ಬೆಂಗಳೂರು: ಮಕ್ಕಳನ್ನ ರಸ್ತೆಯಲ್ಲಿ ಕರೆದೊಯ್ಯುವಾಗ ಪೋಷಕರೇ ಎಚ್ಚರವಾಗಿರಬೇಕು ನಾವು ಎಷ್ಟೇ ಸೇಫ್ ಆಗಿ ನೋಡ್ಕೊಂಡ್ರು ಆಗಲ್ಲ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವಾಗ ಒಂಟಿಯಾಗಿ ಬಿಡಲೇಬಾರದು ಕೈ ಹಿಡಿದಿಟ್ಟುಕೊಳ್ಳಬೇಕು ಇಲ್ಲದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ ಹಾಗಾಗಿ ಇಲ್ಲಿದೆ ನೋಡಿ ಭಯಾನಕ ವಿಡಿಯೋ ಕೂಡ.
ಹೌದು ನಾವು ಇಲ್ಲಿ ತೋರಿಸುವ ವಿಡಿಯೋದಲ್ಲಿ ಶಾಲೆ ಬಿಟ್ಟು ಮನೆಗೆ ತೆರಳುತ್ತಿರುವ ಮಕ್ಕಳು ಪೋಷಕರು ಮಕ್ಕಳನ್ನು ಕರೆದೊಯ್ಯುವಾ ಜಾಗೃತರಾಗಿರಬೇಕು ಇಲ್ಲಿದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ರಸ್ತೆ ದಾಟುವಾಗ ಶಾಲಾ ವಿದ್ಯಾರ್ಥಿಗೆ ಗುದ್ದಿದ ಸ್ಕೂಟರ್ ಕೂದಲೆಳೆಯಲ್ಲಿ ಶಾಲಾ ಮಗು ಬಚಾವ್ ಆದ ಘಟನೆ ಕೊರಮಂಗಲದಲ್ಲಿ ನಡೆದಿದೆ.
ಕಾರ್ ಡ್ಯಾಶ್ ಬೋರ್ಡ್ ಕ್ಯಾಮರದಲ್ಲಿ ವಿಡಿಯೋ ಸೆರೆಯಾಗಿದ್ದು ಪೋಷಕರ ನಿರ್ಲಕ್ಷ್ಯದಿಂದ ರಸ್ತೆ ದಾಟಿ ಓಡೋಡಿ ಬಂದ ಮಗು ಅಪಘಾತದ ದೃಶ್ಯ ಕಾರ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಕೂಟರ್ ಓಡಿಸುತ್ತಿದ್ದ ಯುವತಿಯ ಸಮಯ ಪ್ರಜ್ಞೆಗೆ ತಪ್ಪಿದ ಅನಾಹುತ ಪೋಷಕರ ಕೈ ಬಿಡಿಸಿ ರಸ್ತೆಗೆ ಅಡ್ಡಲಾಗಿ ಓಡಿದ ಬಂದ ಮಗು ಈ ವೇಳೆ ತಿರುವು ದಾಟಿ ಬಂದ ಸ್ಕೂಟರ್ ಮಗುವಿಗೆ ಡಿಕ್ಕಿ ನಿನ್ನೆ ಬೆಳಗ್ಗೆ ಕೋರಮಂಗಲದಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.