ಗದಗ: ದಲಿತರಿಗೆ ಅವಮಾನ ಮಾಡಲು ಖರ್ಗೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದು ಗದಗದಲ್ಲಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಪ್ರಸ್ತಾಪ ವಿಚಾರ ಬಗ್ಗೆ ಕಿಡಿಕಾರಿದರು.ಖರ್ಗೆ ಹೆಸರು ಪ್ರಸ್ತಾಪ ಮಾಡ್ತಿದ್ದಂತೆ ಲಾಲೂ ಪ್ರಸಾದ್ ಹಾಗೂ ನಿತೀಶ್ ಕುಮಾರ್ ಎದ್ದು ಹೋದರು. ಇದಕ್ಕೆ ಇಂಡಿಯಾ ಒಕ್ಕೂಟ ಅಂತ ಕರೆಯುತ್ತೀರಾ ಎಂದು ಹೇಳಿದರು.
ಇದು ದಲಿತರಿಗೆ ಮೂಗಿಗೆ ತುಪ್ಪ ಒರೆಸುವ ಕೆಲಸ ಕಾಂಗ್ರೆಸ್ ಇದೇ ರೀತಿ ದಲಿತರಿಗೆ ದ್ರೋಹ ಮಾಡ್ಕೊಳ್ತಾ ಬಂದಿದೆ. ದಲಿತರನ್ನು ನಂಬಿಸಿ ಮೋಸ ಮಾಡಿ ಇಷ್ಟು ವರ್ಷ ದೇಶ ಆಳಿದ್ದಾರೆ. ಪ್ರಿಯಾಂಕ ಖರ್ಗೆ ಧರ್ಮದ್ರೋಹಿ. ಆದ್ರೆ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ ಎಂದು ಗದಗನಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.