Author: AIN Author

ಗೌರಿಬಿದನೂರು :ಮಕ್ಕಳ ಕಲಿಕೆಗೆ ಪೂರಕ ಶಿಕ್ಷಣ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚು ಶ್ರಮವಹಿಸಬೇಕು ಎಂದು ಶಾಸಕ ಕೆ ಎಚ್ ಪುಟ್ಟಸ್ವಾಮಿ ಗೌಡರು ಸಲಹೆ ನೀಡಿದರು ಗೌರಿಬಿದನೂರು ತಾಲ್ಲೂಕಿನ ತೊಂಡೇಭಾವಿ ಗ್ರಾಮ ಪಂಚಾಯಿತಿ, ಅಲಕಾಪುರ ಗ್ರಾಮ ಪಂಚಾಯಿತಿ, ಹೊಸೂರು ಗ್ರಾಮ ಪಂಚಾಯಿತಿ, ಮುದುಗೆರೆ ಗ್ರಾಮ ಪಂಚಾಯಿತಿ, ಕಾದಲವೇಣಿ ಗ್ರಾಮ ಪಂಚಾಯಿತಿ,ಗೆದರೆ ಗ್ರಾಮ ಪಂಚಾಯಿತಿ ಇನ್ನು ಬೇರೆ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪಂಚಾಯಿತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಶಾಸಕರ ನಿಧಿಯ ಸಹಯೋಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ಸಿ ಸಿ ರಸ್ತೆ, ಚರಂಡಿ ನಿರ್ಮಾಣ , ಗ್ರಂಥಾಲಯ ನಿರ್ಮಾಣ, ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಅವರ ಮನಸ್ಸಿನಲ್ಲಿ ಯಾವ ರೀತಿ ಬದಲಾವಣೆ ತರಬೇಕೆಂಬ ದೃಷ್ಟಿ ಇಟ್ಟುಕೊಂಡು ಪಾಠ ಮಾಡಬೇಕು. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ವಿದ್ಯಾಭ್ಯಾಸ ನೀಡುವ ಅಂಗನವಾಡಿ ಕೇಂದ್ರ ದೇವಸ್ಥಾನವಿದ್ದಂತೆ ಎಂದರು. ಬೆಳೆಯುವ ಸಿರಿ ಮೊಳಕೆಯಲ್ಲಿ…

