ಗದಗ: ಪದವೀಧರ ಯುವಕನೋರ್ವ ಕೆಲಸ ಅರಸಿ ಬೇರೆ ಊರಿಗೆ ಹೋಗದೇ, ಬೇರೊಬ್ಬರ ಕೈ ಕೆಳಗೆ ಕೆಲಸ ಮಾಡದೇ ತಾನು ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ತನ್ನದೇ ಭೂಮಿಯಲ್ಲಿ ಕಷ್ಟಪಟ್ಟು ಕೃಷಿ ಮಾಡಿ ಯಶಸ್ಸು ಸಾಧಿಸಿದ್ದಾನೆ.
ಮೂಲತ ಗದಗ ಜಿಲ್ಲೆ ಮುಂಡರಗಿ ತಾಲೂಕು ಕೊರ್ಲಹಳ್ಳಿ ಗ್ರಾಮದ ಚಂದ್ರಶೇಖರ ನಾಗಪ್ಪ ಮಜ್ಜಗಿಯೇ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿದ ಯುವ ರೈತನಾಗಿದ್ದಾನೆ. ಮೊದಮೊದಲು ಎಲ್ಲರಂತೆ ಸಾಂಪ್ರದಾಯಿಕ ಕೃಷಿ ಮಾಡ್ತಿದ್ದ ಚಂದ್ರಶೇಖರ ಮಜ್ಜಗಿ ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗೋದಿಲ್ಲ ಅನ್ನೋದನ್ನ ಮನಗಂಡು ಬೀಜೊತ್ಪಾದನೆ, ತರಕಾರಿ ಮತ್ತು ಮಿಶ್ರ ಕೃಷಿ ಪಧ್ಧತಿಯತ್ತ ಮುಖ ಮಾಡಿದ್ರು.
ಆ ಮೂಲಕ ಯಶಸ್ಸು ಸಾಧಿಸಿದ್ದಾನೆ. ಕುಂಬಳಕಾಯಿ, ಹಾಗಲಕಾಯಿ, ಬೆಂಡೆ ಟೊಮ್ಯಾಟೋ, ಕಲ್ಲಂಗಡಿ ಇನ್ನೀತರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆದು ಹೊರ ರಾಜ್ಯಗಳಿಗೆ ಕಳಿಸೋ ಮೂಲಕ ಉತ್ತಮ ಲಾಭ ಪಡೀತಿದ್ದಾರೆ. ಆ ಮೂಲಕ ಕೃಷಿ, ತೋಟಗಾರಿಕೆಯನ್ನ ನಿರಂತರ ಆದಾಯದ ಮೂಲವಾಗಿಸಿಕೊಂಡಿದ್ದಾರೆ.
ಈ ರೈತನಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದ್ದು ಮಾದರಿ ಯುವ ರೈತನಾಗಿದ್ದಾನೆ. ಸಣ್ಣ ಪ್ರಮಾಣದ ಭೂಮಿ ಉಳ್ಳ ರೈತರೂ ಕೂಡಾ ಈ ರೈತನ ಮಾದರಿ ಕೃಷಿ ಅಳವಡಿಸಿಕೊಂಡ್ರೆ ಕೃಷಿಯಲ್ಲಿ ಲಾಭ ಗಳಿಸೋ ಮೂಲಕ ಯಶಸ್ಸು ಸಾಧಿಸಲು ಸಾಧ್ಯವಾಗತ್ತೆ…