Author: AIN Author

ಧಾರವಾಡ:- ಸೇವೆ ಖಾಯಂಗೊಳಿಸಲು ಅಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಪಂಜಿನ ಮೆರವಣಿಗೆ ನಡೆದಿದೆ. ನಗರದ ಕಲಾಭವನದಿಂದ ಕೋರ್ಟ್ ವೃತದವರೆಗೆ ಪಂಜಿನ ಮೆರವಣಿಗೆ ನಡೆಸಿ ಬೇಡಿಕೆ ಈಡೇರಿಕೆಗೆ ಒತ್ತಾಯ ಮಾಡಲಾಗಿದ್ದು, ಇದೇ ವೇಳೆ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಹಲವು ದಿನಗಳಿಂದ ಧಾರವಾಡದಲ್ಲಿ ಅಥಿತಿ ಉಪನ್ಯಾಸಕರು ಪ್ರತಿಭಟನೆ ಧರಣಿ ನಡೆಸುತ್ತಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡಲು ಅಗ್ರಹಿಸಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಧರಣಿ ಕೈ ಬೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

Read More

ಬೆಂಗಳೂರು:- ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶ್ರೀಕರ್ ಎಂ. ಎಸ್., ಕನಗವಲ್ಲಿ ಎಂ. ಮತ್ತು ವಸಿರೆಡ್ಡಿ ವಿಜಯ ಜ್ಯೋತ್ಸ್ನಾ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. * ಶ್ರೀಕರ್ ಎಂ. ಎಸ್. (ಕೆಎನ್ 1999). ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ), ಬೆಂಗಳೂರು ಸರ್ಕಾರದ ಕಾರ್ಯದರ್ಶಿಯಾಗಿದ್ದ ಶ್ರೀಕರ್‌ ಅವರನ್ನು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದ ತನಕ ನೇಮಕ ಮಾಡಲಾಗಿದೆ. ಈ ಹುದ್ದೆಯನ್ನು ಹೆಚ್ಚುವರಿಯಾಗಿ ನೋಡಿಕೊಳ್ಳುತ್ತಿದ್ದ ಉಮಾಶಂಕರ್ ಎಸ್. ಆರ್. ಬಿಡುಗಡೆಗೊಳಿಸಲಾಗಿದೆ. * ಕನಗವಲ್ಲಿ ಎಂ. (ಕೆಎನ್: 2010). ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ನಿರ್ದೇಶಕರಾಗಿದ್ದ ಕನಗವಲ್ಲಿ ಅವರನ್ನು ವ್ಯವಸ್ಥಾಪಕ ನಿರ್ದೇಶಕರು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದ ಶ್ರೀವಿದ್ಯಾ ಪಿ. ಐ. ಅವರನ್ನು ಬಿಡುಗಡೆಗೊಳಿಸಲಾಗಿದೆ. * ವಸಿರೆಡ್ಡಿ ವಿಜಯ ಜ್ಯೋತ್ಸ್ನಾ (ಕೆಎನ್:…

Read More

ಹುಬ್ಬಳ್ಳಿ ಡಿ.20: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಧಾರವಾಡ ಮತ್ತು ಹುಬ್ಬಳ್ಳಿಯ ರಾಜ್ಯ ಸಮಾಚಾರ ಕೇಂದ್ರ ಕಚೇರಿಯಲ್ಲಿ 26 ವರ್ಷಗಳ ಕಾಲ ವಾಹನ ಚಾಲಕರಾಗಿ ಸೇವೆ ಸಲ್ಲಿಸಿದ ರಾಮಚಂದ್ರ ಉಕ್ಕಲಿ ಮತ್ತು 25 ವರ್ಷಗಳಿಂದ ವಾಹನ ಚೊಕಟ್ಟಗಾರ್ತಿಯಾಗಿ ಸೇವೆಯಲ್ಲಿ ನಿರತರಾಗಿರುವ ಧರ್ಮಾಬಾಯಿ ನಗರಿ ಅವರಿಗೆ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಮುಂಬಡ್ತಿ ಹೊಂದಿರುವುದರಿAದ ಅವರನ್ನು ಇಂದು ರಾಜ್ಯ ಸಮಾಚಾರ ಕೇಂದ್ರದಲ್ಲಿ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ ಅವರು ಮುಂಬಡ್ತಿ ಹೊಂದಿರುವ ನೌಕರರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಹುಬ್ಬಳ್ಳಿ ರಾಜ್ಯ ಸಮಾಚಾರ ಕೇಂದ್ರ ಕಚೇರಿಯಲ್ಲಿ ನಿಮ್ಮ ಸೇವೆ ಅಪಾರವಾದದ್ದಾಗಿದೆ. ಮುಂದಿನ ದಿನಗಳಲ್ಲಿ ನೀವು ಮುಂಬಡ್ತಿ ಹೊಂದಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಅಲಂಕರಿಸಲಿದ್ದು, ಜವಾಬ್ದಾರಿಯುತ ಪ್ರಾಮಾಣಿಕ ಸೇವೆ ಸಲ್ಲಿಸಬೇಕೆಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಥಮ ದರ್ಜೆ ಸಹಾಯಕಿಯರಾದ ಭಾರತಿ.ಎಸ್.ಮಟ್ಟಿ, ವಾರ್ತಾ ಮತ್ತು…

