Author: AIN Author

ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ನಟನೆಯ ಸಿನಿಮಾದಲ್ಲಿ ನಟಿಸುವಂತೆ ತಮಗೆ ಆಫರ್ ಬಂದಿದ್ದು ನಿಜ ಎಂದಿದ್ದಾರೆ ಕನ್ನಡದ ಹೆಸರಾಂತ ಶಿವರಾಜ್ ಕುಮಾರ್ (Shivaraj Kumar). ಮೊದ ಮೊದಲು ಕನ್ನಡದ ಹೊರತಾಗಿ ಬೇರೆ ಸಿನಿಮಾಗಳಲ್ಲಿ ನಟಿಸಲ್ಲ ಎಂದು ಶಪಥ ಮಾಡಿದ್ದರು ಶಿವಣ್ಣ. ಯಾವಾಗ ಒಪ್ಪಿಕೊಳ್ಳೋಕೆ ಶುರು ಮಾಡಿದರೂ, ಅಲ್ಲಿಂದ ಅನೇಕ ಕರೆಗಳು ಅವರಿಗೆ ಬಂದಿವೆ. ಅದರಲ್ಲೂ ಜೈಲರ್ ಗೆಲುವಿನ ನಂತರ ಬೇಡಿಕೆ ಇನ್ನೂ ಹೆಚ್ಚಾಗಿದೆ. ಜೈಲರ್ ಒಪ್ಪಿಕೊಳ್ಳುವಾಗಲೇ ಧನುಷ್ (Dhanush) ನಟನೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೂ ಸಹಿ ಮಾಡಿದ್ದರು ಶಿವರಾಜ್ ಕುಮಾರ್. ಇದೀಗ ರಾಮ್ ಚರಣ್ ಅವರ ಸಿನಿಮಾದಲ್ಲೂ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನೂ ಒಪ್ಪಿಗೆ ಸೂಚಿಸಿದೇ ಇದ್ದರೂ, ಆಫರ್ ಬಂದಿದ್ದು, ಮಾತುಕತೆ ನಡೆದಿದ್ದು ನಿಜ ಎಂಬುದು ಬಹಿರಂಗವಾಗಿದೆ. ಜೈಲರ್ ಸಿನಿಮಾದ ನಂತರ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.  ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ವಿವಿಧ ಬಗೆಯ ಬಂದೂಕು ಹಿಡಿದುಕೊಂಡಿರುವ…

Read More

ಗ್ಯಾಂಗ್ ಕಟ್ಟಿಕೊಂಡು ಗೆಲ್ತೀನಿ ಎಂದವರೆಲ್ಲ ಬಿಗ್​ ಬಾಸ್​ ಮನೆಯಿಂದ ಒಬ್ಬೊಬ್ಬರೇ ಔಟ್ ಆಗ್ತಿದ್ದಾರೆ. ಡಿಸೆಂಬರ್ 10ರ ಎಪಿಸೋಡ್​ನಲ್ಲಿ ಸ್ನೇಹಿತ್ ಗೌಡ ಎಲಿಮಿನೇಟ್ ಆಗಿದ್ದಾರೆ. ಇದು ವಿನಯ್ ಗೌಡ ಹಾಗೂ ನಮ್ರತಾ ಗೌಡ ಅವರಿಗೆ ಶಾಕ್ ನೀಡಿದೆ. ‘ಟಾಪ್​ 5ರಲ್ಲಿ ನಾವೇ ಇರೋದು’ ಎಂದು ಬೀಗಿದ್ದವರೆಲ್ಲ ಒಬ್ಬೊಬ್ಬರೇ ಬಿಗ್ ಬಾಸ್​ನಿಂದ ಔಟ್ ಆಗುತ್ತಿದ್ದಾರೆ. ಇನ್ನಾದರೂ ನಮ್ರತಾ ಹಾಗೂ ವಿನಯ್ ಪಾಠ ಕಲಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಆರಂಭದಲ್ಲಿ ಸಮರ್ಥರು, ಅಸಮರ್ಥರು ಎಂದು ಎರಡು ಟೀಂ ಮಾಡಲಾಗಿತ್ತು. ಸಮರ್ಥರ ಸಾಲಿನಲ್ಲಿ ವಿನಯ್, ಸ್ನೇಹಿತ್, ನಮ್ರತಾ ಮೊದಲಾದವರು ಇದ್ದರು. ಅವರ ಮಧ್ಯೆ ಫ್ರೆಂಡ್​ಶಿಪ್ ಬೆಳೆಯಿತು. ಆ ಬಳಿಕ ಬಿಗ್ ಬಾಸ್​ ವಾರದ ಟಾಸ್ಕ್​ ಆಡಲು ತಂಡದವೊಂದನ್ನು ರೂಪಿಸಿದ್ದರು. ಈ ತಂಡದಲ್ಲಿ ನಮ್ರತಾ, ವಿನಯ್, ಸ್ನೇಹಿತ್, ಈಶಾನಿ, ತುಕಾಲಿ ಸಂತೋಷ್, ರಕ್ಷಕ್ ಹಾಗೂ ನೀತು ವನಜಾಕ್ಷಿ ಇದ್ದರು. ವಿನಯ್ ಅವರು ಎಲ್ಲರನ್ನೂ ಕರೆದು ಫಿನಾಲೆ ಬಗ್ಗೆ ಮಾತನಾಡಿದ್ದರು. ‘ಸ್ಟ್ರೆಟಜಿ ಮಾಡೋಣ . ನಮ್ಮ ವಿರುದ್ಧ ತಂಡದ ಒಬ್ಬೊಬ್ಬರನ್ನು…

Read More

ಬೆಂಗಳೂರು: ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಲೆಟರ್ ಹೆಡ್ ಸೃಷ್ಟಿಸಿದ ಆರೋಪದಡಿ ದೂರು ದಾಖಲಾಗಿದೆ. ಡಾ.ವೆಂಕಟೇಶಯ್ಯ ಅವರು ನೀಡಿದ ದೂರಿನ ಮೇರೆಗೆ ಎಫ್​ಐಆರ್ ದಾಖಲಾಗಿದೆ. ನಕಲಿ ಲೆಟರ್ ಹೆಡರ್ ಸೃಷ್ಟಿಸಿ ಸಿಎಂ ಕಚೇರಿಯಿಂದ ಲೋಕೋಪಯೋಗಿ ಸಚಿವರಿಗೆ ಕಡತವೊಂದನ್ನು ಕಳುಹಿಸಲಾಗಿದೆ. ಈ ಕಡತದಲ್ಲಿ ರಾಜೇಂದ್ರ ಹೆಸರಿನಲ್ಲಿ ಸಹಿ ಹಾಕಲಾಗಿದ್ದು, ಅಂಕಿತ್ ಎಂಬಾತನಿಗೆ ಇಲಾಖೆಯಲ್ಲಿ ತಾತ್ಕಾಲಿಕ ಕೆಲಸ ನೀಡುವಂತೆ ಉಲ್ಲೇಖಿಸಲಾಗಿದೆ. ಆದರೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ರಾಜೇಂದ್ರ ಎಂಬ ವ್ಯಕ್ತಿಯೇ ಇಲ್ಲ. ಈ ಹಿನ್ನೆಲೆ ಸಿಎಂ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Read More

