ಬಾಲಿವುಡ್ (Bollywood) ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹಾರ್ (Karan Johar) ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಶಾರುಖ್ ಖಾನ್ (Shah Rukh Khan) ಪುತ್ರಿ ಸುಹಾನಾ ಖಾನ್ (Suhana Khan) ಕುರಿತಾಗಿ ಮಾತನಾಡಿರುವ ಕರಣ್, ‘ಮುಂದೊಂದು ದಿನ ಸುಹಾನಾ ಬಾಲಿವುಡ್ ಅನ್ನೇ ಆಳುತ್ತಾರೆ’ ಎಂದು ಹೇಳಿಕೊಂಡಿದ್ದಾರೆ. ಅದಕ್ಕೆ ಅವರು ತಮ್ಮದೇ ಆದ ಕಾರಣಗಳನ್ನೂ ನೀಡಿದ್ದಾರೆ.
ಸ್ಟಾರ್ಸ್ ಕಿಡ್ಸ್ ಕಂಡರೆ ಕರಣ್ ಗೆ ಎಲ್ಲಿಲ್ಲದ ಅಭಿಮಾನ. ಅದರಲ್ಲೂ ತಮ್ಮ ಬ್ಯಾನರ್ ಮೂಲಕ ಸಾಕಷ್ಟು ಕಲಾವಿದರನ್ನು ಇವರು ಪರಿಚಯ ಮಾಡಿಕೊಟ್ಟಿದ್ದಾರೆ. ಸುಹಾನಾಗಾಗಿ ಪ್ರಾಜೆಕ್ಟ್ ವೊಂದನ್ನು ರೆಡಿ ಕೂಡ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುಹಾನಾ ಬಗ್ಗೆ ಕರಣ್ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ಸುಹಾನಾ ಖಾನ್ ಇದೀಗ ತಂದೆಯಂತೆಯೇ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಅವರು ವೆಬ್ ಸೀರಿಸ್ ಒಂದಕ್ಕೆ ಬಣ್ಣ ಹಚ್ಚಿದ್ದು,
ಈ ವೆಬ್ ಸೀರಿಸ್ ಶೂಟಿಂಗ್ ಊಟಿಯ ವಿವಿಧ ಸ್ಥಳಗಳಲ್ಲಿ ನಡೆದಿದೆ. ತಮಗೆ ಬೋರು ಆಗಬಾರದು ಎಂದೇ ಫ್ರೆಂಡ್ಸ್ ಅನ್ನೂ ಜೊತೆಗೆ ಅವರು ಕರೆದುಕೊಂಡು ಹೋಗಿದ್ದರು. ದಿ ಆರ್ಚೀಸ್ ಹೆಸರಿನಲ್ಲಿ ತಯಾರಾಗುತ್ತಿರುವ ಈ ವೆಬ್ ಸೀರಿಸ್ ನಲ್ಲಿ ಸುಹಾನಾ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಬಹುತೇಕ ದೃಶ್ಯಗಳಲ್ಲಿ ಇವರೇ ಇರುವುದರಿಂದ ಕಷ್ಟವಾದರೂ ಇಷ್ಟಪಟ್ಟು ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರಂತೆ. ಶೂಟಿಂಗ್ ವೇಳೆಯಲ್ಲಿ ಪದೇ ಪದೇ ಅವರು ತಂದೆಯನ್ನು ನೆನಪಿಸಿಕೊಳ್ಳುತ್ತಿದ್ದಾರಂತೆ.