Author: AIN Author

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಅದೃಷ್ಟವಂತರು ( ಕುಬೇರರು) ಲಕ್ಷ್ಮಿ ಯೋಗ ಹೇಗೆ ಉಂಟಾಗುತ್ತದೆ? ಜನನ ದಿನಾಂಕ ಮತ್ತು ಸಮಯದ ಆಧಾರ ಮೇಲೆ ನಿಮ್ಮ ಜನ್ಮಜಾತಕ ಬರೆದು ಅದನ್ನು ಸರಿಯಾಗಿ ಪರೀಕ್ಷಿಸಿ ಈ ಕೆಳಕಂಡ ಮಾಹಿತಿಗಳು ಇದ್ದರೆ”ಲಕ್ಷ್ಮಿ ಯೋಗ” ಉಂಟಾಗುತ್ತದೆ. ರಾಶಿಚಕ್ರದ ಚಿಹ್ನೆಯು ಏರಿಕೆಯ ಸ್ಥಾನದಲ್ಲಿ ಯೋಗವನ್ನು ಪಡೆದುಕೊಂಡರೆ ಉತ್ತಮ ಅದೃಷ್ಟದಿಂದ ಕೂಡಿರುತ್ತದೆ. ಲಕ್ಷ್ಮಿ ದೇವಿಯು ತ್ರಿಕೋನ ಭಾವ ದೇವತೆ ಆಗಿರುತ್ತಾಳೆ. ಭಗವಾನ್ ವಿಷ್ಣು ಕೇಂದ್ರ ಭವನದ ದೇವರು. ಕೇಂದ್ರ ತ್ರಿಕೋನ ರಾಜ ಯೋಗದಲ್ಲಿ ಒಂತ್ತನೇ ಮನೆಯ ಅಧಿಪತಿ ಉದಾತ್ತನಾಗಿದ್ದರೆ ಉತ್ತಮ ಅದೃಷ್ಟವು ಪಡೆದುಕೊಳ್ಳುವವರು. ಈ ಯೋಗದಲ್ಲಿ ವಿವಿಧ ಮನೆಗಳಲ್ಲಿ ಗ್ರಹಗಳ ಸ್ಥಾನ ಹೇಗಿದೆ ಎನ್ನುವುದನ್ನು ಪರಿಗಣಿಸಿ, ಅದೃಷ್ಟದ ತೀರ್ಪು ತಿಳಿಸಲಾಗುವುದು. ಈ ಯೋಗ ಅಥವಾ ಕುಂಡಲಿಯ ಲೆಕ್ಕಾಚಾರವನ್ನು ಪಾಶ್ಚಾತ್ಯ ಜ್ಯೋತಿಷ್ಯದಲ್ಲಿ ತಿಳಿಯಬಹುದು. ಒಂಬತ್ತನೇ ಮನೆ ಅದು “ಭಾಗ್ಯಸ್ಥಾನ”. ಒಂಬತ್ತನೇ ಮನೆಯಲ್ಲಿ ತ್ರಿಕೋನ ಉಂಟಾದರೆ ಅದನ್ನು “ಶುಭ ಲಕ್ಷ್ಮಿ ಯೋಗ” ಎಂದು ಪರಿಗಣಿಸಲಾಗುತ್ತದೆ. ಈ ಯೋಗದಿಂದ ಸಂಪತ್ತಿನ ಆದಾಯ ಉಂಟಾಗುವುದು. ಐಷಾರಾಮಿ ಜೀವನ ನಡೆಸುವರು.…

