ಣನ್ನು ನಿರ್ಮಿಸುತ್ತದೆ ಜೀವವೈವಿಧ್ಯತೆಯನ್ನು ಉತ್ತೇಜಿಸುತ್ತದೆ ಸಾವಯವ ಫಾರ್ಮ್ ಪ್ರಾರಂಭಿಸುವ ವಿಧಾನ :ನಿಮ್ಮ ಜಮೀನಿನಲ್ಲಿ ಸಾವಯವ ಗೊಬ್ಬರವನ್ನು ಬಳಸಲು ಪ್ರಾರಂಭಿಸಬೇಕು. ಗೊಬ್ಬರವನ್ನು ತಯಾರಿಸಲು ಮುಖ್ಯ ಪದಾರ್ಥಗಳು ಹಸುವಿನ…
ಗೃಹ ಖರೀದಿಗೆ ಸಾಲ ನೀಡುವ ಖಾಸಗಿ ಬ್ಯಾಂಕ್‌ಗಳು, ಸಂಬಳ ಪಡೆಯುವವರ ಸಾಲಗಳ ಮೇಲೆ ಶೇ. 9.25 ಬಡ್ಡಿ ವಿಧಿಸಿದೆ. ಅದೇ ಬ್ಯಾಂಕ್‌ಗಳು ಸ್ವಂತ ಉದ್ಯೋಗಿಗಳಿಗೆ ಅಷ್ಟೇ ಮೊತ್ತದ ಸಾಲಕ್ಕೆ ಶೇ. 9.40ರಷ್ಟು ಹೆಚ್ಚಿನ ಬಡ್ಡಿ ವಿಧಿಸಿದೆ. ಬ್ಯಾಂಕ್‌ಗಳು ಉದ್ಯೋಗದಾತರಿಗೆ ಅಂದರೆ ಸಂಬಳ ಪಡೆಯುವವರಿಗೆ ಹಾಗೂ ಸ್ವಂತ ಉದ್ಯೋಗ ಮಾಡುವವರಿಗೆ ಈ ತಾರತಮ್ಯ ಮಾಡಲು ಕೆಲವು ಕಾರಣಗಳಿವೆ. ಅವು ಯಾವುವೆಂದರೆ, ಸಾಮಾನ್ಯವಾಗಿ ಸಾಲ ಒದಗಿಸುವ ಬ್ಯಾಂಕ್‌ಗಳು ಅದರಿಂದ ಬರುವ ಬಡ್ಡಿ ದರವನ್ನೇ ಅವಲಂಬಿಸಿವೆ. ಸಾಲಗಾರ ಬಡ್ಡಿ ಕಟ್ಟುವುದರಲ್ಲಿ ಏನಾದರೂ ಹೆಚ್ಚು ಕಡಿಮೆ ಮಾಡಿದರೆ ಬ್ಯಾಂಕ್‌ಗಳ ಬಡ್ಡಿ ಅಂದರೆ ಆದಾಯ ಖೋತವಾಗುತ್ತದೆ. ಹೀಗಾಗದಂತೆ ತಡೆಯುವುದೇ ಬ್ಯಾಂಕ್‌ಗಳ ಮಹಾನ್ ಧ್ಯೇಯ. ಇದಕ್ಕಾಗಿ ಉದ್ಯೋಗ ಭದ್ರತೆ ಇರುವ ವೇತನದಾರರನ್ನು ಬ್ಯಾಂಕ್‌ಗಳು ಹೆಚ್ಚು ನೆಚ್ಚಿಕೊಳ್ಳುತ್ತವೆ ಮತ್ತು ಅಂತಹವರನ್ನು ಕರೆದು ಸಾಲ ಕೊಡುತ್ತವೆ. ವೇತನದಾರರಿಗೆ ನಿಗದಿತ ಆದಾಯವಿರುತ್ತದೆ. ಆದರೆ ಸ್ವಂತ ಉದ್ಯೋಗಿಗಳಲ್ಲಿ ಆದಾಯ ಏರಿಳಿತವಾಗುತ್ತಿರುತ್ತದೆ. ಈ ಕಾರಣ ಬ್ಯಾಂಕ್‌ಗಳು ಸಾಲ ನೀಡುವ ವಿಷಯದಲ್ಲಿ ವೇತನದಾರರಿಗೆ ಮಣೆ ಹಾಕುತ್ತವೆ.ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ…
ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನವನ್ನು ಎಸ್ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಮಲ್ಲಿಕಾರ್ಜುನ ಕಿರೇಸೂರು ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ಗ್ರಾಮೀಣ ಕಾರ್ಯಾಧ್ಯಕ್ಷರು ಜಗದೀಶ್ ಉಪ್ಪಿನ ಅವರು ಇದು ಬೆಂಗಳೂರಿನಲ್ಲಿ ಪೌರಾಡಳಿತ ಸಚಿವರಾದ ರಹೀಮ್ ಖಾನ್ ರವರಿಗೆ ಕುಂದಗೋಳ ಪಟ್ಟಣ ಪಂಚಾಯಿತಿ ಮೀಸಲಾತಿ ಕುರಿತು ಇಲ್ಲಿಯವರಿಗೆ ಎಸ್ ಟಿ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಿಲ್ಲ ಆ ಸಮಾಜಕ್ಕೆ ಅನ್ನ್ಯಾಯ ಒಳಗಾಗುತ್ತಿದೆ ಅದಕ್ಕಾಗಿ ಈ ಬಾರಿ ಮೀಸಲಾತಿಯನ್ನು ಅಧ್ಯಕ್ಷ ಸ್ಥಾನ ಎಸ್ಟಿ ನೀಡಬೇಕೆಂದು ಪೌರಾಡಳಿತ ಸಚಿವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಚಿವರು ಮೀಸಲಾತಿ ಕುರಿತು ಪರಿಶೀಲಿಸಿ ಪರಿಶಿಷ್ಟ ಪಂಗಡ ಪಂಗಡಕ್ಕೆ ರಾಜಕೀಯವಾಗಿ ಸ್ನಾನಮಾನಗಳು ನ್ಯಾಯ ಬದ್ಧವಾಗಿ ಒದಗಿಸುವುದಾಗಿ ಬರವಸೆ ನೀಡಿದರು
ಬೆಂಗಳೂರು: ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯಿಂದ ಹೊರ ಬಿದ್ದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಋತುರಾಜ್ ಗಾಯಕ್ವಾಡ್ ಅವರು ತಮ್ಮ ಬಲಗೈ ಬೆರಳಿಗೆ ಚೆಂಡನ್ನು ತಗುಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಮೂರನೇ ಏಕದಿನ ಪಂದ್ಯದಲ್ಲಿ ಗಾಯಕ್ವಾಡ್ ಅವರ ಬದಲು ರಜತ್ ಪಾಟಿದಾರ್ ಅವರು ಇನಿಂಗ್ಸ್ ಆರಂಭಿಸಿದ್ದರು. ಅಂದ ಹಾಗೆ ಋತುರಾಜ್ ಗಾಯಕ್ವಾಡ್ ಅವರು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಲಿದ್ದಾರೆ. ಗಾಯಕ್ವಾಡ್ ಅವರ ಬದಲು ಅಭಿಮನ್ಯು ಈಶ್ವರನ್ ಅವರು ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಗಾಯಕ್ವಾಡ್ ಅವರು ಕೆಲವೇ ದಿನಗಳ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ವರದಿ ಮಾಡಿಕೊಳ್ಳಲಿದ್ದಾರೆ. ಬಿಸಿಸಿಐ ಪುರುಷರ ಆಯ್ಕೆ ಸಮಿತಿಯು ಋತುರಾಜ್ ಗಾಯಕ್ವಾಡ್ ಅವರ ಸ್ಥಾನಕ್ಕೆ ಅಭಿಮನ್ಯು ಈಶ್ವರನ್ ಅವರನ್ನು ಆಯ್ಕೆ ಮಾಡಿದೆ,” ಎಂದು ಬಿಸಿಸಿಐ ತನ್ನ…
ಹುಬ್ಬಳ್ಳಿ: ಬಟ್ಟೆ ಖರೀದಿಸುವ ವೇಳೆ ವಿದ್ಯಾರ್ಥಿನಿಯೊಬ್ಬರ ಬ್ಯಾಗ್‌ನಲ್ಲಿದ್ದ 1.10 ಲಕ್ಷ ರೂ. ಮೌಲ್ಯದ ಆಭರಣ ಹಾಗೂ 20 ಸಾವಿರ ರೂ. ನಗದು ಕಳ್ಳತನವಾದ ಘಟನೆ ನಗರದ ಗೌಳಿಗಲ್ಲಿ ಕ್ರಾಸ್ ಬಳಿ ನಡೆದಿದೆ. ಆನಂದ ನಗರದ ವಿದ್ಯಾರ್ಥಿನಿ ತನ್ನ ಸ್ನೇಹಿತೆಯೊಂದಿಗೆ ಮಾರುಕಟ್ಟೆಗೆ ಬಂದಿದ್ದರು. ಬಟ್ಟೆ ಖರೀದಿಸಲು ಮುಂದಾದಾಗ ಕಳ್ಳರು ಬ್ಯಾಗ್‌ನಲ್ಲಿದ್ದ 16.71 ಗ್ರಾಂ ಬಂಗಾರ, 40 ಗ್ರಾಂ ಬೆಳ್ಳಿ, 20 ಸಾವಿರ ರೂ. ನಗದು ಕಳ್ಳತನ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.