Author: AIN Author

ನವದೆಹಲಿ: ಪ್ರತಾಪ್‌ ಸಿಂಹ (Pratap Simha) ಅವರು ಯಾವ ಹಿನ್ನೆಲೆಯಲ್ಲಿ ಪಾಸ್‌ ಕೊಟ್ಟರು ಎಂಬುದೆಲ್ಲವೂ ತನಿಖೆ ಆಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಷಾದನೀಯ, ಖಂಡನೀಯ. ಘಟನೆಯ ಬಳಿಕ ಲೋಕಸಭಾ ಸ್ಪೀಕರ್ ಸಭಾ ನಾಯಕರ ಸಭೆ ನಡೆಸಿದರು. ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು. ಘಟನೆಯಿಂದ ಪಾಠ ಕಲಿತು ಮುಂದೆ ತೆಗೆದುಕೊಳ್ಳುವ ಕ್ರಮದ ಬಗ್ಗೆ ಸಮಾಲೋಚನೆ ಮಾಡಲಾಯಿತು. ಎಲ್ಲರ ಸಲಹೆ ಪಡೆದು ಸಂಸತ್ ಸುರಕ್ಷತೆ ಮಾಡುವುದು ನಮ್ಮ ಉದ್ದೇಶ. 1971 ರಿಂದ ದಾಖಲೆಗಳ ಪ್ರಕಾರ ಇಂತಹ ಘಟನೆಯಲ್ಲಿ ಸ್ಪೀಕರ್ ಕೈಗೊಂಡಿರುವ ಕ್ರಮಗಳಂತೆ ಈ ಬಾರಿಯೂ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. https://ainlivenews.com/what-did-dk-shivakumar-say-about-pratap-singh-being-trapped/ ಆಯುಧ ಸೇರಿದಂತೆ ಇತ್ಯಾಧಿ ವಸ್ತು ಪಡೆದು ಗ್ಯಾಲರಿಗೆ ಬಂದಿರುವುದು ಇದೆ. ಇಂತಹ ಘಟನೆಯಲ್ಲಿ ಅಂದಿನ ಸ್ಪೀಕರ್ ತೆಗೆದುಕೊಂಡ‌ ಪರಂಪರೆಯನ್ನು ಪರಿಶೀಲಿಸಿ ಅಂತೆಯೇ ಈ ಬಾರಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಗೃಹ ಸಚಿವಾಲಯಕ್ಕೆ ಪತ್ರ ಬರೆದು ಉನ್ನತ…

