Author: AIN Author

ಯುವಕರು ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಮಾರುತಿ ಸುಜುಕಿ ಸ್ವಿಫ್ಟ್ ಈಗ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್‌ಮೆಂಟ್‌ನಲ್ಲಿಯೂ ಲಭ್ಯವಿದೆ. ಆರ್ಮಿ ಕ್ಯಾಂಟೀನ್ ರಕ್ಷಣಾ ಸಿಬ್ಬಂದಿಗೆ ಸಬ್ಸಿಡಿ ದರದಲ್ಲಿ ಸರಕುಗಳನ್ನು ನೀಡುತ್ತದೆ. ಇದರಲ್ಲಿ ಗೃಹೋಪಯೋಗಿ ವಸ್ತುಗಳು, ಮದ್ಯ, ವೈದ್ಯಕೀಯ ವಸ್ತುಗಳು ಮತ್ತು ಹೆಚ್ಚಿನವನ್ನು ಖರೀದಿಸಬಹುದು. ಆರ್ಮಿ ಕ್ಯಾಂಟೀನ್ ಮೂಲಕ ಸಬ್ಸಿಡಿ ದರದಲ್ಲಿ ಕಾರನ್ನು ಸಹ ಖರೀದಿಸಬಹುದು. ದೇಶಾದ್ಯಂತ ಸುಮಾರು 34 ಸಿಎಸ್‌ಡಿ ಡಿಪೋಗಳಿವೆ. ಅರ್ಹ ವ್ಯಕ್ತಿಯು ಹತ್ತಿರದ ಔಟ್‌ಲೆಟ್ ಮೂಲಕ ವಾಹನ ಖರೀದಿಸಬಹುದು. 2023 ರಲ್ಲಿ CSD ಕಾರ್ ಅರ್ಹತೆ: ಭಾರತ ಸರ್ಕಾರದಿಂದ ವೇತನ ಪಡೆದು ರಕ್ಷಣಾ ವಲಯದಲ್ಲಿ ಉದ್ಯೋಗದಲ್ಲಿರುವ ಎಲ್ಲರೂ CSD ಮೂಲಕ ಕಾರುಗಳನ್ನು ಖರೀದಿಸಬಹುದು. ಅಲ್ಲದೆ, ರಕ್ಷಣಾ ಇಲಾಖೆಯ ಎಲ್ಲಾ ನಿಯೋಜಿತ ಅಧಿಕಾರಿಗಳು ಮತ್ತು ಮಾಜಿ ಸೈನಿಕರು ಕ್ಯಾಂಟೀನ್ ಮೂಲಕ ಕಾರನ್ನು ಖರೀದಿಸಬಹುದು. ಇದಲ್ಲದೆ, ಅವರು ಖಾಸಗಿ ಬ್ಯಾಂಕ್‌ಗಳು ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ವಾಹನಕ್ಕೆ ಹಣಕಾಸು ಒದಗಿಸಬಹುದು. ರೂ. 5.13 ಲಕ್ಷಕ್ಕೆ ಸ್ವಿಫ್ಟ್ ಕಾರು: Maruti…

Read More

ಸ್ಮಾರ್ಟ್‌ ಫೋನ್‌ ಎಂಬುದು ಈಗ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂಬುದು ಸತ್ಯ. ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ವೈಶಿಷ್ಟ್ಯಗಳುಳ್ಳ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. 2023ರ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಮೇ-ಜೂನ್) ಜಾಗತಿಕ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ. 8 ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ ಶೇ. 5 ರಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಪ್ರೀಮಿಯಂ ವಿಭಾಗ ತನ್ನ ಬೇಡಿಕೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿದ್ದು, ವಿಭಾಗದ ಪಾಲು ತ್ರೈಮಾಸಿಕದಲ್ಲಿ ದಾಖಲೆಯ ಎತ್ತರದಲ್ಲಿದೆ. ಈ ವರದಿಯ ಪ್ರಕಾರ ಪ್ರಸ್ತುತ ವಿಶ್ವದ ದೊಡ್ಡ ಸ್ಮಾರ್ಟ್‌ಫೋನ್‌ ಕಂಪನಿಗಳ ಲಿಸ್ಟ್ ಇಲ್ಲಿದೆ! ಸ್ಯಾಮ್‌ಸಂಗ್ : ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಅಗ್ರಸ್ಥಾನದಲ್ಲಿದೆ. ಕಂಪನಿಯು ಶೇ 22ರಷ್ಟು ಅತೀ ದೊಡ್ಡ ಮಾರುಕಟ್ಟೆಯ ಪಾಲನ್ನು ಹೊಂದಿದೆ ಆಪಲ್ : ಮತ್ತೊಂದು ಜನಪ್ರಿಯ ಸಂಸ್ಥೆ ಆಪಲ್ ಎರಡನೇ ಸ್ಥಾನದಲ್ಲಿದೆ. ಇದರ ಜತೆಗೆ ಆಪಲ್‌ ಭಾರತದಲ್ಲಿ ಶೇಕಡಾ 50ರಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಸಾಧಿಸಿದೆ. Xiaomi : ಇದು ಜಾಗತಿಕವಾಗಿ ಮೂರನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ಹೊರಹೊಮ್ಮಿದೆ.…

Read More

ಹಾಸನ: ಜಮ್ಮು-ಕಾಶ್ಮೀರಕ್ಕೆ ಆರ್ಟಿಕಲ್ 370 (Jammu Kashmir Article 370) ಅಡಿ ನೀಡಲಾಗಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ನಿರ್ಧಾರವನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Deve Gowda) ಸ್ವಾಗತಿಸಿದ್ದಾರೆ. ಹೊಳೆನರಸೀಪುರ ತಾಲೂಕಿನಲ್ಲಿ ಬಳಿಕ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಆರ್ಟಿಕಲ್ 370 ಮೂಲಕ ಕಾಶ್ಮೀರಕ್ಕೆ ವಿಶೇಷ ಸವಲತ್ತು ಕಲ್ಪಿಸಲಾಗಿತ್ತು. ಅದನ್ನು ಲೋಕಸಭೆ, ರಾಜ್ಯಸಭೆಯಲ್ಲಿ ತಿದ್ದುಪಡಿ ಮಾಡುವ ಮುಖೇನಾ ಆ ಸವಲತ್ತು ರದ್ದು ಮಾಡಿದ್ದರು. ಇದರಿಂದ ಬೇರೆ ರಾಜ್ಯಗಳಿಗೂ, ಅನ್ಯಾಯ, ಅನಕೂಲವಾಗುತ್ತೋ ಅದು ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತೆ ಎಂದು ನುಡಿದರು. https://ainlivenews.com/samantha-gave-a-bold-look-like-never-before-in-jeans-see-photos/ ಐದು ಜನ ನ್ಯಾಯಾಧೀಶರು ಸುಪ್ರೀಂಕೋರ್ಟ್‍ನಲ್ಲಿ (Supreme Court) ತೀರ್ಪು ಕೊಟ್ಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಇಂಡಿಯಾ (I.N.D.I.A) ಒಂದು ಕಡೆ, ಇನ್ನೊಂದು ಕಡೆ ಎನ್‍ಡಿಎ ಇದೆ. ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಈ ರಾಷ್ಟ್ರದ ಮಹಾಜನತೆ ಇಂಡಿಯಾ ಪರ ತೀರ್ಪು…

Read More

ಈ ಚಳಿಗಾಲದಲ್ಲಿ ಜ್ವರ, ನೆಗಡಿ, ಗಂಟಲು ಕೆರೆತ ಹೆಚ್ಚಿನವರಲ್ಲಿ ಸರ್ವೇಸಾಮಾನ್ಯ. ಹವಾಮಾನ ಬದಲಾವಣೆ ವೇಳಗೆ ಆರೋಗ್ಯದಲ್ಲಾಗುವ ಏರುಪೇರು ಕಿರಿಕಿರಿಯುಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ನೀವು ಬೆಚ್ಚಗಿನ ಗಿಡಮೂಲಿಕೆಗಳ ಚಹಾ ಕುಡಿಯುವುದು ಉತ್ತಮ. ನಾವಿಂದು ಪುದೀನಾ ಚಹಾ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ಮೆಂಥಾಲ್ ಒಳಗೊಂಡ ಪುದೀನಾ ನೆಗಡಿ, ಗಂಟಲು ನೋವನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಬೆಚ್ಚಗಿನ ಪುದೀನಾ ಚಹಾ ಸೇವನೆ ಈ ಚಳಿಗಾಲದಲ್ಲಿ ಆರಾಮದಾಯಕ ಅನುಭವ ನೀಡುತ್ತದೆ. ಬೇಕಾಗುವ ಪದಾರ್ಥಗಳು: ನೀರು – 3 ಕಪ್ ದಾಲ್ಚಿನ್ನಿ ಚಕ್ಕೆ – 1 ಇಂಚು ಲವಂಗ – 2 ನಿಂಬೆಹಣ್ಣು – 1 ತಾಜಾ ಪುದೀನಾ ಎಲೆಗಳು – 1 ಕಪ್ ಜೇನು ತುಪ್ಪ – ಸ್ವಾದಕ್ಕನುಸಾರ (ಐಚ್ಛಿಕ) ಮಾಡುವ ವಿಧಾನ: * ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಕುದಿಸಿಕೊಳ್ಳಿ. * ಉರಿಯನ್ನು ಕಡಿಮೆ ಮಾಡಿ, ಅದಕ್ಕೆ ದಾಲ್ಚಿನ್ನಿ, ಲವಂಗ ಸೇರಿಸಿ 1 ನಿಮಿಷ ಕುದಿಸಿಕೊಳ್ಳಿ. * ನಂತರ ಪುದೀನಾ ಎಲೆಗಳನ್ನು ಸೇರಿಸಿ 1-2 ನಿಮಿಷ…

Read More

ಬೆಳಗಾವಿ: ಸ್ಪೀಕರ್ ಸ್ಥಾನದ ಬಗ್ಗೆ ಸಚಿವ ಜಮೀರ್ ಅಹ್ಮದ್ ಕೊಟ್ಟ ಹೇಳಿಕೆ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ.ಸಂವಿಧಾನಕ್ಕೆ ಜಮೀರ್ ಅಗೌರವ ತೋರಿಸಿದ್ದು,ಸಂಪುಟದಿಂದ ವಜಾ ಮಾಡುವಂತೆ,ಇಂದು ಇಡೀ‌ ದಿನ ಸದನದೊಳಗೆ ಬಿಜೆಪಿ- ಜೆಡಿಎಸ್ ಪ್ರತಿಭಟನೆ ನಡೆಸ್ತು‌.ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ಬಿಜೆಪಿಗೆ ಜಮೀರ್ ಕೌಂಟರ್ ಕೊಟ್ರು. ಬೆಳಗಾವಿಯ ಚಳಿಗಾಲದ ಬ್ಯಾಟಲ್ ನ ಮೊದಲ ವಾರ ಬರ ಹಾಗೂ‌ ಸ್ಥಳೀಯ ವಿಚಾರಕ್ಕೆ ಸಿಮೀತವಾಗಿತ್ತು.. ವಿಪಕ್ಷ ನಾಯಕರು ಹಾಗೂ ಕೆಲ ಶಾಸಕರು ಬರದ ಬಗ್ಗೆ ಮಾತನಾಡಿ ಸರ್ಕಾರಕ್ಕೆ ಮುಜುಗರ ತರುವ ಪ್ರಯತ್ನ ಮಾಡಿದ್ರು. ಕೊನೆಗೆ ನಾಡಿನ ದೊರೆ ಉತ್ತರ ಕೊಡಬೇಕಿತ್ತು.. https://ainlivenews.com/samantha-gave-a-bold-look-like-never-before-in-jeans-see-photos/ ಆದ್ರೆ ಎರಡು ದಿನ ರಜೆ ಇದ್ದಿದ್ದರಿಂದ ಆ ದಿನಗಳ ಮಟ್ಟಿಗೆ ಕದನ ವಿರಾಮ ಘೋಷಣೆ ಮಾಡಲಾಗಿತ್ತು.. ಮತ್ತೆ ಇಂದಿನಿಂ‌ದ ಕುಂದಾನಗರಿ‌ ಬ್ಯಾಟಲ್‌ ಆರಂಭವಾಗಿದ್ದು ಆರಂಭ ಮೊದಲ‌ ದಿನ ಪೂರ್ತಿ ಜಮೀರ್ ಕೊಟ್ಟ ಸ್ಪೀಕರ್ ಸ್ಥಾನದ ನಮಸ್ಕಾರ ಹೇಳಿಕೆಗೆ ವಿಪಕ್ಷಗಳು ನಿಗಿನಿಗಿ ಕೆಂಡವಾಗಿ ಇಡೀ ದಿನ ಸದನ ಪ್ರತಿಭಟನೆಯಲ್ಲಿ ಕೊಚ್ಚಿ ಹೋಯಿತು.

