ಸೂರ್ಯೋದಯ: 06:53, ಸೂರ್ಯಾಸ್ತ : 05:59 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪುಷ್ಯ ಮಾಸ, ಶುಕ್ಲ ಪಕ್ಷ, ಉತ್ತರಾಯಣ, ಹೇಮಂತ ಋತು, ತಿಥಿ: ಅಷ್ಟಮಿ ನಕ್ಷತ್ರ: ಅಶ್ವಿನಿ ಯೋಗ: ಸಿದ್ದಿ, ಕರಣ: ವಿಶಿಷ್ಟ, ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಮೇಷ ರಾಶಿ: ಖಾದ್ಯತೈಲ ವ್ಯಾಪಾರಸ್ಥರಿಗೆ ಅಧಿಕ ಲಾಭ, ರಿಯಲ್ ಎಸ್ಟೇಟ್ ಉದ್ಯಮದಾರರು ಸಿಹಿ-ಕಹಿ ಸಮವಾಗಿ ಸ್ವೀಕರಿಸಲೇಬೇಕು,ಬಾಳಿನ ಸಂಗಾತಿಯೊಂದಿಗೆ ವಾಗ್ವಾದ ಉಂಟಾಗಿ ಮನಸ್ತಾಪಕ್ಕೆ ಕಾರಣವಾಗುತ್ತದೆ, ಆಸ್ತಿಗಾಗಿ ತಂದೆ ಜೊತೆ ಕಿರಿಕಿರಿ ಸಾಧ್ಯತೆ, ಆರೋಗ್ಯದ ಬಗ್ಗೆ ಜಾಗೃಕತೆ ಅವಶ್ಯಕ, ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆ, ಕೆಲಸದಲ್ಲಿ ಮಾನಸಿಕ ಒತ್ತಡ, ಗುತ್ತಿಗೆದಾರರ ಮತ್ತು ರಿಯಲ್ ಎಸ್ಟೇಟ್ ಉದ್ಯಮದಾರರ ಬಹುಕಾಲದ ಸಮಸ್ಯೆಗೆ ಪರಿಹಾರ ಸಿಗಲಿದೆ, ಹೂಡಿಕೆಗೆ ಸಕಾಲವಲ್ಲ, ನವದಂಪತಿಗಳ ವೈವಾಹಿಕ ಜೀವನ ಸುಖಮಯ, ಶತ್ರುಗಳಿಂದ ದೂರವುಳಿಯುವುದು ಉತ್ತಮ, ವಾಹನ ಸವಾರಿ ಮಾಡುವಾಗ ಎಚ್ಚರಿಕೆ ಇರಲಿ, ಮದುವೆ ಮಾತುಕತೆಗಳು…
Author: AIN Author
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಇಂದು ಸಂಜೆ ಮಹತ್ವದ ಮಾತುಕತೆ ನಡೆಸಿದರು. ಅಮಿತ್ ಶಾ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳ ಜತೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಅವರೂ ಭಾಗಿಯಾಗಿದ್ದರು. ಅಮಿತ್ ಶಾ ಅವರ ಜತೆ ಮೈತ್ರಿಯ ವಿಷಯವೂ ಸೇರಿ ರಾಜ್ಯ ರಾಜಕೀಯದ ಬಗ್ಗೆ ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ದೀರ್ಘ ಸಮಾಲೋಚನೆ ನಡೆಸಿದ ಮಾಜಿ ಮುಖ್ಯಮಂತ್ರಿಗಳು; ಕರ್ನಾಟಕದ ಪ್ರತಿಯೊಂದು ವಿದ್ಯಮಾನವನ್ನು ಅವರ ಗಮನಕ್ಕೆ ತಂದರು. ಕ್ಷೇತ್ರ ಹಂಚಿಕೆಯ ಸೇರಿದಂತೆ ಜೆಡಿಎಸ್ ಪಕ್ಷ ಅಧಿಕೃತವಾಗಿ ಎನ್ ಡಿ ಎ ಮೈತ್ರಿಕೂಟಕ್ಕೆ ಸೇರುವ ಪ್ರಕ್ರಿಯೆಗಳೆಲ್ಲವನ್ನು ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಮುಗಿದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜತೆ…