ಬೆಳಗಾವಿ: ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ 6 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಯತ್ನಾಳ್ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿ, ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ ಕೈಗೆತ್ತುಕೊಳ್ಳಲಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ,ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರು ಚರ್ಚೆಯಲ್ಲಿ ಭಾಗಿ ಸಾಧ್ಯತೆ ಇದೆ. ಇನ್ನೂ ಬರ ಮತ್ತು ಪರಿಹಾರ ಕುರಿತಂತೆ ಕಳೆದ ಮೂರು ದಿನಗಳಿಂದ ನಡೆದ ಚೆರ್ಚೆ ಮೇಲೆ ಕಂದಾಯ ಇಲಾಖೆ,‌ ಗ್ರಾಮೀಣಾಭಿವೃದ್ದಿ ಇಲಾಖೆ ಹಾಗೂ ಕೃಷಿ ಇಲಾಖೆ ಸಚಿವರಿಂದ ಉತ್ತರ ಸಾಧ್ಯತೆ ಇದೆ. ವಿಧಾನ ಸಭೆಯಲ್ಲಿ ಹಾಕಿರುವ ಸಾವರ್ಕರ್ ಪೋಟೋ ಮತ್ತು ನಿಯಮಾವಳಿ ಪ್ರಕಾರ ಬದಲಾವಣೆಗೆ ಕಾಂಗ್ರೆಸ್ ಕೆಲ ಶಾಸಕರ ಆಗ್ರಹ ಗಮನ ಸೆಳೆಯುವ ಸೂಚನೆ ಮೂಲಕ ಚೆರ್ಚೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಇಂದು ನಡೆಸಲು ಉದ್ದೇಶಿಸಿದ್ದ ಬಿಜೆಪಿ ಶಾಸಕಾಂಗ ಸಭೆ ರದ್ದು ಮಾಡಲಾಗಿದೆ. ಅಧಿವೇಶನ ಆರಂಭಕ್ಕು ಮುನ್ನ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ದೂರದ ಊರಿಂದ ಎಲ್ಲರು ಸಮಯಕ್ಕೆ ಸರಿಯಾಗಿ ಸಭೆಗೆ ಬರೋದು ಕಷ್ಟ.…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಕಳ್ಳನೊಬ್ಬ ಇದ್ದಾನೆ. ಲೋಡ್ ಗಟ್ಟಲೇ ಸಿಮೆಂಟ್ ಬಿಟ್ಪ ಸಿಮೆಂಟ್ ಗೆ ಮುಚ್ಚಿದ್ದ ಟಾರ್ಪಲ್ ಮಾತ್ರ ಕದ್ದು ಕಳ್ಳ ಎಸ್ಕೇಪ್ ಆಗಿರುವ ಘಟನೆ ಜರುಗಿದೆ ಗೂಡ್ಸ್ ಆಟೋದಲ್ಲಿ ಬಂದು ಖದೀಮ ಟಾರ್ಪಲ್ ಕದ್ದಿದ್ದ. ಟಾರ್ಪಲ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕದ್ದ ಟಾರ್ಪಲ್ ನಲ್ಲೇ ಗಾಡಿ ನಂಬರ್ ಫ್ಲೇಟ್ ಕಾಣದಂತೆ ಮುಚ್ಚಿ ಎಸ್ಕೇಪ್ ಆಗಿದ್ದಾನೆ. ಫಿಕಪ್ ನಲ್ಲಿ ಸಿಮೆಂಟ್ ಲೋಡ್ ಗೆ ಮುಚ್ಚಿದ್ದ ಟಾರ್ಪಲ್ ಕಳವಾಗಿದೆ. 19 ಸಾವಿರ ರೂಪಾಯಿ ಟಾರ್ಪಲ್ ಕದ್ದು ಕಳ್ಳ ಎಸ್ಕೇಪ್ ಆಗಿದ್ದಾನೆ. ನಾಗರಬಾವಿಯ ಮಾಳಗಾಳದಲ್ಲಿ ನಡೆದಿರುವ ಕಳ್ಳತನ ಎನ್ನಲಾಗಿದೆ. ಗೂಡ್ಸ್ ಆಟೋದಲ್ಲಿ ಬಂದ್ರೂ ಕಳ್ಳ ಮಾತ್ರ ಒಂದು ಮೂಟೆ ಸಿಮೆಂಟ್ ಕದ್ದಿಲ್ಲ. ಸಿಮೆಂಟ್ ಲೋಡ್ ಮಾಡಿ ಮಾಲೀಕ ಪಿಕಫ್ ನಲ್ಲಿಟ್ಟಿದ್ದ. ಬೆಳಗ್ಗೆ ಕಸ್ಟಮರ್ ಗೆ ಡೆಲಿವರಿ ಕೊಡೊದಕ್ಕೆ ಅಂತಾ ಲೋಡ್ ಮಾಡಿಟ್ಟಿದ್ದ. ಾತ್ರಿ 1 ಗಂಟೆ ಸುಮಾರಿಗೆ ಬಂದು ಟಾರ್ಪಲ್ ಮಾತ್ರ ಕಳ್ಳತನವಾಗಿದೆ.