Read More

ಕಿವಿ ಹಣ್ಣು, ಹೆಸರೇ ಸೂಚಿಸುವಂತೆ, ಕಿವಿ ಪಕ್ಷಿಯ ದೇಶವಾದ ನ್ಯೂಜಿಲ್ಯಾಂಡ್ ಮೂಲದ್ದಾಗಿದೆ. ಇಂದು ಭಾರತದಲ್ಲಿಯೂ ಇದು ಸುಲಭವಾಗಿ ಲಭಿಸುತ್ತಿದೆ. ಮೊಟ್ಟೆಯೊಂದನ್ನು ಒತ್ತಿ ಚಪ್ಪಟೆಯಾಗಿಸಿದರೆ ಪಡೆಯುವ ಅಥವಾ ಕುಂಬಳಕಾಯಿಯನ್ನು ಗಜಲಿಂಬೆಯ ಗಾತ್ರಕ್ಕೆ ಇಳಿಸಿದಂತಹ ಆಹಾರ ಇರುವ ಇದರ ಸಿಪ್ಪೆಯಲ್ಲಿ ಅತಿ ಸೂಕ್ಷ್ಮವಾದ, ಆದರೆ ಚುಚ್ಚದ ಮೃದುವಾದ ರೋಮಗಳಿವೆ. ಸಿಪ್ಪೆ ಸುಲಿದಾಗ ತಿಳಿಹಸಿರು ಬಣ್ಣದ ತಿರುಳು ಹಾಗೂ ನಡುವೆ ಬಿಳಿ ಬಣ್ಣದ ಭಾಗ ಕಾಣಿಸುತ್ತದೆ. ಬಿಳಿ ಭಾಗ ಚಪ್ಪೆಯಾಗಿದ್ದರೂ ಹಸಿರು ಭಾಗ ಚಿಕ್ಕ ಬೀಜಗಳನ್ನು ಹೊಂದಿದ್ದು ಕೊಂಚ ಆಮ್ಲೀಯ ಹುಳಿಮಿಶ್ರಿತ ಸಿಹಿ ರುಚಿಯನ್ನು ಹೊಂದಿರುತ್ತದೆ. ಈ ರುಚಿಗೆ ಇದರಲ್ಲಿರುವ ಆಗಾಧ ಪ್ರಮಾಣದ ವಿಟಮಿನ್ ಸಿ ಕಾರಣ. ಉಳಿದಂತೆ ಈ ಹಣ್ಣಿನಲ್ಲಿ ವಿಟಮಿನ್ ಕೆ, ಫೋಲೇಟ್, ಪೊಟ್ಯಾಶಿಯಂ ಅಂಶಗಳೂ ಸಮೃದ್ಧವಾಗಿವೆ. ಅಲ್ಲದೇ ಇದರಲ್ಲಿ ಆಂಟಿ ಆಕ್ಸಿಡೆಂಟುಗಳು ಮತ್ತು ಕರಗುವ ಹಾಗೂ ಕರಗದ ನಾರಿನಂಶವೂ ಸಮೃದ್ಧವಾಗಿದೆ. ಕಿವಿ ಹಣ್ಣನ್ನು ‘ಸುಪರ್ ಫುಡ್’ ಎಂದು ಇನ್ನೂ ಕರೆಯಲಾಗಿಲ್ಲದಿದ್ದರೂ ಹೀಗೆ ಕರೆಯಬಹುದಾದ ಎಲ್ಲಾ ಗುಣಗಳನ್ನು ಹೊಂದಿದೆ. ಪ್ರಮುಖ ವಿಟಮಿನ್ನುಗಳು, ಖನಿಜಗಳು…

Read More

ಕಿರುತೆರೆಯ ಜನಪ್ರಿಯ ಸೀರಿಯಲ್ ‘ಗೀತಾ’ (Geetha) ಹೀರೋ ಧನುಷ್ ಗೌಡ್ (Dhanush Gowda) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಂಜನಾ ಜೊತೆ ಅದ್ದೂರಿಯಾಗಿ ಧನುಷ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ‘ಗೀತಾ’ ಸೀರಿಯಲ್ ಮೂಲಕ ಮನೆಮಾತಾದ ವಿಜಯ್ ಅಲಿಯಾಸ್ ಧನುಷ್ ಗೌಡ ಅವರು ಗ್ರ್ಯಾಂಡ್‌ ಆಗಿ ಸಂಜನಾ (Sanjana Prabhu) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ಬ್ರೇಕ್ ಹಾಕಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಧನುಷ್-ಸಂಜನಾ ಎಂಗೇಜ್‌ಮೆಂಟ್ ಕಾರ್ಯಕ್ರಮ ನಡೆದಿದೆ. ‘ಗೀತಾ’ ಸಹನಟಿ ಭವ್ಯಾ ಗೌಡ ಮತ್ತು ಕುಟುಂಬಸ್ಥರು, ಆಪ್ತರು ಅಷ್ಟೇ ಈ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Read More

