Author: AIN Author

ಬೆಂಗಳೂರು:- ಕಾಂಗ್ರೆಸ್ ಗೂಂಡಾಗಿರಿ ಮುಂದುವರಿದರೆ ಬಿಜೆಪಿ ಕಾರ್ಯಕರ್ತರು ತಕ್ಕ ಉತ್ತರ ಕೊಡಲಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಿನ್ನೆ ಚಿತ್ರದುರ್ಗದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿ ಮಾಡುವಾಗ ಕೆಲವು ಕಾಂಗ್ರೆಸ್ ಗೂಂಡಾಗಳು ಬಂದು ಅವರ ಮೇಲೆ ಇಲ್ಲಸಲ್ಲದ ಆಪಾದನೆ ಮಾಡಿದ್ದಾರೆ. ಜೊತೆಗೆ ಅವರ ಪತ್ರಿಕಾಗೋಷ್ಠಿಗೆ ತೊಂದರೆಯನ್ನುಂಟು ಮಾಡಿ ಅವರ ಮೇಲೆ ಎರಗಿದ್ದು ಖಂಡನೀಯ ಎಂದರು. ಕಾರಜೋಳ ಅವರು ಪಕ್ಷದ ಪರವಾಗಿ ಅನೇಕ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತರಿಗಾಗಿ ಮೀಸಲಿಟ್ಟ ಎಸ್‍ಸಿಎಸ್‍ಪಿಎಸ್‍ಟಿಪಿ 11 ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ವಿನಿಯೋಗಿಸುವುದನ್ನು ನಮ್ಮ ಪಕ್ಷ ಮೊದಲಿನಿಂದಲೂ ಖಂಡಿಸುತ್ತಿದೆ ಹಾಗೂ ವಿರೋಧಿಸುತ್ತಿದೆ. ಇದೇ ವಿಚಾರವನ್ನು ಬಳಸಿ, ನಾನು, ಕಾರಜೋಳ, ರಾಜೀವ್, ಎನ್.ಮಹೇಶ್ ಹೀಗೆ ಅನೇಕ ಮುಖಂಡರು ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಆಂದೋಲನ ಶುರು ಮಾಡಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ದಲಿತರಿಗೆ ದೋಖಾ ಮಾಡಿದೆ,…

Read More

ಬಾಗಲಕೋಟೆ: ಟಾಟಾ‌ ಸಫಾರಿ  ಬೈಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತದಲ್ಲಿ ರೈತರೊಬ್ಬರು ಮೃತಪಟ್ಟ ಪ್ರಕರಣ ಇದೀಗ ತಿರುವು ಪಡೆದುಕೊಂಡಿದೆ. ಆಸ್ತಿ ವಿಚಾರವಾಗಿ ರೈತನನ್ನು ವಿಜಯಪುರದ ಜಲನಗರ ಠಾಣೆ ಕಾನ್​ಸ್ಟೇಬಲ್ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ. ಡಿಸೆಂಬರ್ 5 ರಂದು ಬೆಳಗ್ಗೆ ಹತ್ತೂವರೆ ಸಮಯಕ್ಕೆ ಟಾಟಾ‌ ಸಫಾರಿ ಬೈಕ್ ಮುಖಾಮುಖಿ ಡಿಕ್ಕಿಯಾಗಿ ರೈತ ಮಡ್ಡೆಸಾಬ್ ಗಲಗಲಿ (55) ಮೃತಪಟ್ಟಿದ್ದರು ಎಂದು ವರದಿಯಾಗಿತ್ತು. ಆದರೆ ಇದು ಅಪಘಾತವಲ್ಲ, ಆಸ್ತಿ ವಿಚಾರದಲ್ಲಿ ನಡೆದ ಕೊಲೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. https://ainlivenews.com/hebburu-police-operation-thieves-wanted-by-five-police-stations-arrested/ ಮುಧೋಳ ತಾಲೂಕಿನ ಶಿರೋಳ‌ ಗ್ರಾಮದಲ್ಲಿರುವ ಮೂರುವರೆ ಎಕರೆ ಜಮೀನು ವಿವಾದ ವಿಚಾರವಾಗಿ ಕಾನ್​ಸ್ಟೇಬಲ್ ಮನ್ಸೂರ್ ಅಲಿ ಟಾಟಾ ಸಫಾರಿ ಕಾರಿನಿಂದ ಬೈಕಕ್​ಗೆ ಡಿಕ್ಕಿ‌ ಹೊಡೆದು ಮಡ್ಡೆಸಾಬ್ ಗಲಗಲಿ ಅವರನ್ನು ಕೊಲೆ ಮಾಡಿದ್ದನು. ಕೃತ್ಯ ಎಸಗಲು ಸಹೋದರ‌ ಮೆಹಮೂದ್ ಕೈಜೋಡಿಸಿದ್ದಾನೆ. ಸದ್ಯ, ಕೃತ್ಯದ ಸಮಯದಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಿಸಿದ್ದ ಸಾವಳಗಿ ಠಾಣಾ ಪೊಲೀಸರು ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಮನ್ಸೂರ್ ಹಾಗೂ ಈತನ ಸಹೋದರ ಮೆಹಮೂದ್​ನನ್ನು ಬಂಧಿಸಿ…

