Author: AIN Author

ಹುಬ್ಬಳ್ಳಿ: ಏಕಾಏಕಿ ಶಾರ್ಟ್‌ ಸರ್ಕೀಟ್‌ನಿಂದ ಸ್ಕ್ರ್ಯಾಪ್ ಗೋದಾಮಿಗೆ ಬೆಂಕಿ ತಗುಲಿದ ಘಟನೆ, ಹುಬ್ಬಳ್ಳಿಯ ತಿರುಮಲಕೊಪ್ಪದಲ್ಲಿ ನಡೆದಿದೆ. ಹೌದು,,, ಮಂಜುನಾಥ ಹುಬ್ಬಳ್ಳಿ ಎಂಬುವವರಿಗೆ ಸೇರಿದ ಗೋದಾಮು, ಧಗಧಗನೇ ಹೊತ್ತಿ ಉರಿಯುತ್ತಿದೆ. ಈ ಗೋದಾಮಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ. ಇನ್ನು ಬೆಂಕಿ ತಗುಲಿದ ಬಗ್ಗೆ ಅಗ್ನಿಶಾಮಕ ದಳಕ್ಕೆ ತಿಳಿಸಿದ ಕೂಡಲೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರ ಪ್ರಯತ್ನ ನಡೆಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಪೋಷಕರೇ, ರಾಜಧಾನಿಯ ಬೀದಿಯಲ್ಲಿ ನಿಮ್ಮ ಮಕ್ಕಳನ್ನು ಆಡಲು ಬಿಡುವವರು ನೀವಾದರೆ ಕಟ್ಟೆಚ್ಚರ ವಹಿಸಿ. ಯಾಕೆಂದ್ರೆ ರಸ್ತೆಯಲ್ಲಿ ಬರೋರನ್ನ ಹರಿದು ಮುಕ್ಕೋಕೆ ಬೀದಿನಾಯಿಗಳು ಕಾಯ್ತಾ ಇರರ್ತವೆ. ಹೌದು ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ದಿನಕ್ಕೆ ಸರಾಸರಿ 60 ರಿಂದ 70 ಮಂದಿ ಮೇಲೆ ಅಟ್ಯಾಕ್ ಮಾಡುತ್ತಿವೆ ಅಂತೆ ಪಾಲಿಕೆಯೇ ರಿಪೋರ್ಟ್ ಬಿಡುಗಡೆ ಮಾಡಿದೆ.ಇವರಲ್ಲೂ ಮಕ್ಕಳೇ ಅಧಿಕವಾಗಿರೋದು ಆತಂಕ ಹುಟ್ಟಿಸಿದೆ. ಹಾಗಾದ್ರೆ ಕಳೆದ ಕೆಲ ವರ್ಷಗಳಲ್ಲಿ ನಗರದಲ್ಲಿ ನಾಯಿಗಳಿಂದ ಅಟ್ಯಾಕ್ ಆದವರ ಸಂಖ್ಯೆ ಎಷ್ಟಿದೆ ಗೊತ್ತಾ, ಇಷ್ಟು ಇದ್ರೂ ಪಾಲಿಕೆ ಏನ್ಮಾಡ್ತಿದೆ ಬನ್ನಿ ತೋರಿಸ್ತಿವಿ.. ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಬೀದಿನಾಯಿಗಳ ಹಾವಳಿ ಹೆಚ್ಚಾಗ್ತಿದೆ. ಬೀದಿನಾಯಿಗಳ ಹಾವಳಿಯಿಂದ ಎಷ್ಟೋ ಮಕ್ಕಳು ಬಲಿಯಾಗಿದ್ದಾರೆ. ಆದ್ರೂ ಬಿಬಿಎಂಪಿ ಈ ಬಗ್ಗೆ ತಲೆನೇ ಕೆಡೆಸಿಕೊಂಡಿಲ್ಲ. ನಗರದ ಪಾರ್ಕ್ ನಲ್ಲೂ ನಾಯಿ ಕಾಟ.. ಬೀದಿಯಲ್ಲೂ ಶ್ವಾನಗಳ ಹಾವಾಳಿ ಮಿತಿ ಮೀರಿದೆ. ಬೀದಿನಾಯಿಗಳ ಉಪಟಳಕ್ಕೆ ಈಗಾಗಲೇ ಬೆಂಗಳೂರಿಗರು ಬೆದರಿ ಹೋಗಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿರೋ ಈ ಸಂತತಿಯ…

