Author: AIN Author

ಬೆಂಗಳೂರು:- ಕೇಂದ್ರದಲ್ಲಿ ಮತ್ತೆ ಬಿಜೆಪಿ ತರುವುದು ನಮ್ಮ ಗುರಿ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ, ಕೇಂದ್ರದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ. ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟಿಸಬೇಕು. ಪ್ರತಿ ಕಾರ್ಯಕರ್ತನಿಗೂ ಅವರದೇ ಜವಾಬ್ದಾರಿ ಇರಲಿದೆ’ ಎಂದರು ಪಕ್ಷದಲ್ಲಿ ಆಂತರಿಕವಾಗಿ ಹಲವು ಬಣಗಳಲ್ಲಿ ಹಂಚಿಹೋಗಿರುವ ಮುಖಂಡರನ್ನು ಒಗ್ಗೂಡಿಸುವ ಕೆಲಸ ಮಾಡಬೇಕಿದೆ. ಪಕ್ಷ ಬಿಡಲು ಯೋಚಿಸುತ್ತಿರುವ ಮುಖಂಡರನ್ನು ಪಕ್ಷದಲ್ಲೇ ಉಳಿಸುವ ಕೆಲಸ ಮಾಡುತ್ತೇನೆ’ ಎಂದರು.

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಕೇಂದ್ರ ಸಚಿವ ಭಗವಂತ ಖೂಬಾ ಅವರು ಭೇಟಿ ಆಗಿದ್ದಾರೆ. ನೂತನ ರಾಜ್ಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಕ್ಕೆ ಸನ್ಮಾನಿಸಿ, ಸಿಹಿ ತಿನಿಸಿದರು. ನಂತರ ಬರುವ ಲೋಕಸಭೆ ಚುನಾವಣೆ, ಪಕ್ಷ ಸಂಘಟನೆ ಕುರಿತು ಚರ್ಚೆ ನಡೆಸಿದರು. ‘ನಿಮ್ಮ ತಂದೆ ಬಿ.ಎಸ್‌. ಯಡಿಯೂರಪ್ಪ ಅವರಿಂದ ಸಂಘಟನೆ ಕಲೆ ಕರಗತವಾಗಿದೆ. ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಸಾಮರ್ಥ್ಯ ನಿಮ್ಮಲ್ಲಿದೆ. ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡುವಂತಾಗಲಿ’ ಎಂದು ಶುಭ ಹಾರೈಸಿದರು.

Read More

ಕನ್ನಡದ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಅವರು ನಾಯಕಿಯಾಗಿ ನಟಿಸಿರುವ “ಭೈರಾದೇವಿ” ಚಿತ್ರದ ಟೀಸರ್ ಹಾಗೂ “ಅಜಾಗ್ರತ” ಚಿತ್ರದ ಪೋಸ್ಟರ್ ಬಿಡುಗಡೆಯಾಯಿತು. ರಾಧಿಕಾ ಕುಮಾರಸ್ವಾಮಿ ಸೇರಿದಂತೆ ಈ ಎರಡು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇಂದು ನನ್ನ ಹುಟ್ಟುಹಬ್ಬ. ನೀವೆಲ್ಲಾ ಬಂದಿರುವುದು ಖುಷಿಯಾಗಿದೆ. ತಮಗೆ ದೀಪಾವಳಿ ಹಬ್ಬದ ಶುಭಾಶಯ ಎಂದು ಮಾತನಾಡಿದ ರಾಧಿಕಾ ಕುಮಾರಸ್ವಾಮಿ, ಈ ಬಾರಿ ನನ್ನ ಹುಟ್ಟುಹಬ್ಬ ಮತ್ತಷ್ಟು ವಿಶೇಷ. ಏಕೆಂದರೆ ನನ್ನ ಅಭಿನಯದ “ಭೈರಾದೇವಿ” ಚಿತ್ರದ ಟೀಸರ್ ಬಿಡುಗಡೆ ಹಾಗೂ “ಅಜಾಗ್ರತ” ಪೋಸ್ಟರ್ ಬಿಡುಗಡೆ ಇಂದು ಆಗಿದೆ. ಈ ಎರಡು ಚಿತ್ರಗಳು ಶಮಿಕಾ ಎಂಟರ್ ಪ್ರೈಸಸ್ ಮೂಲಕ ನಿರ್ಮಾಣವಾಗುತ್ತಿದೆ. “ಭೈರಾದೇವಿ” ನನ್ನ ಇಪ್ಪತ್ತು ವರ್ಷಗಳ ಸಿನಿಜರ್ನಿಯಲ್ಲೇ ವಿಭಿನ್ನವಾದ ಚಿತ್ರ. ಅಘೋರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ‌. ನನಗೆ ಸ್ಮಶಾನ ಎಂದರೆ ಭಯ. ಈ ಚಿತ್ರದ ಚಿತ್ರೀಕರಣ ಹೆಚ್ಚಿನ ಭಾಗ ಸ್ಮಶಾನದಲ್ಲೇ ನಡೆದಿದೆ. ಈ ಚಿತ್ರಕ್ಕೆ ಪಟ್ಟಿರುವಷ್ಟು ಶ್ರಮ ನಾನು ಯಾವ ಚಿತ್ರಕ್ಕೂ ಪಟ್ಟಿಲ್ಲ.…

