Author: AIN Author

ದಾಳಿಂಬೆ ನಾರಿನಂಶ, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಈ ಹಣ್ಣು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಾಳಿಂಬೆ ಸಿಪ್ಪೆಯ ಚಹಾವನ್ನು ಮನಸ್ಸನ್ನು ಚುರುಕುಗೊಳಿಸಲು ತಯಾರಿಸಬಹುದು. ದಾಳಿಂಬೆ ಸಿಪ್ಪೆಯ ಚಹಾವನ್ನು ತಯಾರಿಸಲು ಸುಲಭವಾದ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ಇದನ್ನು ನೀವು ಸ್ಥಳೀಯ ಭಾಷೆಯಲ್ಲಿ ದಾಳಿಂಬೆ ಸಿಪ್ಪೆಗಳ ಕಷಾಯ ಎಂದೂ ಕರೆಯಬಹುದು. ದಾಳಿಂಬೆ ಸಿಪ್ಪೆ ಚಹಾ(Pomogranate peel tea ) ತಯಾರಿಸೋದು ಹೇಗೆ ಎಂದು ಇಲ್ಲಿದೆ ನೋಡಿ: ದಾಳಿಂಬೆ ಸಿಪ್ಪೆ ಚಹಾ ತಯಾರಿಸಲು, ಮೊದಲನೆಯದಾಗಿ, ಖಾಲಿ ಟೀ ಬ್ಯಾಗ್ ತೆಗೆದುಕೊಂಡು ಅದರಲ್ಲಿ ಒಂದು ಟೀಸ್ಪೂನ್ ದಾಳಿಂಬೆ ಸಿಪ್ಪೆ ಪುಡಿಯನ್ನು ಬೆರೆಸಿ ಮತ್ತು ಅದನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ. ಚಹಾದ ರುಚಿಯನ್ನು ಹೆಚ್ಚಿಸಲು  ಈ ಚಹಾಕ್ಕೆ ಸ್ವಲ್ಪ ಜೇನುತುಪ್ಪ ಸಹ ಸೇರಿಸಬಹುದು. ದಾಳಿಂಬೆ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿಯುವುದರ ಪ್ರಯೋಜನಗಳು ಚರ್ಮದ ಸಮಸ್ಯೆಗಳಿಗೆ ಸಹಾಯಕಾರಿ- ದಾಳಿಂಬೆ ಸಿಪ್ಪೆಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್…

Read More

ಪ್ರಕೃತಿಯಲ್ಲಿ ದೊರೆಯುವ ವಿವಿಧ ಹಣ್ಣುಗಳಲ್ಲಿ ಪಪ್ಪಾಯಿ ಅತ್ಯಂತ ಅದ್ಭುತವಾಗಿದೆ. ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಬಿ, ವಿಟಮಿನ್ ಕೆ, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾಗಿಯೇ ಪಪ್ಪಾಯಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಪಪ್ಪಾಯಿ ಒಳ್ಳೆಯದಲ್ಲ ಎಂದು ವೈದ್ಯರು ಸೂಚಿಸುತ್ತಾರೆ. ಅಲರ್ಜಿ ಸಮಸ್ಯೆ ಇರುವವರು ಪಪ್ಪಾಯಿಯನ್ನು ತ್ಯಜಿಸಬೇಕು. ಏಕೆಂದರೆ ಪಪ್ಪಾಯಿಯ ಹಾಲು ಅಲರ್ಜಿಯನ್ನು ಉಂಟು ಮಾಡುತ್ತದೆ. ಪಪ್ಪಾಯಿಯನ್ನು ಗರ್ಭಿಣಿಯರು ತಿನ್ನಬಾರದು. ಇದರಲ್ಲಿರುವ ಪಾಪೈನ್ ಗರ್ಭದಲ್ಲಿರುವ ಮಗುವಿಗೆ ಹಾನಿ ಮಾಡುತ್ತದೆ. ಪಪ್ಪಾಯಿಯನ್ನು ಮಿತಿ ಮೀರಿ ತಿನ್ನುವುದರಿಂದ ಗ್ಯಾಸ್, ಹೊಟ್ಟೆ ಉಬ್ಬುವುದು ಮತ್ತು ಅತಿಸಾರ ಸಮಸ್ಯೆಗಳು ಬರಬಹುದು. ಪಪ್ಪಾಯಿಯಲ್ಲಿ ವಿಟಮಿನ್ ಕೆ ಅಧಿಕವಾಗಿದೆ. ಇದರಿಂದ ರಕ್ತ ಬೇಗ ಹೆಪ್ಪುಗಟ್ಟುತ್ತದೆ. ರಕ್ತ ತೆಳುವಾಗಿಸುವವರು ತಮ್ಮ ವೈದ್ಯರ ಸಲಹೆಯಂತೆ ಪಪ್ಪಾಯಿಯನ್ನು ಸೇವಿಸಬೇಕು.