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್​ಗಳು ಮಿಂಚಿನ ದಾಳಿ ನಡೆಸಿದರು.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 27.3 ಓವರ್​ಗಳಲ್ಲಿ 116 ರನ್​ಗಳಿಗೆ ಆಲೌಟ್​ ಆಗಿದೆ. ದಕ್ಷಿಣ ಆಫ್ರಿಕಾ ಪರ ಆಂಡಿಲ್ ಫೆಹ್ಲುಕ್ವಾಯೊ 33, ಟೋನಿ ಡಿ ಜೋರ್ಜಿ 28, ನಾಯಕ ಏಡೆನ್ ಮಾರ್ಕ್ರಾಮ್ 12 ರನ್ ಗಳಿಸಿದರು. ಉಳಿದ ಬ್ಯಾಟರ್​ಗಳು ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು. ಅರ್ಷದೀಪ್ ಸಿಂಗ್, ಅವೇಶ್​ ಖಾನ್ ಮಾರಕ ದಾಳಿಗೆ ಹರಿಣಗಳು ಪೆವಿಲಿಯನ್ ಸೇರಿದ್ದಾರೆ ಬಿಗಿ ಬೌಲಿಂಗ್ ದಾಳಿ ನಡೆಸಿದ ಅರ್ಷದೀಪ್ ಸಿಂಗ್ 5, ಅವೇಶ್​ ಖಾನ್ 4 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು. ಭಾರತ ಗೆಲ್ಲಲು 117 ರನ್​ ಗಳಿಸಬೇಕಿದೆ. ಮೂವರು ಶೂನ್ಯ, ನಾಲ್ವರು ಒಂದಂಕಿಗೆ ಔಟ್. ಆರಂಭಿಕ ಬ್ಯಾಟರ್ ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ವಿಯಾನ್ ಮುಲ್ಡರ್ ಶೂನ್ಯಕ್ಕೆ (0) ಔಟಾದರು. ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್ ಒಂದಂಕಿಗೆ ವಿಕೆಟ್…

Read More

ಬೆಂಗಳೂರು: ರಾಜ್ಯದಲ್ಲಿ ಹೆಣ್ಣು ಮಕ್ಕಳ ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆ. ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯ ಮಾಡಲಾಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿ ದಲಿತ ಶಾಲಾ ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಚ ಮಾಡಲು ಬಳಕೆ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡುವ ಮೂಲಕ ಮಾಜಿ ಸಿಎಂ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ. https://x.com/BSBommai/status/1736325672878957053?t=31NIjtLq3dye5Ju7BCTkJQ&s=08 ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರೀಯವಾಗಿದೆ. ಯಾರಿಗೂ ಭಯ ಇಲ್ಲ. ಸರ್ಕಾರ  ಅಧಿಕಾರಿಗಳ  ಮೇಲೆ ಸಂಪೂರ್ಣ ಹಿಡಿತ ಕಳೆದು ಕೊಂಡಿದೆ. ಇಲ್ಲಿ ಮಹಿಳೆಯರು, ಮಕ್ಕಳು, ದಲಿತರಿಗೆ ಸುರಕ್ಷತೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಇದ್ದೂ ಸತ್ತಂತಾಗಿದ್ದು, ನಿರ್ಜೀವ ಸರ್ಕಾರಕ್ಕೆ ರಾಜ್ಯದ ಜನತೆ ಹಿಡಿ ಶಾಪ ಹಾಕುವಂತಾಗಿದೆ.

Read More

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರದ ಪ್ರಕರಣಗಳಿದ್ದರೆ ಅದನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮಹಿಳೆ ಮೇಲಾದ ದೌರ್ಜನ್ಯ ಪ್ರಕರಣವನ್ನು ಯಾವ ತನಿಖೆಗೆ ಬೇಕಾದರೂ ವಹಿಸಲು ಸಿದ್ಧ. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ನಮ್ಮ ಪೊಲೀಸರು ತನಿಖೆ ಮಾಡಲು ಸಮರ್ಥರಿದ್ದಾರೆ. ಹಾಗಾಗಿ, ಬೇರೆ ಪ್ರಶ್ನೆ ಉದ್ಭವಿಸದು ಎಂದು ತಿಳಿಸಿದ್ದಾರೆ. ಕ.ರಾ.ರ.ಸಾ ನಿಗಮದಲ್ಲಿ ಸಾಕಷ್ಟು ಬಸ್ ಕೆಟ್ಟು ನಿಂತಿದ್ದು ಚಾಲಕರಿಗೆ ಡ್ಯೂಟಿ ಸಿಗುತ್ತಿಲ್ಲ. ಡ್ಯೂಟಿ ಹಾಕಲು ಅಧಿಕಾರಿಗಳು ಹಣ ಕೇಳುತ್ತಾರೆ ಎಂದು ಕೆಲ ಚಾಲಕರಿಂದ ದೂರು ಕೇಳಿಬರುತ್ತಿದ್ದು, ಡ್ಯೂಟಿ ಹಾಕಲು ಲಂಚ ಕೇಳಿದ ಪ್ರಕರಣವನ್ನೂ ತನಿಖೆ ಮಾಡಿಸಲಾಗುವುದು. ಈಗಾಗಲೇ ನಾವು ಹಿಂದಿನ ಸರ್ಕಾರದ 40% ಭ್ರಷ್ಟಾಚಾರ ಪ್ರಕರಣವನ್ನು ತನಿಖೆ ಮಾಡಿಸುತ್ತಿದ್ದೇವೆ. ಆರೋಪಗಳು ಸಾಬೀತಾದ ಮೇಲೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇಡೀ ದೇಶದಲ್ಲಿ ಕೊರೊನಾ ಹೊಸ ತಳಿ ಶುರುವಾಗಿದ್ದು, ಈ ಬಗ್ಗೆ ಆರೋಗ್ಯ…