Read More

ಮಧುಮೇಹವು ಸಾಮಾನ್ಯ ಆರೋಗ್ಯ ಸಮಸ್ಯೆಯಾದರೂ, ಇದು ತುಂಬಾ ಗಂಭೀರವಾದ ಕಾಯಿಲೆಯಾಗಿದೆ. ಲಕ್ಷಾಂತರ ಜನರು ಇದರೊಂದಿಗೆ ನಿರಂತರವಾಗಿ ಹೋರಾಡುತ್ತಿದ್ದಾರೆ. ಮಧುಮೇಹಕಾಲಾನಂತರದಲ್ಲಿ ಹೃದಯ, ರಕ್ತನಾಳಗಳು, ಕಣ್ಣುಗಳು, ಮೂತ್ರಪಿಂಡಗಳು ಮತ್ತು ನರಗಳನ್ನು ಹಾನಿಗೊಳಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುವ ಸಾಧ್ಯತೆ ಹೆಚ್ಚು. ಹೆಚ್ಚು ಆತಂಕಕಾರಿ ವಿಷಯವೆಂದರೆ ಮಧುಮೇಹವು ನಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇದು ಹೃದ್ರೋಗಗಳು, ಹೃದಯಾಘಾತ, ಹಠಾತ್ ಸಾವಿಗೆ ಸಹ ಕಾರಣವಾಗುತ್ತದೆ. ಮೂತ್ರಪಿಂಡದ ಕಾಯಿಲೆಗೆ ಮಧುಮೇಹವು ಮುಖ್ಯ ಕಾರಣವಾಗಿದೆ. ಇದು ಮಧುಮೇಹ ಹೊಂದಿರುವ ಮೂರನೇ ಒಂದು ಭಾಗದಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮಧುಮೇಹದ ಗಂಭೀರ, ಮಾರಣಾಂತಿಕ ತೊಡಕು. ಕಾಲಾನಂತರದಲ್ಲಿ, ಅಧಿಕ ರಕ್ತದ ಸಕ್ಕರೆಯ ಮಟ್ಟವು ಮೂತ್ರಪಿಂಡದ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ಇರುವವರಿಗೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುತ್ತದೆ. ಇದು ಮೂತ್ರಪಿಂಡದೊಳಗಿನ ರಕ್ತನಾಳಗಳನ್ನು ಸಂಕುಚಿತಗೊಳಿಸಬಹುದು. ಇದರಿಂದಾಗಿ ಮೂತ್ರಪಿಂಡಗಳಿಗೆ ಮತ್ತಷ್ಟು ಹಾನಿಯಾಗುವ ಅಪಾಯವಿದೆ. ಮೂತ್ರ ವಿಸರ್ಜನೆ ಹೋಗುವುದು ಮತ್ತು ರಾತ್ರಿ ಭಯವು ಹೆಚ್ಚು ತೊಂದರೆ…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2022 ರಲ್ಲೇ ಅತೀ ಹೆಚ್ಚು ಆ್ಯಸಿಡ್ ದಾಳಿ ನಡೆದಿದೆ. ಅಂಕಿಅಂಶಗಳ ಪ್ರಕಾರ, ಎನ್‌ಸಿಆರ್‌ಬಿ ಡೇಟಾದಲ್ಲಿ ಪಟ್ಟಿ ಮಾಡಲಾದ 19 ಮೆಟ್ರೋಪಾಲಿಟನ್ ನಗರಗಳ ಪೈಕಿ, ಕಳೆದ ವರ್ಷ ಎಂಟು ಮಹಿಳೆಯರು ಆಸಿಡ್ ದಾಳಿಗೆ ಒಳಗಾಗುವುದರೊಂದಿಗೆ ಬೆಂಗಳೂರು ಒಟ್ಟಾರೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 2022 ರಲ್ಲಿ ಏಳು ಮಹಿಳೆಯರು ಆಸಿಡ್ ದಾಳಿಗೆ ಬಲಿಯಾದ ದೆಹಲಿ ಎರಡನೇ ಸ್ಥಾನದಲ್ಲಿದೆ ಮತ್ತು ಐದು ಪ್ರಕರಣಗಳು ದಾಖಲಾಗಿರುವ ಅಹಮದಾಬಾದ್ ಮೂರನೇ ಸ್ಥಾನದಲ್ಲಿ ಇದೆ ಎಂದು ಅಂಕಿಅಂಶಗಳು ತಿಳಿಸಿವೆ. ಎನ್‌ಸಿಆರ್‌ಬಿ ದತ್ತಾಂಶದ ವಿಶ್ಲೇಷಣೆಯು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 7 ಆಸಿಡ್ ದಾಳಿ ಯತ್ನ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು ಬೆಂಗಳೂರಿನಲ್ಲಿ ಕಳೆದ ವರ್ಷ ಅಂತಹ ಮೂರು ಪ್ರಕರಣಗಳು ದಾಖಲಾಗಿವೆ ಎಂದು ತೋರಿಸಿದೆ. ಏತನ್ಮಧ್ಯೆ, ಹೈದರಾಬಾದ್ ಮತ್ತು ಅಹಮದಾಬಾದ್‌ನಂತಹ ಮೆಟ್ರೋಪಾಲಿಟನ್ ನಗರಗಳು 2022 ರಲ್ಲಿ ಎರಡು ಆಸಿಡ್ ದಾಳಿ ಯತ್ನ ಪ್ರಕರಣಗಳನ್ನು ದಾಖಲಿಸಿವೆ. ಕಳೆದ ವರ್ಷ ಕೆಲಸಕ್ಕೆ ಹೋಗುತ್ತಿದ್ದ 24 ವರ್ಷದ ಎಂ.ಕಾಂ ಪದವೀಧರ ಮಹಿಳೆ ಮೇಲೆ…