Read More

ಹೆಚ್ಚಿನ ಜನರ ಉಗುರುಗಳು ಸಾಮಾನ್ಯವಾಗಿರುತ್ತವೆ, ಆದರೆ ಕೆಲವೊಮ್ಮೆ ಜನರು ತಮ್ಮ ಉಗುರುಗಳಲ್ಲಿ ಬಿಳಿ ಕಲೆ ಇರುತ್ತದೆ. ಇದು ತುಂಬಾ ಸಾಮಾನ್ಯವಾಗಿದೆ. ಆದರೆ ಈ ಬಿಳಿ ಬಣ್ಣವು ಕೆಲವು ಕಾಯಿಲೆಯ ಲಕ್ಷಣಗಳಾಗಿರಬಹುದು. ರೋಗದ ಬಗ್ಗೆ ವಿವರವಾಗಿ ತಿಳಿಯೋಣ. 1) ನಿಮ್ಮ ಉಗುರುಗಳಿಗೆ ಶೇಪ್ ನೀಡಲು ನೈಲ್ಬೆಡ್ ಬಳಸಲಾಗುತ್ತದೆ. ಆದರೆ ಚರ್ಮಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಉಗುರುಗಳಿಗೆ ಹಾನಿಯಾಗುತ್ತದೆ. ಇದರಿಂದ ಉಗುರುಗಳ ಮೇಲೆ ಬಿಳಿ ಚುಕ್ಕೆಗಳು ಉಂಟಾಗುತ್ತದೆ. 2) ನಿಮ್ಮ ಪೋಷಕರಿಂದ ನೀವು ಈ ರೋಗವನ್ನು ಆನುವಂಶಿಕವಾಗಿ ಪಡೆಯುತ್ತೀರಿ. ಆದರೆ ಇದು ವಿರಳವಾಗಿ ಕಂಡುಬರುತ್ತದೆ. ಇದು ಜೀನ್ ರೂಪಾಂತರದಿಂದ ಉಂಟಾಗುತ್ತದೆ, ಇದನ್ನು ಒಬ್ಬ ಅಥವಾ ಇಬ್ಬರೂ ಪೋಷಕರು ಮಗುವಿಗೆ ರವಾನಿಸಬಹುದು. 3) ಉಗುರುಗಳ ಮೇಲೆ ಬಿಳಿ ಚುಕ್ಕೆಗಳ ಮತ್ತೊಂದು ಸಾಮಾನ್ಯ ಕಾರಣವೆಂದರೆ ಶಿಲೀಂಧ್ರಗಳ ಸೋಂಕು. ಇದು ಪರಿಸರದಿಂದ ಸೂಕ್ಷ್ಮಜೀವಿಗಳು ನಿಮ್ಮ ಉಗುರು ಅಥವಾ ಸುತ್ತಮುತ್ತಲಿನ ಚರ್ಮದ ಸಣ್ಣ ಅಂತರಗಳ ಮೂಲಕ ಪ್ರವೇಶಿಸಬಹುದು ಮತ್ತು ಶಿಲೀಂಧ್ರಗಳ ಸೋಂಕನ್ನು ಉಂಟುಮಾಡಬಹುದು. 4) ಉಗುರು ಬಣ್ಣ, ಹೊಳಪು, ಗಟ್ಟಿಯಾಗಿಸುವಿಕೆ…