Read More

ಬೆಂಗಳೂರು: ಈರುಳ್ಳಿ ಆಯ್ತು ಈಗ ಬೆಳ್ಳುಳ್ಳಿ ಸರದಿ. ಗಗನಕ್ಕೇರಿರುವ ಬೆಳ್ಳುಳ್ಳಿ ಬೆಲೆ ಸಾಮಾನ್ಯ ಗ್ರಾಹಕನ ಜೇಬು ಸುಡುತ್ತಿದೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 300-400ರೂ. ತಲುಪಿದೆ. ಹವಾಮಾನ ವೈಪರೀತ್ಯದಿಂದಾಗಿ ಬೆಳ್ಳುಳ್ಳಿ ಫಸಲು ಉತ್ತಮವಾಗಿರದ ಕಾರಣ ಈ ಬಾರಿ ಮಹಾರಾಷ್ಟ್ರದಿಂದ ಇದರ ಪೂರೈಕೆ ತಗ್ಗಿದೆ. ನಾಸಿಕ್ ಹಾಗೂ ಪುಣೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ಚೆನ್ನಾಗಿ ಬಂದಿಲ್ಲ. ಹೀಗಾಗಿ ಮುಂಬೈನಲ್ಲಿರುವ ಬೆಳ್ಳುಳ್ಳಿ ಸಗಟು ವ್ಯಾಪಾರಿಗಳು ನೆರೆಯ ರಾಜ್ಯಗಳಾದ ಗುಜರಾತ್, ಮಧ್ಯಪ್ರದೇಶ ಹಾಗೂ ರಾಜಸ್ಥಾನದಿಂದ ಬೆಳ್ಳುಳ್ಳಿ ಖರೀದಿಸುತ್ತಿದ್ದಾರೆ. ಇದರಿಂದ ಸಾಗಣೆ ವೆಚ್ಚ ಹಾಗೂ ಸ್ಥಳೀಯ ತೆರಿಗೆಗಳ ಕಾರಣಕ್ಕೆ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ.

Read More

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ (Jammu And Kashmir) ಸಂವಿಧಾನದ 370ನೇ ವಿಧಿಯ (Article 370) ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಕೇಂದ್ರ ಸರ್ಕಾರ ನಿರ್ಧಾರ ಸರಿಯಾಗಿದೆ ಎಂದು ಸುಪ್ರೀಂ ಕೋರ್ಟ್ (Supreme Court) ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ತೀರ್ಪನ್ನು ಕೇಂದ್ರ ಸಚಿವ ಅಮಿತ್‌ ಶಾ ಶ್ಲಾಘಿಸಿದ್ದಾರೆ. ಜಮ್ಮು‍ & ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರ ಸಚಿವ ಅಮಿತ್‌ ಶಾ (Amit Shah) ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಆರ್ಟಿಕಲ್‌ 370 ರದ್ದತಿ ನಿರ್ಧಾರವನ್ನು ಎತ್ತಿಹಿಡಿದ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್‌ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. https://ainlivenews.com/samantha-gave-a-bold-look-like-never-before-in-jeans-see-photos/ 2019ರ ಆಗಸ್ಟ್‌ 5 ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರ್ಟಿಕಲ್‌ 370 ಅನ್ನು ರದ್ದುಗೊಳಿಸುವ ದೂರದೃಷ್ಟಿಯ ನಿರ್ಧಾರವನ್ನು ತೆಗೆದುಕೊಂಡಿತು. ಅಲ್ಲಿಂದೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮತ್ತು ಸಹಜತೆ ನೆಲೆಸಿತು. ಹಿಂಸಾಚಾರದಿಂದಲೇ ನಲುಗಿದ್ದ ಕಣಿವೆ…

