Author: AIN Author

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಔಷಧ ಮಾರಾಟ ಪ್ರತಿನಿಧಿಗಳ ಫೆಡರೇಷನ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕರ್ನಾಟಕ ರಾಜ್ಯ ಔಷಧಿ ಮಾರಾಟ ಪ್ರತಿನಿಧಿಗಳು ಕೆಲಸವನ್ನು ಬಹಿಷ್ಕರಿಸಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಾರಿ ಮಾಡಿರುತ್ತಿರುವ ಕಾರ್ಮಿಕ ಹಾಗೂ ರೈತ ವಿರೋಧಿ ನೀತಿಗಳು, ಪೆಟ್ರೋಲ್ ಡೀಸೆಲ್ ಬೆಲೆಗಳ ಮೇಲಿನ ಅಬಕಾರಿ ಸುಂಕ ಹೆಚ್ಚಳ, ಜೀವನಾವಶ್ಯಕ ಔಷಧಿಗಳ ಮೇಲಿನ ಜಿ.ಎಸ್.ಟಿ. ಯಿಂದ ಔಷಧಗಳ ಬೆಲೆ ಏರಿಕೆ, ಜಿಲ್ಲಾ ಆಸ್ಪತ್ರೆಗಳನ್ನ ಪಬ್ಲಿಕ್ ಪ್ರೈವೇಟ್ ಪಾರ‍್ಟನರ್‌ಶಿಪ್(ಪಿ.ಪಿ.ಪಿ.) ಅಡಿಯಲ್ಲಿ ತರುವ ಮೂಲಕ ಮಾಡುತ್ತಿರುವ ಖಾಸಗೀಕರಣ, ಸರ್ಕಾರಿ ಆಸ್ಪತ್ರೆಗಳಿಗೆ ಉತ್ಪಾದನೆ ಮಾಡಿ ಸರಬರಾಜು ಮಾಡುತ್ತಿದ್ದ ಔಷಧ & ಜೀವ ರಕ್ಷಕ ವ್ಯಾಕ್ಸಿನ್ ಉತ್ಪಾದನಾ ಘಟಕಗಳ ಷೇರುಗಳನ್ನು ಬಿಡಿಗಾಸಿಗೆ ಖಾಸಗೀ ಬಂಡವಾಳಿಗರಿಗೆ ಮಾರಾಟ ಮಾಡುತ್ತಿರುವುದು. ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಜನೌಷಧಿಗಳ ಮೂಲಕ ಕೊಡುವುದಾಗಿ ಪ್ರಚಾರ ಮಾಡಿದ ಕೇಂದ್ರ ಸರ್ಕಾರವು ಜನೌಷಧಿ ಮಳಿಗೆಗಳನ್ನ ಮೊಟ್ಟ ಮೊದಲಿಗೆ ಪ್ರಾರಂಭಿಸಿದ್ದು ಉಚಿತವಾಗಿ ಔಷಧಗಳನ್ನು ನೀಡುತ್ತಿದ್ದ ಸರ್ಕಾರಿ ಆಸ್ಪತ್ರೆಗಳಲ್ಲಿ, ಈ…

Read More

ಚಿಕ್ಕಮಗಳೂರು: ಮನೆಯಿಂದ ಬೆಳಗ್ಗೆ ಶಾಲೆಗೆ ಬರುತ್ತಿರುವಾಗ ರಸ್ತೆಯಲ್ಲೇ ಕುಸಿದು ಸಾವನ್ನಪ್ಪಿರುವ ವಿದ್ಯಾರ್ಥಿನಿ ಘಟನೆ  ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ ನಡೆದಿದೆ. ದಾರದಹಳ್ಳಿಯ HPS ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಸೃಷ್ಟಿ(13)  ರಸ್ತೆಯಲ್ಲೇ ಕುಸಿದು ಬಿದ್ದು ಹೃದಯಘಾತದಿಂದ ಸಾವನ್ನಪ್ಪಿದ್ದಾಳೆ. ಸೃ ಷ್ಟಿ ದಾರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೆ ತರಗತಿ ವ್ಯಾಸಂಗ ಮಾಡುತಿದ್ದಳು. ಅರ್ಜುನ ಸುಮ ದಂಪತಿಗಳ ಮಗಳು ಇಂದು ಬೆಳಿಗ್ಗೆ 9.30.ರ ಸಮಯದಲ್ಲಿ ಶಾಲೆಗೆ ಹೊಗುತಿದ್ದಾಗ ದಾರದಹಳ್ಳಿ ಸರ್ಕಲ್ ಬಳಿ ಕುಸಿದು ಬಿದ್ದಿದ್ದಾಳೆ.ಕೂಡಲೆ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳದಲ್ಲೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಮೃತರ ಪಾರ್ಥಿವ ಶರೀರವನ್ನು ಕೆಸವಳಲಿಗೆ ತೆಗೆದುಕೊಂಡು ಹೊಗಲಾಗಿದೆ. ಇಂದೆ ಅಂತಿಮ ಸಂಸ್ಕಾರ ನಡೆಯುವ ಸಾದ್ಯತೆ ಇದೆ. ಮೃತರು. ತಾಯಿ.ತಂದೆ.ಇಬ್ಬರು ಸಹೊದರಿಯರು.ಒಬ್ಬ ಸಹೊದರರನ್ನು.ಆಪಾರ ಬಂದು ಬಳಗವನ್ನು ಅಗಲಿದ್ದಾರೆ ಇವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಆ ಭಗವಂತನು ಕುಟುಂಬದವರಿಗೆ ನೀಡಲಿ ಇವರ ಅಗಲಿಕೆಯ ದುಃಖಭಾಗಿಗಳಾಗಿ ದಾರದಹಳ್ಳಿ ಶಾಲೆಯ ಹಳೆಯ ವಿಧ್ಯಾರ್ಥಿಗಳ ಸಂಘ ಹಾಗೂ ಶಿಕ್ಷಕರುಗಳು ಹಾಗೂ…

Read More

ಬೆಂಗಳೂರು: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ವ್ಯಕ್ತಿ ಸಾವನಪ್ಪಿರುವ ಘಟನೆ ಮಾಗಡಿ ರಸ್ತೆ ನೈಸ್ ರೋಡ್ ಜಂಕ್ಷನ್ ಬಳಿ ನಡೆದಿದೆ. ಅಮೆಜಾನ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್‌ ಎಂಬವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಸಂತೋಷ್‌ ಅವರು ರಾತ್ರಿ ಕೆಲಸ ಮುಗಿಸಿ ಕಾರಿನಲ್ಲಿ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ನೈಸ್‌ ರಸ್ತೆ ಜಂಕ್ಷನ್‌ ಬಳಿ ನಿಂತಿದ್ದ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಕಾರು‌ ಸಂಪೂರ್ಣ ಜಖಂ ಆಗಿದ್ದು ಸಂತೋಷ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಇಂದು ಬೆಳ್ಳಗ್ಗೆ ಬೆಳಕಿಗೆ ಬಂದಿದೆ. ಸಂತೋಷ್‌ ಅವರ ಕುಟುಂಬಿಕರು, ಸ್ನೇಹಿತರು ಆಗಮಿಸಿದ್ದು, ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಐದು ದಿನಗಳ ಹಿಂದೆಯಷ್ಟೇ ಕೊರೊನಾ ವೈರಸ್‍ನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯ (Chamarajapete) 64 ವರ್ಷದ ನಿವಾಸಿಗೆ ಕೊರೊನಾ ಜೊತೆ ಅನ್ಯ ಕಾಯಿಲೆಗಳು ಕೂಡ ಇದ್ದವು. ಟಿಬಿ, ಬಿಪಿ ಸೇರಿದಂತೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ನಡುವೆ ಕೊರೊನಾ ಪಾಸಿಟಿವ್ (Corona Virus) ಕೂಡ ಆಗಿತ್ತು. ಇವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಮೂರು ತಿಂಗಳಿಂದ ಇದು ಹೆಚ್ಚಾಗಿದೆ. ಆಗಸ್ಟ್ ನಲ್ಲಿ ಈ ಉಪತಳಿ ಕಾಣಿಸಿಕೊಂಡಿದೆ. ವೇಗವಾಗಿ ಹಬ್ಬುವ ವೈರಾಣು ಇದಾಗಿದ್ದು, ಒಮಿಕ್ರಾನ್ ರೀತಿಯಲ್ಲಿ ವರ್ತನೆ ಇದೆ. ತೀರಾ ಹಾನಿಕಾರಿ ವೈರಾಣು ಅಲ್ಲ. ದೇಶದಲ್ಲಿ 20 ಪ್ರಕರಣ ಇದೆ ಎಂದರು

