ಬೇಲೂರು:- ಜಗತ್ತನ್ನು ಪ್ರೀತಿಸಿದ ಫಲವಾಗಿ ದೇವರು ಏಕೈಕ ತಮ್ಮ ಸ್ವಂತ ಮಗನನ್ನೆ ಧಾರೆ ಎರೆದರು. ಲೋಕಕಲ್ಯಾಣಕ್ಕಾಗಿ ಹಾತೊರೆಯುತಿದ್ದ ಏಸು ಸ್ವಾಮಿಯನ್ನು ಪ್ರಾರ್ಥಿಸಿದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಅರೇಹಳ್ಳಿ ಸಂತಯೊವಾನ್ನರ ಕ್ರೈಸ್ತ ದೇವಾಲಯದ ಧರ್ಮಗುರು ಫಾ.ಕಿರಣ್ ಮೆಲ್ವಿನ್ ಹೇಳಿದರು. ಬೇಲೂರು ತಾಲೂಕಿನ ಅರೇಹಳ್ಳಿಯ ಸಕಲೇಶಪುರ ರಸ್ತೆಯಲ್ಲಿರುವ ಸಂತ ಯೋವಾನ್ನರ ದೇವಾಲಯಲ್ಲಿ ಕ್ರಿಸ್ಮಸ್ ಅಂಗವಾಗಿ ಪ್ರಾರ್ಥನೆ ಸಲ್ಲಿಸಲು ಆಗಮಿಸಿದ ಭಕ್ತಾಧಿಗಳಿಗೆ ಪ್ರಬೋಧನೆ ನೀಡಿದ ಅವರು, ಜಗತ್ತಿನಲ್ಲಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಏಸು ತಮ್ಮ ಜೀವನವನ್ನೆ ಮುಡುಪಾಗಿಟ್ಟರು. ದೇವರ ಸಂದೇಶಗಳನ್ನು ಸಾರುವ ಪ್ರವಾದಿಯಾಗಿರುವ ಏಸು ಸ್ವಾಮಿಯ ಪವಾಡಗಳು ಅವಿಸ್ಮರಣೀಯವಾದುವುಗಳಾಗಿವೆ ಎಂದರು. ಕ್ರಿಸ್ಮಸ್ ಹಬ್ಬದ ಹಿನ್ನಲೆ ಸಂತ ಯೋವಾನ್ನರ ಕ್ರೈಸ್ತ ದೇವಾಲಯವನ್ನು ವಿದ್ಯುದ್ದೀಪಗಳಿಂದ ಶೃಂಗರಿಸಲಾಗಿತ್ತು. ಏಸುವಿನ ಜನ್ಮ ವೃತ್ತಾಂತವನ್ನು ಸಾರುವ ಸಾಂಪ್ರಾದಾಯಿಕ ಗೋಧಲಿಯನ್ನು ಚರ್ಚ್ ಎದುರು ನಿರ್ಮಾಣ ಮಾಡಲಾಗಿತ್ತು. ವಿವಿಧ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಾ ಆಕರ್ಷಣೀಯವಾಗಿದ್ದ ಗೋಧಲಿ ನಿರ್ಮಾಣಕ್ಕೆ ದೇವಾಲಯದ ಯುವಕರ ತಂಡ ಹಲವು ದಿನಗಳ ಕಾಲ ಶ್ರಮವಹಿಸಿತ್ತು.
Author: AIN Author
ಸಂಕೇಶ್ವರ:- ನನ್ನ ವಿರುದ್ಧ ಕಾಣದ ಕೈಗಳು ಹಾಗೂ ಇಲಾಖೆಯವರೆ ಷಡ್ಯಂತ್ರ ರೂಪಿಸಿ ನನ್ನ ಮೇಲೆ ಮಹಿಳೆ ಕಿರುಕುಳ ದೂರ ನೀಡುವಂತೆ ಕೆಲಸ ಮಾಡಿದ್ದಾರೆ ಎಂದು ಅಮಾನತುಗೊಂಡ ಸಂಕೇಶ್ವರ ಪಿಎಸ್ ಐ ನರಸಿಂಹರಾಜು ಜೆ. ಡಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಸಂಕೇಶ್ವರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಯಾವುದೇ ತಪ್ಪು ಮಾಡಿಲ್ಲ. ಸಿಪಿಐ ಶಿವಶರಣ ಅವಜಿ ಹಾಗೂ ಇಲಾಖೆಯ ಸಿಬ್ಬಂದಿಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೆನೆ ಎಂದು ನರಸಿಂಹರಾಜು ಆರೋಪಿಸಿದ್ದಾರೆ.