Read More

ಬೆಂಗಳೂರು ಗ್ರಾಮಾಂತರ:  ದೊಡ್ಡಬಳ್ಳಾಪುರ ತಾಲ್ಲೂಕಿನ ಮೋಪರಹಳ್ಳಿಯ ಜನ, ಜಾನುವಾರುಗಳು, ಶಾಲಾಮಕ್ಕಳು ಸುಗಮವಾಗಿ ಚಲಿಸಲು ಅಂಡರ್ ಪಾಸ್ ಬೇಕು ಎಂದು ಮೋಪರಹಳ್ಳಿಯ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳಿಗೆ ಮನವಿ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹೊಸಕೋಟೆ – ದಾಬಸ್ ಪೇಟೆ ರಸ್ತೆಯನ್ನು ಅಗಲೀಕರಣ ಮಾಡುತ್ತಿದ್ದು, ರಸ್ತೆಯ ಕಾಮಗಾರಿಯು ಮೋಪರಹಳ್ಳಿಯಲ್ಲಿ ಮಾರ್ಗವಾಗಿ ಹಾದುಹೋಗುತ್ತಿದೆ. ಈ ಗ್ರಾಮದಲ್ಲಿರುವ ಶಾಲಾ ಮಕ್ಕಳು ಶಾಲೆಗೆ ಬರಲು ಮತ್ತು ಹೋಗಲು ರೈತರು, ಜನ ಜಾನುವಾರುಗಳು ಪಕ್ಕದ ಜಮೀನುಗಳಿಗೆ ಹೋಗಿಬರಲು ಕಷ್ಟವಾಗುತ್ತಿದೆ, ಅಲ್ಲದೆ ಈ ರಸ್ತೆಯಲ್ಲಿ ಅಪಘಾತಗಳು ಆಗುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ಮಾಡಿ ಅಂಡರ್ ಪಾಸ್ ರಸ್ತೆಯನ್ನು ಮಾಡಿಸಿ ಶಾಲಾ ಮಕ್ಕಳಿಗೆ, ರೈತರಿಗೆ, ಜನ ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮೋಪರಹಳ್ಳಿ ಗ್ರಾಮಸ್ಥರು ಹೇಳಿದರು ಈ ಸಂದರ್ಭದಲ್ಲಿ ಮೋಪರಹಳ್ಳಿ ಗ್ರಾಮಸ್ಥರಾದ ರವಿಕುಮಾರ್, ಎಂ.ಪಿ ನಾಗರಾಜ್, ಮುನಿಆಂಜಿನಪ್ಪ, ಸುರೇಶ, ವೆಂಕಟೇಶ್, ರಾಮಪ್ಪ, ಹನುಮಂತಗೌಡ, ರಾಮಾಂಜಿನಪ್ಪ, ಆನಂದ, ಮುನಿರಾಜ, ನಾಗೇಶ, ಚನ್ನಕೃಷ್ಣ, ಮಾರಪ್ಪ, ಮುರಳಿ ಎಂ,ಹನುಮಂತಗೌಡ,ರಾಮಾಂಜಿನಪ್ಪ, ಗಂಗರಾಜ, ರಮೇಶ, ನಾರಾಯಣಪ್ಪ.…

