Author: AIN Author

ಬೆಂಗಳೂರು: ಕೊರೋನಾ ಪಾಸಿಟಿವ್ ಬಂದ್ರೆ 10 ದಿನ ಹೋಂ ಕ್ವಾರಂಟೈನ್​ನಲ್ಲಿ ಇರಬೇಕು ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ತಿಳಿಸಿದ್ದಾರೆ. https://ainlivenews.com/the-first-victim-of-corona-in-the-state/ ಬೆಂಗಳೂರಲ್ಲಿ ಮಾತನಾಡಿದ ಅವರು, ಕೊರೋನಾ ಪಾಸಿಟಿವ್ ಇರಲಿ, ಇಲ್ಲದಿರಲಿ ಕುಟುಂಬದವರಿಗೆ ಟೆಸ್ಟಿಂಗ್ ಇರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕೊರೋನಾ ಪರೀಕ್ಷೆ ಮಾಡಲಾಗುತ್ತದೆ. RT-PCR ಪರೀಕ್ಷೆ ಕೂಡ ಉಚಿತ ಎಂದು ತಿಳಿಸಿದ್ದಾರೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಗದಿ ಬಗ್ಗೆ ನಾಳೆ ನಿರ್ಧಾರ ಮಾಡ್ತೀವಿ ಎಂದು ತಿಳಿಸಿದ್ದಾರೆ. ಈಗಾಗಲೇ ನೆರೆಯ ಕೇರಳ, ಗೋವಾ, ಮಹಾರಾಷ್ಟ್ರ ಒಮಿಕ್ರಾನ್​ನ ರೂಪಾಂತರಿ JN.1 ಪತ್ತೆಯಾಗಿದ್ದು ರಾಜ್ಯದಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸಚಿವರು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಮಾಹಿತಿ ನೀಡಿದ್ದಾರೆ.

Read More

ಬೆಂಗಳೂರು: ಕ್ರಿಸ್‌ಮಸ್‌ ರಜೆಗೆ ಊರಿಗೆ ಹೊರಟಿರುವ ಪ್ರಯಾಣಿಕರಿಗೆ KSRTC ಸಿಹಿಸುದ್ದಿ ನೀಡಿದ್ದು ಪ್ರಯಾಣಿಕರ ಅನುಕೂಲಕ್ಕಾಗಿ ಒಂದು ಸಾವಿರ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲಾಗಿದೆ. ಡಿ.22ರಿಂದ ಡಿ.24ರ ವರೆಗೆ ಬೆಂಗಳೂರು ನಗರದ ವಿವಿಧ ಬಸ್ ನಿಲ್ದಾಣಗಳಿಂದ ಈ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗುತ್ತಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಶೃಂಗೇರಿ, ಹೊರನಾಡು, ದಾವಣಗೆರೆ, ಗೋಕರ್ಣ, ಶಿರಸಿ, ರಾಯಚೂರು ಹಾಗೂ ತಿರುಪತಿಗೆ ತೆರಳಲಿವೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿಗೆ ಹೆಚ್ಚುವರಿ ಬಸ್ ಹೊರಡಲಿವೆ. ಇನ್ನು, ಕ್ರಿಸ್ಮಸ್​ ಹಬ್ಬ ಆಚರಣೆ ಮತ್ತು ಹೊಸ ವರ್ಷದ ಸಂಭ್ರಕ್ಕೆ ಇನ್ನು, ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ಹಬ್ಬಕ್ಕೆ ಊರಿಗೆ ಹೊರಡುವವರ ಸಂಖ್ಯೆಯೂ ಹೆಚ್ಚಾಗಿಯೇ ಇರುವ ಕಾರಣ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಹೆಚ್ಚುವರಿ ಬಸ್​ ವ್ಯವಸ್ಥೆಯನ್ನು ಕಲ್ಪಿಸಿದೆ.

Read More

ಬೆಂಗಳೂರು: ಇಂದಿರಾ ಕ್ಯಾಂಟೀನ್​ ನಲ್ಲಿ ನಿತ್ಯ ಒಂದೇ ಬಗೆಯ ತಿಂಡಿ, ಊಟ ಸೇವನೆ ಮಾಡುತ್ತಿದ್ದ ನಾಗರೀಕರಿಗೆ ಇದೀಗ ಬಿಬಿಎಂಪಿ ಬಗೆ ಬಗೆಯ ಉಪಹಾರಗಳನ್ನು ಮೆನು ಲಿಸ್ಟ್​ನಲ್ಲಿ ಸೇರಿಸಿದೆ. ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಬಿಬಿಎಂಪಿ ಟೆಂಡರ್ ಕರೆದಿದ್ದು. ಆಹಾರದ ಮೆನುವಿನಲ್ಲಿ ರಾಗಿ ಮುದ್ದೆ, ಇಡ್ಲಿ, ಮಂಗಳೂರು ಬನ್ಸ್, ಬಿಸಿಬೇಳೆ ಬಾತ್ ಸೇರಿದಂತೆ ಹಲವು ಬಗೆಯ ಆಹಾರ ಪದಾರ್ಥಗಳನ್ನು ಹೊಸದಾಗಿ ಸೇರ್ಪಡೆ ಮಾಡಿದೆ ಉಪಾಹಾರದಲ್ಲಿ ಇಡ್ಲಿ, ಪುಲಾವ್, ಬಿಸಿಬೇಳೆ ಬಾತ್, ಖಾರಾಬಾತ್, ಪೊಂಗಲ್, ಬ್ರೆಡ್ ಜಾಮ್, ಚೌಚೌಬಾತ್ ಒಂದೊಂದು ದಿನ ಲಭ್ಯವಾಗಲಿವೆ. ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ರಾಗಿಮುದ್ದೆ, ಚಪಾತಿ, ಅನ್ನ ಸಾಂಬಾರು ಇರಲಿವೆ. ಮಾವಿನಕಾಯಿ ಲಭ್ಯವಿರುವ ಕಾಲದಲ್ಲಿ ಯಾವುದಾದರೂ ಒಂದು ಉಪಾಹಾರದಲ್ಲಿ ಮಾವಿನಕಾಯಿ ಚಿತ್ರಾನ್ನವನ್ನು ಗ್ರಾಹಕರಿಗೆ ನೀಡಲು ನಿರ್ಧರಿಸಲಾಗಿದೆ.

Read More

ಬೆಂಗಳೂರು: ಸಿರಿಧಾನ್ಯ ಬಳಸಿ ಆರೋಗ್ಯ ಬೆಳೆಸಿ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಕರೆ ನೀಡಿದ್ದಾರೆ. ಕೃಷಿ ಇಲಾಖೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಕ್ರೈಸ್ಟ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಮಿಲೆಟ್ ತಿಂತೀರಾ ವಿಚಾರ ವಿನಿಮಯ,ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೆಚ್ಚು ಪೌಷ್ಠಿಕತೆ ಹೊಂದಿರುವ ಸಿರಿಧಾನ್ಯ ಸದೃಡ ದೇಹ ಹಾಗೂ ಮನಸ್ಸಿನ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಯುವ ಸಮುದಾಯ ಇದನ್ನು ಹೆಚ್ಚು ಬಳಸಿ, ಸಾರ್ವಜನಿಕರಿಗೂ ಅರಿವು ಮೂಡಿಸಬೇಕು ಎಂದರು. ಸಿರಿಧಾನ್ಯ ಅತ್ಯಂತ ಪರಿಪೂರ್ಣ ಆಹಾರ, ಜಾಗತಿಕ ಮಾರುಕಟ್ಟೆಯಲ್ಲಿಯೂ ಇದಕ್ಕೆ ಬೇಡಿಕೆ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಸಹ ಜಂಕ್ ಪುಡ್ ಬಿಟ್ಟು ಪ್ರತಿದಿನ ಮಿಲೆಟ್ ಬಳಸುವುದು ಉತ್ತಮ ಎಂದರು. ಸಿರಿಧಾನ್ಯ ಕಡಿಮೆ ವೆಚ್ಚ, ಮಿತ ನೀರಿನಲ್ಲಿ ಬೆಳೆಯುವ ಆಹಾರವಾಗಿದೆ.ಕರ್ನಾಟಕ ಸರ್ಕಾರ 2013 ರಿಂದಲೂ ಇದರ ಪ್ರೋತ್ಸಾಹಕ್ಕೆ ಹಲವು ಯೋಜನೆ ಜಾರಿಗೆ ತಂದಿದೆ. ಪ್ರತಿವರ್ಷ ಮೇಳಗಳನ್ನು ಆಯೋಜಿಸುತ್ತಿದ್ದು ಈ‌ ಬಾರಿ ಜ 5-7ರ ವರಗೆ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅಂತರ ರಾಷ್ಟ್ರೀಯ ಮಟ್ಟದ…

Read More

ಗದಗ: ಹಿಂದೂ ರಾಷ್ಟ್ರ ಮಾಡೋದು ಬಿಜೆಪಿ ಅಜೆಂಡಾ ಅಲ್ಲಾ ಹಿಂದೂ ರಾಷ್ಟ್ರ ಮಾಡೋದು ದೇಶದ ಹಿಂದೂಗಳ ಅಜೆಂಡಾ ಎಂದು  ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ ನಗರದಲ್ಲಿ ಮಾತನಾಡಿದ ಅವರು,  ದೇಶದ ಹಿಂದೂಗಳು ಹಿಂದೂ ರಾಷ್ಟ್ರ ಆಗ್ಬೇಕು ಎಂದು ನಿರ್ಧಾರ ಮಾಡಿದ್ದಾರೆ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕು ಇವತ್ತಿನ ತೀರ್ಮಾನ ಅಲ್ಲಾ, ಸ್ವಾತಂತ್ರ್ಯ ಪೂರ್ವದಿಂದ ಹೋರಾಟ ಮಧುರಾ, ಕಾಶಿಯಲ್ಲಿ ಎಲ್ಲವನ್ನೂ ಹೊಡೆದು ಹಾಕಿದ್ರಲ್ಲಾ ಮುಸಲ್ಮಾನರು ಅದನ್ನೆಲ್ಲಾ ಉಳಿಸಬೇಕೆಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಸ್ವರ್ಗದಲ್ಲಿ ಇರೋದು ಅವರೆಲ್ಲ ಆತ್ಮಕ್ಕೆ ಈವಾಗ ಶಾಂತಿ ಸಿಗ್ತಾಯಿದೆಯಲ್ವಾ ಎಂದರು. ಜನವರಿ 22 ಕ್ಕೆ ಅಯೋಧ್ಯೆಯಲ್ಲಿ ಇಡೀ ಪ್ರಪಂಚ ನೋಡುವ ಕೆಲಸ ಆಗುತ್ತೇ ಕಾಶಿ ಕುರಿತು ಕೋರ್ಟ್ ಆಡರ್ ಆಗಿದೆ, ಮಧುರಾ ಬಗ್ಗೆ ಸರ್ವೇ ಕೊಟ್ಟಿದ್ದಾರೆ ದೇಶದಲ್ಲಿ ಹೊಸ ಮಸೀದಿಗಳ ಬಗ್ಗೆ ನಾನು ವಿರೋಧ ಮಾಡೋದಿಲ್ಲ ನಮ್ಮ ದೇವಸ್ಥಾನಗಳನ್ನು ಹೊಡೆದು ಮಸೀದಿ ಕಟ್ಟಿದ್ದಾರಲ್ಲ ಆ ಮಸೀದಿ ಉಳಿಸಲ್ಲಾ ಈ ದೇಶದಲ್ಲಿ ಒಂದೇ ಒಂದು…