Read More

ನವದೆಹಲಿ:- ಸಂಸದರನ್ನು ಅಮಾನತು ಮಾಡ್ತಿರುವ ಬಗ್ಗೆ ಚರ್ಚೆ ಯಾಕಿಲ್ಲ ಎಂದು ರಾಹುಲ್ ಗಾಂಧಿ AICC ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ದೇಶದಲ್ಲಿನ ಗಂಭೀರ ವಿಚಾರಗಳ ಬಗ್ಗೆ ಚರ್ಚೆಗೆ ಆಗ್ರಹಿಸಿದ ವಿರೋಧ ಪಕ್ಷದ ಸಂಸದರನ್ನು ಕಾರಣವಿಲ್ಲದೆ ಕಲಾಪದಿಂದ ಅಮಾನತು ಮಾಡಲಾಗಿದೆ. ಸಂಸದರನ್ನು ಸಂಸತ್ತಿನಿಂದ ಹೊರಹಾಕಿದರ ಬಗ್ಗೆ ಏಕೆ ಚರ್ಚೆಯಾಗುತ್ತಿಲ್ಲ ಎಂದರು. ಸಂಸದರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ನಾನು ನನ್ನ ಮೊಬೈಲ್​ ಫೋನಿನಲ್ಲಿ ರೆಕಾರ್ಡ್​ ಮಾಡಿದ್ದೇನೆ ಅಷ್ಟೇ. ಅದನ್ನು ಮಾಧ್ಯಮ ಹಾಗೂ ಬಿಜೆಪಿಯವರು ಬೇರೆ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಎಲ್ಲರೂ ನಮ್ಮ ನಡೆಯನ್ನು ಟೀಕಿಸುತ್ತಿದ್ದಾರೆ. ಇದುವರೆಗೆ 150 ಸಂಸದರನ್ನು ಹೊರಹಾಕಲಾಗಿದೆ. ಆದರೆ, ಈವರೆಗೆ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ. ಅದಾನಿ ಮತ್ತು ರಫೇಲ್​ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಿಲ್ಲ. ನಿರುದ್ಯೋಗ ಸೇರಿದಂತೆ ದೇಶದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗೆ ಆಗ್ರಹಿಸಿದ ಸಂಸದರನ್ನು ಅಮಾನತು ಮಾಡಲಾಗುತ್ತಿದೆ. ಇದನ್ನು ಬಿಟ್ಟು ಬೇರೆ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲಾಗುತ್ತಿದೆ…

Read More

ಧಾರವಾಡ:- ವಿದ್ಯುತ್ ಕಾಮಗಾರಿ ಹಿನ್ನೆಲೆ ಧಾರವಾಡದ ಹಲವು ಪ್ರದೇಶದಲ್ಲಿ ನಾಳೆ ಪವರ್ ಕಟ್ ಇರಲಿದೆ ಎಂದು ಹೆಸ್ಕಾಂ ತಿಳಿಸಿದೆ. ಧಾರವಾಡದ ಎತ್ತಿನಗುಡ್ಡ, ಕೃಷಿ ವಿಶ್ವವಿದ್ಯಾಲಯ ಆವರಣ, ಕುಮಾರೇಶ್ವರ ನಗರ, ಸೈದಾಪುರ, ಬೆಳಗಾವಿ ಮುಖ್ಯ ರಸ್ತೆ, ನಾರಾಯಣಪುರ, ಸಿಐಟಿ ಬಿಕೆಎಚ್‌ಬಿ ಕಾಲೋನಿ, ಸಂಪಿಗೆ ನಗರ, ತಾವರಗೇರಿ ಹಾಸ್ಪಿಟಲ್, ಸನ್ಮತಿ ನಗರ, ಜಿ.ಟಿ.ಸಿ ಕ್ಯಾಂಪಸ್, ಮೆಹಬೂಬ ನಗರ, ಹಶ್ಮಿ ನಗರ, ಮಾಳಾಪುರ, ಏರ್‌ಟೆಕ್, ಜಯಲಕ್ಷ್ಮೀ ಇಂಡಸ್ಟ್ರಿಸ್, ಬಸವ ಕಾಲೋನಿ, ಪವರ್ ಗ್ರಿಡ್, ಪೆಪ್ಪಿ ಕಾರ್ಖಾನೆ, ಕಿಲ್ಲಾ, ಸಾಧುನವರ ಎಸ್ಟೇಟ್, ನರೇಂದ್ರ, ಮಮ್ಮಿಗಟ್ಟಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಲಿದೆ. ಅದೇ ರೀತಿ ಚಿಕ್ಕಮಲ್ಲಿಗವಾಡ, ಹಿರೇಮಲ್ಲಿಗವಾಡ, ಶಿರಡಿನಗರ, ತಾಜನಗರ, ಬಿಎಸ್. ಕೆ ಬಡಾವಣೆ, ಮಾಳಾಪುರ ಲಾಸ್ಟ್ ಬಸ್ ಸ್ಟಾಪ್, ರಾಜನಗರ, ತಮದಂಡಿ ಪ್ಲಾಟ್, ಹರಿಜನ ಕೇರಿ, ಎಪಿಎಂಸಿ, ಫೈರ್ ಸ್ಟೇಷನ್, ರಾಮನಗೌಡ ಹಾಸ್ಪಿಟಲ್, ದುರ್ಗಾದೇವಿ ದೇವಸ್ಥಾನ, ಮರಾಠಾ ಕಾಲೋನಿ, ಕೊಪ್ಪದಕೇರಿ, ಗುಲಗಂಜಿಕೊಪ್ಪ, ಎಂಬಿ ನಗರ, ಸಿವಿಲ್ ಹಾಸ್ಪಿಟಲ್, ನಿತಿನ್ ನಗರ, ಹಳೆಯ ಎಸ್.ಪಿ ವೃತ್ತ, ಲಕ್ಷ್ಮೀ ಗುಡಿ, ಪೋಲಿಸ್…