Read More

ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ಹೊರ ವಲಯದಲ್ಲಿ ಸಿದ್ಧವಾಗಿರುವ ಗುರು ರಾಘವೇಂದ್ರ ಸ್ವಾಮಿಗಳ ಮಠ ಇದೇ ಡಿಸೆಂಬರ್ 15 ರಂದು ಲೋಕಾರ್ಪಣೆ ಆಗಲಿದ್ದು ಮಂತ್ರಾಲಯದ ಪರಮಪೂಜ್ಯ 1008 ಸುಬುಧೇಂದ್ರ ಶ್ರೀಪಾದಂಗಳರವರು ಮೃತ್ತಿಕಾ ಬೃಂದಾವನದ ಪೂಜೆ ನೆರವೇರಿಸಲಿದ್ದಾರೆ. 14 ರಂದು ಶೋಭಾಯಾತ್ರೆ ನಡೆಯಲಿದ್ದು, ಸಂಜೆ 6 ಕ್ಕೆ ಶ್ರೀಗಳು ಪುರಪ್ರವೇಶ ಮಾಡಲಿದ್ದಾರೆ. 13 ರಿಂದ 15 ರವರೆಗೆ ಮೂರೂ ದಿನವೂ ಕ್ಷೀರಾಭಿಷೇಕ ಪಂಚಾಮೃತಾಭಿಷೇಕ ಅರ್ಚನೆ ಪುಷ್ಪಾಲಂಕಾರ ವಸ್ತ್ರಸಮರ್ಪಣ ಸೇವೆಗಳು ನಡೆಯಲಿವೆ. ಭಕ್ತ ಮಂಡಳಿ ಪೂರ್ವಭಾವಿ ಸಭೆ ನಡೆಸಿದ್ದುಎಲ್ಲ ತಯಾರಿ ಪೂರ್ಣಗೊಂಡಿದೆ ಅಂತ ಮಠದ ಮುಖ್ಯಸ್ಥರಾದ ಗುಂಡೇರಾವ್ ಕುಲಕರ್ಣಿ ತಿಳಿಸಿದ್ದಾರೆ..ಇದೇವೇಳೆ ರಾಯರ ಭಕ್ತರಾದ ಪಿವಿ ಜೋಶಿಯವರು ಕೋಡ್ಲಾ ರಸ್ತೆಯ ಲಕ್ಷ್ಮೀ ನಗರ ಬಡಾವಣೆಯಲ್ಲಿ ಮಠಕ್ಕಾಗಿ ಭೂಮಿ ದಾನಮಾಡಿದ್ದು ವಿಶೇಷ…

Read More

ಹಾವೇರಿ: ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಸಿದ್ದಪ್ಪ ಸರ್ಕಲ್ ಬಳಿ ನೂರಾರು ಕಾರ್ಯಕರ್ತರಿಂದ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಅಕ್ರಮ ಹಣ ಗಳಿಸಿರುವ ಧಿರಜ್ ಸಾಹೂ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಲಾಗಿದ್ದು, ಧೀರಜ್ ಸಾಹೂ ಅವರನ್ನ ಬಂಧಿಸಬೇಕು, ಭ್ರಷ್ಟಾಚಾರದ ಕರಾಳ ಮುಖವೇ ಕಾಂಗ್ರೆಸ್ ಪಕ್ಷ, ಅಕ್ರಮ ಹಣ ಮತ್ತು ಆಸ್ತಿ ಗಳಿಸಿರುವ ಭ್ರಷ್ಟ ಧೀರಜ್ ಸಾಹೂ ಹಾಗೂ ಅವರ ಜೊತೆ ಶ್ಯಾಮಿಲಾಗಿರುವ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕಾರ ಎಂದು ನೂರಾರು ಬಿಜೆಪಿ ಕಾರ್ಯಕರ್ತರಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು. ಸ್ವಿಸ್ ಬ್ಯಾಂಕ್ ನಲ್ಲಿ ಕಾಂಗ್ರೆಸ್ ನಾಯಕರ ಹಣ ಇದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷ ವಿಪರೀತ ಹಣ ಸಂಗ್ರಹಣರ ಮಾಡುತ್ತಿದೆ. ಮೊನ್ನೆ ನಡೆದ 5 ರಾಜ್ಯಗಳಲ್ಲಿ ಕೇವಲ ಒಂದೇ ಒಂದು ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಲೋಕಸಭೆಯಲ್ಲಿ ಬಿಜೆಪಿಯನ್ನ ಸೋಲಿಸಬೇಕು ಎಂದು India  ಮಾಡಿಕೊಂಡು ಅಕ್ರಮ ಹಣ ಸಂಗ್ರಹಣೆ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಠವಾದ ಬಹುಮತವನ್ನ…

Read More

ಹೈಡ್ ಅಂಡ್ ಸೀಕ್  (Hide and Sick)ಕಿರುಚಿತ್ರವನ್ನು ಭಾರತದ ಯುವ ನಿರ್ದೇಶಕಿ 20 ವರ್ಷ ವಯಸ್ಸಿನ ಮಿಸ್ ಕರೆನ್ ಕ್ಷಿತಿ ಸುವರ್ಣ (Karen Ksiti Suvarna)ಅವರು ನಿರ್ದೇಶಿಸಿದ್ದಾರೆ. ಇದು ಸ್ಕಿಜೋಫ್ರೇನಿಯಾ ಮತ್ತು ಅದರ ತೀವ್ರ ಪರಿಣಾಮಗಳ ಕುರಿತು ಸಂದೇಶವನ್ನು ಹೊಂದಿರುವ 10 ನಿಮಿಷಗಳ ಸ್ವತಂತ್ರ ಕಿರುಚಿತ್ರವಾಗಿದೆ. ಇಂದಿನ ಜಗತ್ತಿನಲ್ಲಿ ಇದು ಪ್ರಸ್ತುತವಾದ ವಿಷಯವಾಗಿದೆ. ಏಕೆಂದರೆ ನಾವು ಖಿನ್ನತೆ ಮತ್ತು ಸಿಂಜೊಫ್ರೇನಿಯಾ ಕಾಯಿಲೆಯಿಂದ ಕುಟುಂಬ ಹತ್ಯೆಗಳು / ಸಾರ್ವಜನಿಕ, ಸಾಮೂಹಿಕ ಹತ್ಯೆಗಳನ್ನು ನೋಡುತ್ತಿದ್ದೇವೆ ಎಂದಿದ್ದಾರೆ ಕರೆನ್. ಕರೆನ್ ಕ್ಷಿತಿ ಸುವರ್ಣ ಅವರು ತಮ್ಮ ಕ್ರಾಫ್ಟ್ ಮತ್ತು ಕಲೆಗಾಗಿ ಅವರ ಚಲನಚಿತ್ರ ತಯಾರಿಕೆಗಾಗಿ ಮೆಚ್ಚುಗೆ ಪಡೆದಿದ್ದಾರೆ. ಯುವ ನಿರ್ದೇಶಕರು ರೋಮಾಂಚಕ ಕಥೆಯನ್ನು ವಿವರಿಸಿದ್ದಾರೆ ಮತ್ತು ಆಧುನಿಕ ಪ್ರಪಂಚದ ಸ್ಕಿಜೋಫ್ರೇನಿಯಾದ ಝೇಂಕರಿಸುವ ವಿಷಯದ ಬಗ್ಗೆ ಸಂದೇಶವನ್ನು ನೀಡಿದ್ದಾರೆ. ಈ ಕಿರುಚಿತ್ರವನ್ನು ವಿಸಿಕಾ ಫಿಲಂಸ್ ಜೊತೆಗೆ ಮೋಹನ್ ಮತ್ತು ಮನು ಗೊರೂರ್ ಸಹ ನಿರ್ಮಾಪಕರಾಗಿ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅನಿಲ್ ಕುಮಾರ್ ಅವರ ಛಾಯಾಗ್ರಹಣವಿದ್ದು, ರಾಷ್ಟ್ರ ಪ್ರಶಸ್ತಿ…

Read More

ದಕ್ಷಿಣದ ಹೆಸರಾಂತ ನಟಿ ತ್ರಿಷಾ (Trisha) ಅವರಿಗೆ ಮಾನಹಾನಿ ರೀತಿಯಲ್ಲಿ ಮಾತನಾಡಿದ್ದ ತಮಿಳಿನ ಖ್ಯಾತ ನಟ ಮನ್ಸೂರ್ ಅಲಿಖಾನ್ (Mansoor Ali Khan) ಗೆ ಮದ್ರಾಸ್ ಹೈಕೋರ್ಟ್ ಮತ್ತೆ ಎಚ್ಚರಿಕೆಯ ಮಾತುಗಳನ್ನು ಆಡಿದೆ. ತ್ರಿಷಾ ಅವರಿಗೆ ನಾನು ಮಾನ ಹಾನಿ ಆಗುವಂತಹ ಮಾತುಗಳನ್ನು ಆಡಿಲ್ಲ. ನನ್ನ ಮಾತುಗಳನ್ನು ಎಡಿಟ್ ಮಾಡಲಾಗಿದೆ. ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲವೆಂದು ಮನ್ಸೂರ್ ನುಡಿದಿದ್ದರು. ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ನಿರೀಕ್ಷನಾ ಜಾಮೀನು ನೀಡುವಂತೆ ಚೆನ್ನೈನ ಪ್ರಧಾನ ಸೆಷನ್ಸ್ ನ್ಯಾಯಾಲಯಕ್ಕೆ ಈ ಹಿಂದೆ ಮನ್ಸೂರ್ ಮೊರೆ ಹೋಗಿದ್ದರು. ಆಗಲೂ ಸೆಷನ್ಸ್ ನ್ಯಾಯಾಲಯ ಛೀಮಾರಿ ಹಾಕಿತ್ತು. ಈ ಪ್ರಕರಣ ಸುಖಾಂತ್ಯಗೊಳಲಿದೆ ಎನ್ನುವ ಹೊತ್ತಿನಲ್ಲಿ, ಮನ್ಸೂರ್ ಅಲಿಖಾನ್ ಮತ್ತೆ ತ್ರಿಷಾ ಹಾಗೂ ಇನ್ನೂ ಇಬ್ಬರ ಕಲಾವಿದರ ಬಗ್ಗೆ ಅಬ್ಬರಿಸಿದ್ದರು. ತ್ರಿಷಾ ವಿಚಾರದಲ್ಲಿ ಸುಖಾಸುಮ್ಮನೆ ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ನಟಿ ಖುಷ್ಭೂ (Khushboo) ಹಾಗೂ ಚಿರಂಜೀವಿ (Chiranjeevi) ಅವರ ಮೇಲೆ ಹರಿಹಾಯ್ದಿದ್ದರು. ಅವರ ಮೇಲೆ ಮಾನನಷ್ಟ (Defamation)…

Read More

ಬೆಂಗಳೂರು: ಕಡಲೆಕಾಯಿ ಪರಿಷೆ (Kadalekai Parishe) ಹೆಸರಿನಲ್ಲಿ ನಿಯಮ ಮೀರಿ ಸುಂಕ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿತ್ತು ಇದರ ಬಗ್ಗೆ ಸಚಿವ ರಾಮಲಿಂಗಾರೆಡ್ಡಿಅವರ ಗಮನಕ್ಕೂ ಸಹ ನೀಡಲಾಗಿತ್ತು ದೇವಾಲಯದ ಆವರಣದ ಹೊರಗೆ ಕಡಲೆಕಾಯಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಬಳಿ 500 ರೂ. ಹಣ ಪಡೆದು ರಶೀದಿ ನೀಡಲಾಗಿತ್ತು. ಈ ಬಗ್ಗೆ ನಿರಂತರ ವರದಿಯ ಬಳಿಕ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕ್ರಮಕೈಗೊಳ್ಳುವುದಾಗಿ ಭರವಸೆ ಕೊಟ್ಟಿದ್ದಾರೆ ರಶೀದಿಯ ಮೇಲೆ ದೊಡ್ಡ ಬಸವನಗುಡಿ (Basavanagudi) ದೇವಸ್ಥಾನ, ಕಡಲೆಕಾಯಿ ಪರಿಷೆ ಎಂದು ಮುದ್ರಣಗೊಂಡಿದೆ. ಈ ಬಗ್ಗೆ ವಿಚಾರಿಸಿದಾಗ ಪ್ರಸಾದ್ ಎಂಬವರಿಗೆ 2-3 ಲಕ್ಷಕ್ಕೆ ಬಿಡ್ ನೀಡಲಾಗಿದೆ. ಒಂದು ದಿನ ಮಾತ್ರ ಹಣ ವಸೂಲಿಗೆ ಅವಕಾಶ ಇದ್ದು, ಬಿಡ್ ನೀಡಿದ ಮಾತ್ರಕ್ಕೆ 500, 200 ರೂ. ಕಲೆಕ್ಟ್ ಮಾಡುವ ಹಾಗಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವುದಾಗಿ ದೊಡ್ಡ ಗಣಪತಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ್ ಬಾಬು ಮಾಹಿತಿ ನೀಡಿದ್ದಾರೆ.

Read More

ಧಾರವಾಡ: ಧಾರವಾಡದಲ್ಲಿ ಶಾಸಕ‌‌ ಬಸನಗೌಡ ಪಾಟೀಲ್ ಯತ್ನಾಳ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳ ನೇತೃತ್ವದಲ್ಲಿ ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ‌ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ತನ್ವೀರ್‌ ಪೀರಾ ಬಗ್ಗೆ ಭಯೋತ್ಪಾದನಕರ‌ ಜೊತೆ ನಂಟಿದೆ ಎಂದು ಹೇಳಿಕೆ‌ ಕೊಟ್ಟಿದ್ದ ಶಾಸಕ ಯತ್ನಾಳ್, ಇದರ ಬೆನ್ನಲ್ಲೇ ಸ್ವಾರ್ಥ ರಾಜಕಾರಣಕ್ಕಾಗಿ ಈ‌ ರೀತಿ ಹೇಳಿಕೆ‌ ಕೊಡುತ್ತಿದ್ದಾರೆ ಸರಿಯಲ್ಲ, ಮುಸ್ಲಿಂ ಸಮುದಾಯಕ್ಕೆ ಕ್ಷಮೆ ‌ಕೇಳಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಲೈ ಜೋಡಿಸಲು‌‌ ಒತ್ತಾಯ ಮಾಡಿದ್ದಾರೆ.