Read More

ನವದೆಹಲಿ: ದೇಶದಲ್ಲಿ ಮತ್ತೆ ಕೋವಿಡ್‌-19 (Covid-19) ಹೊಸ ತಳಿ (JN.1) ಆರ್ಭಟ ಶುರುವಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆಗಳನ್ನು ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಕೊರೊನಾ ನಿಯಂತ್ರಣಕ್ಕೆ ರಾಜ್ಯಗಳಿಗೆ ಸಲಹೆ ನೀಡಿದೆ. ಮುಂಬರುವ ಹಬ್ಬಳ ಬಗ್ಗೆ ನಿಗಾ ವಹಿಸಿ. ಅಲ್ಲದೇ ಜಾಗೃತಿ ಮೂಡಿಸುವ ಕ್ರಮವಹಿಸಿ ಎಂದು ಸೂಚಿಸಿದೆ. ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಿಗಾ ವಹಿಸಬೇಕು. ನಿಯಮಿತವಾಗಿ ಇನ್ಫ್ಲುಯೆನ್ಸ ತರಹದ ಕಾಯಿಲೆಗಳ ಬಗ್ಗೆ ಎಚ್ಚರವಹಿಸಬೇಕು. ತೀವ್ರತರವಾದ ಉಸಿರಾಟದ ಕಾಯಿಲೆ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸಿದೆ. https://ainlivenews.com/hebburu-police-operation-thieves-wanted-by-five-police-stations-arrested/ ರೋಗ ಲಕ್ಷಣಗಳಿದ್ದರೆ ಪರೀಕ್ಷೆ ಮಾಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಮಾದರಿ ಪರೀಕ್ಷೆ ಮಾಡಬೇಕು. ಆಸ್ಪತ್ರೆಗಳು ಸುಸಜ್ಜಿತವಾಗಿರುವಂತೆ ನೋಡಿಕೊಳ್ಳಬೇಕು. ಐಎಲ್‌ಐ, ಸಾರಿ ಕೇಸ್‌ಗಳ ಮೇಲೆ ನಿಗಾ ವಹಿಸಬೇಕು. ಚಿಕಿತ್ಸೆಗೆ ಬೇಕಾದ ಮೂಲಸೌಕರ್ಯ ಕ್ರೋಢೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.  ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್‌ಟಿಪಿಸಿಆರ್‌, ರ‍್ಯಾಪಿಡ್‌ ಆ್ಯಂಟಿಜನ್ ಟೆಸ್ಟ್ ಮಾಡಬೇಕು. ಆರ್‌ಟಿಪಿಸಿಆರ್‌ ಪಾಸಿಟಿವ್ ಆದರೆ ಜೆನೆಮಿಕ್ ಸೀಕ್ವೆನ್ಸ್‌ಗೆ ಸ್ಯಾಂಪಲ್ ಕಳಿಸಬೇಕು. ಕೊವಿಡ್ ರೂಲ್ಸ್‌ಗಳನ್ನ…

Read More

ಬೆಂಗಳೂರು: ಸಾರ್ವಜನಿಕರ ಬಳಿ ಇರುವ ವನ್ಯಜೀವಿ  ಅಂಗಾಂಗಗಳನ್ನು ಅರಣ್ಯ ಇಲಾಖೆಗೆ (Forest Department) ವಾಪಸ್ ಮಾಡಲು 3 ತಿಂಗಳ ಅವಧಿ ನೀಡಲು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಇಂದು ವಿಕಾಸ ಸೌಧದಲ್ಲಿ ಸಭೆ ನಡೆಸಿ 3 ತಿಂಗಳ ಕಾಲಾವಕಾಶ ಕೊಡುವ ನಿರ್ಧಾರ ಮಾಡಲಾಗಿದೆ. https://ainlivenews.com/where-is-the-morality-of-the-congressmen-they-should-remember-the-emergency-situation-ct-ravi/ ಅರಣ್ಯ ಇಲಾಖೆ, ಕಾನೂನು ಇಲಾಖೆ ಸಭೆ ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ವನ್ಯಜೀವಿ ಅಂಗಾಗ ವಾಪಸ್ ಕೊಡಲು ಕೊನೇ ಅವಕಾಶ ಕೊಡಲು ತೀರ್ಮಾನ ಮಾಡಲಾಗಿದೆ. ಒನ್ ಟೈಂ ಪ್ರಾಣಿ ಅಂಗಾಂಗ ಹಿಂತಿರುಗಿಸಲು 3 ತಿಂಗಳು ಸಮಯ ಕೊಡಲು ತೀರ್ಮಾನ ಆಗಿದೆ. ಕಾನೂನು ಇಲಾಖೆ ಕೂಡಾ ಇದಕ್ಕೆ ಒಪ್ಪಿಗೆ ನೀಡಿದೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.

Read More

ಬೆಂಗಳೂರು: ಈ ಹಿಂದೆ ಅಧಿಕಾರಕ್ಕಾಗಿ ದೇಶಕ್ಕೆ ತುರ್ತು ಪರಿಸ್ಥಿತಿ  ಹೇರಿದ್ದ ಕಾಂಗ್ರೆಸ್ (Congress) ಪಕ್ಷದವರಿಗೆ ಸದನದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ತಿಳಿದಿಲ್ಲ ಎಂದು ಬಿಜೆಪಿ (BJP) ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಸಿ.ಟಿ.ರವಿ (CT Ravi) ಟೀಕಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಧಾನಮಂತ್ರಿಯವರ ಕುರಿತು ಅನಗತ್ಯ ಟೀಕೆ ಮಾಡುವ ಕಾಂಗ್ರೆಸ್ಸಿಗರು ಪ್ರಧಾನಿಯವರನ್ನು ಸರ್ವಾಧಿಕಾರಿ ಎನ್ನುತ್ತಿದ್ದಾರೆ. ಡಿ.ಕೆ.ಸುರೇಶ್ (DK Suresh) ಮತ್ತು ಇತರ ಕಾಂಗ್ರೆಸ್ಸಿಗರಿಗೆ ನೈತಿಕತೆ ಎಲ್ಲಿದೆ? ಅವರು ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು ತುರ್ತು ಪರಿಸ್ಥಿತಿ ಹೇರಿ, ಕಮಿಟಿ ಪ್ರವಾಸಕ್ಕೆ ಬಂದ ಸಂಸದರನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಕರ್ನಾಟಕದ ಜೈಲಿನಲ್ಲಿ ಎಲ್‌ಕೆ ಅಡ್ವಾಣಿ, ವಾಜಪೇಯಿ ಇವರೆಲ್ಲರೂ ಇದ್ದರು. ಅಲಹಾಬಾದ್ ಹೈಕೋರ್ಟ್ ಇಂದಿರಾಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದು ಮಾಡಿದ್ದನ್ನೇ ಕಾರಣ ಮಾಡಿ ತುರ್ತು ಪರಿಸ್ಥಿತಿ ಹೇರಲಾಗಿತ್ತು ಎಂದು ಪ್ರಶ್ನೆಗೆ ಉತ್ತರ ನೀಡಿದರು. ಅವರು…

