Author: AIN Author

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜ. 23ರಿಂದ 25ರವರೆಗೆ ರಾಜ್ಯದ ಎಲ್ಲ ಸಂಸದರ ಮನೆಗಳ ಮುಂದೆ ವಿವಿಧ ವಿಭಾಗದ ಕಾರ್ಮಿಕರ ಸಾಮೂಹಿಕ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕರ್ನಾಟಕ ಸಮಿತಿ ಅಧ್ಯಕ್ಷೆ ಎಸ್. ವರಲಕ್ಷ್ಮೀ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕಾರ್ಮಿಕರು, ರೈತ ಮತ್ತು ಜನಸಾಮಾನ್ಯರ ವಿರೋಧಿ ನೀತಿಗಳನ್ನು ಕೈ ಬಿಡಬೇಕೆಂದು ಒತ್ತಾಯಿಸಿದರು. ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ರಾಜ್ಯ 2 ನೇ ಸ್ಥಾನದಲ್ಲಿದೆ. ಆದರೂ ರಾಜ್ಯಕ್ಕೆ ದೊರಕಬೇಕಾದ ನ್ಯಾಯಯುತ ಪಾಲನ್ನು ಕೇಂದ್ರ ಸರ್ಕಾರ ಕೊಡಲು ನಿರಂತರವಾಗಿ ನಿರಾಕರಿಸುತ್ತಿದೆ. ರಾಜ್ಯದ ಜನತೆಗೆ ಕೇಂದ್ರ ಸರ್ಕಾರ ಮಾಡುತ್ತಿರುವ ವಂಚನೆಯನ್ನು ಕಾಂಗ್ರೆಸ್ ಸರ್ಕಾರವು ರಾಜಕೀಯವಾಗಿ ಬಹಿರಂಗಗೊಳಿಸುತ್ತಿಲ್ಲ ಎಂದರು. ವಿವಿಧ ವಿಷಯ ಒಳಗೊಂಡಂತೆ ಪ್ರತಿರಂಗದಲ್ಲಿಯೂ ಕೇಂದ್ರ ಸರ್ಕಾರದ ನೀತಿಗಳಿಂದ ಆಗುತ್ತಿರುವ ಕೆಟ್ಟ ಪರಿಣಾಮಗಳನ್ನು ಬಯಲು ಮಾಡಲು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳು ಮುಂದಾಗುತ್ತಿಲ್ಲ. ಕಾರ್ಮಿಕರಿಗೆ ಸಾಮಾಜಿಕ ರಕ್ಷಣಾ ಹಾಗೂ ಕಲ್ಯಾಣ ಯೋಜನೆ…

Read More

ಹುಬ್ಬಳ್ಳಿ: ಚಿಕ್ಕ ವ್ಯಾಪಾರಸ್ಥರಿಗೆ ಜನತಾ ಬಜಾರ್‌ನಲ್ಲಿ ನಿರ್ಮಿಸಿರುವ ಕಟ್ಟಾ ಅಥವಾ ಶೆಡ್‌ಗಳನ್ನು ಹಸ್ತಾಂತರ ಮಾಡಲು ಒತ್ತಾಯಿಸಿ ಸೂಪರ್ ಮಾರ್ಕೆಟ್ ಚಿಕ್ಕ ವರ್ತಕರ ಸಂಘದಿಂದ ನಗರದ ಮಹಾನಗರ ಪಾಲಿಕೆ ಕಚೇರಿ ಮುಂದೆ ಡಿ. 30ರಂದು ಮಧ್ಯಾಹ್ನ 12ಕ್ಕೆ ಮಾರುಕಟ್ಟೆ ಮಾದರಿಯಲ್ಲಿ ವಿನೂತನ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ ತಿಳಿಸಿದರು. ನಗರದಲ್ಲಿ ಮಾಹಿತಿ ನೀಡಿದರು ಜನತಾ ಬಜಾರ್‌ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಹೊಸದಾಗಿ ನಿರ್ಮಿಸಿರುವ ಮಾರುಕಟ್ಟೆ ಸಂಕೀರ್ಣದಲ್ಲಿ ಮೂಲ ಚಿಕ್ಕ ವ್ಯಾಪಾರಸ್ಥರಿಗೆ ಕಟ್ಟಾ ಅಥವಾ ಶೆಡ್‌ಗಳನ್ನು ಮರು ಹಂಚಿಕೆ ಮಾಡಬೇಕು. ಮುಂದೆ ಲೋಕಸಭೆ ಚುನಾವಣೆ ಬರಲಿದೆ. ನೀತಿ ಸಂಹಿತೆ ಜಾರಿಯಾಗಲಿದೆ. ಇದರಿಂದ ಮತ್ತಷ್ಟು ಹಂಚಿಕೆ ವಿಳಂಬವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಅಂದು ಮಹಾನಗರ ಪಾಲಿಕೆ ಸಾಮಾನ್ಯ ಸಭೆ ನಡೆಯಲಿದೆ. ನಾವು ಹೊರಗಡೆ ವಿನೂತನ ಪ್ರತಿಭಟನೆ ನಡೆಸುತ್ತೇವೆ. ನಂತರ ಮಹಾನಗರ ಪಾಲಿಕೆ ಆಯುಕ್ತರು, ಮೇಯರ್‌ಗೆ ಮನವಿ ಸಲ್ಲಿಸಿ, ಗಡುವು ನೀಡಲಾಗುವುದು…

