ಬೆಂಗಳೂರು:- ಲೋಕಸಭೆಯಲ್ಲಿ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಬಿಕೆ ಹರಿಪ್ರಸಾದ್ ಆಕ್ರೋಶ ಹೊರ ಹಾಕಿದ್ದಾರೆ.
“ಈ ಹಿಂದೆ ಉಗ್ರಗಾಮಿಗಳು ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ್ದರು. ಹುತಾತ್ಮರಿಗೆ ಸಂತಾಪ ಸೂಚಿಸುವ ದಿನವೇ ಈ ಘಟನೆ ನಡೆದಿದೆ. ಹೊಸ ಪಾರ್ಲಿಮೆಂಟ್ ಕಟ್ಟಿದ್ದಾರೆ. ಆದರೂ ರಾಷ್ಟ್ರದ ಭದ್ರತೆ ಕುಸಿದಿದೆ. ಭದ್ರತಾ ವೈಫಲ್ಯದ ಹೊಣೆಯನ್ನ ಗೃಹ ಸಚಿವರು ಹೊರಬೇಕು. ಈ ಘಟನೆಯನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದರು.