Author: AIN Author

ಬಿಗ್ ಬಾಸ್ ಮನೆಗೆ (Bigg Boss Show) ಬರುವ ಸ್ಪರ್ಧಿಗಳಿಗೆ ಕೆಲವೊಂದು ರೂಲ್ಸ್ ಇದೆ. ಅದರಲ್ಲಿ ಮ್ಯಾನ್ ಹ್ಯಾಂಡ್ಲಿಂಗ್ ಮಾಡುವಂತೆ ಇಲ್ಲ. ಸಹಸ್ಪರ್ಧಿಗಳಿಗೆ ಹೊಡೆದ ಸ್ಪರ್ಧಿಗೆ ಸೂಕ್ತ ಕ್ರಮಗೊಳ್ಳಲಾಗುತ್ತದೆ. ಅಂಥ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಲಾಗುತ್ತದೆ. ಬಿಗ್ ಬಾಸ್ ಸೀಸನ್ 17 (Bigg Boss Hindi 17) ಹಿಂದಿ ರಿಯಾಲಿಟಿ ಶೋನಲ್ಲಿ ಈ ರೀತಿಯ ಘಟನೆಯೊಂದು ನಡೆದಿದೆ. ಅಭಿಷೇಕ್ ಕುಮಾರ್ (Abhishek Kumar) ಮತ್ತು ಸಮರ್ಥ್ ಜ್ಯುರೆಲ್ (Samarth Jurel) ಮಧ್ಯೆ ಬಿಗ್ ಫೈಟ್ ನಡೆದಿದೆ. ಜಗಳ ಅತಿರೇಕಕ್ಕೆ ಹೋಗಿ ಅಭಿಷೇಕ್ ಅವರು ಸಮರ್ಥ್‌ಗೆ ಹೊಡೆದಿದ್ದಾರೆ. ಈ ಪರಿಣಾಮ, ಮನೆಯಿಂದ ಅಭಿಷೇಕ್‌ರನ್ನ ಹೊರಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸಣ್ಣ ಮಾತಿನಿಂದ ದೊಡ್ಡ ಮಟ್ಟದ ಜಗಳ ಆದ ಉದಾಹರಣೆ ಇದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಅಭಿಷೇಕ್ ಅವರು ಸಿಟ್ಟಿನಿಂದ ಸಮರ್ಥ್‌ಗೆ ಹೊಡೆದಿದ್ದಾರೆ. ಅಭಿಷೇಕ್ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ನಿರ್ಧಾರವನ್ನು ಮನೆಯ ಕ್ಯಾಪ್ಟನ್ ಅಂಕಿತಾ…

Read More

ಎರಡು ದಿನಗಳ ಹಿಂದೆಯಷ್ಟೇ ಪುತ್ರಿ ಇರಾ ಖಾನ್ ಮದುವೆ ಮಾಡಿರುವ ಬಾಲಿವುಡ್ ನಟ ಆಮೀರ್ ಖಾನ್ (Aamir Khan), ಇದೀಗ ಮುಂಬೈನಲ್ಲಿ ಆರತಕ್ಷತೆ (Reception) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮಗಳ ಮದುವೆಗೆ ಕೆಲವೇ ಕೆಲವು ಗಣ್ಯರನ್ನು ಆಮೀರ್ ಆಮಂತ್ರಿಸಿದ್ದರು. ಜೊತೆಗೆ ಎರಡೂ ಕುಟುಂಬಗಳ ಸದಸ್ಯರು ಇದ್ದರು. ಆದರೆ, ಆರತಕ್ಷತೆಯಲ್ಲಿ ಭಾರತೀಯ ಸಿನಿಮಾ ರಂಗದ ನಾನಾ ದಿಗ್ಗಜರು ಭಾಗಿ ಆಗಲಿದ್ದಾರಂತೆ. ಜನವರಿ 13ಕ್ಕೆ ಅದ್ಧೂರಿಯಾಗಿಯೇ ಮಗಳ ಆರತಕ್ಷತೆ ಕಾರ್ಯಕ್ರಮವನ್ನು ಆಮೀರ್ ಆಯೋಜನೆ ಮಾಡಿದ್ದಾರಂತೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಜೊತೆಗೆ ಬಾಲಿವುಡ್ ನ ಬಹುತೇಕ ಸ್ಟಾರ್ ನಟರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಜನವರಿ 3ರಂದು ಇರಾ ಖಾನ್ ಮದುವೆಯಾಗಿದೆ. ಇರಾ ಖಾನ್ (Ira Khan) ಮತ್ತು ನೂಪುರ್ ಶಿಖಾರೆ (Nupur Shikhare) ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಫೋಟೋ ವೈರಲ್ ಆಗಲು ಕಾರಣ, ನೂಪುರ್ ಧರಿಸಿರುವ ಕಾಸ್ಟ್ಯೂಮ್ ಸಾಮಾನ್ಯವಾಗಿ ಮದುವೆಯಲ್ಲಿ ಲಕ್ಷಾಂತರ ಬೆಲೆ ಬಾಳು ಸೂಟ್…