Read More

ನಮ್ಮ ಆರೋಗ್ಯವನ್ನು ಬಲಪಡಿಸಲು ನಾವು ಯಾವ ಹಣ್ಣನ್ನು ತಿನ್ನಬಹುದು ಎಂದು ನಮಗೆ ಖಚಿತವಿಲ್ಲ. ನಮ್ಮ ಆಯ್ಕೆಯ ಒಂದು ನಿರ್ದಿಷ್ಟ ಹಣ್ಣು ಅಥವಾ ನಿರ್ದಿಷ್ಟ ಹಣ್ಣು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಯಾರಾದರೂ ಹೇಳಿದರೆ, ಅಥವಾ ನಾವು ಅದನ್ನು ಎಲ್ಲಿಯಾದರೂ ಓದಿದರೆ, ನಾವು ಸಾಕಷ್ಟು ಹಣ್ಣುಗಳನ್ನು ತಿನ್ನುತ್ತೇವೆ. ಆದರೆ ನಮ್ಮ ಸುತ್ತಮುತ್ತಲಿನ ಹಣ್ಣುಗಳಲ್ಲಿ ಕಂಡುಬರುವ ಪೋಷಕಾಂಶಗಳ ಬಗ್ಗೆ ನಮಗೆ ಸ್ವಲ್ಪ ಕಡಿಮೆ ತಿಳಿದಿದೆ. ಅವುಗಳಲ್ಲಿ ಒಂದಾದ ಪೇರಳೆ, ಆರೋಗ್ಯವನ್ನು ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಪೇರಳೆ ಹಣ್ಣನ್ನು ಸೇವಿಸುವ ಮೂಲಕ ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಮಧುಮೇಹ ಹೊಂದಿರುವ ಜನರು ದಿನವಿಡೀ ನಿಯಮಿತವಾಗಿ ಸೇವಿಸುವ ಮೂಲಕ ತಮ್ಮ ಸಕ್ಕರೆಯನ್ನು ಕಡಿಮೆ ಮಾಡಬಹುದು. ಬಹಳ ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ಪೇರಳೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ, ವಿಶೇಷವಾಗಿ ಇನ್ಸುಲಿನ್ ಉತ್ಪಾದನೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿಯೊಬ್ಬರೂ ಪೇರಳೆ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದರ ಆರೋಗ್ಯ ಪ್ರಯೋಜನಗಳು ನಿಮಗೆ ತಿಳಿದಿದ್ದರೆ, ನೀವು ಕೋರಿಮಾರಿ ಹಣ್ಣನ್ನು ಪಡೆದು…

Read More

ಗ್ಕೆಬರ್ಹಾ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ವಿಶ್ವದ ನಂ.1 ಟಿ20 ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌‌ (Suryakumar Yadav), ವಿರಾಟ್‌ ಕೊಹ್ಲಿ (Virat Kohl) ಅವರ ಹೆಸರಲ್ಲಿದ್ದ 13 ವರ್ಷಗಳ ಹಳೆಯ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಗ್ಕೆಬರ್ಹಾ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಸೂರ್ಯಕುಮಾರ್‌ 36 ಎಸೆತಗಳಲ್ಲಿ 56 ರನ್‌ (3 ಸಿಕ್ಸರ್‌, 5 ಬೌಂಡರಿ) ಗಳಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 2 ಸಾವಿರ ರನ್‌ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವೇಗದ 2000 ರನ್‌ ಪೂರೈಸಿದ ಬ್ಯಾಟರ್‌ ಎನಿಸಿಕೊಂಡರು. 2010ರಲ್ಲಿ ಇಂಗ್ಲೆಂಡ್‌ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ‌ 56ನೇ ಇನಿಂಗ್ಸ್ ನಲ್ಲಿ 2000 ಸಾವಿರ ರನ್‌ ಪೂರೈಸಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಸಹ ತಮ್ಮ 56ನೇ ಇನ್ನಿಂಗ್ಸ್‌ನಲ್ಲಿ 2,000 ರನ್‌ ಪೂರೈಸಿದ್ದಾರೆ. 2000 ರನ್‌ ಪೂರೈಸಲು 1,164 ಎಸೆತಗಳನ್ನು ಎದುರಿಸಿದ್ದಾರೆ.…