Read More

ಬೆಂಗಳೂರು: ತಮ್ಮ ಮೇಲೆ ಯುವತಿ ಗಂಭೀರ ಆರೋಪ ಮಾಡಿ ದೂರು ನೀಡುತ್ತಿದ್ದಂತೆಯೇ ಇತ್ತ ಕ್ರಿಕೆಟಿಗ (Cricketer) ಕೆ.ಸಿ ಕಾರಿಯಪ್ಪ (KC Cariappa) ಕೂಡ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನಗೆ ಯುವತಿ ಬೆದರಿಕೆ ಹಾಗೂ ಟಾರ್ಚರ್ ಕೊಡುತ್ತಿದ್ದಾರೆ. ನನ್ನ ಕ್ರಿಕೆಟ್ ಕರಿಯರ್‌ಗೆ ತೊಂದರೆ ಕೊಡ್ತಿದ್ದಾರೆ ಎಂದು ತಿಳಿಸಿದ್ದಾರೆ. ಕಾರಿಯಪ್ಪ ಹೇಳಿದ್ದೇನು..?: ಈ ಸಂಬಂಧ ವೀಡಿಯೋ ಬಿಡುಗಡೆ ಮಾಡಿರುವ ಕಾರಿಯಪ್ಪ, ಯುವತಿ ನನ್ನ ಮೇಲೆ ಅನಗತ್ಯ ಆರೋಪ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೇ ಈ ಬಗ್ಗೆ ನಾನು ದೂರು ದಾಖಲಿಸಿದ್ದು, ನನಗೆ ಬೆದರಿಕೆ ಹಾಗೂ ಟಾರ್ಚರ್ ಕೊಡ್ತಿದ್ದಾರೆ. ನನ್ನ ಕ್ರಿಕೆಟ್ ಕರಿಯರ್‌ಗೆ ತೊಂದರೆ ಕೊಡ್ತಿದ್ದಾರೆ. ಅಲ್ಲದೇ ನಾನು ಮನೆಯಲ್ಲಿ ಇಲ್ಲದ ವೇಳೆ ಬಂದು ಗಲಾಟೆ ಮಾಡಿದ್ದಾರೆ ಎಂದು ಈಗಾಗಲೇ ದೂರು ದಾಖಲಿಸಿದ್ದೇನೆ. ಇದಕ್ಕೆ ಪ್ರತಿಯಾಗಿ ಆಕೆ ಎಫ್‌ಐಆರ್‌ (FIR) ದಾಖಲಿಸಿದ್ದಾಳೆ ಎಂದು ಅವರು ಹೇಳಿಕೊಂಡಿದ್ದಾರೆ. ಮದುವೆ ಆಗದೇ ಇದ್ದರೆ ಸಾಯುತ್ತೇನೆ, ಚಾಕು ಹಾಕಿಕೊಳ್ಳುತ್ತೇನೆ ಎಂದು ಯುವತಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಕಷ್ಟ ಆಗಿದೆ, ನನ್ನ ಭದ್ರತೆಗಾಗಿ…

Read More

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಕೊನೆಗೂ ರಾಜ್ಯಕ್ಕೆ ಕಾಲಿಟ್ಟಂಗಿದೆ. ಹೌದು ಮೈಸೂರಿನ 8 ಮಂದಿಯಲ್ಲಿ JN.1 ವೈರಸ್‌ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೊಸ ಸೋಂಕು ಸ್ಪೋಟದಿಂದ ಇದೀಗ ರಾಜ್ಯದ ಜನರಲ್ಲಿ ಆತಂಕ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ (ಇಂದು ಹೊಸದಾಗಿ) 106 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 7.35% ಕೊವಿಡ್ ಪಾಸಿಟಿವ್ ರೇಟ್ ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ 1,441 ಟೆಸ್ಟ್‌ಗಳನ್ನು ಮಾಡಲಾಗಿದ್ದು, 1135 RTCPR ಹಾಗೂ 306 RAT ಟೆಸ್ಟ್‌ಗಳನ್ನ ಮಾಡಲಾಗಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚು ಪಾಸಿಟಿವ್ ಪ್ರಕರಣ ವರದಿಯಾಗಿವೆ. ಬೆಂಗಳೂರಿನಲ್ಲಿ ಇಲ್ಲಿಯವರೆಗೂ 297 ಪ್ರಕರಣಗಳು ವರದಿಯಾಗಿವೆ. ಒಟ್ಟು 343 ಸಕ್ರಿಯ ಪ್ರಕರಣಗಳಲ್ಲಿ 323 ಸೋಂಕಿತರು (ಪ್ರಕರಣ) ಹೋಂ ಐಸೋಲೇಷನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. 21 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ 7 ಸೋಂಕಿತರಿಗೆ ICUನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನಲ್ಲಿ 6 ಪ್ರಕರಣ ಪತ್ತೆ ಬೆಂಗಳೂರಿನಲ್ಲಿ 95 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಮೈಸೂರಿನಲ್ಲಿ…