Read More

ಗದಗ: ದಲಿತರಿಗೆ ಅವಮಾನ ಮಾಡಲು  ಖರ್ಗೆ ಬಗ್ಗೆ  ಪ್ರಸ್ತಾಪ ಮಾಡಿದ್ದಾರೆ ಎಂದು ಗದಗದಲ್ಲಿ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,  ಇಂಡಿಯಾ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಪ್ರಸ್ತಾಪ ವಿಚಾರ ಬಗ್ಗೆ ಕಿಡಿಕಾರಿದರು.ಖರ್ಗೆ ಹೆಸರು ಪ್ರಸ್ತಾಪ ಮಾಡ್ತಿದ್ದಂತೆ ಲಾಲೂ ಪ್ರಸಾದ್ ಹಾಗೂ ನಿತೀಶ್ ಕುಮಾರ್ ಎದ್ದು ಹೋದರು. ಇದಕ್ಕೆ ಇಂಡಿಯಾ ಒಕ್ಕೂಟ ಅಂತ ಕರೆಯುತ್ತೀರಾ ಎಂದು ಹೇಳಿದರು. ಇದು ದಲಿತರಿಗೆ ಮೂಗಿಗೆ ತುಪ್ಪ ಒರೆಸುವ ಕೆಲಸ ಕಾಂಗ್ರೆಸ್ ಇದೇ ರೀತಿ ದಲಿತರಿಗೆ ದ್ರೋಹ ಮಾಡ್ಕೊಳ್ತಾ ಬಂದಿದೆ. ದಲಿತರನ್ನು ನಂಬಿಸಿ ಮೋಸ ಮಾಡಿ ಇಷ್ಟು ವರ್ಷ ದೇಶ ಆಳಿದ್ದಾರೆ. ಪ್ರಿಯಾಂಕ ಖರ್ಗೆ ಧರ್ಮದ್ರೋಹಿ. ಆದ್ರೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ ಎಂದು ಗದಗನಲ್ಲಿ‌ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.

Read More

ಕಲಬುರಗಿ:  ಸತತ ನಾಲ್ಕು ಬಾರಿ ಮುಂದೂಡುತ್ತ ಬಂದಿದ್ದ ಕಲಬುರಗಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಇವತ್ತು ಅಂದುಕೊಂಡಂತೆ ಆಗ್ತಿದೆ.. ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತ್ರತ್ವದಲ್ಲಿ ನಡೆಯುತ್ತಿರುವ KDP ಸಭೆ ಬರ ವಿಷಯ ಸೇರಿದಂತೆ ಹತ್ತು ಹಲವು ಪ್ರಮುಖ ಇಲಾಖೆಗಳ ವಿಷಯಗಳ ಚರ್ಚೆಯಲ್ಲಿವೆ ಡಿಸಿ ಕಚೇರಿಯಲ್ಲಿ ನಡೆಯುತ್ತಿರುವ ಹೈಓಲ್ಟೇಜ್ ಮೀಟಿಂಗ್ ಇದಾಗಿದೆ…