Read More

ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ನಾಳೆ ವ್ಯಾಪಕ ಮಳೆ ಮುಂದುವರಿಯುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ವಿಜಯನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಈ ಭಾಗದಲ್ಲಿ ಸಾಧಾರಣದಿಂದ ವ್ಯಾಪಕ ಮಳೆ ಬೀಳುವ ಸಾಧ್ಯತೆಗಳು ಇವೆ. ಆದರೆ ಉತ್ತರ ಒಳನಾಡಿನ ಭಾಗದ ಯಾವ ಜಿಲ್ಲೆಗಳಿಗೂ ಮಳೆ ಮುನ್ಸೂಚನೆ ನೀಡಿಲ್ಲ. ಕಾರಣ ಇಲ್ಲಿ ಮಳೆಯಾಗುವ, ಕೊನೆಯ ಪಕ್ಷ ತಂಪು ವಾತಾವರಣದ ಯಾವ ಮುನ್ಸೂಚನೆಗಳು ಇಲ್ಲ. ಮಳೆ ಬದಲಾಗಿ ಇಲ್ಲಿ ಇನ್ನೂ ಹಲವು ದಿವಸಗಳು ಅಧಿಕ ಬಿಸಿಲಿನ ಶುಷ್ಕ ವಾತಾವರಣವೇ ಮುಂದುವರಿಯಲಿದೆ ಎಂದು ಐಎಂಡಿ ತನ್ನ ವರದಿಯಲ್ಲಿ ತಿಳಿಸಿದೆ.

Read More

ಹುಬ್ಬಳ್ಳಿ: ನಾನು ಬಾಲ್ ಇದ್ದಂತೆ, ತುಳಿದಷ್ಟು ಮೇಲೆ ಪುಟಿದೇಳುತ್ತೇನೆ. ಈಡಿಗ ಸಂಘದ ಸಮಾವೇಶ ರಾಜಕೀಯ ಪ್ರೇರಿತ, ನಾನು ಭಾಗಿಯಾಗಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ (Siddaramaiah) ಪರೋಕ್ಷವಾಗಿ ಬಿ.ಕೆ ಹರಿಪ್ರಸಾದ್ (BK Hariprasad) ಟಾಂಗ್ ನೀಡಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಕಾರ್ಯವೈಖರಿ ಬಗ್ಗೆ ಜನಸಾಮಾನ್ಯರು ತೀರ್ಮಾನಿಸುತ್ತಾರೆ. ನನ್ನನ್ನು ತುಳಿಯಲು ಯಾರಿಂದಲೂ ಸಾಧ್ಯವಿಲ್ಲ. ತುಳಿದಷ್ಟು ಮೇಲೆ ಪುಟಿಯುತ್ತೇನೆ. ಬೆಂಗಳೂರಲ್ಲಿ ಈಡಿಗ ಸಮಾವೇಶ ನಡೆಯುತ್ತಿದೆ. ಇದು ರಾಜಕೀಯ ಪ್ರೇರಿತ ಮತ್ತು ರಾಜಕೀಯ ಎಂದರು.  ಕುತಂತ್ರದಿಂದ ಸಮಾವೇಶ ಆಯೋಜನೆ ಮಾಡಲಾಗಿದೆ. ಸಿಎಂ, ಡಿಸಿಎಂ ಭಾಗಿಯಾಗುತ್ತಿದ್ದಾರೆ. ಆದರೆ ನಾನು ಈ ಸಮಾವೇಶಕ್ಕೆ ಹೋಗುತ್ತಿಲ್ಲ. ಈಡಿಗ, ಬಿಲ್ಲವ, ನಾಮಧಾರಿ ಮತ್ತು ದೀವರು ಸೇರಿ 26 ಒಳಪಂಗಡಗಳಿವೆ. ಈಡಿಗ ಸಮಾಜದಲ್ಲಿ ಸುಮಾರು 50 ಲಕ್ಷ ಜನಸಂಖ್ಯೆ ಇದೆ. ಆದರೆ ಈಡಿಗ ಸಂಘದಲ್ಲಿ ಇರುವುದು ಕೇವಲ 12 ಸಾವಿರ ಸದಸ್ಯತ್ವ. 75 ವರ್ಷಗಳ ಅಮೃತ ಮಹೋತ್ಸವ ಎಂದು ಹೇಳುತ್ತಾರೆ. ಬೆಳ್ಳಿ ಮತ್ತು ಸುವರ್ಣ ಮಹೋತ್ಸವ ಯಾವಾಗ…

