Author: AIN Author

ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ, ಸಚಿವ ಮಲ್ಲಿಕಾರ್ಜುನ್​ಗೆ ಹೈಕೋರ್ಟ್​​ ನೋಟಿಸ್​ ಜಾರಿ ಮಾಡಿದೆ. ಚುನಾವಣೆ ಸಮಯದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ S.S.ಮಲ್ಲಿಕಾರ್ಜುನ್​​ ಕುಕ್ಕರ್, ಸೀರೆ ಹಂಚಿಕೆ ಮಾಡಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು. ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ್ ವಿರುದ್ಧ ಅಂದಿನ SP ಸಿ.ಬಿ.ರಿಷ್ಯಂತ್ ದೂರು ದಾಖಲಿಸಿದ್ದರು. ದೂರು ದಾಖಲಾಗಿ 6 ತಿಂಗಳಾದ್ರೂ ಪೊಲೀಸರು ನ್ಯಾಯಾಲಯಕ್ಕೆ ಚಾರ್ಟ್ ಸಲ್ಲಿಸಿರಲಿಲ್ಲ. ಚಾರ್ಜ್​​ ಶೀಟ್​ ಹಾಕದೇ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ದಾವಣಗೆರೆ ದಕ್ಷಿಣ ಕ್ಷೇತ್ರದ‌ ಪರಾಜಿತ ಪಕ್ಷೇತರ ಅಭ್ಯರ್ಥಿ ಸುಭಾನ್​ ಖಾನ್​​ ಹೈಕೋರ್ಟ್​ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗು ಮಲ್ಲಿಕಾರ್ಜುನ ಶಿವಶಂಕರಪ್ಪ ಅವರ ಆರೋಪ ಸಾಭೀತಾದರೆ ತಂದೆ, ಮಗನಿಗೆ ಸಂಕಷ್ಟ ಎದುರಾಗಲಿದೆ.

Read More

ಬೆಳಗಾವಿ: ರೈತರು (Farmers) ಶಿವಸ್ವರೂಪಿಗಳು, ದೇವರ ಸಮಾನ, ಅವರ ಹಣ ತಿಂದ್ರೆ ಪ್ಯಾರಾಲಿಸಿಸ್ (ಸ್ಟ್ರೋಕ್‌ ಅಥವಾ ಪಾರ್ಶ್ವವಾಯು) (Paralysis) ಬರುತ್ತೆ, ರೈತರ ಹಣ ತಿಂದ ಮಾಲೀಕರು ಉದ್ಧಾರ ಆಗಲ್ಲ. ಅವರಿಗೆ ಮೋಸ ಮಾಡಬೇಡಿ ಎಂದು ಅಥಣಿ ಶಾಸಕ ಲಕ್ಷ್ಮಣ್‌ ಸವದಿ (Laxman Savadi) ಸದನದಲ್ಲಿ ಮನವಿ ಮಾಡಿದರು. ಬೆಳಗಾವಿಯ (Belagavi) ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಕಲಾಪದ ವೇಳೆ ಬಿಜೆಪಿ ಧರಣಿಯನ್ನು ಕಾಂಗ್ರೆಸ್ ಶಾಸಕ ಲಕ್ಷ್ಮಣ್‌ ಸವದಿ ಖಂಡಿಸಿದರು.  ಬಿಜೆಪಿ ಶಾಸಕರ (BJP MLAs) ವಿರುದ್ಧ ಕೆಂಡಾಮಂಡಲವಾದ ಲಕ್ಷ್ಮಣ್‌ ಸವದಿ ರೈತರ ಪರ ದನಿ ಎತ್ತಿದರು. ನಿಯಮ 69ರ ಅಡಿ ಕಬ್ಬು ಕಾರ್ಖಾನೆಗಳಲ್ಲಿ ಆಧುನಿಕ ತೂಕದ ಯಂತ್ರಗಳನ್ನು ಅಳವಡಿಸುವ, https://ainlivenews.com/samantha-gave-a-bold-look-like-never-before-in-jeans-see-photos/ ಬಗ್ಗೆ ಅಥಣಿ ಶಾಸಕ ಲಕ್ಷ್ಮಣ ಸವದಿ ಆರಂಭಿಸುತ್ತಿದ್ದಂತೆ ವಿಪಕ್ಷ ಶಾಸಕರು ಸದನದ ಬಾವಿಯಲ್ಲೇ ನಿಂತು ಧಿಕ್ಕಾರ ಕೂಗಿದರು. ವಿಪಕ್ಷ ನಾಯಕ ಆರ್. ಅಶೋಕ್ ಮತ್ತು ಸವದಿ ನಡುವೆ ಮಾತಿನ ಚಕಮಕಿಯೂ ನಡೆಯಿತು. ಆಗ ಬಿಜೆಪಿ ಶಾಸಕರ ವಿರುದ್ಧ ಕಂಡಾಮಂಡಲವಾದ ಸವದಿ, ನೀವು ಕಬ್ಬು…