ಬೆಂಗಳೂರು:- ಕಟ್ಟಡ ನಿರ್ಮಾಣಕ್ಕೆ ಮಣ್ಣನ್ನು ಅಗೆಯುವಾಗ ಪಕ್ಕದ ಗೋಡೆಯ ಮಣ್ಣು ಕುಸಿದು ಒಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ. ರಾಜಧಾನಿ ಬೆಂಗಳೂರಿನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ಕಾರ್ಮಿಕರ ಪ್ರಾಣ ಹೋಗಿರುವ ಹಲವು ಘಟನೆಗಳು ನಡೆದಿವೆ. ಈಗ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ಕುಸಿತವಾಗಿದೆ. ಕಟ್ಟಡ ನಿರ್ಮಾಣ ಸಮಯದಲ್ಲಿ ಪಕ್ಕದಲ್ಲಿದ್ದ ಕಟ್ಟಡ ಕುಸಿದು ಬಿದ್ದಿದೆ. ಇಲ್ಲಿಯೂ ಕೂಡ ಕ್ರಿಸ್ಮಸ್ ಹಬ್ಬದ ದಿನವೇ ಮಣ್ಣು ಕುಸಿದು ಕಾರ್ಮಿಕನ ಪ್ರಾಣ ಹೋಗಿದೆ. ಬೆಂಗಳೂರಿನ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಸುದ್ದಗುಂಟೆಪಾಳ್ಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಕಟ್ಟಡದ ಅಡಿಯಲ್ಲಿ ಸಿಲುಕಿದ್ದ ಇಬ್ಬರು ಕೆಲಸಗಾರರನ್ನು ರಕ್ಷಣೆ ಮಾಡಲಾಗಿದೆ. ಕಟ್ಟಡದ ಮಣ್ಣಿನ ಅಡಿ ಸಿಲುಕಿದ್ದ ಒರ್ವ ಸಾವನ್ನಪ್ಪಿದ್ದಾನೆ. ಮೃತ ಕಾರ್ಮಿಕನನ್ನು ಬಿಹಾರ ರಾಜ್ಯದ ಸೋಮ್ ಪುರ್ ಮೂಲದ ರಂಜನ್ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಮಣ್ಣಿನಡಿ ಸಿಲುಕಿದ್ದ ಮೃತ…
ಬೆಂಗಳೂರು:- ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕುವ ಬದಲು ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು. ಏಳು ಕೋಟಿ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಿರುವ ಸರ್ಕಾರ, ಅಭಿವೃದ್ಧಿ ಕಾಮಗಾರಿಗೆ ಒಂದು ಅಡಿಗಲ್ಲನ್ನೂ ಹಾಕಿಲ್ಲ. ಜನರು ಸರ್ಕಾರದ ಬಗ್ಗೆ ಛೀ ಥೂ ಎಂದು ಮಾತನಾಡುತ್ತಿದ್ದಾರೆ. ಆದರೆ ಸರ್ಕಾರ ಹಿಂದೂ ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ, ಧರ್ಮಗಳ ನಡುವೆ ಬೆಂಕಿ ಹಚ್ಚುವ ವೀರನಾಗಿದ್ದಾರೆ ಎಂದರು. ಬರ ಪರಿಹಾರಕ್ಕೆ ಇದೇ ವಾರದಲ್ಲಿ 2 ಸಾವಿರ ರೂ. ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ ಈವರೆಗೆ ಹಣ ಸಿಕ್ಕಿಲ್ಲ. ಶಾಲೆಯ ಶೌಚಾಲಯ ಸ್ವಚ್ಛಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. 15-20 ಸಾವಿರ…