Read More

ಬೆಂಗಳೂರು: ಮನೆ ಸ್ವಚ್ಛಗೊಳಿಸುತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಅಪಾರ್ಟ್‍ಮೆಂಟ್‍ನಿಂದ ಕೆಳಗೆ ಬಿದ್ದು ಮಹಿಳಾ ಟೆಕ್ಕಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಖುಷ್ಬು ಅಶೀಷ್ ತ್ರಿವೇದಿ (31) ಸಾವನ್ನಪ್ಪಿರುವ ಮಹಿಳೆ. ಈ ಘಟನೆ ಬೆಂಗಳೂರಿನ ಕಾಡುಗೋಡಿ ಸಮೀಪದ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟಮೆಂಟ್ ನಲ್ಲಿ ನಡೆದಿದೆ. https://ainlivenews.com/dengue-outbreak-record-level-cases-detected-in-last-1-month/  ತ್ರಿವೇದಿಯವರು ಎಂದಿನಂತೆ ಅಪಾರ್ಟ್ ಮೆಂಟ್‍ನ 5ನೇ ಮಹಡಿಯಲ್ಲಿರುವ ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದರು. ಅಂತೆಯೇ ಮನೆಯ ಹೊರಗಡೆ ಕ್ಲೀನ್ ಮಾಡುತ್ತಿದ್ದ ವೇಳೆ ಕಾಲು ಜಾರಿ ಆಯತಪ್ಪಿ ಕಟ್ಟಡದಿಂದ ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಗಂಭೀರ ಗಾಯಗೊಂಡು ತ್ರಿವೇದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read More

ಬೆಂಗಳೂರು: ನಮ್ಮ ತಂದೆಯಿಂದ ಬಂದಿರೋ ಬಳುವಳಿ ಒಂದೇ ಬಣ್ಣ ಹಚ್ಚೋದು, ಆಕ್ಟಿಂಗ್ ಮಾಡೋದು ಅಷ್ಟೇ. ನಮಗೆ ರಾಜಕೀಯ ಬೇಡ ಎಂದು ನಟ ಶಿವರಾಜ್ ಕುಮಾರ್ (Shivaraj Kumar) ಸ್ಪಷ್ಟಪಡಿಸಿದ್ದಾರೆ. ಲೋಕಸಭೆಗೆ ರೆಡಿಯಾಗಿ ಅಂತಾ ಡಿಕೆಶಿ (DK Shivakumar) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆ ಕೊಟ್ಟಿರುವ ಬಳುವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ನಮ್ಮದೇನಿದ್ದರೂ ಮೇಕಪ್ ಹಾಕೋದು ಸಿನಿಮಾ ಮಾಡೋದು. ರಾಜಕೀಯ ನಮಗೆ ಬೇಡ ಎಂದರು. https://ainlivenews.com/dengue-outbreak-record-level-cases-detected-in-last-1-month/ ಬಂಗಾರಪ್ಪ ಮಗಳು ನಮ್ಮ ಮನೆ ಸೊಸೆ. ಗೀತಾಳಿಗೆ ಇಂಟರೆಸ್ಟ್ ಇದ್ರೆ ಮಾಡ್ಲಿ. ಹೆಂಡತಿ ಇಷ್ಟಪಟ್ಟರೆ ಅವರಿಗೆ ಸಪೋರ್ಟ್ ಮಾಡೋದು ಗಂಡನ ಕೆಲಸ. ಗೀತಾ ಇಷ್ಟಪಟ್ರೆ ಚುನಾವಣೆಗೆ ಸಪೋರ್ಟ್ ಮಾಡ್ತೀವಿ ಎಂದು ತಿಳಿಸಿದರು. 75 ನೇ ವರ್ಷದ ಈಡಿಗ ಸಮುದಾಯದ ಈ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ವ್ಯಕ್ತಿಗಳು ಇರಬೇಕಿತ್ತು. ಆದರೆ ಇಲ್ಲ, ಆದರೆ ಅವರ ಆಶೀರ್ವಾದವಿದೆ. ನಮ್ಮ ಬೇಡಿಕೆಗಳನ್ನು ಸಿದ್ದರಾಮಯ್ಯ ಸರ್ಕಾರ ಈಡೇರಿಸುತ್ತದೆ. ನಮ್ಮ ತಂದೆಯವರು ಯಾವಾಗಲೂ ಸಿದ್ದರಾಮಯ್ಯ ಅವರಿಗೆ ನಮ್ಮ ಕಾಲದವರು ಅಂತಿದ್ದರು. ಅಂತಹ ಬಾಂಧವ್ಯ…

