Author: AIN Author

ದಿನದ ಮೂರು ಹೊತ್ತು ಸರಿಯಾದ ಪ್ರಮಾಣದಲ್ಲಿ, ಸರಿಯಾದ ಆಹಾರವನ್ನು ತಿನ್ನುವುದು ಮನುಷ್ಯನ ಆರೋಗ್ಯಕ್ಕೆ ಅತೀ ಅಗತ್ಯ. ಆದ್ರೆ ಇತ್ತೀಚಿಗೆ ಹೆಚ್ಚಿನವರು ಕಾಲೇಜ್‌, ಆಫೀಸಿಗೆ ಲೇಟಾಯ್ತು ಅನ್ನೋ ಕಾರಣಕ್ಕೆ ಬೆಳಗ್ಗಿನ ಉಪಾಹಾರವನ್ನು ಸ್ಕಿಪ್ ಮಾಡ್ತಾರೆ. ಆದ್ರೆ ಇಂಥಾ ಅಭ್ಯಾಸದಿಂದ ಆರೋಗ್ಯಕ್ಕೆಷ್ಟು ತೊಂದ್ರೆಯಾಗುತ್ತೆ, ಅದರಿಂದ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ತಿಳಿಯೋಣ ಇಲ್ಲಿ. ಬೆಳಗ್ಗಿನ ಉಪಾಹಾರವು ಬಹಳ ಮುಖ್ಯವಾದ ಊಟವಾಗಿದೆ. ಇದು ನಿಮ್ಮ ಈಡೀ ದಿನಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವೊಮ್ಮ ಸಮಯದ ಅಭಾವದಿಂದ ಬೆಳಗ್ಗಿನ ಉಪಾಹಾರವನ್ನು ತಪ್ಪಿಸುತ್ತಾರೆ. ಇನ್ನು ಕೆಲವರು ತೂಕ ಇಳಿಸಬೇಕು ಅನ್ನೋ ಕಾರಣಕ್ಕೆ ಬೆಳಗ್ಗೆ ತಿನ್ನುವುದಿಲ್ಲ. ಬೆಳಗ್ಗಿನ ಆರೋಗ್ಯಕರ ಉಪಾಹಾರ ಸೇವಬೆ ನಿಮ್ಮನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸಬಹುದು. ಅದೇ ಬೆಳಗ್ಗಿನ ಉಪಾಹಾರವನ್ನು ಬಿಟ್ಟು ಬಿಡುವ ಅಭ್ಯಾಸ ನಿಮ್ಮಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಬ್ರೇಕ್‌ಫಾಸ್ಟ್‌ ಸ್ಕಿಪ್ ಮಾಡೋದ್ರಿಂದ ಏನೆಲ್ಲಾ ತೊಂದ್ರೆಯಾಗುತ್ತೆ ತಿಳ್ಕೊಳ್ಳಿ. ಶಕ್ತಿಯ ಕೊರತೆ ಹೌದು, ಬೆಳಗ್ಗಿನ ಉಪಹಾರವನ್ನು ಸ್ಕಿಪ್‌ ಮಾಡುವುದರಿಂದ, ದೇಹದಲ್ಲಿ ಶಕ್ತಿಯ ಕೊರತೆ ಆಗುತ್ತದೆ. ಏಕೆಂದರೆ…

Read More

ಭೋಪಾಲ್:- ಮಧ್ಯ ಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಯಾರು? ಅವರ ಹಿನ್ನೆಲೆಯೇನು ಎಂಬುವುದನ್ನು ತಿಳಿಯೋಣ ಬನ್ನಿ. ಒಬಿಸಿ ನಾಯಕ ಮತ್ತು ಮೂರು ಬಾರಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯವರು ಎಂಬುದು ಮೋಹನ್ ಯಾದವ್ ಅವರ ಇತಿಹಾಸವಾಗಿದೆ. ಅವರು ವಿದ್ಯಾರ್ಥಿಯಾಗಿದ್ದಾಗಲೇ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿ ಎತ್ತರಕ್ಕೆ ಏರುತ್ತಾ ಹೋಗಿ ಮಧ್ಯಪ್ರದೇಶ ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಉಜ್ಜಯಿನಿ ದಕ್ಷಿಣ ಕ್ಷೇತ್ರದ 58 ವರ್ಷದ ಮೋಹನ್ ಯಾದವ್ ಮಧ್ಯ ಪ್ರದೇಶದಲ್ಲಿ ಉಮಾಭಾರತಿ, ಬಾಬುಲಾಲ್ ಗೌರ್ ಮತ್ತು ಶಿವರಾಜ್ ಸಿಂಗ್ ಚೌಹಾಣ್ ನಂತರ 2003 ರಿಂದ ಭಾರತೀಯ ಜನತಾ ಪಕ್ಷದಿಂದ ರಾಜ್ಯದ ನಾಲ್ಕನೇ ಒಬಿಸಿ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿಯಾಗಿದ್ದಾರೆ. ಅವರು ಕಾಂಗ್ರೆಸ್ನ ಪ್ರಕಾಶ್ ಚಂದ್ರ ಸೇಥಿ ನಂತರ ಉಜ್ಜಯಿನಿಯಿಂದ ಆಯ್ಕೆಯಾದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ. ಮೋಹನ್ ಯಾದವ್ ಅವರು ಇಂದು ಸಿಎಂ ಸ್ಥಾನ ಅಲಂಕರಿಸಿರುವುದು ಅಚ್ಚರಿಯ ವಿಷಯ. ಏಕೆಂದರೆ ಸಿಎಂ ಸ್ಥಾನದಲ್ಲಿ ಅವರ ಹೆಸರು ಕೇಳಿಬರಲೇ ಇಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ…

Read More

ಬೆಂಗಳೂರು/ಬೆಳಗಾವಿ: ಸರ್ಕಾರಿ ಜಮೀನಿನ ಅಕ್ರಮ ಪರಭಾರೆಗೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byre Gowda) ಭರವಸೆ ನೀಡಿದ್ದಾರೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ನಾರಾಯಣಸ್ವಾಮಿ (Narayanaswamy) ಪ್ರಶ್ನೆ ಕೇಳಿದರು. ಬೆಂಗಳೂರು, ಬೆಂಗಳೂರು ಗ್ರಾಮಾಂತರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಆಗಿದೆ. ಇದಕ್ಕೆ ಸರ್ಕಾರಿ ಅಧಿಕಾರಗಳೇ ಕೈ ಜೋಡಿಸಿದ್ದಾರೆ. ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಒತ್ತಾಯ ಮಾಡಿದ್ರು. ಇದಕ್ಕೆ ಉತ್ತರ ನೀಡಿದ ಸಚಿವರು, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ 51,555 ಎಕರೆ ಸರ್ಕಾರಿ ಜಮೀನು ಗೋಮಾಳ ಅತಿಕ್ರಮವಾಗಿದೆ. ಈ ಸಂಬಂಧ 23307 ಪ್ರಕರಣ ದಾಖಲಾಗಿದೆ. 51,555 ಎಕರೆ ಪೈಕಿ 12434 ಪ್ರಕರಣಗಳಲ್ಲಿ ಸುಮಾರು 28,264 ಎಕರೆ ಒತ್ತುವರಿ ತೆರವು ಆಗಿದೆ. ರಾಜ್ಯಾದ್ಯಂತ 63,32,484 ಸರ್ಕಾರಿ ಎಕರೆ ಜಾಗ ಇದೆ. ಇದರಲ್ಲಿ 14,72,493 ಎಕರೆ ಜಮೀನು ಒತ್ತುವರಿ ಆಗಿದೆ ಎಂದರು. ವಿವಿಧ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು, ಅಕ್ರಮ, ಸಕ್ರಮ ಯೋಜನೆ, ಸಾರ್ವಜನಿಕ ಬಳಕೆಗೆ 10,82,752 ಎಕರೆ ಜಮೀನು…

Read More

ದೆಹಲಿ: ಲೋಕಸಭೆಯಲ್ಲಿ ಇಂದು ನಡೆದ ಗಂಭೀರ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ. ಇವರು ಯಾವುದೇ ಸಂಘಟನೆಗೆ ಸೇರಿದವರಲ್ಲ, ಸರ್ಕಾರದ ವಿರುದ್ಧ ಪ್ರತಿಭಟನೆಯೇ ಇವರ ಉದ್ದೇಶ ಎಂದು ತಿಳಿದುಬಂದಿದೆ. ಶೂಗಳ ಒಳಗೆ ಗ್ಯಾಸ್ ಕ್ಯಾನಿಸ್ಟರ್‌ಗಳನ್ನು ಇಟ್ಟುಕೊಂಡು ಒಳಗೆ ಕೊಂಡೊಯ್ದಿದ್ದು ಹಳದಿ ಅನಿಲವನ್ನು ಸ್ಪ್ರೇ ಮಾಡಿದ್ದಾರೆ. ಜೊತೆಗೆ ʼತಾನಾಶಾಹಿ ನಹೀ ಚಲೇಗೀʼ (ಸರ್ವಾಧಿಕಾರವನ್ನು ಸಹಿಸುವುದಿಲ್ಲ) ಎಂಬ ಸ್ಲೋಗನ್‌ ಕೂಗಿದ್ದಾರೆ. ಇವರಲ್ಲಿ ಒಬ್ಬಾತ ಡಿ.ಮನೋರಂಜನ್‌ ಎಂದು ಗುರುತಿಸಲಾಗಿದೆ. ಮನೋರಂಜನ್‌ ಮೈಸೂರಿನವನು ಹಾಗೂ ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಇನ್ನೊಬ್ಬಾತ ಸಾಗರ್‌ ಶರ್ಮಾ ಎಂಬ ಹೆಸರಿನವನು. ಇಬ್ಬರಲ್ಲಿ ಒಬ್ಬನ ಬಳಿ ಲಖನೌ ಮೂಲದ ಆಧಾರ್‌ ಕಾರ್ಡ್‌ ದೊರೆತಿದೆ. ವಿಚಾರಣೆಯ ವೇಳೆ “ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಿದ್ದೇವೆ. ನಾವು ವಿದ್ಯಾರ್ಥಿಗಳು. ನಾವು ಯಾವುದೇ ಸಂಘಟನೆಗೆ ಸೇರಿಲ್ಲ. ನಮ್ಮ ಹಕ್ಕುಗಳನ್ನು ದಮನಿಸಲಾಗುತ್ತಿದೆ. ಸರ್ವಾಧಿಕಾರದ ವಿರುದ್ಧ ನಮ್ಮ ಹೋರಾಟʼʼ ಎಂದು ಹೇಳಿದ್ದಾರೆ ಎಂದು ಗೊತ್ತಾಗಿದೆ. ಇದು ಲೋಕಸಭೆಯ ಒಳಗೆ ನಡೆದರೆ, ಸಂಸತ್ತಿನ ಹೊರಗೆ ಇಬ್ಬರು…

Read More

ಬೆಂಗಳೂರು: ಸಂಸತ್  ದಾಳಿಯಾದ ಘಟನೆಯನ್ನು ಎಲ್ಲರೂ ಖಂಡಿಸಬೇಕಾಗುತ್ತದೆ. ಪಾಸ್‍ಗಳನ್ನು ಕೊಡುವಾಗ ಗೊತ್ತಿರುವವರಿಗೆ ಮಾತ್ರ ಕೊಡಬೇಕು. ಗೊತ್ತಿಲ್ಲದವರಿಗೆ ಪಾಸ್ ಕೊಡಬಾರದು. ಈ ಘಟನೆ ಮೇಲ್ನೋಟಕ್ಕೆ ಭದ್ರತಾ ಲೋಪ ಎನ್ನುವುದು ಗೊತ್ತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಲೋಕಸಭೆ (Loksabha) ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್‍ಗೆ ಯಾರಿಂದಲೋ ಪಾಸ್ ಪಡೆದು ಹೋಗಿದ್ದಾರೆ. ಸಂಸತ್ ಸದಸ್ಯರೊಬ್ಬರಿಂದ ಪಾಸ್ ಪಡೆದಿದ್ದಾರೆ ಎನ್ನಲಾಗಿದೆ. ಭದ್ರತಾ ಸಿಬ್ಬಂದಿ ಸರಿಯಾಗಿ ಅವರನ್ನು ತಪಾಸಣೆ ಮಾಡಿಲ್ಲ ಅನ್ಸತ್ತೆ. ಸಚಿವರಿಗೆ ಸೇರಿ ಎಲ್ಲರಿಗೂ ತಪಾಸಣೆ ಮಾಡ್ತಾರೆ. ತಪಾಸಣೆ ಮಾಡಿದರೂ ಹೇಗೆ ಸ್ಮೋಕ್ ಸ್ಪ್ರೇ ಮಾಡಿದ್ರು?. ನಾನು ಅನುಮಾನ ವ್ಯಕ್ತಪಡಿಸ್ತಿಲ್ಲ. ಇಲ್ಲೂ ಕೂಡಾ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಪಾಸ್ ಪಡೆದು ಒಳ್ಳೆಯವ್ರೂ ಬರಬಹುದು, ಕೆಟ್ಟವರೂ ಬರಬಹುದು, ಉಗ್ರರೂ ಬರಬಹುದು. ಹಿಂದೆ ಸಂಸತ್ ನಲ್ಲಿ ಉಗ್ರರು ನುಗ್ಗಿದ್ರು ಎಂದು ಸಿಎಂ ತಿಳಿಸಿದ್ದಾರೆ. ಗೃಹ ಸಚಿವರು (Home Minister) ಅಧಿವೇಶನ ಕ್ಕೆ ಭಾರೀ ಪೊಲೀಸ್ ಬಂದೋಬಸ್ತ್ ಕೊಡಲು ಹೇಳ್ತೀನಿ. ಸ್ಪೀಕರ್ ಅವರು ಕೂಡಾ ನಿಮ್ಮ…

Read More

ನವದೆಹಲಿ: ಕಲಾಪ ನಡೆಯುತ್ತಿರುವಾಗಲೇ ಭದ್ರತಾ ಲೋಪ (Security Breach) ಸಂಭವಿಸಿದ ಬೆನ್ನಲ್ಲೇ ಲೋಕಸಭಾ ಸ್ಪೀಕರ್‌ (Lok Sabha Speaker) ಓಂ ಬಿರ್ಲಾ (Om Birla) ಅವರು ವೀಕ್ಷಕರಿಗೆ ನೀಡುವ ಪಾಸ್‌ ಅನ್ನು ನಿರ್ಬಂಧಿಸಿದ್ದಾರೆ. ಇಂದು ಇಬ್ಬರು ಲೋಕಸಭಾ (Lok Sabha) ಗ್ಯಾಲರಿಯಿಂದ ಕಲಾಪ ನಡೆಯುವ ವೇಳೆ ಮೇಲಿನಿಂದ ಜಿಗಿದು ಸ್ಮೋಕ್‌ ಬಾಂಬ್‌ ಸಿಡಿಸಿದ್ದರು. ಈ ಘಟನೆಯಿಂದ ಎಚ್ಚೆತ್ತು ಬಿರ್ಲಾ ಅವರು ವೀಕ್ಷಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ.   ಇಂದು ಇಬ್ಬರು ಲೋಕಸಭಾ (Lok Sabha) ಗ್ಯಾಲರಿಯಿಂದ ಕಲಾಪ ನಡೆಯುವ ವೇಳೆ ಮೇಲಿನಿಂದ ಜಿಗಿದು ಸ್ಮೋಕ್‌ ಬಾಂಬ್‌ ಸಿಡಿಸಿದ್ದರು. ಈ ಘಟನೆಯಿಂದ ಎಚ್ಚೆತ್ತು ಬಿರ್ಲಾ ಅವರು ವೀಕ್ಷಕರ ಪ್ರವೇಶಕ್ಕೆ ನಿರ್ಬಂಧ ಹೇರಿದ್ದಾರೆ. ಒಳ ನುಗ್ಗಿದ ಇಬ್ಬರನ್ನು ಬಂಧಿಸಲಾಗಿದೆ ಮತ್ತು ಅವರ ಬಳಿಯಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೊರಗಡೆ ಪ್ರತಿಭಟನೆ ನಡೆಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು  ಓಂ ಬಿರ್ಲಾ ಹೇಳಿದ್ದಾರೆ. ಸಂಸತ್‌ ಒಳ ಪ್ರವೇಶಕ್ಕೆ ಪಾಸ್‌ ಇಲ್ಲದೇ ಯಾರನ್ನು ಬಿಡಲ್ಲ. ಮೂರು ಹಂತದಲ್ಲಿ ತಪಾಸಣೆ ಮಾಡಿಯೇ ಬಿಡಲಾಗುತ್ತದೆ. ಪೆನ್‌,…

Read More

‘ಅಣ್ಣ ತಂಗಿ’ ಸೀರಿಯಲ್ ನಟಿ ಅಖಿಲಾ ಪ್ರಕಾಶ್ (Akhila Prakash) ಅವರು ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟಿದ್ದಾರೆ. ಭರತ್ ಕಾಂತ್ ಎಂಬುವವರ ಜೊತೆ ಅಖಿಲಾ ಹೊಸ ಬಾಳಿಗೆ ಕಾಲಿಟ್ಟಿದ್ದು, ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಕೊಡಗಿನ ಕುವರಿ ಅಖಿಲಾ ಪ್ರಕಾಶ್ ಮತ್ತು ಭರತ್ ಕಾಂತ್ (Bharath Kanth) ಹಲವು ವರ್ಷಗಳು ಪ್ರೀತಿಸಿ, ಗುರುಹಿರಿಯರ ಸಮ್ಮತಿ ಪಡೆದು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ಇಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೀಗ ಮದುವೆಯಾಗಿದ್ದಾರೆ. ಅಖಿಲಾ ಪ್ರಕಾಶ್ ಮದುವೆಗೆ ‘ಅಣ್ಣ ತಂಗಿ’ (Anna Thangi Serial) ಸೀರಿಯಲ್ ತಂಡ ಮತ್ತು ಹಲವು ಕಿರುತೆರೆ ಕಲಾವಿದರು ಆಗಮಿಸಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ.

Read More

ಬೆಳಗಾವಿ : ರಾಜ್ಯದಲ್ಲಿ ನಡೆಯುತ್ತಿವೆ ಎನ್ನಲಾದ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ವಿಶೇಷವಾದ ನೀತಿಯೊಂದನ್ನು ಜಾರಿ ಮಾಡಲು ಸರ್ಕಾರದಿಂದ ಚಿಂತನೆ ನಡೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು. ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಭಾರತಿ ಶೆಟ್ಟಿ, ಶರವಣ ಟಿ.ಎ., ಬಿ.ಎಂ.ಫಾರೂಖ್, ಸಿ.ಎನ್.ಮಂಜೇಗೌಡ ಅವರು ವಿಧಾನ ಪರಿಷತನಲ್ಲಿ ಗಮನ ಸೆಳೆಯುವ ಸೂಚನೆಯಡಿ ಕೇಳಿದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹೇಗೆ ಬೇಧಿಸಬಹುದು ಎಂಬುದರ ಬಗ್ಗೆ ಆರೋಗ್ಯ ಇಲಾಖೆಯು ಎಚ್ಚೆತ್ತುಕೊಂಡು ಗಂಭೀರ ಚಿಂತನೆ ನಡೆಸಿದೆ. https://ainlivenews.com/know-how-to-take-care-of-gums-and-teeth-in-winter-here-are-the-tips/ ಈ ಬಗ್ಗೆ ಅಂಕಿಸಂಖ್ಯೆಗಳನ್ನು ಸಂಗ್ರಹಿಸಿ, ಗುಪ್ತಚರವಾಗಿ ಮಾಹಿತಿ ಪಡೆದು ಇಲಾಖೆಯ ಕಾರ್ಯಾಚರಣೆಯನ್ನು ಬಲಗೊಳಿಸಲಾ ಗುವುದು ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಪಿಸಿಪಿಎನ್‌ಡಿಸಿ ಸೆಲ್‌ಗಳು ಕಾಲಕಾಲಕ್ಕೆ ಸಭೆ ನಡೆಸಿ ಜಿಲ್ಲಾ ಹಂತದಲ್ಲಿ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣ ತಡೆಗೆ ಕಾರ್ಯಪ್ರವೃತ್ತವಾಗಿವೆ.…

Read More

ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ ‘ಕಿರಿಕ್ ಪಾರ್ಟಿ’ ತೆರೆಕಂಡು ಬರೋಬ್ಬರಿ ಏಳು ವರ್ಷಗಳಾಗಿವೆ. ಅದರ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದು ಗೊತ್ತೇ ಇದೆ. ಇದೀಗ ಅವರೆಲ್ಲರೂ ಮತ್ತಷ್ಟು ಖ್ಯಾತರಾಗಿದ್ದಾರೆ. ಉನ್ನತ ಮಟ್ಟದಲ್ಲಿದ್ದಾರೆ… ಆದರೆ, ಆ ರೀತಿಯ ಯೂತ್ ಕಾಮಿಡಿ ಸ್ಟೋರಿ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗನ್ನು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ ‘ಬ್ಯಾಚುಲರ್ ಪಾರ್ಟಿ’ ಕೊಡಲು ಸಜ್ಜಾಗಿದ್ದಾರೆ ಎಂಬುದು ವಿಶೇಷ. ಹೌದು. ‘ಕಿರಿಕ್ ಪಾರ್ಟಿ’ಯ ಬರಹಗಾರ ಅಭಿಜಿತ್ ಮಹೇಶ್, ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ‘ಬ್ಯಾಚುಲರ್ ಪಾರ್ಟಿ’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಚಗುಳಿಯಿಡುವ ಸಂಭಾಷಣೆಗೆ ಖ್ಯಾತರಾಗಿರುವ ಅಭಿ, ತಮ್ಮ ಮೊದಲ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದಕ್ಕೆ ಸಿನಿಮಾ ಬಿಡುಗಡೆಯವರೆಗೂ ಕಾಯಬೇಕು. ಅದಕ್ಕೂ ಮುನ್ನ ‘ಬ್ಯಾಚುಲರ್ ಪಾರ್ಟಿ’ಯ ಮೊದಲ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ದಿಗಂತ್, ಲೂಸ್…

Read More

ಬೆಂಗಳೂರು: ಪ್ರತಾಪ್ ಸಿಂಹ (Prathap Simha) ಬಹಳ ಬುದ್ಧಿವಂತ. ಅರ‍್ಯಾಕೆ ಇಂಥವರಿಗೆ ಪಾಸ್ ಕೊಟ್ಟರೋ? ಅವರ ಹೆಸರು ಹೇಳಲು ಇಲ್ಲಿ ನನಗೆ ಇಷ್ಟವಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ. ಕಲಾಪ ನಡೆಯುತ್ತಿದ್ದ ಹೊತ್ತಿನಲ್ಲೇ ಪಾರ್ಲಿಮೆಂಟ್ (Parliament) ಒಳಗೆ ಕಲರ್ ಸ್ಮೋಕ್ ಸಿಡಿಸಿದ ಯುವಕರಿಗೆ ಪ್ರತಾಪ್ ಸಿಂಹ ಕಚೇರಿಯಿಂದಲೇ ಪಾಸ್ ವಿತರಣೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮದವರೊಂದಿಗೆ ಮಾತನಾಡಿ, ಎಲ್ಲರೂ ಫೋನ್ ಮಾಡುತ್ತಿದ್ದಾರೆ. ಏನು? ಯಾಕೆ? ಅಂತ ಕೇಳುತ್ತಿದ್ದಾರೆ. ನಾನು ಟಿವಿಯಲ್ಲಿ ನೋಡಿದೆ. ಮೇಲಿಂದಲೇ ಅವರು ಹಾರಿದ್ದಾರೆ. ಸಂಸದರೆಲ್ಲ ಇಲಿಗಳಂತೆ ಬಚ್ಚಿಕೊಳ್ಳುತ್ತಿದ್ದಾರೆ. ನಮ್ಮ ಪ್ರತಿಪಕ್ಷದವರೇ ಇದರ ಹೊಣೆ ತೆಗೆದುಕೊಳ್ಳಬೇಕು. ಅವರು ಏನು ಬುದ್ಧಿವಾದ ಹೇಳುತ್ತಾರೋ ಹೇಳಲಿ ಎಂದು ಹರಿಹಾಯ್ದರು ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬ ಇಬ್ಬರು ಯುವಕರು ಕಲಾಪದ ವೇಳೆ ನುಗ್ಗಿರುವುದು ಎಂದು ತಿಳಿದು ಬಂದಿದೆ. ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.…

Read More