ತುಮಕೂರು:- ಜಿಲ್ಲೆಯ ಕುಣಿಗಲ್ ತಾಲೂಕಿನ ಹಂಗರಹಳ್ಳಿಯ ವಿದ್ಯಾ ಚೌಡೇಶ್ವರಿ ದೇವಿಗೆ ವಜ್ರ ಖಚಿತ ಕಿರೀಟವನ್ನು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಅರ್ಪಿಸಿದ್ದಾರೆ. ಬಳಿಕ ಹೋಮದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಗೌಡ್ರು, ಶ್ರೀ ಬಾಲ ಮಂಜುನಾಥ ಶ್ರೀಗಳು ಶ್ರೀ ಕ್ಷೇತ್ರಕ್ಕೆ ಬರಲು ಆಹ್ವಾನ ನೀಡಿದ್ದರು. ವಿದ್ಯಾ ಚೌಡೇಶ್ವರಿಯ ಉತ್ತರಾಯಣ ಪುಣ್ಯಕಾಲ. ಅತ್ಯಂತ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ವರ್ಧಂತಿ ಉತ್ಸವ ಮತ್ತು ಅಮ್ಮನವರ ಚಿಕ್ಕಮ್ಮ ಜಾತ್ರೆಯು ಶಾಸ್ತ್ರೋಕ್ತವಾಗಿ ನಡೆದಿದೆ. ನಾನು ಉಪವಾಸ ವ್ರತ ಕೈಗೊಂಡು ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಹೇಳಿದರು. ನನ್ನ ಎರಡು ಮಂಡಿ ಚೆನ್ನಾಗಿಲ್ಲ, ಆದರೂ ಕೂಡ ದೀರ್ಘ ದಂಡ ನಮಸ್ಕಾರ ಮಾಡಿದ್ದೇನೆ. ಇಲ್ಲಿ ನಡೆದಂತಹ ಹೋಮ ಅತ್ಯಂತ ವಿಶೇಷವಾಗಿತ್ತು. ಶ್ರೀ ವಿದ್ಯಾ ಚೌಡೇಶ್ವರಿ ದೇವಿಗೆ ಒಂದು ಕಿರೀಟ ಧಾರಣೆ ಮಾಡಿಸಿದ್ದೇನೆ. ಶ್ರೀ ಚೌಡೇಶ್ವರಿ ದೇವಿಯ ಶಕ್ತಿಯಿಂದಾಗಿ ಮೂರು ಬಾರಿ ನಾನು ಪ್ರದಕ್ಷಿಣೆ ಹಾಕಿದ್ದೇನೆ ಎಂದರು.
ಬೆಂಗಳೂರು:- ರಾಜ್ಯದಲ್ಲಿ ಇಂದು 87 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಇಂದು 38 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೈಸೂರು ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 1.14ರಷ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7,579 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, 672 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. 165 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಇನ್ನೂ ದಿನದಿಂದ ದಿನಕ್ಕೆ ಕೋವಿಡ್ ಕೇಸ್ ಗಳು ಇಳಿಮುಖಗೊಂಡಿದೆ. ಕೊವಿಡ್ ಕೇಸ್ ಇಳಿಕೆ ಬೆನ್ನಲ್ಲೇ ಪ್ರಸ್ತುತ ಮಾರ್ಗಸೂಚಿ ಪಾಲಿಸಲು ಆರೋಗ್ಯ ಇಲಾಖೆ ಸಲಹೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟವರಲ್ಲಿ ILI ಲಕ್ಷಣ ಇರುವವರಿಗೆ ಟೆಸ್ಟ್ ಕಡ್ಡಾಯ. ಹೋಮ್ ಐಸೋಲೇಷನ್ನಲ್ಲಿರುವ ಸೋಂಕಿತರ ಬಗ್ಗೆ ಪಿಹೆಚ್ಸಿ, ಯುಪಿಹೆಚ್ಸಿ, ನಮ್ಮ ಕ್ಲಿನಿಕ್ ಸಿಬ್ಬಂದಿ ಗಮನ ಹರಿಸಬೇಕು. ಆರೋಗ್ಯ ಸಮಸ್ಯೆ ಇರುವ ಸೋಂಕಿತರ ಉಸಿರಾಟದ ಬಗ್ಗೆ ಗಮನಹರಿಸುವುದು,…