Read More

ಸೂರತ್: ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವಿನ ಎಲಿಮಿನೇಟರ್ ಪಂದ್ಯದ ವೇಳೆ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಹಾಗೂ ವೇಗದ ಬೌಲರ್ ಶ್ರೀಶಾಂತ್ (Sreesanth) ನಡುವಿನ ಗಲಾಟೆ ವಿಚಾರವಾಗಿ ಶ್ರೀಶಾಂತ್‍ಗೆ ನೋಟಿಸ್‍ನ ಬಿಸಿ ತಟ್ಟಿದೆ. ಗೌತಮ್ ಗಂಭೀರ್ ಫಿಕ್ಸರ್ ಎಂದು ಕರೆದಿದ್ದಾರೆ ಎಂದು ಶ್ರೀಶಾಂತ್ ಆರೋಪಿಸಿದ್ದರು. ಈಗ ಅವರಿಗೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ (Legends League Cricket) ಕಮಿಷನರ್ ಲೀಗಲ್ ನೋಟಿಸ್ ನೀಡಿದ್ದಾರೆ. ಟಿ20 ಟೂರ್ನಿಯಲ್ಲಿ ಆಡುವ ವೇಳೆ ಒಪ್ಪಂದ ಉಲ್ಲಂಘಿಸಿದ್ದಕ್ಕಾಗಿ ಶ್ರೀಶಾಂತ್ ತಪ್ಪಿತಸ್ಥರು ಎಂದು ನೋಟಿಸ್‍ನಲ್ಲಿ ಹೇಳಲಾಗಿದೆ. ಆಟಗಾರನನ್ನು ಟೀಕಿಸುವ ವೀಡಿಯೊಗಳನ್ನು ತೆಗೆದುಹಾಕಿದರೆ ಮಾತ್ರ ಅವರೊಂದಿಗೆ ಮಾತುಕತೆ ಮಾಡಲಾಗುವುದು ಎಂದು ಹೇಳಲಾಗಿದೆ ಇಬ್ಬರ ಗಲಾಟೆ ವಿಚಾರವಾಗಿ ಅಂಪೈರ್‌ಗಳು ತಮ್ಮ ವರದಿಯನ್ನು ಕಳಿಸಿದ್ದು, ಶ್ರೀಶಾಂತ್ ಅವರನ್ನು ಫಿಕ್ಸರ್ ಎಂದು ಕರೆದ ಬಗ್ಗೆ ಅದರಲ್ಲಿ ಮಾಹಿತಿ ಇಲ್ಲ. ಶ್ರೀಶಾಂತ್ ಅವರು ಒಂದೆರಡು ವೀಡಿಯೋಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಗಂಭೀರ್ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಈ ಇಬ್ಬರ ಜಗಳ…

Read More

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ಸದ್ಯ ಭೀಮನ ಅವತಾರ ತಾಳಿದ್ದು, ಕೌನ್ರೆ ಉನೇ ಅಂತಿದ್ದಾರೆ. ಮ್ಯೂಸಿಕ್ ಲವರ್ಸ್​ನ ಸೈಕ್ ಮಾಡಿರೋ ಭೀಮ ಆಲ್ಬಂ, ಎಲ್ಲೆಲ್ಲೂ ಗುನುಗುವಂತಿದೆ. ಸದ್ಯ ಭೀಮನ ಪ್ರಮೋಷನ್ಸ್​ ಜೊತೆ ಸ್ಪೆಷಲ್ ಅಭಿಮಾನಿಯನ್ನ ಮೀಟ್ ಮಾಡಿದ್ದಾರೆ ವಿಜಯ್ ಕುಮಾರ್. ಅದ್ಯಾರು ಅನ್ನೋದ್ರ ಜೊತೆ ಒಂದಷ್ಟು ಲೇಟೆಸ್ಟ್ ಸ್ಯಾಂಡಲ್​ವುಡ್ ಅಪ್ಡೇಟ್ಸ್ ನಿಮಗಾಗಿ ಕಾಯ್ತಿದೆ. ಸಲಗ ನಂತ್ರ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರೋ ಮತ್ತೊಂದು ಌಕ್ಷನ್ ಪ್ಯಾಕ್ಡ್ ಕಮರ್ಷಿಯಲ್ ಎಂಟರ್​ಟೈನರ್ ಭೀಮ. ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ನಿರ್ಮಾಣದ ಭೀಮ ಸಿನಿಮಾ ಹತ್ತು ಹಲವು ವಿಶೇಷತೆಗಳಿಂದ ಮೇಕಿಂಗ್ ಹಂತದಲ್ಲೇ ಸಖತ್ ಸೌಂಡ್ ಮಾಡಿತ್ತು. ಇದೀಗ ಪೋಸ್ಟ್ ಪ್ರೊಡಕ್ಷನ್ ಮುಗಿಸಿ, ರಿಲೀಸ್ ಅಂಚಿಗೆ ಬಂದು ನಿಂತಿದೆ. ಟೀಸರ್ ಹಾಗೂ ಸಾಂಗ್ಸ್​ನಿಂದ ಪ್ರಮೋಷನ್ಸ್ ಕಿಕ್​​ಸ್ಟಾರ್ಟ್​ ಮಾಡಿದೆ ಟೀಂ. ಕೌನ್ರೆ ಉನೇ ಅನ್ನೋ ಬ್ಯಾಡ್ ಬಾಯ್ಸ್ ಸಾಂಗ್ ನೋಡುಗರನ್ನ ಅಕ್ಷರಶಃ ಸೈಕ್ ಮಾಡಿತ್ತು. ಅದೇ ಕಾರಣದಿಂದ ಐ ಲವ್ ಯೂ ಕಣೇ ಅನ್ನೋ ಸೈಕ್ ಸಾಂಗ್​ನ…

Read More

ಹುಬ್ಬಳ್ಳಿ,: ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಕೇಂದ್ರವು ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದ ಹಾದಿಯಲ್ಲಿ ಬೈಕ್‌ಥಾನ್ ಅನ್ನು ಆಯೋಜಿಸುವ ಮೂಲಕ ಆರಂಭಿಕ ಪತ್ತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ವೀಣಾ ಚೇತನ್ ಬರದ್ವಾಡ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಮಾರು 400ಕ್ಕೂ ಅಧಿಕ ಬೈಕ್ ಸವಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಕೇಂದ್ರದಿಂದ ಆರಂಭವಾದ ಬೈಕ್ ಸವಾರಿ ಐ.ಬಿ. ವೃತ್ತ, ಚನ್ನಮ್ಮ ವೃತ್ತ, ಮಿಷನ್ ಕಾಂಪೌಂಡ್, ಗಿರಾಣಿ ಚಾವ್ಲ್ ವೃತ್ತ, ವಿಕಾಸ್ ನಗರ ವೃತ್ತ, ಹೊಸೂರು ವೃತ್ತದಿಂದ ಉಣಕಲ್ ಕೆರೆವರೆಗೆ ಸಾಗಿತು. ಈ ಮಹತ್ವಪೂರ್ಣ ಕಾರ್ಯಕ್ರಮವು ಸಮುದಾಯ ಪಾಲ್ಗೊಳ್ಳುವಿಕೆಯ ಮನೋಭಾವವನ್ನು ಪ್ರದರ್ಶಿಸಿತು ಮತ್ತು ಆರಂಭಿಕ ಸ್ತನ ಕ್ಯಾನ್ಸರ್ ಪತ್ತೆಹಚ್ಚುವಿಕೆಯನ್ನು ಉತ್ತೇಜಿಸುವಲ್ಲಿ ಗಮನಾರ್ಹ ಹೆಜ್ಜೆ ಇಟ್ಟಿತು. ಆ ಮೂಲಕ ಸ್ತನ ಆರೋಗ್ಯದ ಪ್ರಾಮುಖ್ಯತೆಯ ಬಗೆಗಿನ ಅರಿವನ್ನು ಜನರಲ್ಲಿ ಮೂಡಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ವೀಣಾ ಚೇತನ್ ಬರದ್ವಾಡ, “ಎಚ್‌ಸಿಜಿ ಎನ್ಎಂಆರ್…

Read More

ಬಳ್ಳಾರಿ: ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಬೆಳಗಾವಿಯಲ್ಲಿ ತುಂಗಾಭದ್ರ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆ ಏರ್ಪಡಿಸಲಾಯಿತು. ರೈತರ ಜಮೀನುಗಳಿಗೆ ನೀರು ಹರಿಸುವ ಕುರಿತು ಅವಳಿ ಜಿಲ್ಲೆಯ ಜನಪ್ರತಿನಿಧಿಗಳು, ರೈತರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಬಳ್ಳಾರಿಯ ಮೆಣಸಿಕಾಯಿ ಬೆಳೆ ಬರಲು ನೀರಿನ ಅವಶ್ಯಕತೆಯಿದೆ, ಜಲಾಶಯದಲ್ಲಿ ಇರುವ ನೀರಿನ ಪ್ರಮಾಣ ನೋಡಿ ಕಾಲುವೆಗೆ ನೀರು ಹರಿಸುವಂತೆ ರೈತರು ಮನವಿ ಮಾಡಿದ್ದಾರೆ. ತೆಲಂಗಾಣ, ಆಂಧ್ರಾದ ಪಾಲಿನ ನೀರು ಉಳಿಸಿ ನಮ್ಮ ಬೆಳೆ ರಕ್ಷಣೆ ಮಾಡುವಂತೆ ರೈತರು ಪಟ್ಟು ಹಿಡಿದಿದ್ದು, ಟಿಬಿ ಡ್ಯಾಂನಲ್ಲಿ 12 ಟಿಎಂಸಿ ನೀರು ಮಾತ್ರ ಇದೆ, ಮೆಣಿಸಿಕಾಯಿ ಬೆಳೆ ಬರಲು ಇನ್ನು ಎರಡು ತಿಂಗ್ಳು ಬೇಕಿದೆ. ಹಾಗಾಗೀ ಕಾಲುವೆ ನೀರು ಹರಿಸುವಂತೆ ಆಗ್ರಹಿಸಿದ್ದಾರೆ. ಎಚ್ಎಲ್’ಸಿ ಕಾಲುವೆ ನೀರು ಹರಿಸುವಂತೆ ಜಿಲ್ಲೆಯ ರೈತರಿಂದ ಮನವಿ ಮಾಡಲಾಗಿದ್ದು, ಸಭೆಯಲ್ಲಿ ಸಚಿವ ನಾಗೇಂದ್ರ, ಸಚಿವ ಜಮೀರ್, ಶಾಸಕ ಗಣೇಶ್, ಬಿ.ಎಂ ನಾಗರಾಜ್, ಭರತ್ ರೆಡ್ಡಿ ಭಾಗಿಯಾಗಿದ್ದರು.

Read More

ಬೆಂಗಳೂರು: ಮಹಿಳೆಗೆ ನಟ ದರ್ಶನ್ ನಾಯಿ ಕಚ್ಚಿದ ಪ್ರಕರಣದಲ್ಲಿ (Dog Bite Case) ಸ್ಯಾಂಡಲ್‌ವುಡ್ ಸಾರಥಿಗೆ ಬಿಗ್ ರಿಲೀಫ್‌ ಸಿಗುವ ಸಾಧ್ಯತೆ ದಟ್ಟವಾಗಿದೆ. ಆರ್.ಆರ್ ನಗರ ಪೊಲೀಸರು ನಟ ದರ್ಶನ್‌ಗೆ (Actor Darshan) ಕ್ಲೀನ್ ಚಿಟ್ ಕೊಡಲು ಮುಂದಾಗಿದ್ದಾರೆ ಎನ್ನುತ್ತಿದೆ ಪೊಲೀಸ್ ಮೂಲಗಳು. ದರ್ಶನ್ ಮನೆಯ ನಾಯಿ ಕಳೆದ ಅಮಿತಾ ಜಿಂದಾಲ್ ಅವರಿಗೆ ಕಚ್ಚಿತ್ತು. ಈ ಸಂಬಂಧ ಮಹಿಳೆ ನಟ ದರ್ಶನ್ ಹಾಗೂ ಮನೆ ಕೆಲಸದವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು ಪ್ರಕರಣದಲ್ಲಿ ಆರೋಪಿಗಳಾಗಿದ್ದ ದರ್ಶನ್ ಹಾಗೂ ಮನೆ ಕೆಲಸದವನಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿ ಘಟನೆ ಬಗ್ಗೆ ಇಬ್ಬರ ಬಳಿ ಆರ್.ಆರ್ ನಗರ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು. ಈಗ ಚಾರ್ಜ್ ಶೀಟ್ (Chargesheet) ಸಲ್ಲಿಸಲು ಆರ್.ಆರ್ ನಗರ ಪೊಲೀಸರು ತಯಾರಿ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ದರ್ಶನ್ ಪಾತ್ರ ಅಷ್ಟಾಗಿ ಕಂಡು ಬರದ ಹಿನ್ನೆಲೆಯಲ್ಲಿ ದರ್ಶನ್‌ ಹೆಸರು ಕೈಬಿಟ್ಟು ಚಾರ್ಜ್‌ಶೀಟ್‌ ಸಲ್ಲಿಸಲು ಪೊಲೀಸರು ಮುಂದಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ

Read More

ಯುವಕರು ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಅನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಸಬಹುದು. ಮಾರುತಿ ಸುಜುಕಿ ಸ್ವಿಫ್ಟ್ ಈಗ ಕ್ಯಾಂಟೀನ್ ಸ್ಟೋರ್ ಡಿಪಾರ್ಟ್‌ಮೆಂಟ್‌ನಲ್ಲಿಯೂ ಲಭ್ಯವಿದೆ. ಆರ್ಮಿ ಕ್ಯಾಂಟೀನ್ ರಕ್ಷಣಾ ಸಿಬ್ಬಂದಿಗೆ ಸಬ್ಸಿಡಿ ದರದಲ್ಲಿ ಸರಕುಗಳನ್ನು ನೀಡುತ್ತದೆ. ಇದರಲ್ಲಿ ಗೃಹೋಪಯೋಗಿ ವಸ್ತುಗಳು, ಮದ್ಯ, ವೈದ್ಯಕೀಯ ವಸ್ತುಗಳು ಮತ್ತು ಹೆಚ್ಚಿನವನ್ನು ಖರೀದಿಸಬಹುದು. ಆರ್ಮಿ ಕ್ಯಾಂಟೀನ್ ಮೂಲಕ ಸಬ್ಸಿಡಿ ದರದಲ್ಲಿ ಕಾರನ್ನು ಸಹ ಖರೀದಿಸಬಹುದು. ದೇಶಾದ್ಯಂತ ಸುಮಾರು 34 ಸಿಎಸ್‌ಡಿ ಡಿಪೋಗಳಿವೆ. ಅರ್ಹ ವ್ಯಕ್ತಿಯು ಹತ್ತಿರದ ಔಟ್‌ಲೆಟ್ ಮೂಲಕ ವಾಹನ ಖರೀದಿಸಬಹುದು. 2023 ರಲ್ಲಿ CSD ಕಾರ್ ಅರ್ಹತೆ: ಭಾರತ ಸರ್ಕಾರದಿಂದ ವೇತನ ಪಡೆದು ರಕ್ಷಣಾ ವಲಯದಲ್ಲಿ ಉದ್ಯೋಗದಲ್ಲಿರುವ ಎಲ್ಲರೂ CSD ಮೂಲಕ ಕಾರುಗಳನ್ನು ಖರೀದಿಸಬಹುದು. ಅಲ್ಲದೆ, ರಕ್ಷಣಾ ಇಲಾಖೆಯ ಎಲ್ಲಾ ನಿಯೋಜಿತ ಅಧಿಕಾರಿಗಳು ಮತ್ತು ಮಾಜಿ ಸೈನಿಕರು ಕ್ಯಾಂಟೀನ್ ಮೂಲಕ ಕಾರನ್ನು ಖರೀದಿಸಬಹುದು. ಇದಲ್ಲದೆ, ಅವರು ಖಾಸಗಿ ಬ್ಯಾಂಕ್‌ಗಳು ಅಥವಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ವಾಹನಕ್ಕೆ ಹಣಕಾಸು ಒದಗಿಸಬಹುದು. ರೂ. 5.13 ಲಕ್ಷಕ್ಕೆ ಸ್ವಿಫ್ಟ್ ಕಾರು: Maruti…

