Author: AIN Author

ಬೆಂಗಳೂರು:- ಇಂದು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸಲಿದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ ಸಾಧ್ಯತೆ ಇದ್ದರೆ, ಉತ್ತರ ಕನ್ನಡದಲ್ಲಿ ಒಣ ಹವೆ ಇರಲಿದೆ. ಉತ್ತರ ಒಳನಾಡಿನ ಹಾವೇರಿಯಲ್ಲಿ ಅಲ್ಲಲ್ಲಿ ಹಗುರ ಮಳೆ ಇರಲಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಶಿವನೊಗ್ಗ, ಹಾಸನ, ಚಿಕ್ಕಮಗಳೂರಲ್ಲೂ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Read More

ಭಾರತ ತಂಡದ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ತಾವು ಉದ್ದನೆಯ ಕೂದಲು (ಹೇರ್​ ಸ್ಟೈಲ್) ಕಾಪಾಡಿಕೊಳ್ಳುವ ಬಗ್ಗೆ ಇಂಟ್ರೆಸ್ಟಿಂಗ್ ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎಂ.ಎಸ್ ಧೋನಿ, ತಮ್ಮ ಇತ್ತೀಚಿನ ಹೇರ್​ ಸ್ಟೈಲ್ ​(ಕೇಶ ವಿನ್ಯಾಸ) ಅನ್ನು ಕಾಪಾಡಿಕೊಳ್ಳಲು ಕಷ್ಟವಾಗಿದ್ದರೂ, ಈ ನೋಟವನ್ನು ಅಭಿಮಾನಿಗಳಿಂದ ಪಡೆದ ಪ್ರೀತಿಯಿಂದಾಗಿ ಅದನ್ನು ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ನನ್ನ ಹೇರ್​ ಸ್ಟೈಲ್​ ಅನ್ನು ನಿರ್ವಹಿಸುವುದು ತುಂಬಾ ಕಷ್ಟ. ನಾನು ಈ ಮೊದಲು 20 ನಿಮಿಷಗಳಲ್ಲಿ ರೆಡಿ ಆಗುತ್ತಿದ್ದೆನು. ಆದರೆ, ಈಗ ರೆಡಿಯಾಗಲು 1 ಗಂಟೆ 10 ನಿಮಿಷಗಳು ತೆಗೆದುಕೊಳ್ಳುತ್ತೇನೆ. ಫ್ಯಾನ್ಸ್ ಉದ್ದನೆಯ ಕೂದಲನ್ನು ಇಷ್ಟಪಡುತ್ತಿರುವುದರಿಂದ ನಾನು ಅದನ್ನು ಮಾಡುತ್ತಿದ್ದೇನೆ. ಆದರೆ, ಒಂದು ದಿನ ನಾನು ಎಚ್ಚರಗೊಂಡು ಸಾಕು ಎಂದು ನಿರ್ಧರಿಸುತ್ತೇನೆ. ನಾನು ಅದನ್ನು ಟ್ರಿಮ್ ಮಾಡುತ್ತೇನೆ ಎಂದು ಉದ್ದನೆಯ ಕೂದಲಿಗೆ ಕತ್ತರಿ ಹಾಕುವ ಬಗ್ಗೆಯೂ ಸೂಚನೆ ನೀಡಿದ್ದಾರೆ.