ಬೆಂಗಳೂರು :- ರಾಜ್ಯದ 2 ಮಹಿಳಾ ಐಎಎಸ್ ಅಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ಪ್ರಶಸ್ತಿ ಘೋಷಣೆ ಮಾಡಿದೆ. ಚಿತ್ರದುರ್ಗ ಡಿಸಿ ದಿವ್ಯಾ ಪ್ರಭುಗೆ ಮತ್ತು ಅತ್ಯುತ್ತಮ ಕಾರ್ಯನಿರ್ವಹಿಸಿದ ಇಲಾಖೆ ವರ್ಗದಡಿ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ.ಶಿಖಾಗೆ ಪ್ರಶಸ್ತಿ ನೀಡಲಾಗಿದೆ. ದಿವ್ಯಾ ಪ್ರಭು ಅವರಿಗೆ ಮತದಾರರ ಪಟ್ಟಿ ನಿರ್ವಹಣೆಯಲ್ಲಿ ಯುವ ಮತದಾರರ ನೋಂದಣಿ, ವಿಶೇಷ ಮತದಾರರ ನೋಂದಣಿ ಹೆಚ್ಚಳ ಸೇರಿದಂತೆ ಚುನಾವಣೆಯಲ್ಲಿ ನಿರ್ವಹಿಸಿದ ಕಾರ್ಯಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಶಿಖಾ ಅವರಿಗೆ 2023ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಆಯುಕ್ತರಾಗಿ ಇಲಾಖೆಯ ಮೂಲಕ ಮತದಾರರಲ್ಲಿ ಉಚಿತ ಉಡುಗೊರೆಗಳ ಕುರಿತು ಹಮ್ಮಿಕೊಂಡಿದ್ದ ಜನಜಾಗೃತಿ, ವಾಣಿಜ್ಯ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತಿ ಪಾಲನೆ ಸೇರಿದಂತೆ ಕಟ್ಟುನಿಟ್ಟಿನ ಚುನಾವಣೆ ನಡೆಸಲು ಪ್ರಮುಖ ಪಾತ್ರವಹಿಸಿದ್ದಕ್ಕಾಗಿ ಪ್ರಶಸ್ತಿ ನೀಡಲಾಗುತ್ತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಫ್ಘಾನಿಸ್ತಾನ ತಂಡದ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಆರಂಭಿಸಿದ ಭಾರತ, ರೋಹಿತ್ ಮತ್ತು ರಿಂಕು ಅವರ ಭರ್ಜರಿ ಪ್ರದರ್ಶನದಿಂದ ಅಫ್ಘಾನ್ ಗೆ 213 ರನ್ ಟಾರ್ಗೆಟ್ ನೀಡಿದೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀ ಇಂಡಿಯಾ ಒಂದು ಹಂತದಲ್ಲಿ 4.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 22 ರನ್ ಗಳಿಸಿತ್ತು. ಈ ವೇಳೆ ನಾಯಕ ರೋಹಿತ್ ಶರ್ಮಾ ಶತಕ (121 ರನ್) ಹಾಗೂ ರಿಂಕು ಸಿಂಗ್ ಆರ್ಧ ಶತಕ (69) ಜೊತೆಯಾಟ ಭಾರತ 212 ರನ್ ತಲುಪಿಸುವಲ್ಲಿ ಯಶಸ್ವಿಯಾಯಿತು. ಆರ್ ಸಿಬಿಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಆಟವನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಅಭಿಮಾನಿಗಳು ನಿರಾಸೆ ಅನುಭವಿಸಬೇಕಾಯಿತು. ಮೊದಲ ವಿಕೆಟ್ ಪತನವಾಗುತ್ತಿದ್ದಂತೆ ಬ್ಯಾಟಿಂಗ್‍ಗೆ ಆಗಮಿಸಿದ ಕೊಹ್ಲಿ ಕೇವಲ 1 ಬಾಲ್ ಎದುರಿಸಿ ಕ್ಯಾಚ್ ಕೊಟ್ಟು ಔಟಾದರು. ನೆಚ್ಚಿನ ಆಟಗಾರ ಕೊಹ್ಲಿ ಶೂನ್ಯಕ್ಕೆ ಔಟಾದಾಗ ತುಂಬಿದ ಕ್ರೀಡಾಂಗಣದಲ್ಲಿ ನೀರವ ಮೌನ ಮನೆ…