Read More

ತಾಯಿ ಅಗಲಿಕೆಯ ನೋವಿನ ನಡುವೆಯೇ ಇಂದು ಹಾಲು ತುಪ್ಪ ಬಿಡುವ ಶಾಸ್ತ್ರವನ್ನ ವಿನೋದ್ ನೆರವೇರಿಸಿದ್ದಾರೆ. ಕನ್ನಡದ ಹಿರಿಯ ನಟಿ, ಬೆಳ್ಳಿ ಪರದೆಯಲ್ಲಿ 6 ದಶಕಕ್ಕೂ ಹೆಚ್ಚು ಕಾಲ ಅಭಿಮಾನಿಗಳ ಮನಸ್ಸು ಗೆದ್ದಿದ್ದ ನಾಯಕಿ, ಪೋಷಕ ನಟಿಯಾಗಿ, ನೂರಾರು ಪಾತ್ರಗಳಿಗೆ ಜೀವ ತುಂಬಿದ್ದ ನಟಿ ಲೀಲಾವತಿ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಮೂರನೇ ದಿನವಾಗಿದ್ದು, ಹಾಲುತುಪ್ಪ ಕಾರ್ಯವನ್ನ ಇಂದು ಕುಟುಂಬಸ್ಥರು ನೆರವೇರಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಲೀಲಾವತಿ ಡಿ.8ರಂದು ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲ ತಿಂಗಳಿಂದ ಹಾಸಿಗೆ ಹಿಡಿದಿದ್ದ ಅವರು ಶುಕ್ರವಾರ ಸಂಜೆ ಇಹಲೋಕದ ಪಯಣ ಮುಗಿಸಿ ಚಿರನಿದ್ರೆಗೆ ಜಾರಿದ್ದರು. ನಿನ್ನೆ ನೆಲಮಂಗಲದ ಸೋಲದೇವನಹಳ್ಳಿಯ ತಮ್ಮ ನೆಚ್ಚಿನ ಕನಸಿನ ತೋಟದ ಮನೆಯ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆದಿತ್ತು. https://ainlivenews.com/dengue-outbreak-record-level-cases-detected-in-last-1-month/ ಮೂರನೇ ದಿನದ ಹಾಲು ತುಪ್ಪ ಕಾರ್ಯವನ್ನ ಇಂದು ಮದ್ಯಾಹ್ನ ಕುಟುಂಬದ ಸದಸ್ಯರು, ಅಪ್ತರು, ಮತ್ತು ಸೋಲದೇವನಹಳ್ಳಿಯ ಸುತ್ತಮುತ್ತಲಿನ ಜನರು ಸೇರಿ ಮಾಡಿದ್ದಾರೆ. ಅಗಲಿದ ತಾಯಿಗೆ ಮಗ ವಿನೋದ್…