Read More

ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟಿರುವ ಬಾಲಿವುಡ್ ನ ಖ್ಯಾತ ನಟಿ ಜಾಹ್ನವಿ ಕಪೂರ್ (Jahnavi Kapoor) , ಪದೇ ಪದೇ ತಿರುಪತಿ ತಿಮ್ಮಪ್ಪನ (Tirupati Timmappa) ದರ್ಶನ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಒಬ್ಬರೇ ದರ್ಶನ ಮಾಡುತ್ತಿದ್ದವರು, ಈ ಬಾರಿ ಗೆಳೆಯ ಶಿಖರ್ ಪಹರಿಯಾ (Shikhar Paharia) ಜೊತೆ ತಿರುಪತಿಗೆ ಬಂದಿದ್ದರು. ಶುಕ್ರವಾರ ಬೆಳಗ್ಗೆ ಗೆಳೆಯನ ಜೊತೆ ಆಗಮಿಸಿದ್ದ ಅವರು, ಜೊತೆಯಾಗಿ ದರ್ಶನ ಮಾಡಿದ್ದಾರೆ. ಹೊಸ ವರ್ಷವನ್ನು ಅವರು ತಿರುಪತಿಗೆ ತಿಮ್ಮಪ್ಪನ ಆಶೀರ್ವಾದ ಪಡೆಯುವ ಮೂಲಕ ಆಚರಿಸಿದ್ದಾರೆ. 2024 ಅನ್ನು ಹೊಸ ಕನಸಿನೊಂದಿಗೆ ಆರಂಭಿಸುತ್ತಿದ್ದೇನೆ ಎಂದು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಗೋಲ್ಡನ್ ಕಲರ್ ಸೀರೆಯುಟ್ಟು, ದೇವಸ್ಥಾನದ ಮುಂದೆ ನಿಂತು ಫೋಟೋ ತೆಗೆದುಕೊಂಡಿದ್ದಾರೆ ಳೆಯ ಶಿಖರ್ ಪಹರಿಯಾ ಬಗ್ಗೆ ಜಾ‍ಹ್ನವಿ ಹಲವಾರು ಬಾರಿ ಮಾತನಾಡಿದ್ದಾರೆ. ಡೇಟಿಂಗ್ ವಿಚಾರ ಬಂದಾಗ, ಶಿಖರ್ ನನ್ನ ಇಡೀ ಕುಟುಂಬಕ್ಕೆ ಪರಿಚಿತರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಬಹಿರಂಗವಾಗಿಯೇ ಗೆಳೆಯನ ಜೊತೆ ದೇವಸ್ಥಾನಕ್ಕೂ ಬಂದಿದ್ದಾರೆ.