Read More

ಬೆಳಗಾವಿ: ಮೈಸೂರು ವಿಮಾನ ನಿಲ್ದಾಣಕ್ಕೆ (Mysuru Airport) ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡಬೇಕು. ಟಿಪ್ಪುವಿನ ಹೆಸರು ಶೌಚಾಲಯಗಳಿಗೆ ಇಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಹೇಳಿದರು. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು (Tipu Sultan) ಹೆಸರಿಡುವ ವಿಚಾರ ಕುರಿತು ಮಾತನಾಡಿದ ಯತ್ನಾಳ್‌, ಟಿಪ್ಪು ಒಬ್ಬ ಮತಾಂಧ. ನಾಲ್ಕು ಸಾವಿರ ದೇವಸ್ಥಾನ ಧ್ವಂಸ ಮಾಡಿದವ. ಅವನ ಖಡ್ಗದ ಮೇಲೆ ಕಾಫೀರರನ್ನು (ಮುಸ್ಲಿಮರಲ್ಲದವರು) ಕೊಲೆ ಮಾಡಿ ಎಂದು ಬರೆದಿತ್ತು. ಇಂತಹ ಒಬ್ಬ ಮತಾಂಧ ಟಿಪ್ಪು ಹೆಸರನ್ನ ಬೇಕಾದರೇ ಶೌಚಾಲಯಗಳಿಗೆ ಇಡಲಿ ಎಂದು ಕುಟುಕಿದರು. ವೀರ ಸಾವರ್ಕರ್‌ ಭಾವಚಿತ್ರ ತೆರವು ಮಾಡಬೇಕು ಎನ್ನುವ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, 10 ಖರ್ಗೆಗಳು ಬಂದರೂ ಸಾವರ್ಕರ್ ಫೋಟೋ ತೆಗೆಯಲು ಆಗುವುದಿಲ್ಲ. ಸಾವರ್ಕರ್‌ ಫೋಟೋ ತೆಗೆದು ನೆಹರೂ ಫೋಟೋ ಹಚ್ಚಿದರೆ ನಾವು ಅದನ್ನೂ ತೆಗೆಯುತ್ತೇವೆ ಎಂದು ಎಚ್ಚರಿಸಿದರು. ರಾಜ್ಯದ ವಿಮಾನ ನಿಲ್ದಾಣಗಳಿಗೆ ಮಹನೀಯರ ಹೆಸರಿಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸರ್ವಾನುಮತದ ನಿರ್ಣಯ…

