ಹುಬ್ಬಳ್ಳಿ:- ದೇಶ ನಡಿತಿರೋದು ಸಂವಿಧಾನದ ಮೇಲೆ ಹೊರತು ಭಗವದ್ಗೀತೆ ಮೇಲಲ್ಲ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಳೆದ ಬಾರಿ ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಇತ್ತು. ಇವಾಗ ಸಂವಿಧಾನದ ಸರ್ಕಾರ ಇದೆ. ದೇಶ ನಡಿತಿರೋದು ಭಗವದ್ಗೀತೆ ಮೇಲೆ ಅಲ್ಲ, ಕುರಾನ್ ಮೇಲೆ ಅಲ್ಲ, ಬೈಬಲ್ ಮೇಲೆ ಅಲ್ಲ. ದೇಶ ನಡಿತಿರೋದು ಸಂವಿಧಾನದ ಮೇಲೆ. ಯಾರು ಏನೆ ಅಂದ್ರು ಕರ್ನಾಟಕದಲ್ಲಿ ನಡಿತಿರೋದು ಸಂವಿಧಾನದ ಸರ್ಕಾರವೇ ಎಂದರು ಸರ್ಕಾರಗಳು ನಡೆಯೋದು ಸಂವಿಧಾನ ಮೇಲೆ. ಬಸವ ತತ್ವ, ಅಂಬೇಡ್ಕರ್ ತತ್ವ ಮೇಲೆ ಸರ್ಕಾರ ನಡೀತಿದೆ. ಹಿಂದಿನ ಸರ್ಕಾರ ಹಿಂದುತ್ವದ ಮೇಲೆ ನಡೀತಿತ್ತು ಎಂದು ಹೇಳಿದ್ದಾರೆ. ಪೀಠದ ಮೇಲೆ ಕುಳಿತು ಕಾಗೇರಿ ನಾನು ಆರ್‌ಎಸ್‌ಎಸ್‌ನವರು ಎಂದಿದ್ರು. ಕೋವಿಡ್ ಕಾಲದಲ್ಲಿ ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದಾರೆ. ಯತ್ನಾಳ್ ಆರೋಪಕ್ಕೆ ವಿಜಯೇಂದ್ರ ಉತ್ತರ ಕೊಡಬೇಕು. ವಿಜಯೇಂದ್ರ, ಯತೀಂದ್ರ ಮೇಲೆ ಶ್ಯಾಡೋ ಸಿಎಂ ಅಂತಾ ಆರೋಪ ಮಾಡಿದ್ರು. ಕಳೆದ ಸರ್ಕಾರದಲ್ಲಿ ಶ್ಯಾಡೋ ಸಿಎಂ ಯಾರಿದ್ರು? ಅಂತ ಖರ್ಗೆ…
Author: AIN Author
ಬೆಂಗಳೂರು: ನಗರದಲ್ಲಿ ಹಿಟ್ ಅಂಡ್ ರನ್ ಗೆ ವ್ಯಕ್ತಿ ಬಲಿಯಾಗಿರುವ ಘಟನೆ ಆನಂದರಾವ್ ಸರ್ಕಲ್ ಬಳಿಯ ಫೈಓವರ್ ನಲ್ಲಿ ನಡೆದಿದೆ. ರಾತ್ರಿ 9.30ರ ಸುಮಾರಿಗೆ ನಡೆದಿದ್ದು ಫೈಓವರ್ ಮೇಲೆ ನಡೆದು ಹೋಗುತಿದ್ದ ವ್ಯಕ್ತಿಗೆ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಸುಮಾರು 20 ಮೀಟರ್ ನಷ್ಟು ದೂರ ವ್ಯಕ್ತಿಯ ದೇಹ ಎಳೆದೊಯ್ದ ವಾಹನ ಘಟನೆಯಲ್ಲಿ ಅಂದಾಜು 35 ರಿಂದ 40 ವರ್ಷದ ಅಪರಿಚಿತ ವ್ಯಕ್ತಿ ಸಾವು https://ainlivenews.com/rx-bike-thieves-increase-in-bengaluru-khadimas-tricks-caught-on-cctv/ ಉಪ್ಪಾರ್ ಪೇಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಉಪ್ಪಾರ್ ಪೇಟೆ ಸಂಚಾರಿ ಪೊಲೀಸರ ಬೇಟಿ ಪರಿಶೀಲನೆ ನಡೆಸಿದ್ದು ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಹುಬ್ಬಳ್ಳಿ; ಧಾರವಾಡ ಜಿಲ್ಲೆಯ ಕಲಘಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ನಾತಕೋತ್ತರ ಕೇಂದ್ರ ಧಾರವಾಡ ಇಲ್ಲಿ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮ (ಎಫ್.ಡಿ.ಪಿ ) ವನ್ನು ಆಂತರಿಕ ಗುಣಮಟ್ಟ ಭರವಸ ಕೋಶದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ರಾಯಚೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್. ಹರೀಶ್ ರಾಮಸ್ವಾಮಿ ಅವರು “ಬದಲಾಗುತ್ತಿರುವ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಧ್ಯಾಪಕರು ತಮ್ಮನ್ನು ತಾವು ಹೇಗೆ ಸಿದ್ಧಪಡಿಸಿಕೊಳ್ಳಬೇಕು” ಎಂಬ ವಿಷಯದ ಕುರಿತು ಕಾರ್ಯಗಾರ ನಡೆಸಿದರು. ಈ ಕಾರ್ಯಗಾರದಲ್ಲಿ ಇಂದಿನ ತಲೆಮಾರಿನ ವಿದ್ಯಾರ್ಥಿಗಳ ಕಲಿಕಾ ವಿಧಾನ, ಅವರ ಬೇಡಿಕೆಗಳು ಬದಲಾಗುತ್ತಿವೆ. ಅದಕ್ಕೆ ಪೂರಕವಾಗುವ ರೀತಿಯಲ್ಲಿ ಹಾಗೂ ವಿದ್ಯಾರ್ಥಿಗಳನ್ನು ಒಬ್ಬ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವುದರೊಂದಿಗೆ ಉದ್ಯೋಗ ಮಾರುಕಟ್ಟೆಗೆ ಸಿದ್ಧಪಡಿಸುವ ರೀತಿಯಲ್ಲಿ ಪ್ರಾಧ್ಯಾಪಕರು ತಮ್ಮ ಬೋಧನೆಯನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಪಠ್ಯಕ್ರಮ ಸಿದ್ಧಪಡಿಸುವುದು ಹೇಗೆ ಹಾಗೂ ಮೌಲ್ಯಮಾಪನ ಯಾವ ರೀತಿ ಇರಬೇಕು ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಿಕೆ ಹೇಗಿರಬೇಕು ಎಂಬ ವಿಷಯದ ಕುರಿತು ಪ್ರಾಯೋಗಿಕ ತರಬೇತಿಯನ್ನು ನೀಡಿದರು. ಕೌಶಲ್ಯ ಆಧಾರಿತ ವಿಷಯವಾರು ಪಠ್ಯಕ್ರಮ ಹೇಗೆ ಸಿದ್ಧಪಡಿಸಬೇಕು ಎಂದು ತರಬೇತಿ ನೀಡುವುದರೊಂದಿಗೆ…
ಹುಬ್ಬಳ್ಳಿ; ಭಾರತೀಯ ಜನತಾ ಪಕ್ಷದ ಅಧಿಕಾರದ ಅವಧಿಯಲ್ಲಿ ಕೋವೀಡ್ ನಲ್ಲಿ ೪ ಸಾವಿರ ಕೋಟಿ ಭ್ರಷ್ಟಾಚಾರ ಕುರಿತು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರೇ ಸ್ಪಷ್ಟಪಡಿಸಿದ್ದು ಅವರದೇ ಕೇಂದ್ರ ನಾಯಕರರು ಈ ಬಗ್ಗೆ ಮಾತಾಡತಾ ಇಲ್ಲ ಅವರಿಗೂ ಪಾಲು ಇರಬಹುದು ಎಂದು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದರು ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಬಿಜೆಪಿ 40% ಕಮಿಷನ್ ಸರ್ಕಾರವೆಂಬ ಆರೋಪಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳಿದ್ದಾರೆ . ಕೊರೊನಾ ಚಿಕಿತ್ಸೆ ಮತ್ತು ನಿಯಂತ್ರಣದ ಹೆಸರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಸುಮಾರು 4,000 ಕೋಟಿ ರೂ.ಗಳ ಭ್ರಷ್ಟಾಚಾರ ಮಾಡಿದೆ ಎಂದು ಪತ್ರಿಕಾಗೋಷ್ಠಿ ಕರೆದು ದಾಖಲೆಗಳ ಸಮೇತ ನಾವು ಆರೋಪ ಮಾಡಿದ್ದೆವು. ಯತ್ನಾಳ್ ಅವರ ಆರೋಪವನ್ನು ಗಮನಿಸಿದರೆ ನಮ್ಮ ಇನ್ನು ಹತ್ತು ಪಟ್ಟು ಹೆಚ್ಚಿನ ಭ್ರಷ್ಟಾಚಾರ ಆಗಿರಬಹುದು. ಕೋವಿಡ್ ರೋಗದ ನಿವಾರಣೆ ಮತ್ತು ತಡೆಗಟ್ಟುವಿಕೆಯ ಹೆಸರಿನಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ…
ಬೆಂಗಳೂರು: ನಗರದಲ್ಲಿ ಹೆಚ್ಚಾಯ್ತು ಆರ್ ಎಕ್ಸ್ ಬೈಕ್ ಕಳ್ಳರ ಹಾವಳಿ ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದುಮಧ್ಯ ರಾತ್ರಿ ಬೈಕ್ ಲಾಕ್ ಒಡೆದು ಬೈಕ್ ಕಳ್ಳತನ ಮಾಡುವ ಖದೀಮರು. ವೈಟ್ ಫೀಲ್ಡ್ ನ ಚೆನ್ನಸಂದ್ರದಲ್ಲಿ ಶ್ರೀನಿವಾಸ್ ಎಂಬುವವರ ಸೇರಿದ ಬೈಕ್ ಎಗರಿಸಿರುವ ಖದೀಮರುಕಳೆದ ಭಾನುವಾರ ಮಧ್ಯರಾತ್ರಿ 1.20 ಸುಮಾರಿಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮನೆಯ ಗೇಟ್ ಲಾಕ್ ಮುರಿದ ಒಳಗೆ ಎಂಟ್ರಿಯಾಗಿರುವ ಇಬ್ಬರು ಖದೀಮರು.. ಘಟನೆ ಸಂಬಂಧ ವೈಟ್ ಫೀಲ್ಧ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಳ್ಳರಿಗಾಗಿ ಪೊಲೀಸರಿಂದ ತೀವ್ರ ಶೋಧ!