Read More

ವಿಜಯಪುರ: ಯಡಿಯೂರಪ್ಪನಿಗೆ ಶಕುನಿ ಎಂದ ಹಾಗೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ತಿರುಗೇಟ್​ ನೀಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಏನು ಹೇಳುತ್ತಾರೆ ಅದರ ಉಲ್ಟಾ ನಡೆದಿರುತ್ತದೆ. ವಿರೋಧ ಪಕ್ಷದ ನಾಯಕ ಆಗಲಿ ಎಂದಿದ್ದ ವಿಜಯೇಂದ್ರ ಹೈಕಮಾಂಡ್ ಬಳಿ ಪ್ಯಾಕ್ ಮಾಡಿಕೊಂಡು ಬಂದಿದ್ದ. ಅದಕ್ಕೆ ಆಗ ಯತ್ನಾಳ್ ವಿರೋಧ ಪಕ್ಷದ ನಾಯಕರಾಗಲು ತಕರಾರು ಇಲ್ಲ ಎಂದು ಹೇಳಿಕೆ ಕೊಟ್ಟಿದ್ದರು ಎಂದು ಹರಿಹಾಯ್ದರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಬೇರೆ ಬೇರೆ ಹೇಳಿಕೆ ನೀಡಿ ಉಲ್ಟಾ ಹೊಡಿಯುತ್ತಿದ್ದಾರೆ. ಅವರ ಮಾತುಗಳಿಗೆ ನಾನು ಹೆದರುವುದಿಲ್ಲ ಎಂದು ಚಾಟಿ ಬೀಸಿದ್ದಾರೆ.

Read More

ಬೆಳಗಾವಿ : ಬೇಲಿಯೇ ಎದ್ದು ಹೊಲ ಮೇಯ್ದ ಹಾಗೆ ಆರಕ್ಷಕರೇ ಭಕ್ಷಕರಾದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಮಹಿಳೆಯೋರ್ವಳಿಗೆ ಕಿರುಕುಳ ಆರೋಪದಡಿ ಮಹಿಳೆಯ ದೂರಿನ ಮೆರೆಗೆ ಸಂಕೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ ನರಸಿಂಹರಾಜು ಜೆ.ಡಿ. ಅವರನ್ನು ಅಮಾನತು ಮಾಡಿ ಬೆಳಗಾವಿ ಜಿಲ್ಲಾ ಎಸ್‌ಪಿ ಭೀಮಾಶಂಕರ ಗುಳೇದ್ ಆದೇಶ ಹೊರಡಿಸಿದ್ದಾರೆ. ಘಟನೆಯಲ್ಲಿ ಕರ್ತವ್ಯ ಲೋಪ, ಅಶಿಸ್ತು ಹಾಗೂ ದುರ್ನಡೆತೆ ಕಂಡು ಬಂದ ಹಿನ್ನಲೆ ಈ ಭಕ್ಷಕ ಪಿಎಸ್​ಐ  ಅವರನ್ನು ಅಮಾನತು ಮಾಡಿ ಬೆಳಗಾವಿ ಜಿಲ್ಲಾ ಪಲೀಸ್ ವರಿಷ್ಠಾಧಿಕಾರಿ ಆದೇಶ ನೀಡಿದ್ದಾರೆ.‌ ಕೆಲ ದಿನಗಳ ಹಿಂದೆ ಸಂಕೇಶ್ವರ  ಪೊಲೀಸ ಠಾಣೆಗೆ ತಮ್ಮ ಕೌಟುಂಬಿಕ ಸಮಸ್ಯೆ ಕುರಿತು ತಮ್ಮ ಪತಿಯ ವಿರುದ್ಧ ದೂರು ನೀಡಿದ್ದ ಮಹಿಳೆಯೊಬ್ಬಳು ಸಂಕೇಶ್ವರ ಠಾಣೆಗೆ ಧಾವಿಸಿ ದೂರು ನೀಡಿದ್ದರು. ಆದರೆ, ಪಿಎಸ್ ಐ ನರಸಿಂಹರಾಜು ಜೆ‌.ಡಿ ಈ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಮಹಿಳೆಯ ಮೊಬೈಲ್ ಸಂಖ್ಯೆ ಪಡೆದು ಅವಳ ಸಂಪರ್ಕ ಬೆಳೆಸಿ…