Read More

ತುಮಕೂರು : ತುಮಕೂರು ಜಿಲ್ಲೆಯಲ್ಲಿ ಒಂದೇ ದಿನ ಐವರು ಪೊಲೀಸರ ಅಮಾನತ್ತು ಮಾಡಲಾಗಿದ್ದು  ಮೂವರು ಪಿಎಸ್ ಐ, ಒಬ್ಬರು ಎಎಸ್ಐ, ಒಬ್ಬರು ಕಾನ್ಸ್‌ಟೇಬಲ್  ಸೇರಿದಂತೆ ಐವರನ್ನು ಅಮಾನತುಗೊಳಿಸಲು  ತುಮಕೂರು ಎಸ್ಪಿ ಅಶೋಕ್ ಕೆ.ವಿ ಅವರಿಂದ ಆದೇಶ ನೀಡಲಾಗಿದೆ.ತುರುವೇಕೆರೆ ಪಿಎಸ್ ಐಗಳಾದ ಗಣೇಶ್, ರಾಮಚಂದ್ರಯ್ಯ ಹೆಡ್ ಕಾನ್ಸಟೇಬಲ್ ರಘುನಂದನ್ ಅಮಾನತು ಆದವರು ತುರುವೇರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಮಿಸ್ಸಿಂಗ್ ಆಗಿದ್ದರು ಈ ಬಗ್ಗೆ ದೂರು ನೀಡಿದರೂ ಎಫ್ಐಆರ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದಕ್ಕೆ ಅಮಾನತು ಮಧುಗಿರಿ ತಾಲೂಕು ಬಡವನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜು, ಎಎಸ್ಐ ಸುರೇಶ್ ಅಮಾನತು.. ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಲಿತರ ಮೇಲೆ ಸವರ್ಣೀಯರು ಹಲ್ಲೆ‌ ಮಾಡಿದ್ದ ಆರೋಪ ಈ ಬಗ್ಗೆ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಸಂತ್ರಸ್ತರು ಆದರೂ  ದೂರು ನೀಡಿದ್ದರೂ ಎಫ್ ಐಆರ್ ಮಾಡಿಕೊಳ್ಳದೆ‌ ನಿರ್ಲಕ್ಷ್ಯ ತೋರಿದ್ದ ಪಿಎಸ್ ಐ ಮತ್ತು ಎಎಸ್ಐ.. ಒಂದೇ ದಿನ ಮೂವರು ಪಿಎಸ್ ಐ, ಒಬ್ಬರು ಎಎಸ್ಐ, ಒಬ್ಬರು…

Read More

ಗದಗ: ಪದವೀಧರ ಯುವಕನೋರ್ವ ಕೆಲಸ ಅರಸಿ ಬೇರೆ ಊರಿಗೆ ಹೋಗದೇ, ಬೇರೊಬ್ಬರ ಕೈ ಕೆಳಗೆ ಕೆಲಸ ಮಾಡದೇ ತಾನು ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ತನ್ನದೇ ಭೂಮಿಯಲ್ಲಿ ಕಷ್ಟಪಟ್ಟು ಕೃಷಿ ಮಾಡಿ ಯಶಸ್ಸು ಸಾಧಿಸಿದ್ದಾನೆ. ಮೂಲತ ಗದಗ ಜಿಲ್ಲೆ ಮುಂಡರಗಿ ತಾಲೂಕು ಕೊರ್ಲಹಳ್ಳಿ ಗ್ರಾಮದ ಚಂದ್ರಶೇಖರ ನಾಗಪ್ಪ ಮಜ್ಜಗಿಯೇ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿದ ಯುವ ರೈತನಾಗಿದ್ದಾನೆ. ಮೊದಮೊದಲು ಎಲ್ಲರಂತೆ ಸಾಂಪ್ರದಾಯಿಕ ಕೃಷಿ ಮಾಡ್ತಿದ್ದ ಚಂದ್ರಶೇಖರ ಮಜ್ಜಗಿ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗೋದಿಲ್ಲ ಅನ್ನೋದನ್ನ ಮನಗಂಡು ಬೀಜೊತ್ಪಾದನೆ, ತರಕಾರಿ ಮತ್ತು ಮಿಶ್ರ ಕೃಷಿ ಪಧ್ಧತಿಯತ್ತ ಮುಖ ಮಾಡಿದ್ರು. ಆ ಮೂಲಕ ಯಶಸ್ಸು ಸಾಧಿಸಿದ್ದಾನೆ. ಕುಂಬಳಕಾಯಿ, ಹಾಗಲಕಾಯಿ, ಬೆಂಡೆ ಟೊಮ್ಯಾಟೋ, ಕಲ್ಲಂಗಡಿ ಇನ್ನೀತರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ಹೊರ ರಾಜ್ಯಗಳಿಗೆ ಕಳಿಸೋ ಮೂಲಕ ಉತ್ತಮ ಲಾಭ ಪಡೀತಿದ್ದಾರೆ. ಆ ಮೂಲಕ ಕೃಷಿ, ತೋಟಗಾರಿಕೆಯನ್ನ ನಿರಂತರ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ಈ ರೈತನಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದು ಮಾದರಿ ಯುವ…

Read More

ಕಲಬುರಗಿ: ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮನೆಮುಂದೆ ಇವತ್ತು ಬೆಳ್ಳಂ ಬೆಳಗ್ಗೆ ಜನಾಜಾತ್ರೆ ನೆರೆದಿತ್ತು. ನಗರದ ಐವಾನ್ ಶಾಹಿ ಏರಿಯಾದ ನಿವಾಸದಲ್ಲಿ ಸಚಿವರಿಗೆ ಭೇಟಿಯಾಗಲು ಜನ ಅಹವಾಲು ಹಿಡಿದು ಬಂದಿದ್ರು. ನೂಕುನುಗ್ಗಲಿನ ನಡುವೆಯೇ ಅಹವಾಲು ಸ್ವೀಕಾರ ಮಾಡಿದ ಸಚಿವರು ಜನರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ನಂತರ ಮಾಧ್ಯಮದವರ ಜೊತೆಗೂ ಹಲವು ವಿಷಯಗಳ ಕುರಿತು ಮಾತನಾಡಿದ್ರು

Read More

ಕನ್ನಡದ ಹೆಸರಾಂತ ಹಿರಿಯ ನಟಿ ಹೇಮಾ ಚೌಧರಿ (Hema Chaudhary) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಹಿಂದೆ ಅವರಿಗೆ ಬ್ರೈನ್ ಹ್ಯಾಮರೇಜ್ (Brain Hemorrhage) ಆಗಿತ್ತು ಎಂದು ತಿಳಿದು ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ದಿನಗಳ ಹಿಂದೆಯಷ್ಟೇ ಅವರು ಲೀಲಾವತಿ ಅವರ 11ನೇ ದಿನದ ಕಾರ್ಯದಲ್ಲಿ ಭಾಗಿಯಾಗಿದ್ದರು. ವಿನೋದ್ ರಾಜ್ ಅವರಿಗೆ ಸಾಂತ್ವನ ಕೂಡ ಹೇಳಿದ್ದರು. ಆಸಮಯದಲ್ಲಿ ಆರೋಗ್ಯವಾಗಿದ್ದ ಹೇಮಾ ಅವರು, ಅಲ್ಲಿಂದ ಬಂದ ನಂತರ ಏಕಾಏಕಿ ಮೆದುಳಿನಲ್ಲಿ ರಕ್ತಸ್ರಾವ ಆಗಿದೆ ಎಂದು ಹೇಳಲಾಗುತ್ತಿದೆ. ಕನ್ನಡ, ಮಲಯಾಳಂ, ತೆಲುಗು, ತಮಿಳು ಹೀಗೆ ನಾನಾ ಭಾಷೆಗಳಲ್ಲಿ ಹೇಮಾ ಚೌಧರಿ ನಟಿಸಿದ್ದಾರೆ. ಕಿರುತೆರೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹೀಗಾಗಿ ಹೇಮಾ ಅವರ ಅನಾರೋಗ್ಯ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಹೇಮಾ ಅವರ ಪುತ್ರ ಐರ್ಲೆಂಡ್ ನಲ್ಲಿ ಇದ್ದಾರೆ. ಅವರು ಅಲ್ಲಿಂದ ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.

Read More

ಮುಂಬೈ: ವಿಶ್ವ ಕ್ರಿಕೆಟ್‌ನಲ್ಲಿ ಸದ್ದು ಮಾಡಿ ಸುದ್ದಿಯಾಗಿರುವ ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ (IPL Brand Value) ಭಾರೀ ಏರಿಕೆಯಾಗಿದೆ. 2023ರ ಆವೃತ್ತಿಯ ನಂತರ 23% ಏರಿಕೆಯಾಗಿ ಈಗ 10.7 ಶತಕೋಟಿ ಡಾಲರ್‌ಗೆ (ಅಂದಾಜು 89,232 ಕೋಟಿ ರೂ.) ಏರಿಕೆಯಾಗಿದೆ. ಬ್ರ್ಯಾಂಡ್‌ ಕನ್ಸಲ್ಟೆನ್ಸಿ ಕಂಪನಿ ಬ್ರ್ಯಾಂಡ್‌ ಫೈನಾನ್ಸ್‌ ವರದಿ ಪ್ರಕಾರ 2008ರಲ್ಲಿ ಐಪಿಎಲ್‌ ಆರಂಭಗೊಂಡ ಬಳಿಕ ಅದರ ಮೌಲ್ಯ 433% ಏರಿಕೆಯಾಗಿದೆ. ಸ್ಟೇಡಿಯಂ ಸಾಮರ್ಥ್ಯ, ಇಂಟರ್‌ನೆಟ್‌ನಲ್ಲಿ ಐಪಿಎಲ್‌ ವೀಕ್ಷಣೆ, ತಂಡಗಳ ಮೀಡಿಯಾ ಪ್ರಾಯೋಜಕತ್ವ ಇತ್ಯಾದಿ ವಿಚಾರಗಳನ್ನು ಅಧ್ಯಯನ ಮಾಡಿ ಬ್ರ್ಯಾಂಡ್‌ ಮೌಲ್ಯಮಾಪನ ಮಾಡಲಾಗಿದೆ. ತಂಡಗಳ ಪೈಕಿ ಮುಂಬೈ ಇಂಡಿಯನ್ಸ್‌ (MI) ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್‌ ಕಿಂಗ್ಸ್‌ (CSK) ಎರಡನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್‌ ಮೌಲ್ಯ 87 ದಶಲಕ್ಷ ಡಾಲರ್‌ (725 ಕೋಟಿ ರೂ.), ಚೆನ್ನೈ ಸೂಪರ್‌ ಕಿಂಗ್ಸ್‌ 81 ದಶಲಕ್ಷ ಡಾಲರ್‌ (674 ಕೋಟಿ ರೂ.) ಇದೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) 78.6 ದಶಲಕ್ಷ ಡಾಲರ್‌ (ಅಂದಾಜು 655 ಕೋಟಿ…

Read More

ದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ (Dawood Ibrahim) ಆರೋಗ್ಯದ ಬಗ್ಗೆ ಆತನ ಆಪ್ತ ಛೋಟಾ ಶಕೀಲ್ (Chhota Shakeel) ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾನೆ. ದಾವೂದ್‌ಗೆ ಯಾರೋ ವಿಷ ನೀಡಿದ್ದಾರೆ ಅನ್ನೋದು ಆಧಾರರಹಿತ ವದಂತಿಯಾಗಿದೆ. ದಾವೂದ್ ನೂರಕ್ಕೆ ನೂರಷ್ಟು ಆರೋಗ್ಯವಾಗಿದ್ದಾನೆ. ಕಾಲಕಾಲಕ್ಕೆ ದುರುದ್ದೇಶದಿಂದ ಇಂತಹ ವದಂತಿಗಳನ್ನು ಹರಡಲಾಗುತ್ತಿದೆ. ಇದೀಗ ಐಎಸ್‌ಐನ ಆಸ್ತಿಯಾಗಿರುವ ಪರಾರಿಯಾಗಿರುವ ಭೂಗತ ದೊರೆ, ತಾನು ಇತ್ತೀಚೆಗೆ ಪಾಕಿಸ್ತಾನದಲ್ಲಿ ದಾವೂದ್‌ನನ್ನು ಭೇಟಿಯಾಗಿದ್ದೆ ಮತ್ತು ಅವನು ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದು ಛೋಟಾ ಶಕೀಲ್ ಹೇಳಿದ್ದಾನೆ. ದಾವೂದ್‌ಗೆ ಯಾರೋ ವಿಷ ಹಾಕಿದ್ದಾರೆ.‌ ಆತನನ್ನು ಕರಾಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ವದಂತಿಗಳು ಭಾರತ ಮತ್ತು ಪಾಕಿಸ್ತಾನದ ಎರಡೂ ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದರ ಬೆನ್ನಲ್ಲೇ ಆತನ ಆಪ್ತ ಛೋಟಾ ಶಕೀಲ್ ಕಡೆಯಿಂದ ಸ್ಫೋಟಕ ಮೆಸೇಜ್ ಬಂದಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ದಾವೂದ್‌ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಪಾಕಿಸ್ತಾನದಲ್ಲಿ (Pakistan) ಗೂಗಲ್ ಮತ್ತು ಟ್ವಿಟ್ಟರ್ ಕೂಡ ಸ್ಥಗಿತಗೊಳಿಸಲಾಗಿತ್ತು.‌

Read More