Read More

ಚಳಿಗಾಲದಲ್ಲಿ ಶುಷ್ಕ ಚರ್ಮವೇ ಒಂದು ದೊಡ್ಡ ಸಮಸ್ಯೆ. ಯಾವಾಗಲೂ ಚರ್ಮವನ್ನು ಮಾಯಿಶ್ಚರೈಸರ್​ ಆಗಿಡಲು ದುಬಾರಿ ಕ್ರೀಮ್​ಗಳನ್ನು ಸಹ ಬಳಕೆ ಮಾಡುತ್ತಿದ್ದಾರೆ. ಆದರೆ, ಹಣದ ಕೊರತೆ ಎದುರಿಸುವವರು ಸುಲಭವಾಗಿ ದೊರೆಯುವ ತೆಂಗಿನ ಎಣ್ಣೆಯನ್ನು ಬಳಸುತ್ತಾರೆ. ಆದರೆ, ಇದು ಚರ್ಮಕ್ಕೆ ಒಳ್ಳೆಯದೇ ಎಂಬುದರ ಮಾಹಿತಿಯನ್ನು ನಾವೀಗ ತಿಳಿದುಕೊಳ್ಳೋಣ. ಈ ಚಳಿಗಾಲದಲ್ಲಿ ಮಲಗುವ ಮುನ್ನ ಒಂದು ಚಮಚ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಅದನ್ನು ಎರಡೂ ಕೈಗಳ ನಡುವೆ ಇಟ್ಟು ಚೆನ್ನಾಗಿ ಉಜ್ಜಿ, ಸ್ವಲ್ಪ ಬಿಸಿಯಾದ ನಂತರ, ನಿಮ್ಮ ಕೈಗಳನ್ನು ನಿಮ್ಮ ಮುಖದ ಮೇಲೆ ಇರಿಸಿ ಮತ್ತು ಮೃದುವಾಗಿ ಮಸಾಜ್ ಮಾಡಿ. ಪ್ರತಿದಿನ ರಾತ್ರಿ ಈ ರೀತಿ ಮಸಾಜ್ ಮಾಡುವುದರಿಂದ ರಾತ್ರಿಯಿಡೀ ನಿಮ್ಮ ಮುಖವು ತೇವಾಂಶದಿಂದ ಕೂಡಿರುತ್ತದೆ. ತೆಂಗಿನಎಣ್ಣೆಯಲ್ಲಿ ಫ್ಯಾಟಿ ಆಯಸಿಡ್​ಗಳು ಮತ್ತು ಆಯಂಟಿಆಕ್ಸಿಡೆಂಟ್​ಗಳು ಸಮೃದ್ಧವಾಗಿವೆ. ರಾತ್ರಿ ತೆಂಗಿನ ಎಣ್ಣೆ ಹಚ್ಚುವುದರಿಂದ ಎಲ್ಲವನ್ನು ನಮ್ಮ ಚರ್ಮ ಹೀರಿಕೊಳ್ಳುತ್ತದೆ. ಇದು ಯಾವುದೇ ಕಾರಣಕ್ಕೂ ಮೊಡವೆಗಳಿಗೆ ಕಾರಣವಾಗುವುದಿಲ್ಲ. ಮಸಾಜ್​ ಮಾಡುವುದರಿಂದ ಮುಖದಲ್ಲಿ ರಕ್ತಪರಿಚಲನೆ ಸರಾಗವಾಗುತ್ತದೆ. ಇದರಿಂದ ಮುಖದ ಚರ್ಮ ನೈಸರ್ಗಿಕವಾಗಿ…