Read More

ಹುಬ್ಬಳ್ಳಿ: ಇಲ್ಲಿಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯಲ್ಲಿ ಗಣಿತ ವಿಭಾಗದಿಂದ ಪೈಥಾನ್ ಪ್ರೋಗ್ರಾಮಿಂಗ್‌ನ ರಾಜ್ಯ ಮಟ್ಟದ ಪ್ರಾಯೋಗಿಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಕೆಎಲ್‌ಇ ತಾಂತ್ರಿಕ ಸಂಸ್ಥೆಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹ ಪ್ರಾಧ್ಯಾಪಕ ಡಾ. ರಾಜೇಶ ಯಕ್ಕುಂಡಿಮಠ ಉದ್ಘಾಟಿಸಿ ಮಾತನಾಡಿ, ಪೈಥಾನ್ ಜನಪ್ರಿಯ ಪ್ರೋಗ್ರಾಮಿಂಗ್ ಭಾಷೆಯಾಗಿದ್ದು, ಇದನ್ನು ಗೈಡೋ ವ್ಯಾನ್ ರೋಸಮ್ ಅಭಿವೃದ್ಧಿಪಡಿಸಿ, 1991ರಲ್ಲಿ ಬಿಡುಗಡೆ ಮಾಡಿದರು. ವೆಬ್ ಅಭಿವೃದ್ಧಿ (ಸರ್ವರ್-ಸೈಡ್), ತಂತ್ರಾಂಶ ಅಭಿವೃದ್ಧಿ, ಸಿಸ್ಟಮ್ ಸ್ಕ್ರಿಪ್ಟಿಂಗ್, ಗಣಿತ ಮುಂತಾದ ಕ್ಷೇತ್ರಗಳಲ್ಲಿ ಪೈಥಾನ್ ಬಳಸಲಾಗುತ್ತಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ ಸಂಶಿ, ಶ್ರೀಧರ ಚಿನ್ನಿ, ಡಾ. ಪ್ರಭಾ ಮಂಡಲಗೇರಿ ತರಬೇತಿ ನೀಡಿದರು. ಹುಲಕೋಟಿ, ಶಿರಸಿ, ಹಳಿಯಾಳ, ರಾಣೆಬೆನ್ನೂರು, ಖಾನಾಪುರ, ಕಲಘಟಗಿ, ಧಾರವಾಡ ಸೇರಿ 6 ಜಿಲ್ಲೆಗಳ 90ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು 11 ಉಪನ್ಯಾಸಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುನೀತಾ ಹಾನಗಲ್ ಅಧ್ಯಕ್ಷತೆ ವಹಿಸಿದ್ದರು. ಗಣಿತ ಉಪನ್ಯಾಸಕಿ ಡಾ. ಅರ್ಚನಾ ಸ್ವಾಗತಿಸಿ,…

Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼಕಾಟೇರʼ ರಿಲೀಸ್‌ ಆಗಿದೆ. ನಿನ್ನೆ ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿದ್ದು, ದಚ್ಚು ಅಭಿಮಾನಿಗಳು ಥಿಯೇಟರ್‌ಗಳ ಮುಂದೆ ಸಾಲು ನಿಂತಿದ್ದಾರೆ. ʼಕಾಟೇರ’ದಲ್ಲಿ ದರ್ಶನ್‌ ರಸ್ಟಿಕ್‌ ಲುಕ್‌ ಟ್ರೇಲರ್‌ನಲ್ಲಿ ಅಭಿಮಾನಿಗಳಿಗೆ ಹುಚ್ಚೆಬ್ಬಿಸಿತ್ತು. ʼಕ್ರಾಂತಿ’ ನಂತರ ʼಕಾಟೇರ’ನಾಗಿ ದರ್ಶನ್ ತೆರೆಗೆ ಬರುತ್ತಿದ್ದು, ಮೊದಲ ದಿನದ ಆನ್‌ಲೈನ್ ಬುಕಿಂಗ್‌ನಲ್ಲೇ ಸಿನಿಮಾ 2.5 ಕೋಟಿ ಬಾಚಿಕೊಂಡಿದೆ. ಪ್ರದರ್ಶನ ಬುಕಿಂಗ್‌ನಲ್ಲೂ ಕಾಟೇರ ದಾಖಲೆ ಬರೆದಿದೆ. 389 ಏಕಪರದೆ, 72 ಮಲ್ಟಿಪ್ಲೆಕ್ಸ್‌ಗಳಿಂದ ಇಂದು 1670 ಶೋಗಳು ನಿಗದಿಯಾಗಿವೆ. ರಾಜ್ಯಾದ್ಯಂತ ದರ್ಶನ್ ಅವರ 158 ಮೆಗಾ ಕಟೌಟ್ ಗಳನ್ನು ಹಾಕಲಾಗಿದೆ. 21 ಚಿತ್ರಮಂದಿರಗಳಲ್ಲಿ ಮಧ್ಯರಾತ್ರಿ ಶೋಗಳು ಆರಂಭವಾಗಿವೆ. 43 ಥಿಯೇಟರ್‌ಗಳಲ್ಲಿ ಬೆಳಗ್ಗೆ 3 ಗಂಟೆಗೆ, 77 ಕಡೆ ಬೆಳಗಿನ ಜಾವ 4ಕ್ಕೆ, ಬೆಳಗ್ಗೆ 5ಕ್ಕೆ 89 ಹಾಗೂ 105 ಚಿತ್ರಮಂದಿರಗಳಲ್ಲಿ 6 ಗಂಟೆಗೆ ಶೋ ಶುರುವಾಯಿತು. ಸೂರ್ಯ ಮೂಡುವ ಮುನ್ನವೇ ಕಾಟೇರ ಸಿನಿಮಾದ 335 ಶೋಗಳು ಆರಂಭವಾಗಿದ್ದು, ಇದು ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ. ಮಾಲಾಶ್ರೀ ಪುತ್ರಿ ಆರಾಧನಾ…

Read More

ಹುಬ್ಬಳ್ಳಿ : ರಾಜ್ಯದಲ್ಲಿರುವುದು ಸಂವಿಧಾನ, ಬಸವ ಹಾಗೂ ಅಂಬೇಡ್ಕರ್‌ ತತ್ವದ ಮೇಲೆ ನಡೆಯುತ್ತಿರುವ, ಎಲ್ಲರನ್ನೂ ಒಳಗೊಂಡ ಸರ್ಕಾರ. ಆದರೆ ಹಿಂದಿನ ಬಿಜೆಪಿ ಸರ್ಕಾರ ಸಂವಿಧಾನ ಬದಿಗೊತ್ತಿ ಹಿಂದುತ್ವದ ಅಡಿ ನಡೆಯುತ್ತಿತ್ತು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿ, ಆಗ ಸ್ಪೀಕರ್‌ ಹುದ್ದೆಯಲ್ಲಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾನು ಆರೆಸ್ಸೆಸ್‌ನಿಂದ ಬಂದವನು ಎಂದು ಪದೇ ಪದೆ ಹೇಳುತ್ತಿದ್ದರು.  ಸರ್ಕಾರಗಳು ನಡೆಯುವುದು ಭಗವದ್ಗೀತೆ, ಬೈಬಲ್‌, ಕುರಾನ್‌ ಆಧಾರದ ಮೇಲಲ್ಲ. ಸಂವಿಧಾನದ ಅಡಿ. ಆ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದರು. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿಲ್ಲ, ಇನ್ನು ಪಿಎಂ ಮಾಡ್ತಾರಾ ಎನ್ನುವ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರು ಮೊದಲು ತಮ್ಮ ಮಗನಿಗೆ ಟಿಕೆಟ್ ಕೊಡಿಸಲಿ’ ಎಂದು ತಿರುಗೇಟು ನೀಡಿದರು. https://ainlivenews.com/sabarimala-ayyappa-swami-temple-earned-204-crore-rupees-in-39-days/ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ”ಇಂಡಿಯಾ” ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ಪ್ರಸ್ತಾವನೆಯನ್ನು ಪುತ್ರ, ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ…

