ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್ಗಳು ಮಿಂಚಿನ ದಾಳಿ ನಡೆಸಿದರು.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 27.3 ಓವರ್ಗಳಲ್ಲಿ 116 ರನ್ಗಳಿಗೆ ಆಲೌಟ್ ಆಗಿದೆ. ದಕ್ಷಿಣ ಆಫ್ರಿಕಾ ಪರ ಆಂಡಿಲ್ ಫೆಹ್ಲುಕ್ವಾಯೊ 33, ಟೋನಿ ಡಿ ಜೋರ್ಜಿ 28, ನಾಯಕ ಏಡೆನ್ ಮಾರ್ಕ್ರಾಮ್ 12 ರನ್ ಗಳಿಸಿದರು. ಉಳಿದ ಬ್ಯಾಟರ್ಗಳು ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.
ಅರ್ಷದೀಪ್ ಸಿಂಗ್, ಅವೇಶ್ ಖಾನ್ ಮಾರಕ ದಾಳಿಗೆ ಹರಿಣಗಳು ಪೆವಿಲಿಯನ್ ಸೇರಿದ್ದಾರೆ ಬಿಗಿ ಬೌಲಿಂಗ್ ದಾಳಿ ನಡೆಸಿದ ಅರ್ಷದೀಪ್ ಸಿಂಗ್ 5, ಅವೇಶ್ ಖಾನ್ 4 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು. ಭಾರತ ಗೆಲ್ಲಲು 117 ರನ್ ಗಳಿಸಬೇಕಿದೆ.
ಮೂವರು ಶೂನ್ಯ, ನಾಲ್ವರು ಒಂದಂಕಿಗೆ ಔಟ್. ಆರಂಭಿಕ ಬ್ಯಾಟರ್ ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಹಾಗೂ ವಿಯಾನ್ ಮುಲ್ಡರ್ ಶೂನ್ಯಕ್ಕೆ (0) ಔಟಾದರು. ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್ ಒಂದಂಕಿಗೆ ವಿಕೆಟ್ ಒಪ್ಪಿಸಿದರು.