Read More

ಬೆಂಗಳೂರು :- ಗೃಹ ಸಚಿವರ ಆಪ್ತನೆಂದು ಪರಿಚಯಿಸಿಕೊಂಡು ವ್ಯಕ್ತಿಯಿಂದ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ ಕಾಲೇಜಿನಿಂದ ನಕಲಿ ಶುಲ್ಕ ರಶೀದಿಯನ್ನು ಸಹ ನೀಡಿ ಆರೋಪಿಗಳು ವಂಚಿಸಿದ್ದಾರೆ. 53 ವರ್ಷದ ವ್ಯಕ್ತಿ ಮತ್ತು ಅವರ ಮಗಳು ಕಾಲೇಜಿಗೆ ತೆರಳಿ ವಿಚಾರಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ. ಆರ್. ಆರ್. ನಗರ ನಿವಾಸಿಯಾದ ದೂರುದಾರರ ಪುತ್ರಿ ಎಂಬಿಬಿಎಸ್ ಮುಗಿಸಿ ಪಿಜಿ ಕೌನ್ಸೆಲಿಂಗ್ ಸಮಯದಲ್ಲಿ ಸೀಟಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಪರಿಚಯಸ್ಥರೊಬ್ಬರ ಮೂಲಕ ಕೊರಟಗೆರೆ ಮೂಲದ ಮೊಹಮ್ಮದ್ ಜುಬೇರ್ ಎಂಬಾತ ಪರಿಚಯವಾಗಿದ್ದ. ಜಯನಗರದ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿ ತುಮಕೂರಿನ ಕಾಲೇಜಿನಲ್ಲಿ ಪಿಜಿ ಸೀಟು ಕೊಡಿಸುವುದಾಗಿ ಭರವಸೆ ನೀಡಿದ್ದ. ಪ್ರತಿಯಾಗಿ 4.5 ಲಕ್ಷ ರೂ. ಹಣ ಪಡೆದಿದ್ದ. ದೂರುದಾರರು ತಮ್ಮ ಬ್ಯಾಂಕ್ ಖಾತೆಯಿಂದ ಆರೋಪಿಯ ಪೇಟಿಎಂ ಖಾತೆಗೆ ಹಣ ವರ್ಗಾಯಿಸಿದ್ದರು. ನಂತರ ಜುಬೇರ್ ಕಾಲೇಜಿನ ಹೆಸರಿನ ಶುಲ್ಕದ ರಸೀದಿ ನೀಡಿದ್ದ. ಆದರೆ ನಂತರದಲ್ಲಿ ಕಾಲೇಜಿನಿಂದ ಯಾವುದೇ ಮಾಹಿತಿ ಅಥವಾ ಸಂದೇಶಗಳು ಬಾರದಿದ್ದಾಗ…