Read More

ಬೆಂಗಳೂರು : ಪದೇ ಪದೆ ಬರಗಾಲ ಬರಲಿ ಅಂತ ರೈತರಿಗೆ ಆಸೆ. ಅವರು ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲ್​ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ. https://x.com/hd_kumaraswamy/status/1739192171025273323?t=AEjzGZlyT0uTF_wWAVmqiQ&s=08 ಈ ಕುರಿತು ಟ್ವೀಟ್ ಮಾಡಿರುವ ಅವರು, ಸಚಿವ ಶಿವಾನಂದ ಪಾಟೀಲ್ ಅವರು ರೈತರ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಅನ್ನದಾತನ ಕಷ್ಟ, ಸಂಕಷ್ಟಗಳ ಬಗ್ಗೆ ಅವಹೇಳನ ಮಾಡುವುದು ಖಂಡಿತ ಸರಿಯಲ್ಲ. ಸಚಿವರು ಇಂಥ ವಿಷಯಗಳ ಬಗ್ಗೆ ಬಹಳ ಎಚ್ಚರಿಕೆ, ಸೂಕ್ಷ್ಮತೆ, ಸಂಯಮದಿಂದ ಮಾತನಾಡಬೇಕು ಎಂದು ಹೇಳಿದ್ದಾರೆ. ನಾನು ಕೃಷಿ ಸಾಲ ಮನ್ನಾ ಮಾಡುವ ಮುನ್ನ ರಾಜ್ಯದಲ್ಲಿ ನಡೆದ ರೈತರ ಸರಣಿ ಆತ್ಮಹತ್ಯಾಕಾಂಡ ನೆನಪು ಮಾಡಿಕೊಂಡರೆ ಈಗಲೂ ನನ್ನ ಮೈ ನಡುಗುತ್ತದೆ. ರೈತ ಕೇಳುತ್ತಿರುವುದು ತನ್ನ ಹಕ್ಕನ್ನಷ್ಟೇ, ಭಿಕ್ಷೆಯನ್ನಲ್ಲ. ಸಚಿವರು ಬೇಷರತ್ ಕ್ಷಮೆ ಕೇಳಬೇಕು, ತಮ್ಮ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Read More