Read More

ಬೆಂಗಳೂರು: ಆ ಪುಟ್ಟ ಕಂದಮ್ಮ ತನ್ನ ಪಾಡಿದೆ ತಾನು ಆಟವಾಡ್ತಾಯಿತ್ತು.. ಆದ್ರೆ ಪಾಪ ಆ ಮಗುವಿಗೆ ಗೊತ್ತಿರಲಿಲ್ಲ, ಕಾರಿನ ರೂಪದಲ್ಲಿ ತನ್ನ ಸಾವು ಬರತ್ತೆ ಅಂತ.. ಒಂದೇ ಸಮನೆ ಮಗುವಿನ ಮೇಲೆ ಕಾರು ಹತ್ತಿದ್ದು, ಆ ಮಗು ಕೊನೆಯುಸಿರೆಳೆದಿದೆ.. ಈ ದೃಶ್ಯ ನೋಡೋದಕ್ಕೆ ತುಂಬಾನೆ ಭಯಾನಕವಾಗಿದೆ.. ಹೌದು..  ಆಟವಾಡುತ್ತಿದ್ದ ಬಾಲಕಿ ಮೇಲೆ ಕಾರು ಹರಿದು ಸಾವನ್ನಪ್ಪಿರುವ ದಾರುಣ ಘಟನೆ ಡಿಸೆಂಬರ್ 9ರ ಬೆಳಗ್ಗೆ ಏಳು ಘಂಟೆಗೆ  ಬೆಳ್ಳಂದೂರು ಠಾಣಾ ವ್ಯಾಪ್ತಿಯ ಕಸವನಹಳ್ಳಿಯ ಸಮೃದ್ಧಿ ಅಪಾರ್ಟ್ಮೆಂಟ್ ಬಳಿ ನಡೆದಿದೆ.  . ನೇಪಾಳ ಮೂಲದ ಜೋಗ್ ಜುತಾರ್ ಹಾಗೂ ಅನಿತಾ ದಂಪತಿಯ 3 ವರ್ಷದ ಮಗು ಅರ್ಬಿನಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದು, ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಸಮೃದ್ದಿ ಅಪಾರ್ಟ್ಮೆಂಟ್ ನಲ್ಲಿ ಮುಂಭಾಗದಲ್ಲಿ  ಆಟವಾಡುತ್ತಿದ್ದ ಮಗುವನ್ನ ಗಮನಿಸದ ಅದೇ ಅಪಾರ್ಟ್ಮೆಂಟ್ ನಿವಾಸಿ ಸುಮನ್ ಎಂಬ ಈತ  ಕಾರು ಹರಿಸಿಕೊಂಡು ಹೋಗಿದ್ದಾನೆ. ಘಟನೆಯ ಬಗ್ಗೆ ಅರಿವೇ ಇರದ ಪೋಷಕರು, ಅಪಾರ್ಟ್‌ಮೆಂಟ್ ಗೇಟಿಗೆ ಸಿಲುಕಿಹಾಕಿಕೊಂಡು ಮಗು…

Read More

ಬೆಂಗಳೂರು: ಸಂಸತ್ (Parliament) ಮೇಲಿನ ದಾಳಿಗೆ ನಿರುದ್ಯೋಗ ಕಾರಣ ಎಂಬ ರಾಹುಲ್ ಗಾಂಧಿ ಹೇಳಿಕೆ ಚೈಲ್ಡಿಶ್ ಹೇಳಿಕೆ ಅಂತ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹೇಳಿಕೆ ಚೈಲ್ಡಿಶ್ ಹೇಳಿಕೆ. ನಿರುದ್ಯೋಗ ಸಮಸ್ಯೆ ಬಗ್ಗೆ ಚರ್ಚೆ ಆಗಲಿ ಬೇಡ ಅನ್ನೊಲ್ಲ. ನಿರುದ್ಯೋಗ ಇದೆ ಅಂತ ಹೇಳಿ ಕೊಲೆ ಮಾಡ್ತೀನಿ, ಎಂಪಿಯನ್ನ, ಕೊಲೆ ಮಾಡ್ತೀನಿ ಅಂದ್ರೆ. ಕರ್ನಾಟಕದಲ್ಲಿ ನಿರುದ್ಯೋಗ ಇಲ್ಲವಾ? ಛತ್ತೀಸ್ಗಢದಲ್ಲಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಇತ್ತು ಅಲ್ಲಿ ನಿರುದ್ಯೋಗ ಇಲ್ಲವಾ. ನಿರುದ್ಯೋಗ ಇದೆ ಅಂತ ದೇಶದ ವಿರೋಧಿ, ದೇಶದ್ರೋಹಿ, ಟೆರರಿಸ್ಟ್ ಜೊತೆ ಲಿಂಕ್ ಇಟ್ಟುಕೊಳ್ಳುವ ಸಂಘಟನೆ ಜೊತೆ ಹೀಗೆ ಮಾಡೋಕೆ ನಿಮ್ಮ ಬೆಂಬಲ ಇದೆಯಾ ರಾಹುಲ್ ಗಾಂಧಿ ಅಂತ ಪ್ರಶ್ನೆ ಮಾಡಿದ್ರು. ಮರ್ಡರ್ ಮಾಡಿದವನಿಗೂ ಅವನದ್ದೇ ಲಾಜಿಕ್ ಇರತ್ತೆ. ಆದರೆ ಇದನ್ನ ಸಮಾಜ ಒಪ್ಪುತ್ತಾ? ರಾಹುಲ್ ಗಾಂಧಿ ಎಷ್ಟು ಚೈಲ್ಡಿಶ್ ಆಗಿ ಮಾತಾಡ್ತಾ ಇದ್ದೀರಾ. ಮೋದಿ ವಿರೋಧ ಮಾಡೋ ಭರದಲ್ಲಿ…