Read More

ಸ್ಮಾರ್ಟ್‌ ಫೋನ್‌ ಎಂಬುದು ಈಗ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿದೆ ಎಂಬುದು ಸತ್ಯ. ಸದ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ವೈಶಿಷ್ಟ್ಯಗಳುಳ್ಳ ಸ್ಮಾರ್ಟ್‌ಫೋನ್‌ಗಳು ಲಭ್ಯವಿದೆ. 2023ರ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್-ಮೇ-ಜೂನ್) ಜಾಗತಿಕ ಸ್ಮಾರ್ಟ್‌ಫೋನ್ ಸಾಗಣೆಯಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ. 8 ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ ಶೇ. 5 ರಷ್ಟು ಕಡಿಮೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ, ಪ್ರೀಮಿಯಂ ವಿಭಾಗ ತನ್ನ ಬೇಡಿಕೆಯಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿದ್ದು, ವಿಭಾಗದ ಪಾಲು ತ್ರೈಮಾಸಿಕದಲ್ಲಿ ದಾಖಲೆಯ ಎತ್ತರದಲ್ಲಿದೆ. ಈ ವರದಿಯ ಪ್ರಕಾರ ಪ್ರಸ್ತುತ ವಿಶ್ವದ ದೊಡ್ಡ ಸ್ಮಾರ್ಟ್‌ಫೋನ್‌ ಕಂಪನಿಗಳ ಲಿಸ್ಟ್ ಇಲ್ಲಿದೆ! ಸ್ಯಾಮ್‌ಸಂಗ್ : ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಅಗ್ರಸ್ಥಾನದಲ್ಲಿದೆ. ಕಂಪನಿಯು ಶೇ 22ರಷ್ಟು ಅತೀ ದೊಡ್ಡ ಮಾರುಕಟ್ಟೆಯ ಪಾಲನ್ನು ಹೊಂದಿದೆ ಆಪಲ್ : ಮತ್ತೊಂದು ಜನಪ್ರಿಯ ಸಂಸ್ಥೆ ಆಪಲ್ ಎರಡನೇ ಸ್ಥಾನದಲ್ಲಿದೆ. ಇದರ ಜತೆಗೆ ಆಪಲ್‌ ಭಾರತದಲ್ಲಿ ಶೇಕಡಾ 50ರಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಸಾಧಿಸಿದೆ. Xiaomi : ಇದು ಜಾಗತಿಕವಾಗಿ ಮೂರನೇ ಅತಿದೊಡ್ಡ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿ ಹೊರಹೊಮ್ಮಿದೆ.…

Read More

ಹಾಸನ: ಜಮ್ಮು-ಕಾಶ್ಮೀರಕ್ಕೆ ಆರ್ಟಿಕಲ್ 370 (Jammu Kashmir Article 370) ಅಡಿ ನೀಡಲಾಗಿದ್ದ ವಿಶೇಷ ಸ್ಥಾನ ಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ನಿರ್ಧಾರವನ್ನು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Deve Gowda) ಸ್ವಾಗತಿಸಿದ್ದಾರೆ. ಹೊಳೆನರಸೀಪುರ ತಾಲೂಕಿನಲ್ಲಿ ಬಳಿಕ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಆರ್ಟಿಕಲ್ 370 ಮೂಲಕ ಕಾಶ್ಮೀರಕ್ಕೆ ವಿಶೇಷ ಸವಲತ್ತು ಕಲ್ಪಿಸಲಾಗಿತ್ತು. ಅದನ್ನು ಲೋಕಸಭೆ, ರಾಜ್ಯಸಭೆಯಲ್ಲಿ ತಿದ್ದುಪಡಿ ಮಾಡುವ ಮುಖೇನಾ ಆ ಸವಲತ್ತು ರದ್ದು ಮಾಡಿದ್ದರು. ಇದರಿಂದ ಬೇರೆ ರಾಜ್ಯಗಳಿಗೂ, ಅನ್ಯಾಯ, ಅನಕೂಲವಾಗುತ್ತೋ ಅದು ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗುತ್ತೆ ಎಂದು ನುಡಿದರು. https://ainlivenews.com/samantha-gave-a-bold-look-like-never-before-in-jeans-see-photos/ ಐದು ಜನ ನ್ಯಾಯಾಧೀಶರು ಸುಪ್ರೀಂಕೋರ್ಟ್‍ನಲ್ಲಿ (Supreme Court) ತೀರ್ಪು ಕೊಟ್ಟಿದ್ದಾರೆ. ಇದನ್ನು ನಾನು ಸ್ವಾಗತಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಇಂಡಿಯಾ (I.N.D.I.A) ಒಂದು ಕಡೆ, ಇನ್ನೊಂದು ಕಡೆ ಎನ್‍ಡಿಎ ಇದೆ. ನಾವು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಈ ರಾಷ್ಟ್ರದ ಮಹಾಜನತೆ ಇಂಡಿಯಾ ಪರ ತೀರ್ಪು…

Read More