ಚಾಮರಾಜನಗರ:- ಚರಂಡಿ ಸ್ವಚ್ಚತೆ ಮಾಡಿಕೊಡುವಂತೆ ಮುಖ್ಯಮಂತ್ರಿಗಳಿಗೆ ರೈತ ಪತ್ರ ಬರೆದ ಘಟನೆ ಜರುಗಿದೆ. ಬೇಗೂರು ಗ್ರಾಮಪಂಚಾಯ್ತಿ ಪಿಡಿಓ ನಿರ್ಲಕ್ಷ್ಯದಿಂದ ಬೇಸತ್ತ ರೈತನಿಂದ ಸಿ.ಎಂ.ಗೆ ಪತ್ರ ಬರೆಯಲಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಘಟನೆ ಜರುಗಿದೆ. ಬೇಗೂರು ಗ್ರಾಮಪಂಚಾಯ್ತಿ ವಿರುದ್ದ ರೈತ ಬೇಗೂರು ಗ್ರಾಮದ ವಾಸಿ ಮರಿಶೆಟ್ಟಿ ಆರೋಪ ಮಾಡಿದ್ದು, ಚರಂಡಿಯ ಅವ್ಯವಸ್ಥೆಯ ಸರಿಪಡಿಸುವಂತೆ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ. ಅಲ್ಲದೇ ಪಿಡಿಓ ನಿರ್ಲಕ್ಷ್ಯತನಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಮನೆಯ ಸುತ್ತ ಅಶುಚಿತ್ವ ತಾಂಡವ, ರೋಗರುಜಿನಿಗಳು ಹರಡುವ ಭೀತಿ ಎಂಬ ಆತಂಕ ಉಂಟು ಮಾಡಿದ್ದು, ಸ್ವಚ್ಛತೆ ಮಾಡಿಸಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರೊಬ್ಬರು ಪತ್ರ ಬರೆದಿರುವ ಘಟನೆ ನಡೆದಿದೆ.
ಕೋಲಾರ:- ಪತಿ ಜತೆ ಸಂಸಾರ ನಡೆಸಲು ನಿರಾಕರಿಸಿದ್ದ ಮಗಳನ್ನು ಮರ್ಯಾದೆಗೆ ಅಂಜಿ ತೋಟದಲ್ಲಿ ಕೊಂದು ತಂದೆ ಸುಟ್ಟು ಹಾಕಿರುವ ಘಟನೆ ಮುಳಬಾಗಿಲು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಜರುಗಿದೆ. ಇದೀಗ ತಂದೆಯನ್ನು ಅರೆಸ್ಟ್ ಮಾಡಲಾಗಿದೆ. ಅರ್ಚಿತಾ (17) ಕೊಲೆಯಾದ ಯುವತಿ. ಮೇ 21ರಂದು ಗಂಡನ ಮನೆಯಿಂದ ಕರೆ ತರುವಾಗ ಆಕೆಯ ತಂದೆ ರವಿ, ತೋಟದ ಮನೆಗೆ ಕರೆದೊಯ್ದು ಬಡಿಗೆಯಿಂದ ಹೊಡೆದು ಕೊಂದಿದ್ದು, ಅಲ್ಲಿಯೇ ಸುಟ್ಟುಹಾಕಿದ್ದ. ತಿಗಳ ಸಮುದಾಯದ ಅರ್ಚಿತಾ ತನ್ನ ಸಹೋದರ ಸಂಬಂಧಿ ಯುವಕನನ್ನೇ (ಚಿಕ್ಕಪ್ಪನ ಮಗ) ಪ್ರೀತಿಸುತ್ತಿದ್ದಳು. ಈ ವಿಚಾರ ಗೊತ್ತಾಗುತ್ತಲೇ ಪೋಷಕರು ಕೋಲಾರ ತಾಲ್ಲೂಕಿನ ವೇಮಗಲ್ ಬಳಿಯ ಜೋಡಿ ಕೃಷ್ಣಪುರ ಗ್ರಾಮದ ತಮ್ಮದೇ ಸಮುದಾಯದ ಯುವಕನೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ‘ಪತಿ ಜತೆ ಸಂಸಾರ ನಡೆಸಲು ನಿರಾಕರಿಸಿದ ಮಗಳನ್ನು ತಂದೆಯೇ ಹೋಗಿ ಮೇ 21ರಂದು ವಾಪಸ್ ಕರೆ ತಂದಿದ್ದ. ಗ್ರಾಮಕ್ಕೆ ಬರುವಾಗ ತೋಟದ ಮನೆಗೆ ಕರೆದೊಯ್ದು ಮಗಳನ್ನು ಕೊಂದು ಹಾಕಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ನ ಖ್ಯಾತ ಸಾಹಸ ನಿರ್ದೇಶಕ {stunt master), ಮಲಯಾಳಂ ಮೂಲದ ಜಾಲಿ ಬಾಸ್ಟಿನ್ (Jolly Bastin) ನಿನ್ನೆ ಹೃದಯಾಘಾತದಿಂದ (heart attack) ನಿಧನರಾಗಿದ್ದಾರೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಸಾವಿರಾರು ಚಿತ್ರಗಳಿಗೆ ಸಾಹಸ ದೃಶ್ಯಗಳನ್ನು ಕಂಪೋಸ್ ಮಾಡಿರುವ ಜಾಲಿ ಬಾಸ್ಟಿನ್, ಬಹುಬೇಡಿಕೆ ಸ್ಟಂಟ್ ಮಾಸ್ಟರ್ ಆಗಿದ್ದರು. ಬೈಕ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಜಾಲಿ ಬಾಸ್ಟಿನ್, ಕ್ರೇಜಿಸ್ಟಾರ್ ರವಿಚಂದ್ರನ್ ಕಣ್ಣಿಗೆ ಬಿದ್ದು, ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಪ್ರೇಮಲೋಕ ಸೇರಿದಂತೆ ರವಿಚಂದ್ರನ್ ಅವರ ಬಹುತೇಕ ಚಿತ್ರಗಳಿಗೆ ಇವರ ಸಾಹಸ ನಿರ್ದೇಶನವಿದೆ. ಶಾಂತಿ ಕ್ರಾಂತಿಗಾಗಿ ಮಾಡಿದ ಸಾಹಸ ದೃಶ್ಯಗಳ ಕಂಪೋಸ್ ಇವತ್ತಿಗೂ ನೆನಪಿನಲ್ಲಿ ಉಳಿಯುವಂಥದ್ದು. ಕೇರಳದಲ್ಲಿ 1966ರಲ್ಲಿ ಜಾಲಿ ಬಾಸ್ಟಿನ್ ಹುಟ್ಟಿದ್ದರೂ, ಬೆಳೆದದ್ದು ಬೆಂಗಳೂರಿನಲ್ಲಿ. ಇಲ್ಲಿಯೇ ನೆಲೆಯೂರಿ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರು ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾಗಾಗಿ ಕೆಲಸ ಮಾಡಿದ್ದರು ಡಿಸೆಂಬರ್ ಬಂತೆಂದರೆ ಒಂದು ರೀತಿಯಲ್ಲಿ ಚಿತ್ರೋದ್ಯಮಕ್ಕೆ…
ಚಂದ್ರನ ಮೇಲೆ ಯಶಸ್ವಿಯಾಗಿ ಉಪಗ್ರಹ ಇಳಿಸಿ ಅಧ್ಯಯನ ನಡೆಸಿದ ಇಸ್ರೋ, ಸೂರ್ಯನ ಅಧ್ಯಯನಕ್ಕೂ ಆದಿತ್ಯ -ಎಲ್1 ನೌಕೆ ಕಳುಹಿಸಲಾಗಿದೆ. 2023ರ ಸಾಲಿನಲ್ಲಿ ಹತ್ತು ಹಲವು ಸಾಧನೆಗೈದ ಇಸ್ರೋ ಇದೀಗ 2024ರ ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಲು ಸಜ್ಜಾಗಿದೆ. ಜನವರಿ 1 ರಂದು ದೇಶದ ಮೊದಲ ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹವನ್ನು ಪೋಲಾರ್ ನೌಕೆಯನ್ನು ಇಸ್ರೋ ಉಡಾವಣೆ ಮಾಡುತ್ತಿದೆ. ಕಪ್ಪು ಕುಳಿ, ನ್ಯೂಟ್ರಾನ್ ನಕ್ಷತ್ರ, ಎಕ್ಸ್ ರೇ ಬೈನರಿ, ಸಕ್ರಿಯ ಗ್ಯಾಲಕ್ಸಿ ನ್ಯೂಕ್ಲಿಯಸ್, XPoSat ಪಲ್ಸರ್‌ಗಳು ಸೇರಿದಂತೆ 50 ಪ್ರಕಾಶಮಾನ ಮೂಲಗಳ ಅಧ್ಯಯನ ಮಾಡಲು ಈ ಉಪಗ್ರಹ ಉಡಾವಣೆ ಮಾಡಲಾಗುತ್ತಿದೆ. ವಿಶೇಷ ಅಂದರೆ ಈ ಉಪಗ್ರಹವನ್ನು 500 ರಿಂದ 700 ಕಿಲೋಮೀಟರ್ ವೃತ್ತಕಾರಾದ ಭೂಮಿಯ ಕಕ್ಷೆಯಲ್ಲಿ ಇರಿಸಿ ಅಧ್ಯಯನ ಮಾಡಲಾಗುತ್ತದೆ. ಕನಿಷ್ಠ ಐದು ವರ್ಷಗಳ ಕಾಲ ಈ ಅಧ್ಯಯನ ನಡೆಯಲಿದೆ. ನಾಸಾ ಬಳಿಕ ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹ ಕಳುಹಿಸುತ್ತಿರುವ ಎರಡನೇ ಸಂಸ್ಥೆ ಇಸ್ರೋ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. 2021ರಲ್ಲಿ ನಾಸಾ ಪೊಲರಿಮೀಟರ್…
ಬೆನಿ (ರಿಪಬ್ಲಿಕ್ ಆಫ್ ಕಾಂಗೊ): ಕಾಂಗೋದ (Congo Rains) ಕಸಾಯಿ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕನಿಷ್ಠ 22 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾಂಗೋದ ಕಸಾಯಿ-ಮಧ್ಯ ಪ್ರಾಂತ್ಯದಲ್ಲಿ ಮಂಗಳವಾರ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು. ಪ್ರದೇಶದಲ್ಲಿ ಪ್ರವಾಹ ಉಂಟಾಗಿ ಜನಜೀವನ ಅಸ್ತವ್ಯಸ್ತವಾಯಿತು. ಮೂಲಸೌಕರ್ಯವಿಲ್ಲದೇ ಸ್ಥಳೀಯ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಕನಂಗಾ ಪಟ್ಟಣದ ಅಧಿಕಾರಿಗಳು ತಿಳಿಸಿದ್ದಾರೆ ಧಾರಾಕಾರ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಹಲವೆಡೆ ಮನೆಗಳು, ಚರ್ಚ್‌ಗಳು ಮತ್ತು ರಸ್ತೆಗಳು ಸಹ ಕುಸಿತ ಕಂಡಿವೆ. ಪರಿಣಾಮವಾಗಿ ಅನೇಕರು ಸಾವಿಗೀಡಾಗಿದ್ದು, ಅವರು ಕುಟುಂಬಸ್ಥರು ನಿರಾಶ್ರಿತರಾಗಿದ್ದಾರೆ. ಕನಂಗಾದ ಕಮ್ಯೂನ್‌ಗೆ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ ಎಂದು ಗವರ್ನರ್ ಜಾನ್ ಕಬೆಯಾ ತಿಳಿಸಿದ್ದಾರೆ. ಹಾನಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಗುವುದು ಎಂದು ಪ್ರಾಂತೀಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಸೂಕ್ತವಲ್ಲದ ಜಾಗದಲ್ಲಿ ಮನೆಗಳನ್ನು ನಿರ್ಮಿಸಿದ್ದೇ ಈ ಸಾವುಗಳಿಗೆ ಕಾರಣವಾಗಿದೆ. ಮನೆಗಳ ಗೋಡೆಗಳು ಕುಸಿದು ಹೆಚ್ಚಿನ ಜೀವಹಾನಿಯಾಗಿದೆ ಎಂದು ಕನಂಗಾ ಮೇಯರ್ ರೋಸ್ ಮುವಾಡಿ ಮುಸುಬೆ ತಿಳಿಸಿದ್ದಾರೆ.