ಬೆಂಗಳೂರು:- ಯತೀಂದ್ರ ಜವಾಬ್ದಾರಿಯುತ ನಾಯಕ, ಅವರ ಮಾತನ್ನು ತಿರುಚುವ ಅಗತ್ಯವಿಲ್ಲ ಎಂದು DCM ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದರೆ ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಯತೀಂದ್ರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಸರ್ಕಾರ ಐದು ವರ್ಷ ಬಲಿಷ್ಠವಾಗಿರುತ್ತದೆ. ಸಿದ್ದರಾಮಯ್ಯ ಅವರು ಈಗ ನಮ್ಮ ಮುಖ್ಯಮಂತ್ರಿಗಳು. ಅವರು ಮುಖ್ಯಮಂತ್ರಿಯಾಗಿ, ನಾನು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷನಾಗಿ ಇಬ್ಬರೂ ಒಟ್ಟಿಗೆ ಚುನಾವಣೆ ನಡೆಸುತ್ತೇವೆ. ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ. ಆಸೆ ಪಡುವುದು, ಜನರಿಗೆ ಶಕ್ತಿ ನೀಡುವಂತೆ ಕೇಳುವುದು ತಪ್ಪಲ್ಲ. ನಮ್ಮ ಭಾಗದಲ್ಲಿ ನಾನು ಕೂಡ ಶಕ್ತಿ ನೀಡುವಂತೆ ಜನರ ಬಳಿ ಕೇಳುತ್ತೇನೆ. ಅದನ್ನು ತಿರುಚುವ ಅಗತ್ಯವಿಲ್ಲ. ಯತೀಂದ್ರ ಬಹಳ ಜವಾಬ್ದಾರಿಯುತ ನಾಯಕ. ನಾವು ಅವರಿಗೆ ಪ್ರೋತ್ಸಾಹ ನೀಡುತ್ತೇವೆ. ಶಿವಕುಮಾರ್ ಅವರಿಗೆ ಅಧಿಕಾರ ಸಿಗಬಾರದು ಎಂಬ ಅಧಿಕಾರ ಹಂಚಿಕೆ ಸೂತ್ರ ಕಾಂಗ್ರೆಸ್‌ನಲ್ಲಿ ಆಗಿದೆ ಎಂಬ ಬಿಜೆಪಿ ಟೀಕೆ ಬಗ್ಗೆಯೂ ಪ್ರತಿಕ್ರಿಯಿಸಿದ…
ಮುಂಬೈ:- ಪ್ರೀತಿ ನಿರಾಕರಿಸಿದ ಗೆಳತಿ ಕೊಂದು ಯುವಕ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ. ಮುಂಬೈನ ತಲೋಜಾ ಜೈಲು ಆವರಣದಲ್ಲಿ ಯುವತಿಯ ಮೃತದೇಹವೊಂದು ಪತ್ತೆಯಾಗಿತ್ತು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರ ತಂಡ ಧಾವಿಸಿ, ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿತ್ತು. ಬಳಿಕ ಈ ಪ್ರಕರಣದ ತನಿಖೆಯನ್ನು ಕೈಗೊಂಡ ಪೊಲೀಸರಿಗೆ ಆಘಾತಕಾರಿ ಮಾಹಿತಿಯೊಂದು ದೊರಕಿತ್ತು. ನವಿ ಮುಂಬೈನ ಕಲಾಂಬೋಲಿ ಪ್ರದೇಶದ ನಿವಾಸಿ 19 ವರ್ಷದ ಯುವತಿ ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋಗಿದ್ದಳು. ಆದರೆ ರಾತ್ರಿಯಾದರೂ ಆಕೆ ಮನೆಗೆ ವಾಪಸ್ಸಾಗಿರಲಿಲ್ಲ. ಹೀಗಾಗಿ ಮನೆಯವರು ಆತಂಕಗೊಂಡು ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಇತ್ತ ಇದೇ ದಿನ ರೈಲ್ವೇ ಪೊಲೀಸರ ಮೂಲಕ ಪೊಲೀಸರಿಗೆ ಆತ್ಮಹತ್ಯೆ ಪ್ರಕರಣವೊಂದರ ಮಾಹಿತಿ ಸಿಕ್ಕಿತ್ತು. ಪೊಲೀಸರು ಸ್ಥಳಕ್ಕಾಗಮಿಸಿದಾಗ ಯುವಕನ ಮೃತದೇಹದ ಬಳಿ ಫೋನ್‌ನಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದನು. ನಂತರ ಪೊಲೀಸರು ಆತ್ಮಹತ್ಯೆ ಪತ್ರದಲ್ಲಿ ಸಿಕ್ಕ ಸುಳಿವು ಆಧರಿಸಿ ಯುವತಿಯ ಶವಕ್ಕಾಗಿ ಹುಡುಕಾಟ…