Read More

ಅರ್ಜೆಂಟೀನಾ: ವೃತ್ತಿಯಲ್ಲಿ ವಕೀಲನಾಗಿರುವ  ಅರ್ಜೆಂಟೀನಾದ ಸಾಲ್ಟಾ ನಗರದ 23 ವರ್ಷದ ಯುವಕ ಮೌರಿಸಿಯೊ ಈಗಾಗಲೇ ಮೃತರಾಗಿರುವ ತಮ್ಮ 91 ವರ್ಷದ ದೊಡ್ಡಮ್ಮ ಯೋಲಾಂಡಾ ಟೋರಿಸ್‌  ಅವರ ಪಿಂಚಣಿ ಹಣಕ್ಕಾಗಿ ಕಾನೂನು ಹೋರಾಟ ಆರಂಭಿಸಿದ್ದಾರೆ. ಮೌರಿಸಿಯೊ ಹೇಳುವ ಪ್ರಕಾರ, ತಾನು ತನ್ನ 91 ವರ್ಷದ ದೊಡ್ಡಮ್ಮ ಯೋಲಾಂಡಾ ಟೋರಿಸ್‌ ಅವರ ಪತಿ ಅದಕ್ಕಾಗಿ ಪಿಂಚಣಿಗೆ ಅರ್ಹನಾಗಿದ್ದೇನೆ ಎಂದು ವಾದ ಮಂಡಿಸಿದ್ದಾರೆ. 2015ರಲ್ಲಿ ಸಂಬಂಧದಲ್ಲಿ ತಮ್ಮ ಹಿರಿಯ ದೊಡ್ಡಮ್ಮನಾಗಿರುವ ಯೋಲಾಂಡಾ ಅವರನ್ನು ವಿವಾಹವಾಗಿದ್ದೇನೆ. 2016ರ ಏಪ್ರಿಲ್‌ನಲ್ಲಿ ನನ್ನ ಪತ್ನಿಯೂ ಆಗಿದ್ದ ಇವರು ನಿಧನರಾದರು. ಇಂಥ ಸ್ಥಿತಿಯಲ್ಲಿ ಇವರ ಪಿಂಚಣಿ ಹಣಕ್ಕೆ ನಾನು ಅರ್ಹನಾಗಿದ್ದೇನೆ ಎಂದು ಮೌರಿಸಿಯೊ ಹೇಳಿದ್ದಾರೆ. ಆದರೆ, ಸಾಕಷ್ಟು ತನಿಖೆಯ ಬಳಿಕ ಈತನ ಮನೆಯ ನೆರೆಹೊರೆಯವರು ಈ ಮದುವೆಯನ್ನು ನಕಲಿ ಎಂದು ಘೋಷಣೆ ಮಾಡಿದಾಗ ಮೌರಿಸಿಯೊ ಅವರ ಅರ್ಜಿ ತಿರಸ್ಕೃತವಾಗಿದೆ. ವಾಯುವ್ಯ ಅರ್ಜೆಂಟೀನಾದ ಸಾಲ್ಟಾ ನಗರದ ಮೌರಿಸಿಯೊ, 2009 ರಲ್ಲಿ ಅವರ ಪೋಷಕರು ಬೇರ್ಪಟ್ಟ ನಂತರ ಅವರ ತಾಯಿ, ಸಹೋದರಿ, ಅಜ್ಜಿ ಮತ್ತು…

Read More

ಚಳಿ ಹೆಚ್ಚುತ್ತಿದ್ದಂತೆ ಸೋಂಕುಗಳ ಲಕ್ಷಣಗಳು ಎಲ್ಲೆಡೆ ತೀವ್ರವಾಗುತ್ತಿವೆ. ಸುಸ್ತು, ಕೆಮ್ಮು, ನೆಗಡಿ, ಜ್ವರ, ಗಂಟಲುನೋವು ಮುಂತಾದವುಗಳದ್ದೇ ಕಾರುಭಾರು ಎಲ್ಲೆಡೆ. ಪ್ರೌಢರಲ್ಲೂ ಈ ಲಕ್ಷಣಗಳು ತೊಂದರೆ ಕೊಡುತ್ತವಾದರೂ ಮಕ್ಕಳಷ್ಟಲ್ಲ. ರೋಗ ನಿರೋಧಕ ಶಕ್ತಿ ಇನ್ನೂ ಬಲವಾಗದ ಎಳೆಯರಿಗೆ ಚಳಿಗಾಲದ ವೈರಸ್‌ಗಳು ನೀಡುವ ಕಾಟ ಒಂದೆರಡು ದಿನಗಳಿಗೆ ಮುಗಿಯುವುದೇ ಇಲ್ಲ. ಮೊದಲು ನೆಗಡಿಯೊ ಕೆಮ್ಮೊ ಶುರುವಾಗಿ ಮಾರನೇ ದಿನಕ್ಕೆ ಜೋರು ಜ್ವರ, ನಡುಕ, ಬೆನ್ನಿಗೇ ಗಂಟಲು ನೋವು ಅಥವಾ ತಲೆನೋವು ಇಲ್ಲವೇ ಕಿವಿ ನೋವು, ಏಳಲಾರದ ಸುಸ್ತು ಇತ್ಯಾದಿ ಇತ್ಯಾದಿ. ನಾಲ್ಕು ದಿನ ಕಾಡಿಸಿದ ಜ್ವರ ಹೇಗೊ ಬಿಟ್ಟರೂ, ಕಫ-ಕೆಮ್ಮು ತಾರಕಕ್ಕೇರಿ ಇನ್ನೂ ನಾಲ್ಕು ದಿನ ಚೇತರಿಸಿಕೊಳ್ಳುವುದಕ್ಕೆ ಬೇಕು ಎಂಬಂಥ ಸ್ಥಿತಿಗೆ ಪುಟಾಣಿಗಳನ್ನು ತರುತ್ತದೆ. ಚಳಿಗಾಲದ ಸೋಂಕುಗಳು ಮಕ್ಕಳನ್ನು ಕಾಡದಂತೆ ತಡೆಯುವುದು ಹೇಗೆ? ಒಬ್ಬರಿಂದೊಬ್ಬರಿಗೆ ವೇಗವಾಗಿ ಹರಡುವ ಈ ವೈರಸ್‌ಗಳು ಮಕ್ಕಳಲ್ಲಿ ಪ್ರಸರಣವಾಗುವುದು ಇನ್ನೂ ತ್ವರಿತವಾಗಿ. ಶಾಲೆಯಲ್ಲಿ ಅಥವಾ ಡೇ ಕೇರ್‌ನಲ್ಲಿ ಒಟ್ಟಿಗೆ ಆಡುವ, ಅಕ್ಕಪಕ್ಕ ಕುಳಿತುಕೊಳ್ಳುವ, ಒಬ್ಬರ ವಸ್ತುಗಳನ್ನು ಇನ್ನೊಬ್ಬರು ಮುಟ್ಟುವ ಸಂದರ್ಭಗಳು…