Read More

ಬೆಂಗಳೂರು ಮೆಟ್ರೋ ನಿಲ್ದಾಣಗಳು ಎಷ್ಟು ಸೇಫ್  ಸೂಸೈಡ್ ಸ್ಪಾಟ್ ಗಳು ಆದ್ವಾ ನಮ್ಮ ಮೆಟ್ರೋ ಸ್ಟೇಷನ್ಸ್ ಎಂದು ಎಲ್ಲರಲ್ಲೂ ಈಗ ಪ್ರಶ್ನೆ ಕಾಡಲಾರಂಭಿಸಿದೆ. ಪದೆ ಪದೇ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಸೂಸೈಡ್ ಅವಾಂತರಗಳು ಆಗುತ್ತಲೇ ಇವೆ ಮೊದಲ ಹಂತ ಮೆಟ್ರೋ ಕಾಮಗಾರಿ ವೇಳೆ ಹಣ ಉಳಿಸಿದ್ದಕ್ಕೆ ಬ್ಯಾಕ್ ಟು ಬ್ಯಾಕ್ ದುರಂತಕ್ಕೆ ಕಾರಣನಾ..? ಬಿಎಂಆರ್ಸಿಲ್ ನಿರ್ಲಕ್ಷ್ಯ ದಿಂದ್ಲೇ ನಿಲ್ದಾಣಗಳಲ್ಲಿ ಸೂಸೈಟ್ ಆಗ್ತಿವಿಯಾ..? ಮೆಟ್ರೋ ಸ್ಟೇಷನ್ ಗಳಲ್ಲಿ ಪದೇ ಪದೇನಡೆಯುತ್ಗಿರೋ ಸೂಸೈಟ್ ಬಳಿಕವೂ ಎಚ್ಚೆತ್ತುಕೊಂಡಿಲ್ಲ ಬಿಎಂಆರ್ಸಿಲ್ ಎಂದು ಎಲ್ಲರನ್ನು ಕಾಡುತ್ತಿದೆ. ಮೆಟ್ರೋ ‌ನಿಗಮದ ಕೊಂಚ ಎಡವಟ್ಟಿಗೆ ಮೆಟ್ರೋದಲ್ಲಿ ಪದೇ ಪದೇ ಅವಾಂತರ ಆದ್ರೂ ಮೆಟ್ರೋ ಮೊದಲ ಹಾಗೂ ಎರಡನೇ ಹಂತ ಸ್ಟೇಷನ್ ಗಳಲ್ಲಿ ಇಲ್ಲ ಸೇಫ್ಟಿ ಮೆಟ್ರೋ ಪ್ಲಾಟ್ ಪಾರಂಗಳಲ್ಲಿ ಪದೇ ಪದೇ ಹಳಿಗೆ ಹಾರಿ ಆತ್ಮಹತ್ಯೆ ಗೆ ಯತ್ಮ 2012 ರಲ್ಲಿ ಎಂ.ಜಿ ರಸ್ತೆ ನಿಲ್ದಾಣದಲ್ಲಿ ಓರ್ವ ಬಾಲಕ ಹಳಿಗೆ ಹಾರಿ ಆತ್ಮಹತ್ಯೆ ಯತ್ನ  ಹಾಗೆ 2019 ರಲ್ಲಿ ನ್ಯಾಷನಲ್ ಕಾಲೇಜ್…

Read More

ಎಸ್ ಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ, ರಾಗಿಣಿ ದ್ವಿವೇದಿ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿರುವ “ಇಮೇಲ್” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. “ಇಮೇಲ್” ಚಿತ್ರದ ಫಸ್ಟ್ ಲುಕ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎಸ್ ಆರ್ ರಾಜನ್ ಅವರು “ಇಮೇಲ್” ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಎಸ್ ಆರ್ ಫಿಲಂ ಫ್ಯಾಕ್ಟರಿ ತಮಿಳಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. “ಇಮೇಲ್” ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಮುರುಗ ಅಶೋಕ್, ಮನೋಬಲ, “ಜೈಲರ್” ಚಿತ್ರದ ಖ್ಯಾತಿಯ ಬಿಲ್ಲಿ, “ಲೊಳ್ಳುಸಭಾ” ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ರಾಮ್ ಸನ್ನಿ, ನಯನ ಚೌಹಾನ್, ಶೈಲಜ, ಶ್ವೇತ, ತೇಜಸ್ವಿನಿ, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ, ಮುಂತಾದವರು “ಇಮೇಲ್”…

