Author: AIN Author

ಬೆಳಗಾವಿ:- ವಕೀಲರ ಮೇಲೆ ಹಲ್ಲೆ ಮಾಡಿದವರಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸುವ 2023ನೇ ಸಾಲಿನ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಹೆಚ್ ಕೆ ಪಾಟೀಲ್ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ವಕೀಲರ ಮೇಲೆ ಹಲ್ಲೆ ತಡೆಯುವ ನಿಟ್ಟಿನಲ್ಲಿ ಈ ವಿಧೇಯಕ ತರಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿಗೆ 6 ತಿಂಗಳಿಂದ 3 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ.ವರೆಗೆ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ. ಪೊಲೀಸರು ಯಾವೊಬ್ಬ ವಕೀಲರನ್ನು ಬಂಧಿಸಿದರೆ 24 ಗಂಟೆಯೊಳಗಾಗಿ ವಕೀಲರ ಸಂಘಕ್ಕೆ ಮಾಹಿತಿ ನೀಡಬೇಕು. ಬೆದರಿಕೆ, ಕೆಲಸಕ್ಕೆ ಅಡ್ಡಿ, ಕಿರುಕುಳ ನೀಡಿದರೆ ಶಿಕ್ಷೆ ಇದೆ. ದೇಶ- ವಿದೇಶದಲ್ಲಿ ಮುಕ್ತವಾಗಿ ಪ್ರಯಾಣಿಸಲು ಹಾಗೂ ಕಕ್ಷಿದಾರರೊಂದಿಗೆ ಸಮಾಲೋಚಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಈ ಹಿಂದಿನ ಬಿಜೆಪಿ ಸರ್ಕಾರಕ್ಕೆ ಕರ್ನಾಟಕ ವಕೀಲರ ಸಂಘ ಮನವಿ ಮಾಡಿತ್ತು.…

Read More

ಚಳಿಗಾಲದಲ್ಲಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಸಾಮಾನ್ಯ. ಚಳಿಗಾಲದ ತಣ್ಣನೆಯ ಗಾಳಿಯು ಶ್ವಾಸನಾಳವನ್ನು ಕೆರಳಿಸುತ್ತದೆ. ಇದರಿಂದ ಕೆಲವು ಜನರಿಗೆ ಉಸಿರಾಡಲು ಸಹ ಕಷ್ಟವಾಗಿ, ನ್ಯುಮೋನಿಯಾ ಅಪಾಯವನ್ನು ಹೆಚ್ಚಿಸುತ್ತದೆ. ತಜ್ಞರ ಪ್ರಕಾರ, ಅನೇಕ ಜನರು ಅದರಲ್ಲೂ ವಿಶೇಷವಾಗಿ ವಯಸ್ಸಾದವರು ಚಳಿಗಾಲದ ತಿಂಗಳುಗಳಲ್ಲಿ ಹೆಚ್ಚಿನ ಸಮಯವನ್ನು ಮನೆಯೊಳಗೆ ಕಳೆಯುತ್ತಾರೆ. ಇದು ಉಸಿರಾಟದ ಸೋಂಕುಗಳನ್ನು ಹರಡುವ ಅಪಾಯವನ್ನು ಹೆಚ್ಚಿಸುತ್ತದೆ. ಶೀತ ಪರಿಸ್ಥಿತಿಗಳು ವೈರಸ್‌ಗಳು ಗಾಳಿಯಲ್ಲಿ ದೀರ್ಘಕಾಲ ಉಳಿಯಲು ಅನುವು ಮಾಡಿಕೊಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಹೀಗಾಗಿ, ಚಳಿಗಾಲದಲ್ಲಿ ನಿಮ್ಮ ಶ್ವಾಸಕೋಶಗಳನ್ನು ರಕ್ಷಿಸಲು ಉತ್ತಮ ಮಾರ್ಗಗಳು ಯಾವುವು? ಎಂಬುದರ ಮಾಹಿತಿ ಇಲ್ಲಿದೆ. ದಿನವೂ ನಿಯಮಿತವಾಗಿ ನಿಮ್ಮ ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆದುಕೊಳ್ಳುವುದು ಅತ್ಯಗತ್ಯ. ಇದರಿಂದ ಕೈಗಳ ಮೂಲಕ ಮೂಗಿಗೆ ಮತ್ತು ಬಾಯಿಗೆ ಸೋಂಕು ಹರಡುವುದು ಕಡಿಮೆಯಾಗುತ್ತದೆ. ಮಧುಮೇಹ, ಮತ್ತು ಹೃದಯ ಸಮಸ್ಯೆಗಳಂತಹ ದೀರ್ಘಕಾಲದ ಆರೋಗ್ಯ ತೊಂದರೆಗಳಿಗೆ ಸರಿಯಾದ ಚಿಕಿತ್ಸೆ ಪಡೆಯುವುದು ಮತ್ತು ನ್ಯುಮೋನಿಯಾ ಹರಡುವ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಬಹಳ…

Read More

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಮುಂದುವರಿಯುತ್ತಿದೆ. ಚಿನ್ನದ ಬೆಲೆ ಗ್ರಾಂಗೆ 20 ರೂ ಇಳಿದರೆ, ಬೆಳ್ಳಿ ಬೆಲೆ ಗ್ರಾಮ್​ಗೆ 20 ಪೈಸೆಯಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 56,950 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 62,130 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,580 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,950 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 7,380 ರುಪಾಯಿಯಲ್ಲಿ ಇದೆ. ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 56,950 ರೂ, ಚೆನ್ನೈ: 57,500 ರೂ, ಮುಂಬೈ: 56,950 ರೂ, ದೆಹಲಿ: 57,050 ರೂ, ಕೋಲ್ಕತಾ: 56,950 ರೂ, ಕೇರಳ: 56,950 ರೂ, ಅಹ್ಮದಾಬಾದ್: 57,000 ರೂ, ಜೈಪುರ್: 57,100 ರೂ, ಲಕ್ನೋ: 57,100 ರೂ,…

Read More

ಬೆಂಗಳೂರು:- ಇಂದಿನಿಂದ ರಾಜ್ಯದ ದಕ್ಷಿಣ ಒಳನಡಿನಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಇಂದಿನಿಂದ ಕೆಲವು ದಿನಗಳ ಕಾಲ ತಂಪು ಗಾಳಿ, ಮೋಡ ಕವಿದ ವಾತಾವರಣ ಉಂಟಾಗಲಿದೆ. ಉಳಿದಂತೆ ಇಲ್ಲಿ ಒಂದೆರಡು ಕಡೆ ಮಳೆಯಾಗುವ ಮುನ್ಸೂಚನೆ ಇದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ,ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಮಳೆ ಮುನ್ಸೂಚನೆ ಇಲ್ಲ. ಇಲ್ಲಿ ಅಧಿಕ ತಾಪಮಾನ ಉಂಟಾಗಲಿದ್ದು, ಶುಷ್ಕ ವಾತಾವರಣ ಮುಂದುವರಿಯಲಿದೆ. ಕೆಲವು ದಿನಗಳಲ್ಲಿ ಬೆಳಗ್ಗೆ ಮತ್ತು ತಡರಾತ್ರಿ ಚಳಿ ವಾತಾವರಣ ಇರಬಹುದು ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ

Read More

ಚಾಮರಾಜನಗರ:- ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರಬೆಟ್ಟದಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಪುನಸ್ಕಾರಗಳು ವಿಜೃಂಭಣೆಯಿಂದ ನಡೆದವು. ಕಡೆಯ ಕಾರ್ತಿಕ ಮಾಧ ಪ್ರಯುಕ್ತ ಸೋಮವಾರ ಮಾದಪ್ಪನ ದೇವಾಲಯದ ಆವರಣದಲ್ಲಿ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಮಾದಪ್ಪನ ಮೂರ್ತಿಗೆ ಹೂವಿನ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕಡೆಯ ಕಾರ್ತಿಕ ಮಾಸದ ಪ್ರಯುಕ್ತ ಎಲ್ಲೇಲ್ಲೂ ಜನಸಾಗರವೇ ಹರಿಯಿತು. ಬೆಟ್ಟದ ತುಂಬೆಲ್ಲಾ ಭಕ್ತರ ಉಘೇ ಉಘೆ ಮಾದಪ್ಪ ಎಂಬ ಝೇಂಕಾರ ನಾದ ಮೊಳಗಿತ್ತು. ಭಕ್ತ ಸಾಗರದಿಂದ ಪವಾಡ ಪುರುಷ ಮಾದಪ್ಪನ ಬೆಟ್ಟ ಮುಳುಗಿದೆ. ಮಲೆಮಹದೇಶ್ವರಬೆಟ್ಟ ಅಭಿವೃದ್ದಿ ಪ್ರಾಧಿಕಾರದಿಂದ ಭಕ್ತರಿಗೆ ಸಕಲ ಸೌಲಭ್ಯ ಹಮ್ಮಿಕೊಳ್ಳಲಾಗಿತ್ತು ಎನ್ನಲಾಗಿದೆ.

Read More

ಚಾಮರಾಜನಗರ:- ಮನೆ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್​ ಸ್ಕೂಟರ್ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ಚಾಮರಾಜನಗರದ ಮುಬಾರಕ್ ಮೊಹಲ್ಲಾದಲ್ಲಿ ತಡರಾತ್ರಿ ನಡೆದಿದೆ. ಮುಬಾರಕ್ ಮೊಹಲ್ಲಾ ನಿವಾಸಿ ಅಸಾದುಲ್ಲಾ ಎಂಬವರು ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಇ-ಸ್ಕೂಟರ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ವ್ಯಾಪಿಸಿ ಹೊತ್ತಿ ಉರಿದಿದ್ದು, ಸ್ಥಳೀಯರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ ಚಾರ್ಜ್​ ಮಾಡಿ‌ ನಿಲ್ಲಿಸಿದ್ದ ಇ-ಸ್ಕೂಟರ್​ವೊಂದು ಹೊತ್ತಿ ಉರಿದು ಆತಂಕ ಸೃಷ್ಟಿಸಿತ್ತು. ಮುಬಾರಕ್ ಮೊಹಲ್ಲಾದಲ್ಲಿ ನಡೆದ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Read More