Read More

ಕಳೆದ ವಾರ ಶಾಂತದಿಂದ ಇದ್ದ ಬಿಗ್ ಬಾಸ್ ಮನೆ ಇದೀಗ ಮತ್ತೆ ಅಶಾಂತಿ ಮೂಡಿದೆ. ವಿನಯ್ ಗೌಡ, ತನಿಷಾ ನಡುವೆ ಗಲಾಟೆ ಶುರುವಾಗಿದ್ದು, ತಾರಕಕ್ಕೇರಿದೆ. ಈ ಎಲ್ಲದಕ್ಕೂ ಮುನ್ನ ವರ್ತೂರ್ ಸಂತೋಷ್ ಮನೆಯ ಸ್ಪರ್ಧಿಯೊಬ್ಬರ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕಿಚನ್’ನಲ್ಲಿ ಕಾರ್ತಿಕ್ ಜೊತೆ ಮಾತನಾಡುತ್ತಿದ್ದ ವೇಳೆ, ವರ್ತೂರ್ ಸಂತೋಷ್ ಈ ಮಾತನ್ನು ಹೇಳಿದ್ದಾರೆ. ಅಂದಹಾಗೆ ಕಾರ್ತಿಕ್, ಸಂತೋಷ್ ಬಳಿ “ಈ ಮನೆಯಲ್ಲಿ ನವಗ್ರಹಗಳಿದ್ದೇವೆ. ಶನಿ ಯಾರು?” ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸಂತೋಷ್, “ವಿನಯ್ ಗೌಡ ಮೊದಲನೇ ಶನಿ” ಎಂದಿದ್ದಾರೆ. ಅದಕ್ಕೆ ಮತ್ತೆ ಪ್ರಶ್ನೆ ಮಾಡಿದ ಕಾರ್ತಿಕ್, “ಎರಡನೇ ಶನಿ ಯಾರು?” ಎಂದಿದ್ದಾರೆ. ಅದಕ್ಕೆ ಸಂತೋಷ್ “ನಮ್ರತಾ ಎರಡನೇ ಶನಿ, ಮೂರನೇ ಶನಿ ಸಂಗೀತಾ” ಎಂದು ಹೇಳಿದ್ದಾರೆ.