ಚಳಿಗಾಲದಲ್ಲಿ ವಾತಾವರಣದಲ್ಲಿ ತಂಪು ಗಾಳಿ ಇರುವುದರಿಂದ ಇದು ದೇಹದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ಚರ್ಮ ಒಣಗಿ ಒರಟಾಗಿ ಬಿರುಕು ಬಿಡುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಜನರಲ್ಲಿ ಒಡೆದ ಹಿಮ್ಮಡಿ ಸಮಸ್ಯೆ ಕಾಡುತ್ತದೆ. ಆಲೂಗಡ್ಡೆಯಲ್ಲಿ ಅನೇಕ ಪೋಷಕಾಂಶಗಳು, ವಿಟಮಿನ್ ಗಳಿವೆ. ಇದನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಅಲ್ಲದೇ ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಆಲೂಗಡ್ಡೆಯನ್ನು ಬಳಸಿ ನಮ್ಮ ಹಿಮ್ಮಡಿ ಬಿರುಕುಗಳನ್ನು ನಿವಾರಿಸಬಹುದಂತೆ. ಹಾಗಾಗಿ ಆಲೂಗಡ್ಡೆಯನ್ನು ತುರಿದು ಅದರಿಂದ ರಸವನ್ನು ತೆಗೆಯಿರಿ. ಇದಕ್ಕೆ ಟೂತ್ ಪೇಸ್ಟ್ ಸ್ವಲ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಇದಕ್ಕೆ ನಿಂಬೆ ಹಣ್ಣಿನ ರಸ ಮತ್ತು ಪುಡಿ ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಪಾದಗಳನ್ನು ಚೆನ್ನಾಗಿ ಬಿಸಿ ನೀರಿನಿಂದ ತೊಳೆದು ನಂತರ ನಿಂಬೆ ಹಣ್ಣಿನ ಸಿಪ್ಪೆಯಿಂದ ಈ ಮಿಕ್ಸ್ ಮಾಡಿದ ಪೇಸ್ಟ್ ಅನ್ನು ಪಾದಗಳಿಗೆ ಹಚ್ಚಿ 5 ನಿಮಿಷ ಮಸಾಜ್ ಮಾಡಿ ನಂತರ 10 ನಿಮಿಷ ಹಾಗೇ ಬಿಟ್ಟು ಬಿಸಿ ನೀರಿನಿಂದ…
ಬೆಂಗಳೂರು:- ಸಿದ್ದರಾಮಯ್ಯ ಎಲ್ಲವನ್ನೂ ಗೊತ್ತಿದ್ದೆ ಮಾಡ್ತಾರೆ ಮಾರ್ಖರಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ಸಭೆ ಸಭಾಪತಿ ಪತ್ರ ಬರೆದಿದ್ದಾರೆ. ಆದರೆ ಅದನ್ನು ಅಧಿವೇಶನ ನಂತರ ಬರೆದಿದ್ದಾರೆ ಎಂದು ತಿರುಚುತ್ತಿದ್ದಾರೆ. ಸದನದಿಂದ ಕಾಂಗ್ರೆಸ್ ನವರು ಹೊರ ಹೋಗಬೇಕಿತ್ತು, ಹೋಗಿದ್ದಾರೆ ಎಂದರು. ಚಳಿಗಾಲ ಅಧಿವೇಶನ ನಡೆದ ವೇಳೆಯಲ್ಲಿಯೇ ರಾಜ್ಯ ಸಭಾ ಸ್ಪೀಕರ್ ಜಗದೀಪ್ ಧನಕರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ. ಅದರೂ ಸಹಿತ ಖರ್ಗೆ ಅವರು ಅಧಿವೇಶನ ನಂತರ ಪತ್ರ ಬರೆದಿದ್ದಾರೆ ಎಂದು ಆರೋಪಿಸಿದ್ದಾರೆ. ಸದನದಲ್ಲಿಯೇ ಧನಕರ್ ಅವರು ಖರ್ಗೆ ಅವರಿಗೆ ಮಾತುಕತೆಗೆ ಆಹ್ವಾನಿಸಿದ್ದರು ಎಂದು ಜೋಶಿ ತಿಳಿಸಿದರು. ಸದನದಿಂದ ಕಾಂಗ್ರೆಸ್ ನವರು ಅಮಾನತು ಆಗಿ ಹೊರಹೋಗಬೆಕಿತ್ತು. ಅದಕ್ಕಾಗಿ ಈ ರೀತಿ ಮಾಡಿದ್ದಾರೆ. ಪತ್ರಕ್ಕೆ ಉತ್ತರಿಸದ ಅವರು ಸಸ್ಪೆಂಡ್ ಆಗೋಕೆ ತೀರ್ಮಾನ ಮಾಡಿದ್ದರು. ಕಾಂಗ್ರೆಸ್ ಪಾರ್ಟಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು…