Read More

ಬೆಂಗಳೂರು:- ಲೋಕಸಭೆಯಲ್ಲಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಬಿಕೆ ಹರಿಪ್ರಸಾದ್ ಆಕ್ರೋಶ ಹೊರ ಹಾಕಿದ್ದಾರೆ. “ಈ‌ ಹಿಂದೆ ಉಗ್ರಗಾಮಿಗಳು ‌ಪಾರ್ಲಿಮೆಂಟ್‌ ಮೇಲೆ ದಾಳಿ‌ ನಡೆಸಿದ್ದರು. ಹುತಾತ್ಮರಿಗೆ ಸಂತಾಪ ಸೂಚಿಸುವ ದಿನವೇ‌ ಈ ಘಟನೆ ನಡೆದಿದೆ. ಹೊಸ‌ ಪಾರ್ಲಿಮೆಂಟ್ ಕಟ್ಟಿದ್ದಾರೆ. ಆದರೂ‌ ರಾಷ್ಟ್ರದ ಭದ್ರತೆ ಕುಸಿದಿದೆ. ಭದ್ರತಾ ವೈಫಲ್ಯದ ಹೊಣೆಯನ್ನ ಗೃಹ ಸಚಿವರು‌ ಹೊರಬೇಕು. ಈ ಘಟನೆಯನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದರು.

Read More

ಟೆಲ್ ಅವಿವ್: ಇಸ್ರೇಲ್ (Israel) ಸೇನೆ ಗಾಜಾದಲ್ಲಿನ (Gaza) ಹಮಾಸ್ (Hamas) ಉಗ್ರರು ಅವಿತುಕೊಳ್ಳಲು ಬಳಸುತ್ತಿದ್ದ ಸುರಂಗಗಳಿಗೆ (Tunnel) ಸಮುದ್ರದ ನೀರನ್ನು ಬಿಡಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಹಮಾಸ್ ಉಗ್ರರು ಒತ್ತೆಯಾಳು ಗಳನ್ನು, ಯುದ್ಧ ಸಾಮಾಗ್ರಿಗಳನ್ನು ಅಡಗಿಸಲು ಮಾತ್ರವಲ್ಲದೇ ತಾವೂ ಕೂಡಾ ಅವಿತುಕೊಳ್ಳಲು ಬಳಸಲಾಗುತ್ತಿದೆ ಎಂದು ನಂಬಲಾಗಿರುವ ಈ ಸುರಂಗಗಳನ್ನು ನಾಶಪಡಿಸಲು, https://ainlivenews.com/know-how-to-take-care-of-gums-and-teeth-in-winter-here-are-the-tips/  ಸಮುದ್ರದ ನೀರನ್ನು ಹರಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತದ ಕೆಲ ಅಧಿಕಾರಿಗಳು ಹೇಳಿರುವುದಾಗಿ ವರದಿಯಾಗಿದೆ.  ಸಮುದ್ರ ನೀರು ಹರಿಸುವುದರಿಂದ ಶುದ್ಧ ಕುಡಿಯುವ ನೀರು ಪೂರೈಕೆಗೆ ಅಪಾಯವಾಗಲಿದೆ ಎಂದು ಇತರ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ವರದಿಗೆ ಇಸ್ರೇಲ್‌ನ ಸೇನೆ ಸದ್ಯ ಪ್ರತಿಕ್ರಿಯೆ ನೀಡಿಲ್ಲ.