Read More

ಸೂಪರ್​ಸ್ಟಾರ್ ರಜನಿಕಾಂತ್​ ಅವರಿಗೆ ಇಂದು 73ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅವರಿಗೆ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್  ಶುಭಾಚುಗಳ ಮಹಾಪೂರವೇ ಹರಿದು ಬರುತ್ತಿದೆ. ರಜನಿಕಾಂತ್​ ದಕ್ಷಿಣ ಭಾರತದ ಪ್ರಮುಖ ನಟರ ಸಾಲಿನಲ್ಲಿ ಮೊದಲಿಗರಾಗಿರು, ಅಭಿಮಾನಿಗಳ ಆರಾಧ್ಯ ದೈವ, ಇದಕ್ಕೆ ಉದಾಹರಣೆ 73ನೇ ವಯಸ್ಸಿನಲ್ಲಿಯೂ ಅವರು ನಾಯಕನಟನಾಗಿ ಸಿನಿರಸಿಕರನ್ನು ರಂಜಿಸುತ್ತಿದ್ದಾರೆ. ಈಗಲೂ ಅವರ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ ಕೇವಲ ತಮಿಳು ಮಾತ್ರವಲ್ಲದೆ, ಕನ್ನಡ, ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲೂ ರಜನಿಕಾಂತ್ ಬಣ್ಣ ಹಚ್ಚಿದ್ದಾರೆ. ಅವರು ದಕ್ಷಿಣ ಭಾರತದ ಶ್ರೀಮಂತ ನಟ ಎನ್ನುವ ಖ್ಯಾತಿಗೂ ಪಾತ್ರರಾಗಿದ್ದಾರೆ. ಇವರ ಅಭಿಮಾನಿಗಳ ಬಳಗ ಕೇವಲ ದಕ್ಷಿಣ ಭಾರತದ ರಾಜ್ಯಗಳಿಗೆ ಮಾತ್ರ ಸೀಮಿತವಾಗಿರದೇ ದೇಶ ವಿದೇಶಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ 73ನೇ  ವರ್ಷದ ಜನ್ಮದಿನದ ಆಚರಣೆಯಲ್ಲಿರುವ ಇವರಿಗೆ ಶುಭಾಷಯಗಳು ಎಲ್ಲೆಡೆಯಿಂದ ಹರಿದುಬರುತ್ತಿದೆ.

Read More

ಕಲಬುರ್ಗಿ:- ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ವಕೀಲ ಈರಣ್ಣಗೌಡನ ಕೊಲೆ ಪ್ರಕರಣದ ಪ್ರಮುಖ ಆರೋಪಿ ನೀಲಕಂಠ ಹಲ್ಲೆ ಮಾಡ್ತಿರೋ ಹಳೆ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈರಣ್ಣಗೌಡನ ದೊಡ್ಡಪ್ಪ ಬಸವಣ್ಣಪ್ಪನ ಮೇಲೆ ಆರೋಪಿ ನೀಲಕಂಠ 2015 ರಲ್ಲಿ ಹಲ್ಲೆ ಮಾಡಿದ್ದ ಮನೆಗೆ ಬಂದು ಹಲ್ಲೆ ಮಾಡಿದ 7 ವರ್ಷಗಳ ಹಿಂದಿನ ವಿಡಿಯೋ ಇದೀಗ ಮತ್ತೆ ಸೌಂಡ್ ಮಾಡ್ತಿದೆ. ಈರಣ್ಣಗೌಡನ ಆಸ್ತಿ ವಿವಾದ ಬಗೆಹರಿಸ್ತೇನೆ ಅದ್ರಲ್ಲಿ ನನಗೂ ಪಾಲು ಕೊಡಬೇಕು ಅಂತ ಬೇಡಿಕೆ ಇಟ್ಟಿದ್ದ ಆದ್ರೆ ಬೇಡಿಕೆ ಈಡೇರಿರಲಿಲ್ಲ. ವಿಪರ್ಯಾಸ ಅಂದ್ರೆ ಮೊನ್ನೆ ಡಿಸೆಂಬರ್ 7 ರಂದು ಇದೇ ವಿಚಾರಕ್ಕೆ ಸಂಭಂಧಿಸಿದಂತೆ ಕೋರ್ಟಿಗೆ ಹೊರಡುವ ವೇಳೆ ಈರಣ್ಣಗೌಡನ ಕೊಲೆ ಮಾಡಿಸಿಬಿಟ್ಟ. ಅದೇ ಕೊಲೆ ಆರೋಪದ ಮೇಲೆ ನೀಲಕಂಠ ಅದೆಸ್ಟಾಗಿದ್ದಾನೆ.

Read More