Read More

ಬೆಂಗಳೂರು: ರಾಜ್ಯದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಪಟಾಕಿಯಿಂದ ಉಂಟಾಗುವ ಮಾಲಿನ್ಯದ ಕುರಿತು ಸಿಎಂ ಎಚ್ಚರಿಕೆ ನೀಡಿದ್ದು ಎಲ್ಲರೂ ಪರಿಸರ ಸ್ನೇಹಿಯಾದ ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಿ, ಪಟಾಕಿ ಹಚ್ಚುವಾಗ ಕುಟುಂಬದ ಹಿರಿಯರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಸಂದೇಶ ನೀಡಿರುವ ಸಿಎಂ, ದೀಪಾವಳಿ ತಮ್ಮೆಲ್ಲರ ಬಾಳಿನಲ್ಲಿ ಸುಖ, ಸಮೃದ್ಧಿಯ ಹೊಸ ಬೆಳಕು ಹೊತ್ತು ತರಲಿ. ಎಲ್ಲರೂ ಪರಿಸರ ಸ್ನೇಹಿಯಾದ ಹಸಿರು ಪಟಾಕಿಗಳನ್ನು ಮಾತ್ರವೇ ಬಳಸಿ, ಪಟಾಕಿ ಹಚ್ಚುವಾಗ ಕುಟುಂಬದ ಹಿರಿಯರು ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Read More

ಬೆಂಗಳೂರು:- ಉದ್ಯಮಿಗೆ ವಂಚಿಸಿದ ಪ್ರಕರಣದಲ್ಲಿ ಜೈಲು ಸೇರಿರುವ ಚೈತ್ರಾ ಕುಂದಾಪುರ ಮೇಲೆ ಆಫ್ರಿಕನ್ ಮಹಿಳಾ ಖೈದಿಗಳು ಹಲ್ಲೆ ಮಾಡಿರುವ ಘಟನೆ ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ. ಮಧ್ಯಾಹ್ನ ಈ ಘಟನೆ ನಡೆದಿದ್ದು, ಮಹಿಳಾ‌ ವಿಚಾರಣಾಧೀನ ಕೈದಿಗಳ ಬ್ಯಾರಕ್‌ನಲ್ಲಿ ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಮಹಿಳಾ ಖೈದಿಗಳು ಚೈತ್ರಾ ಕುಂದಾಪುರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಫ್ರಿಕನ್ ಮಹಿಳಾ ಖೈದಿಗಳು ಚೈತ್ರಾ ಮತ್ತು ಮೂವರು ಸ್ಥಳೀಯ ಖೈದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸರಿಗೆ ಚೈತ್ರಾ ಕುಂದಾಪುರ ದೂರು ನೀಡಿದ್ದಾರೆ.

Read More

ಬೆಂಗಳೂರು:- ರಾತ್ರಿ ವೇಳೆ ಮನೆ ಬಾಗಿಲು ಬಡಿದು ನೈಜೀರಿಯಾ ಮಹಿಳೆ ಭೀತಿಗೊಳಿಸುತ್ತಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ಬೆಂಗಳೂರು ಉತ್ತರ ತಾಲೂಕಿನ ಪಿಳ್ಳಳ್ಳಿ ಗ್ರಾಮದಲ್ಲಿ ನೈಜೀರಿಯಾದ ಮಳೆಯೊಬ್ಬಳು ರಾತ್ರಿ ವೇಳೆ ಮನೆಮನೆಗೆ ತೆರಳಿ ಬಾಗಿಲು ಬಡಿದು ಕಾಟ ಕೊಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಮನೆ ಬಾಗಿಲು ಬಡಿದು ಮನೆ ಮಂದಿಯನ್ನು ಭೀತಿಗೊಳಿಸಿ ಬಳಿಕ ಸ್ಥಳದಿಂದ ಪರಾರಿಯಾಗುತ್ತಾಳೆ. ನೈಜೀರಿಯ ಮಹಿಳೆಯ ಈ ಕೃತ್ಯ ಯಶೋಧ ಬಸವರಾಜ್ ದಂಪತಿ ಮನೆಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Read More