Read More

ದೊಡ್ಡಬಳ್ಳಾಪುರ: ಮಾಧ್ಯಮ ಬಳಗ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ RDPR ದೊಡ್ಡಬಳ್ಳಾಪುರ ವತಿಯಿಂದ ನಡೆದ ಸೌಹಾರ್ದ ಕ್ರಿಕೆಟ್ ಕಪ್ ಟೂರ್ನಿಯಲ್ಲಿ ರಣರೋಚಕ‌ ಫೈನಲ್ ಪಂದ್ಯದಲ್ಲಿ ಪೊಲೀಸ್ ಇಲಾಖೆ ಕಡೆಯ ಓವರ್ ನಲ್ಲಿ ಆರ್ ಡಿಪಿಆರ್ ಎದುರು ವಿಜಯ ಸಾಧಿಸಿ 2023-24ನೇ ಸಾಲಿನ ಸೌಹಾರ್ದ ಕ್ರಿಕೆಟ್ ಕಪ್ ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿತು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ(RDPR) ತಂಡ ರನ್ನರ್ಸ್ ಪ್ರಶಸ್ತಿ ಪಡೆಯಿತು. ಕಂದಾಯ ಇಲಾಖೆ ತಂಡ‌ ಹಾಗೂ ಮಾಧ್ಯಮ ಬಳಗ ಕ್ರಮವಾಗಿ ಮೂರು‌ ಮತ್ತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು. ಮಾಧ್ಯಮ ಬಳಗ ಹಾಗೂ ಪೊಲೀಸ್ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮಾಧ್ಯಮ ತಂಡ ಪರಾಭವಗೊಂಡಿತು. ಪೊಲೀಸ್ ತಂಡದ ಆಟಗಾರ ಶಿವಾನಂದ್ ಅವರ ಅದ್ಭುತ ಬ್ಯಾಟಿಂಗ್ ಫಲವಾಗಿ ಪೊಲೀಸ್ ಇಲಾಖೆ ವಿಜಯ ಸಾಧಿಸಿತು. ದ್ವಿತೀಯ ಪಂದ್ಯ ಕಂದಾಯ ಇಲಾಖೆ ಹಾಗೂ ಆರ್ ಡಿಪಿಆರ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಆರ್ ಡಿಪಿಆರ್ ವಿಜಯ ಸಾಧಿಸಿತು. ಮೂರನೇ…

