ಬೆಂಗಳೂರು: ದೇಶದಾದ್ಯಂತ ಇಂದು ಕ್ರೈಸ್ತರ ಪವಿತ್ರ ಹಬ್ಬ ಮೇರಿ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿತ್ತು. ಏಸ್ ಕ್ರಿಸ್ತನ ಜನ್ಮ ದಿನವನ್ನ ಎಲ್ಲೆಡೆ ಅದ್ದೂರಿಯಾಗಿ ಆಚರಿಸಲಾಯ್ತು..ಅದರಲ್ಲೂ ಕಲರ್ ಪುಲ್ ಸಿಲಿಕಾನ್ ಸಿಟಿಯಲ್ಲಿ ಕೂಡ ಹಬ್ಬದ ಸೆಲೆಬ್ರೇಶನ್ ಜೋರಾಗಿ ನಡೆಯಿತು. ನಗರದ ಹಲವು ಚರ್ಚ್ಗಳಲ್ಲಿ ಅದ್ದೂರಿ ಅಚರಣೆ ಮಾಡಲಾಯಿತು. ಹಾಗಾದ್ರೆ ಬನ್ನಿ ಈ ಬಾರಿ ಕ್ರಿಸ್ಮಸ್ ಆಚರಣೆ ಹೇಗಿತ್ತು. ಯಾವೆಲ್ಲಾ ಚರ್ಚ್ಗಳು ಜಗಮಿಸುತ್ತಿದ್ದವು ಅನ್ನೋದನ್ನ ಈ ಕಂಪ್ಲೀಟ್ ಸ್ಟೋರಿಯಲ್ಲಿ ತೋರಿಸುತ್ತೇವೆ.
ಮೇಣದ ಬತ್ತಿ ಹಿಡಿದು ದೇವರ ಬಳಿ ಹೋಗುತ್ತಿರುವ ಜನರು.. ದೇವರ ಬಳಿ ಶಾಂತಿಗಾಗಿ ಪ್ರಾರ್ಥಿಸುತ್ತಿರುವ ಭಕ್ತರು.. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ನಗರದ ಹಲವು ಚರ್ಚ್ಗಳಲ್ಲಿ.ಹೌದು ಇಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಿಲಿಕಾನ್ ಸಿಟಿ ಮಂದಿ ಚರ್ಚ್ ಕಡೆ ಮುಖ ಮಾಡಿದ್ದರು.. ಏಸು ಕ್ರಿಸ್ತನ ಜನ್ಮ ದಿನವನ್ನ ಅದ್ದೂರಿಯಾಗಿ ಆಚರಿಸಿದ್ರು. .. ಹೀಗಾಗಿ ನಗದರ ಎಲ್ಲಾ ಚರ್ಚ್ಗಳಲ್ಲೂ ಮೇರಿ ಕ್ರಿಸ್ಮಸ್ ಹಬ್ಬದ ಸಂಭ್ರಮ, ಸಡಗರ ಜೋರಾಗಿತ್ತು. ಕ್ರಿಸ್ತನ ಭಕ್ತರು ಕ್ಯಾಂಡಲ್ಗಳನ್ನ ಹಿಡಿದು ದೇವರ ಮುಂದೆ ಕ್ಯಾಂಡಲ್ ಬೆಳಗಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ರು..
ಶಿವಾಜಿನಗರದ ಸೇಂಟ್ ಚರ್ಚ್ , ಕ್ಯಾಥೆಡ್ರಲ್ಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ಚರ್ಚ್ಗಳಲ್ಲಿ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ, ಸಮೂಹಗಾನ, ಕ್ಯಾರೋಲ್ಗಳ ಹಬ್ಬದ ರಂಗು ಜೋರಾಗಿತ್ತು.
ಸಿಲಿಕಾನ್ ಸಿಟಿಯ ಎಲ್ಲಾ ಚರ್ಚ್ಗಳು ಕಳೆದ ಮಧ್ಯರಾತ್ರಿಯಿಂದಲ್ಲೇ ಕಲರ್ ಫುಲ್ ಲೈಟಿಂಗ್ಸ್ ನಿಂದ ಜಗಮಗಿಸುತ್ತಿದ್ದವು. ಎಲ್ಲಾ ಚರ್ಚ್ಗಳಲ್ಲಿ ಕ್ರಿಸ್ ಮಸ್ ಸಂಭ್ರಮ ಮುಗಿಲು ಮುಟ್ಟಿತ್ತು. ಶಾಂತಿನಗರದ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ರಿಚ್ ಮಂಡ್ ರಸ್ತೆಯ ಸ್ಯಾಕ್ರೇಡ್ ಹಾರ್ಟ್ ಚರ್ಚ್ ಸೇರಿದಂತೆ ನಗರದ 80 ರಿಂದ 85 ಚರ್ಚ್ಗಳು ಬಣ್ಣ ಬಣ್ಣ ಬೆಳಕಿನಿಂದ ಕಂಗೊಳಿಸುತ್ತಿದ್ದವು.. ನಗರದ ಎಲ್ಲಾ ಚರ್ಚ್ಗಳಲ್ಲಿ ಮಧ್ಯರಾತ್ರಿ 12 ಗಂಟೆ ಸರಿಯಾಗಿ ಕ್ರಿಸ್ಮಮಸ್ನ್ನ ಕ್ರೈಸ್ತ ಬಾಂಧವರು ಬರಮಾಡಿಕೊಂಡರು.
ಒಟ್ಟಾರೆ, ಕ್ರಿಸ್ಮಸ್ ಹಬ್ಬವನ್ನ ಆದ್ದೂರಿಯಾ ನಮ್ಮ ಕ್ರೈಸ್ತ ಭಾಂದವರು ಅಚರಿಸಿದ್ರು. . ನಗರದ ಎಲ್ಲಾ ಚರ್ಚ್ ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಪಾರ್ಥನೆ ಸಲ್ಲಿಸಿ ಯೇಸುಗೆ ನಮನ ಸಲ್ಲಿಸಿದ್ರು.ಚರ್ಚ್ ನಲ್ಲಿ ಮೇಣದ ಬತ್ತಿ ಬೆಳಗಿಸಿ , ದೇವರ ನಾಮ ಸ್ಮರಿಸುತ್ತಾ ದೇವರಲ್ಲಿ ಲೋಕ ಶಾಂತಿಯನ್ನ ನೀಡಲು ಬೇಡಿಕೊಂಡರು.. ನಮ್ಮ ಪ್ರಜಾ ಟಿವಿ ಕಡೆಯಿಂದಲೂ ಎಲ್ಲರಿಗೂ ಮತ್ತೊಮ್ಮೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು..