Author: AIN Author

ರಾಯಚೂರು:- MP ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಸಚಿವ ಭೋಸರಾಜು ಹೇಳಿದ್ದಾರೆ. ಈ ಬಾರಿ ದೇಶದಲ್ಲಿ ಹಿಂದೆ ಜನಪರ ಆಡಳಿತ ನೀಡಿರುವ ಕಾಂಗ್ರೆಸ್ ಪಕ್ಷಕ್ಕೆ ಜನರು ಒಲವನ್ನು ತೋರುತ್ತಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸುವ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾವೆಲ್ಲರೂ ರಾಯಚೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲುವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

Read More

ರೋಹಿತ್ ಶರ್ಮಾರನ್ನು ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ಕಿತ್ತು ಹಾಕಿದ ಹಿನ್ನೆಲೆ, ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಾರ್ ಶುರು ಮಾಡಿಕೊಂಡಿದ್ದಾರೆ. ರೋಹಿತ್ ಕ್ಯಾಪ್ಟನ್ ಆಗಿದ್ದಾಗ 13.5 ಮಿಲಿಯನ್ ಎಕ್ಸ್ ಫಾಲೋವರ್ ಗಳನ್ನು ಹೊಂದಿದ್ದ ಮುಂಬೈ ಫಾಲೋವರ್ ಸಂಖ್ಯೆ ಇದೀಗ ಏಕಾಏಕಿ 12.3 ಮಿಲಿಯನ್ ಗೆ ಇಳಿಕೆಯಾಗಿದೆ. ರೋಹಿತ್ ರನ್ನು ನಾಯಕತ್ವದಿಂದ ಕಿತ್ತು ಹಾಕಿದ ಬೆನ್ನಲ್ಲೇ ಅಭಿಮಾನಿಗಳು ಮುಂಬೈ ಇಂಡಿಯನ್ಸ್ ಜೆರ್ಸಿ, ಬಾವುಟ ಸುಟ್ಟು ಹಾಕಿ ಆಕ್ರೋಶ ಹೊರಹಾಕಿದ್ದರು. ಇದೀಗ ನಮಗೆ ಮುಂಬೈ ಇಂಡಿಯನ್ಸ್ ಗಿಂತಲೂ ರೋಹಿತ್ ಶರ್ಮಾ ದೊಡ್ಡವರು ಎಂದು ಎಕ್ಸ್ ನಲ್ಲಿ ಅಭಿಯಾನವನ್ನೇ ಶುರು ಮಾಡಿದ್ದಾರೆ.

Read More

ಬೆಂಗಳೂರು:- ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪ್ರಯಾಣಿಕರಿಗೆ ಕ್ರಿಸ್ ಮಸ್ ಗಿಫ್ಟ್ ಕೊಟ್ಟಿದೆ. ಕ್ರಿಸ್ ಮಸ್ ಹಬ್ಬದ ಪ್ರಯುಕ್ತ 1000 ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಡಿ. 22 ರಿಂದ 24 ರವರೆಗೆ ಬೆಂಗಳೂರಿನಿಂದ ರಾಜ್ಯ ಹಾಗೂ ಅಂತರರಾಜ್ಯಕ್ಕೆ ಹೆಚ್ಚುವರಿ ಬಸ್ ಗಳ ಕಾರ್ಯಾಚರಣೆ ನಡೆದಿದೆ. 25 ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಗಳ ಕಾರ್ಯಾಚರಣೆ ಮಾಡಲಾಗಿದೆ. ರಾಜ್ಯದ ಧರ್ಮಸ್ಥಳ, ಕುಕ್ಕೆ, ಶಿವಮೊಗ್ಗ, ಹಾಸನ, ಗೋಕರ್ಣ, ಶಿರ್ಶಿ ಸೇರಿದಂತೆ ಹಲವು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಬಸ್ ಗಳು ಹೊರಡಲಿವೆ. ತಮಿಳುನಾಡು, ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ. ಪ್ರಯಾಣಿಕರು ಮೊದಲೇ ಸೀಟ್ ರಿಸರ್ವ್ ಮಾಡಬಹುದು. ಇ ಟಿಕೆಟ್ ಸಹ ವೆಬ್ ಸೈಟ್ ಮೂಲಕ ಪಡೆಯಬಹುದು. ನಾಲ್ಕು ಹಾಗೂ ನಾಲ್ಕಕ್ಕಿಂತ ಹೆಚ್ಚಿನ ಟಿಕೆಟ್ ಕಾಯ್ದಿರಿಸಿದ್ರೇ 5 % ರಿಯಾಯಿತಿ ನೀಡಲಾಗಿದೆ. ಹೋಗುವ ಹಾಗೂ ಬರುವ ಟಿಕೆಟ್ ಕಾಯ್ದಿರಿಸಿದ್ರೇ 10% ರಿಯಾಯಿತಿ ನೀಡಲಾಗಿದೆ.

Read More

ಹುಬ್ಬಳ್ಳಿ:- ಸಿದ್ದರಾಮಯ್ಯ 6 ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆಯಲ್ಲಿ ಟಾರ್ಗೆಟ್ ಫಿಕ್ಸ್ ಮಾಡಿರುವುದರಿಂದ ಅಧಿಕಾರಿಗಳು ಯೋಜನೆಯಲ್ಲಿ ಕಮಿಷನ್ ಟಾರ್ಗೆಟ್ ಫಿಕ್ಸ್ ಮಾಡುತ್ತಾರೆ. ರಾಜ್ಯದಲ್ಲಿ ಹೊಸ ಸರ್ಕಾರ ಬಂದಿದೆ ಎಂದು ಅನಿಸುತ್ತಿಲ್ಲ. ಸಿಎಂ ಸಿದ್ದರಾಮಯ್ಯ 6 ತಿಂಗಳ ಆಡಳಿತದ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ರಾಜ್ಯದಲ್ಲಿ ಸರ್ಕಾರ ಬಂದು 6 ತಿಂಗಳು ಆದರೂ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕೇವಲ ಸುಳ್ಳು ಹೇಳುವುದರಲ್ಲಿಯೇ ಕಾಲಹರಣ ಮಾಡುತಿದ್ದಾರೆ. ಇವರು ಅಧಿಕಾರಕ್ಕೆ ಬರುವ ಮುನ್ನ ನೀಡಿರುವ ಭರವಸೆ ಈಡೇರಿಸಿಲ್ಲ. ಅವರೇ ಮಧ್ಯಂತರ ಆರ್ಥಿಕ ಸ್ಥಿತಿಗತಿ ಕುರಿತು ವರದಿ ಮಂಡನೆ ಮಾಡಿದರು. ಆದರೆ, ಅದರಿಂದ ಏನು ಸುಧಾರಣೆ ಆಗಿಲ್ಲ ಎಂದು ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ. ಪ್ರತಿ ವರ್ಷ ಬಂಡವಾಳ ವೆಚ್ಚ ಹೆಚ್ಚಾಗುತ್ತಾ ಹೋಗಬೇಕು. ಆದರೆ, ಈ ವರ್ಷ ಕಡಿಮೆಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತೆಗೆದುಕೊಂಡು ಹೋಗಿದ್ದಾರೆ.…

Read More

ಬೆಂಗಳೂರು:- 14 ವರ್ಷದ ಬಾಲಕಿಗೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಅಸಜವಾಗಿ ಬೆಳೆದಿದ್ದ ಬೆನ್ನುಮೂಳೆಯನ್ನು ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಡಾ.ರಾಜಕುಮಾರ್ ದೇಶಪಾಂಡೆ ನೇತೃತ್ವದ ತಂಡವು ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಡಾ.ರಾಜಕುಮಾರ್‌, ನೈಜಿರಿಯಾ ಮೂಲದ 14ರ ಸಾರಾ (ಹೆಸರು ಬದಲಿಸಲಾಗಿದೆ) ಎಂಬ ಬಾಲಕಿಗೆ 6 ತಿಂಗಳ ಹಿಂದೆ ಬೆನ್ನಿನ ನೋವು ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲದೆ, ಬೆನ್ನಿನ ಬಲಭಾಗದಲ್ಲಿ ಗಡ್ಡೆ ಬೆಳೆದು ಇದರಿಂದ ಬಲಭಾಗದ ಭುಜ ಎತ್ತರಕ್ಕೆ ಹೋಗಿತ್ತು. ಜತೆಗೆ ಬೆನ್ನಿನ ಮೂಳೆಯು ಡೊಂಕಾಗಿರುವುದು ಕಂಡು ಬಂದಿತ್ತು. ಸಂಪೂರ್ಣ ಎಂಆರ್‌ಐ (MRI) ಸ್ಕ್ಯಾನ್ ಮಾಡಿಸಿದ ಬಳಿಕ ಬಾಲಕಿಯ ಬೆನ್ನುಮೂಳೆಯ ವಕ್ರತೆಯು D4 (ಥೊರಾಸಿಕ್ ಬೆನ್ನುಮೂಳೆ) ಯಿಂದ L1 (ಸೊಂಟದ ಬೆನ್ನುಮೂಳೆ) ವರೆಗೆ ಮಧ್ಯಮ ಸ್ಕೋಲಿಯೋಸಿಸ್ ಅನ್ನು ಅಂದರೆ, ಬೆನ್ನಿನ ಮೂಳೆಯು ಸುಮಾರು 60 ಡಿಗ್ರಿಗೆ ಸರಿದಿತ್ತು ಎಂದು ವಿವರಿಸಿದರು. ಈ ರೀತಿಯ ಪ್ರಕರಣಗಳು ಅತಿ ಅಪರೂಪವಾಗಿರುತ್ತದೆ. ಯಾವುದೇ ಕುಟುಂಬದ ಇತಿಹಾಸವಿಲ್ಲದೆಯೂ, ಹುಟ್ಟಿನಿಂದಲೂ ಯಾವುದೇ ಸಮಸ್ಯೆ ಇರಲಿಲ್ಲ. ನಂತರದಲ್ಲಿ ಆಕೆಯ…

Read More

ಬೆಂಗಳೂರು:- ಪಾನ್ ಬ್ರೋಕರ್ ಮೇಲೆ ಹಲ್ಲೆ ನಡೆಸಿ 60 ಲಕ್ಷ ದರೋಡೆ ಮಾಡಿದ್ದ 5 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಮೊಹಮ್ಮದ್ ರಿಜ್ವಾನ್(24), ಆಶ್ರಫ್(20), ಸತೀಶ್(19), ದಿವಾಕರ್(19) ಮತ್ತು ಮೊಹಮ್ಮದ್ ಇರ್ಪಾನ್(20) ಬಂಧಿತರು. ಪಾನ್‍ಬ್ರೋಕರ್ ಕೆಲಸ ಮಾಡುವ ಕೆಜಿಎಫ್ ಮೂಲದ ಸಂಕೇತ್ ಎಂಬುವರಿಗೆ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಆದರ್ಶ್ ಲೇಔಟ್ ಹಳೆಯ ರಿಜಿಸ್ಟರ್ ಕಚೇರಿ ರಸ್ತೆಯಲ್ಲಿರುವ ಸಿದ್ದಪ್ಪಾಜಿ ಉದ್ಯಾನವನ ಬಳಿ ಇರುವ ಗ್ರಂಥಾಲಯದ ಹತ್ತಿರ ಐದು ಮಂದಿ ದರೋಡೆಕೋರರು ಕರೆಸಿಕೊಂಡಿದ್ದಾರೆ. ಸಂಕೇತ್ ಅವರು ಸ್ಥಳಕ್ಕೆ ಬರುತ್ತಿದ್ದಂತೆ ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಿ ಅವರ ಬಳಿ ಇದ್ದ 60 ಲಕ್ಷ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಪ್ರಮುಖ ಆರೋಪಿ, ಕುರುಬರಹಳ್ಳಿಯ ಜೆಸಿ ನಗರ ನಿವಾಸಿ ಮೊಹಮ್ಮದ್ ರಿಜ್ವಾನ್(ಎಂಬಾತನನ್ನು ಬಂಧಿಸಿದ್ದಾರೆ.

Read More

ಹುಬ್ಬಳ್ಳಿ:ಅದೊಂದು ವಿಚಿತ್ರ, ವಿಲಕ್ಷಣ ಪ್ರೇಮ ಕಥೆ. ಆ ಪ್ರೇಮಕಥೆಯಲ್ಲಿದ್ದವರು ವಿವಾಹಿತರು. ಅವನು ಎರಡು ಮಕ್ಕಳ ತಂದೆ. ಅವಳು ಕೂಡಾ ವಿವಾಹಿತೆ. ಆದ್ರೆ ಆತ ತನ್ನ ಹೆಂಡತಿ ಸಹೋದರಿ ಜೊತೆ‌‌ ಪ್ರೇಮಪಾಶದಲ್ಲಿ ಸಿಲುಕ್ಕಿದ್ದ. ಅವಳು ಗಂಡನ ಬಿಟ್ಟು ಮಾವನ ಜೊತೆ ಸಂಭಂದ ಬೆಳಸಿದ್ಲು ಕದ್ದುಮುಚ್ಚಿ ಇದ್ದ ಮಾವ-ನಾದಿನಿ ಸಂಭಂದದ ಗುಟ್ಟು ರಟ್ಟಾಗಿತ್ತು. ಹೆಂಡತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತು ಆ ಜೋಡಿ. ಆದ್ರೆ ಇದೀಗ ಆ ಜೋಡಿ ನೇಣಿಗೆ ಕೊರಳಡ್ಡಿದೆ. ಅವರದ್ದು ಬೆಂಗಳೂರು. ಆದ್ರೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ (Hubballi). ಆತ್ಮಹತ್ಯೆಗೂ ಮುನ್ನ ಆ ಜೋಡಿ ಸೆಲ್ಪಿ ವಿಡಿಯೋ ಮಾಡಿಕೊಂಡಿದೆ. ಅದೂ ಅವರಿಗೆ ಸಹಾಯ ಮಾಡಿದ ಆಟೋ ಡ್ರೈವರ್ ಮನೆಯಲ್ಲಿ. ಏನಿದು ಮಾವ-ನಾದಿನಿ ಸೆಲ್ಫಿ ಸುಸೈಡ್ (suicide) ಕಥೆ ಅಂತೀರಾ ಈ ಸ್ಟೋರಿ ನೋಡಿ… ಒಂದು ಕಡೆ ಮನೆಯಲ್ಲಿ ವೇಲ್ ಬಿಗಿದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಜೋಡಿ…ಮತ್ತೊಂದು ಕಡೆ ಪಕ್ಕದಲ್ಲಿ ಬೀಯರ್ ಬಾಟಲಿ.. ಎಸ್ ಇವೆಲ್ಲ ದೃಶ್ಯಗಳು…

Read More

ಹುಬ್ಬಳ್ಳಿ: ನಗರದ ಹುಬ್ಬಳ್ಳಿಯ ಘಂಟಿಕೇರಿ ಓಣಿಯಲ್ಲಿ ಮೋದಿ ಸರ್ಕಾರ ಗ್ಯಾರಂಟಿ ನಮ್ಮ ಸಂಕಲ್ಪ ವಿಕಸಿತ ಭಾರತ ಯಾತ್ರೆಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಸಸಿಗೆ ನೀರು ಹಾಕುವ ಮೂಲಕ ಕೇಂದ್ರ ಸರ್ಕಾರದ ಯೋಜನೆಯನ್ನು ವಿಡಿಯೋ ಮಾಹಿತಿ ನೀಡುವ ವಾಹನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿರವರ ಕನಸು ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಸವಲತ್ತುಗಳು ದೊರಕಬೇಕು ಎಂಬುದು. ಈ ದೇಶದ ಪ್ರತಿ ಹಳ್ಳಿಯೂ ಅಭಿವೃದ್ಧಿಯಾದರೆ ಮಾತ್ರವೇ ದೇಶ ಅಭಿವೃದ್ಧಿಯಾಗಲು ಸಾಧ್ಯ. ಈ ಪರಿಕಲ್ಪನೆಯನ್ನು ಇಟ್ಟುಕೊಂಡು ಮೋದಿ ರವರು ಕಳೆದ ಒಂಬತ್ತುವರೆ ವರ್ಷಗಳಿಂದ ನಿರಂತರವಾಗಿ ತೊಡಗಿದ್ದಾರೆ, ಸ್ವಾತಂತ್ರ್ಯಬಂದ 58 ವರ್ಷಗಳಲ್ಲಿ ಕಾಂಗ್ರೆಸ್‌ ಸರ್ಕಾರ 3 ಕೋಟಿ ಆವಾಜ್‌ ಯೋಜನೆ ನೀಡಿದ್ದಾರೆ. ಆದರೆ ನರೇಂದ್ರ ಮೋದಿ ಸರ್ಕಾರದಿಂದ ಕೇವಲ ಒಂಬತ್ತು ವರ್ಷಗಳಲ್ಲಿ 3,500 ಪ್ರಧಾನ ಮಂತ್ರಿ ಆವಾಜ್‌ ಯೋಜನೆ ನೀಡಲಾಗಿದೆ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಬಡವನಿಗೆ ಶೇ.15 ರಷ್ಟು ಮಾತ್ರ ತಲುಪುತ್ತಿತ್ತು. ಆದರೆ,…

Read More

ಬೆಂಗಳೂರು:- ನಗರದಲ್ಲಿ ಪದೇಪದೇ ಸಂಚಾರ ನಿಯಮ ಉಲ್ಲಂಘಿಸಿ ಕಣ್ತಪ್ಪಿಸಿಕೊಂಡು ಓಡಾಡುತ್ತಿರುವ ವಾಹನಗಳ ಮಾಲೀಕರನ್ನು ಪತ್ತೆ ಮಾಡಿ ದಂಡ ವಸೂಲಿಗೆ ಪೊಲೀಸರು ಮನೆ ಬಾಗಿಲಿಗೆ ಹೋಗುತ್ತಿದ್ದಾರೆ. ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಾಗುತ್ತಿದ್ದು, ಹಲವರು ದಂಡ ಕಟ್ಟದೆ ಬಾಕಿ ಉಳಿಸಿಕೊಳ್ಳುತ್ತಿದ್ದಾರೆ. ಅತೀ ಹೆಚ್ಚು ದಂಡ ಬಾಕಿ ಇರುವ ವಾಹನಗಳ ಮಾಲೀಕರ ಪಟ್ಟಿ ಸಿದ್ಧಪಡಿಸಿರುವ ಪೊಲೀಸರು ಅವರ ಮನೆ ಬಾಗಿಲಿಗೆ ಹೋಗಿ ದಂಡ ವಸೂಲಿ ಮಾಡುವ ಹೊಸ ಪ್ರಯತ್ನ ಆರಂಭಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್, ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಹುತೇಕ ರಸ್ತೆಗಳಲ್ಲಿ ಗುಣಮಟ್ಟದ ಕೆಮರಾಗಳನ್ನು ಅಳವಡಿಸಲಾಗಿದೆ. ಇದರಿಂದ ಯಾರಾದರೂ ನಿಯಮ ಉಲ್ಲಂಘನೆ ಮಾಡಿದರೆ ಫೋಟೊ ಸಮೇತ ಪ್ರಕರಣ ದಾಖಲಾಗುತ್ತಿದೆ ಎಂದುತಿಳಿಸಿದ್ದಾರೆ. ದಂಡ ಪಾವತಿ ಮೇಲೆ ಇತ್ತೀಚೆಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಹಲವರು ದಂಡ ಪಾವತಿಸಿದ್ದಾರೆ. ಆದರೆ, ಇನ್ನೂ ಕೆಲವರು ಪಾವತಿ ಮಾಡಿಲ್ಲ.…

Read More

ಬೆಂಗಳೂರು:- ಯಶವಂತಪುರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಹಾಡಹಗಲೇ ಪಿಜಿಗಳಿಗೆ ನುಗ್ಗಿ ಲ್ಯಾಪ್‍ಟಾಪ್ ಹಾಗೂ ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಿಂದ 16 ಲಕ್ಷ ರೂಪಾಯಿಗೂ ಹೆಚ್ಚು ಬೆಲೆ ಬಾಳುವ 50ಕ್ಕೂ ಹೆಚ್ಚು ಲ್ಯಾಪ್‍ಟಾಪ್ ಹಾಗೂ 7 ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಬಂಧಿತರೆಲ್ಲರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪಿಜಿಗಳಲ್ಲಿ ಲ್ಯಾಪ್‍ಟಾಪ್ ಹಾಗೂ ಮೊಬೈಲ್‍ಗಳು ಕಳ್ಳತನ ಆಗುತ್ತಿದ್ದ ದೂರುಗಳು ಹೆಚ್ಚು ದಾಖಲಾದ ಹಿನ್ನೆಲೆಯಲ್ಲಿ ಖದೀಮರ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ನ.29ರಂದು ಮತ್ತಿಕೆರೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆಂಧ್ರದ ಚಿತ್ತೂರಿನ ವಿ. ಕೋಟಾದ ಯುವರಾಜ್, ಪ್ರಭು ಎಂಬ ಇಬ್ಬರನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Read More