Read More

ಬೆಂಗಳೂರು:- ಬಿಜೆಪಿ ನಾಯಕರು ಯತ್ನಾಳ್ ಮಾಡಿರುವ ಆರೋಪಗಳಿಗೆ ಉತ್ತರಿಸಲಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪನವರು ಹೈಕಮಾಂಡ್​ಗೆ ಎರಡು ಸಾವಿರ ಕೋಟಿ ರೂಪಾಯಿ ಕಾಣಿಕೆ ನೀಡಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹಿಂದೆ ಆರೋಪಿಸಿದ್ದ ಬಸವನಗೌಡ ಪಾಟೀಲ್ ಯತ್ನಾಳ್, ನಿನ್ನೆ ಹೊಸ ಬಾಂಬು ಸಿಡಿಸಿದ್ದಾರೆ. ಕೇಂದ್ರದ ಬಿಜೆಪಿ ನಾಯಕರನ್ನು ಯಡಿಯೂರಪ್ಪ ಬ್ಲಾಕ್ ಮೇಲ್ ಮಾಡಿ ತಮ್ಮ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಏನಿದು ಬ್ಲಾಕ್ ಮೇಲ್?. ಈ ಬಗ್ಗೆ ಯಡಿಯೂರಪ್ಪ ಇಂದಿನ ಸಾರ್ವಜನಿಕ ಸಭೆಯಲ್ಲಿ ವಿವರ ನೀಡಲಿ” ಎಂದು ಒತ್ತಾಯಿಸಿದ್ದಾರೆ. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಿಜೆಪಿ ನಾಯಕ ವಿ.ಸೋಮಣ್ಣ ಅವರನ್ನು ಮೈಸೂರಿನ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮಾಡಿ ಸೋಲಿಸಿದ್ದಾರೆ ಎಂದು ಇಲ್ಲಿಯ ವರೆಗೆ ಆರೋಪಿಸುತ್ತಾ ಬಂದಿರುವ ಯತ್ನಾಳ್ ಅವರು, ಈಗ ಬಸವರಾಜ ಬೊಮ್ಮಾಯಿ ಅವರನ್ನೂ ಸೋಲಿಸಲು ಬಿ ವೈ ವಿಜಯೇಂದ್ರ ಹಣ ಕೊಟ್ಟು ಕಳಿಸಿದ್ದರು ಎಂದು ಗುರುತರವಾದ ಇನ್ನೊಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಿರುವ ಯತ್ನಾಳ್,…

Read More

ಬೆಂಗಳೂರು :- ರಾಜ್ಯದ ಹಲವೆಡೆ ಇಂದು ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು, ಹಾಸನ, ಚಿಕ್ಕ ಮಗಳೂರು, ಮೈಸೂರು, ರಾಮನಗರ ಈ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆ ಆಗಲಿದೆ. ಒಂದೆರಡು ಕಡೆಗಳಲ್ಲಿ ಸಾಧಾರಣಕ್ಕಿಂತ ಅತ್ಯಧಿಕ ಪ್ರಮಾಣದ ಮಳೆ ಆಗಲಿದೆ ಎಂದು ತಿಳಿಸಿದೆ. ಸದ್ಯ ಕರ್ನಾಟಕದಲ್ಲಿ ಅಲ್ಲಲ್ಲಿ ಹಿಂಗಾರು ಮಳೆ ಚುರುಕುಗೊಳ್ಳುವ ಜೊತೆಗೆ ಚಳಿ ಹೆಚ್ಚಾಗುವ ಮುನ್ಸೂಚನೆ ದೊರೆತಿದೆ. ಉತ್ತರ ಒಳನಾಡಿನಲ್ಲಿ ಈ ವಾರಪೂರ್ತಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ. ಹೀಗಿದ್ದರೂ ಈ ಭಾಗದಲ್ಲಿ ಚಳಿಯ ಪ್ರಮಾಣ ಹೆಚ್ಚಿರಲಿದೆ ಎಂದಿದೆ. ರಾಜ್ಯದ ಬಹುತೇಕ ಕಡೆ ಗರಿಷ್ಠ ತಾಪಮಾನ ಮತ್ತು ಕನಿಷ್ಠ ತಾಪಮಾನ ಇಳಿಕೆ ಆಗಿದೆ. ಹೀಗಾಗಿ ಚಳಿಗಾಲ ಆರಂಭವಾದ ಅನುಭವವಾಗುತ್ತಿದೆ. ಈ ಮೂಲಕ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಚಳಿ ಆವರಿಸುತ್ತಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ

Read More

ಬೆಂಗಳೂರು:- ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ ಹೊರ ಹಾಕಿದೆ. ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಸರ್ಕಾರವೇ ನಾಗರೀಕರ ಮೊದಲ ಶತ್ರು ಎಂಬುದಾಗಿ ಭಾಸವಾಗುತ್ತದೆ ಎಂದು ತಿಳಿಸಿದೆ. ಗುತ್ತಿದಾರರಿಗೆ ಹಣ ಪಾವತಿಸಲು ಫೆಬ್ರವರಿಯವರೆಗೆ ಕಾವಲಾವಕಾಶ ನೀಡಬೇಕು ಎಂಬ ಸರ್ಕಾರಿ ವಕೀಲರ ಮನವಿಯನ್ನು ಆಕ್ಷೇಪಿಸಿದ ವಿಭಾಗೀಯ ಪೀಠ, ನಿಮ್ಮ ನಡೆಯಿಂದ ಕೆಲಸ ಮಾಡಲು ಗುತ್ತಿಗೆದಾರರು ಹಿಂಜರಿಯುವ ಸ್ಥಿತಿ ಸೃಷ್ಟಿಸುತ್ತಿದ್ದೀರಿ. ನಿಮ್ಮ ನೀತಿಯಿಂದ ಟೆಂಡರ್ ಮೊತ್ತ ಹಲವು ಪಟ್ಟು ಹೆಚ್ಚಾಗಬಹುದು. ಸರ್ಕಾರಕ್ಕೆ ಇಂತಹ ಸಲಹೆ ನೀಡುತ್ತಿರುವರಾರು ? ನಾವು ಕಾನೂನು ಪದವಿ ಓದುತ್ತಿದ್ದಾಗ ಸರ್ಕಾರವೇ ನಾಗರಿಕರ ಮೊದಲ ಶತ್ರು ಎಂಬ ಮಾತು ಕೇಳಿಬರುತ್ತಿತ್ತು. ಇದೀಗ ಈ ಮಾತು ಸತ್ಯ ಎಂಬ ಭಾವನೆ ಮೂಡುತ್ತಿದೆ ಎಂದು ಪೀಠ ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, ಅರ್ಜಿದಾರರಿಗೆ ಕಂತಿನಲ್ಲಿ ಬಿಲ್ ಪಾವತಿಸಲಾಗುತ್ತಿದೆ. ಫೆಬ್ರವರಿ…

Read More

ಜಗತ್ತನ್ನು ಅಂಗೈಯಲ್ಲಿ ತೋರಿಸುವ ಮೊಬೈಲ್‌ ಈಗ ಊಟ-ನಿದ್ದೆಯಷ್ಟೇ ಮುಖ್ಯ ಎಂಬಂತಾಗಿದೆ. ಅದಕ್ಕಿಂತಲೂ ಒಂದು ಪಟ್ಟು ಹೆಚ್ಚೇ ಮಹತ್ವ ಪಡೆದಿದೆ ಎಂದರೂ ತಪ್ಪಿಲ್ಲ. ಬಿಡುವಿನ ಸಮಯದಲ್ಲಿ ಮೊಬೈಲ್‌ ನೋಡುವ ಕಾಲ ಇದಲ್ಲ. ಬಿಡುವು ಇಲ್ಲದಿದ್ದರೂ ಮಧ್ಯೆಮಧ್ಯೆ ಮೊಬೈಲ್‌ ಮೇಲೆ ಕಣ್ಣು-ಕೈ ಆಡಿಸಬೇಕು. ಮೊಬೈಲ್‌ ನೋಡಲೆಂದೇ ಸಮಯ ಎತ್ತಿಡುವವರು, ಮೊಬೈಲ್‌ ನೋಡುತ್ತ ಸಮಯ ಹಾಳು ಮಾಡುವವರು, ಮೊಬೈಲ್‌ನಲ್ಲೇ ದಿನ ಕಳೆಯುವವರು-ಹೀಗೆ ವಿವಿಧ ವರ್ಗಗಳ ಜನರು ಇದ್ದಾರೆ. ನಾವು ಹಲವು ಕಂಪನಿಗಳ ಹಾಗೂ ವಿವಿಧ ವಿನ್ಯಾಸದ ಮೊಬೈಲ್ ಫೋನ್ ಗಳನ್ನು ಬಳಸುತ್ತೇವೆ. ಆದರೆ, ಕೆಲವೊಮ್ಮೆ ಮೊಬೈಲ್ ಬೇಗ ತಮ್ಮ ಕೆಲಸ ನಿಲ್ಲಿಸುತ್ತವೆ. ಆಗ ನಾವು ಮೊಬೈಲ್ ಕಂಪನಿಯವರನ್ನು ಹೊಣೆಗಾರರನ್ನಾಗಿಸುತ್ತೇವೆ. ಇದು ಸಾಮಾನ್ಯ. ಅದಕ್ಕೂ ಮುಂಚೆ ನಾವು ಮೊಬೈಲ್ ಫೋನ್ ಗಳನ್ನು ಯಾವ ರೀತಿ ಬಳಸಬೇಕು? ಅದು ಹೆಚ್ಚು ದಿನ ಹೇಗೆ ಕೆಲಸ ಮಾಡುವಂತೆ ಗಮನಹರಿಸಬೇಕು? ಎಂಬುದನ್ನು ತಿಳಿದುಕೊಳ್ಳಬೇಕಿದೆ. ಚಾರ್ಜ್ ಮಾಡುವಾಗ ಇರಲಿ ಎಚ್ಚರ ನಾವು ಹಲವು ಬಾರಿ ಮೋಬೈಲ್ ಚಾರ್ಜ್ ಮಾಡುವುದರಿಂದ ನಮ್ಮ ಫೋನ್ ಹಾಳಾಗುತ್ತದೆ.…

Read More