ಬೆಂಗಳೂರು:- ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ವಿಫಲವಾಗಿವೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಖಾತರಿ ಯೋಜನೆಗಳ ಹೆಸರಿನಲ್ಲಿ, ಈ ಕರ್ನಾಟಕ ಸರ್ಕಾರ ಸಾಮಾನ್ಯ ನಾಗರಿಕರ ಹೆಸರಿನಲ್ಲಿ ಹಣವನ್ನು ದುರ್ಬಳಕೆ ಮಾಡುತ್ತಿದೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ರೈತರಿಗೆ ನೀಡುತ್ತಿದ್ದ ವಿತ್ತೀಯ ಸವಲತ್ತುಗಳನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು. “ಕರ್ನಾಟಕದಲ್ಲಿ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ₹ 6,000 ಸಿಗುತ್ತಿತ್ತು. ಇದಕ್ಕೆ ಪೂರಕವಾಗಿ ಹಿಂದಿನ ಬಿಜೆಪಿ ಸರ್ಕಾರ ₹ 4000 ನೀಡಿತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕೊಡುತ್ತಿದ್ದ ₹ 4000 ರದ್ದುಗೊಳಿಸಿದರು,” ಎಂದು ಹೇಳಿದರು. ರಾಜ್ಯದಲ್ಲಿ ವಿದ್ಯುತ್ ಅಭಾವದ ಬಗ್ಗೆ ಮಾತನಾಡಿದ ಅವರು, ಲಂಗಾಣದಲ್ಲಿ ರೈತ ಸಮುದಾಯಕ್ಕೆ 24 ಗಂಟೆಗಳ ನಿರಂತರ ವಿದ್ಯುತ್ ನೀಡಲಾಗುತ್ತದೆ, ಇಲ್ಲಿ ಅವರು ಐದು ಗಂಟೆಗಳ ವಿದ್ಯುತ್ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ನಮ್ಮ ರಾಜ್ಯದ ರೈತರಿಗೆ 2 ಗಂಟೆಗಳ ಕಾಲ ಸರಿಯಾದ ವಿದ್ಯುತ್ ನೀಡುತ್ತಿಲ್ಲ” ಎಂದು…

Read More

ವಿಶ್ವಕಪ್ ಪ್ರಶಸ್ತಿ ಗೆಲ್ಲಲು ಭಾರತಕ್ಕೆ ಉತ್ತಮ ಅವಕಾಶ ಒದಗಿ ಬಂದಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಭಾರತ ತಂಡಕ್ಕೆ ಈ ಬಾರಿ ವಿಶ್ವಕಪ್‌ ನಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದಿದ್ದರೆ ಬಹುಶಃ ಇನ್ನು ಮೂರು ವಿಶ್ವ ಕಪ್ ಗಳಲ್ಲಿ ಕಾಯಬೇಕಾಗುತ್ತದೆ ಎಂದು ರವಿಶಾಸ್ತ್ರಿ ಲೆಕ್ಕಾಚಾರ ಮಾಡಿದ್ದಾರೆ. ತಂಡದ ಬಹುಪಾಲು ಆಟಗಾರರು ತಮ್ಮ ಉತ್ತುಂಗದಲ್ಲಿದ್ದಾರೆ. ಭಾರತಕ್ಕೆ ತಮ್ಮ ಐಸಿಸಿ ಪ್ರಶಸ್ತಿ ಬರವನ್ನು ಕೊನೆಗೊಳಿಸಲು ಉತ್ತಮ ಅವಕಾಶ ಈಗ ಒದಗಿ ಬಂದಿದೆ” ಎಂದು ಹೇಳಿದ್ದಾರೆ. ಆಡಮ್ ಗಿಲ್‌ಕ್ರಿಸ್ಟ್ ಮತ್ತು ಮೈಕೆಲ್ ವಾನ್ ಕೂಡ ಪಾಡ್‌ಕ್ಯಾಸ್ಟ್‌ನ ಭಾಗವಾಗಿದ್ದರು. ಭಾರತ ಕ್ರಿಕೆಟ್ ಹುಚ್ಚಿನಲ್ಲಿದ್ದು, 12 ವರ್ಷಗಳ ಹಿಂದೆ ಅವರು ಕೊನೆಯ ಬಾರಿಗೆ ವಿಶ್ವಕಪ್ ಗೆದ್ದಿದ್ದು, ಮತ್ತೊಮ್ಮೆ ಗೆಲ್ಲಲು ಅವಕಾಶವಿದೆ. ಆಡುತ್ತಿರುವ ರೀತಿ ನೋಡಿದರೆ ತಂಡಕ್ಕೆ ಉತ್ತಮ ಅವಕಾಶ ಒದಗಿ ಬಂದಿದೆ”ಎಂದು ಭಾರತದ ಮಾಜಿ ಮುಖ್ಯ ಕೋಚ್ ಹೇಳಿದರು. ಕೆಲ ಆಟಗಾರರಿಗೆ ಇದು ಕೊನೆಯ ವಿಶ್ವಕಪ್ ಆಗಿರಬಹುದು. ಅವರು ಆಡುವ ರೀತಿ, ಪರಿಸ್ಥಿತಿಗಳನ್ನು ಗಮನಿಸಿದರೆ, ಅವರು ಅದನ್ನು ಗೆಲ್ಲಲೆಂದೇ ತಂಡದಲ್ಲಿದ್ದಾರೆ” ಎಂದರು.…