Read More

ಮಂಗಳವಾರ ನಡೆದ ಹರಾಜು ಪ್ರಕ್ರಿಯೆ ಕುರಿತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಾಯಕ ಫಾಫ್‌ ಡು ಪ್ಲೆಸಿ ಮಾತನಾಡಿದ್ದಾರೆ. ಆರ್‌ಸಿಬಿಯು ಅತ್ಯುತ್ತಮ ಹಾಗೂ ಸಮತೋಲನದಿಂದ ಕೂಡಿದ ತಂಡ ರಚಿಸುವ ಕಾರ್ಯತಂತ್ರದೊಂದಿಗೆ ಹರಾಜಿನಲ್ಲಿ ಪಾಲ್ಗೊಂಡಿತ್ತು ಎಂದು ಅವರು ತಿಳಿಸಿದ್ದಾರೆ. ‘ಕಳೆದ ಆವೃತ್ತಿ ಮುಗಿದ ನಂತರ ನಾವು, ತವರಿನಲ್ಲಿ ಸುಧಾರಿತ ಪ್ರದರ್ಶನ ನೀಡಬೇಕಿದೆ ಎಂಬ ಬಗ್ಗೆ ಚಿಂತನೆ ನಡೆಸಿದ್ದೆವು. ಅದರಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ಪ್ರದರ್ಶನ ತೋರಲು, ತಂಡದಲ್ಲಿ ಯಾವ ರೀತಿಯ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಚರ್ಚಿಸಿದ್ದೆವು’ ಎಂದಿದ್ದಾರೆ. ಸುಧಾರಣೆ ತರುವ ನಿಟ್ಟಿನಲ್ಲಿ, ತವರಿನಲ್ಲಿ ಚೆನ್ನಾಗಿ ಆಡಬಲ್ಲ ಬ್ಯಾಟರ್‌ ಮತ್ತು ಬೌಲರ್‌ಗಳನ್ನು ತಂಡಕ್ಕೆ ಸೇರಿಸಿಕೊಳ್ಳುವ ವಿಚಾರವಾಗಿಯೇ ಕಳೆದ ಎರಡು ತಿಂಗಳಿನಿಂದ ಯೋಜಿಸಲಾಗಿತ್ತು. ಅದರಂತೆ ಹರಾಜು ಪ್ರಕ್ರಿಯೆಯಲ್ಲಿ ಆಟಾರರನ್ನು ಖರೀದಿಸಲಾಗಿದೆ ಎಂದು ಪ್ಲೆಸಿ ಹೇಳಿದ್ದಾರೆ. ತಂಡದ ಸಂಯೋಜನೆ ಬಗ್ಗೆ ಮುಖ್ಯ ಕೋಚ್‌ ಆಯಂಡಿ ಫ್ಲವರ್‌ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ‘ವಿರಾಟ್‌ ಕೊಹ್ಲಿ, ಫಾಫ್‌ ಡು ಪ್ಲೆಸಿ, ರಜತ್‌ ಪಟೀದಾರ್, ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನೊಳಗೊಂಡ ಅಗ್ರ ಕ್ರಮಾಂಕ ಬಲಿಷ್ಠವಾಗಿದೆ.…