Read More

ಹುಬ್ಬಳ್ಳಿ: ಭಾರತೀಯ ವೈದ್ಯಕೀಯ ಸಂಘ ಹುಬ್ಬಳ್ಳಿ ಮಹಿಳಾ ಶಾಖೆ, ಆಲ್ ಇಂಡಿಯಾ ಜೈನ್ ಯುಥ್ ಫೆಡರೇಷನ್‌ನ ಮಹಾವೀರ ಲಿಂಬ್ ಸೆಂಟರ್ ಆಶ್ರಯದಲ್ಲಿ ಉಚಿತ ಕೃತಕ ಕಾಲು ಜೋಡಣಾ ಶಿಬಿರವನ್ನು ನಗರದ ಕಿಮ್ಸ್ ಪ್ರಾಂಗಣದ ಮಹಾವೀರ ಲಿಂಬ್ ಸೆಂಟರ್‌ನಲ್ಲಿ ಏರ್ಪಡಿಸಲಾಗಿತ್ತು. 15 ಅಂಗವಿಕಲರಿಗೆ ಕೃತಕ ಕಾಲು ಜೋಡಣೆ ಮಾಡಲಾಯಿತು. ಮಹಿಳಾ ಶಾಖೆ ಅಧ್ಯಕ್ಷೆ ಡಾ. ಭಾರತಿ ಭಾವಿಕಟ್ಟಿ, ಕಾರ್ಯದರ್ಶಿ ಡಾ. ಆಶಾ ಪಾಟೀಲ, ಲಿಂಬ್ ಸೆಂಟರ್ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ, ಡಾ. ಶಶಿಕಲಾ ಹೊಸಮನಿ, ಡಾ. ಜಯಶ್ರೀ ಬಳಿಗಾರ, ಡಾ. ಶಿಲ್ಪಾ ಛಾಟ್ನಿ, ಡಾ. ಸಂಗೀತಾ ಅಂಟರತಾನಿ, ಡಾ. ಕಾಂಚನ ಯು.ಟಿ. ಇತರರು ಇದ್ದರು.

Read More

ಹುಬ್ಬಳ್ಳಿ: ಇಲ್ಲಿಯ ಚಿಟಗುಪ್ಪಿ ಆಸ್ಪತ್ರೆಗೆ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹಾಗೂ ಮಹಾಪೌರ ವೀಣಾ ಬಾರದ್ವಾಡ ಅವರು ಭೇಟಿ ನೀಡಿ, ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿದರು. ಮುಖ್ಯ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ, ಕೋವಿಡ್ ಪರೀಕ್ಷೆ ಹಾಗೂ ಔಷಧ ದಾಸ್ತುನಗಳ ಬಗ್ಗೆ ವಿವರಿಸಿದರು. ಜಿಂಗಲ್ಸ್ ಮೂಲಕ ಸಾರ್ವಜನಿಕರಿಗೆ ಮುಂಜಾಗ್ರತೆ ತೆಗೆದುಕೊಳ್ಳಲು ಮಾಹಿತಿ ನೀಡಲಾಗುತ್ತಿದೆ ಎಂದರು. ಪಾಲಿಕೆ ಸದಸ್ಯೆ ಸುನಿತಾ ಮಾಳವದಕರ, ಪ್ರದೀಪ, ಹೇಮಂತ, ಮಹಾಂತೇಶ ಇತರರು ಇದ್ದರು.

Read More

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮತ್ತು ಧಾರವಾಡ ಜೋನ್ ಸಹಯೋಗದಲ್ಲಿ ಇಲ್ಲಿಯ ಕೆಎಸ್‌ಸಿಎ ಮೈದಾನದಲ್ಲಿ ಜ. 5ರಿಂದ 8ರವರೆಗೆ ರಣಜಿ ಟ್ರೋಫಿ ಪಂದ್ಯಾವಳಿ ಏರ್ಪಡಿಸಲಾಗಿದೆ. ಕರ್ನಾಟಕ ಮತ್ತು ಪಂಜಾಬ್ ತಂಡಗಳು ಹಣಾಹಣಿಯಾಗಲಿವೆ.