Read More

ನಾವು ಈ ಒತ್ತಡ ಜೀವನಶೈಲಿಯ ಬದುಕಿಗೆ ಸಿಲುಕಿ ನಮ್ಮ ಆರೋಗ್ಯದ ಕಡೆಗೆ ಹೆಚ್ಚು ನಾವು ಗಮನಹರಿಸುವುದಿಲ್ಲ ಇದರಿಂದ ನಮ್ಮ ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರಬಹುದು. ನಮಗೆ ಒಣ ದ್ರಾಕ್ಷಿ, ಬಾದಾಮಿ, ಗೋಡಂಬಿ ಇವುಗಳ ಉಪಯೋಗದ ಬಗ್ಗೆ ಗೊತ್ತಿದೆ ಆದರೆ, ಕಪ್ಪು ಒಣದ್ರಾಕ್ಷಿಯ ಬಗೆಗಿನ ಮಾಹಿತಿ ಹೆಚ್ಚು ಜನರಿಗೆ ತಿಳಿದಿಲ್ಲ. ಅಂತಹ ಮಹತ್ವಪೂರ್ಣ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡ್ತೀವಿ. ಕಪ್ಪು ಒಣ ದ್ರಾಕ್ಷಿಯನ್ನ ದ್ರಾಕ್ಷಿ ಹಣ್ಣುಗಳನ್ನ ಹಸಿಯಾಗಿ ತಿಂದರೂ ಚೆನ್ನ, ಅವುಗಳನ್ನ ಒಣಗಿಸಿ ತಿಂದರೂ ಬಾಯಿಗೆ ರುಚಿ. ಹಸಿ ದ್ರಾಕ್ಷಿ ಹಣ್ಣನ್ನ ನಾವು ತಯಾರು ಮಾಡುವ ವಿವಿಧ ಬಗೆಯ ಸಲಾಡ್​​ಗಳಲ್ಲಿ ಬಳಸಿಯೇ ಬಳಸುತ್ತೇವೆ. ಹಾಗೆಯೇ ಒಣದ್ರಾಕ್ಷಿಯನ್ನ ಪಾಯಸ,ಲಾಡು ಹೀಗೆ ವಿವಿಧ ಸಿಹಿ ತಿಂಡಿಗಳಲ್ಲಿ ಬಳಸುತ್ತೇವೆ. ಕಪ್ಪು ಒಣ ದ್ರಾಕ್ಷಿಯನ್ನ ತಿನ್ನೋದ್ರಿಂದ ಸಿಗುವ ಲಾಭಗಳು: 1. ರಕ್ತದ ಶುದ್ಧೀಕರಣ 2. ಕೂದಲಿನ ಆರೋಗ್ಯ 3. ಮೂಳೆಗಳ ಆರೋಗ್ಯ 4. ಅಧಿಕ ರಕ್ತದ ಒತ್ತಡದ ನಿಯಂತ್ರಣ 5. ಕೊಲೆಸ್ಟ್ರಾಲ್ ನಿಯಂತ್ರಣ 6. ಹಲ್ಲುಗಳ ಆರೋಗ್ಯ…

Read More

ಖ್ಯಾತ ನಟ ಪ್ರಭಾಸ್ (Prabhas) ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಸಂಕ್ರಾಂತಿ ಹಬ್ಬಕ್ಕೆ ಅವರು ಹೊಸ ಸಿನಿಮಾ (New Movie) ಬಗ್ಗೆ ಅಪ್ ಡೇಟ್ ಸಿಗಲಿದೆ. ಪ್ರಭಾಸ್ ಅವರ 24ನೇ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಅನ್ನು ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ಹಾಗಾಗಿ ಸಂಕ್ರಾಂತಿ ಹಬ್ಬ ಪ್ರಭಾಸ್ ಅಭಿಮಾನಿಗಳಿಗೆ ಎಳ್ಳು ಬೆಲ್ಲ ತರಲಿದೆ. ಪ್ರಭಾಸ್ ಅವರ ಮುಂದಿನ ಸಿನಿಮಾವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣ ಮಾಡುತ್ತಿದ್ದು, ಖ್ಯಾತ ನಿರ್ದೇಶಕ ಮಾರುತಿ (Maruti) ಈ ಚಿತ್ರದ ನಿರ್ದೇಶಕರು. ಬಸ್ ಸ್ಟಾಪ್, ಎ ರೋಜುಲೋ ಸೇರಿದಂತೆ ಹಲವು ಚಿತ್ರಗಳನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಅವರ 24ನೇ ಚಿತ್ರಕ್ಕಾಗಿ ಇವರು ಹೊಸ ಬಗೆಯ ಕಥೆಯನ್ನು ಹುಡುಕಿ ತಂದಿದ್ದಾರೆ. ಪ್ರಭಾಸ್ ಈಗಾಗಲೇ ‘ಕಲ್ಕಿ 2898 ಎಡಿ’ ಸಿನಿಮಾ ಮುಗಿಸಿದ್ದಾರೆ. ಸಲಾರ್ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಜೊತೆಗೆ ಮತ್ತೆರಡು ಚಿತ್ರಗಳಿಗೂ ಅವರು ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಪ್ರಭಾಸ್ ಸತತ ಐದು ವರ್ಷಗಳ ಕಾಲ…

