Author: AIN Author

ದೇವನಹಳ್ಳಿ:- ಬಸ್ ನಲ್ಲೇ ಬಿಟ್ಟು ತೆರಳಿದ್ದ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ತನ್ನ ಪ್ರಯಾಣಿಕರ ಬ್ಯಾಗ್ ಅನ್ನು ವಾಯುವಜ್ರ ಬಸ್ ಚಾಲಕ ಹಿಂತಿರುಗಿಸಿದ್ದಾರೆ. ಬಸ್ ಶಿವಕುಮಾರ್ ರವರಿಂದ ಸಾರ್ಥಕ‌ ಕೆಲಸ ಮರೆಯಲಾಗಿದೆ. ಉತ್ತರ ಭಾರತದ ಯುವತಿ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ನ‌ ಬಸ್ನಲ್ಲೆ ಬಿಟ್ಟು ತೆರಳಿದ್ದರು. ಶ್ರೇಯಾ ಬೆಲೆಬಾಳುವ ವಸ್ತು‌ಬಿಟ್ಟು ವಿದ್ಯಾರ್ಥಿನಿ ತೆರಳಿದ್ದರು. ಉತ್ತರ ಭಾರತದಿಂದ ದೇವನಹಳ್ಳಿ ಏರ್ಪೋರ್ಟ್ ‌ಮೂಲಕ ಯುವತಿ ಬೆಂಗಳೂರಿಗೆ ಬಂದಿದ್ದರು. ಬೇಗನೆ ತೆರಳುವ ದಾವಂತದಲ್ಲಿ ಬಿಎಂಟಿಸಿ ವಾಯುವಜ್ರ ಬಸ್ನಲ್ಲೆ ಬ್ಯಾಗ್ ಬಿಟ್ಟು ತೆರಳಿದ್ದರು. ನಂತರ ಹುಡುಕಾಡಿದಾಗ ಬ್ಯಾಗ್ ನಾಪತ್ತೆ ಆಗಿದೆ. ಪರಿಶೀಲನೆ ನಡೆಸಿದಾಗ ವಾಯುವಜ್ರ ಬಸ್ನಲ್ಲಿ ಬ್ಯಾಗ್ ಬಿಟ್ಟು ಹೋಗಿರುವುದು ಧೃಡವಾಗಿದೆ. ಎರಡು ಗಂಟೆ ಕಾದು ಬ್ಯಾಗ್ ನ ವಾರಸುದಾರರಿಗೆ ವಾಯುವಜ್ರ ಬಸ್ ಚಾಲಕ ಹಿಂತಿರುಗಿಸಿದೆ. ವಾಯುವಜ್ರ ಬಸ್ ಚಾಲಕ ಶಿವಕುಮಾರ್ ಗೆ ಶ್ರೀಯಾ ಯುವತಿ ಧನ್ಯವಾದ ಅರ್ಪಿಸಿದ್ದಾರೆ.

Read More

ಬೆಂಗಳೂರು: ಅಯೋಧ್ಯೆ ರಾಮಮಂದಿರ ವಿಚಾರ ಬಿಜೆಪಿ – ಕಾಂಗ್ರೆಸ್ ಗೆ ರಾಜಕೀಯದ ಸರಕಾಗಿಬಿಟ್ಟಿದೆ.. ಹಾದಿ ಬೀದಿಲಿ ರಾಮನ ಹೆಸರನ್ನ ಎಳೆದು ತಂದು ಜಟಾಪಟಿಗೆ ಇಳಿದಿದ್ದಾರೆ.. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯನವ್ರಿಗೆ ಆಹ್ವಾನ ಬಂದಿಲ್ಲ‌.. ಇದು ರಾಜ್ಯ ಕಾಂಗ್ರೆಸ್ ನಾಯಕರನ್ನ ಕೆರಳಿಸಿದ್ದು, ವಾಗ್ಯುದ್ಧಕ್ಕಿಳಿದಿದ್ದಾರೆ.. ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಭರ್ಜರಿ ಸಿದ್ದತೆ ನಡೀತಾ ಇದೆ.. ರಾಜ್ಯ ಬಿಜೆಪಿ ನಾಯಕರಂತೂ ರಾಮ ನಾಮ ಜಪ ಜೋರಾಗಿ ಮಾಡ್ತಿದ್ದಾರೆ.. ದೇಶದ ಪ್ರಮುಖ ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ರಾಜ್ಯದ ಸಿಎಂಗೆ ಆಹ್ವಾನ ಬಂದಿಲ್ಲ.. ಇದು ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.. ರಾಜ್ಯದ ಸಿಎಂಗೆ ಆಹ್ವಾನ ನೀಡಿಲ್ಲ ಅಂದ್ರೆ ಅದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಸಚಿವರು ಹಿಗ್ಗಾಮುಗ್ಗ ವಾಗ್ದಾಳಿ ನಡೆಸ್ತಿದ್ದಾರೆ.. ರಾಮ ಯಾರೊಬ್ಬರ ಜಹಗೀರ್ ಅಲ್ಲ.. ಖಾಸಗಿ ಆಸ್ತಿನೂ ಅಲ್ಲ ಅಂತಾ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.. ಭಾರತ್ ಮಾತಾಕಿ ಜೈ ಎಂದು ಅತ್ಯಾಚಾರ ಕೊಲೆ‌ ಮಾಡಿದ್ರೆ, ಅದನ್ನ…

Read More

ಮಡಿಕೇರಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿಯೇ ಬಂದು ನಿಂತರೂ ಜನ ಸೋಲಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಖಚಿತವೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಭವಿಷ್ಯ ನುಡಿದಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರಿಗೆ ಈ ಈ ಬಾರಿ ಟಿಕೆಟ್ ಇಲ್ಲ ಎನ್ನುವ ಮಾಹಿತಿ ಇದೆ. ಹೀಗಾಗಿ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯ ಬಗ್ಗೆ ಬಾಯಿಗೆ ಬಂದಂತೆ ಏನೇನೋ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಸೋಮಾರಿ ಸಿದ್ದ ಎಂದು ಕರೆಯುವ ಮೂಲಕ ಅಗೌರವ ತೋರಿದ್ದಾರೆ.  ಸಿದ್ದರಾಮಯ್ಯ ಎಲ್ಲಿ, ಪ್ರತಾಪ್ ಸಿಂಹ ಎಲ್ಲಿ. ಮಾತನಾಡುವಾಗ ಯೋಚನೆ ಮಾಡಿ ಮಾತನಾಡಬೇಕು ಎಂದರು. https://ainlivenews.com/the-water-of-16-holy-rivers-will-come-from-nepal-for-the-abhisheka-of-sri-rama-in-ayodhya/ ಪ್ರತಾಪ್ ಸಿಂಹ ಅವರು ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಮೈಸೂರು- ಬೆಂಗಳೂರು ಹೈವೆ ನಾವೇ ಮಾಡಿದ್ದು ಅಂತಾರೆ. ಹೆದ್ದಾರಿ ಅನುಮೋದನೆ ಸಂದರ್ಭ ಅವರು ಎಂಪಿ ಆಗಿರಲಿಲ್ಲ. ಹೈವೇ ವಿಚಾರದಲ್ಲಿ ನಾವೆ ಮಾಡಿದ್ದು ಅಂತ್ತೀರಲ್ಲ ನಿಮ್ಮನೆಯಿಂದ ತಂದು ಮಾಡಿದ್ದ, ಇದೆಲ್ಲದರ ಹಿಂದೆ ಕಾಂಗ್ರೆಸ್ ಸರ್ಕಾರ ಕೊಡುಗೆ…