ಬೆಂಗಳೂರು: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ನಗರದ ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ. ಬಿಹಾರ ಮೂಲದ ರಂಜನ್ ಮೃತ ಕಾರ್ಮಿಕನಾಗಿದ್ದಾನೆ. ಹೌದು , ಸುದ್ದಗುಂಟೆಪಾಳ್ಯದಲ್ಲಿ ಮನೆ ನಿರ್ಮಾಣಕ್ಕೆ ಸೆಲರ್ ತೆಗೆಯುವಾಗ ಕುಸಿದ ಮಣ್ಣು ಸೆಲರ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಕುಸಿದ ಮಣ್ಣು ಈ ವೇಳೆ ಒಬ್ಬ ಕಾರ್ಮಿಕನನ್ನು ರಕ್ಷಣೆ ಮಾಡಿ ಸಹ ಕಾರ್ಮಿಕರು ಮತ್ತೊಬ್ಬರನ್ನು ಹೊರ ತೆಗಯೋ ವೇಳೆ ಮತ್ತೆ ಕುಸಿದು ಬಿದ್ದ ಮಣ್ಣು ಹೀಗಾಗಿ ಕಾರ್ಮಿಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಸುದ್ದಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಣ್ಣಿನೊಳಗೆ ಸಿಲುಕಿರುವ ಮತ್ತೊರ್ವನನ್ನು ಹೊರ ತೆಗೆಯಲು ಹರಸಾಹಸ ಪಡುತ್ತಿರುವ ಕೂಲಿ ಕಾರ್ಮಿಕರು ಹಿಟಾಚಿ ಮೂಲಕ ಹೊರ ತೆಗೆಯಲು ಪ್ರಯತ್ನಿಸುತ್ತಿರುವ ಕಾರ್ಮಿಕರು
ದಾವಣಗೆರೆ : ರೈತರ ಬಗ್ಗೆ ಸಚಿವ ಶಿವಾನಂದ್ ಪಾಟೀಲ್ (Shivanand Patil) ಉಡಾಫೆ ಹೇಳಿಕೆಗೆ ಸಚಿವ ಸ್ಥಾನದಿಂದ ಶಿವಾನಂದ ಪಾಟೀಲ್ ವಜಾ ಮಾಡಬೇಕೆಂದು ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಒತ್ತಾಯ ಮಾಡಿದ್ದಾರೆ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರೈತರ ಪರಿಹಾರ ಕೊಡುತ್ತಾರೆ ನೀವು ನಿಮ್ಮ ಕುಟುಂಬದರು ಆತ್ಮಹತ್ಯೆ ಮಾಡಿಕೊಳ್ಳಿ. 2ಲಕ್ಷ 5 ಲಕ್ಷ ಪರಿಹಾರಕ್ಕಾಗಿ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ..? ಸಾಲ ಮನ್ನಾ ಮಾಡಲಿ ಅಂತ ಯಾರಾದ್ರು ಆತ್ಮಹತ್ಯೆ ಮಾಡಿಕೊಳ್ತಾರಾ..? ಎಂದು ಪ್ರಶ್ನೆ ಮಾಡಿದರು. ಹಿಂದೆ ಸಚಿವರಾಗಿದ್ದಾಗಲೂ ಶಿವಾನಂದ ಪಾಟೀಲ್ ಇಂತಹ ಹೇಳಿಕೆಯನ್ನ ನೀಡಿದ್ದರು ಜವಾಬ್ದಾರಿ ಸ್ಥಾನದಲ್ಲಿದ್ದವರು ಇಂತಹ ಹೇಳಿಕೆ ನೀಡುವುದು ಖಂಡನೀಯ ಅವರು ಎರಡನೇ ಬಾರಿ ಹೀಗೆ ರೈತರಿಗೆ ಅವಮಾನ ಮಾಡಿದ್ದಾರೆ. ಇದು ದಪ್ಪ ತೊಗಲಿನ ಚರ್ಮದ ಸರಕಾರ, ಇದು ದುರಹಂಕಾರಿ ಸರ್ಕಾರ ದುರಹಂಕಾರಿ ಮಂತ್ರಿಗಳಿದ್ದಾರೆ. ರಾಜ್ಯದಲ್ಲಿ ಮೊಹಮ್ಮಬಿನ್ ತುಘಲಕ್, ಟಿಪ್ಪುವಿನ ಆಡಳಿತ ನಡೆಯುತ್ತಿದೆ ಸರ್ಕಾರದ ಯಾವುದೇ ಭರವಸೆಗಳು ಇದುವರೆಗೂ ಈಡೇರಿಲ್ಲ ಮೌಲ್ವಿಗಳಿಗೆ 10 ಸಾವಿರ ಕೋಟಿ ಕೊಡುತ್ತೇವೆ…