Read More

ಪಪ್ಪಾಯಿ ಹಣ್ಣು ಕೇವಲ ರುಚಿಗೆ ಮಾತ್ರವಲ್ಲ ಅದರ ಔಷಧೀಯ ಗುಣಗಳಿಂದಲೂ ಎಲ್ಲರ ಮೊದಲ ಆಯ್ಕೆಯಾಗಿದೆ. ಪಪ್ಪಾಯಿ ಹಣ್ಣು ಮಾತ್ರವಲ್ಲ ಅದರ ಎಲೆಗಳು ಕೂಡ ವಿಶೇಷವಾದ ಗುಣಗಳನ್ನು ಹೊಂದಿದೆ. ಇದು ಟೆಸ್ಟ್​ ಟ್ಯೂಬ್ ಮತ್ತು ಪ್ರಾಣಿಗಳ ಅಧ್ಯಯನಗಳಲ್ಲಿ ವ್ಯಾಪಕವಾದ ಔಷಧೀಯ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಪಪ್ಪಾಯಿ ಮರದ ಎಲೆಗಳು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಲೆಯ ರಸವನ್ನು ಸೇವಿಸುವುದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ನಮಗೆ ಬಾಧಿಸುವುದಿಲ್ಲ ಎನ್ನುತ್ತಾರೆ ತಜ್ಞರು. ಹೀಗಾಗಿ ಪಪ್ಪಾಯಿ ಎಲೆಗಳಿಂದಾಗುವ ಆರೋಗ್ಯಕರ ಲಾಭಗಳೇನು ಎಂಬುದನ್ನು ನಾವೀಗ ತಿಳಿಯೋಣ. * ಪಪ್ಪಾಯಿ ಎಲೆಗಳ ರಸವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. * ಜ್ವರದಿಂದ ನಮ್ಮ ಕಾಪಾಡುತ್ತದೆ ಮತ್ತು ಜ್ವರ ಬರದಂತೆ ನೋಡಿಕೊಳ್ಳುತ್ತದೆ. * ಡೆಂಘೆ ಜ್ವರದಿಂದ ಬಳಲುತ್ತಿರುವವರ ಪಪ್ಪಾಯಿ ಎಲೆಗಳ ರಸವನ್ನು ತಪ್ಪದೇ ಸೇವಿಸಬೇಕು ಎನ್ನುತ್ತಾರೆ ತಜ್ಞರು. * ಗ್ಯಾಸ್, ಉಬ್ಬುವಿಕೆ ಮತ್ತು ಇತರೆ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವವರು ಪಪ್ಪಾಯಿ ಎಲೆ ಜ್ಯೂಸ್ ಕುಡಿಯುವುದರಿಂದ ಪ್ರಯೋಜನ ಪಡೆಯಬಹುದು. * ಪಪ್ಪಾಯಿ ಎಲೆಗಳ…