Read More

ಕಲಬುರಗಿ:  ದಾಖಲೆ ಇಲ್ಲದೇ ಓಡಾಡುತಿದ್ದ 27 ಆಟೋಗಳನ್ನ ಕಲಬುರಗಿಯ ಟ್ರಾಫಿಕ್ ಪೋಲೀಸರು ಜಪ್ತಿ ಮಾಡಿದ್ದಾರೆ..ನಗರದ ವಿವಿಧೆಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಯಾವುದೇ ದಾಖಲೆ ಇಲ್ಲದಿರೋದು ಬೆಳಕಿಗೆ ಬಂದಿದೆ. ಕೆಲವರು ದಾಖಲೆ ಇಲ್ಲದಿರುವುದು ಮತ್ತೆ ಕೆಲವರು ತಾಲೂಕು ಕೇಂದ್ರ ಅನುಮತಿ ಇದ್ರು ಸಿಟಿಯಲ್ಲಿ ಅಡ್ಡಾಡೋದು ಸಹ ಪತ್ತೆಯಾಗಿದೆ.ಹೀಗೆ ಪೋಲೀಸರ ಕಣ್ತಪ್ಪಿಸಿ ಸಂಚರಿಸುತ್ತಿದ್ದ ಆಟೋಗಳನ್ನ ಜಪ್ತಿ ಮಾಡಿ ಆರ್ ಟಿಓ ಅಧಿಕಾರಿಗಳ ಸುಪರ್ದಿಗೆ ಕೊಟ್ಟಿದ್ದಾರೆ..

Read More

ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂಬ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಭವಿಷ್ಯ ನುಡಿದಿದ್ದಾರೆ. ವಯಸ್ಸಿನಲ್ಲಿ ದೊಡ್ಡವರಾದ ದೇವೇಗೌಡರ ಈ ಶಾಪವನ್ನು ಆಶೀರ್ವಾದ ಎಂದೇ ಸ್ವೀಕರಿಸಿದ್ದೇನೆ. ಅವರಿಗೆ ಅವರ ಪಕ್ಷಕ್ಕೆ ದೀರ್ಘ ಕಾಲ ಆಯುರಾರೋಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಹಾರೈಸುತ್ತೇನೆ. ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನುಸರಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು. ಯಾವ ರಾಜಕೀಯ ಪಕ್ಷ ಕೂಡಾ ಮತ್ತೊಂದು ರಾಜಕೀಯ…

Read More

ಬೆಂಗಳೂರು: ಅವಧಿ ಮುಗಿದ್ರೂ ಜೆಟ್‌ಲ್ಯಾಗ್ ಪಬ್ಬಿನಲ್ಲಿ ಪಾರ್ಟಿಗೆ ಅವಕಾಶ ನೀಡಿದ್ರೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರು ಯಾಕೆ ನೋಟಿಸ್‌ ಕೊಟ್ಟಿಲ್ಲವೆಂದು ಈಗ ಎಲ್ಲರಲ್ಲೂ ಅನುಮಾನ ಕಾಡುತ್ತಿದೆ. ನಗರದ ಒರಾಯನ್ ಮಾಲ್ ಬಳಿಯಿರುವ ಜೆಟ್‌ಲ್ಯಾಗ್ ಪಬ್ ಕೇಸ್ ದಾಖಲಿಸಿದ ಬೆನ್ನಲ್ಲೇ ಹಿರಿಯ ಅಧಿಕಾರಿಯಿಂದ ನೋಟಿಸ್‌ ಸುಬ್ರಹ್ಮಣ್ಯನಗರ ಪೊಲೀಸರಿಗೆ ನೋಟಿಸ್‌ ಜಾರಿ ಮಾಡಿದ ಅಧಿಕಾರಿ ಘಟನೆ ನಡೆದ ರಾತ್ರಿ ಹಾಳಿಯಲ್ಲಿದ್ದ ಸಿಬ್ಬಂದಿಗೆ ನೋಟಿಸ್‌ ಜಾರಿ ಮುಂಜಾನೆವರೆಗೂ ಹಾರ್ಟಿ ಮಾಡಿದ್ರೂ ಯಾಕೆ ಗಮನಕ್ಕೆ ಬಂದಿಲ್ಲ? ಬೀಟ್‌ನಲ್ಲಿದ್ದ ಸುಬ್ರಹ್ಮಣ್ಯನಗರ ಠಾಣೆ ಸಿಬ್ಬಂದಿ ಏನು ಮಾಡುತ್ತಿದ್ದರು? ರಾತ್ರಿ ಪಾಳಿಯಲ್ಲಿ ಸುಬ್ರಹ್ಮಣ್ಯನಗರ ಠಾಣೆ ಉಸ್ತುವಾರಿ ಯಾರಿದ್ರು? ಎಲ್ಲಾ ಮಾಹಿತಿ ನೀಡುವಂತೆ ಹಿರಿಯ ಅಧಿಕಾರಿಯಿಂದ ನೋಟಿಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಅಧಿಕಾರಿಗಳು

Read More

ಹುಬ್ಬಳ್ಳಿ: ನಿಂತಿದ್ದ ಎರಡು ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಜ.6ರ ಶನಿವಾರ ಬೆಳಗಿನ ಜಾವ ಸಂಭವಿಸಿದೆ. https://ainlivenews.com/a-lorry-collided-with-parked-cars-four-died-on-the-spot/ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ್ಳಿಗಟ್ಟಿ ಕ್ರಾಸ್ ನ ಬಳಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಹಾಸನ ಮೂಲದ ಮೂವರು ಹಾಗೂ ಬೆಂಗಳೂರಿನ ಒಬ್ಬರು ಮೃತ ಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದ್ದು, ಎರಡು ಕಾರುಗಳು ನಿಂತಿದ್ದಾಗ ಕಾರುಗಳಿಗೆ ಲಾರಿ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, ಶವಗಳನ್ನು ಹೊರ ತೆಗೆಯದ ಸ್ಥಿತಿಯಲ್ಲಿದೆ. ಹೆದ್ದಾರಿ ಪೆಟ್ರೋಲಿಂಗ್ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಇಬ್ಬರನ್ನು ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.

Read More

ದೆಹಲಿ: ಸೊಮಾಲಿಯಾದ ಕರಾವಳಿ ಬಳಿ ಅಪಹರಣವಾಗಿದ್ದ 15 ಭಾರತೀಯರಿದ್ದ ಸರಕು ಸಾಗಣೆ ಹಡಗು ‘ಎಂವಿ ಲೀಲಾ ನಾರ್ಫೋಕ್’ (MV LILA NORFOLK) ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ. 15 ಭಾರತೀಯರು ಸೇರಿದಂತೆ ಒಟ್ಟು 21 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಸುರಕ್ಷಿತವಾಗಿದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮಾಲಿಯಾ ಕರಾವಳಿಯ ಬಳಿ ಗುರುವಾರ ಸಂಜೆ 88,000 ಟನ್‌ಗಳಷ್ಟು ತೂಕದ ‘MV LILA NORFOLK’ ಎಂಬ ಸರಕು ಸಾಗಣೆ ಹಡಗನ್ನು ಅಪಹರಿಸಲಾಗಿತ್ತು. ಲೈಬೀರಿಯನ್‌ಗೆ ಸೇರಿದ ಈ ಹಡಗು ಬ್ರೆಜಿಲ್‌ನಿಂದ ಬಹ್ರೇನ್‌ ಕಡೆಗೆ ಹೊರಟ್ಟಿತ್ತು. ಹಡಗು ಅಪಹರಣ ಸುದ್ದಿ ತಿಳಿಯುತ್ತಲೇ ಭಾರತೀಯ ನೌಕಾಪಡೆ ಕಾರ್ಯಚರಣೆಗೆ ಇಳಿದಿತ್ತು ಭಾರತೀಯ ನೌಕಾಪಡೆಯು ಕಡಲ್ಗಳ್ಳರನ್ನು ಪತ್ತೆಹಚ್ಚಲು ಯುದ್ಧನೌಕೆಯನ್ನು (INS ಚೆನ್ನೈ) ಕಳುಹಿಸಿ ಸೂಕ್ಷ್ಮವಾಗಿ ನಿಗಾವಹಿಸಿತ್ತು. ಅಷ್ಟೇ ಅಲ್ಲದೇ ಕಡಲ ಗಸ್ತು ವಿಮಾನ, ಹೆಲಿಕಾಪ್ಟರ್‌ಗಳು ಹಾಗೂ P-81 ದೀರ್ಘಶ್ರೇಣಿಯ ವಿಮಾನಗಳು ಹಾಗೂ ಪ್ರಿಡೆಕ್ಟರ್‌ MQ9B ಡ್ರೋನ್‌ಗಳನ್ನು ನಿಯೋಜನೆ ಮಾಡಿತ್ತು

Read More