Read More

ಧಾರವಾಡ: ಹು-ಧಾ ಮುಖ್ಯ ರಸ್ತೆಯ ರಾಯಾಪುರದ ಬಳಿ ಒರೋ ಇಸ್ಕಾನ್’ನಲ್ಲಿ ಡಿಸೆಂಬರ್ 23 ರಂದು ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿದ್ದು, ಅಂದು ಮಂದಿರದಲ್ಲಿ ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ನಡೆಯಲಿವೆ ಎಂದು ಇಸ್ಕಾನ್ ಪ್ರಮುಖರಾದ ರಾಮಗೋಲದಾಸ್ ಹೇಳಿದರು. ಈ ಕುರಿತು ಇನ್ ನ್ಯೂಸನೊಂದಿಗೆ ಮಾತನಾಡಿದ ಅವರು, ಮಾತನಾಡಿದ ಅವರು, ಏಕಾದಶಿ ವೃತವನ್ನು ವಿಷ್ಣುವಿನ್ ಭಕ್ತರು ಭಗವಂತನ ನಾಮಸ್ಮರಣೆ, ಜಪ ಹಾಗೂ ಭಕ್ತಿ ಸಂಗೀತದೊಂದಿಗೆ ಆಚರಿಸಲಾಗುತ್ತದೆ. ಅದರಂತೆ ಮಾರ್ಗಶೀರ್ಷ ಮಾಸದ ಶುಕ್ಲಪಕ್ಷದಲ್ಲಿ (ಡಿಸೆಂಬರ್-ಜನೇವರಿ) ಬರುವ ಏಕಾದಶಿಯು ಮಹತ್ವದ್ದಾಗಿದ್ದು, ವೈಕುಂಠ ಏಕಾದಶಿಯೆಂದು ಕರೆಯಲ್ಪಡುತ್ತದೆ. ಇದು ದಕ್ಷಿಣ ಭಾರತದಾದ್ಯಂತ ವಿಷ್ಣುವಿನ ದೇವಾಲಯಗಳಲ್ಲಿ ಆಚರಿಸಲಾಗುತ್ತದೆ. ರಾಯಾಪುರದ ಇಸ್ಕಾನ್ ಟೆಂಪಲ್’ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತಿದೆ‌. ಈಗಾಗಲೇ ವೈಕುಂಠ ದ್ವಾರಕ್ಕೆ ಸ್ವರ್ಣ ರಂಗಿನಿಂದ ಲೇಪಿತವಾದ ಭವ್ಯವಾದ ವೈಕುಂಠ ದ್ವಾರವನ್ನು ನಿರ್ಮಿಸಲಾಗುತ್ತಿದೆ. ಇದು 15 ಅಡಿ ಎತ್ತರ ಮತ್ತು 11 ಅಡಿ ಅಗಲವಾಗಿದೆ. ಅಂದು ಬೆಳಿಗ್ಗೆ 8 ಕ್ಕೆ ವೈಕುಂಠ ದ್ವಾರದ ಪೂಜೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ದೇವಾಲಯವನ್ನು…

Read More

ರಾಯಚೂರು: ಶಾಸಕ ಎಸ್.ಟಿ ಸೋಮಶೇಖರ್ ಹಾಗೂ ಹೆಬ್ಬಾರ್ ತಾಳಿ ಒಂದು ಕಡೆ ಕಟ್ಟಿಸಿಕೊಂಡು ಸಂಸಾರ ಇನ್ನೊಬ್ಬರ ಜೊತೆ ಮಾಡಬಾರದು ಅಂತ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಅವರನ್ನ ಚುನವಾಣೆಯಲ್ಲಿ ನಿಲ್ಲಿಸಿ, ಗೆಲ್ಲಿಸಿ ಮಂತ್ರಿ ಮಾಡಾಯ್ತು, ಈಗ ಮತ್ತೆ ಗೆದ್ದಾಯ್ತು. ಈಗ ಸಿದ್ದರಾಮಯ್ಯ, ಡಿಕೆಶಿ ಕಡೆ ಒಲವಾಗಿದೆ. ಬಿಜೆಪಿ ಅಲ್ಲಿ ಇಉವ ಹಾಗಿದ್ರೆ ಇರಿ, ಇಲ್ಲಾ ಹೋಗಿ. ತಾಳಿ ಒಬ್ಬರತ್ರ ಕಟ್ಟಿಸಿಕೊಂಡು ಸಂಸಾರ ಮತ್ತೊಬ್ಬರ ಜೊತೆ ಮಾಡಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ. ಅವರಿಂದ ವೈಯಕ್ತಿಕವಾಗಿ ನೊಂದಿದ್ದೇನೆ ಅಂತ ಈಶ್ವರಪ್ಪ ಹೇಳಿದರು. ಇದೇ ವೇಳೆ ಜ್ಞಾನವ್ಯಾಪಿಯ ವೈಜ್ಞಾನಿಕ ಸಮೀಕ್ಷೆಗೆ ಮುಸಲ್ಮಾನ ಸಮುದಾಯ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಎರಡು ಕನಸು ಈಗ ಈಡೇರಿದೆ. ಅಯೋದ್ಯಯಲ್ಲಿ ರಾಮಮಂದಿರ, ಆರ್ಟಿಕಲ್ 370 ಕಿತ್ತು ಬೀಸಾಕಾಯ್ತು ಎಂದರು.

Read More

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಕ್ರಾಸ್ ಬಳಿ ಧಗ- ಧಗನೇ ಕಬ್ಬಿನ ಗದ್ದೆಯು ಹೊತ್ತಿ ಉರಿದಿದೆ. ಮಲಪನಗುಡಿಯ ರೈತರದಾರ ಮೈಲಾರಪ್ಪ, ಶಿವರಾಮಪ್ಪರಿಗೆ ಸೇರಿದ ಎರಡು ಎಕರೆ ಕಬ್ಬಿನ ಪೈರು ಸುಟ್ಟು ಭಸ್ಮವಾಗಿದೆ. https://ainlivenews.com/hebburu-police-operation-thieves-wanted-by-five-police-stations-arrested/ ಹೊಸಪೇಟೆಯ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕೆಲಸ ಮಾಡಲಾಯಿತು. ಹಂಪಿ ಪೊಲೀಸರು, ಕಬ್ಬಿನ ಗದ್ದೆಯ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಭೇಟಿ ನೀಡಿ, ಬೆಂಕಿ ನಂದಿಸುವ ಕೆಲಸಕ್ಕೆ ಸಾಥ್ ನೀಡಿದರು.

Read More

ಬೆಂಗಳೂರು: ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವ ಪ್ರಸ್ತಾವನೆ ವಿಚಾರ ಕುರಿತು ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ನಮ್ಮ ಊರಿನವರೇ ಅಲ್ವಾ? ಅವರೇನು ಹೊರ ದೇಶದವರಾ? ಭೂ ಸುಧಾರಣೆ ಕಾಯ್ದೆ ತಂದವರು, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿದ್ದು ಟಿಪ್ಪು ಸುಲ್ತಾನ್ ಅಲ್ವಾ? ಎಂದು ಪ್ರಶ್ನಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ಬಗ್ಗೆ ನಮ್ಮ ತಕಾರರು ಇಲ್ಲ. ಟಿಪ್ಪು ವಿಚಾರದಲ್ಲಿ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಭಿಪ್ರಾಯ ಹೇಳೋದು ಅಪರಾಧವಾ? ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ವಾ? ವಿಮಾನ ನಿಲ್ದಾಣ ವಿಚಾರದಲ್ಲಿ ಕ್ಯಾಬಿನೆಟ್ ತೀರ್ಮಾನವಾಗಿದೆ. ಅದನ್ನು ತಿರಸ್ಕರಿಸಲು ಸಾಧ್ಯವಾ? ಹೆಸರು ಇಡುವುದು ಬಿಡುವುದು ಬೇರೆ ವಿಚಾರ. ಆದರೆ, ಟಿಪ್ಪು ಸುಲ್ತಾನ್ ಅವರನ್ನು ದೇಶ ದ್ರೋಹಿ ಅಂತ ಬಿಂಬಿಸುವುದು ಸರಿಯಲ್ಲ ಎಂದು ಕುಟುಕಿದ್ದಾರೆ. ಸಂಸತ್​ನಲ್ಲಿ ಸ್ಮೋಕ್ ಬಾಂಬ್ ವಿಚಾರವಾಗಿ ಮಾತನಾಡಿದ ಅವರು, ಇದು ಗಂಭೀರವಾದ ರಾಷ್ಟ್ರೀಯ ಭದ್ರತಾ ವಿಚಾರ. ಆರೋಪಿಗಳಿಗೆ ಬೇರೆಯವರು ಪಾಸ್ ಕೊಟ್ಟಿದ್ದರೆ ಮೈಸೂರು ಗತಿ…

Read More