Read More

ಗದಗ:  ಬಾವಿಯಲ್ಲಿ ಬಿದ್ದಿದ್ದ ನಾಗರಹಾವು ರಕ್ಷಣೆ ಮಾಡಿರುವ ಘಟನೆ ಮುಂಡರಗಿ ಪಟ್ಟಣದಲ್ಲಿ  ನಡೆದಿದೆ. ರಾಘವೇಂದ್ರ ಕುರಿ ಅನ್ನೋರ ತೋಟದ ಬಾವಿಯಲ್ಲಿ ಕಾಣಿಸಿಕೊಂಡಿದ್ದ ನಾಗರಹಾವು ನೀರಿನಿಂದ ಮೇಲೆ ಬರಲಾರದೇ ಪರದಾಡುತ್ತಿದ್ದು ಈ ವೇಳೆ ತೋಟದ ಮಾಲೀಕ ನೋಡಿ ಮಾನವೀಯತೆ ಮೆರೆದಿದ್ದಾರೆ. https://ainlivenews.com/a-car-collided-with-a-standing-lorry-from-behind-the-manager-died-in-the-amazon-company/ ಉರಗ ರಕ್ಷಕ‌ ಜಲಾಲ್ ಕೊಪ್ಪಳ ಅನ್ನುವಾತನಿಂದ ನಾಗರಹಾವಿನ ರಕ್ಷಣೆಯಾಗಿದ್ದು  ಬಹಳಷ್ಟು‌ ಆಳವಿದ್ದ ಬಾವಿಯಲ್ಲಿ ಬಿದ್ದು‌ ಪರದಾಡುತ್ತಿದ್ದ ನಾಗರಹಾವು ನಂತರ  ಸುರಕ್ಷಿತ ಪ್ರದೇಶಕ್ಕೆ ನಾಗರಹಾವು ರವಾನೆ ಮಾಡಲಾಗಿದೆ.

Read More

ಹುಬ್ಬಳ್ಳಿ: ಅಣ್ಣನಿಂದ ಒಡ ಹುಟ್ಟಿದ ತಮ್ಮನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ವಿಜಯ ನಗರದಲ್ಲಿ ನಡೆದಿದೆ. ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಅನ್ನೋ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. https://ainlivenews.com/a-car-collided-with-a-standing-lorry-from-behind-the-manager-died-in-the-amazon-company/ ಮೃತ ದುರ್ದೈವಿಯನ್ನು ಪವನ (30) ಎಂದು ಗುರುತಿಸಲಾಗಿದೆ. ಹೊಟ್ಟೆ, ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಅಣ್ಣ ರಾಜುನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Read More

ತುಮಕೂರು : ಜಿಲ್ಲೆಯ ಮಧುಗಿರಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ ನಡೆಸುತ್ತಿದ್ದು  ಮಧುಗಿರಿ ಪಟ್ಟಣದ ವಿ.ಆರ್.ಎಸ್.ಟಿ ಮೊಬೈಲ್ ಅಂಗಡಿಯಲ್ಲಿ ಈ ಕೃತ್ಯವನ್ನು ನಡೆಸಲಾಗುತ್ತಿತ್ತು. ಮೊಬೈಲ್ ಖರೀದಿಗೆ ಬಂದಿದ್ದ ಮೂವರು ಹುಡುಗರು 10,500 ಬೆಲೆಯ ಮೊಬೈಲ್ ಖರೀದಿ ಮಾಡಿದ್ದು ನಂತರ 500 ರೂಪಾಯಿ ಮುಖ ಬೆಲೆಯ 21 ನೋಟು ನೀಡಿದ್ದ ಯುವಕರು ಆದರೆ  ನೋಟುಗಳನ್ನು ಪರಿಶೀಲಿಸಿದಾಗ ನಕಲಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಹುಡುಗರನ್ನು ವಿಚಾರಿಸಿದಾಗ ಸ್ಥಳದಿಂದ ಪರಾರಿಯಾಗಿದ್ದು  ಆ ತಕ್ಷಣ  ಮೊಬೈಲ್ ಅಂಗಡಿ ಮಾಲೀಕ ನವೀನ್ ಖೋಟಾ ನೋಟುಗಳನ್ನು ಪೊಲೀಸರಿಗೊಪ್ಪಿಸಿ ದೂರು ನೀಡಿದ್ದಾರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರು ಹುಡುಗರನ್ನು ಹುಡುಕುವ ಪ್ರಯತ್ನದಲ್ಲಿದ್ದು  ತನಿಖೆ ಮುಂದುವರೆಸಿದ್ದಾರೆ.

Read More