Read More

ಟಾಲಿವುಡ್ ಸೂಪರ್ ಸ್ಟಾರ್ ಜ್ಯೂ.ಎನ್‌ಟಿಆರ್ (Jr.ntr) ಅವರು ಫ್ಯಾನ್ಸ್‌ಗೆ ಶುಭ ಸುದ್ದಿ ಸಿಕ್ಕಿದೆ. ಕ್ರಿಸ್‌ಮಸ್ ಸಂದರ್ಭದಲ್ಲಿ ಜಪಾನ್‌ಗೆ ತೆರಳಿದ್ದರು ತಾರಕ್. ಈ ವೇಳೆ, ಜಪಾನ್‌ನಲ್ಲಿ ಭೂಕಂಪವಾಗಿತ್ತು. ಇದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಆದರೆ ಇದೀಗ ಜ್ಯೂ.ಎನ್‌ಟಿಆರ್ ಜಪಾನ್‌ನಿಂದ ಸೇಫ್ ಆಗಿ ಮರಳಿದ್ದಾರೆ. ಮನೆಗೆ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಈ ವಿಚಾರ ತಿಳಿಸಿದ್ದಾರೆ. ನಾವು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ. ಜಪಾನ್‌ನಲ್ಲಿ (Japan) ಭೂಕಂಪ ಆಗಿದ್ದು ಶಾಕಿಂಗ್ ಆಗಿದೆ. ನಾನು ಒಂದು ವಾರ ಅಲ್ಲಿಯೇ ಕಳೆದಿದ್ದೇನೆ. ಭೂಕಂಪದಿಂದ ಹಾನಿಗೆ ಒಳಗಾದವರ ಬಗ್ಗೆ ದುಃಖ ಇದೆ. ಅಲ್ಲಿನ ಜನ ಬೇಗ ಚೇತರಿಸಿಕೊಳ್ಳಲಿ. ದೃಢವಾಗಿರಿ ಜಪಾನ್ ಎಂದು ಜ್ಯೂ.ಎನ್‌ಟಿಆರ್ ಬರೆದುಕೊಂಡಿದ್ದಾರೆ ತಾರಕ್ ಕ್ರಿಸ್‌ಮಸ್ ಸಂದರ್ಭದಲ್ಲಿ ಜಪಾನ್‌ಗೆ ತೆರಳಿದ್ದರು. ಇದೇ ವೇಳೆ, ಜಪಾನ್‌ನಲ್ಲಿ ಭೂಕಂಪ ಕೂಡ ಸಂಭವಿಸಿತ್ತು. ಹಾಗಾಗಿ ಅಲ್ಲಿಯೇ ಲಾಕ್ ಆಗಿದ್ದರು ತಾರಕ್. ಆದರೆ ಈಗ ಸುರಕ್ಷಿತವಾಗಿ ಮರಳುವ ಮೂಲಕ ಆತಂಕಕ್ಕೆ ಒಳಗಾಗಿದ್ದ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ನೀಡಿದ್ದಾರೆ. ದೇವರ’ (Devara) ಸಿನಿಮಾದಲ್ಲಿ ಪ್ರಸ್ತುತ ತಾರಕ್ ಬ್ಯುಸಿಯಾಗಿದ್ದಾರೆ. ಅವರ ಮುಂದೆ…

Read More

ಬೆಂಗಳೂರು:- ಬಿಎಂಟಿಸಿ ನಿಗಮವು ತನ್ನ ಚಾಲಕರಿಗೆ ಗುಡ್ ನ್ಯೂಸ್ ನೀಡಿದ್ದು, ಹೊಸ ವರ್ಷಕ್ಕೆ ಬಿಗ್ ಗಿಫ್ಟ್ ಕಲ್ಪಿಸುವ ಮೂಲಕ ಆದೇಶ ಹೊರಡಿಸಿದೆ. ಸತತ 25 ವರ್ಷಗಳಿಂದ ಸೇವೆ ಸಲ್ಲಿಸಿದ ಚಾಲಕರನ್ನ ಮನಗಂಡ ಬಿಎಂಟಿಸಿ ನಿಗಮ, ಸದಾ ಸೇವೆಯಲ್ಲಿ ತೊಡಗಿದ ನಿರಂತರ ಸೇವಾ ಚಾಲಕರಿಗೆ ಮುಂಬಡ್ತಿ ಭಾಗ್ಯ ಸಿಕ್ಕಿದೆ. 25 ವರ್ಷ ಸೇವೆ ಸಲ್ಲಿಸಿದ ನಗರ ಸಾರಿಗೆ ಚಾಲಕರಿಗೆ ಪ್ರಮೋಷನ್ ಗಿಫ್ಟ್ ನೀಡಲಾಗಿದೆ. ಕೂಡಲೇ ಮುಂಬಡ್ತಿಗೆ ಅರ್ಜಿ ಸಲ್ಲಿಸುವಂತೆ ಬಿಎಂಟಿಸಿ ನಿಗಮ ಕೋರಿದ್ದು, 15/01/2024 ರ ಒಳಗಾಗಿ ಚಾಲಕರ 25 ವರ್ಷದ ಸೇವಾ ಅವಧಿ ಬಗ್ಗೆ ನಿಗಮ ಮಾಹಿತಿ ಕೋರಿದೆ. 25 ವರ್ಷದ ಸೇವೆ ಮುಗಿಸಿರುವ ಚಾಲಕನ ಹಾಜರಾತಿ ಸೇರಿ ಇತರೆ ಮಾಹಿತಿ ನೀಡಬೇಕು. ಕೂಡಲೇ ಈ ಸಂಬಂಧ ಪ್ರತಿಯೊಬ್ಬ ಹಿರಿಯ ಚಾಲಕರು ಮಾಹಿತಿ ನೀಡುವಂತೆ ಸೂಚನಾ ಪತ್ರ ಜಾರಿ ಮಾಡಬೇಕು. ಮುಂಬಡ್ತಿ ಭಾಗ್ಯ ಕೂಡಲೇ ನೀಡುವಂತೆ ಸೂಚನೆ ಇರುವ ಕಾರಣ. ಜನವರಿ 5ರ ಒಳಗೆ ಅರ್ಜಿ ಸಲ್ಲಿಸುವಂತೆ ಬಿಎಂಟಿಸಿ ನಿರ್ದೇಶಕರಿಂದ ಸೂಚನೆ…