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ನಿಯಮ ಉಲ್ಲಂಘನೆ ಹಾಗೂ ಲೈಂಗಿಕ ಕಿರುಕುಳದೊಂದಿಗೆ ಗಲಾಟೆ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದೆ. ಸದ್ಯ ಕುಡಿದು ಮೆಟ್ರೋ ಪ್ರವೇಶಿಸಲು ಮುಂದಾದ ವ್ಯಕ್ತಿಯನ್ನು ತಡೆದಿದ್ದಕ್ಕೆ ಮೆಟ್ರೋ ಸಿಬ್ಬಂದಿಗೆ ಹೊಡೆದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಚಂದ್ರಶೇಖರ್‌ ಎಂಬಾತ ಮೆಟ್ರೋ ಸಿಬ್ಬಂದಿಗೆ ಹಲ್ಲೆ ನಡೆಸಿದವನು. ಡಿ.16ರ ರಾತ್ರಿ ದಾಸರಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದಾನೆ. ಈ ವೇಳೆ ತಪಾಸಣೆ ಮಾಡುವಾಗ ಕುಡಿದಿರುವುದು ತಿಳಿದು ಬಂದಿದೆ. ಈ ವೇಳೆ ಕುಡಿದು ಬಂದವರಿಗೆ ನಿಲ್ದಾಣದೊಳಗೆ ಅವಕಾಶವಿಲ್ಲ ಎಂದು ತಡೆದಿದ್ದಾರೆ. ಆಗ ತಾನು ರಕ್ಷಣಾ ವೇದಿಕೆಯವನು ಎಂದು ಹೇಳಿಕೊಂಡು ಬಲವಂತವಾಗಿ ಒಳ ನುಗ್ಗಲು ಮುಂದಾಗಿದ್ದಾನೆ. ಈ ವೇಳೆ ತಡೆಯಲು ಬಂದ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾನೆ. ಸ್ಥಳದಲ್ಲಿದ್ದವರು ಗಲಾಟೆಯನ್ನು ಬಿಡಿಸಿ ಕಳಿಸಿದ್ದಾರೆ. ಸದ್ಯ ಈತನ ವಿರುದ್ಧ ಮೆಟ್ರೋ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ್ದಾರೆ ಎಂದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಹಲ್ಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ…

Read More

ಬೆಂಗಳೂರು: ದೇಶದಾದ್ಯಂತ ಇಂದು ಕ್ರೈಸ್ತರ ಪವಿತ್ರ ಹಬ್ಬ ಮೇರಿ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿತ್ತು. ಏಸ್ ಕ್ರಿಸ್ತನ ಜನ್ಮ ದಿನವನ್ನ ಎಲ್ಲೆಡೆ ಅದ್ದೂರಿಯಾಗಿ ಆಚರಿಸಲಾಯ್ತು..ಅದರಲ್ಲೂ ಕಲರ್ ಪುಲ್ ಸಿಲಿಕಾನ್ ಸಿಟಿಯಲ್ಲಿ ಕೂಡ ಹಬ್ಬದ ಸೆಲೆಬ್ರೇಶನ್ ಜೋರಾಗಿ ನಡೆಯಿತು. ನಗರದ ಹಲವು ಚರ್ಚ್ಗಳಲ್ಲಿ ಅದ್ದೂರಿ ಅಚರಣೆ ಮಾಡಲಾಯಿತು. ಹಾಗಾದ್ರೆ ಬನ್ನಿ ಈ ಬಾರಿ ಕ್ರಿಸ್ಮಸ್ ಆಚರಣೆ ಹೇಗಿತ್ತು. ಯಾವೆಲ್ಲಾ ಚರ್ಚ್ಗಳು ಜಗಮಿಸುತ್ತಿದ್ದವು ಅನ್ನೋದನ್ನ ಈ ಕಂಪ್ಲೀಟ್ ಸ್ಟೋರಿಯಲ್ಲಿ ತೋರಿಸುತ್ತೇವೆ. ಮೇಣದ ಬತ್ತಿ ಹಿಡಿದು ದೇವರ ಬಳಿ ಹೋಗುತ್ತಿರುವ ಜನರು.. ದೇವರ ಬಳಿ ಶಾಂತಿಗಾಗಿ ಪ್ರಾರ್ಥಿಸುತ್ತಿರುವ ಭಕ್ತರು.. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ನಗರದ ಹಲವು ಚರ್ಚ್ಗಳಲ್ಲಿ.ಹೌದು ಇಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಿಲಿಕಾನ್ ಸಿಟಿ ಮಂದಿ ಚರ್ಚ್ ಕಡೆ ಮುಖ ಮಾಡಿದ್ದರು.. ಏಸು ಕ್ರಿಸ್ತನ ಜನ್ಮ ದಿನವನ್ನ ಅದ್ದೂರಿಯಾಗಿ ಆಚರಿಸಿದ್ರು. .. ಹೀಗಾಗಿ ನಗದರ ಎಲ್ಲಾ ಚರ್ಚ್ಗಳಲ್ಲೂ ಮೇರಿ ಕ್ರಿಸ್ಮಸ್ ಹಬ್ಬದ ಸಂಭ್ರಮ, ಸಡಗರ ಜೋರಾಗಿತ್ತು. ಕ್ರಿಸ್ತನ ಭಕ್ತರು ಕ್ಯಾಂಡಲ್ಗಳನ್ನ ಹಿಡಿದು…