Read More

ಭೋಪಾಲ್: ಕಾರು ಖರೀದಿಸುವಷ್ಟು ಸಾಮರ್ಥ್ಯವಿಲ್ಲ ಎಂದು ನೂತನ ಶಾಸಕರೊಬ್ಬರು ಬೈಕ್‌ನಲ್ಲಿ ಸದನಕ್ಕೆ ತೆರಳುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಹೊಸದಾಗಿ ಆಯ್ಕೆಯಾದ ಭಾರತ್ ಆದಿವಾಸಿ ಪಾರ್ಟಿ (ಬಿಎಪಿ) ಶಾಸಕ ಕಮಲೇಶ್ವರ ದೊಡಿಯಾರ್ ಅವರು ಕಾರು ಖರೀದಿಸುವಷ್ಟು ಅನುಕೂಲಸ್ಥರಲ್ಲ. ಹೀಗಾಗಿ ಬೈಕ್‌ನಲ್ಲಿ ಸದನಕ್ಕೆ ತೆರಳಿದ್ದಾರೆ. ಬಿಎಪಿ ಪಕ್ಷದ ಏಕೈಕ ಶಾಸಕ ದೊಡಿಯಾರ್‌. ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್‌ 17 ರಂದು ನಡೆದ ಚುನಾವಣೆಯಲ್ಲಿ ರತ್ನಂ ಜಿಲ್ಲೆಯ ಸೈಲಾನಾ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದರು. ಶಾಸಕರಾದ ನಂತರ ರಾಜ್ಯ ರಾಜಧಾನಿಗೆ ತಮ್ಮ ಮೊದಲ ಭೇಟಿಗೆ ಕಾರಿನ ವ್ಯವಸ್ಥೆ ಮಾಡಲು ಪ್ರಯತ್ನಿಸಿದರು. ಆದರೆ ಅದು ಸಿಗಲಿಲ್ಲ. ಅಂತಿಮವಾಗಿ ಅವರು ತಮ್ಮ ಸೋದರ ಮಾವನ ಬೈಕನ್ನು ಎರವಲು ಪಡೆದರು. ಅದರ ಮೇಲೆ “ಎಂಎಲ್ಎ” ಎಂಬ ಪದವಿರುವ ಸ್ಟಿಕರ್ ಅನ್ನು ಅಂಟಿಸಿ ಸಹವರ್ತಿಯೊಂದಿಗೆ 330 ಕಿಮೀ ಪ್ರಯಾಣ ಬೆಳೆಸಿ ಭೋಪಾಲ್‌ ತಲುಪಿದ್ದಾರೆ. ಭೋಪಾಲ್ ತಲುಪಿದ ನಂತರ ಎಂಎಲ್‌ಎ ರೆಸ್ಟ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಪ್ರಜಾಪ್ರಭುತ್ವದ ದೇಗುಲಕ್ಕೆ ಪೂಜೆ ಸಲ್ಲಿಸಲು ವಿಧಾನಸಭೆಯ ಪ್ರವೇಶ ದ್ವಾರದ…

Read More

ಬೆಂಗಳೂರು:- ನಗರದಲ್ಲಿ ಬೈಕ್ ಕಳ್ಳರ ಕಾಟ ಹೆಚ್ಚಾಗಿದೆ. ಕಳೆದ ಕೆಲ ದಿನಗಳಿಂದ ಜಯನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳರು ಆ್ಯಕ್ಟೀವ್ ಆಗಿದ್ದಾರೆ. ಕಳ್ಳರಿಂದ ಜಯನಗರ ಜನ ಬೇಸತ್ತು ಹೋಗಿದ್ದಾರೆ. ಪೊಲೀಸರಿಗೆ ದೂರು ನೀಡಿದ್ರೂ ಪ್ರಯೋಜನೆ ಇಲ್ಲ ಅಂತಾ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಯನಗರ 5ನೇ ಹಂತದಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ಕಳೆದ ಎರಡು ಮೂರು ವಾರಗಳಿಂದಲೂ ಜಯನಗರದಲ್ಲಿ ಕಳ್ಳರು ಆ್ಯಕ್ಟೀವ್ ಆಗಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕೋಲಾರ :- ಜಿಲ್ಲೆಯ ಗಡಿ ಗ್ರಾಮಗಳ ಜನರಿಗೆ 60 ಕ್ಕೂ ಹೆಚ್ಚು ಕಾಡಾನೆಗಳ ಆತಂಕ ಹೆಚ್ಚಾಗಿದೆ. ಇದಕ್ಕೆ ಕಾರಣ, ತಮಿಳುನಾಡಿನ ಹೊಸೂರು ಅರಣ್ಯದಿಂದ 60ಕ್ಕೂ ಹೆಚ್ಚು ಕಾಡಾನೆಗಳು ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಅರಣ್ಯ ಪ್ರದೇಶದತ್ತ ಮುಖ ಮಾಡಿವೆ. ಈಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಹಾಗಿದೆ. ಹೀಗಾಗಿ ಜನರು ಮನೆಯಿಂದ ಹೊರ ಬಾರದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡಿದ್ದಾರೆ. ರಾತ್ರಿ ವೇಳೆಯಲ್ಲಿ ಜನರು ಮನೆಯಿಂದ ಹೊರ ಬಾರದಂತೆ ಕಾಮಸಮುದ್ರ ಪೊಲೀಸರು, ಅರಣ್ಯ ಸಿಬ್ಬಂದಿ ಮೈಕ್‌ ಮೂಲಕ ಸೂಚನೆ ನೀಡಿದ್ದಾರೆ