Read More

ಬೆಂಗಳೂರು:- ಹೊಸವರ್ಷಕ್ಕೆ ಪೊಲೀಸ್ ಕಮಿಷನರ್ ರಿಂದ ಮತ್ತೊಂದು ಮಾದರಿ ಕಾರ್ಯ ನಡೆದಿದೆ. ಪೊಲೀಸ್ ಕಮಿಷನರ್ ಬಿ ದಯಾನಂದ್ ಅವರು, ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರಕ್ಕೆ ಕಣ್ಣುದಾನ ಮಾಡಿ ಹಲವು ಪೊಲೀಸರಿಗೆ ಮಾದರಿ ಆಗಿದ್ದಾರೆ. ನಾರಾಯಣ ನೇತ್ರಾಲಯ ರಾಜ್ ಕುಮಾರ್ ನೇತ್ರದಾನ ಕೇಂದ್ರದಿಂದ ಕಮಿಷನರ್ ಗೆ ಪ್ರಶಂಸನಾ ಪತ್ರ ಬರೆಯಲಾಗಿದೆ. ಈ ಬಾರಿ ಹೊಸವರ್ಷಕ್ಕೆ ಸಿಹಿ ತಿನಿಸು ಹೂ ಗುಚ್ಚ ಬೇಡ ಎಂದು ಕಮಿಷನರ್ ಹೇಳಿದ್ದರು. ಯಾರು ಹೂ ಗುಚ್ಚ ನೀಡಿ ಶುಭಕೋರಲು ಬರಬೇಡಿ. ಅದರ ಬದಲಿಗೆ ತಮ್ಮ ವ್ಯಾಪ್ತಿಯ ಅನಾಥಾಶ್ರಮಗಳಿಗೆ ಕೈಯ್ಯಲ್ಲಾದ ಸಹಾಯ ಮಾಡಿ ಎಂದು ದಯಾನಂದ್ ಹೇಳಿದ್ದಾರೆ.

Read More

ಶಿವಮೊಗ್ಗ: ಗುಲಾಮಗಿರಿ ಮಸೀದಿ ಒಡೆದು ರಾಮಮಂದಿರ ಕಟ್ಟಿದ್ದೇವೆ. ಮಥುರಾದಲ್ಲೂ ಶ್ರೀಕೃಷ್ಣನ ದೇವಸ್ಥಾನ ಕಟ್ಟೇ ಕಟ್ಟುತ್ತೇವೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ (K.S.Eshwarappa) ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ (Shivamogga) ಮಾತನಾಡಿದ ಅವರು, 496 ವರ್ಷದ ಕೆಳಗೆ ಅಯೋಧ್ಯೆಯಲ್ಲಿ ರಾಮಮಂದಿರ ಧ್ವಂಸ ಮಾಡಿದ್ದರು. ಬಾಬರ್ ಮಸೀದಿ ಕಟ್ಟಿದ್ದರು. ಗುಲಾಮಗಿರಿ ಮಸೀದಿ ಹೊಡೆದು ರಾಮಮಂದಿರ ಕಟ್ಟಿದ್ದೇವೆ. ನಮ್ಮೆಲ್ಲರ ಸೌಭಾಗ್ಯ, ನಾವು ಬದುಕಿರುವ ದಿನದಲ್ಲೇ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಆಗ್ತಿದೆ ಎಂದು ಹೇಳಿದ್ದಾರೆ.  https://ainlivenews.com/the-water-of-16-holy-rivers-will-come-from-nepal-for-the-abhisheka-of-sri-rama-in-ayodhya/ ಗುಲಾಮಗಿರಿ ಸಂಕೇತ ಹೋಗಿ ಸ್ವಾಭಿಮಾನ ಸಂಕೇತ ನಿರ್ಮಾಣ ಆಗಿದೆ. ಮನೆ ಮನೆಗೆ ಮಂತ್ರಾಕ್ಷತೆ ಕೊಡ್ತಿದ್ದೇವೆ. ಜ.22 ರಂದು ದೇವರ ಮನೆಯಲ್ಲಿ ‌ಇಟ್ಟು ಪೂಜೆ ಮಾಡಿ ಸಿಹಿ ತಯಾರಿಸಿ ಊಟ ಮಾಡಿ. ದೀಪಾವಳಿ ಹಬ್ಬದ ರೀತಿ ಆಚರಣೆ ಮಾಡಿ ಎಂದು ತಿಳಿಸಿದ್ದಾರೆ. ಪವಿತ್ರವಾದ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ರಾಜಕಾರಣ ಮಾತನಾಡಲ್ಲ. ಪ್ರಭು ಶ್ರೀರಾಮಚಂದ್ರನ ಭಕ್ತರು ಇದ್ದಾರೋ, ಅವರಿಗೆ ಆಹ್ವಾನ ಕೊಟ್ಟಿದ್ದೇವೆ. ಬಿಜೆಪಿಯ ರಾಮ ಎನ್ನುವವರಿಗೆ ಕೇಂದ್ರದ ನಾಯಕರು ಆಹ್ವಾನ ಕೊಟ್ಟಿಲ್ಲ. ರಾಮನ…

Read More

ಬೆಂಗಳೂರು : ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇದೀಗ ಮತ್ತೊಂದು ಗರಿ ಲಭಿಸಿದ್ದು, ಸಮಯ ಕ್ಷಮತೆಯಲ್ಲಿ ಬೆಂಗಳೂರು ಏರ್ ಪೋರ್ಟ್ ಜಗತ್ತಿನಲ್ಲೇ ನಂ.3 ಸ್ಥಾನ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಕಾರ್ಯಾಚರಣೆಯಲ್ಲಿನ ನಿರ್ವಹಣಾ ಸಾಧನೆ ಮತ್ತು ಸಮಯ ಕ್ಷಮತೆ ವಿಷಯದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಅಮೆರಿಕದ ಮಿನ್ನೆಪೊಲೀಸ್ ನಿಲ್ದಾಣ ಮೊದಲ ಸ್ಥಾನ ಪಡೆದಿದ್ರೆ, 2ನೇ ಸ್ಥಾನದಲ್ಲಿ ಹೈದ್ರಾಬಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ . ಮೂರನೇ ಸ್ಥಾನವನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಪಡೆದುಕೊಂಡಿದೆ.