ವಿಜಯನಗರ : ಕ್ರಿಸ್ಮಸ್ ಹಬ್ಬದ ನಿಮಿತ್ತ ನಗರದಲ್ಲಿ ಸೋಮವಾರ ಕ್ರೈಸ್ತ ಬಾಂಧವರು ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿದರು. ಬೆಳಿಗ್ಗೆ, ಸ್ಥಾನ ಮಾಡಿ ಹೊಸ ಬಟ್ಟೆಗಳನ್ನು ಧರಿಸಿದ ನಂತರ, ಅವರು ತಮ್ಮ ಹತ್ತಿರದ ಚರ್ಚ್ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಫೆಲ್ಲೋ ಷಿಪ್ ಚರ್ಚ್ ಫಾದರ್ ಸೌಂದರ್ ರಾಜ್ ಮಾತನಾಡಿ, ಜನರ ಪಾಪಗಳನ್ನು ತೊಳೆಯಲು ಪ್ರಭು ಯೇಸು ಈ ನೆಲದಲ್ಲಿ ತನ್ನ ರಕ್ತವನ್ನು ಸುರಿಸಿದನು ಎಂದರು ಏಸುವಿನ ತತ್ವ ಸಿದ್ದಂತಾಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು. ನಂತರ ಏಸು ಪ್ರಭು ಮೇಲಿನ ಹಾಡುಗಳನ್ನು ಹಾಡಿದರು. ಚರ್ಚ್ಗಳಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಮನಸೂರೆಗೊಂಡವು
ಧಾರವಾಡ: ಕೊಟ್ಟಿದ ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯ ಕೊಲೆ ಮಾಡಿರುವ ಘಟನೆ ಧಾರವಾಡದ ತಾಲೂಕಿನ ಉಪ್ಪಿನ ಬೆಟಗೇರಿ ಹಾಗೂ ಹಾರೋ ಬೆಳವಡಿ ಒಳರಸ್ತೆಯಲ್ಲಿ ನಡೆದಿದೆ. ಹೌದು ಕೇವಲ 30 ಸಾವಿರಕ್ಕಾಗಿ ಕಳೆದ ದಿನ ರಾತ್ರೋರಾತ್ರಿ ವ್ಯಕ್ತಿಯ ಕೊಲೆ ಮಾಡಲಾಗಿದ್ದು ತಡಕೋಡ್ ಗ್ರಾಮದ ಸುರೇಶ ದೇವರಹೊರು (42) ಎಂಬಾತನನ್ನು ಶಿವಪ್ಪ ಬಡಗೇರಿ ಎಂಬುವರು ಕೊಲೆ ಮಾಡಲಾಗಿದೆ. ಹತ್ಯೆಯಾದ ಸುರೇಶ ಕೊಲೆ ಆರೋಪಿಗೆ 60 ಸಾವಿರ ಹಣ ಸಾಲವಾಗಿ ಕಟ್ಟಿದ್ದನಂತೆ ಸುರೇಶನಿಗೆ 30 ಸಾವಿರ ಸಾಲದ ಹಣ ಮರಳಿ ಕೊಟ್ಟಿದ ಕೊಲೆ ಆರೋಪಿ ಶಿವಪ್ಪ ಆದರೆ ಇನ್ನೂಳಿದ 30 ಸಾವಿರ ಹಣ ವಿಚಾರವಾಗಿ ಇಬ್ಬರಲ್ಲಿ ಕಿರಿಕ್ ಉಂಟಾಗಿದೆ ಅಲ್ಲದೆ ಆಗ್ಗಾಗ್ಗೆ ಸುರೇಶ ಹಣ ಮರಳಿಸುವಂತೆ ಶಿವಪ್ಪನ ಬೆನ್ನು ಬಿದಿದ್ದ ಇದನ್ನೇ ನೆಪಮಾಡಿಕೊಂಡ ಕೊಲೆ ಆರೋಪಿ ಶಿವಪ್ಪ, ಸುರೇಶವನ್ನು ಹಣ ಕೊಡುವುದಾಗಿ ಕರೆಯಿಸಿ ಹತ್ಯೆ ಮಾಡಿದ್ದಾನೆ. ರಾಡ್ನಿಂದ ಹೊಡೆದು ಹತ್ಯೆ ಮಾಡಿದ ಆರೋಪಿ ಸುರೇಶ ಕೊಲೆಯ ನಂತರ ಅಪಘಾತವೆಂದು ಬಿಂಬಸಲು ಯತ್ನ ಗರಗ ಠಾಣೆಯ…