Read More

ಬೆಂಗಳೂರು :- ಶಿಕ್ಷಕಿಯೊಬ್ಬರು ಯುವಕನಿಂದ ಲೈಂಗಿಕ ಕಿರುಕುಳ ಎದುರಿಸಿದ ಘಟನೆ ನಡೆದಿದ್ದು, ಇದು ತಡವಾಗಿ ಬೆಳಕಿದೆ ಬಂದಿದೆ. ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಯೊಬ್ಬರಿಗೆ ಯುವಕ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವ್ಯಕ್ತಿಯನ್ನು ಮನೋಜ್ (26) ಎಂದು ಗುರುತಿಸಲಾಗಿದೆ. ಶಿಕ್ಷಕಿ ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ತಿಂಗಳ ಡಿಸೆಂಬರ್ 25ರಂದು ಶಿಕ್ಷಕಿಯೊಬ್ಬರು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವಕನಿಂದ ಲೈಂಗಿಕ ಕಿರುಕುಳ ಎದುರಿಸಿದ್ದಾರೆ. ಇವರು ಮೂಲತಃ ಶಂಕರಪುರ ಬಡಾವಣೆ ನಿವಾಸಿಯಾಗಿದ್ದು, ಘಟನೆ ದಿನ ಇವರು ವೈಟ್‌ಫಿಲ್ಡ್‌ಗೆ ಹೊರಟಿದ್ದರು. ಈ ಸಂಬಂಧ ಅವರು ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಅದೇ ರೈಲಿನಲ್ಲಿ ಆರೋಪಿ ಮನೋಜ್ ಸಹ ಸಂಚರಿಸುತ್ತಿದ್ದ ಕೈ,ಮೈ ಮುಟ್ಟಿ ಅಸಭ್ಯ ವರ್ತನೆ ಮೆಜೆಸ್ಟಿಕ್ ಜಂಕ್ಷನ್‌ನಲ್ಲಿ ಹಸಿರು ಮಾರ್ಗದಿಂದ ನೇರಳೆ ಮಾರ್ಗಕ್ಕೆ ರೈಲು ಬದಲಿಸಲು ಇಳಿದಾಗ ಈ ಮನೋಜ್ ಆ ಶಿಕ್ಷಕಿಯ ಮೈ, ಕೈ ಮುಟ್ಟಿ ಅಸಭ್ಯವಾಗಿ…

Read More

ಹೈದರಾಬಾದ್: ತೆಲಂಗಾಣ (Telangana) ರಾಜ್ಯದಲ್ಲಿ ಅಧಿಕಾರಕ್ಕೆ ಬಂದಂತೆ ಕಾಂಗ್ರೆಸ್‌ ಸರ್ಕಾರ ರಾಜ್ಯದ ವಾಹನ ಸವಾರರಿಗೆ ಬಂಪರ್‌ ಆಫರ್‌ ಪ್ರಕಟಿಸಿದೆ. ರಾಜ್ಯ ಸರ್ಕಾರವು ಟ್ರಾಫಿಕ್‌ (Traffic) ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಂಡ ಪಾವತಿಯಲ್ಲಿ 60-90 % ರಷ್ಟು ರಿಯಾಯಿತಿ ಘೋಷಿಸಿದೆ. ಒನ್-ಟೈಮ್ ಪಾವತಿ ಯೋಜನೆಯು ಡಿಸೆಂಬರ್ 26 ರಿಂದ ಜನವರಿ 10 ರವರೆಗೆ ಜಾರಿಯಲ್ಲಿರಲಿದೆ. ಸರ್ಕಾರದ ಆದೇಶದಂತೆ ತಳ್ಳುವ ಗಾಡಿಗಳ ಮಾಲೀಕರಿಗೆ 90% ರಷ್ಟು ರಿಯಾಯಿತಿ ನೀಡಲಾಗುವುದು. ಅವರು ಚಲನ್ ಮೊತ್ತದ ಕೇವಲ 10 % ಮಾತ್ರ ಪಾವತಿಸಬೇಕಾಗುತ್ತದೆ. ಉಳಿದ 90 % ಮನ್ನಾ ಮಾಡಲಾಗುತ್ತದೆ. ಆರ್‌ಟಿಸಿ ಚಾಲಕರಿಗೂ ಅದೇ ರಿಯಾಯಿತಿ ನೀಡಲಾಗುತ್ತದೆ. ಸರ್ಕಾರವು ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ದಂಡದ ಮೊತ್ತದಲ್ಲಿ 80 % ಮನ್ನಾ ಮಾಡಿದೆ. ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳು, ಟ್ರಕ್‌ಗಳು ಮತ್ತು ಇತರ ಭಾರೀ ವಾಹನಗಳಿಗೆ 60 % ರಿಯಾಯಿತಿ ಇದೆ. https://ainlivenews.com/sabarimala-ayyappa-swami-temple-earned-204-crore-rupees-in-39-days/ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲಿ ರಿಯಾಯಿತಿ ನೀಡುವ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಲಾಗಿತ್ತು. ವಾಹನ…

Read More