Read More

ಬೆಂಗಳೂರು:- ಕೈ-ಕಮಲ ನಾಯಕರ ನಡುವೆ ರಾಮಮಂದಿರ ರಾಜಕೀಯ ಮುಂದುವರಿದಿದ್ದು, ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ನೀಡದಿರುವುದು ಕೈ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದ ಸಿಎಂಗೆ ಆಹ್ವಾನ ನೀಡಿಲ್ಲ ಅಂದ್ರೆ ಅದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಸಚಿವರು ಹಿಗ್ಗಾಮುಗ್ಗ ವಾಗ್ದಾಳಿ ನಡೆಸ್ತಿದ್ದಾರೆ.. ರಾಮ ಯಾರೊಬ್ಬರ ಜಹಗೀರ್ ಅಲ್ಲ.. ಖಾಸಗಿ ಆಸ್ತಿನೂ ಅಲ್ಲ ಅಂತಾ ಅರಣ್ಯ ಸಚಿವ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ.. ಭಾರತ್ ಮಾತಾಕಿ ಜೈ ಎಂದು ಅತ್ಯಾಚಾರ ಕೊಲೆ ಮಾಡಿದ್ರೆ, ಅದನ್ನ ಒಪ್ಪಿಕೊಳ್ಳೋದಕ್ಕೆ ಆಗುತ್ತಾ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.. ಇನ್ನು ರಾಮ ಮಂದಿರ ನಿರ್ಮಾಣಕ್ಕೆ ಅಡ್ವಾಣಿ ಕಾರಣ.. ಅವರನ್ನೇ ಬರಬೇಡಿ ಎಂದಿದ್ದಾರೆ.. ಇನ್ನು ಸಿಎಂ ಸಿದ್ದರಾಮಯ್ಯನವ್ರಿಗೆ ಆಹ್ವಾನ ಕೊಡ್ತಾರಾ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಿಡಿ ಕಾರಿದ್ರು.. ರಾಮ ಮಂದಿರ ನಿರ್ಮಾಣಕ್ಕೆ ಹತ್ತು ಲಕ್ಷ ಕೊಟ್ಟಿದ್ದೇನೆ.. ಆಗ ಅವರಿಗೆ ಎಲ್ಲಾರು ನೆನಪು ಆದ್ರು.. ಈಗಿಲ್ಲ ಎಂದ್ರು.. ನಾನೇ ದೇವಸ್ಥಾನ ಕಟ್ಟಿದೆ ಅನ್ನಇರಬಾರೋ ಅಂತಾ ಆರ್…

Read More

ಮಡಿಕೇರಿ: ಸಚಿವ ಮಧು ಬಂಗಾರಪ್ಪ ಅವರ ಚೆಕ್ ಬೌನ್ಸ್ ಪ್ರಕರಣ ಮುಚ್ಚಿ ಹಾಕಲು, ಮಾಧ್ಯಮಗಳ ಗಮನ ಬೇರೆಡೆ ಸೆಳೆದು ವಿಷಯಾಂತರ ಮಾಡಲು ನನ್ನ ತಮ್ಮನನ್ನು ಅರೆಸ್ಟ್ ಮಾಡಿಸಲಾಯಿತು ಎಂದು ಸಂಸದ ಪ್ರತಾಪ್‌ ಸಿಂಹ ಕಿಡಿ ಕಾರಿದ್ದಾರೆ.  ‘ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದೀರ. ಕೋರ್ಟಿನಲ್ಲಿ ಜಡ್ಜ್ ನಿಮಗೆ ಮಂಗಳಾರತಿ ಮಾಡಿದ್ದಾರೆ’ ಎಂದು ಪ್ರತಾಪ್‌, ಗೃಹ ಸಚಿವ ಪರಮೇಶ್ವರ್ ಅವರಿಗೆ ತಿರುಗೇಟು ನೀಡಿದ್ದಾರೆ.  ವಿಕ್ರಂ ಸಿಂಹ ಬಂಧನ ವಿಷಯದಲ್ಲಿ ಪ್ರತಾಪ್ ರಾಜಕಾರಣ ಮಾಡುತ್ತಿದ್ದಾರೆ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ, ‘ನನಗೆ ಪರಮೇಶ್ವರ್ ಸಾಹೇಬರ ಬಗ್ಗೆ ಅಪಾರವಾದ ಗೌರವವಿದೆ. ಆ ಎಫ್ಐಆರ್‌ನಲ್ಲಿ ನನ್ನ ತಮ್ಮನ ಹೆಸರಿಲ್ಲದಿದ್ದರೂ ಸುಖಾಸುಮ್ಮನೆ ಈ ವಿಚಾರದಲ್ಲಿ ರಾಜಕಾರಣ ಮಾಡಿದ್ದು ಕಾಂಗ್ರೆಸ್’ ಎಂದಿದ್ದಾರೆ. https://ainlivenews.com/golden-opportunity-in-the-postal-department-apply-today-salary-20k/ ಇನ್ನು, ಸಿಎಂ ಸಿದ್ದರಾಮಯ್ಯಗೆ ಲೋಕಸಭೆ ಚುನಾವಣೆಯಲ್ಲಿ ಕೊಡಗು-ಮೈಸೂರಲ್ಲಿ ನನ್ನ ವಿರುದ್ಧ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲ್ಲ ಅಂತ ಗೊತ್ತಿದೆ. ಹಾಗಾಗಿ ನನ್ನನ್ನು, ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದೂ ಕಿಡಿ ಕಾರಿದ್ದಾರೆ.

Read More