Read More

ಹುಬ್ಬಳ್ಳಿ; ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ‘ಪಲ್ಲಕ್ಕಿ’ ಮಾದರಿಯ ನಾನ್ ಎಸಿ ಸ್ಲೀಪರ್ ಬಸ್‌ ಸೇವೆ ಜನಪ್ರಿಯವಾಗುತ್ತಿದ್ದು . ಹಲವಾರು ಮಾರ್ಗದಲ್ಲಿ ಈಗಾಗಲೇ ಬಸ್‌ಗಳ ಸಂಚಾರ ಆರಂಭಿಸಲಾಗಿದೆ. ಕರಾವಳಿ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸಲು ‘ಪಲ್ಲಕ್ಕಿ’ ಬಸ್ ಸೇವೆ ಆರಂಭವಾಗಿದೆ. ನೈರುತ್ಯ ಸಾರಿಗೆ ತಾಳಿಕೋಟೆ, ಗಂಗಾವತಿಗೆ ವಯಾ ಹುಬ್ಬಳ್ಳಿ ‘ಪಲ್ಲಕ್ಕಿ’ ಬಸ್ ಸೇವೆಯನ್ನು ಆರಂಭಿಸಿದೆ. ಅಕ್ಟೋಬರ್‌ನಲ್ಲಿ ‘ಪಲ್ಲಕ್ಕಿ’ ಹೆಸರಿನ ನೂತನ ಬಸ್‌ ಸೇವೆಯನ್ನು ಕೆಎಸ್ಆರ್‌ಟಿಸಿ ಆರಂಭಿಸಿದೆ. ರಾಜ್ಯದ ಹಲವಾರು ಮಾರ್ಗದಲ್ಲಿ ಈ ಬಸ್‌ಗಳು ಸಂಚಾರ ನಡೆಸುತ್ತಿವೆ. ಸಾಗರ-ಶಿವಮೊಗ್ಗ-ವಿಜಯಪುರ ಸ್ಲೀಪರ್ ಪಲ್ಲಕ್ಕಿ ಬಸ್, ವೇಳಾಪಟ್ಟಿ ಬಸ್ ವೇಳಾಪಟ್ಟಿ; ಮಂಗಳೂರು-ತಾಳಿಕೋಟೆ ನಡುವಿನ ‘ಪಲ್ಲಕ್ಕಿ’ ಬಸ್ ಸಂಜೆ 6.30ಕ್ಕೆ ಮಂಗಳೂರಿನಿಂದ ಹೊರಡಲಿದೆ. ಮುಂಜಾನೆ 2.45ಕ್ಕೆ ಹುಬ್ಬಳ್ಳಿ, ಬಳಿಕ 7 ಗಂಟೆಗೆ ತಾಳಿಕೋಟೆ ತಲುಪಲಿದೆ. ತಾಳಿಕೋಟೆ-ಮಂಗಳೂರು ನಡುವಿನ ಬಸ್ ಸಂಜೆ 5.01ಕ್ಕೆ ತಾಳಿಕೋಟೆಯಿಂದ ಹೊರಡಲಿದೆ. 10.45ಕ್ಕೆ ಹುಬ್ಬಳ್ಳಿ ಮತ್ತು ಮರುದಿನ ಬೆಳಗ್ಗೆ 6.45ಕ್ಕೆ ಮಂಗಳೂರು ತಲುಪಲಿದೆ. ಬಸ್‌ ವೇಳಾಪಟ್ಟಿ ದರ ಮಂಗಳೂರು-ಉಡುಪಿ-ಗಂಗಾವತಿ ಸ್ಲೀಪರ್‌ ಪಲ್ಲಕ್ಕಿ…

Read More