ಭಾರತ ಮತ್ತು ಅಫ್ಘಾನಿಸ್ತಾನದ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ರೋಹಿತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. 2019ರಿಂದ ಭಾರತದಲ್ಲಿ ಆಡಿದ ಟಿ20 ಸರಣಿಯಲ್ಲಿ ಒಂದರಲ್ಲೂ ಭಾರತ ಸರಣಿಯನ್ನು ಸೋತಿಲ್ಲ. ಆಡಿದ 15 ಸರಣಿಗಳಲ್ಲಿ 13 ಸರಣಿ ವಶಪಡಿಸಿಕೊಂಡಿದೆ. ಉಳಿದ ಎರಡು ಸರಣಿ ಡ್ರಾದಲ್ಲಿ ಅಂತ್ಯಗೊಂಡಿದೆ. ಇನ್ನೂ ಮೂರನೇ ಟಿ20ಯಲ್ಲಿ ಭಾರತ ಗೆದ್ದರೆ, ಟೀಮ್ ಇಂಡಿಯಾ ಪರ ನಾಯಕನಾಗಿ 41 ಟಿ20 ಪಂದ್ಯಗಳನ್ನು ಗೆದ್ದ ಧೋನಿಯವರ ದಾಖಲೆಯನ್ನು ರೋಹಿತ್ ಮುರಿಯಲಿದ್ದಾರೆ
ಅಯೋಧ್ಯೆ:- ರಾಮಲಲ್ಲಾ ಮೂರ್ತಿಯು ರಾಮಮಂದಿರವನ್ನು ಪ್ರವೇಶಿಸಿದೆ. ಜನವರಿ 22 ರಂದು ರಾಮಮಂದಿರದಲ್ಲಿ ನಡೆಯುವ ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಇದೀಗ ರಾಮಲಲ್ಲಾ ಮೂರ್ತಿಯು ರಾಮಮಂದಿರವನ್ನು ಪ್ರವೇಶಿಸಿದೆ. https://twitter.com/ANI/status/1747612786195308712?ref_src=twsrc%5Etfw%7Ctwcamp%5Etweetembed%7Ctwterm%5E1747612786195308712%7Ctwgr%5E31b89146c3801a60dc73d938ea114a8b653b7db8%7Ctwcon%5Es1_c10&ref_url=https%3A%2F%2Fpublictv.in%2Fram-mandir-lord-rams-idol-being-brought-to-ayodhya%2F ಇಂದು ಸಂಜೆ ಭಗವಾನ್ ರಾಮನ ವಿಗ್ರಹವನ್ನು ಹೊತ್ತ ಟ್ರಕ್ ಅನ್ನು ‘ಜೈ ಶ್ರೀ ರಾಮ್’ ಘೋಷಣೆಗಳೊಂದಿಗೆ ರಾಮ ಮಂದಿರದ ಆವರಣಕ್ಕೆ ತರಲಾಯಿತು. ಈ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ ಭವ್ಯ ರಾಮಮಂದಿರದ ಸಂಕೀರ್ಣಕ್ಕೆ ವಿಗ್ರಹವನ್ನು ಕೊಂಡೊಯ್ಯಲು ಮಂಗಳವಾರ ರಾತ್ರಿಯಿಂದಲೇ ಸಿದ್ಧತೆ ನಡೆದಿತ್ತು. 150-200 ಕೆಜಿ ತೂಕದ ವಿಗ್ರಹವನ್ನು ಕ್ರೇನ್ ಸಹಾಯದಿಂದ ಮೆರವಣಿಗೆಗಾಗಿ ತಡರಾತ್ರಿ ಹೂವಿನಿಂದ ಅಲಂಕರಿಸಿದ ಟ್ರಕ್ ಮೇಲೆ ಇರಿಸಲಾಯಿತು. ಇಂದು ಈ ಟ್ರಕ್ ರಾಮಮಂದಿರದ ಆವರಣವನ್ನು ಪ್ರವೇಶಿಸಿದೆ. 51 ಇಂಚು ಎತ್ತರದ ರಾಮನ ಮೂರ್ತಿಯನ್ನು ಅಯೋಧ್ಯೆ ರಾಮಮಂದಿರದಲ್ಲಿ ಸೋಮವಾರ ಪ್ರತಿಷ್ಠಾಪಿಸಲಾಗುತ್ತದೆ. ನಾಳೆ ರಾಮನ ಮೂರ್ತಿ ಗರ್ಭಗುಡಿ ಪ್ರವೇಶಿಸಲಿದೆ.