Read More

ನವದೆಹಲಿ: ಇಂದು ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ, ಮಾಜಿ ಪ್ರಧಾನಿ, ಅಜಾತಶತ್ರು ದಿ. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ 99ನೇ ಜನ್ಮದಿನ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಹಲವು ಗಣ್ಯರು ಇಂದು ವಾಜಪೇಯಿ ಅವರನ್ನು ಸ್ಮರಿಸಿಕೊಂಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸೇರಿದಂತೆ ಹಲವು ಗಣ್ಯರು ಅಟಲ್ ಜೀಯವರಿಗೆ ಗೌರವ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿ, ಮುರ್ಮು, ಧನ್ಕರ್ ಸೇರಿದಂತೆ ಹಲವರು ‘ಸದೈವ್ ಅಟಲ್’ ಸಮಾಧಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದ್ದಾರೆ. ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಮೋದಿಯವರು ವಾಜಪೇಯಿ ಅವರ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಭಾರತ ಮಾತೆಗೆ ವಾಜಪೇಯಿ ಅವರ ಸೇವೆ ಇಂದು ನಮಗೆ ಸ್ಪೂರ್ತಿಯಾಗಿದೆ ಎಂದು ಬಣ್ಣಿಸಿದ್ದಾರೆ

Read More

ಬೆಂಗಳೂರು: ರಾಜ್ಯ ಸರ್ಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ರೈತರನ್ನು ಅವಮಾನಿಸುತ್ತಿದ್ದಾರೆ. ಅಂಥಹ ಸಚಿವರಿಗೆ ಸಿಎಂ ಕರೆದು ಬುದ್ಧಿವಾದ ಹೇಳಲಿ. ತಿದ್ದಿಕೊಳ್ಳದ ಸಚಿವರ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y Vijayendra) ಅವರು ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಕುರಿತು ಶಿವಾನಂದ್ ಪಾಟೀಲ್ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ, ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಅವರ ಹೇಳಿಕೆ ಖಂಡನಾರ್ಹ. ಅವರು ರೈತರನ್ನು ಅವಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನ್ನ ಕೊಡುವ ರೈತರ ಬಗ್ಗೆ ಸಚಿವರ ಹಾಗೂ ಸರ್ಕಾರದ ಧೋರಣೆ ಆಕ್ಷೇಪಾರ್ಹ ವಿಚಾರವಾಗಿದೆ. ಬರಗಾಲ ಸಂಬಂಧ ರೈತರಿಗೆ ಸಮರ್ಪಕ ಪರಿಹಾರ ನೀಡದ ಸರ್ಕಾರ ಇದಾಗಿದೆ. ಈ ಮೂಲಕ ರೈತರಿಗೆ ಪದೇ ಪದೇ ಅವಮಾನ ಮಾಡುವ ಸರ್ಕಾರ ಇದಾಗಿದ್ದು, ಸಚಿವರ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

Read More