Read More

ಎಕ್ಕದ ಗಿಡ ಎಲ್ಲರಿಗೂ ಪರಿಚಯವಿರುತ್ತೆ. ಇದರಲ್ಲಿ ಎರಡು ರೀತಿಯ ಹೂವುಗಳಿದ್ದು, ಬಿಳಿ ಎಕ್ಕದ ಗಿಡ ಹಾಗೂ ನೀಲಿ ಎಕ್ಕದ ಗಿಡವೆಂದು ಕರೆಯುತ್ತಾರೆ. ಇದನ್ನು ದೇವರ ಪೂಜೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಕೇವಲ ಧಾರ್ಮಿಕವಾಗಿಯೊಂದೇ ಅಲ್ಲದೇ, ಮನೆಮದ್ದಾಗಿಯೂ ಬಳಸುತ್ತಾರೆ. ಅದರಲ್ಲೂ ಬಿಳಿ ಎಕ್ಕದ ಗಿಡದಲ್ಲಿರುವ ಎಲೆಗಳು, ಹಣ್ಣುಗಳು, ಹಾಲು, ಹೂವುಗಳನ್ನು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಬಹುದು. ಜೀರ್ಣಕ್ರಿಯೆಗೆ ಸಹಾಯಕ: ಎಕ್ಕದ ಗಿಡದ ಎಲೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಜೀರ್ಣ ಅಥವಾ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಎಕ್ಕದ ಗಿಡದ ಎಲೆಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. ಯಾವುದೇ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಮೂಲವ್ಯಾದಿ ಕಡಿಮೆ: ಯಾರಾದರೂ ಮೂಲವ್ಯಾದಿ(ಪೈಲ್ಸ್)ಯಿಂದ ಬಳಲುತ್ತಿದ್ದರೆ, ಎಕ್ಕದ ಗಿಡವು ಮೂಲಿಕೆಯಾಗಿದೆ. ಎಕ್ಕದ ಎಲೆಗಳನ್ನು ಬಳಸುವುದು ಪೈಲ್ಸ್ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದಕ್ಕಾಗಿ ಅವರು ಎಕ್ಕದ ಎಲೆಗಳನ್ನು ಸುಟ್ಟು ಅದರ ಹೊಗೆಯನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಮೂಲವ್ಯಾದಿಯ ತುರಿಕೆ ಮತ್ತು ನೋವು ಬೇಗನೆ ಶಮನವಾಗುತ್ತದೆ. ಉರಿಯೂತವನ್ನು ಕಡಿಮೆ…

Read More

ಹೈದರಾಬಾದ್‌: ಹಾಸ್ಟೆಲ್‌ಗೆ (Hostel) ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ 12 ವರ್ಷದ ಬಾಲಕಿಯೊಬ್ಬಳು ಉಚಿತ ಬಸ್ ಸೇವೆ ಬಳಸಿಕೊಂಡು 33 ಗಂಟೆಗಳ ಕಾಲ ಪ್ರಯಾಣ ಮಾಡಿದ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ. https://ainlivenews.com/the-center-has-declared-a-canadian-born-criminal-as-a-terrorist/ ಬಾಲಕಿ ತಪ್ಪಿಸಿಕೊಂಡಿರುವುದಾಗಿ ನೀಡಲಾದ ದೂರನ್ನು ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು (Police) ಬಾಲಕಿಯನ್ನು ಹೈದರಾಬಾದ್‌ನ (Hyderabad) ಜ್ಯೂಬಿಲಿ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.  ಅಷ್ಟಕ್ಕೂ ನಡೆದಿದ್ದೇನು? ವಿದ್ಯಾರಣ್ಯಪುರಿಯ ನಿವಾಸಿಯಾದ ಬಾಲಕಿ ಖಾಸಗಿ ಶಾಲೆಯೊಂದರ ಹಾಸ್ಟೆಲ್ ನಲ್ಲಿದ್ದುಕೊಂಡು 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕ್ರಿಸ್ಮಸ್ ರಜೆಗಾಗಿ ಪೆದ್ದಪಳ್ಳಿಯಲ್ಲಿರುವ ತಾತನ ಮನೆಗೆ ತೆರಳಿದ್ದಳು. ರಜೆ ಮುಗಿದ ಬಳಿಕ ತಾತನ ಮನೆಯಿಂದ ಹೊರಟ ಬಾಲಕಿ ಹಾಸ್ಟೆಲ್‌ಗೆ ಹೋಗಲು ಇಷ್ಟವಿಲ್ಲದೇ ಒಂದಾದ ಮೇಲೋಂದು ಬಸ್ ಬದಲಾಯಿಸುತ್ತಾ ಸುಮಾರು 33 ಗಂಟೆ ಪ್ರಯಾಣ ಮಾಡಿದ್ದಾಳೆ. ಬಸ್ ಹತ್ತಿಸಿದ ಬಳಿಕ ಬಾಲಕಿ ಊರು ತಲುಪಿಲ್ಲ, ಹಾಸ್ಟೆಲ್‌ಗೂ ಸೇರಿಲ್ಲ ಎಂಬುದನ್ನ ತಿಳದು ಆತಂಕಗೊಂಡ ಆಕೆಯ ತಾತ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕಿಯನ್ನು ಪತ್ತೆ…

Read More