Read More

ಗಂಗಾವತಿ : ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ಭಾರತ ಚುನಾವಣಾ ಆಯೋಗ ಆಯೋಜಿಸಿರುವ ನಮೂನೆಗಳ ಪರಿಶೀಲನೆ ಹಾಗೂ ಸ್ವೀಪ್ ಕಾರ್ಯಕ್ರಮಗಳ ಪರಿಶೀಲನೆ ಸಭೆ ಐಎಎಸ್ ನಿವೃತ್ತ ಹಾಗೂ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಗಳಾದ ಪಿ.ಎಸ್. ಪ್ರಸಾದ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. ನಂತರ ಅವರು ಮಾತನಾಡಿ, ಶಾಲಾ ಹಂತದಲ್ಲೇ ಚುನಾವಣೆ ಪ್ರಕ್ರಿಯೆ ಹಾಗೂ ಮತದಾನದ ಮಹತ್ವ, ಇವಿಎಂ ಮಷಿನ್ ಬಗ್ಗೆ ಶಿಕ್ಷಕರು ಮಾಹಿತಿ ನೀಡಬೇಕು. ಮತದಾರರ ಪಟ್ಟಿ ಕಾಲಕಾಲಕ್ಕೆ ಶುದ್ಧೀಕರಣ ಆಗಬೇಕು. ಮರಣ ಹೊಂದಿದವರು ಹಾಗೂ ಬೇರೆ ಜಿಲ್ಲೆಗಳಿಗೆ ವಲಸೆ ಹೋದವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಡಿಲಿಟ್ ಮಾಡಿಸಬೇಕು ಎಂದರು. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಕ್ರಮವಹಿಸಬೇಕು. ವೋಟರ್ ಹೆಲ್ಪ್ ಲೈನ್ ಆ್ಯಪ್ ನಲ್ಲಿ ಸಹ ಹೆಸರು ನೋಂದಾಯಿಸಲು ಅವಕಾಶವಿದ್ದು ಈ ಬಗ್ಗೆ ಯುವ ಮತದಾರರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು ಎಂದರು. ಮತದಾರರ ಪಟ್ಟಿಯ ಶುದ್ಧೀಕರಣ ಸರಿಯಾಗಿ ನಡೆದರೆ ಶೇ.100 ರಷ್ಟು ಮತದಾನ…

Read More

ಬೆಂಗಳೂರು, ಡಿಸೆಂಬರ್​​​ 20: ಸೋಷಿಯಲ್ ಮೀಡಿಯಾದಲ್ಲಿ ಮೈ ತುಂಬ ಬಂಗಾರ ಧರಿಸಿ ವೈರಲ್ ಆಗಿದ್ದ ದಾಸ ಕಿಂಗ್ ಮೇಕರ್​ ವಿರುದ್ಧ ಇದೀಗ ರೌಡಿ ಶೀಟ್ (rowdy sheet) ತೆರೆಯಲಾಗಿದೆ. ಯಲಹಂಕ ಹಾಗೂ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಸಾಲು ಸಾಲು ದೂರು ಕೇಳಿ ಬಂದ ಹಿನ್ನೆಲೆ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ದಾಸನ ಮೇಲೆ ನಾನ್ ಲೋಕಲ್ ರೌಡಿ ಶೀಟ್​ ತೆರೆಯಲಾಗಿದೆ. ಎಂಎಲ್ಎ ಸಂಬಂಧಿ ರಾಮಮೂರ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಮಹಿಳೆಯ ಜಮೀನಿನ ವಿಚಾರವಾಗಿ ಧಮ್ಕಿ ಹಾಕಲು ಸುಪಾರಿ ಪಡೆದಿದ್ದ ದಾಸ, ಹುಡುಗರನ್ನು ಕಳುಹಿಸಿ ಮಹಿಳೆ ಮೇಲೆ‌ ಹಲ್ಲೆ ಮಾಡಿಸಿ ಜಾತಿ ನಿಂದನೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ಕುರಿತು‌ ಮಹಿಳೆ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇದೇ ಪ್ರಕರಣದಲ್ಲಿ ದಾಸ ಎ2 ಆರೋಪಿಯಾಗಿದ್ದ. ಇದೇ ರೀತಿ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲೂ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಚಿಕ್ಕಜಾಲ ಪೊಲೀಸರು ದಾಸ ಮೇಲೆ ರೌಡಿಶೀಟ್ ತೆರೆದಿದ್ದಾರೆ. ಮೈ…

Read More