Read More

ಬೆಂಗಳೂರು: ಸ್ಯಾಂಡಲ್‍ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ (Shivaraj Kumar) ಲೋಕಸಭೆಗೆ ನಿಲ್ಲಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಫರ್ ಕೊಟ್ಟಿದ್ದಾರೆ. ಇಂದು ಅರಮನೆ ಮೈದಾನದಲ್ಲಿ ಈಡಿಗರ (Ediga) ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿಯವರು ನಟ ಶಿವಣ್ಣಗೆ ಈ ಆಫರ್ ನೀಡಿದ್ದಾರೆ. ಪಾರ್ಲಿಮೆಂಟಿಗೆ ರೆಡಿ ಆಗಿ ಅಂತ ನಾನು ಈಗಾಗಲೇ ಶಿವಣ್ಣಗೆ ಹೇಳಿದ್ದೇನೆ. ಆಗ ಅವರು, ಇಲ್ಲ ಒಂದು 5 ಚಿತ್ರ ಒಪ್ಪಿಕೊಂಡಿದ್ದೇನೆ ಅಂದ್ರು. ಚಿತ್ರ ಯಾವಾಗಾದ್ರೂ ಮಾಡಬಹುದು. ಆದರೆ ಪಾರ್ಲಿಮೆಂಟ್‍ಗೆ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ ಅಂತಾ ಹೇಳಿದ್ದೇನೆ ಎಂದು ಡಿಕೆಶಿ (DK Shivakumar) ತಿಳಿಸಿದರು. ಲೋಕಸಭೆಯಲ್ಲಿ (Loksabha) ನಮಗೆ ಆಶೀರ್ವಾದ ಮಾಡುವ ಕೆಲಸ ನೀವು ಮಾಡಬೇಕು. ಮಂಗಳೂರು, ಉಡುಪಿ, ಉತ್ತರ ಕರ್ನಾಟಕ ಎಲ್ಲೆ ಇರ್ಲಿ ನಮ್ಮ ಅಭ್ಯರ್ಥಿ ಗೆಲ್ಲಿಸುವ ಕೆಲಸ ಮಾಡಿ ಎಂದರು.

Read More

ಬೆಂಗಳೂರು:  ಸ್ವಚ್ಛ ಭಾರತ ಅಭಿಯಾನ ಅನುಷ್ಠಾನಕ್ಕಾಗಿ 2,912 ಕೋಟಿ ರು. ಅನುದಾನ ಮೀಸಲಿಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಬಿಜೆಪಿ ಸದಸ್ಯ ಜ್ಯೋತಿ ಗಣೇಶ್‌ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಚ್ಛ ಭಾರತ ಅಭಿಯಾನದ ಮೊದಲ ಹಂತದಲ್ಲಿ 854 ಕೋಟಿ ರು., ಎರಡನೇ ಹಂತದಲ್ಲಿ 2,058 ಕೋಟಿ ರು. ಅನುದಾನ ಒದಗಿಸಲಾಗಿದೆ. 92 ಹೊಸ ನಗರ ಸ್ಥಳೀಯ ಸಂಸ್ಥೆಗಳನ್ನು ರಚಿಸಲಾಗಿದ್ದು, https://ainlivenews.com/dengue-outbreak-record-level-cases-detected-in-last-1-month/ ನಗರ ಭಾಗದಲ್ಲಿನ ತ್ಯಾಜ್ಯವನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಲು ಮೆಟೀರಿಯಲ್ ರಿಕವರಿ ಸ್ಪೆಷಾಲಿಟಿ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಲಭ್ಯವಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಎಲ್ಲಾ ಮಹಾನಗರ ಪಾಲಿಕೆಗಳಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು. ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನಕ್ಕಾಗಿಯೇ ಪ್ರತ್ಯೇಕ ಐಎಎಸ್ ಅಧಿಕಾರಿ ನಿಯೋಜಿಸಲಾಗಿದೆ ಎಂದರು.

Read More