Read More

ಬೆಂಗಳೂರು:- ದೇವನಹಳ್ಳಿವರೆಗೂ ಮೆಟ್ರೋ ವಿಸ್ತರಣೆ ಚರ್ಚೆ ಮಾಡಿದ್ದೇನೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪಟ್ಟಣಕ್ಕೆ ಮೆಟ್ರೋ ರೈಲು ಮತ್ತು ಕಾವೇರಿ ನೀರು ಒದಗಿಸಲು ಪ್ರಯತ್ನ ಮಾಡುತ್ತೇನೆ. ಸರ್ಕಾರದ ಹಂತದಲ್ಲೂ ಚರ್ಚೆ ಮಾಡಿದ್ದೇನೆ’ ಎಂದರು. ದೇವನಹಳ್ಳಿ ಜಿಲ್ಲಾ ಕೇಂದ್ರ ಸಂಬಂಧ ಮುಖ್ಯಮಂತ್ರಿ, ಡಿಸಿಎಂ ಮತ್ತು ಕಂದಾಯ ಸಚಿವರೊಂದಿಗೆ ಮಾತನಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡರು ದೇವನಹಳ್ಳಿ ಬೀರಸಂದ್ರದ ಬಳಿ ಜಿಲ್ಲಾಡಳಿತ ಭವನ ನಿರ್ಮಿಸಿ, ಬೆಂಗಳೂರಿನಲ್ಲಿದ್ದ ಕಚೇರಿಗಳನ್ನು ಸ್ಥಳಾಂತರ ಮಾಡಿಸಿದ್ದಾರೆ. ಅವರ ಜೊತೆಗೆ ಈ ಕುರಿತು ಮಹತ್ವದ ಸಭೆ ನಡೆಸಿ ಮಾರ್ಗದರ್ಶನ ಪಡೆದುಕೊಳ್ಳುತ್ತೇನೆ ಎಂದು ಮಾಹಿತಿ ನೀಡಿದರು. ‘ನಾನು ನ್ಯಾಯವಾದಿಯಾಗಿದ್ದಾಗ ಅಂದಿನ ವಕೀಲರ ಪ್ರಯತ್ನದಿಂದ ರಾಜಕೀಯಕ್ಕೆ ಪಾದರ್ಪಣೆ ಮಾಡಿದೆ’ ಎಂದು ರಾಜಕೀಯ ಪ್ರವೇಶದ ದಿನವನ್ನು ಮೆಲಕು ಹಾಕಿದರು. ನ್ಯಾಯಾಲಯ ಸಂಕೀರ್ಣ ಸ್ಥಾಪನೆಗೆ ಇರುವ ತೊಡಕು ನಿವಾರಿಸಿಕೊಂಡರೇ ₹15 ಲಕ್ಷ ಅನುದಾನವನ್ನು ಕಟ್ಟಡ ನಿರ್ಮಾಣಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ…

Read More