ಸ್ಮಾರ್ಟ್ ಫೋನ್ ಎಂಬುದು ಈಗ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂಬುದು ಸತ್ಯ. ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ವೈಶಿಷ್ಟ್ಯಗಳುಳ್ಳ ಸ್ಮಾರ್ಟ್ಫೋನ್ಗಳು ಲಭ್ಯವಿದೆ.
2023ರ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಮೇ-ಜೂನ್) ಜಾಗತಿಕ ಸ್ಮಾರ್ಟ್ಫೋನ್ ಸಾಗಣೆಯಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ. 8 ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ ಶೇ. 5 ರಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಪ್ರೀಮಿಯಂ ವಿಭಾಗ ತನ್ನ ಬೇಡಿಕೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿದ್ದು, ವಿಭಾಗದ ಪಾಲು ತ್ರೈಮಾಸಿಕದಲ್ಲಿ ದಾಖಲೆಯ ಎತ್ತರದಲ್ಲಿದೆ.
ಈ ವರದಿಯ ಪ್ರಕಾರ ಪ್ರಸ್ತುತ ವಿಶ್ವದ ದೊಡ್ಡ ಸ್ಮಾರ್ಟ್ಫೋನ್ ಕಂಪನಿಗಳ ಲಿಸ್ಟ್ ಇಲ್ಲಿದೆ!
ಸ್ಯಾಮ್ಸಂಗ್ : ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಅಗ್ರಸ್ಥಾನದಲ್ಲಿದೆ. ಕಂಪನಿಯು ಶೇ 22ರಷ್ಟು ಅತೀ ದೊಡ್ಡ ಮಾರುಕಟ್ಟೆಯ ಪಾಲನ್ನು ಹೊಂದಿದೆ
ಆಪಲ್ : ಮತ್ತೊಂದು ಜನಪ್ರಿಯ ಸಂಸ್ಥೆ ಆಪಲ್ ಎರಡನೇ ಸ್ಥಾನದಲ್ಲಿದೆ. ಇದರ ಜತೆಗೆ ಆಪಲ್ ಭಾರತದಲ್ಲಿ ಶೇಕಡಾ 50ರಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಸಾಧಿಸಿದೆ.
Xiaomi : ಇದು ಜಾಗತಿಕವಾಗಿ ಮೂರನೇ ಅತಿದೊಡ್ಡ ಸ್ಮಾರ್ಟ್ಫೋನ್ ಬ್ರಾಂಡ್ ಆಗಿ ಹೊರಹೊಮ್ಮಿದೆ. Xiaomiಗೆ ಚೀನಾ ಮತ್ತು ಭಾರತ ಪ್ರಮುಖ ಮಾರುಕಟ್ಟೆಯಾಗಿತ್ತು.
ಒಪ್ಪೋ : ಈ ಪಟ್ಟಿಯಲ್ಲಿ Oppo 4ನೇ ಸ್ಥಾನದಲ್ಲಿದೆ. ಇದು ಭಾರತ ಮತ್ತು ಚೀನಾ ಎರಡೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಹೊಂದಿದೆ.
ವಿವೋ : ಐದನೇ ಸ್ಥಾನದಲ್ಲಿರುವ ಕಂಪನಿ ವಿವೋ. ಚೀನಾದಲ್ಲಿ ಸ್ಯಾಮ್ಸಂಗ್ ಮತ್ತು ಒಪ್ಪೋನ ಸ್ಪರ್ಧೆಯಿಂದಾಗಿ ಮಾರುಕಟ್ಟೆಯಲ್ಲಿ ಎರಡನೇ ತ್ರೈಮಾಸಿಕದಲ್ಲಿ ಇದು ಕುಸಿತ ದಾಖಲಿಸಿಕೊಂಡಿತ್ತು.