ಬೆಂಗಳೂರು:- ಹಿಂದೂಗಳನ್ನು ಅಡಿಯಾಳುಗಳೆಂದ ಜಮೀರ್ ರಾಜೀನಾಮೆ ನೀಡಲಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹಿಸಿದ್ದಾರೆ. ಸಚಿವ ಜಮೀರ್‌ ಅಹ್ಮದ್‌ ಅವರು ಹೈದರಾಬಾದ್‌ನ ಮುಸ್ಲಿಮರೇ ಸೇರಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಆಡಿದ ಮಾತಿನ ಅರ್ಥ ʻʻಹಿಂದುಗಳು ಮುಸ್ಲಿಮರ ಅಡಿಯಾಳುಗಳುʼ ಎಂದೇ ಆಗಿದೆ. ಹೀಗೆ ಸ್ಪೀಕರ್‌ ಸ್ಥಾನವನ್ನು ಮುಂದಿಟ್ಟುಕೊಂಡು ಅವರು ಹಿಂದು ಮತ್ತು ಮುಸ್ಲಿಮರ ನಡುವೆ ದ್ವೇಷ ಹುಟ್ಟಿಸುವ ಕೆಲಸ ಮಾಡಿದ್ದಾರೆ, ಇದನ್ನು ಕಾಂಗ್ರೆಸ್‌ನವರು ಸಮರ್ಥಿಸುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ಹಿಂದು ದ್ವೇಷ ಪ್ರಕಟಿಸಿದ ಜಮೀರ್‌ ಅಹಮದ್‌ ಖಾನ್‌ ಅವರನ್ನು ವಜಾಗೊಳಿಸಬೇಕು, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಸದಸ್ಯರು ಸೋಮವಾರ ಬೆಳಗ್ಗೆ ವಿಧಾನಸಭೆಯಲ್ಲಿ ಗದ್ದಲವೆಬ್ಬಿಸಿದರು. ಜಮೀರ್‌ ಅಹಮದ್‌ ಖಾನ್‌ ಪ್ರಶ್ನೆಗೆ ಉತ್ತರ ನೀಡಲು ನಿಂತಾಗ ಆಕ್ಷೇಪಿಸಿದರು. ಬಿಜೆಪಿ ಗದ್ದಲದಿಂದಾಗಿ ಸ್ಪೀಕರ್‌ ಖಾದರ್‌ ಅವರು ಸಂಧಾನ ಸಭೆ ನಡೆಸಿದರೂ ಫಲ ದೊರೆಯಲಿಲ್ಲ. ಬಳಿಕವೂ ಪ್ರತಿಭಟನೆ, ಗದ್ದಲ ಮುಂದುವರಿದಿತ್ತು. ಅದರ ನಡುವೆಯೇ ಸದನದ ಕಲಾಪ, ವಿಧೇಯಕಗಳ ಮಂಡನೆ ನಡೆದಿದೆ…

Read More

ಬೆಂಗಳೂರು:- ಹಿಂದು ʼಅಶ್ಲೀಲʼ ಪದ ಹೇಳಿಕೆ ನೀಡಿದ ಸಚಿವ ಸತೀಶ್ ಜಾರಕಿಹೊಳಿಗೆ ಕೋರ್ಟ್‌ ನೋಟಿಸ್ ನೀಡಿದೆ. ವಕೀಲ‌ ದಿಲೀಪ್ ಕುಮಾರ್ ಎಂಬುವವರು ದೂರು ನೀಡಿದ್ದರಿಂದ ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಿಂದ ವಿಚಾರಣಗೆ ಹಾಜರಾಗುವಂತೆ ಸತೀಶ್‌ ಜಾರಕಿಹೊಳಿಗೆ ನೋಟಿಸ್‌ ನೀಡಲಾಗಿದೆ. 2022ರ ನವೆಂಬರ್‌ 7ರಂದು ಕಾರ್ಯಕ್ರಮವೊಂದರಲ್ಲಿ ಹಿಂದು ಪದಕ್ಕೆ ಆಶ್ಲೀಲ ಅರ್ಥವಿದೆ ಎಂದು ವಿವಾದಿತ ಹೇಳಿಕೆ ನೀಡಿದ್ದರು. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರ್ಟ್‌ಗೆ ವಕೀಲ‌ ದೂರು ನೀಡಿದ್ದಾರೆ. ಹಿಂದು ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಚಿವ ಜಾರಕಿಹೊಳಿ ವಿರುದ್ಧ ಹಿಂದು ಸಂಘಟನೆಗಳು, ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರಹಾಕಿದ್ದರು. ನಂತರ ಸಚಿವರು ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು. ಹಲವು ತಿಂಗಳ ಬಳಿಕ ಪ್ರಕರಣದಲ್ಲಿ ಸಚಿವರ ವಿರುದ್ಧ ದೂರು ದಾಖಲಾಗಿದೆ.

Read More

#AINlivenews #ainlivenews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines ಬೆಂಗಳೂರು #nammabengaluru #bengaluru #karnataka #bangalore #kannada #bescom #bda #bbmp #breakingnews # namma Metro #bmtc #KSRTC  #crimenews #bignews #karnatakatody #instagram #kannadamemes #photography #bengalurulive #siddaramaiah #DKShivakumar  #DK Shivkumaŗ  #Hd Kumarswamy #bengalurudiaries #bengaluruadda #bengalurunews ಜಿಲ್ಲೆ #karnataka #kannada #india #bangalore #sandalwood #mysore #kerala #bengaluru #yash #karnatakatourism #photography #kannadaactress #mumbai #instagram #dboss #kicchasudeep #mandya #udupi #banglore #love #darshan #tamilnadu #mangalore #official #delhi #kannadamovies #hubli #kannadamusically #sandalwoodactress #mysuru #hubballi #hubli ರಾಷ್ಟ್ರೀಯ #india #instagram #love #photography #instagood #mumbai #kerala #bhfyp #follow #nature #indian #travel #likeforlikes #delhi #like #fashion #photooftheday…

Read More

ಬೆಂಗಳೂರು:- ಬೆಂಗಳೂರಿನ ಜೆಜೆ ನಗರದ ನಾಲ್ಕನೆ ಕ್ರಾಸ್‌ನಲ್ಲಿ ಪತ್ನಿ ತನ್ನನ್ನು ದೂರ ಮಾಡಿದ್ದರಿಂದ ಡಿಪ್ರೆಷನ್‌ಗೆ ಒಳಗಾದ ವ್ಯಕ್ತಿಯೊಬ್ಬ ಆಕೆಯ ಸಂಬಂಧಿ ಮಹಿಳೆಯನ್ನು ಕೊಲೆ ಮಾಡಿದ್ದಾನೆ. ಪರ್ವಿನ್ ತಾಜ್ ಹಲ್ಲೆಗೀಡಾಗಿ ಮೃತಪಟ್ಟ ಮಹಿಳೆ‌. ಮಹಮ್ಮದ್ ಜುನೈದ್ ಎಂಬಾತನಿಂದ ಕೊಲೆ‌ ನಡೆದಿದೆ. ಆರೋಪಿ ಮತ್ತು ಮೃತ ಮಹಿಳೆ ಸಂಬಂಧಿಗಳಾಗಿದ್ದಾರೆ. ಜುನೈದ್ ಹಾಗೂ ಆತನ ಪತ್ನಿ ಜಗಳವಾಡಿಕೊಂಡಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಲಾಗಿತ್ತು. ಇದಾದ ಮೇಲೆ ಜುನೈದ್‌ ಪತ್ನಿಯಿಂದ ದೂರಾಗಿದ್ದ. ಪತ್ನಿಯಿಂದ ದೂರವಾಗಿ ಡಿಪ್ರೆಶನ್‌ಗೆ ಒಳಗಾಗಿದ್ದ. ಪತ್ನಿ ದೂರವಾದುದರಿಂದ ಮಾನಸಿಕವಾಗಿ ನೊಂದಿದ್ದ. ಈ ವೇಳೆ ಆತ ಪರ್ವಿನ್ ತಾಜ್‌ಗೆ ಹತ್ತಿರವಾಗಿದ್ದ. ಪರ್ವಿನ್ ತಾಜ್ ಆರೋಪಿಯ ಪತ್ನಿಯ ಸಂಬಂಧಿಯಾಗಿದ್ದಳು. ಆದರೆ ಇತ್ತೀಚೆಗೆ ಪರ್ವಿನ್ ಸಹ ಜುನೈದ್‌ನನ್ನು ದೂರವಿಟ್ಟಿದ್ದಳು. ಈ ವಿಚಾರಕ್ಕೆ ಕೋಪಗೊಂಡಿದ್ದ ಆರೋಪಿ ಜುನೈದ್, ಚಾಕು ಸಹಿತ ನೇರವಾಗಿ ಪರ್ವಿನ್ ಮನೆಗೆ ಹೋಗಿದ್ದ. ಪರ್ವಿನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಪರ್ವಿನ್‌ ಮೃತ ದೇಹವನ್ನು…

Read More