Read More

ಬಾಲಿವುಡ್ (Bollywood) ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ (Karan Johar) ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಶಾರುಖ್ ಖಾನ್ (Shah Rukh Khan) ಪುತ್ರಿ ಸುಹಾನಾ ಖಾನ್ (Suhana Khan) ಕುರಿತಾಗಿ ಮಾತನಾಡಿರುವ ಕರಣ್, ‘ಮುಂದೊಂದು ದಿನ ಸುಹಾನಾ ಬಾಲಿವುಡ್ ಅನ್ನೇ ಆಳುತ್ತಾರೆ’ ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಅವರು ತಮ್ಮದೇ ಆದ ಕಾರಣಗಳನ್ನೂ ನೀಡಿದ್ದಾರೆ. ಸ್ಟಾರ್ಸ್ ಕಿಡ್ಸ್ ಕಂಡರೆ ಕರಣ್ ಗೆ ಎಲ್ಲಿಲ್ಲದ ಅಭಿಮಾನ. ಅದರಲ್ಲೂ ತಮ್ಮ ಬ್ಯಾನರ್ ಮೂಲಕ ಸಾಕಷ್ಟು ಕಲಾವಿದರನ್ನು ಇವರು ಪರಿಚಯ ಮಾಡಿಕೊಟ್ಟಿದ್ದಾರೆ. ಸುಹಾನಾಗಾಗಿ ಪ್ರಾಜೆಕ್ಟ್ ವೊಂದನ್ನು ರೆಡಿ ಕೂಡ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುಹಾನಾ ಬಗ್ಗೆ ಕರಣ್ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಸುಹಾನಾ ಖಾನ್ ಇದೀಗ ತಂದೆಯಂತೆಯೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಅವರು ವೆಬ್ ಸೀರಿಸ್ ಒಂದಕ್ಕೆ ಬಣ್ಣ ಹಚ್ಚಿದ್ದು,  ಈ ವೆಬ್ ಸೀರಿಸ್ ಶೂಟಿಂಗ್ ಊಟಿಯ ವಿವಿಧ ಸ್ಥಳಗಳಲ್ಲಿ ನಡೆದಿದೆ. ತಮಗೆ ಬೋರು ಆಗಬಾರದು ಎಂದೇ ಫ್ರೆಂಡ್ಸ್ ಅನ್ನೂ…

Read More

ರಾಯಚೂರು: ಹಾಸ್ಟೆಲ್‌ನಲ್ಲಿ ಊಟ ಸೇವಿಸಿದ ಬಳಿಕ 15 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಾಹ್ನ ಪಲಾವ್ ಸೇವಿಸಿದ್ದ ವಿದ್ಯಾರ್ಥಿನಿಯರಿಗೆ ಸಂಜೆ ಏಕಾಏಕಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಹೀಗಾಗಿ ಅಸ್ವಸ್ಥಗೊಂಡ 15 ವಿದ್ಯಾರ್ಥಿಯರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಗಂಭೀರವಾಗಿದ್ದ ಒಬ್ಬಳು ವಿದ್ಯಾರ್ಥಿಯನ್ನು ರಾಯಚೂರಿನ ರಿಮ್ಸ್‌ಗೆ ರವಾನಿಸಲಾಗಿದೆ ಘಟನೆ ನಡೆದ ಬಳಿಕ ಹಾಸ್ಟೆಲ್‌ಗೆ ಬಾರದ ವಾರ್ಡನ್ ಪಾರ್ವತಿ ವಿರುದ್ಧ ವಿದ್ಯಾರ್ಥಿನಿಯರು ಹಾಗೂ ಪಾಲಕರು ಆಕ್ರೋಶ ಹೊರಹಾಕಿದ್ದಾರೆ.

Read More