Read More

ಬೆಂಗಳೂರು:  ಮಕ್ಕಳನ್ನ‌ ರಸ್ತೆಯಲ್ಲಿ ಕರೆದೊಯ್ಯುವಾಗ ಪೋಷಕರೇ ಎಚ್ಚರವಾಗಿರಬೇಕು ನಾವು ಎಷ್ಟೇ ಸೇಫ್‌ ಆಗಿ ನೋಡ್ಕೊಂಡ್ರು ಆಗಲ್ಲ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವಾಗ ಒಂಟಿಯಾಗಿ ಬಿಡಲೇಬಾರದು ಕೈ ಹಿಡಿದಿಟ್ಟುಕೊಳ್ಳಬೇಕು ಇಲ್ಲದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಹಾಗಾಗಿ ಇಲ್ಲಿದೆ ನೋಡಿ ಭಯಾನಕ ವಿಡಿಯೋ ಕೂಡ. ಹೌದು ನಾವು ಇಲ್ಲಿ ತೋರಿಸುವ ವಿಡಿಯೋದಲ್ಲಿ ಶಾಲೆ ಬಿಟ್ಟು ಮನೆಗೆ ತೆರಳುತ್ತಿರುವ ಮಕ್ಕಳು ಪೋಷಕರು ಮಕ್ಕಳನ್ನು ಕರೆದೊಯ್ಯುವಾ ಜಾಗೃತರಾಗಿರಬೇಕು ಇಲ್ಲಿದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆ ದಾಟುವಾಗ ಶಾಲಾ ವಿದ್ಯಾರ್ಥಿಗೆ ಗುದ್ದಿದ ಸ್ಕೂಟರ್  ಕೂದಲೆಳೆಯಲ್ಲಿ ಶಾಲಾ ಮಗು ಬಚಾವ್ ಆದ ಘಟನೆ  ಕೊರಮಂಗಲದಲ್ಲಿ ನಡೆದಿದೆ. ಕಾರ್ ಡ್ಯಾಶ್ ಬೋರ್ಡ್ ಕ್ಯಾಮರದಲ್ಲಿ‌ ವಿಡಿಯೋ ಸೆರೆಯಾಗಿದ್ದು ಪೋಷಕರ ನಿರ್ಲಕ್ಷ್ಯದಿಂದ ರಸ್ತೆ ದಾಟಿ ಓಡೋಡಿ ಬಂದ ಮಗು ಅಪಘಾತದ ದೃಶ್ಯ ಕಾರ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಕೂಟರ್ ಓಡಿಸುತ್ತಿದ್ದ ಯುವತಿಯ ಸಮಯ ಪ್ರಜ್ಞೆಗೆ ತಪ್ಪಿದ ಅನಾಹುತ ಪೋಷಕರ ಕೈ ಬಿಡಿಸಿ ರಸ್ತೆಗೆ ಅಡ್ಡಲಾಗಿ ಓಡಿದ ಬಂದ ಮಗು ಈ ವೇಳೆ ತಿರುವು ದಾಟಿ ಬಂದ…

Read More

ಪರಭಾಷಾ ಬಿಗ್ ಬಾಸ್ (Bigg Boss Telugu) ಶೋನಲ್ಲಿ ಭಾಗಿಯಾಗಿ, ಸಖತ್ ಸದ್ದು ಮಾಡಿದ್ದ ಕನ್ನಡತಿ ಶೋಭಾ ಶೆಟ್ಟಿ ಈ ವಾರ ಎಲಿಮಿನೇಟ್ (Eliminated) ಆಗಿದ್ದಾರೆ. ಈ ಮೂಲಕ ಅಸಂಖ್ಯಾತ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ಶೋಭಾ ಶೆಟ್ಟಿ ಇರಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಆ ನಂಬಿಕೆ ಇದೀಗ ಸುಳ್ಳಾಗಿದೆ. ‘ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದರು. ನಾಗಾರ್ಜುನ (Nagarjuna) ನಿರೂಪಣೆಯ ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿ ಕಮಾಲ್ ಮಾಡ್ತಿದ್ದರು. ಕನ್ನಡದ ನಟಿಯ ಆಟ ನೋಡಿ, ಇವ್ರು ಕನ್ನಡದ ಬಿಗ್ ಬಾಸ್ ಸೀಸನ್ 10ನಲ್ಲಿ ಇರಬಾರದಿತ್ತಾ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದರು. ತೆಲುಗು ಬಿಗ್ ಬಾಸ್ ಸೀಸನ್-7ರಲ್ಲಿ ಬೆಂಗಳೂರಿನ ಈ ಬೆಡಗಿ ದೊಡ್ಮನೆಯಲ್ಲಿ ರೆಬೆಲ್ ಆಗಿ ಆಟ ಆಡುತ್ತಿದ್ದರು. ಅವರ ಆಟಕ್ಕೆ ಮನೆ ಮಂದಿ ಗಪ್ ಚುಪ್ ಆಗಿದ್ದರು. ಶೋಭಾ ಖಡಕ್ ಆಟ ನೋಡಿ, ಅಯ್ಯೋ ಇವರು ಕನ್ನಡದ…

Read More